Tag: Commission Allegations

  • ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ: ಹೆಚ್‌ಡಿಕೆ

    ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ: ಹೆಚ್‌ಡಿಕೆ

    – ಗುತ್ತಿಗೆದಾರರಿಂದ ಕಮಿಷನ್‌ ಆರೋಪ; ಸರ್ಕಾರದ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

    ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಕಿಡಿಕಾರಿರುವ ಹೆಚ್‌ಡಿಕೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಘನತವೇತ್ತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯೂಟರ್ನ್ ಹೊಡೆಯುವ ಅಗತ್ಯವೇ ಇಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಸತ್ಯಮೇವ ಜಯತೇ ಘೋಷ ವಾಕ್ಯವನ್ನು ಕಾಂಗ್ರೆಸ್ ನಾಯಕರು ಅದೆಷ್ಟು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ (!?) ಎಂಬುದಕ್ಕೆ ರಾಯರೆಡ್ಡಿ ಅವರ ಹೇಳಿಕೆಯೇ ಸಾಕ್ಷಿ.

    ಗುತ್ತಿಗೆಯಲ್ಲಿ ಪರ್ಸಂಟೇಜ್, ಕಮಿಷನ್ ದಂಧೆಗೆ ನಾಂದಿ ಹಾಡಿದ್ದು, ಅನ್ಯಪಕ್ಷಗಳ ಸರ್ಕಾರಗಳೇ ಹೊರತು ಜೆಡಿಎಸ್ ಸರ್ಕಾರವಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಗುತ್ತಿಗೆದಾರರಿಗೆ ನಿಯಮಿತವಾಗಿ ಹಣ ಪಾವತಿ ಆಗುತ್ತಿತ್ತು, ವಿಳಂಬ ಎನ್ನುವ ಪ್ರಶ್ನೆಯೇ ಇರಲಿಲ್ಲ. ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ.

    ಸೋ ಕಾಲ್ಡ್ ಸತ್ಯಸಂಧರಾದ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಪಾಪ ಅವರು ಏಕಿಷ್ಟು ಹೆದರಿದರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ.

    ಸನ್ಮಾನ್ಯ ಸಿಎಂ ಸಾಹೇಬರ ಸರಣಿ ಹಗರಣಗಳ ಸಿದ್ವಿಲಾಸಿ ಬಗ್ಗೆ ಅರಿಯದಷ್ಟು ಮುಗ್ಧರೇ ರಾಯರೆಡ್ಡಿ. ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಭಾಗವಾಗಿರುವ ಅವರಿಗೆ ಜೆಡಿಎಸ್ ಕುರಿತು ಟೀಕಿಸುವ ನೈತಿಕತೆ ಎಲ್ಲಿದೆ? ಸರಣಿ ಹಗರಣಗಳ ಸಿದ್ವಿಲಾಸಿ. ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

  • ತೆಲಂಗಾಣದಲ್ಲೂ ಪ್ರತಿಧ್ವನಿಸುತ್ತಿದೆ ರಾಜ್ಯದ 40% ಕಮಿಷನ್ – ಕರ್ನಾಟಕ ಸರ್ಕಾರವನ್ನು ಅಣಕಿಸಿದ ಕೆಟಿಆರ್

    ತೆಲಂಗಾಣದಲ್ಲೂ ಪ್ರತಿಧ್ವನಿಸುತ್ತಿದೆ ರಾಜ್ಯದ 40% ಕಮಿಷನ್ – ಕರ್ನಾಟಕ ಸರ್ಕಾರವನ್ನು ಅಣಕಿಸಿದ ಕೆಟಿಆರ್

    ರಾಯಚೂರು: ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪಾದಯಾತ್ರೆ ನಡೆಸಿದೆ. ಆದ್ರೆ ತೆಲಂಗಾಣ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿ ರಾಜ್ಯದ 40% ಕಮಿಷನ್ ವಿಚಾರವನ್ನು ಇಟ್ಟುಕೊಂಡು ತಿರುಗೇಟು ನೀಡುತ್ತಿದೆ.

    ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಕರ್ನಾಟಕದ ಬಿಜೆಪಿ ಸರ್ಕಾರ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕೆಟಿಆರ್ ರಾಜ್ಯದ ಕುರಿತು ಮಾತನಾಡಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ಕಮಿಷನ್ ವಿಚಾರ ಇಟ್ಕೊಂಡು ಕರ್ನಾಟಕ ಸರ್ಕಾರ ಹಾಗೂ ತೆಲಂಗಾಣ ಬಿಜೆಪಿ ನಾಯಕರನ್ನು ಕೆಟಿಆರ್ ಕೆಣಕಿದ್ದಾರೆ. ಕರ್ನಾಟಕದಲ್ಲಿ 40 ಪರ್ಸಂಟೇಜ್ ವಿಚಾರವಾಗಿ ದೊಡ್ಡ ಚರ್ಚೆ ಆಗ್ತಿದೆ. ಸಚಿವರೇ ಗುತ್ತಿಗೆದಾರರಿಗೆ ಕಿರುಕುಳ ನೀಡ್ತಿದ್ದಾರೆ ಎಂದು ಹೋರಾಟ ನಡೆದಿವೆ. ಗುತ್ತಿಗೆದಾರ ಸಚಿವರ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಧಾನ ಮಂತ್ರಿಯವರಿಗೂ ಕಮಿಷನ್ ದಂಧೆಯ ಬಗ್ಗೆ ದೂರು ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ತೆಲಂಗಾಣ ಆಫರ್ – ಬಿಜೆಪಿ ನಾಯಕರು ಕಿಡಿ

    ಆಂಧ್ರಪ್ರದೇಶದ ಕರೀಂನಗರ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಪಾದಯಾತ್ರೆಗೆ ಟಾಂಗ್ ಕೊಡಲು ಕೆಟಿಆರ್ ಕರ್ನಾಟಕ ಸರ್ಕಾರವನ್ನು ಅಣಕವಾಡಿದ್ದು, ತೆಲಂಗಾಣ ಗಡಿ ಭಾಗದ ಕರ್ನಾಟಕದ ಜಿಲ್ಲೆಗಳಿಗೆ ಹೋಗಿ ಬನ್ನಿ. ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಹೋಗಿ. ಅಲ್ಲಿ ಸರಿಯಾಗಿ ಪಿಂಚಣಿ ಬರುತ್ತಿಲ್ಲ, ವಿದ್ಯುತ್ ಇಲ್ಲ, ಸರ್ಕಾರಿ ಸೌಲಭ್ಯಗಳೇ ಸರಿಯಾಗಿ ಸಿಗುತ್ತಿಲ್ಲ ಇದೇ ಕಾರಣಕ್ಕೆ ನಮ್ಮನ್ನು ತೆಲಂಗಾಣಕ್ಕೆ ಸೇರಿಸಿ ಅಂತ ರಾಯಚೂರಿನ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಹೇಳಿದ್ರು. ಕರ್ನಾಟಕದ ಬಿಜೆಪಿ ಶಾಸಕರೇ ನಮ್ಮ ಆಡಳಿತ ಮೆಚ್ಚಿಕೊಂಡಿದ್ದಾರೆ. ಇದು ಬಿಜೆಪಿಯ ಪರಸ್ಥಿತಿ ಹೇಳುತ್ತದೆ ಎಂದು ಕೆ.ಟಿ.ರಾಮರಾವ್ ಅಣಕವಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ದಾಟುತ್ತಿದ್ದ ಶ್ವಾನದ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದ ಕಿಡಿಗೇಡಿ

    ಕೆಲದಿನಗಳ ಹಿಂದೆ ಬೆಂಗಳೂರಿನ ಸ್ಟಾರ್ಟ್ ಕಂಪನಿಗಳನ್ನು ಹೈದ್ರಾಬಾದ್‍ಗೆ ಬನ್ನಿ ಎಂದು ಆಹ್ವಾನಿಸಿ ಕೆಟಿಆರ್ ವಿವಾದ ಕಿಡಿ ಹೊತ್ತಿಸಿದ್ದರು. ಇದೀಗ ಬಿಜೆಪಿ ನಾಯಕರನ್ನು ಟೀಕಿಸಲು ಕರ್ನಾಟಕವನ್ನು ಅಸ್ತ್ರವನ್ನಾಗಿಸಿಕೊಂಡು ಕರ್ನಾಟಕದಲ್ಲಿ ವಿಫಲ ಸರ್ಕಾರ ಇದೆ. ಸುಮ್ನೆ ನಮ್ ಸರ್ಕಾರದ ಬಗ್ಗೆ ಮಾತಾಡ್ತಿದ್ದೀರಾ ನಿಮಗೆ ನಾಚಿಕೆ ಆಗ್ಬೇಕು ಎಂದು ಬಿಜೆಪಿ ನಾಯಕ ಬಂಡಿ ಸಂಜಯ್‍ರನ್ನು ಕೆಟಿಆರ್ ತರಾಟೆಗೆ ತೆಗೆದುಕೊಂಡಿದ್ದಾರೆ.