Tag: comments

  • ರಶ್ಮಿಕಾಗೆ ಗಡ್ಡ ಬೆಳೆದಿದೆ ಎಂದು ಮಾರ್ಕ್ ಮಾಡಿ ಕಾಲೆಳೆದ ಅಭಿಮಾನಿ

    ರಶ್ಮಿಕಾಗೆ ಗಡ್ಡ ಬೆಳೆದಿದೆ ಎಂದು ಮಾರ್ಕ್ ಮಾಡಿ ಕಾಲೆಳೆದ ಅಭಿಮಾನಿ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna)  ಬಗ್ಗೆ ಆಗಾಗ್ಗೆ ಅಭಿಮಾನಿಗಳು ಒಂದಿಲ್ಲೊಂದು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಬಹಳಷ್ಟು ಸಾರಿ ಪಾಸಿಟಿವ್ ಆಗಿ, ಕೆಲವು ಸಲ ನೆಗೆಟಿವ್ ಆಗಿಯೂ ಕಾಮೆಂಟ್ ಮಾಡಿದ್ದು ಇದೆ. ಈ ಸಲ ಅನೇಕರು ರಶ್ಮಿಕಾಗೆ ಕಾಲೆಳೆದಿದ್ದಾರೆ. ಕಾರಣ ಅವರು ಟ್ವೀಟ್ ಮಾಡಿರುವ ಫೋಟೋ.

    ಇಂದು ಬೆಳಗ್ಗೆ ಫೋಟೋವೊಂದನ್ನು (Photo)  ಟ್ವಿಟರ್ ನಲ್ಲಿ ಶೇರ್ ಮಾಡಿರುವ ರಶ್ಮಿಕಾ, ‘ಐ ಡೋಂಟ್ ನೋ ಹೌ ಟು ಪೌಟ್ ಸೋ ಎ ಸ್ಟ್ರೈಟ್ ಔಟ್ ಕಿಸ್ಸೀ ಇಟ್ ಇಸ್’ ಎಂದು ಕೇಳಿದ್ದಾರೆ. ಇದಕ್ಕೆ ಕೆಲವರು ಸೋ ಕ್ಯೂಟ್, ಹಾಟ್ ಅಂತೆಲ್ಲ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಇದೇ ರೀತಿಯ ಬೇರೆ ನಟಿಯ ಫೋಟೋ ಲಿಂಕ್ ಮಾಡಿ, ಇವರಿಂದ ಕಲಿಯಿರಿ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲವರು ಮಾತ್ರ ಭಯಂಕರ ಎನ್ನುವಂತೆ ಸಂಶೋಧನೆ ಮಾಡಿದ್ದಾರೆ.

    ಕೆಲ ಅಭಿಮಾನಿಗಳು ರಶ್ಮಿಕಾ ಹಾಕಿರುವ ಫೋಟೋವನ್ನು ಜೂಮ್ ಮಾಡಿ ಬಲಗಡೆ ಗದ್ದದಲ್ಲಿರುವ ಕೂದಲು ಮಾರ್ಕ್ ಮಾಡಿ ತೋರಿಸಿದ್ದಾರೆ. ‘ರಶ್ಮಿಕಾಗೆ ಗಡ್ಡ (Beard) ಬೆಳೆದಿದೆ’ ಎಂದು ಕಾಲೆಳೆದಿದ್ದಾರೆ. ಜೊತೆಗೆ ಆದರೂ ಕ್ಯೂಟ್ ಆಗಿ ಇದ್ದೀರಿ ಎಂದು ಹೊಗಳಿದ್ದಾರೆ. ಇನ್ನೊಬ್ಬ ಅದನ್ನು ತೆಗೆದುಹಾಕಿ ಎಂದೂ ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಚುನಾವಣಾ ರಾಯಭಾರಿಯಾಗಿ ಖ್ಯಾತನಟ ಸತೀಶ್ ನೀನಾಸಂ ನೇಮಕ

    ಈ ಫೋಟೋಗೆ ಸಾವಿರಾರು ಜನರು ಕಾಮೆಂಟ್ (Comments) ಮಾಡಿದ್ದಾರೆ. ಅಲ್ಲದೇ, ರಶ್ಮಿಕಾ ಕೇಳಿದ ಪ್ರಶ್ನೆಗೆ ಅನೇಕರು ಉತ್ತರಿಸಿದ್ದರೆ, ಇನ್ನೂ ಕೆಲವರು ದಾರಿ ತಪ್ಪಿಸುವಂತಹ ಪ್ರಯತ್ನವನ್ನೂ ಮಾಡಿದ್ದಾರೆ. ಇಡೀ ಕಾಮೆಂಟ್ ನಲ್ಲಿ ಸಖತ್ ಫಿನ್ನಿಯಾಗಿ ಇರುವಂತಹ ಕಾಮೆಂಟ್ಸ್ ಮತ್ತು ಫೋಟೋಗಳನ್ನು ಕಾಣಬಹುದು.

  • ಶ್ರುತಿ ಪೋಸ್ಟ್‌‌ಗೆ ಅಭಿಮಾನಿಗಳ ಕಮೆಂಟ್ – ರೊಚ್ಚಿಗೆದ್ದ ಪ್ರಥಮ್

    ಶ್ರುತಿ ಪೋಸ್ಟ್‌‌ಗೆ ಅಭಿಮಾನಿಗಳ ಕಮೆಂಟ್ – ರೊಚ್ಚಿಗೆದ್ದ ಪ್ರಥಮ್

    ಬೆಂಗಳೂರು: ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ತಾವು ಗರ್ಭಿಣಿ ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅಭಿಮಾನಿಗಳು ಶ್ರುತಿ ಅವರ ಪೋಸ್ಟಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್ ವಿಜೇತ ಪ್ರಥಮ್ ರೊಚ್ಚಿಗೆದ್ದಿದ್ದಾರೆ.

    ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್, ಫೇಸ್‍ಬುಕ್ ನಲ್ಲಿ ಮಂಗಳವಾರ ಪೋಸ್ಟ್ ಮಾಡಿದ್ದರು. “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು.

    ಈ ಪೋಸ್ಟ್‌‌ಗೆ ಹಲವರು ಶ್ರುತಿ ಅವರನ್ನು ನಿಂದಿಸಿ ಮಗುವಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಲದೆ ನಟ ಅರ್ಜುನ್ ಸರ್ಜಾ ಅವರನ್ನು ಟ್ಯಾಗ್ ಮಾಡುವ ಮೂಲಕ ಕಮೆಂಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಪ್ರಥಮ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.

    ಪ್ರಥಮ್ ಹೇಳಿದ್ದೇನು?
    ಮುಖ್ಯವಾದ ವಿಷಯ. ನಾನು ಸಾಮಾನ್ಯವಾಗಿ ಯಾರ ಪ್ರೊಫೈಲ್‍ನಲ್ಲೂ ಕಮೆಂಟ್ ಮಾಡಲ್ಲ. ನಿಮಗೆ ಯಾರ ಮೇಲೆ ಎಷ್ಟೇ ವಿರೋಧ ಇದ್ದರೂ ಇಟ್ಟುಕೊಳ್ಳಿ. ಅದು ನಿಮ್ಮ ಇಷ್ಟ. ಇನ್ನೂ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಇಷ್ಟೆಲ್ಲಾ ವಿರೋಧವೇ? ಗುರು ಆ ಮಗುವಿನ ಚರಿತ್ರೆ ನೀವೆಲ್ಲ ಯಾರಪ್ಪ ಸರ್ಟಿಫಿಕೇಟ್ ಕೊಡೋಕೆ? ಮುಖ್ಯವಾದ ವಿಷಯ ಏನೆಂದರೆ ಅರ್ಜುನ್ ಸರ್ಜಾರಿಗೆ ಟ್ಯಾಗ್ ಮಾಡೋ ಚಿಲ್ಲರೆ ಬುದ್ಧಿ ಬಿಡಿ.

    ಪ್ರಪಂಚನೇ ನೋಡದೇ ಇರೋ ಮಗು ಬಗ್ಗೆ ಯಾಕ್ರೋ ಪಾಪದ ಮಾತಾಡ್ತೀರಾ? ನೆನಪಿರಲಿ. ನಿಮ್ಮಿಷ್ಟ ನಿಮ್ಮ ಲೈಫ್. ಆದರೆ ಇನ್ನೂ ಹುಟ್ಟದೇ ಇರೋ ಮಗುವಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬೇಡ. ಅವರ ಲೈಫ್ ಅವರ ಇಷ್ಟ. ಯಾರನ್ನೂ ಮುಜಗರ ಮಾಡಬೇಡಿ. ಇದರ ಬಗ್ಗೆ ಯಾರು ಮಾತಾಡಲಿಲ್ಲ. ಹಾಗಾಗಿ ನಾನು ಮಾತನಾಡಿದೆ ಎಂದು ಕಮೆಂಟ್ ಮಾಡುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಥಮ್ ಕಮೆಂಟ್ ನೋಡಿದ ಶ್ರುತಿ ಹರಿಹರನ್ ಪ್ರತಿಕ್ರಿಯೆ ನೀಡಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಿಮ್ಮ ಕಮೆಂಟ್ ಅನ್ನು ನಾನು ಪ್ರಶಂಶಿಸುತ್ತೇನೆ. ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

  • ಯುದ್ಧಭೂಮಿಯಲ್ಲಿ ಮಹಿಳಾ ನೇಮಕಾತಿ ಕಷ್ಟ – ಸೇನಾ ಮುಖ್ಯಸ್ಥರ ವಿರುದ್ಧ ಆಕ್ರೋಶ

    ಯುದ್ಧಭೂಮಿಯಲ್ಲಿ ಮಹಿಳಾ ನೇಮಕಾತಿ ಕಷ್ಟ – ಸೇನಾ ಮುಖ್ಯಸ್ಥರ ವಿರುದ್ಧ ಆಕ್ರೋಶ

    – ಸೇನಾ ಮುಖ್ಯಸ್ಥ ರಾವತ್ ವಿರುದ್ಧ ಆನ್‍ಲೈನ್‍ನಲ್ಲಿ ಆಕ್ರೋಶ
    – ಹುತಾತ್ಮ ಮಹಿಳಾ ಯೋಧರ ಮೃತದೇಹ ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದಿದ್ದ ಬಿಪಿನ್ ರಾವತ್

    ನವದೆಹಲಿ: ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ನೇಮಕಾತಿಗೆ ಇರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಬಳಕೆದಾರರು, ರಾವತ್ ಹೇಳಿಕೆ ಸೇನೆಯನ್ನು ಮುಜುಗರಕ್ಕೀಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸೇನಾ ಮುಖ್ಯಸ್ಥರು ಹೇಳಿದ್ದೇನು?: ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ರಾವತ್ ಅವರು, ಮಹಿಳಾ ನೇಮಕಾತಿಯ ಹಲವು ಆಯಾಮಗಳ ಬಗ್ಗೆ ಮಾತನಾಡಿದ್ದರು.

    ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಲು ನಾನು ಸಿದ್ಧನಿದ್ದೇನೆ. ಆದರೂ ಸೇನೆಯಲ್ಲಿರುವ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದಿರುತ್ತಾರೆ. ಅವರೆಲ್ಲಾ ಮಹಿಳಾ ಕಮಾಂಡರ್ ಗಳು ತಮ್ಮ ನೇತೃತ್ವ ವಹಿಸುವುದನ್ನು ಒಪ್ಪಲ್ಲ ಎಂದು ಹೇಳಿದ್ದರು.

    ಸೇನೆಯಲ್ಲಿ ಮಹಿಳೆಯರು ಎಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ಪಡೆಯಲ್ಲಿ ಅವರೇ ನಮ್ಮ ಶಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಯುದ್ಧಭೂಮಿಯಲ್ಲಿ ಆ ಮಹಿಳಾ ಯೋಧರು ಮೃತಪಡುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಅವರು ಯುದ್ಧಭೂಮಿಯಲ್ಲಿ ಸಾವನ್ನಪ್ಪಿದರೆ ಮೃತದೇಹ ಮನೆಗೆ ಮರಳಿದಾಗ ಅದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದು ಹೇಳಿದ್ದರು.

    ಹಾಗಂತ ಅವರು ಬೇರೆಲ್ಲೂ ಸಾಯಲ್ಲ ಎಂದು ನಾನು ಹೇಳಲ್ಲ. ಮಕ್ಕಳನ್ನು ಹೊಂದಿರುವ ಮಹಿಳೆಯರು ರಸ್ತೆ ಅಪಘಾತಗಳಲ್ಲೂ ಸಾಯುತ್ತಾರೆ. ಆದರೆ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ನೋಡಲು ದೇಶ ಬಯಸುವುದೇ ಎಂದು ಪ್ರಶ್ನಿಸಿದರು.

    ಯುದ್ಧರಂಗದಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡಲು ಸೇನೆ ಸಿದ್ಧವಿಲ್ಲ ಎಂದಲ್ಲ. ಒಂದು ವೇಳೆ ಕಮಾಂಡರ್ ಹುದ್ದೆ ನೀಡಿದರೆ ಅವರು ದೀರ್ಘಾವಧಿಗೆ ಕುಟುಂಬದ ಹೊಣೆಗಾರಿಕೆಯಿಂದ ದೂರ ಉಳಿಯಬಹುದೇ? ಆಗ ಅವರಿಗೆ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದು ನಿರ್ಬಂಧ ಹೇರಬಹುದೇ? ಎಂದು ಪ್ರಶ್ನಿಸಿದ ಅವರು ನಾನು ಹೀಗೆ ಹೇಳಿದರೆ ವಿವಾದಕ್ಕೆ ಗುರಿಯಾಗುತ್ತದೆ ಎಂದು ಹೇಳಿದ್ದಾರೆ.

    ಟ್ಟೀಟ್ ನಲ್ಲಿ ಏನಿದೆ?:
    ಬಟ್ಟೆ ಬದಲಾಯಿಸುವಾಗ ಯೋಧರು ಇಣುಕುವ ಸಾಧ್ಯತೆ ಇದೆ. ಹೀಗಾಗಿ ಮಹಿಳೆಯರಿಗೆ ಯುದ್ಧಭೂಮಿಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆ ಹಾಗೂ ದೇಶವನ್ನು ಮುಜುಗರಕ್ಕೀಡುಮಾಡಿದ್ದಾರೆ ಎಂದು ವಿಷ್ಣುಕಾಂತ್ ಶರ್ಮಾ ಎಂಬವರು ಟ್ವೀಟ್ ಮಾಡಿದ್ದಾರೆ.

    https://twitter.com/Dibyendu69/status/1074174987802599425

    ರಾವತ್ ಹೇಳಿಕೆ ನಿಜಕ್ಕೂ ಆಘಾತಕರ. ಅವರೀಗ ಸೇನೆ ಮತ್ತು ದೇಶವನ್ನು ಮುಜುಗರಕ್ಕೀಡುಮಾಡಲು ಶುರು ಮಾಡಿದ್ದಾರೆ. ಅವರ ನಿವೃತ್ತಿಗೆ ಇನ್ನೆಷ್ಟು ತಿಂಗಳುಗಳು ಬಾಕಿ ಇದೆ ಎಂದು ಪ್ರಶ್ನಿಸಿ ಜಸ್ಕಿರಾತ್ ಸಿಂಗ್ ನಗ್ರ ಎಂಬವರು ಕಿಡಿಕಾಡಿದ್ದಾರೆ.

    ಮಹಿಳೆಯರಿಗೆ ಖಾಸಗಿತನ ನೀಡಲಾಗದ್ದರ ಬಗ್ಗೆ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಮತ್ತು ಬುದ್ಧಿ ಇಲ್ಲದವರು ಕೊನೆಗೆ ಸೇನೆ ಸೇರಿದಾಗ ಹೀಗಾಗಲು ಸಾಧ್ಯ ಎಂದು ಲಿಂಡ್ಸೆ ಪೆರೆರಾ ಎಂಬವರು ಬಿಪಿನ್ ರಾವತ್ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com