Tag: Commerce

  • ಬಾಗಲಕೋಟೆ ವಿವಿಯಿಂದ ಅನ್ಯಾಯ – ವಾಣಿಜ್ಯ ವಿಭಾಗದ ಉಪನ್ಯಾಸಕರಿಂದ ಕಪ್ಪು ಪಟ್ಟಿ ಧರಿಸಿ ಪಾಠ

    ಬಾಗಲಕೋಟೆ ವಿವಿಯಿಂದ ಅನ್ಯಾಯ – ವಾಣಿಜ್ಯ ವಿಭಾಗದ ಉಪನ್ಯಾಸಕರಿಂದ ಕಪ್ಪು ಪಟ್ಟಿ ಧರಿಸಿ ಪಾಠ

    ಬಾಗಲಕೋಟೆ: ವಿಶ್ವವಿದ್ಯಾಲಯದಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯಾದ್ಯಂತ ವಾಣಿಜ್ಯ ವಿಭಾಗದ (Commerce Lecturer) ಡಿಗ್ರಿ ಕಾಲೇಜುಗಳ ಉಪನ್ಯಾಸಕರು ಕಪ್ಪು ಪಟ್ಟಿಯನ್ನು ಧರಿಸಿ ವಿದ್ಯಾರ್ಥಿಗಳಿಗೆ (Student) ಪಾಠ ಮಾಡಿದ್ದಾರೆ.

    ವಾಣಿಜ್ಯ ವಿಭಾಗಕ್ಕೆ ಇರುವ ಫೈನಾನ್ಸಿಯಲ್‌ ಮ್ಯಾನೇಜಮೆಂಟ್ (Financial Management) ವಿಷಯವನ್ನು ಅರ್ಥಶಾಸ್ತ್ರ (Economics) ವಿಭಾಗದ ಉಪನ್ಯಾಸಕರು ಬೋಧನೆ ಮಾಡುವಂತೆ ಬಾಗಲಕೋಟೆ ವಿಶ್ವವಿದ್ಯಾಲಯ (Bagalkot University) ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯನ್ನು ಖಂಡಿಸಿ ಇಳಕಲ್, ಮುಧೋಳ, ಬಾದಾಮಿ, ಗುಳೇದಗುಡ್ಡ ಸೇರಿದಂತೆ ಜಿಲ್ಲೆಯ ವಾಣಿಜ್ಯ ವಿಭಾಗದ ಉಪನ್ಯಾಸಕರು ಪ್ರತಿಭಟಿಸಿದ್ದಾರೆ.  ಇದನ್ನೂ ಓದಿ: ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

    ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಿಗೆ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ವಿಷಯದ ಬಗ್ಗೆ ಸಂಪೂರ್ಣ ಹಿಡಿತ ಇರುವುದಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಲ್ಲದೇ ವಾಣಿಜ್ಯ ವಿಭಾಗದ ಉಪನ್ಯಾಸಕರ ಹುದ್ದೆಗಳಿಗೂ ಕುತ್ತುಬರುವ ಸಾಧ್ಯತೆ ಇದೆ ಎಂದು ಹೇಳಿ ಕಪ್ಪು ಪಟ್ಟಿಧರಿಸಿ ಸಾಂಕೇತಿಕ ಪ್ರತಿಭಟನೆಗೆ (Protest) ಇಳಿದಿದ್ದಾರೆ.

    ಕೂಡಲೇ ವಿಶ್ವವಿದ್ಯಾಲಯ ಈ ಆದೇಶವನ್ನು ಹಿಂಪಡೆಯದಿದ್ದರೆ ಮೌಲ್ಯಮಾಪನ ಸೇರಿದಂತೆ ಬೋಧನೆ (ಕ್ಲಾಸ್‌ಗಳನ್ನು) ಬಹಿಷ್ಕರಿಸಿ ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ಮಾಡುವುದಾಗಿ ಬಾಗಲಕೋಟೆ ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ವ್ಯವಸ್ಥಾಪನಾ ಪ್ರಾಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಕುರನಾಳ ಎಚ್ಚರಿಕೆ ನೀಡಿದ್ದಾರೆ.

  • ವಾಣಿಜ್ಯದಲ್ಲಿ ಆಳ್ವಾಸ್ ಕಾಲೇಜಿನ ಒಲ್ವಿಟಾ ಫಸ್ಟ್ – ಟಾಪರ್ ಪಟ್ಟಿ ಇಲ್ಲಿದೆ

    ವಾಣಿಜ್ಯದಲ್ಲಿ ಆಳ್ವಾಸ್ ಕಾಲೇಜಿನ ಒಲ್ವಿಟಾ ಫಸ್ಟ್ – ಟಾಪರ್ ಪಟ್ಟಿ ಇಲ್ಲಿದೆ

    ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ನಿರ್ಮಿಸಿದ್ದು ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ವರ್ಷ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ. ಇದನ್ನೂ ಓದಿ:ಕಲಾ ವಿಭಾಗದಲ್ಲಿ ಬಳ್ಳಾರಿಯ ಕುಸುಮ ಫಸ್ಟ್ – ಇಂದೂ ಕಾಲೇಜಿನ 9 ಮಂದಿ ಟಾಪರ್

    ದ್ವಿತಿಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಎನ್ಸಿಲ್ಲಾ ಡಿಸೋಜಾ ಅವರು 596 ಅಂಕ ಪಡೆದು ಮೊದಲ ಸ್ಥಾನಗಳಿಸಿದ್ದಾರೆ. ಇದನ್ನೂ ಓದಿ:ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ಟಾಪ್ 10 ಪಟ್ಟಿಯಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು

    1. ಹೆಸರು: ಒಲ್ವಿಟಾ ಎನ್ಸಿಲ್ಲಾ ಡಿಸೋಜಾ
    ಕಾಲೇಜು: ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರೆ, ದಕ್ಷಿಣ ಕನ್ನಡ
    ಪಡೆದ ಅಂಕ: 596

    2. ಹೆಸರು: ಶ್ರೀಕೃಷ್ಣ ಶರ್ಮಾ ಕೆ
    ಕಾಲೇಜು: ಸತ್ಯಸಾಯಿ ಪಿಯು ಕಾಲೇಜು, ಅಳಿಕೆ ಸತ್ಯಸಾಯಿ ವಿಹಾರ್ ದ.ಕ
    ಪಡೆದ ಅಂಕ: 596

    3. ಹೆಸರು: ಶ್ರೇಯಾ ಶೆಣೈ
    ಕಾಲೇಜು: ಕೆನರಾ ಪಿಯು ಕಾಲೇಜು, ಕೊಡಿಯಲ್‍ಬೈಲ್, ಮಂಗಳೂರು
    ಪಡೆದ ಅಂಕ: 595

    4. ಹೆಸರು: ಸ್ವಸ್ತಿಕ್ ಪಿ
    ಕಾಲೇಜು: ಸಂತ ಫಿಲೋಮಿನಾ ಪಿಯು ಕಾಲೇಜು, ಪುತ್ತೂರು
    ಪಡೆದ ಅಂಕ: 594

    5. ಹೆಸರು: ಗೌತಮ್ ರಾಥಿ
    ಕಾಲೇಜು: ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
    ಪಡೆದ ಅಂಕ: 594

    6. ಹೆಸರು: ವೈಷ್ಣವಿ ಕೆ
    ಕಾಲೇಜು: ಎಸ್. ಕದಂಬಿ ಪಿಯು ಕಾಲೇಜು, ಬಸವೇಶ್ವರನಗರ, ಬೆಂಗಳೂರು
    ಪಡೆದ ಅಂಕ: 594

    7. ಹೆಸರು: ಪ್ರಜ್ಞಾ ಸತೀಶ್
    ಕಾಲೇಜು: ವಿದ್ಯಾವಾಹಿನಿ ಪಿಯು ಕಾಲೇಜು, ತುಮಕೂರು
    ಪಡೆದ ಅಂಕ: 594

    8. ಹೆಸರು: ಭೀಮಿ ರೆಡ್ಡಿ ಸಂದೀಪ್ ರೆಡ್ಡಿ
    ಕಾಲೇಜು: ಜೈನ್ ಪಿಯು ಕಾಲೇಜು, ಬೆಂಗಳೂರು
    ಪಡೆದ ಅಂಕ: 594

    9. ಹೆಸರು: ಪ್ರಣವ್.ಎಸ್. ಶಾಸ್ತ್ರಿ
    ಕಾಲೇಜು: ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
    ಪಡೆದ ಅಂಕ: 594

    10. ಹೆಸರು: ಶ್ರಾವಂತಿ ಜಯಪಾಲ್
    ಕಾಲೇಜು: ಎಸ್.ಬಿ ಮಹಾವೀರ್ ಜೈನ್ ಕಾಲೇಜು, ಬೆಂಗಳೂರು
    ಪಡೆದ ಅಂಕ: 594

  • ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಬೆಂಗಳೂರು: ಪಿಯು ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ. ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ಪಬ್ಲಿಕ್ ಟಿವಿಯಂದಿಗೆ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರತಿ ವರ್ಷ ಪರೀಕ್ಷೆ ಫಲಿತಾಂಶ ಬಂದಾಗ ನಾನು ಸುದ್ದಿ ವಾಹಿನಿಗಳಲ್ಲಿ ಯಾರೂ ಟಾಪ್ ಬರುತ್ತಾರೆಂದು ನೋಡುತ್ತಿದೆ. ಆದರೆ ಈಗ ನಾನು ಆ ಸ್ಥಾನದಲ್ಲಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಶುರುವಾದ ಬಳಿಕ ದಿನ 4ರಿಂದ 5 ಗಂಟೆಗಳವರೆಗೂ ಓದುತ್ತಿದೆ. ನಾನು ತುಂಬಾ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಪರಿಶ್ರಮ, ಶಿಕ್ಷಕರ, ಪ್ರಿನ್ಸಿಪಲ್ ಹಾಗೂ ನನ್ನ ಪೋಷಕರ ಸಪೋರ್ಟ್ ಮಾಡಿದ್ದಾರೆ.

    ನಾನು ಈಗ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಈಗಾಗಲೇ ಸಿಎ ಕೋಚಿಂಗ್ ಕ್ಲಾಸ್‍ಗೆ ಸೇರಿಕೊಂಡಿದ್ದೀನಿ. ನನ್ನ ಫಲಿತಾಂಶ ಬಂದಾಗ ನನ್ನ ತಾಯಿ ನಂಬಲೇ ಇಲ್ಲ, ಅವರಿಗೆ ತುಂಬಾ ಖುಷಿಯಾಗಿದೆ. ನನ್ನ ತಂದೆ ಊರಿನಿಂದ ಹೊರ ಹೋಗಿದ್ದು, ಕರೆ ಮಾಡಿ ತಿಳಿಸಬೇಕೆಂದು ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ತಿಳಿಸಿದ್ದಾರೆ.

    ವರ್ಷಿಣಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಸಂಸ್ಕೃತ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಇನ್ನೂ ಅಕೌಂಟ್ಸ್‍ನಲ್ಲಿ 99, ಆಂಗ್ಲ ಭಾಷೆಯಲ್ಲಿ 100ಕ್ಕೆ 96 ಅಂಕಗಳನ್ನು ಪಡೆದು ವಾಣಿಜ್ಯ ಭಾಗದ ಟಾಪರ್ ಆಗಿದ್ದಾರೆ.