Tag: Commercial LPG

  • 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 69.50 ರೂ. ಇಳಿಕೆ

    19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 69.50 ರೂ. ಇಳಿಕೆ

    ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ (Commercial LPG Gas Cylinders) ಬೆಲೆಯನ್ನು 69.50 ರೂ. ಕಡಿತಗೊಳಿಸಿವೆ.

    ಇದರೊಂದಿಗೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1,676 ರಷ್ಟಿದೆ. ದೇಶಾದ್ಯಂತ ಮೆಟ್ರೋ ನಗರಗಳಿಗೂ ಇದು ಅನ್ವಯವಾಗಿದೆ. ಇದನ್ನೂ ಓದಿ: 2023-24 ಹಣಕಾಸು ವರ್ಷದಲ್ಲಿ 8.2% ಆರ್ಥಿಕ ಪ್ರಗತಿ – ಇದಿನ್ನೂ ಟ್ರೇಲರ್‌ ಎಂದ ಮೋದಿ

    ಮುಂಬೈನಲ್ಲಿ ಕೂಡ 69.50 ರೂ. ಇಳಿಕೆಯಾಗಿದ್ದು, ಪರಿಷ್ಕೃತ ಬೆಲೆಯನ್ನು 1,629 ಕ್ಕೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ ಬೆಲೆ 1,841.50 ರಷ್ಟಿದ್ದರೆ, ಕೋಲ್ಕತ್ತಾದಲ್ಲಿ ಬೆಲೆ ಕಡಿತದ ನಂತರ 1,789.50 ರೂ. ಆಗಿದೆ.

    ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 19 ರೂ. ಇಳಿಕೆಯಾಗಿತ್ತು. ಏಪ್ರಿಲ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆಜಿ ಎಫ್‌ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ 30.50 ರೂ. ಮತ್ತು 7.50 ರೂ. ರಷ್ಟು ಕಡಿತಗೊಳಿಸಲಾಗಿತ್ತು. ಇದನ್ನೂ ಓದಿ: ಶನಿವಾರ 57 ಸ್ಥಾನಗಳಿಗೆ ಕೊನೇ ಹಂತದ ಚುನಾವಣೆ – ಕಣದಲ್ಲಿರುವ ಘಟಾನುಘಟಿಗಳು ಯಾರು?

    ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ.

    ಬೆಲೆ ಇಳಿಕೆಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಪೂರೈಕೆ-ಬೇಡಿಕೆ ಯಂತಹ ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಬೆಲೆ ಪರಿಷ್ಕರಿಸಲಾಗುತ್ತದೆ.

  • ಹೊಸ ವರ್ಷಕ್ಕೆ ಮುನ್ನವೇ ಸಿಹಿ ಸುದ್ದಿ – ಎಲ್‌ಪಿಜಿ ಸಿಲಿಂಡರ್‌ ಬೆಲೆ ಭಾರೀ ಇಳಿಕೆ

    ಹೊಸ ವರ್ಷಕ್ಕೆ ಮುನ್ನವೇ ಸಿಹಿ ಸುದ್ದಿ – ಎಲ್‌ಪಿಜಿ ಸಿಲಿಂಡರ್‌ ಬೆಲೆ ಭಾರೀ ಇಳಿಕೆ

    ನವದೆಹಲಿ: ಕ್ರಿಸ್ಮಸ್‌ ಮತ್ತು ಹೊಸ ವರ್ಷಕ್ಕೆ ಮುನ್ನವೇ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಲ್‌ಪಿಜಿ ಸಿಲಿಂಡರ್‌ (Cylinder) ಬೆಲೆ ಭಾರೀ ಇಳಿಕೆಯಾಗಿದೆ.

    ತೈಲ ಕಂಪನಿಗಳು (Oil Marketing Companies) ವಾಣಿಜ್ಯ ಬಳಕೆಯ (Commercial LPG) 19 ಕೆಜಿ ಸಿಲಿಂಡರ್‌ ಬೆಲೆ 39.50 ರೂ. ಇಳಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

    ಪ್ರಸ್ತುತ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್‌ಗೆ 1,757.50 ರೂ. ದರವಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ ಬೆಲೆ ಸಾಧಾರಣವಾಗಿ ಪರಿಷ್ಕರಣೆಗೊಳ್ಳುತ್ತವೆ.  ಇದನ್ನೂ ಓದಿ: ಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!

    ಪ್ರಸ್ತುತ ದಿನ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 905.50 ರೂ. ಇದೆ. ಉಜ್ವಲ ಯೋಜನೆ ಹೊಂದಿದ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ಸಿಗುತ್ತಿದೆ. ಉಜ್ವಲ ಯೋಜನೆ ಅಡಿ ವರ್ಷಕ್ಕೆ ಒಟ್ಟು 12 ಸಿಲಿಂಡರ್‌ಗಳಿಗೆ ಈ ಸಬ್ಸಿಡಿ ಹಣ ನೀಡಲಾಗುತ್ತದೆ.

     

  • ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMC) ಶನಿವಾರ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆಯನ್ನು ಹೆಚ್ಚಿಸಿವೆ ಎಂದು ಮೂಲಗಳು ತಿಳಿಸಿವೆ.

    ವರದಿಗಳ ಪ್ರಕಾರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ (Gas) ಸಿಲಿಂಡರ್ ದರವನ್ನು 209 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 1731.50 ರೂ. ಆಗಲಿದೆ ಎಂದು ತಿಳಿಸಿವೆ.

    ಯಾವ ನಗರದಲ್ಲಿ ಎಷ್ಟು?
    ದೆಹಲಿ – 1,731.50 ರೂ.
    ಮುಂಬೈ – 1,684 ರೂ.
    ಲಕ್ನೋ – 1,845 ರೂ.
    ಚೆನ್ನೈ – 1,898 ರೂ.
    ಬೆಂಗಳೂರು – 1,813 ರೂ.
    ಕೋಲ್ಕತ್ತಾ – 1839 ರೂ. ಇದನ್ನೂ ಓದಿ:  ಅ.7 ರವರೆಗೆ 2,000 ರೂ. ನೋಟು ಬದಲಿಸಿಕೊಳ್ಳಲು ದಿನ ವಿಸ್ತರಿಸಿದ RBI

    ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ ಉಜ್ವಲ ಯೋಜನೆಯಡಿ ಹೆಚ್ಚುವರಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಅನುಮೋದಿಸಿತು. ಅದನ್ನು ಮುಂದಿನ 3 ವರ್ಷಗಳಲ್ಲಿ ನೀಡಲಾಗುತ್ತಿದ್ದೆ. ಈ ಸಂಪರ್ಕಗಳ ಒಟ್ಟು ವೆಚ್ಚ 1,650 ಕೋಟಿ ರೂ. ಆಗಿದೆ. ಉಜ್ವಲಾ ಯೋಜನೆಯಡಿ ನೀಡಲಾಗುತ್ತಿರುವ ಅಸ್ತಿತ್ವದಲ್ಲಿರುವ ಠೇವಣಿ ಮುಕ್ತ ಸಂಪರ್ಕಗಳ ಮುಂದುವರಿಕೆಯಲ್ಲಿ ಈ ಹೊಸ ಸಂಪರ್ಕಗಳನ್ನು ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

    ಗ್ರಾಮೀಣ ಕುಟುಂಬಗಳ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಡುಗೆ ಆಹಾರಕ್ಕಾಗಿ ಕಟ್ಟಿಗೆಯನ್ನು ಅವಲಂಬಿಸಿರುವ ಕುಟುಂಬಗಳಿಗೆ 75 ಲಕ್ಷ ಹೊಸ ಸಂಪರ್ಕಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಈ ಠೇವಣಿ ಮುಕ್ತ ಸಂಪರ್ಕಗಳನ್ನು ನೀಡುವ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಲಿದೆ. ನಂತರ ತೈಲ ಮಾರುಕಟ್ಟೆ ಕಂಪನಿಗಳಿಂದ ಮರುಪಾವತಿ ಮಾಡಲಾಗುವುದು ಎಂದು ಠಾಕೂರ್ ಹೇಳಿದರು. ಇದನ್ನೂ ಓದಿ: ಅ.7 ರವರೆಗೆ 2,000 ರೂ. ನೋಟು ಬದಲಿಸಿಕೊಳ್ಳಲು ದಿನ ವಿಸ್ತರಿಸಿದ RBI

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ವರ್ಷದಂದೇ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 25 ರೂ. ಏರಿಕೆ

    ಹೊಸ ವರ್ಷದಂದೇ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 25 ರೂ. ಏರಿಕೆ

    ನವದೆಹಲಿ: 2023 ಹೊಸ ವರ್ಷದ (Newyear 2023) ಮೊದಲದಿನವೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ದರವನ್ನು 25 ರೂ.ಗಳಷ್ಟು ಹೆಚ್ಚಿಸಿದೆ.

    ಹೊಸ ದರದ ಪ್ರಕಾರ 19 ಕೆಜಿಯ ವಾಣಿಜ್ಯ ಸಿಲಿಂಡರ್ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ 1,685.5 ರೂ., ದೆಹಲಿಯಲ್ಲಿ (NewDelhi) 1,768 ರೂ., ಮುಂಬೈನಲ್ಲಿ (Mumbai) 1,721 ರೂ., ಕೋಲ್ಕತ್ತಾದಲ್ಲಿ 1,870 ರೂ. ಮತ್ತು ಚೆನ್ನೈನಲ್ಲಿ 1,971 ರೂ. ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ. ಸಿಲಿಂಡರ್ ದರ ಏರಿಕೆಯಿಂದ ರೆಸ್ಟೋರೆಂಟ್ ಹಾಗೂ ಹೋಟೆಲ್ ಸೇವೆಗಳ ದರ ಏರಿಕೆಯಾಗುವ ಸಾಧ್ಯತೆಯಿದೆ.

    ಕಾಂಗ್ರೆಸ್ ಟೀಕೆ:
    `ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಎಲ್‌ಪಿಜಿ ದರ ಏರಿಕೆಯಾಗಿದ್ದು, ಇದು ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರದ (Government Of India) ಉಡುಗೊರೆ, ಇದು ಕೇವಲ ಆರಂಭ ಅಷ್ಟೇ’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಆಧುನಿಕ ಭಾರತದ ಪಿತಾಮಹ ದೇಶಕ್ಕಾಗಿ ಏನ್ ಮಾಡಿದ್ದಾರೆ – ನಿತೀಶ್ ಕುಮಾರ್ ಪ್ರಶ್ನೆ

    2014ರಿಂದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 410 ರೂ. ಇದ್ದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ 1,000ಕ್ಕೆ ಏರಿಕೆಯಾಗಿದೆ. ಅಲ್ಲದೇ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಕುಟುಂಬಗಳ ಮೇಲೆ ಆರ್ಥಿಕ ಒತ್ತಡ ಬೀಳುತ್ತಿದೆ. ಆದರೆ ಇಂಧನ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದಾಗೆಲ್ಲಾ ಬಿಜೆಪಿ ಸರ್ಕಾರವು ಕಚ್ಚಾ ತೈಲದ ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳನ್ನು ತೋರಿಸಿದೆ. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದ್ದರೂ ಏಕೆ ಕಡಿತಗೊಳಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

    ನವೆಂಬರ್ 1 ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 115 ರೂ. ಇಳಿಕೆಯಾಗಿತ್ತು. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    Live Tv
    [brid partner=56869869 player=32851 video=960834 autoplay=true]