Tag: Commentary

  • ಆರ್.ಆರ್.ಆರ್ ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ ಬಾಲಿವುಡ್ ನಟ ನಾಸೀರುದ್ದೀನ್ ಶಾ ಪತ್ನಿ

    ಆರ್.ಆರ್.ಆರ್ ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ ಬಾಲಿವುಡ್ ನಟ ನಾಸೀರುದ್ದೀನ್ ಶಾ ಪತ್ನಿ

    ಬಾಲಿವುಡ್ ಸಿನಿಮಾ ರಂಗದ ಹಿರಿಯ ಕಲಾವಿದೆ ಹಾಗೂ ನಟ ನಾಸೀರುದ್ದೀನ್ ಶಾ (Naseeruddin Shah) ಪತ್ನಿ ರತ್ನಾ ಪಠಾಕ್ ಶಾ (Ratna Pathak Shah) ‘ಆರ್.ಆರ್.ಆರ್’ (RRR) ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿ ಆಗಿದ್ದ ಅವರು ‘ಆರ್.ಆರ್.ಆರ್ ರೀತಿಯ ಸಿನಿಮಾಗಳು ನಮ್ಮನ್ನು ಮತ್ತಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ನಾವೆಲ್ಲರೂ ಮುಂದೆ ನೋಡುತ್ತಿರುವಾಗ, ನಮ್ಮನ್ನು ಈ ಚಿತ್ರ ಹಿಂದಕ್ಕೆ ಕರೆದುಕೊಂಡು ಹೋಗುತ್ತಿದೆ’ ಎಂದು ಹೇಳಿದ್ದಾರೆ. ಸಿನಿಮಾ ಗೆದ್ದಿದ್ದರೂ, ಅದು ಅಹಂಕಾರವನ್ನು ತೋರಿಸುತ್ತದೆ’ ಎಂದಿದ್ದಾರೆ.
    RRR NEW SONG ONE

    ಆರ್.ಆರ್.ಆರ್ ಸಿನಿಮಾದ ಕಥೆಯ ಕುರಿತು ಈ ರೀತಿಯ ಹೇಳಿಕೆಯನ್ನು ನೀಡಿರುವ ಅವರು, ಚಿತ್ರಕರ್ಮಿಗಳು ಈ ಸಿನಿಮಾವನ್ನು ವಿಮರ್ಶೆ ದೃಷ್ಟಿಯಿಂದ ನೋಡಲೇ ಇಲ್ಲವೆಂದು ವಿಷಾದವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಸಿನಿಮಾಗಳನ್ನು ವಿಮರ್ಶೆ ಮಾಡದೇ ಇದ್ದರೆ, ಅಹಂಕಾರ ಹೊತ್ತುಕೊಂಡಿರುವ ಅವರು ತಾವು ಮಾಡಿದ್ದೇ ಶ್ರೇಷ್ಠವೆಂದು ಭಾವಿಸುತ್ತಾರೆ ಎಂದು ನಿರ್ದೇಶಕ ರಾಜಮೌಳಿಯನ್ನು (Rajamouli) ಕುಟುಕಿದ್ದಾರೆ. ವಿಮರ್ಶೆಗಳು ಏನೇ ಬಂದರೂ, ಅದನ್ನು ಮುಕ್ತವಾಗಿ ತಗೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ.

    ಸಿನಿಮಾ ಬಗ್ಗೆ ಏನೇ ಟೀಕೆ ಟಿಪ್ಪಣಿಗಳು ಬಂದರೂ, ಈ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ‘ಆರ್.ಆರ್.ಆರ್’ ಸಿನಿಮಾಗೆ ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್’ನಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮೊನ್ನೆಯಷ್ಟೇ ಈ ಸಿನಿಮಾ ನಾಮನಿರ್ದೇಶನಕ್ಕೆ ಆಯ್ಕೆಯಾಗಿದ್ದನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಮೂರು ಪ್ರಶಸ್ತಿಗಳನ್ನು ಅದು ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

    ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್ ಸಂಸ್ಥೆಯು ಆರ್.ಆರ್.ಆರ್ ಸಿನಿಮಾಗೆ ಅತ್ಯುತಮ್ಮ ವಿದೇಶಿ ಸಿನಿಮಾ, ಅತ್ಯುತ್ತಮ ಸಂಗೀತ ಸಂಯೋಜನೆ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೀಡಿರುವ ಸಂಸ್ಥೆಗೆ ರಾಜಮೌಳಿ ಅಂಡ್ ಟೀಮ್ ಧನ್ಯವಾದಗಳನ್ನು ಅರ್ಪಿಸಿದೆ. ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಗೆ ‘ಲಾರಿಂಜೈಟಿಸ್’ ಖಾಯಿಲೆ: ಆಸ್ಪತ್ರೆಗೆ ದಾಖಲು

    ಆರ್.ಆರ್.ಆರ್ ಸಿನಿಮಾ ಐದು ವಿಭಾಗಗಳಲ್ಲಿ ನಾಮಿನೇಷನ್ ಪಟ್ಟಿಯಲ್ಲಿತ್ತು. ಅದರಲ್ಲಿ ಮೂರು ಪ್ರಶಸ್ತಿಗಳನ್ನು ಅದು ಬಾಚಿದೆ. ಅಲ್ಲದೇ ಈ ಬಾರಿಯ ಆಸ್ಕರ್ ಪ್ರಶಸ್ತಿಗೂ ಆರ್.ಆರ್.ಆರ್ ಸಿನಿಮಾ ಸ್ಪರ್ಧೆಯಲ್ಲಿದೆ. ಇನ್ನೂ ಅನೇಕ ಪ್ರಶಸ್ತಿಗಳಲ್ಲಿ ಚಿತ್ರ ಸ್ಪರ್ಧೆ ಮಾಡುತ್ತಿದೆ. ಅದರಲ್ಲೂ ಆಸ್ಕರ್ ಮೇಲೆ ಕಣ್ಣಿಟ್ಟು ಚಿತ್ರತಂಡ ಕೂತಿರುವುದರಿಂದ ಆ ಪ್ರಶಸ್ತಿ ಸಿಗುತ್ತಾ ಎನ್ನುವ ಕುತೂಹಲ ಕೂಡ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ‘ಪಕ್ಕದ ಮನೆಯವನ ಹೆಂಡತಿ, ಬ್ಯಾಟ್’ ನಿಂದ ಹೊಡೆತ – ಕ್ಷಮೆ ಕೇಳಿದ ಕಾರ್ತಿಕ್

    ‘ಪಕ್ಕದ ಮನೆಯವನ ಹೆಂಡತಿ, ಬ್ಯಾಟ್’ ನಿಂದ ಹೊಡೆತ – ಕ್ಷಮೆ ಕೇಳಿದ ಕಾರ್ತಿಕ್

    ಲಂಡನ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ದಿನೇಶ್ ಕಾರ್ತಿಕ್ ಇದೀಗ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಕಾಮೆಂಟರಿ ಮಾಡುತ್ತಿದ್ದ ಕಾರ್ತಿಕ್ ಅವರ ಕಮೆಂಟ್ ಒಂದು ಅವರ ಬೆವರಿಳಿಸಿದೆ.

    ದಿನೇಶ್ ಕಾರ್ತಿಕ್ ಇಂಗ್ಲೆಂಡ್‍ನಲ್ಲಿ ನಡೆದ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ವೀಕ್ಷಕ ವಿವರಣೆಗಾರರಾಗಿದ್ದರು. ಆದಾದ ಬಳಿಕ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲೂ ಕಾಮೆಂಟರಿ ಮಾಡುತ್ತಿದ್ದರು. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಕಾರ್ತಿಕ್ ಕಾಮೆಂಟರಿ ಮಾಡುತ್ತಾ ಆಟಗಾರರು ಬ್ಯಾಟ್‍ಗಳನ್ನು ಬದಲಾಯಿಸಿಕೊಂಡು ಆಡುವುದು ಸಾಮಾನ್ಯ. ಕೆಲಬ್ಯಾಟ್ಸ್‌ಮ್ಯಾನ್ ಗಳು ತಮ್ಮ ಬ್ಯಾಟ್‍ನ್ನು ಇಷ್ಟ ಪಡುವುದಿಲ್ಲ. ಅವರು ಯಾವತ್ತು ಮತ್ತೊಬ್ಬರ ಬ್ಯಾಟನ್ನು ಇಷ್ಟ ಪಡುತ್ತಾರೆ. ಬ್ಯಾಟ್‍ಗಳು ಪಕ್ಕದ ಮನೆಯವನ ಹೆಂಡತಿಯಾಗಿ, ಯಾವತ್ತು ಸುಂದರವಾಗಿ ಕಾಣುತ್ತದೆ ಎಂದಿದ್ದರು. ಈ ಕಮೆಂಟ್ ಬಾರಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಸುದೀಪ್ ಸಿಡಿಪಿಯಲ್ಲಿ ರಾರಾಜಿಸುತ್ತಿದೆ ಮಾಹಿಯ ನಾನಾ ಅವತಾರ

    ಈ ನಡುವೆ ಕಾರ್ತಿಕ್ ಅವರ ಈ ಕಮೆಂಟ್ ಕೇಳಿಸಿಕೊಂಡ ಅವರ ಪತ್ನಿ ಮತ್ತು ತಾಯಿ ಅವರಿಗೆ ಬೈದಿದ್ದರಂತೆ ಹಾಗಾಗಿ ಕಾರ್ತಿಕ್ ಇಂಗ್ಲೆಂಡ್ ಮತ್ತು ಶ್ರೀಲಂಕಾ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಈ ಕಮೆಂಟ್ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಯಿಂದ ಉಂಟಾದ ವಿವಾದಕ್ಕೆ ತೆರೆ ಎಳೆದಿದ್ದಾರೆ.

  • ಐಪಿಎಲ್ 2020ರ ಆವೃತ್ತಿಗೆ ಮನೆಯಿಂದಲೇ ಕಾಮೆಂಟರಿ!

    ಐಪಿಎಲ್ 2020ರ ಆವೃತ್ತಿಗೆ ಮನೆಯಿಂದಲೇ ಕಾಮೆಂಟರಿ!

    ಮುಂಬೈ: ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್‍ನಲ್ಲಿ ಸಾಕಷ್ಟು ಬದಲಾವಣೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಆಟಗಾರರು ಚೆಂಡಿಗೆ ಎಂಜಲು ಉಜ್ಜುವುದನ್ನು ಐಸಿಸಿ ನಿಷೇಧ ಮಾಡಿತ್ತು. ಅಲ್ಲದೇ ಆಟಗಾರರು ಹ್ಯಾಂಡ್ ಶೇಕ್ ಮಾಡುವುದರಿಂದಲೂ ದೂರ ಉಳಿದಿದ್ದರು. ಸದ್ಯ ಐಪಿಎಲ್ ಟೂರ್ನಿಗೆ ಮನೆಯಿಂದಲೇ ಕಾಮೆಂಟರಿ ನೀಡುವ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಚಿಂತನೆ ನಡೆಸಿದೆ.

    ದುಬೈನಲ್ಲಿ ಸೆ.26ರಿಂದ ನ.08ರ ಅವಧಿಯಲ್ಲಿ ಐಪಿಎಲ್ ನಡೆಯುವ ಸೂಚನೆಗಳು ಲಭಿಸುತ್ತಿವೆ. 44 ದಿನಗಳ ಅವಧಿಯಲ್ಲಿ 60 ಪಂದ್ಯ ಆಯೋಜಿಸಲು ಸಿದ್ಧತೆ ನಡೆದಿದೆ. ಅಲ್ಲದೇ ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ತಮಿಳು, ಬೆಂಗಾಳಿ ಭಾಷೆಯಲ್ಲಿ ವರ್ಚುವಲ್ ಕಾಮೆಂಟರಿ ನೀಡಲಾಗುತ್ತಿದೆ. ಆದರೆ ಬಯೋಸೆಕ್ಯೂರ್ ವಾತಾವರಣದಲ್ಲಿ ಪಂದ್ಯ ನಡೆಯುವ ಸಾಧ್ಯತೆ ಇರುವುದಿಂದ ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಸಾಧ್ಯವಿದೆಯೇ ಎಂದು ಸ್ಟಾರ್ ಸ್ಪೋರ್ಟ್ಸ್ ಪರಿಶೀಲಿಸುತ್ತಿದೆ. ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕವಿವರಣೆ ನೀಡುವವರನ್ನು ಮನೆಯಿಂದಲೇ ಕಾಮೆಂಟರಿ ನೀಡುವಂತೆ ಮಾಡಲು ಚಿಂತನೆ ನಡೆಸಿದೆಯಂತೆ.

    ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ನಡೆದಿದ್ದ 3ಟಿಸಿ ಸಾಲಿಡಾರಿಟಿ ಕಪ್‍ಗೆ ಭಾರತದಿಂದಲೇ ಮೂವರು ಕಾಮೆಂಟಿ ನೀಡಿದ್ದರು. ಬರೋಡಾದಿಂದ ಇರ್ಫಾನ್ ಪಠಾಣ್, ಮುಂಬೈನಿಂದ ಸಂಜಯ್ ಮಂಜ್ರೇಕರ್, ಕೋಲ್ಕತ್ತಾದಿಂದ ದೀಪ್ ದಾಸ್ ಗುಪ್ತಾ ತಮ್ಮ ಮನೆಯಿಂದಲೇ ಕಾಮೆಂಟರಿ ನೀಡಿದ್ದರು. ಈ ವರ್ಚುವಲ್ ಕಾಮೆಂಟರಿ ಯಶಸ್ವಿಯಾದ ಕಾರಣ ಐಪಿಎಲ್ 2020ರ ಟೂರ್ನಿಗೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಸ್ಟಾರ್ ಸ್ಪೋರ್ಟ್ಸ್ ಚಿಂತನೆ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಇರ್ಫಾನ್ ಪಠಾಣ್, ಇಂಟರ್ ನೆಟ್ ವೇಗ ಮತ್ತು ತಾಂತ್ರಿಕ ಸಮಸ್ಯೆ ಎದುರಾದರೇ ಕಾಮೆಂಟ್ರಿಯಲ್ಲಿ ಸ್ಪಷ್ಟತೆ ಲಭಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.