Tag: Comedy Khiladigalu

  • ಜೀ ಕನ್ನಡ ಕಾಮಿಡಿ ಕಿಲಾಡಿಗಳು: ಹೊಸ ರೂಪದೊಂದಿಗೆ ರೆಡಿ

    ಜೀ ಕನ್ನಡ ಕಾಮಿಡಿ ಕಿಲಾಡಿಗಳು: ಹೊಸ ರೂಪದೊಂದಿಗೆ ರೆಡಿ

    ನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ (Zee Kannada) ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ (Comedy Khiladigalu) ಕಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ, ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಾಹಿನಿ ಸಿದ್ಧವಾಗಿದೆ. ಇನ್ನು ಎಲ್ಲರೂ ಕಾತುರತೆಯಿಂದ ಕಾಯುತ್ತಿರುವ ಕಾಮಿಡಿ ಕಿಲಾಡಿಗಳು ಅಕ್ಟೋಬರ್ 25 ರಂದು ರಾತ್ರಿ 9 ಗಂಟೆಗೆ ಶುರುವಾಗಲಿದ್ದು, ಪ್ರತಿ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

    ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಅವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನು ಈ ನಗುವಿನ ಪಯಣದ ಸಾರಥಿಗಳಾಗಿ ಅತ್ಯುತ್ತಮ ಸಿನೆಮಾಗಳನ್ನು ನೀಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಕಾಮಿಡಿ ಕಿಂಗ್ ಜಗ್ಗೇಶ್ ಮತ್ತು ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್, ಎಲ್ಲರ ಅಚ್ಚುಮೆಚ್ಚಿನ ಹಿರಿಯ ನಟಿ ತಾರಾ ಅನುರಾಧ ಇರಲಿದ್ದಾರೆ. ಒಟ್ಟಾರೆಯಾಗಿ ಇವೆರಲ್ಲರೂ ನಿಮ್ಮ ನಗುವನ್ನು ಡಬಲ್ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನೂ ಓದಿ: ಮೂರೇ ವಾರಕ್ಕೆ ಕಾಂತಾರ ಚಾಪ್ಟರ್-1 ಹೊಸ ಮೈಲಿಗಲ್ಲು

    ಸತತ 19 ವರ್ಷಗಳಿಂದ ಜೀ ಕನ್ನಡ ವಾಹಿನಿ ಕನ್ನಡಿಗರನ್ನು ಮನರಂಜಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಈ ಪರಂಪರೆಯನ್ನು ಮುಂದುವರೆಸುತ್ತ ಜೀ ಕನ್ನಡ ವಾಹಿನಿ ಪ್ರೇಕ್ಷಕರನ್ನು ನಕ್ಕು ನಗಿಸಲು ‘ಕಾಮಿಡಿ ಕಿಲಾಡಿಗಳು’ ಹೊಚ್ಚ ಹೊಸ ಸೀಸನ್ ಅನ್ನು ತರಲು ಸಜ್ಜಾಗಿದೆ. ಈ ಶೋನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ನವಹಾಸ್ಯನಟರು ಪಾಲ್ಗೊಳ್ಳಲಿದ್ದು, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದ್ದಾರೆ. ಹಾಸ್ಯಮಯ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನೂತನ ಸ್ಕಿಟ್ ಗಳನ್ನೂ ಈ ಪ್ರತಿಭೆಗಳು ಪ್ರದರ್ಶಿಸಲಿದ್ದಾರೆ.

    ಈ ಸೀಸನ್ ನ ಕಾಮಿಡಿ ಕಿಲಾಡಿಗಳು ಕ್ರಿಯೇಟಿವಿಟಿ ಮತ್ತು ಹೊಸತನದ ಪ್ರತಿರೂಪವಾಗಿದೆ. ಇನ್ನು ಪ್ರತಿಸಂಚಿಕೆಯಲ್ಲೂ ಹಾಸ್ಯ, ತರ್ಲೆ, ನಗುವಿನ ಚಟಾಕಿ ಇರಲಿದೆ. ಹೊಸಪ್ರತಿಭೆಗಳು ಕಾಮಿಡಿ ಸ್ಕಿಟ್ ಗಳ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 25 ರಿಂದ, ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರವಾಗಲಿದೆ.

  • ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ

    ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ

    ಹಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಜೈಲುಪಾಲಾಗಿ ಬಿಡುಗಡೆಗೊಂಡಿದ್ದ ಮಡೆನೂರು ಮನು (Madenur Manu) ಜೊತೆ ಇದೀಗ ಸಂತ್ರಸ್ತೆ ಕಾಂಪ್ರಮೈಸ್ ಮಾಡಿಕೊಂಡಿದ್ದಾರೆ.

    ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸ್ (Rape Case) ಹಾಕಿದ್ದ ಕಾಮಿಡಿ ಕಿಲಾಡಿಗಳು (Comedy Khiladigalu) ಖ್ಯಾತಿಯ ನಟಿ ಇದೀಗ ಕೇಸನ್ನು ಹಿಂಪಡೆದಿದ್ದಾರೆ.

    ಮಡೆನೂರು ಮನು ವಿರುದ್ಧ ಸಂತ್ರಸ್ತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ (Annapoorneshwari Nagar Police Station) ದೂರು ನೀಡಿದ್ದರು. ನವೆಂಬರ್ 2022ರಿಂದ ಮೇ 2025ರವರೆಗೆ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ. ಮದುವೆ ಹೆಸರಿನಲ್ಲಿ ಅತ್ಯಾಚಾರ ಎಸಗಿ ದೈಹಿಕ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಡೆನೂರು ಮನುವನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯ ಮಡೆನೂರು ಮನುವನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

    ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ, ಅತ್ಯಾಚಾರ ಕೇಸ್‌ನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದು ಮನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

  • ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಕಾರವಾರ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ಖಿನ್ನತೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗದ ಯುವಕ, ಈ ಹಿಂದೆ ಝೀ ಕನ್ನಡದ ಕಾಮಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಮೂಲಕ ರಾಜ್ಯಕ್ಕೆ ಪರಿಚಯವಾಗಿದ್ದರು.

    ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದ ಈತ ಉತ್ತಮ ಯೋಗಪಟು ಕೂಡ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಂತರ ಧಾರವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತಿದ್ದ ಇವರಿಗೆ ಅವಕಾಶಗಳು ಹೆಚ್ಚು ಸಿಗಲಿಲ್ಲ. ಇದರಿಂದಾಗಿ ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ರಿಯಾಲಿಟಿ ಶೋನಿಂದ ಪ್ರಸಿದ್ಧರಾಗಿದ್ದ ಇವರು ಸಾಕಷ್ಟು ಅಭಿಮಾನಿಗಳನ್ನ ಸಹ ಹೊಂದಿದ್ದರು. ಆದರೆ, ಅವಕಾಶ ಸಿಗದೇ ಕೂಲಿ ಕೆಲಸ ಮಾಡುತಿದ್ದರು.

    ಖಿನ್ನತೆಗೊಳಗಾಗಿ ಇವರು, ‘ಕಳೆದ ಮೂರು ತಿಂಗಳ ಹಿಂದೆ ನನ್ನ ಬಗ್ಗೆ ಜನ ಆಡಿಕೊಳ್ಳುತ್ತಾರೆ, ಟಾರ್ಗೆಟ್ ಮಾಡುತ್ತಾರೆ, ಜೀವನ ಬೇಡ ಅನಿಸುತ್ತಿದೆ’ ಎಂದು ಮಾನಸಿಕ ಹೇಳಿಕೊಂಡಿದ್ದರು. ಕ್ರಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಪತ್ನಿ ಜೊತೆ ಮನೆಯೊಂದಕ್ಕೆ ಕೆಲಸಕ್ಕಾಗಿ ತೆರಳಿದಾಗ ಅರಣ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ

    ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ

    ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ಮಡೆನೂರು ಮನುನನ್ನ (Madenur Manu) ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಸನದಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬಳಿಕ ಪ್ರಾಥಮಿಕವಾಗಿ ನಡೆದ ವಿಚಾರಣೆಯಲ್ಲಿ ಹಲವು ರಹಸ್ಯೆಗಳನ್ನು ಮನು ಬಾಯ್ಬಿಟ್ಟಿದ್ದಾರೆ. ಈ ಕುರಿತ ಎಕ್ಸ್‌ಕ್ಲೂಸಿವ್‌ ಮಾಹಿತಿಗಳು ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    ಅದು ಅತ್ಯಾಚಾರ ಅಲ್ಲ, ಒಪ್ಪಂದದ ಸಂಪರ್ಕ. ನಟಿಯನ್ನು ಮದುವೆ ಆಗದ್ದೇನೆ. ಮೂವರ ಮಾತು ಕೇಳಿ, ಆಕೆ ದೂರು ನೀಡಿದ್ದಾಳೆ. ಇಬ್ಬರೂ ಹೀರೋ, ಒಬ್ಬಳು ಲೇಡಿ ಡಾನ್ ಮಾತು ಕೇಳಿ ದೂರು ದಾಖಲಿಸಿದ್ದಾಳೆ. ಲೇಡಿ ಡಾನ್ ನಟಿಗೆ ಆತ್ಮಿಯಳು. ಕಾಮಿಡಿ ಕಿಲಾಡಿಗಳು ಶೋ ನಟಿ ಅಂತ ಮಾಹಿತಿ ನೀಡಿದ್ದಾರೆ ಮನು. ಇದನ್ನೂ ಓದಿ: ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

    ಸಿನಿಮಾ ಹಾಳು ಮಾಡಲೆಂದೇ ಆ ಮೂವರು ಪ್ಲ್ಯಾನ್ ಮಾಡಿದ್ದಾರೆ. ನಾನು ನಟಿಗೆ ಹಿಂಸೆ ನೀಡಿಲ್ಲ. ಆಕೆಯೇ ನನಗೆ ತೊಂದರೆ ಕೊಡ್ತಿದ್ದಾಳೆ ಎಂದು ಪ್ರತ್ಯಾರೋಪ ಮಾಡಿರುವುದಲ್ಲದೇ ತನ್ನ ಬಳಿಯಿರುವ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದನ್ನೂ ಓದಿ: ರೇಪ್‌ ಮಾಡಿ ಗರ್ಭಪಾತ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ – ಸಹ ಕಲಾವಿದೆಯ ದೂರಿನಲ್ಲಿ ಏನಿದೆ?

    ಸಂಭಾವನೆ ನೀಡುವ ನೆಪದಲ್ಲಿ ಬಂದು ನನ್ನ ಮೇಲೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಅತ್ಯಾಚಾರ (Rape) ಎಸಗಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆ ದೂರು ನೀಡಿದ್ದರು. ದೂರಿನ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ಇತ್ತ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಹಾಸನದ ಶಾಂತಿಗ್ರಾಮದ ಮಡೆನೂರಿನಲ್ಲಿ ತಲೆಮರೆಸಿಕೊಂಡಿದ್ದ ಮನುವನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದರು.

    ಮಡೆನೂರು ಮನು ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

  • ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

    ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

    ಬೆಂಗಳೂರು: ಅತ್ಯಾಚಾರ ಪ್ರಕರಣದ ದಾಖಲಾದ ಬಳಿಕ ನಾಪತ್ತೆಯಾಗಿದ್ದ ನಟ (Actor) ಮಡೆನೂರು ಮನು ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋನಲ್ಲಿ ನನ್ನ ವಿರುದ್ಧ ಅತ್ಯಾಚಾರ ಪ್ರಕರಣ (Rape Case) ದಾಖಲಿಸಿರುವ ಸಹ ಕಲಾವಿದೆ ಹಿಂದೆ ಇಬ್ಬರು ಹೀರೋಗಳು ಹಾಗೂ ಓರ್ವ ಲೇಡಿ ಡಾನ್‌ ಇದ್ದಾಳೆ ಎಂದು ಬಾಂಬ್‌ ಸಿಡಿಸಿದ್ದಾರೆ.

    ಸಂಭಾವನೆ ನೀಡುವ ನೆಪದಲ್ಲಿ ಬಂದು ನನ್ನ ಮೇಲೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು (Madenur Manu) ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆ ದೂರು ನೀಡಿದ್ದರು. ಈ ಸಂಬಂಧ ಅತ್ಯಾಚಾರ ಪ್ರಕರಣದ ದಾಖಲಿಸಿಕೊಂಡಿದ್ದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಮನು ಮಾತನಾಡಿರುವ ವಿಡಿಯೋವೊಂದು ಲಭ್ಯವಾಗಿದೆ. ಇದನ್ನೂ ಓದಿ: ರೇಪ್‌ ಮಾಡಿ ಗರ್ಭಪಾತ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ – ಸಹ ಕಲಾವಿದೆಯ ದೂರಿನಲ್ಲಿ ಏನಿದೆ?

    ಇದು ಉದ್ದೇಶಪೂರ್ವಕವಾಗಿ ಅಂತ ನಾನೇನು ಹೇಳಬೇಕಿಲ್ಲ ಎಲ್ಲರಿಗೂ ಗೊತ್ತಾಗಿದೆ. ಕಷ್ಟಪಟ್ಟು, ಇಷ್ಟಪಟ್ಟು ಮಾಡಿರುವ ʻಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ನಾಳೆ ರಾಜ್ಯಾದ್ಯಂತ ರಿಲೀಸ್‌ ಆಗ್ತಿದೆ. ಹೀಗಿರುವಾಗ ಎಫ್‌ಐಆರ್‌ ಮಾಡುವಂತಹ ಅವಶ್ಯಕತೆ ಇರಲಿಲ್ಲ. ಇತ್ತೀಚೆಗೆ ನಾನು ಆಕೆಯೊಂದಿಗೆ ಮಾತನಾಡಿದ್ದೆ. ಆಗ ನಾನು ಸುಮ್ಮನಿದ್ರೂ ಬೇರೆಯವರು ಬಿಡ್ತಿಲ್ಲ. ಈ ರೀತಿ ಮಾಡು ಅಂತ ಹೇಳಿಕೊಡ್ತಿದ್ದಾರೆ ಅಂತ ಅವಳೇ ಹೇಳಿದ್ದಳು. ಯಾರ‍್ಯಾರು ಹೇಳಿಕೊಡ್ತಿದ್ದಾರೆ ಅಂತ ಕೂಡ ಬಾಯಿಬಿಟ್ಟಿದ್ದಾಳೆ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ

    ಮುಂದುವರಿದು.. ಅವಳ ಜೊತೆಯಲ್ಲಿದ್ದವರೇ ಹೇಳಿಕೊಟ್ಟಿದ್ದಾರೆ. ಆಕೆ ಹಿಂದೆ ಇಬ್ಬರು ಹೀರೋ, ಓಬ್ಬಳು ಲೇಡಿ ಡಾನ್‌ ಸೇರಿ 12 ಜನ ಇದ್ದಾರೆ. ಇತ್ತೀಚೆಗೆ ಕೂಡ ನನ್ನ ಸಾವು ಬಯಸಿ ನಗುತ್ತಿದ್ದರಂತೆ. ನಾನು ಯಾರಿಗೇನು ಮಾಡಿದ್ದೇನೆ ಅಂತ ಗೊತ್ತಿಲ್ಲ. ನಾನಾಯ್ತು ಸಿನಿಮಾ ಕೆಲಸ ಆಯ್ತು ಅಂತ ಇರ್ತೀನಿ. ಇಲ್ಲದಿದ್ರೆ ಜಮೀನು ಕೆಲಸ ಮಾಡ್ತೀನಿ. ಆದ್ರೆ ನನ್ನ ವಿರುದ್ಧ ಪ್ರತಿಯೊಂದು ಆರೋಪಕ್ಕೂ ಸಾಕ್ಷಿ ಕೊಡ್ತೀನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

    ಈಗ 2 ತಿಂಗಳಿಂದ ಸಿನಿಮಾಗೆ ಎಲ್ಲರನ್ನೂ ಕರೆದಿದ್ದೇನೆ. ಪಾಪ ನಿರ್ಮಾಪಕರು ದುಡ್ಡು ಎಲ್ಲಿಂದ ತಂದಿರ್ತಾರೆ ಗೊತ್ತಿಲ್ಲ. ಈ ಕೇಸ್‌ನಿಂದ ಅವರಿಗೆ ಸಮಸ್ಯೆ ಆಗಬಾರದು. ಶೀಘ್ರದಲ್ಲೇ ನಾನು ಕಾನೂನಿನ ಮೂಲಕ ಉತ್ತರ ಕೊಡುವ ಕೆಲಸ ಮಾಡ್ತೀನಿ ಅಂತ ವಿಡಿಯೋನಲ್ಲಿ ಹೇಳಿದ್ದಾರೆ.

  • ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ಉಡುಪಿ: ರಾಕೇಶ್ (Rakesh Poojary) ನಮ್ಮೂರಿನ ಹುಡುಗ. ಬಾಯಿ ತುಂಬಾ ಅಕ್ಕಾ ಅಕ್ಕಾ ಅಂತ ಕರೀತಿದ್ದ. ನನ್ನ ತಮ್ಮನ ಹಾಗೆ ನಮ್ಮ ಕಣ್ಣಮುಂದೆ ಚೆನ್ನಾಗಿ ಬೆಳೆದ ಹುಡುಗ ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ ಎಂದು ನಿರೂಪಕಿ, ನಟಿ ಅನುಶ್ರೀ (Anchor Anushree) ಬೇಸರ ವ್ಯಕ್ತಪಡಿಸಿದರು.

    ಉಡುಪಿಯ ಕೆಮ್ಮಣ್ಣು ಗುಡೆಯಲ್ಲಿ ರಾಕೇಶ್ ಪೂಜಾರಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ನಂತರ ಅವರು ಮಾತನಾಡಿದರು. ತಮಾಷೆಗೂ ಯಾರ ಮನಸ್ಸನ್ನು ನೋಯಿಸದ ಹುಡುಗ ರಾಕೇಶ್. ಒಳ್ಳೆಯವರಿಗೆ ಕಾಲ ಇಲ್ಲ. ತಾಯಿ ಮತ್ತು ತಂಗಿಗೆ ನಾವೆಲ್ಲಾ ಶಕ್ತಿಯಾಗಿ ನಿಲ್ಲಬೇಕು. ಅವರ ನಗು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಡಿಂಪಲ್ ಡಿಂಪಲ್ ಎಂದು ಡ್ಯಾನ್ಸ್ ಮಾಡುತ್ತಿದ್ದದ್ದು ಕಣ್ಮುಂದೆ ಬರುತ್ತಿದೆ. ಅರ್ಜುನ್ ಜನ್ಯ ಅವರ ಮಿಮಿಕ್ರಿ ಅಷ್ಟು ಚೆನ್ನಾಗಿ ಮಾಡುತ್ತಿದ್ದ. ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ ವ್ಯಕ್ತಿ ಎಂದು ಸ್ಮರಿಸಿದರು. ಇದನ್ನೂ ಓದಿ: ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    ಅರ್ಧ ದಿನದಲ್ಲಿ ಸ್ಕಿಟ್‌ನ ಎಲ್ಲ ಡೈಲಾಗ್‌ಗಳನ್ನು ಕಲಿತು ನಟಿಸುತ್ತಿದ್ದ ಕಲಾವಿದ ಆತ. ಕಾಂತಾರದಲ್ಲಿ ಅವಕಾಶ ಸಿಕ್ಕಿರುವುದು ಒಂದೊಳ್ಳೆ ಅವಕಾಶವಾಗಿತ್ತು. ಯಾವತ್ತೂ ನಮ್ಮದೇ ಕ್ಯಾರಾವ್ಯಾನ್‌ನಲ್ಲಿದ್ದು, ನಮ್ಮ ಜೊತೆ ಊಟ ಮಾಡುತ್ತಿದ್ದ. ಅಣ್ಣತಮ್ಮಂದಿರ ಹಾಗೆ ಜೊತೆಗೆ ಇದ್ದ ನನ್ನ ತಮ್ಮ ಇಲ್ಲ ಅನ್ನೋದು ನೋವು ತಂದಿದೆ ಎಂದರು.  ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

  • ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    `ಕಾಮಿಡಿ ಕಿಲಾಡಿಗಳು ಸೀಸನ್ 3’ರ ಖ್ಯಾತಿಯ ರಾಕೇಶ್ ಪೂಜಾರಿ ಅಂತ್ಯಕ್ರಿಯೆ ಉಡುಪಿಯ(Udupi) ಹೂಡೆಯ ಸ್ಮಶಾನದಲ್ಲಿ ನಡೆಯಿತು.

    ಹುಟ್ಟೂರು ಉಡುಪಿಯಲ್ಲಿ ರಾಕೇಶ್ ಪೂಜಾರಿ(Rakesh Poojary) ಅವರ ಅಂತ್ಯಕ್ರಿಯೆ ನಡೆದಿದೆ. ಯೋಗರಾಜ್ ಭಟ್, ಅನುಶ್ರೀ, ರಕ್ಷಿತಾ ಪ್ರೇಮ್, ಮಲೈಕಾ, ನಯನ, ಸೂರಜ್ ಸೇರಿ ಅನೇಕ ಕಲಾವಿದರು ರಾಕೇಶ್‌ ಅವರ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ಹೂಡೆ ಬೀಚ್(Hoode Beach) ಪಕ್ಕದಲ್ಲಿ ರಾಕೇಶ್ ಅವರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಮನೆಯಿಂದ ಸ್ಮಶಾನದವರೆಗೆ ಅಂತಿಮ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನಟನಟಿಯರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿ ನೂರಾರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ರಾಕೇಶ್ ಅವರ ಮಾವಂದಿರಾದ ಸತೀಶ್ ಪೂಜಾರಿ ಹಾಗೂ ಶ್ರೀಧರ ಪೂಜಾರಿ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅವರ ಅಂತ್ಯಕ್ರಿಯೆಯು ಬಿಲ್ಲವ ಸಂಪ್ರದಾಯದಂತೆ ಪಡುತೋನ್ಸೆಯ ಬಿಲ್ಲವ ಸಮಾಜ ರುದ್ರಭೂಮಿಯಲ್ಲಿ ನೆರವೇರಿತು.

    ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು(Comedy Khiladigalu Season-3) ಸೀಸನ್ -3 ರ ಗ್ರ‍್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್, ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನ ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದರು. ಅಷ್ಟೇ ಅಲ್ಲ ಪೈಲ್ವಾನ್, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ: ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟನ ನಿಧನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.

  • ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ಟ ರಾಕೇಶ್ ಪೂಜಾರಿ ನಿಧನರಾಗಿರುವ ಬಗ್ಗೆ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ದಿವ್ಯಾಶ್ರೀ (Divyashree) ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಒಳ್ಳೆಯ ಕಲಾವಿದರು ಸಿಕ್ತಾರೆ, ಆದರೆ ಒಳ್ಳೆಯ ವ್ಯಕ್ತಿಯನ್ನ ನೋಡೋದು ಕಡಿಮೆ ಎನ್ನುತ್ತಾ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಕುಟುಂಬ ಸಮೇತ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಉಪೇಂದ್ರ

    ರಾಕೇಶ್ ಪೂಜಾರಿ ಮತ್ತು ನಟಿ ದಿವ್ಯಾ ಹಲವು ವರ್ಷಗಳಿಂದ ಪರಿಚಿತರು. ಹೀಗಾಗಿ ಅವರೊಂದಿನ ಒಡನಾಟದ ಬಗ್ಗೆ ಮತ್ತು ಅವರ ನಿಧನ ಸುದ್ದಿ ತಮಗೆ ತಿಳಿದಿದ್ದು ಹೇಗೆ ಎಂದು ನಟಿ ‘ಪಬ್ಲಿಕ್ ಟಿವಿ’ಗೆ ವಿವರಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ನಟ ಸದಾನಂದ ಕಡೆಯಿಂದ ಬೆಳಗ್ಗೆ 5.30ಕ್ಕೆ ರಾಕೇಶ್ ಸಾವಿನ ಸುದ್ದಿ ತಿಳಿಯಿತು. ಈ ವಿಷ್ಯ ಕೇಳಿದಾಗ ಮೊದಲಿಗೆ ಸುಳ್ಳು ಸುದ್ದಿ ಅಂದುಕೊಂಡಿದ್ವಿ, ಆ ನಂತರ ಖಾತ್ರಿಯಾಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ

    ಇತ್ತೀಚೆಗೆ ‘ದಸ್ಕತ್’ ಅಂತ ತುಳು ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ನಮ್ಮೊಂದಿಗೆ ಕುಳಿತು ಸಿನಿಮಾ ನೋಡಿದ್ದರು. ಸದಾ ಎಲ್ಲರನ್ನು ನಗಿಸುತ್ತಿದ್ದರು. ಅವರಿಗೆ 33 ವರ್ಷ ವಯಸ್ಸು ಆಗಿದ್ರು. ಅವರಲ್ಲಿ ಮಗುವಿನಂತ ಗುಣವಿತ್ತು ಎಂದಿದ್ದಾರೆ. `ದಸ್ಕತ್’ ಸಿನಿಮಾ ಪ್ರದರ್ಶನದಲ್ಲಿ ಕಡೆಯ ಬಾರಿ ಭೇಟಿಯಾಗಿದ್ದು ಅಂತ ಹೇಳಿಕೊಂಡಿದ್ದಾರೆ.

    ರಾಕೇಶ್‌ಗೆ ಆರೋಗ್ಯ ಸಮಸ್ಯೆ ಇತ್ತಾ ಗೊತ್ತಿಲ್ಲ. ಕಲಾವಿದರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಶೂಟ್ ಇರುತ್ತದೆ. ಊಟ ನಿದ್ರೆ ಸಮಸ್ಯೆ ಇರುತ್ತದೆ. ಹೀಗಾಗಿ ಲೋ ಬಿಪಿ ಆಗಿರಬಹುದು. ಕಷ್ಟ ಆದರೂ ಇಷ್ಟಪಟ್ಟು ಕೆಲಸ ಮಾಡುತ್ತೇವೆ. ಅವರಿಗೆ ಮದುವೆ ವಿಚಾರದಲ್ಲಿ ನಾವು ರೇಗಿಸುತ್ತಿದ್ದೇವು. ರಾಕೇಶ್‌ಗೆ ಅಪ್ಪ ಇಲ್ಲ ಆದರೆ ತಂಗಿ, ಅಮ್ಮ ಇದ್ದಾರೆ. ಅವರು ಅದಷ್ಟೇ ತಮಾಷೆ ಮಾಡಿಕೊಂಡು ಇದ್ದರು. ಜೀವನದಲ್ಲಿ ಅವರಿಗೆ ಸೀರಿಯಸ್‌ನೆಸ್ ಇತ್ತು. ತಂಗಿ ಮದುವೆ ಮಾಡಬೇಕು ಎಂದಿತ್ತು. ತಂಗಿಗೆ ಮದುವೆ ಮಾಡಿದ್ಮೇಲೆ ನಾನು ಮದುವೆ ಆಗುತ್ತೇನೆ ಎಂದಿದ್ದರು. ನನಗೆ ಅವರ ಅಮ್ಮನದ್ದೇ ಯೋಚನೆ ಆಗ್ತಿದೆ. ಅವರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅವರನ್ನು ಇಷ್ಟಪಡದೇ ಇರುವವರು ಯಾರಿಲ್ಲ. ಒಳ್ಳೆಯ ಕಲಾವಿದರನ್ನು ನೋಡಿದ್ದೇವೆ. ಆದರೆ ಒಳ್ಳೆಯ ವ್ಯಕ್ತಿ ಸಿಗೋದು ಕಡಿಮೆ ಅಲ್ವಾ ಎಂದಿದ್ದಾರೆ. ರಕ್ಷಿತಾ ಪ್ರೇಮ್ ಮೇಡಂಗೆ ರಾಕೇಶ್ ಫೇವರೇಟ್. ಈಗ ಅವರು ಇಲ್ಲ ಅಂತ ಬೇಜಾರು ಎನ್ನುತ್ತಾ ನಟಿ ಭಾವುಕರಾಗಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಿದಂಬರ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಿದಂಬರ

    ಕಿರುತೆರೆಯ ಜನಪ್ರಿಯ ಶೋ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ಚಿದಂಬರ ಪೂಜಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟ ಹಂಚಿಕೊಂಡಿದ್ದಾರೆ.


    ಸುಕನ್ಯಾ ಗೌಡ (Sukanya Gowda) ಎಂಬುವವರ ಜೊತೆ ಚಿದಂಬರ ಪೂಜಾರಿ (Chidambara Poojari) ಮದುವೆಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ನಟ ಚಿದಂಬರ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ಜರುಗಿತ್ತು. ಈಗ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ.

    ಫ್ಯಾಷನ್ ಡಿಸೈನರ್, ಮಾಡೆಲ್ ಆಗಿರುವ ಸುಕನ್ಯಾರನ್ನು (Sukanya) ಪ್ರೀತಿಸಿ ಚಿದಂಬರ ಮದುವೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪ್ರೀತಿಯ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಸದ್ಯ ನವಜೋಡಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    ಸದ್ಯ ಕೆಲವು ರಿಯಾಲಿಟಿ ಶೋ, ಸೀರಿಯಲ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಚಿದಂಬರ ಪೂಜಾರಿ ಆ್ಯಕ್ಟೀವ್ ಆಗಿದ್ದಾರೆ.

  • ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಪ್ರೀತಿಯೇ ಜೀವನದ ಸಾಕ್ಷಾತ್ಕಾರ, ಪ್ರೀತಿಗೆ ಮನಸ್ಸು ಮುಖ್ಯ ಅಂದ ಚೆಂದ ಮುಖ್ಯ ಅಲ್ಲ ಎಂಬುದನ್ನ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ಸಂಜು ಬಸಯ್ಯ ದಂಪತಿ ಪ್ರೂವ್ ಮಾಡಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸಾಕ್ಷಿಯಾಗಿ ನವಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

    ಟಿವಿ ಪ್ರೇಕ್ಷಕರ ಮನಗೆದ್ದ ಶೋ ‘ಕಾಮಿಡಿ ಕಿಲಾಡಿಗಳು’ ಪ್ರಥಮ ಸೀಸನ್ ನೋಡಿದವರಿಗೆ ಸಂಜು ಬಸಯ್ಯ ಪರಿಚಯ ಇದ್ದೇ ಇರುತ್ತದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಎಲ್ಲರಿಗೂ ನಗುವಿನ ಕಚಗುಳಿ ಇಟ್ಟಿದ್ದ ಸಂಜು ಬಸಯ್ಯ (Sanju Basayya) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡ್ಯಾನ್ಸರ್ ಕಮ್ ಮಾಡೆಲ್ ಪಲ್ಲವಿ ಬಳ್ಳಾರಿ (Pallavi Ballari) ಎಂಬುವರನ್ನ ಸಂಜು ಬಸಯ್ಯ ಪ್ರೀತಿಸಿ ಮದುವೆಯಾಗಿದ್ದಾರೆ.

    ಒಂದೇ ನಾಟಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಒಟ್ಟಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಸಂಜು ಬಸಯ್ಯ- ಪಲ್ಲವಿ ಬಳ್ಳಾರಿ ಮೊದಲು ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರಿತು. ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಕುಟುಂಬಸ್ಥರ ಸಮ್ಮತಿ ಪಡೆದು ಇತ್ತೀಚೆಗಷ್ಟೇ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು. ಇದೀಗ ನವದಂಪತಿಯ ಗ್ರ‍್ಯಾಂಡ್ ರಿಸೆಪ್ಷನ್ ನಡೆದಿದೆ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ : ಬಸ್ರೂರಿನಲ್ಲಿ ಬೀಡುಬಿಟ್ಟ ಪ್ರಶಾಂತ್ ನೀಲ್

    ಜುಲೈ 30ರಂದು ಬೈಲಹೊಂಗಲದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜು ಬಸಯ್ಯ – ಪಲ್ಲವಿ ಬಳ್ಳಾರಿ ಅವರ ಅದ್ಧೂರಿ ಆರತಕ್ಷತೆ ಜರುಗಿದೆ. ಜೊತೆಗೆ ಸಂಜು ಬಸಯ್ಯ ಅವರ ಹುಟ್ಟುಹಬ್ಬವನ್ನೂ ಆಚರಿಸಲಾಗಿದೆ. ಸಂಭ್ರಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]