Tag: commercial LPG cylinder

  • ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 16 ರೂ. ಏರಿಕೆ

    ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 16 ರೂ. ಏರಿಕೆ

    ನವದೆಹಲಿ: ಇದೀಗ ಆಯುಧ ಪೂಜೆಯಂದೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ ಏರಿಕೆಯ ಶಾಕ್ ಕೊಟ್ಟಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ (Liquefied Petroleum Gas) ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 15.50 ರೂ. ಏರಿಕೆ ಮಾಡಿದೆ.

    ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG cylinder) ಬೆಲೆಯಲ್ಲಿ ಮಾರುಕಟ್ಟೆ ಕಂಪನಿಗಳು ಹೊಸ ಪರಿಷ್ಕರಣೆಯನ್ನು ಘೋಷಿಸಿದ್ದು, ಇಂದಿನಿಂದಲೇ ಈ ದರ ಜಾರಿಯಲ್ಲಿರಲಿದೆ. ದೇಶೀಯ ಬಳಕೆಗೆ ಬಳಸುವ 14.2 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇದನ್ನೂ ಓದಿ: ನಾಡಹಬ್ಬ ದಸರಾ ಸಂಭ್ರಮ – ಅಂಬಾವಿಲಾಸ ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ

    ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ?
    ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 15.50 ರೂ. ಬೆಲೆ ಏರಿಕೆ ಆಗಿದ್ದು, ಪ್ರಸ್ತುತ ಸಿಲಿಂಡರ್ ಬೆಲೆ 1595.50 ರೂ. ಆಗಿದೆ. ಕೋಲ್ಕತ್ತಾದಲ್ಲಿ 16.5 ರೂ. ದರ ಹೆಚ್ಚಳವಾಗಿದ್ದು, 1,700.50 ರೂ. ಬೆಲೆಗೆ ಲಭ್ಯವಿದೆ. ಮುಂಬೈನಲ್ಲಿ 15.50 ರೂ. ಬೆಲೆ ಏರಿಕೆ ಆಗಿದ್ದು, ಸಿಲಿಂಡರ್ ಬೆಲೆ 1,547 ರೂ. ಆಗಿದ್ದು, ಚೆನ್ನೈನಲ್ಲಿ 16.5 ರೂ. ದರ ಹೆಚ್ಚಳವಾಗಿದ್ದು, 1754.50 ರೂ. ಬೆಲೆಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಲಭ್ಯವಿದೆ.

    ಗೃಹಬಳಕೆ ಸಿಲಿಂಡರ್‌ಗಳು ದರ ಏರಿಕೆ ಇಲ್ಲ
    14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ದರಗಳಲ್ಲಿ ಏರಿಕೆಯ ಹೊರತಾಗಿಯೂ ದೇಶೀಯ ಅಡುಗೆ ಅನಿಲ ಬೆಲೆಗಳು ಸದ್ಯಕ್ಕೆ ಸ್ಥಿರವಾಗಿವೆ. ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆ ಮಾಡಿರುವುದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬರೆ ಎಳೆದಂತಾಗಿದೆ.

  • ವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 51 ರೂ. ಇಳಿಕೆ

    ವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 51 ರೂ. ಇಳಿಕೆ

    ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG Cylinder) ಬೆಲೆ 51.50 ರೂ. ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ 51.50 ರೂ.ಗಳಷ್ಟು ಕಡಿಮೆ ಮಾಡುವುದಾಗಿ ತಿಳಿಸಿವೆ.

    ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಮಾತ್ರ ಕಡಿಮೆಯಾಗಿದ್ದು 14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ಗಳ (Domestic Cylinders) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

    ಪರಿಷ್ಕರಣೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಈಗ 1,580 ರೂ.ಗಳಿಗೆ ಲಭ್ಯವಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಕ್ಕೆ ಅನುಗುಣವಾಗಿ ಎಲ್‌ಪಿಜಿ ದರ ಪ್ರತಿ ತಿಂಗಳು ಪರಿಷ್ಕರಣೆಯಾಗುತ್ತಿರುತ್ತದೆ.  ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ಆಪ್ತನಿಂದ ಜಾತಿ ಅಸ್ತ್ರ

    ಈ ಹಿಂದೆ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 33.50 ರೂ.ಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು ಜುಲೈ 1 ರಂದು 58.50 ರೂ.ಗಳಷ್ಟು ಬೆಲೆಯನ್ನು ಕಡಿಮೆ ಮಾಡಿದ್ದವು.

    ಜೂನ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳಿಗೆ 24 ರೂ.ಗಳಷ್ಟು ಕಡಿತವನ್ನು ಘೋಷಿಸಿ, ದರವನ್ನು 1,723.50 ರೂ.ಗಳಿಗೆ ನಿಗದಿಪಡಿಸಿದ್ದವು. ಏಪ್ರಿಲ್‌ನಲ್ಲಿ ಬೆಲೆ 1,762 ರೂ.ಗಳಷ್ಟಿತ್ತು. ಫೆಬ್ರವರಿಯಲ್ಲಿ 7 ರೂಪಾಯಿಗಳಷ್ಟು ಸಣ್ಣ ಇಳಿಕೆಯಾಗಿತ್ತು. ಆದರೆ  ಮಾರ್ಚ್‌ನಲ್ಲಿ 6 ರೂ. ಹೆಚ್ಚಳ ಮಾಡಿತ್ತು.

  • ಗುಡ್‌ ನ್ಯೂಸ್‌; ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ

    ಗುಡ್‌ ನ್ಯೂಸ್‌; ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ

    ನವದೆಹಲಿ: ವಾಣಿಜ್ಯ ವಲಯದವರಿಗೆ ಬೆಳ್ಳಂಬೆಳಗ್ಗೆ ಗುಡ್‌ನ್ಯೂಸ್‌ ಸಿಕ್ಕಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ (Commercial LPG) ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

    ತೈಲ ಮಾರುಕಟ್ಟೆಗಳಿಂದ ಬೆಲೆ ಪರಿಷ್ಕರಣೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 58.50 ರೂ.ಗಳಷ್ಟು ಕಡಿಮೆಯಾಗಿದ್ದು, ಇಂದಿನಿಂದಲೇ (ಜು.1) ಜಾರಿಗೆ ಬರಲಿದೆ. ಇದನ್ನೂ ಓದಿ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

    ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಹೊಸ ಚಿಲ್ಲರೆ ಬೆಲೆ ಈಗ 1,665 ರೂ. ಗಳಾಗಿದ್ದು, ಈಗಾಗಲೇ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳೊಂದಿಗೆ ಹೋರಾಡುತ್ತಿರುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಅಡುಗೆ ತಯಾರಿಕರು ನಿಟ್ಟುಸಿರು ಬಿಡುವಂತಾಗಿದೆ. 14.2 ಕೆಜಿ ದೇಶೀಯ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

    ಏಪ್ರಿಲ್‌ನಲ್ಲಿ 41 ರೂ.ಗಳಷ್ಟು ಬೆಲೆ ಕಡಿಮೆ ಮಾಡಲಾಯಿತು. ನಂತರ ಮೇ ತಿಂಗಳಲ್ಲಿ 14.50 ರೂ. ಮತ್ತು ಜೂನ್‌ನಲ್ಲಿ 24 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು. ಇದನ್ನೂ ಓದಿ: ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ – ಇಕ್ಬಾಲ್ ಹುಸೇನ್ ಬಾಂಬ್

  • ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

    ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

    ನವದೆಹಲಿ: ದೇಶದಲ್ಲಿ ಇದೀಗ ವಾಣಿಜ್ಯ ಬಳಕೆಯ 19 ಕೆ.ಜಿಯ ಎಲ್‌ಪಿಜಿ ದರವನ್ನು 6 ರೂ. ಏರಿಕೆ ಮಾಡಲಾಗಿದೆ.

    ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಎಲ್‌ಪಿಜಿ ದರ 6 ರೂ. ಏರಿಕೆಯಾಗಿದೆ. ಇದಕ್ಕೂ ಮುನ್ನ ಫೆ.1 ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 7 ರೂ.ಗೆ ಇಳಿಕೆ ಮಾಡಿದ್ದವು.ಇದನ್ನೂ ಓದಿ: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

    ದರ ಏರಿಕೆಯಾದ ಬಳಿಕ ದೆಹಲಿಯಲ್ಲಿ 1,803 ರೂ., ಮುಂಬೈನಲ್ಲಿ 1,755 ರೂ., ಕೋಲ್ಕತ್ತಾದಲ್ಲಿ 1,913 ರೂ. ಚೆನ್ನೈನಲ್ಲಿ 1,965 ರೂ.ಗೆ ಹೆಚ್ಚಳವಾಗಿದೆ.

    ಗೃಹಬಳಕೆ ಎಲ್‌ಪಿಜಿ ಬೆಲೆ ಮೊದಲಿನಂತೆಯೇ ಉಳಿದಿದ್ದು, ದೆಹಲಿಯಲ್ಲಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 803 ರೂ., ಮುಂಬೈನಲ್ಲಿ 802.50 ರೂ., ಕೋಲ್ಕತ್ತಾದಲ್ಲಿ 829 ರೂ. ಮತ್ತು ಚೆನ್ನೈನಲ್ಲಿ 818.50 ರೂ. ಆಗಿದೆ.ಇದನ್ನೂ ಓದಿ: ತುಮಕೂರು| ಮದುವೆಯಾದ ಒಂದೂವರೆ ವರ್ಷಕ್ಕೆ ಗೃಹಿಣಿ ನಿಗೂಢ ಸಾವು

     

  • ವಾಣಿಜ್ಯ ಬಳಕೆ LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ

    ವಾಣಿಜ್ಯ ಬಳಕೆ LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ

    ನವದೆಹಲಿ: ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ (Commercial LPG Cylinder Price) ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ 19 ರೂ. ಇಳಿಕೆ ಮಾಡಲಾಗಿದೆ.

    ಮೆಟ್ರೋ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದಾದ್ಯಂತ 19 ಕಿ.ಗ್ರಾಂಗಳಷ್ಟು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ಕಡಿತಗೊಳಿಸಿವೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ.

    ನವದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 1,745.50 ರೂ. ಆಗಿದೆ. ಮುಂಬೈನಲ್ಲಿ 1,74917.50 ರೂ. ನಿಂದ 1,698.50 ಕ್ಕೆ ಇಳಿಕೆಯಾಗಿದೆ. ಚೆನ್ನೈನಲ್ಲೂ 19 ರೂ. ಇಳಿಕೆಯಾಗಿದೆ. ಈಗಿನ ಬೆಲೆ 1,930 ರೂ. ಗಳಾಗಿದ್ದು, 1,911 ರೂಪಾಯಿಗೆ ಇಳಿಕೆಯಾಗಿದೆ. ಈ ನಡುವೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,860 ರೂ.ನಿಂದ ಕುಸಿತ ಕಂಡಿದೆ. ಇದನ್ನೂ ಓದಿ: ಫ್ರೀ ಫ್ರೀ ಫ್ರೀ; ಟಿಡಿಪಿ ಗೆದ್ದರೇ ಫ್ರೀ ಸೈಟ್‌, ಮಹಿಳೆಯರಿಗೆ ಫ್ರೀ ಬಸ್‌, 3 ಎಲ್‌ಪಿಜಿ ಸಿಲಿಂಡರ್‌ ಫ್ರೀ – NDA ಗ್ಯಾರಂಟಿ

  • ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 91.50 ರೂ. ಇಳಿಕೆ

    ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 91.50 ರೂ. ಇಳಿಕೆ

    ನವದೆಹಲಿ: ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ 91.5 ರೂಪಾಯಿ ಇಳಿದಿದೆ. ಈ ಹಿಂದೆ 1,976 ರೂ. ಇದ್ದ ಸಿಲಿಂಡರ್‌ ಬೆಲೆ ಈಗ 1,885 ಕ್ಕೆ ಲಭ್ಯವಿದೆ.

    ಸೆಪ್ಟೆಂಬರ್ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಬೆಲೆಯ ಪ್ರಕಾರ, ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಇದನ್ನೂ ಓದಿ: ಕೇಂದ್ರ ಸಚಿವರ ಮನೆಯಲ್ಲಿ ಗಣೇಶನಿಗೆ ಆರತಿ ಮಾಡಿದ ಮೋದಿ

    ಮೇ ತಿಂಗಳಲ್ಲಿ 19 ಕೆಜಿ ಸಿಲಿಂಡರ್‌ನ ಬೆಲೆ ಸಾರ್ವಕಾಲಿಕ ಗರಿಷ್ಠ 2,354 ರೂ.ಗೆ ತಲುಪಿತ್ತು. ಆದರೆ ಈಗ ದೆಹಲಿಯಲ್ಲಿ 1,885 ರೂ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕುಸಿದಿದೆ.

    ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,095 ರೂ.ನಿಂದ 1,995 ರೂ.ಗೆ ಇಳಿಕೆಯಾಗಿದೆ. ಅದೇ ರೀತಿ ಮುಂಬೈನಲ್ಲಿ 1,936 ರೂ. ಬದಲಿಗೆ 1,844 ರೂ., ಮತ್ತು ಚೆನ್ನೈನಲ್ಲಿ 2,141 ರೂ. ಬದಲಿಗೆ 2,045 ರೂ., ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1053 ರೂ. ಇದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬದಲಾಗಿಲ್ಲ. ಇದನ್ನೂ ಓದಿ: 28 ವರ್ಷ ಪಾಕ್ ಜೈಲಿನಲ್ಲಿದ್ದ ವ್ಯಕ್ತಿ ವಾಪಸ್ – ಭಾರತೀಯರ ಕರಾಳ ಸ್ಥಿತಿ ನೆನಪಿಸಿ ಕಣ್ಣೀರು

    ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಸತತ ಐದು ತಿಂಗಳಿಂದ ಕಡಿಮೆಯಾಗಿದೆ. ಮೇ 19, 2022 ರಂದು ಗರಿಷ್ಠ 2,354 ರೂ.ಗೆ ತಲುಪಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಜೂನ್ 1 ರಂದು 2,219 ರೂ.ಗಳಷ್ಟಾಗಿತ್ತು. ಒಂದು ತಿಂಗಳ ನಂತರ ಸಿಲಿಂಡರ್ ಬೆಲೆ 98 ರೂ.ನಷ್ಟು ಕುಸಿದು 2,021 ರೂ.ಗೆ ಇಳಿದಿತ್ತು. ಈ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಜುಲೈ 6 ರಂದು 2,012 ರೂ.ಗೆ ಇಳಿಸಿವೆ. ಆಗಸ್ಟ್‌ನಿಂದ ಸಿಲಿಂಡರ್ ಬೆಲೆ 1976 ರೂ. ಇತ್ತು.

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂ. ಇಳಿಕೆ

    ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂ. ಇಳಿಕೆ

    ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 198 ರೂಪಾಯಿ ಕಡಿಮೆ ಮಾಡಲಾಗಿದೆ.

    ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2021 ರೂ. ಆಗಿದೆ. ಈ ಮುನ್ನ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 2,219 ರೂ. ಆಗಿತ್ತು. ಇದಕ್ಕೂ ಮುನ್ನ ಜೂನ್‍ನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್‍ಗೆ ಉದ್ಧವ್ ಠಾಕ್ರೆ ವಿಶ್

    ಕೋಲ್ಕತ್ತಾದಲ್ಲಿ 2,322ರೂ. ಇದ್ದ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಇದೀಗ 2,140ರೂ. ಆಗಿದೆ. ಮುಂಬೈನಲ್ಲಿ 2,171.50 ರ ಇದ್ದ ಸಿಲಿಂಡರ್ ಬೆಲೆ 1,981 ರೂ. ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ 2,373 ರೂ. ಬದಲಿಗೆ 2,186 ರೂ. ಆಗಿದೆ. ಇದನ್ನೂ ಓದಿ: ಹಾಡಹಗಲೇ ಮನೆ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ಕಳ್ಳತನ

    Live Tv

  • ವಾಣಿಜ್ಯ LPG ಸಿಲಿಂಡರ್‌ ಬೆಲೆ 91.50 ರೂ. ಇಳಿಕೆ

    ವಾಣಿಜ್ಯ LPG ಸಿಲಿಂಡರ್‌ ಬೆಲೆ 91.50 ರೂ. ಇಳಿಕೆ

    ನವದೆಹಲಿ: ಕೇಂದ್ರ ಬಜೆಟ್‌ ಮಂಡನೆಗೂ ಮುನ್ನವೇ ವಾಣಿಜ್ಯ ಎಲ್‌ಪಿಜಿ (LPG) ಅಡುಗೆ ಅನಿಲ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು 91.50 ರೂ. ಇಳಿಕೆ ಮಾಡಲಾಗಿದೆ.

    19.2 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವು 91.50 ರೂ. ಇಳಿಸಲಾಗಿದೆ. ದರ ಇಳಿಕೆಯಿಂದಾಗಿ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 1,907ಕ್ಕೆ ಬಂದಿದೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?

    ಕೆಲ ತಿಂಗಳುಗಳಿಂದ ಎಲ್‌ಪಿಜಿ ದಲ ಏರಿಕೆ ಕಾಣುತ್ತಲೇ ಇತ್ತು. ಇದಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ ಮಾಡಲಾಗಿದೆ.

    ಇದರ ಮಧ್ಯೆ ವಿಮಾನ ಇಂಧನದ ಬೆಲೆಯನ್ನು ಏರಿಕೆ ಮಾಡಲಾಗಿದೆ. ವಿಮಾನದ ಇಂಧನದ ಬೆಲೆಯಲ್ಲಿ ಶೇ.8.5 ಏರಿಕೆಯಾಗಿದೆ. ವಿಮಾನ ಪ್ರಯಾಣಿಕರಿಗೆ ಪ್ರಯಾಣದ ಬಿಸಿ ತಟ್ಟಿದೆ. ಇದನ್ನೂ ಓದಿ: ದೇಶದ 5 ರಾಜ್ಯಗಳಲ್ಲಿ 16 ವಿಮಾನ ನಿಲ್ದಾಣಗಳ ನಿರ್ಮಾಣ: ಜ್ಯೋತಿರಾದಿತ್ಯ ಸಿಂಧಿಯಾ