Tag: Comedy Show

  • ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

    ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

    ಹಿಂದಿಯ ಪ್ರತಿಷ್ಠಿತ ಟಾಕ್ ಶೋ ‘ಕಪಿಲ್ ಶರ್ಮಾ ಶೋ’ ನಲ್ಲಿ ಕನ್ನಡದ ಹೆಸರಾಂತ ನಟ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ದಾರೆ. ಕಪಿಲ್ ಜೊತೆಗಿನ ಫೋಟೋವನ್ನು ಹಾಗೂ ಆ ಕಾರ್ಯಕ್ರಮಕ್ಕೆ ತಯಾರಿಯಾಗಿ ಕಾರು ಏರಿದ ವಿಡಿಯೋವನ್ನು ಗಣೇಶ್ ಹಂಚಿಕೊಂಡಿದ್ದಾರೆ. ಕಾಮಿಡಿ ಕಾರ್ಯಕ್ರಮದ ಮೂಲಕವೇ ಫೇಮಸ್ ಆಗಿರುವ ಗಣೇಶ್, ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಮನರಂಜನೆಗೆ ಯಾವುದೇ ಕೊರತೆ ಆಗದು ಎನ್ನುತ್ತಿದ್ದಾರೆ ಅಭಿಮಾನಿಗಳು.

    ಕಪಿಲ್ ಜೊತೆಗಿನ ಶೋನಲ್ಲಿ ಈಗಾಗಲೇ ಕನ್ನಡದ ಹೆಸರಾಂತ ನಟ ಸುದೀಪ್ ಎರಡು ಬಾರಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಎರಡು ಬಾರಿ ಕಾಣಿಸಿಕೊಂಡ ಮೊದಲ ಕನ್ನಡದ ನಟ ಎನ್ನುವ ಹೆಗ್ಗಳಿಕೆ ಸುದೀಪ್ ಅವರಿಗಿದೆ. ಸಲ್ಮಾನ್ ಖಾನ್ ಜೊತೆ ಒಂದು ಬಾರಿ ಸುದೀಪ್ ಕಾಣಿಸಿಕೊಂಡಿದ್ದರೆ, ಮತ್ತೊಂದು ಬಾರಿ ಸುನೀಲ್ ಶೆಟ್ಟಿ ಜೊತೆಯೂ ಅವರು ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ

    ಇದೀಗ ಗಣೇಶ್ ಕೂಡ ಆ ಶೋನಲ್ಲಿ ಪಾಲ್ಗೊಂಡಿದ್ದು, ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ನೀಡುವುದಾಗಿ ಅವರು ತಿಳಿಸಿದ್ದಾರೆ. ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ಅವರು ಭಾಗಿಯಾಗಲಿದ್ದಾರಾ ಅಥವಾ ಬೇರೆ ಯಾವುದಾದರೂ ಕಾರ್ಯಕ್ರಮದ ಸಲುವಾಗಿ ಅವರು ಅತಿಥಿಯಾಗಿ ಹೋಗಿದ್ದಾರಾ ಎನ್ನುವುದು ಗೊತ್ತಾಗಿಲ್ಲ. ಈ ವಿಷಯವನ್ನು ಅವರೇ ಸದ್ಯದಲ್ಲೇ ತಿಳಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೇಕಿದ್ರೆ ರಾಹುಲ್‌ ಗಾಂಧಿಯನ್ನು ಕಾಮಿಡಿ ಶೋಗೆ ಆಹ್ವಾನಿಸಿ: ಮಧ್ಯಪ್ರದೇಶ ಸಚಿವ ಲೇವಡಿ

    ಬೇಕಿದ್ರೆ ರಾಹುಲ್‌ ಗಾಂಧಿಯನ್ನು ಕಾಮಿಡಿ ಶೋಗೆ ಆಹ್ವಾನಿಸಿ: ಮಧ್ಯಪ್ರದೇಶ ಸಚಿವ ಲೇವಡಿ

    ಭೋಪಾಲ್: ಕಾಮಿಡಿಯನ್‌ ಕುಣಾಲ್‌ ಕಮ್ರಾ ಮತ್ತು ಮುನವ್ವರ್‌ ಫಾರೂಕಿ ಅವರನ್ನು ಸ್ಟ್ಯಾಂಡ್‌ ಅಪ್‌ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ವಾಗ್ದಾಳಿ ನಡೆದಿದ್ದಾರೆ.

    ದಿಗ್ವಿಜಯ್‌ ಸಿಂಗ್‌ ಅವರು ಬೇಕಿದ್ದರೆ ರಾಹುಲ್‌ ಗಾಂಧಿ ಅವರನ್ನು ಕಾಮಿಡಿ ಶೋಗೆ ಆಹ್ವಾನಿಸಲಿ ಎಂದು ಸಚಿವ ನರೋತ್ತಮ್‌ ಮಿಶ್ರಾ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ಕೆಲವರು ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ ಧರ್ಮದ ದೇವರುಗಳನ್ನು ಟೀಕಿಸಲು ಹೊರಟಿದ್ದಾರೆ. ಅಂತಹವರನ್ನು ಜೈಲಿಗೆ ಹಾಕುವುದು ಖಂಡಿತ. ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

    ಕುನಾಲ್‌ ಮತ್ತು ಮುನವ್ವರ್‌ ಅವರಿಂದ ಸ್ಟ್ಯಾಂಡ್‌ ಅಪ್‌ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಟ್ವೀಟ್‌ ಮಾಡಿ ತಿಳಿಸಿದ್ದರು. ಇದಕ್ಕೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್

    ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಸಚಿವ ಮಿಶ್ರಾ ಆಗ್ರಹಿಸಿದ್ದರು. ಪೊಲೀಸರು ನೋಟಿಸ್‌ ನೀಡಿದ ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದಕ್ಕೆ ಕಾಂಗ್ರೆಸ್‌ ಹಾಗೂ ಕಾಮಿಡಿಯನ್‌ಗಳು ವಿರೋಧಿಸಿದ್ದರು.

  • ಕಪಿಲ್ ಶರ್ಮಾ ಶೋಗೆ ಸಿಧು ರೀ ಎಂಟ್ರಿ!

    ಕಪಿಲ್ ಶರ್ಮಾ ಶೋಗೆ ಸಿಧು ರೀ ಎಂಟ್ರಿ!

    ಮುಂಬೈ: ಖಾಸಗಿ ವಾಹಿನಿ ಖ್ಯಾತ ಕಾಮಿಡಿ ಶೋನಿಂದ ಹೊರ ಉಳಿದಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಸುಳಿವು ನೀಡಿದ್ದಾರೆ.

    ಸುನಿಲ್ ಗ್ರೋವರ್ ಶೋನಿಂದ ಹೊರ ನಡೆದ ಬಳಿಕ ಕಾಮಿಡಿ ಶೋನಿಂದ ಬಹುತೇಕ ಕಲಾವಿದರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದರು. ಆದರೂ ಕಪಿಲ್ ಶರ್ಮಾ ತಮ್ಮ ಶೋ ನಡೆಸಿದ್ದರು. ನಾಲ್ಕೈದು ಸಂಚಿಕೆಗಳ ಬಳಿಕ ಕಲಾವಿದರ ಕೊರತೆಯಿಂದಾಗಿ ಶೋ ನಿಂತಿತ್ತು. ಕಪಿಲ್ ಶರ್ಮಾ ಮದುವೆ ಬಳಿಕ ಹೊಸ ಕಲಾವಿದರೊಂದಿಗೆ ಮತ್ತೊಮ್ಮೆ ಕಾಮಿಡಿ ಶೋ ಆರಂಭಿಸಿದ್ದರು. ನವಜೋತ್ ಸಿಂಗ್ ಸಿಧು ಸಹ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದರು. ಪುಲ್ವಾಮಾ ದಾಳಿ ಬಳಿಕ ನವಜೋತ್ ಸಿಂಗ್ ಸಿಧು ಹೇಳಿಕೆಗೆ ದೇಶದೆಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಸಿಧು ಅವರನ್ನು ಕೈ ಬಿಡಲಾಗಿತ್ತು.

    ನವಜೋತ್ ಸಿಂಗ್ ಸಿಧು ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಶೋ ಟಿಆರ್ ಪಿ ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಟಾಪ್ 5ರಲ್ಲಿ ಸ್ಥಾನ ಪಡೆಯುತ್ತಿದ್ದ ಕಪಿಲ್ ಶೋ ಕೆಲ ವಾರ ಟಿಆರ್‍ಪಿ ಕಳೆದುಕೊಂಡಿದೆ. ಸಿಧು ಬದಲಾಗಿ ಅರ್ಚನಾ ಪೂರ್ಣ ಸಿಂಗ್ ಕಾರ್ಯಕ್ರಮದಲ್ಲಿದ್ದಾರೆ. ಸಿಧು ರೀ ಎಂಟ್ರಿ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಕಪಿಲ್ ಶರ್ಮಾ ತಿಳಿಸಿದ್ದಾರೆ.

    ನವಜೋತ್ ಸಿಂಗ್ ಸಿಧು ಸದ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆ ಮುಗಿಯವರೆಗೂ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಮಾತನಾಡಿಲ್ಲ. ಚುನಾವಣೆಯ ಬಳಿಕ ನವಜೋತ್ ಸಿಂಗ್ ಸಿಧು ಕಾರ್ಯಕ್ರಮಕ್ಕೆ ಬರ ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಕಪಿಲ್ ಶರ್ಮಾ ಹೇಳಿದ್ದಾರೆ.