Tag: Commercial Flights

  • ನಾಗರಿಕ ವಿಮಾನಗಳನ್ನು ಬಳಸಿಕೊಂಡು ಪಾಕ್ ಡ್ರೋನ್ ದಾಳಿ

    ನಾಗರಿಕ ವಿಮಾನಗಳನ್ನು ಬಳಸಿಕೊಂಡು ಪಾಕ್ ಡ್ರೋನ್ ದಾಳಿ

    ಇಸ್ಲಾಮಾಬಾದ್: ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಡ್ರೋನ್ ದಾಳಿಯ ಮಧ್ಯೆ ಲಾಹೋರ್ ಬಳಿ 2 ನಾಗರಿಕ ವಿಮಾನಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಬಳಸಿಕೊಂಡು ಡ್ರೋನ್ ದಾಳಿ ನಡೆಸುತ್ತಿದೆ ಎನ್ನಲಾಗುತ್ತಿದೆ.

    ಪಾಕಿಸ್ತಾನದ ಲಾಹೋರ್ ಬಳಿ ಎರಡು ನಾಗರಿಕ ವಿಮಾನಗಳು ಕಾಣಿಸಿಕೊಂಡಿದ್ದು, ಇದೇ ವೇಳೆ ಒಳನುಗ್ಗುತ್ತಿದ್ದ ಡ್ರೋನ್‌ಗಳನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ.ಇದನ್ನೂ ಓದಿ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ

    ಇಂದು ಸರ್ಕಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಕಾರ, ಗುರುವಾರ ರಾತ್ರಿ ಪಾಕ್ ವಾಯುಪ್ರದೇಶ ಬಳಕೆ ಬಂದ್ ಮಾಡಿರಲಿಲ್ಲ ಹಾಗೂ ನಾಗರಿಕ ವಿಮಾನಯಾನ ಮಾಡಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿತ್ತು, ಆದರೆ ದಾಳಿ ವೇಳೆ ಪಾಕಿಸ್ತಾನ ಭಾರತೀಯ ನಗರಗಳ ಮೇಲೆ ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಗುಟ್ಟಾಗಿ ಹಾರಿಸಿತ್ತು.

    ಅಂತಾರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ತಾನ ಏರ್‌ಲೈನ್ಸ್ ವಿಮಾನ PIA 306 ಕರಾಚಿಯಿಂದ ಲಾಹೋರ್‌ಗೆ ತೆರಳುವಾಗ ಕಂಡುಬಂದರೆ, ಇನ್ನೊಂದು ವಿಮಾನ ABQ406, ರಾತ್ರಿ 10 ಗಂಟೆಗೆ ಪಾಕಿಸ್ತಾನದಲ್ಲಿ ಇಳಿಯಬೇಕಿತ್ತು. ಆದರೆ ಅದು ಕರಾಚಿಯಿಂದ ಲಾಹೋರ್‌ಗೆ ಹಾರಾಟ ನಡೆಸುವಾಗ ಕಂಡುಬಂದಿದೆ.ಇದನ್ನೂ ಓದಿ:ದೇಶದಲ್ಲಿಲ್ಲ ಆಹಾರ ಕೊರತೆ; ಜನರಿಗೆ ಬೇಕಿಲ್ಲ ಚಿಂತೆ

  • ಆಕಾಶ ವಾಣಿಜ್ಯ ವಿಮಾನಯಾನ ಆರಂಭಕ್ಕೆ ಗ್ರೀನ್ ಸಿಗ್ನಲ್

    ಆಕಾಶ ವಾಣಿಜ್ಯ ವಿಮಾನಯಾನ ಆರಂಭಕ್ಕೆ ಗ್ರೀನ್ ಸಿಗ್ನಲ್

    ನವದೆಹಲಿ: ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲು ವಾಯುಯಾನ ನಿಯಂತ್ರಕದ ಅನುಮತಿ ಪಡೆದುಕೊಂಡಿದೆ ಎಂದು ಬಿಲಿಯನೇರ್ ಹಾಗೂ ಆಕಾಸ ಏರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಟ್ವೀಟ್ ಮಾಡಿದ್ದಾರೆ.

    ನಮ್ಮ ಏರ್ ಆಪರೇಟರ್ ಸರ್ಟಿಫಿಕೇಟ್ (AOC) ರಶೀದಿಯನ್ನು ಘೋಷಿಸಲು ನಾವು ಸಂತೋಷ ಪಡುತ್ತೇವೆ. ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಆಕಾಸ ವಿಮಾನ ಮಾರಾಟಕ್ಕೆ ಹಾಗೂ ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಕಾಶ ಏರ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಸಲ್ಮಾನ್ ಖಾನ್ ನಂತರ, ಸಲ್ಮಾನ್ ಲಾಯರ್ ಗೆ ಜೀವ ಬೆದರಿಕೆ

    ಎಒಸಿ ಹೊಸ ಏರ್‌ಲೈನ್‌ಗೆ ವಾಣಿಜ್ಯ ವಾಯುಸಾರಿಗೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯ ಚಿಂತಾಜನಕ- ಪಾಟ್ನಾದಿಂದ ದೆಹಲಿಗೆ ಏರ್‌ಲಿಫ್ಟ್

    ವಿಮಾನಯಾನ ಆರಂಭಿಸುವ ಮುನ್ನ ಸಂಸ್ಥೆಯು ತನ ಉದ್ಯೋಗಿಗಳ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಹೊಂದಿರಬೇಕು. AOC ವಿಮಾನಯಾನ ಜ್ಞಾನ ವೇದಿಕೆ ಸ್ಕೈಬ್ರರಿಯು ಯಾವ ಉದ್ದೇಶಕ್ಕಾಗಿ ಮತ್ತು ಯಾವ ಭೌಗೋಳಿಕ ಪ್ರದೇಶದಲ್ಲಿ ಯಾವ ಪ್ರಕಾರದ ವಿಮಾನಗಳನ್ನು ಬಳಸಬೇಕು ಎಂಬುದನ್ನು ವಿವರಿಸುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]