Tag: Commercial Movie

  • ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ಬೆಂಗಳೂರು: ಕಮರ್ಶಿಯಲ್ ಹೀರೋಯಿನ್ ಆಗಿ ಮಿಂಚಬೇಕು, ಅದರಲ್ಲಿಯೇ ನಂಬರ್ ಒನ್ ಆಗಿ ನೆಲೆ ಕಂಡುಕೊಳ್ಳಬೇಕೆಂಬುದು ಬಹುತೇಕ ನಟಿಯರ ಏಕ ಮಾತ್ರ ಕನಸು. ಆದರೆ ನಿಜವಾದ ಕಲಾವಿದೆಯರಿಗೆ ಒಂದೇ ಟ್ರ್ಯಾಕಿನಲ್ಲಿ ಬಹು ದಿನ ನಡೆದರೆ ಮತ್ತೆತ್ತಲೋ ಹೊರಳಿಕೊಳ್ಳಬೇಕೆನ್ನಿಸುತ್ತೆ. ಸದ್ಯ ರಚಿತಾ ರಾಮ್ ಕೂಡಾ ಅದೇ ಮೂಡಿನಲ್ಲಿರೋ ವಿಚಾರ ಅವರದ್ದೇ ಮಾತುಗಳ ಮೂಲಕ ಅನಾವರಣಗೊಂಡಿದೆ.

    ರಚಿತಾ ರಾಮ್ ಆರಂಭದಲ್ಲಿ ಸೀರಿಯಲ್ ನಟಿಯಾಗಿ ಬೆಳಕಿಗೆ ಬಂದವರು. ಸೀರಿಯಲ್ಲಿನಲ್ಲಿ ನಟಿಸುತ್ತಿರುವಾಗಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿ ನಟಿಸೋ ಮೂಲಕ ರಚಿತಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಂಡಿದ್ದರು. ಆ ಬಳಿಕ ಸುದೀಪ್ ಅವರಂಥಾ ನಟರ ಜೊತೆಗೂ ನಟಿಸಿದ ರಚಿತಾ ಈಗ ಕನ್ನಡದ ಮುಖ್ಯ ನಾಯಕಿ. ಆದರೆ ಬಹು ಹಿಂದಿನಿಂದಲೇ ಕಮರ್ಶಿಯಲ್ ಇಮೇಜಿನಾಚೆಗೆ ಗುರುತಿಸಿಕೊಳ್ಳುವ ಬಯಕೆಯೊಂದು ಅವರಲ್ಲಿ ಮೂಡಿಕೊಂಡಿತ್ತಂತೆ. ಅದರ ಫಲವಾಗಿಯೇ ಅವರು ಏಪ್ರಿಲ್ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ!

    ಮೊನ್ನೆ ರಚಿತಾ ಅವರ ಹುಟ್ಟು ಹಬ್ಬವಿತ್ತಲ್ಲಾ? ಇದಕ್ಕೆ ಏಪ್ರಿಲ್ ಚಿತ್ರತಂಡ ಈ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಶುಭ ಕೋರಿತ್ತು. ಈ ಸಂದರ್ಭದಲ್ಲಿ ರಚಿತಾ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ಈ ಚಿತ್ರ ಮಹಿಳಾ ಪ್ರಧಾನವಾದದ್ದು. ಇದರಲ್ಲಿನ ಏಪ್ರಿಲ್ ಡಿಸೋಜಾ ಎಂಬ ಪಾತ್ರ ಸವಾಲಿನದ್ದಂತೆ. ಅದನ್ನು ಖುಷಿಯಿಂದಲೇ ಸ್ವೀಕರಿಸಿರುವ ರಚಿತಾ ಈ ಮೂಲಕ ತಮ್ಮ ಮನದಾಸೆ ಈಡೇರುವ ಭರವಸೆ ಹೊಂದಿದ್ದಾರೆ. ಕಮರ್ಶಿಯಲ್ ಜಾಡಿನಲ್ಲಿಯೂ ಹೀಗೆಯೇ ಸವಾಲಿನ, ಅಪರೂಪದ ಪಾತ್ರಗಳನ್ನು ಆರಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv