Tag: comedy khiladis

  • `ಮುತ್ತರಸ’ನಾದ ಮಡೆನೂರು ಮನು

    `ಮುತ್ತರಸ’ನಾದ ಮಡೆನೂರು ಮನು

    ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಮಡೆನೂರು ಮನು, ʻಕುಲದಲ್ಲಿ ಕೀಳ್ಯಾವುದೊʼ ಚಿತ್ರದ ಮೂಲಕ ನಾಯಕನಾದರು. ಪ್ರಸ್ತುತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮನು (Madenur Manu), ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

    ಚಿತ್ರಕ್ಕೆ ʻಮುತ್ತರಸʼ (Muttarasa) ಎಂದು ಹೆಸರಿಡಲಾಗಿದೆ. ಜೆ.ಕೆ ಮೂವೀಸ್ ಲಾಂಛನದಲ್ಲಿ ಕೆ.ಎಂ ನಟರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ನಟ ವಸಿಷ್ಠ ಸಿಂಹ (Vasishta Simha), ಹಿರಿಯ ನಟರಾದ ಎಂ.ಎಸ್.ಉಮೇಶ್, ಕರಿ ಸುಬ್ಬು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ, ಮಡೆನೂರ್ ಮನು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರು ಶೀರ್ಷಿಕೆ ಅನಾವರಣ ಮಾಡಿದರು. ನಂತರ ಸಿನಿಮಾ ತಂಡದವರು ಹಾಗೂ ಗಣ್ಯರು ಮಾತನಾಡಿದರು.

    ಕೆಲವು ದಿನಗಳ ಹಿಂದೆ ನನ್ಮ ಜೀವನದಲ್ಲಿ ಆದ ಕಹಿ ಘಟನೆಗಳನೆಲ್ಲಾ ಮರೆತಿದ್ದೇನೆ. ಸದ್ಯಕ್ಕೆ ಯಾವುದೇ ಸಮಸ್ಯೆಗಳು ಇಲ್ಲ. ಆ ಸಮಯದಲ್ಲಿ ನನ್ನ ಜೊತೆಗೆ ನಿಂತವರಿಗೆ ನಾನು ಚಿರಋಣಿ. ಇಂದು ನನ್ನ ಹೊಸ ಸಿನಮಾದ ಶೀರ್ಷಿಕೆ ಬಿಡುಗಡೆಯಾಗಿದೆ. ಅನಾವರಣ ಮಾಡಿಕೊಟ್ಟ ವಸಿಷ್ಠ ಸಿಂಹ ಅವರು ಸೇರಿದಂತೆ ಪ್ರತಿಯೊಬ್ಬ ಗಣ್ಯರಿಗೆ ಧನ್ಯವಾದ. ನಾನು ವಸಿಷ್ಠ ಸಿಂಹ ಅವರೊಟ್ಟಿಗೆ ʻತಲ್ವಾರ್ ಪೇಟೆʼ ಚಿತ್ರದಲ್ಲಿ ನಟಿಸಿದ್ದೇನೆ. ಇನ್ನೂ ʻಮುತ್ತರಸʼ ಚಿತ್ರದ ಶೀರ್ಷಿಕೆ ಕೊಟ್ಟದ್ದು ನಿರ್ದೇಶಕ ರಾಮ್ ನಾರಾಯಣ್ ಅವರು. ಮುಂದಿನ ತಿಂಗಳಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ನಿರ್ದೇಶಕರು ಯಾರು? ತಾರಾಬಳಗದಲ್ಲಿ ಯಾರಿದ್ದಾರೆ? ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಈ ಸಂದರ್ಭದಲ್ಲಿ ಎನ್‌.ಆರ್ ರಮೇಶ್, ಶಿವಕುಮಾರ್ ನಾಯಕ್, ಯೋಗರಾಜ್ ಭಟ್ ಹಾಗೂ ನನ್ನ ಹಿಂದಿನ ಚಿತ್ರದ ನಿರ್ಮಾಪಕರಾದ ಸಂತೋಷ್ ಕುಮಾರ್, ವಿದ್ಯಾ ಮತ್ತು ನಿರ್ದೇಶಕ ರಾಮ್ ನಾರಾಯಣ್ ಅವರನ್ನು ನೆನೆಯುತ್ತೇನೆ ಎಂದು ತಿಳಿಸಿದ ನಟ ಮಡೆನೂರ್ ಮನು, ಈ ವರ್ಷದ ಕೊನೆಗೆ ನಾನು ನಟಿಸಿರುವ ʻವಿಚಾರಣೆʼ ಚಿತ್ರ ಸಹ ತೆರೆಗೆ ಬರಲಿದೆ ಎಂದು ತಿಳಿಸಿದರು.

    ಮನು ನನ್ನ ಹಿಂದಿನ ನಿರ್ಮಾಣದ ಚಿತ್ರದಲ್ಲೂ ನಟಿಸಿದ್ದರು. ಈಗ ನನ್ನ, ಅವರ ಕಾಂಬಿನೇಷನ್ ನಲ್ಲಿ ಎರಡನೇ ಚಿತ್ರ ಮೂಡಿ ಬರುತ್ತಿದೆ. ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದು ʻಮುತ್ತರಸʼ ಚಿತ್ರದ ನಿರ್ಮಾಪಕ ನಟರಾಜ್ ತಿಳಿಸಿದರು.

  • ‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

    ‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

    ನ್ನಡದ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳ (Comedy Khiladigalu) ಮೂಲಕ ಫೇಮಸ್ ಆಗಿರುವ ಹಾಗೂ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರ ಮಾಡಿರುವ ನಯನಾ ವಿರುದ್ಧ ಬೆಂಗಳೂರಿನ ಆರ್.ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಸ್ಯ ಕಲಾವಿದೆ ನಯನಾ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಮತ್ತು ನಿಂದನೆ ಮಾಡಿದ್ದಾರೆ ಎಂದು ಸೋಮಶೇಖರ್ ಎನ್ನುವವರು ದೂರು ನೀಡಿದ್ದಾರೆ.

    ಹಣದ ಹಂಚಿಕೆ ವಿಚಾರಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಆರೋಪ ಮಾಡಿದ್ದು, ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನವಾಗಿ 3 ಲಕ್ಷ ರೂಪಾಯಿ ಹಣ ಪಡೆದಿತ್ತು. ಈ ತಂಡದಲ್ಲಿ ಸೋಮಶೇಖರ್ ಕೂಡ ಇದ್ದ. ಈ ಹಣದಲ್ಲಿ ಸರಿಯಾದ ಪಾಲು ಆಗಿಲ್ಲ ಎನ್ನುವ ಕಾರಣಕ್ಕಾಗಿ ಸೋಮಶೇಖರ್ ಮತ್ತು ನಯನಾ ಮಧ್ಯ ಮನಸ್ತಾಪ ಆಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ನಯನಾರ ಧ್ವನಿ ಎಂದು ಹೇಳಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸೋಮಶೇಖರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ. ನಾನು ಸ್ಟೇಶನ್ ನಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಅವಾಜ್ ಹಾಕುವಂತಹ ಮಾತುಗಳು ಇವೆ.

    ನಯನಾ ಆರೋಪದಲ್ಲಿ ಹುರುಳಿಲ್ಲ. ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ. ಚಾನಲ್ ಹೇಳಿದಂತೆ ನಾನು ಮಾಡಿದ್ದೇನೆ. ಆದರೆ, ನಯನಾ ಹಣದ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ ಸೋಮಶೇಖರ್. ಸದ್ಯ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

    ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

    ಬೆಂಗಳೂರು: ರಘು ಹಾಸನ್ ನಿರ್ದೇಶನ ಮಾಡಿರುವ ನಾನು ಮತ್ತು ಗುಂಡ ಅಪರೂಪದ್ದೊಂದು ಕಥೆಯ ಸುಳಿವಿನೊಂದಿಗೆ, ಹೊಸ ಅಲೆಯ ಚಿತ್ರವಾಗಿ ಪ್ರೇಕ್ಷಕರೆಲ್ಲರನ್ನು ಆಕರ್ಷಿಸಿಕೊಂಡಿದೆ. ಈಗಾಗಲೇ ಎರಡೆರಡು ಟೀಸರ್‍ಗಳ ಮೂಲಕ ಈ ಸಿನಿಮಾ ಮನುಷ್ಯ ಮತ್ತು ಶ್ವಾನದ ನಡುವಲ್ಲಿರೋ ಮೂಕಪ್ರೇಮ ಎಲ್ಲರ ಮನಸುಗಳಿಗೂ ದಾಟಿ ನಾಟಿಕೊಂಡಿದೆ. ನಾಯಿ ಅಂದರೆ ಅದೊಂದು ಸಾಕು ಪ್ರಾಣಿ ಎಂಬುದರಾಚೆಗೆ ಅದನ್ನು ಹಚ್ಚಿಕೊಂಡ ಜೀವಗಳ ಭಾವುಕತೆ ಹರಡಿಕೊಂಡಿದೆ. ಅಂಥಾದ್ದೇ ಮನಮಿಡಿಯುವ ಅಪರೂಪದ ಕಥೆ ಈ ಚಿತ್ರದಲ್ಲಿದೆ.

    ಇದೀಗ ಶ್ವಾನ ಮತ್ತು ಮನುಷ್ಯರ ಬಾಂಧವ್ಯದ ನೈಜವಾದ ಘಟನೆಗಳನ್ನು ಬಿಡಿ ಬಿಡಿಯಾಗಿ ಜನರ ಮುಂದಿಡಲು ತಯಾರಾಗಿದೆ. ನಾನು ಮತ್ತು ಗುಂಡ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರದಲ್ಲಿ ಚಿತ್ರತಂಡಕ್ಕೆ ಬರುತ್ತಿರೋ ಪ್ರತಿಕ್ರಿಯೆಗಳಿಂದ ಇದೀಗ ಹೊಸ ಆಲೋಚನೆಯೊಂದನ್ನು ಮಾಡಲಾಗಿದೆ. ಶ್ವಾನಗಳೊಂದಿಗಿನ ನೈಜವಾದ ಅಪರೂಪದ ಬಾಂಧವ್ಯದ ಘಟನಾವಳಿಗಳು ನಿಮ್ಮ ಬದುಕಲ್ಲಿಯೂ ಇದ್ದರೆ, ಅದನ್ನು ವೀಡಿಯೋ ತುಣುಕುಗಳ ಮೂಲಕ ಚಿತ್ರತಂಡಕ್ಕೆ ಕಳುಹಿಸಬಹುದು. ಅದರಲ್ಲಿ ಕಾಡುವಂಥವುಗಳನ್ನು ಆಯ್ಕೆ ಮಾಡಿ ಪ್ರತೀವಾರ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರತಂಡವೇ ಪ್ರಚುರಪಡಿಸಲಿವೆ.

    ನಾನು ಮತ್ತು ಗುಂಡ ಎಂಬುದೇ ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆ ಹೊಂದಿರೋ ಚಿತ್ರವಾದ್ದರಿಂದ, ಅಂಥಾ ಬಾಂಧವ್ಯದ ನೈಜ ಘಟನಾವಳಿಗಳ ಮೂಲಕವೇ ಈ ಚಿತ್ರದ ಪ್ರಚಾರ ಕಾರ್ಯ ನಡೆಸುವ ವಿನೂತನ ಆಲೋಚನೆ ನಿರ್ದೇಶಕ ರಘು ಹಾಸನ್ ಅವರದ್ದು. ನಿಮ್ಮ ಶ್ವಾನ ಬಾಂಧವ್ಯದ ಅಪರೂಪದ ವೀಡಿಯೋ ತುಣುಕುಗಳನ್ನು ಕಳಿಸಿದರೆ, ಅದು ಅಪರೂಪದ್ದಾಗಿದ್ದರೆ ಚಿತ್ರತಂಡವೇ ಬಂದು ಅದನ್ನು ಚಿತ್ರೀಕರಿಸಿಕೊಳ್ಳುತ್ತದೆ. ಈಗಾಗಲೇ ಒಂದಷ್ಟು ಇಂಥಾ ಘಟನಾವಳಿಗಳು ಚಿತ್ರತಂಡ ತಲುಪಿದೆ. ಅದರಲ್ಲಿ ಒಂದಷ್ಟು ನಿಜಕ್ಕೂ ಕಾಡುವಂತಿವೆಯಂತೆ.

    ಯಾರೇ ಈ ಶ್ವಾನಪ್ರೇಮದ ವೀಡಿಯೋ ಕಳಿಸೋದಾದರೂ ಅದು ಕಾಡುವಂತಿರಲಿ ಅನ್ನೋದು ಚಿತ್ರತಂಡದ ಮನವಿ. ರಘು ಹಾಸನ್ ನಾನು ಮತ್ತು ಗುಂಡ ಚಿತ್ರದ ಮೂಲಕ ಭಾವುಕವಾದ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಆದರೆ ಈಗ ಅದಕ್ಕೆ ಬರುತ್ತಿರೋ ಪ್ರತಿಕ್ರಿಯೆ, ಕೆಲವರು ತಮ್ಮ ಶ್ವಾನ ಪ್ರೇಮದ ಬಗ್ಗೆ ಹಂಚಿಕೊಳ್ಳುತ್ತಿರೋ ಅಭಿಪ್ರಾಯಗಳನ್ನೆಲ್ಲ ನೋಡಿದರೆ ಮನುಷ್ಯ ಮತ್ತು ಶ್ವಾನ ಬಾಂಧವ್ಯ ತಮ್ಮ ಎಣಿಕೆಯನ್ನೂ ಮೀರಿದ್ದೆಂಬ ವಿಚಾರವೂ ನಿರ್ದೇಶಕರಿಗೆ ಮನವರಿಕೆಯಾಗಿದೆಯಂತೆ. ಇಂಥಾ ಕಾಡುವ ಕಥೆಗಳಿದ್ದರೆ ಅದನ್ನು ಚಿತ್ರತಂಡಕ್ಕೆ ಕಳಿಸಿಕೊಡಬಹುದು. ಅದನ್ನು ಮೂರು ನಿಮಿಷಗಳ ವೀಡಿಯೋ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದೆ.

  • ನಾನು ಮತ್ತು ಗುಂಡ: ತೆರೆಗಾಣೋ ಹಾದಿಯಲ್ಲೇ ಎರಡನೇ ಟೀಸರ್ ಅನಾವರಣ!

    ನಾನು ಮತ್ತು ಗುಂಡ: ತೆರೆಗಾಣೋ ಹಾದಿಯಲ್ಲೇ ಎರಡನೇ ಟೀಸರ್ ಅನಾವರಣ!

    ಬೆಂಗಳೂರು : ಈಗ ಕನ್ನಡ ಚಿತ್ರರಂಗದಲ್ಲಿ ಸಿದ್ಧಸೂತ್ರಗಳ ಚಿತ್ರಗಳ ಭರಾಟೆಯ ನಡುವೆಯೂ ಹೊಸಾ ಅಲೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿಯೇ ಇಂಥಾ ವಿಶೇಷವಾದ ಕಥೆ ಹೇಳೋ ಕಲೆಗಾರಿಕೆಯೂ ಆಗಾಗ ಪ್ರದರ್ಶನವಾಗುತ್ತಲೇ ಬಂದಿದೆ. ಇದೀಗ ಅದೇ ರೀತಿಯ ವಿಶೇಷತೆ ಹೊಂದಿರೋ ಕಥೆ, ಪ್ರಯೋಗಾತ್ಮಕ ಅಂಶಗಳೊಂದಿಗೆ ಮೂಡಿ ಬಂದಿರೋ ಚಿತ್ರ ನಾನು ಮತ್ತು ಗುಂಡ. ಈ ಹಿಂದೆ ಮೊದಲ ಟೀಸರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ.

    ಇದು ಆಟೋ ಶಂಕ್ರ ಮತ್ತು ಮುದ್ದಾದ ನಾಯಿಯ ಸುತ್ತ ಸುತ್ತೋ ಭಾವನಾತ್ಮಕ ಕಥೆಯ ಚಿತ್ರ. ಸಿನಿಮಾ ಅಂದಾಕ್ಷಣ ಸಿದ್ಧ ಸೂತ್ರದ ಕಲ್ಪನೆ ಸುಳಿದಾಡೋ ಹೊತ್ತಿನಲ್ಲಿಯೇ ನಾನು ಮತ್ತು ಗುಂಡ ಟೀಸರ್ ಬೇರೆಯದ್ದೇ ಹೊಳಹು ನೀಡುವ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಅನಾವರಣಗೊಂಡಿದೆ. ಮೊದಲ ಟೀಸರ್‍ನಲ್ಲಿಯೇ ಇದು ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಕಥನದ ಚಿತ್ರವೆಂಬುದು ಜಾಹೀರಾಗಿತ್ತು. ಈ ಎರಡನೇ ಟೀಸರ್‍ನಲ್ಲಿ ಅದು ಮತ್ತಷ್ಟು ತೀವ್ರವಾಗಿ ಅನಾವರಣಗೊಂಡು ಕಥೆಯ ಒಂದಷ್ಟು ಬೇರೆ ಆಯಾಮಗಳನ್ನೂ ಕಾಣಿಸಿದೆ.

    ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ನಟಿಸಿದ್ದಾರೆ. ಅವರು ಮತ್ತು ಮುದ್ದಾದ ನಾಯಿ ಈ ಸಿನಿಮಾ ಕೇಂದ್ರಬಿಂದುಗಳು. ಸಂಯುಕ್ತಾ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೂ ಒಂದಷ್ಟು ಪಾತ್ರಗಳು ಶಿವರಾಜ್‍ಗೆ ಸಾಥ್ ಕೊಟ್ಟಿವೆ. ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆದ ನಂತರ ಶಿವರಾಜ್ ಬಹು ಬೇಡಿಕೆಯ ಕಾಮಿಡಿ ನಟನಾಗಿ ಬ್ಯುಸಿಯಾಗಿದ್ದಾರೆ. ಆದರೆ ಆ ಶೋನ ಮುಕ್ತಾಯದ ಕ್ಷಣಗಳಲ್ಲಿಯೇ ಶುರುವಾಗಿದ್ದ ಚಿತ್ರ ನಾನು ಮತ್ತು ಗುಂಡ. ಇನ್ನೇನು ಶೀಘ್ರದಲ್ಲಿಯೇ ತೆರೆಗಾಣಲಿರೋ ಈ ಚಿತ್ರವೀಗ ಎರಡನೇ ಟೀಸರ್ ಮೂಲಕ ಮತ್ತಷ್ಟು ಜನರನ್ನು ತಲುಪಿಕೊಂಡಿದೆ.