Tag: Commercial Building

  • ಕ್ಯಾಲಿಫೋರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನ; 2 ಸಾವು

    ಕ್ಯಾಲಿಫೋರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನ; 2 ಸಾವು

    ಸ್ಯಾಕ್ರಮೆಂಟೊ: ವಿಮಾನವೊಂದು ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ (Southern California) ನಡೆದಿದೆ.

    ಗುರುವಾರ ಮಧ್ಯಾಹ್ನ ಲಾಸ್ ಏಂಜಲೀಸ್‌ನ (Los Angeles) ಆಗ್ನೇಯಕ್ಕೆ ಸುಮಾರು 25 ಮೈಲಿ ದೂರದ ಫುಲ್ಲರ್‌ಟನ್ ಮುನ್ಸಿಪಲ್ ಏರ್‌ಪೋರ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಆರ್‌ವಿ-10 ಎಂದು ಗುರುತಿಸಲಾದ ವಿಮಾನವು ಫರ್ನಿಚರ್ ತಯಾರಿಕಾ ಕಂಪನಿಯ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಗೋಡೆಯಲ್ಲಿ ರಂಧ್ರ ನಿರ್ಮಾಣವಾಗಿ, ಅವ್ಯವಸ್ಥೆ ಉಂಟಾಯಿತು.ಇದನ್ನೂ ಓದಿ: BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

    ಈ ಕುರಿತು ಅಧಿಕಾರಿಗಳು ಮಾತನಾಡಿ, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಕಟ್ಟಡದೊಳಗಿದ್ದ ಜನರನ್ನು ತಕ್ಷಣವೇ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿಸಿದ್ದಾರೆ.

    ಫುಲ್ಲರ್ಟನ್ ಪೊಲೀಸ್ ಇಲಾಖೆಯ ವಕ್ತಾರರಾದ ಕ್ರಿಸ್ಟಿ ವೆಲ್ಸ್ ಮಾತನಾಡಿ, 10 ಜನರನ್ನು ಕೂಡಲೇ ಸ್ಥಳೀಯ ಆಸ್ಪತ್ರಗೆ ಕರೆದೊಯ್ಯಲಾಯಿತು. ಸಣ್ಣಪುಟ್ಟ ಗಾಯಗೊಂಡವರಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು ಹಾಗೂ ಘಟನೆಯಲ್ಲಿ ಸಾವನ್ನಪ್ಪಿದ್ದವರು ವಿಮಾದಲ್ಲಿದ್ದವರಾ? ಅಥವಾ ಕಟ್ಟಡದ ಸುತ್ತಮುತ್ತಲಿನವರಾ? ಎಂದು ತನಿಖೆಯ ಮೂಲಕ ತಿಳಿಯಬೇಕಿದೆ ಎಂದರು.

    ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ದಟ್ಟವಾದ ಹೊಗೆ ಆವರಿಸುವುದು ಕಂಡು ಬಂದಿದೆ. ಸದ್ಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ನಿಖರ ಕಾರಣಕ್ಕಾಗಿ ತನಿಖೆಯನ್ನು ಪ್ರಾರಂಭಿಸಿದೆ.ಇದನ್ನೂ ಓದಿ: ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

     

  • ಬಾಂಗ್ಲಾದಲ್ಲಿ ಬಹುಮಹಡಿ ಕಟ್ಟಡ ಸ್ಫೋಟ; ಭೀಕರ ದುರಂತಕ್ಕೆ 14 ಮಂದಿ ಬಲಿ

    ಬಾಂಗ್ಲಾದಲ್ಲಿ ಬಹುಮಹಡಿ ಕಟ್ಟಡ ಸ್ಫೋಟ; ಭೀಕರ ದುರಂತಕ್ಕೆ 14 ಮಂದಿ ಬಲಿ

    ಢಾಕಾ: 7 ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ (Explosion) 14 ಮಂದಿ ದಾರುಣ ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಾಂಗ್ಲಾದೇಶ ಢಾಕಾದ (Dhaka) ಗುಲಿಸ್ತಾನ್ ಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. 11 ಅಗ್ನಿಶಾಮಕ ಸೇವೆಗಳ ತುರ್ತು ಘಟಕಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡವರನ್ನ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (Dhaka Medical College Hospital) ದಾಖಲಿಸಲಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ವಿಮಾನ ಅಪಘಾತ- ಭಾರತೀಯ ಮೂಲದ ಮಹಿಳೆ ಸಾವು, ಮಗಳು ಗಂಭೀರ

    ಸ್ಫೋಟ ಸಂಭವಿಸಿದ ಸ್ಥಳದಿಂದ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ. ರಸ್ತೆಯಲ್ಲಿ ನಿಂತಿದ್ದ ಬಸ್‌ಗಳೂ ಸಾಕಷ್ಟು ಹಾನಿಯಾಗಿದೆ. ಕಟ್ಟಡದ ನೆಲ ಮಳಿಗೆಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪಿಒಕೆಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಬ್ ಕಡ್ಡಾಯ

    ಜನನಿಬಿಡ ಸಿದ್ದಿಕ್ ಬಜಾರ್‌ನಲ್ಲಿರುವ ಈ ಕಟ್ಟಡವು ಹಲವಾರು ಕಚೇರಿಗಳು ಮತ್ತು ಮಳಿಗೆಗಳನ್ನ ಹೊಂದಿರುವ ವಾಣಿಜ್ಯ ಕಟ್ಟಡವಾಗಿತ್ತು. ನೆಲಮಹಡಿಯಲ್ಲಿ ನೈರ್ಮಲ್ಯ ಸಾಮಗ್ರಿಗಳನ್ನ ಮಾರಾಟ ಮಾಡುವ ಅಂಗಡಿಗಳಿದ್ದವು, ಅಲ್ಲಿಯೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.