Tag: commercial street

  • ಪೊಲೀಸರಿಗೆ ತಲೆನೋವಾಯ್ತು ಶ್ವೇತಾಗೌಡ ವಂಚನೆ ಕೇಸ್‌ – 2 ಕೆಜಿ 960 ಗ್ರಾಂ ಚಿನ್ನದಲ್ಲಿ 700 ಗ್ರಾಂ ಮಾತ್ರ ರಿಕವರಿ

    ಪೊಲೀಸರಿಗೆ ತಲೆನೋವಾಯ್ತು ಶ್ವೇತಾಗೌಡ ವಂಚನೆ ಕೇಸ್‌ – 2 ಕೆಜಿ 960 ಗ್ರಾಂ ಚಿನ್ನದಲ್ಲಿ 700 ಗ್ರಾಂ ಮಾತ್ರ ರಿಕವರಿ

    -ಚಿನ್ನಾಭರಣ ರಿಕವರಿಯೇ ಪೊಲೀಸರಿಗೆ ತಲೆ ನೋವು

    ಬೆಂಗಳೂರು: ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಾಭರಣ ರಿಕವರಿ ಮಾಡುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

    ಕಳೆದ ಒಂದು ವಾರದ ಹಿಂದೆ ಪೊಲೀಸರು ಶ್ವೇತಾಗೌಡಳನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಚಿನ್ನವನ್ನು ಬಗಲಗುಂಟೆಯ (Bagalakunte) ರಾಮ್‌ದೇವ್ ಜ್ಯುವೆಲ್ಲರಿಯಲ್ಲಿ ಪಡೆದಿರುವುದಾಗಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಮಾಲೀಕ ಚನ್ನಾರಾಮ್ ಅವರನ್ನು ಕೂಡ ಬಂಧಿಸಲಾಗಿತ್ತು. ಮಾಲೀಕನನ್ನು ಬಂಧಿಸುತ್ತಿದ್ದಂತೆ ಆತನ ಸಹೋದರರು ಎಸ್ಕೇಪ್ ಆಗಿದ್ದಾರೆ. ಮಾಲೀಕನಿಂದ 400 ಗ್ರಾಂ ಚಿನ್ನವನ್ನು ರಿಕವರಿ ಮಾಡಲಾಗಿದೆ.ಇದನ್ನೂ ಓದಿ: ಭಾರತಕ್ಕೆ ನಿತೀಶ್‌-ಸುಂದರ್‌ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು

    ಇಲ್ಲಿಯವರೆಗೂ ವರ್ತೂರ್ ಪ್ರಕಾಶ್ ಪಡೆದಿದ್ದ 100 ಗ್ರಾಂ ಸೇರಿ ಒಟ್ಟು 700 ಗ್ರಾಂ ಚಿನ್ನವನ್ನು ಮಾತ್ರ ರಿಕವರಿ ಮಾಡಲಾಗಿದೆ. ಸದ್ಯ ಚಿನ್ನಾಭರಣ ರಿಕವರಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದು, ಮಾಲೀಕ ಚನ್ನಾರಾಮ್ ಸಹೋದರರಿಗಾಗಿ ಹುಡುಕಾಟ ನಡೆಸಿದ್ದಾರೆ. ರಾಮ್‌ದೇವ್ ಜ್ಯುವೆಲ್ಲರಿಯಲ್ಲಿ ಚಿನ್ನ ಕರಗಿಸಿ, ಚಿನ್ನದ ಗಟ್ಟಿ ಮಾರಾಟ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮುಂಚೆ ಭಾರತಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ವರ್ತೂರು ಪ್ರಕಾಶ್, ಎಸಿಪಿ ಗೀತಾ ಎದುರು ವಿಚಾರಣೆ ಎದುರಿಸಿದ್ದರು. ಇದೇ ವೇಳೆ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್‌ಗಳನ್ನ ಅಂದ್ರೆ ನಗದು, ಚಿನ್ನಾಭರಣ ಎಲ್ಲವನ್ನೂ ಪೊಲೀಸರಿಗೆ ವಾಪಸ್ ಕೊಟ್ಟಿದ್ದರು. ಒಟ್ಟು 12.50 ಲಕ್ಷ ರೂ. ನಗದು, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರವನ್ನ ಎಸಿಪಿ ಗೀತಾ ಎದುರಿಗೇ ಪೊಲೀಸರಿಗೆ ಒಪ್ಪಿಸಿದ್ದರು.

    ಶ್ವೇತಾ ಗೌಡ ಹೀಗೆ ಮಾಡ್ತಾಳೆಂದು ನನಗೆ ಗೊತ್ತಿಲ್ಲ, ನನಗೂ ಶ್ವೇತಗೌಡಳಿಗೂ ಯಾವುದೇ ಸಂಬಂಧವಿಲ್ಲ. ಗಿಫ್ಟ್ ಅಂತ ನನಗೆ ಆಕೆ ಕೆಲ ಒಡವೆ ನೀಡಿದ್ಲು ಎಂದು ಪೊಲೀಸರಿಗೆ ಜವಾಬು ನೀಡಿದ್ದರು. ವಿಚಾರಣೆ ಬಳಿಕ ಮಾತನಾಡಿದ್ದ ವರ್ತೂರ್ ಪ್ರಕಾಶ್, ನನಗೆ ಆಕೆ ಸ್ನೇಹಿತೆ ಅಲ್ಲ. ಐದಾರು ತಿಂಗಳ ಹಿಂದೆ ಪರಿಚಯ ಆಗಿದೆ. ನನ್ನ ಹೆಸರು ಬಳಸಿಕೊಂಡು ಚಿನ್ನಭಾರಣ ಖರೀದಿ ಮಾಡಿಕೊಂಡಿದ್ದಾಳೆ. ನನಗೂ ಮನಸ್ಸಿಗೆ ನೋವಾಗಿದೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಭಾರಣ ಕೊಟ್ಟಿದ್ದರು. ಅದ್ಹೇಗೆ ಕೊಟ್ರು ಗೊತ್ತಿಲ್ಲ. ನನ್ನ ತರ ಕೆಲ ರಾಜಕಾರಣಿಗಳು ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿ ಕೊಟ್ಟಿದ್ದೀನಿ ಎಂದು ಸ್ಪಷ್ಟಪಡಿಸಿದ್ದರು.ಇದನ್ನೂ ಓದಿ: ಸಾರಿಗೆ ನೌಕರರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ: ಪಿ.ರಾಜೀವ್

  • ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ – ಇಂದು ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು

    ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ – ಇಂದು ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು

    ಬೆಂಗಳೂರು: ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ (Varthur Prakash) ಇಂದು ಪೊಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆ.

    ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ (Commercial Street Police) ವರ್ತೂರ್ ಪ್ರಕಾಶ್ ವಿಚಾರಣೆ ನಡೆಯಲಿದೆ. ಪೊಲೀಸರು ಈಗಾಗಲೇ ವರ್ತೂರ್ ಪ್ರಕಾಶ್‌ಗೆ ನೋಟಿಸ್ ನೀಡಿದ್ದು, ಶ್ವೇತಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ವರ್ತೂರ್ ಪ್ರಕಾಶ್ ಹೆಸರೇಳಿ ಚಿನ್ನದ ವರ್ತಕರ ಬಳಿ ಚಿನ್ನ ಪಡೆದಿದ್ದಳು. ಸುಮಾರು ಎರಡೂವರೆ ಕೋಟಿ ರೂ. ಚಿನ್ನವನ್ನು ಮಹಿಳೆ ಖರೀದಿಸಿದ್ದು, ಚಿನ್ನ ಪಡೆಯುವಾಗ ವರ್ತೂರ್ ಪ್ರಕಾಶ್ ಹೆಸರು ಹೇಳಿರೋದು ಬಯಲಾಗಿದೆ. ಜೊತೆಗೆ ವರ್ತೂರ್ ಪ್ರಕಾಶ್ ಮನೆಯ ವಿಳಾಸ ಕೂಡ ನೀಡಿದ್ದಳು. ಚಿನ್ನದ ಹಣವನ್ನು ವರ್ತೂರ್ ಪ್ರಕಾಶ್ ಕೊಡುವುದಾಗಿ ಮಹಿಳೆ ಚಿನ್ನ ಪಡೆದಿದ್ದಳು. ಅಡ್ರಸ್ ತೆಗೆದುಕೊಂಡು ಅಂಗಡಿ ಮಾಲೀಕರು ಮನೆಗೆ ಹೋದಾಗ ವಂಚನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ತನಗೂ ವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವರ್ತೂರ್ ಪ್ರಕಾಶ್ ಹೇಳಿದ್ದರು. ಹೀಗಾಗಿ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ಅಂಗಡಿ ಮಾಲೀಕರು ದೂರು ನೀಡಿದ್ದರು. ಈ ಹಿನ್ನಲೆ ಇಂದು ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ.  ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್‌ ಆಪ್ತ ಸೇರಿ 10 ಜನರ ವಿರುದ್ಧ FIR

    ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರೋಪಿ ಶ್ವೇತಾ ಗೌಡಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಫ್ರೇಜರ್ ಟೌನ್ ಎಸಿಪಿ ಗೀತಾ ನೇತೃತ್ವದ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ವರ್ತೂರ್ ಪ್ರಕಾಶ್ ಹಾಗೂ ಆರೋಪಿ ಪೋನ್‌ನಲ್ಲಿ ಸತತ ಕಾಂಟಾಕ್ಟ್‌ನಲ್ಲಿ ಇರೋದು ಪತ್ತೆಯಾಗಿದೆ. ಅಲ್ಲದೇ ವರ್ತೂರ್ ಪ್ರಕಾಶ್ ಜೊತೆ ಆರೋಪಿತೆ ಇರುವ ಸಿಸಿಟಿವಿ ಪೂಟೇಜ್, ಕಾಲ್ ಸಿಡಿಆರ್ ಕೂಡ ಪೊಲೀಸರು ಕಲೆ ಹಾಕಿದ್ದಾರೆ. ಇದನ್ನೂ ಓದಿ: Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    ಕೆಲ ದಿನಗಳ ಹಿಂದೆ ಕಮರ್ಷಿಯಲ್ ಮುಖ್ಯರಸ್ತೆಯ ನವರತ್ನ ಜ್ಯುವೆಲ್ಸ್ ಮಾಲೀಕ ಸಂಜಯ್ ಭಾಷ್ನಾ ಅವರನ್ನು ಶ್ವೇತಾಗೌಡ ಭೇಟಿಯಾಗಿದ್ದಳು. ತಾನು ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ ಎಂದಿದ್ದಳು. ಇದಕ್ಕೆ ಸಂಜಯ್ ಸಹ ಸಮ್ಮಿತಿಸಿದ್ದರು. ಆಕೆಯ ಮಾತು ನಂಬಿ ಆರಂಭದಲ್ಲಿ ಎರಡು ಮೂರು ಬಾರಿ ಶ್ವೇತಾ ನೀಡಿದ್ದ ಮನೆ ವಿಳಾಸಕ್ಕೆ ಚಿನ್ನಾಭರಣ ಕಳುಹಿಸಿದ್ದರು. ಇದನ್ನೂ ಓದಿ: ರಸ್ತೆಯಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಅಟ್ಯಾಕ್

    ಹೀಗೆ ವಿಶ್ವಾಸಗಳಿಸಿದ ಶ್ವೇತಾ, ಕೊನೆಗೆ ನವರತ್ನ ಜ್ಯುವೆಲರ್ಸ್‌ನಲ್ಲಿ 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಹಾಕಿದ್ದಳು. ಇದನ್ನೂ ಓದಿ: ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಈ ಬಗ್ಗೆ ಜ್ಯುವೆಲರ್ಸ್‌ನ ಮಾಲಿಕ ಸಂಜಯ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ಕೂಡಲೇ ನಗರದಿಂದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಲಾಯಿತು. ಜೊತೆಗೆ ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡು ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಕಾಡಾನೆಗಳು ಎಂಟ್ರಿ – ರೈತರು, ಕಾಫಿ ಬೆಳೆಗಾರರು ಹೈರಾಣು

  • ಕಮರ್ಷಿಯಲ್ ಸ್ಟ್ರೀಟ್ ಒಳಗಡೆ ಆಟೋ, ಸರಕು ವಾಹನಗಳ ಪ್ರವೇಶ ನಿಷೇಧ

    ಕಮರ್ಷಿಯಲ್ ಸ್ಟ್ರೀಟ್ ಒಳಗಡೆ ಆಟೋ, ಸರಕು ವಾಹನಗಳ ಪ್ರವೇಶ ನಿಷೇಧ

    -ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ

    ಬೆಂಗಳೂರು: ಬೆಂಗಳೂರಿನ ಹೈಫೈ ಏರಿಯಾ ಕಮರ್ಷಿಯಲ್ ಸ್ಟ್ರೀಟ್ (Commercial Street) ಒಳಗಡೆಗೆ ಆಟೋ (Auto) ಮತ್ತು ಸರಕು ವಾಹನಗಳ (Cargo Vehicle) ಪ್ರವೇಶವನ್ನು ನಿಷೇಧ ಹೇರಲಾಗಿದೆ.

    ಶಿವಾಜಿನಗರ ಸಂಚಾರಿ ಪೊಲೀಸರು (Shivajinagr Traffic Police) ಕಮರ್ಷಿಯಲ್ ಸ್ಟ್ರೀಟ್‌ಗೆ ಎಂಟ್ರಿ ಆಗುವ ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಬ್ಯಾನರ್ ಹಾಕಿದ್ದಾರೆ. ಆಟೋ ಮತ್ತು ಸರಕು ವಾಹನಗಳಿಗೆ ಪ್ರವೇಶ ನಿಷೇಧ ಆಗಿದೆ. ಆಟೋ ಮತ್ತು ಸರಕು ವಾಹನಗಳ ಓಡಾಟದಿಂದ ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿ ಟ್ರಾಫಿಕ್ ಜಾಮ್ ಆಗುತ್ತದೆ. ಇದನ್ನೂ ಓದಿ: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್

    ವೀಕೆಂಡ್ ಅಲ್ಲಿ ದೇಶ, ವಿದೇಶಿಗರು ಓಡಾಟ ಮಾಡುತ್ತಾರೆ. ಆದರೆ ಆಟೋ ಮತ್ತು ಸರಕು ವಾಹನಗಳ ಟ್ರಾಫಿಕ್ ಜಾಮ್ ಮತ್ತು ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಿಷೇಧದ ಮಧ್ಯೆ ಕೂಡ ಆಟೋ ಮತ್ತು ಸರಕು ವಾಹನಗಳು ಹೋದರೆ ನೋ ಎಂಟ್ರಿ ಕೇಸ್ ಹಾಕಿ 500 ರೂ. ದಂಡ ಹಾಕಲಿದ್ದಾರೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

  • ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಸ್ನೇಹಿತನಿಂದ್ಲೇ ಮಹಿಳೆಯ ಕೊಲೆ!

    ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಸ್ನೇಹಿತನಿಂದ್ಲೇ ಮಹಿಳೆಯ ಕೊಲೆ!

    ಬೆಂಗಳೂರು: ಕೊಟ್ಟ ಸಾಲವನ್ನು ವಾಪಾಸ್ ಕೇಳಿದ್ದಕ್ಕೆ ಮಹಿಳೆಯನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ

    ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಪ್ರಕರಣ ಸಂಬಂಧ ಆರೋಪಿ ಗೋಪಿನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ತಾರಾ ಎಂದು ಗುರುತಿಸಲಾಗಿದೆ.

    ಎಚ್‍ಎಎಲ್ ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿರೋ ಆರೋಪಿ ಗೋಪಿನಾಧ್ ಬೆಂಗಳೂರಿನ ಹೊರಮಾವು ನಿವಾಸಿಯಾಗಿದ್ದು, ತಾರಾ ಕುಟುಂಬಕ್ಕೆ ಆತ್ಮೀಯ ಸ್ನೇಹಿತನಾಗಿದ್ದ.

    ಇತ್ತೀಚೆಗೆ ಗೋಪಿನಾಥ್ ತಾರಾ ಬಳಿ 11 ಲಕ್ಷ ಸಾಲ ಪಡೆದಿದ್ದ. ಹೀಗಾಗಿ ತಾರಾ ಆ ಹಣವನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳುತ್ತಿದ್ದರು. ಈ ವಿಚಾರದಲ್ಲಿ ಇವರಿಬ್ಬರ ಮಧ್ಯೆ ನಡೆದ ಜಗಳ ತಾರಕಕ್ಕೇರಿದ್ದು, ತಾರಾ ತನ್ನ ತಾಯಿ ಮನೆಗೆ ಬಂದಿದ್ದ ವೇಳೆ ಗೋಪಿನಾಥ್ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಮನೆಗೆ ಬೀಗ ಹಾಕಿದ್ದಾನೆ. ಅಲ್ಲದೇ ಮನೆ ಕೀ ಹಾಗೂ ಚಾಕುವನ್ನು ಪಕ್ಕದ ಚರಂಡಿಗೆ ಬಿಸಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಇತ್ತ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಗೋಪಿನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯ ಸಂಗಮ್ ರಸ್ತೆಯ ತಾಯಿ ಮನೆಯಲ್ಲಿ ಈ ಕೊಲೆ ನಡೆದಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.