Tag: comedy kiladigalu

  • Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

    Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

    – ಸಿನಿಮಾ ಬಿಡುಗಡೆ ಮುನ್ನಾ ದಿನವೇ ನಟನ ಮೇಲೆ ಎಫ್‌ಐಆರ್‌ 

    ಕಾಮಿಡಿ ಕಿಲಾಡಿ ಸ್ಟಾರ್‌ ಹಾಗೂ ನಟ ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

    ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮೊದಲ ಸಿನಿಮಾ ರಿಲೀಸ್‌ಗೂ ಮುನ್ನವೇ 2ನೇ ಪ್ರಾಜೆಕ್ಟ್ ಬಗ್ಗೆ ಯಶ್ ತಾಯಿ ಗುಡ್ ನ್ಯೂಸ್

    ಮಡೆನೂರು ಮನು, ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಕಾಮಿಡಿ ಕಿಲಾಡಿಯ ಸಹ ಕಲಾವಿದೆಯಿಂದಲೇ ಅತ್ಯಾಚಾರ ಕೇಸ್ ದಾಖಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ನಟ ತಲೆಮರೆಸಿಕೊಂಡಿದ್ದಾನೆ. ಆರೋಪಿ ನಟ ಮಡೆನೂರು ಮನುಗಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

  • ಐವರು ನಿರೂಪಕರು, ಒಂದು ಕಾಮಿಡಿ ಶೋ

    ಐವರು ನಿರೂಪಕರು, ಒಂದು ಕಾಮಿಡಿ ಶೋ

    ರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು (Comedy Kiladigalu) ಈ ಬಾರಿ ಹೊಸ ಅವತಾರದಲ್ಲಿ ಪ್ರೇಕ್ಷಕರು ಮುಂದೆ ಬರಲಿದೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಹೆಸರಿನಲ್ಲಿ ವೀಕೆಂಡಲ್ಲಿ ನಗುವಿನ ಟಾನಿಕ್‌ ನೀಡೋಕೆ ಸಿದ್ದವಾಗಿರುವ ಈ ಶೋನಲ್ಲಿ ನಗುವಿನ ಮಹಾಯುದ್ದ ನಡೆಯೋದಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಈಗಾಲೇ ಸಾಕಷ್ಟು ಹಾಸ್ಯ ಕಲಾವಿದರನ್ನ ಕನ್ನಡ ಚಿತ್ರರಂಗಕ್ಕೆ ನೀಡಿರುವ ಜೀ಼ ಕನ್ನಡ ವಾಹಿನಿ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಮೂಲಕ ಮನೋರಂಜನೆಯನ್ನ ಮತ್ತಷ್ಟು ಹೆಚ್ಚು ಮಾಡವುದರ ಜೊತೆಗೆ ಮತ್ತಷ್ಟು ಹಾಸ್ಯ ಕಲಾವಿದರನ್ನ ಕರುನಾಡಿಗೆ ಪರಿಚಯಿಸುವ ಕೆಲಸ ಮಾಡಲಿದೆ.

    JAGGESH

    ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನರ ಮನಸ್ಸನ್ನ ಗೆದ್ದು, ಲಕ್ಷಾಂತರ ವೀಕ್ಷಕಣೆ ಕಂಡಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಪ್ರೋಮೋ, ಕಾರ್ಯಕ್ರಮದ ಬಗ್ಗೆ ಇರುವ ಕುತೂಹಲವನ್ನ ಹಿನ್ನಷ್ಟು ಹೆಚ್ಚು ಮಾಡಿದೆ. ತಮ್ಮ ಮಾತುಗಳ ಮೂಲಕ ಜನರನ್ನ ಮಂತ್ರ ಮುಗ್ದರನ್ನಾಗಿ ಮಾಡಿದ ಕರ್ನಾಟಕದ ಶ್ರೇಷ್ಟ ನಿರೂಪಕರುಗಳಾದ ಅನುಶ್ರೀ (Anushree), ಮಾಸ್ಟರ್‌ ಆನಂದ್‌ (Master Anand), ಅಕುಲ್‌, ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್‌ (Kuri Pratap) ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

    ಈ ಕಾರ್ಯಕ್ರಮ ಮುಖ್ಯ ಆರ್ಕಷಣೆಗಳಲ್ಲಿ ಒಂದಾಗಿರುವ ನವರಸ ನಾಯಕ ಜಗ್ಗೇಶ್ (Jaggesh) ಈಗಾಗಲೇ ಜನರ ತಲೆಯಲ್ಲಿ ಹೊಸ ಯೋಚನಯೊಂದನ್ನ ಪ್ರೋಮೋ ಮೂಲಕ ಬಿಟ್ಟಿದ್ದು, ಇಲ್ಲಿ ನಗಿಸ್ತಾರೆ ನಗಬಾರದು ಅಂತ ಹೇಳುವ ಮೂಲಕ ಕಾರ್ಯಕ್ರಮದ ಬಗ್ಗೆ ಜನರಿಗಿರುವ ಕುತೂಹಲವನ್ನ ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

    ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದ್ದು ಇಲ್ಲಿ ಟೀ ಟ್ವಂಟಿ ಮ್ಯಾಚುಗಳಲ್ಲಿ ಇರುವಂತೆ ತಂಡಗಳು, ಮಾಲೀಕರು, ಕ್ಯಾಪ್ಟನ್‌ಗಳು ಇದ್ದು ಕ್ರಿಕೆಟಿಗರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳುವಂತೆ ಇಲ್ಲೂ ಕೂಡ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನ ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯಲಿದ್ದು, ಇಲ್ಲಿ ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ.

    ಕಾರ್ಯಕ್ರಮದ ಬಗ್ಗೆ ಸಣ್ಣ ಸುಳಿವೊಂದನ್ನ ಬಿಟ್ಟುಕೊಟ್ಟಿರುವ ಜೀ಼ ಕನ್ನಡ ವಾಹಿನಿಯ ಪ್ರಕಾರ, ಈ ಶೋನಲ್ಲಿ ತಂಡವಾಗಿ ಪ್ರರ್ದಶನ ನೀಡುವ ಕಲಾವಿದರಿಗೆ ವೀಕೆಂಡಿನಲ್ಲಿ ಅವರ ಪ್ರರ್ದಶನ ಆಧಾರದ ಮೇಲೆ ಪ್ರತಿವಾರ ಒಂದು ಲಕ್ಷಮೌಲ್ಯದ ನಗದು ಬಹುಮಾನವನ್ನ ಗೆಲ್ಲುವ ಅವಕಾಶವನ್ನ ಈ ಕಾರ್ಯಕ್ರಮದಲ್ಲಿ ನೀಡಲಾಗಿದ್ದು ಇದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ವಿಶೇಷತೆಗಳಲ್ಲಿ ಒಂದಾಗಿದೆ.

     

    ಪಂಚ ಪಾಂಡವರಂತೆ ಇರುವ ಐದು ನಿರೂಪಕರು ಇಲ್ಲಿ ಹೊಸ ಜವಾಬ್ದಾರಿಯನ್ನ ಹೊತ್ತಿರುವ ಕಾರಣ  ಹೊಸ ನಿರೂಪಕರನ್ನ ಈ ಕಾರ್ಯಕ್ರಮದ ಮೂಲಕ ಜೀ಼ ಕನ್ನಡ ವಾಹಿನಿ ತೆರೆಗೆ ತರುವ ಪ್ರಯತ್ನ ಮಾಡಲಿದ್ದು, ಯಾರು ಆ ಹೊಸ ನಿರೂಪಕರು ಎಂಬ ಪ್ರಶ್ನಗೆ ಉತ್ತರವನ್ನ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.00ಕ್ಕೆ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ಮೊದಲ ಸಂಚಿಕೆ ನೀಡಲಿದೆ.

  • ಹೆಣ್ಣು ಮಗುವಿನ ತಾಯಿಯಾದ ‘ಕಾಮಿಡಿ ಕಿಲಾಡಿ’ ನಯನಾ

    ಹೆಣ್ಣು ಮಗುವಿನ ತಾಯಿಯಾದ ‘ಕಾಮಿಡಿ ಕಿಲಾಡಿ’ ನಯನಾ

    ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿಯ ನಟಿ ನಯನಾ (Nayana) ಹೆಣ್ಣು ಮಗುವಿಗೆ (Baby girl) ಜನ್ಮ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ನಯನಾ, ಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದ್ದಾರೆ.

    ತೆರೆ ಮೇಲೆ ನಮ್ಮ ಮುಂದೆ ಪಾತ್ರಗಳಾಗಿ ಕಾಣುವ ನಮ್ಮನ್ನು ನಗಿಸುವ ನಮಗೆ ಮನರಂಜನೆ ನೀಡುವ ನಮ್ಮನ್ನು ಸಂತೋಷ ಪಡಿಸುವ ಕಲಾವಿದರು ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಸಂತೋಷವನ್ನೇ ಕಂಡಿರೋದಿಲ್ಲ. ಅದರಲ್ಲೂ ಕಲಾವಿದನಾಗಿ ಸಿನಿಮಾಗಳಲ್ಲಿಯೋ ಅಥವಾ ಕಿರುತೆರೆಯಲ್ಲಿಯೋ ಒಂದು ಹಂತಕ್ಕೆ ಬಂದು ನಿಲ್ಲೋವಾಗ ನಿಜಕ್ಕೂ ಅದೆಷ್ಟೋ ಜನ ಅರ್ಧ ಪಯಣದಲ್ಲಿಯೇ ತಮ್ಮ ಜರ್ನಿಯನ್ನು ಮುಗಿಸಿ ಹೋಗಿಬಿಟ್ಟಿರುತ್ತಾರೆ. ಇನ್ನೂ ಕೆಲವರು ಎಲ್ಲಾ ಅಡೆತಡೆಗಳನ್ನು ದಾಟಿ ಯಶಸ್ಸನ್ನು ಕಾಣುತ್ತಾರೆ. ಆ ಸಾಲಿಗೆ ನಟಿ ನಯನಾ ಸೇರುತ್ತಾರೆ.

    ಹುಬ್ಬಳ್ಳಿಯ (Hubli) ಸಾಮಾನ್ಯ ಹುಡುಗಿ ನಯನಾ ಅವರು ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಎಂಟ್ರಿ ಕೊಟ್ಟು ತಾವು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂದು ತೋರಿಸಿಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ರು. ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ತಾನು ಸೈ ಅನ್ನೋದನ್ನ ಪ್ರೂವ್ ಮಾಡಿದ್ರು.

     

    ಕಳೆದ ಮೂರು ವರ್ಷಗಳ ಹಿಂದೆ ಶರತ್ (Sharath) ಎಂಬುವವರ ಜೊತೆ ನಯನಾ ಸರಳವಾಗಿ ಮದುವೆಯಾದರು. ಈಗ ಮೊದಲ ಮಗುವಿನ ಬರಮಾಡಿಕೊಂಡಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಈ ಹಿಂದೆ ಸಿಹಿ ಕಹಿ ಚಂದ್ರು ಅವರ ನಿರೂಪಣೆಯ ‘ಬೊಂಬಾಟ್ ಭೋಜನ’ ಕಾರ್ಯಕ್ರಮಕ್ಕೆ ನಟಿ ಎಂಟ್ರಿ ಕೊಟ್ಟಿದ್ದರು. ತಾಯಿಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ನಟಿಯಗೆ ಶುಭಹಾರೈಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ

    ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ

    ಪುನೀತ್ ರಾಜ್ ಕುಮಾರ್ ನಿಧನಾ ನಂತರ ಅವರ ಸಾವಿರಾರು ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ನೇತ್ರದಾನದಂತಹ ಪವಿತ್ರ ಕಾರ್ಯ ಮುಂದುವರೆಯುತ್ತಲೇ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ಆದರ್ಶವಾಗಿ ತಗೆದುಕೊಂಡಿದ್ದ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಜೋಡಿಯೊಂದು ಸೀಮಂತ ಕಾರ್ಯಕ್ರಮದಲ್ಲೇ ನೇತ್ರದಾನ ಮಾಡಿದೆ. ಇದನ್ನೂ ಓದಿ : ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?


    ಕಾಮಿಡಿ ಕಿಲಾಡಿಗಳು ಅಂದಾಕ್ಷಣ ಥಟ್ಟನೆ ನೆನಪಾಗುವ ಜೋಡಿ ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರದ್ದು. ಕಾಮಿಡಿ ಕಿಲಾಡಿಗಳು ಶೋಗೆ ಸ್ಪರ್ಧೆಯಾಗಿ ಬಂದವರು, ನಂತರ ಸ್ನೇಹಿತರಾದರು. ಆನಂತರ ಪ್ರೇಮಿಗಳಾದರು. ಪ್ರೇಮವೇ ಸಪ್ತಪದಿ ತುಳಿಯುವುದಕ್ಕೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ದಿವ್ಯಶ್ರೀ ಅವರ ಸೀಮಂತ ಕಾರ್ಯಕ್ರಮವಾಯಿತು. ಅಂದು ಈ ದಂಪತಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನೇತ್ರದಾನ ಮಾಡುವ ಮೂಲಕ ನವ ಜೋಡಿಗಳಿಗೆ ಮಾದರಿಯಾದರು. ಇದನ್ನೂ ಓದಿ : ಶಬ್ದ ಚಿತ್ರದ ವಿಭಿನ್ನ ಪಾತ್ರದಲ್ಲಿ ಮೇಘನಾ ರಾಜ್ : ನಿರ್ದೇಶಕ ಕಾಂತ ಹೇಳಿದ್ದೇನು?


    ಮೊದಲಿನಿಂದಲೂ ನನಗೆ ಪುನೀತ್ ರಾಜ್ ಕುಮಾರ್ ಅಂದರೆ ಇಷ್ಟ. ಅವರ ಸಿನಿಮಾಗಳನ್ನೇ ನೋಡಿಕೊಂಡು ಬೆಳೆದವರು ನಾವು. ಅಂತಹ ಮಹಾನ್ ನಟರೇ ಕಣ್ಣುದಾನ ಮಾಡಿದ್ದಾರೆ. ಅವರಿಂದ ಸ್ಫೂರ್ತಿಗೊಂಡು ನಾವು ಕೂಡ ಈ ಕೆಲಸಕ್ಕೆ ಮುಂದಾದೆವು ಅನ್ನುತ್ತಾರೆ ಕಿಲಾಡಿ ಜೋಡಿ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ


    ತಾವು ಮಾತ್ರ ನೇತ್ರದಾನ ಮಾಡಿಲ್ಲ, ಜತೆಗೆ ಇದೇ ವೇಳೆ ನೇತ್ರದಾನ ಶಿಬಿರವನ್ನು ಕೂಡ ಅವರು ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಡಾ.ರಾಜ್ ಐ ಬ್ಯಾಂಕಿನ ಸಿಬ್ಬಂದಿ ಕೂಡ ಹಾಜರಿತ್ತು.