Tag: Comedian actor

  • ಹಾಸ್ಯನಟ ರಾಜು ಶ್ರೀವಾಸ್ತವ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ಹಾಸ್ಯನಟ ರಾಜು ಶ್ರೀವಾಸ್ತವ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ಸಾಕಷ್ಟು ಸಿನಿಮಾಗಳಲ್ಲಿ ಸಂಚಲನ ಮೂಡಿಸಿರುವ ಹಾಸ್ಯ ನಟ ರಾಜು ಶ್ರೀವಾಸ್ತವ್ ಅವರಿಗೆ ಹೃದಯಾಘಾತವಾಗಿದೆ. ಜಿಮ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು ಈಗ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಜನಪ್ರಿಯ ಹಾಸ್ಯ ನಟ ರಾಜು ಶ್ರೀವಾಸ್ತವ್ ಅವರಿಗೆ ಹೃದಯಾಘಾತ ಆಗಿರುವುದು ನಿಜ. ಜಿಮ್‌ನಲ್ಲಿ ಅವರು ಕಸರತ್ತು ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಇದನ್ನೂ ಓದಿ:ಗುರೂಜಿಯನ್ನ ತಳ್ಳಿದ್ರಾ ಉದಯ್? ಬಿಗ್ ಬಾಸ್ ಮನೆಯಲ್ಲಿ ಬಿಗ್ ವಾರ್

    ದಕ್ಷಿಣ ದೆಹಲಿಯಲ್ಲಿರುವ ಜಿಮ್‌ನಲ್ಲಿ ರಾಜು ಅವರು ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಏನೋ ಸರಿ ಇಲ್ಲ ಎನಿಸಿದೆ. ಆ ಸಂದರ್ಭದಲ್ಲೇ ರಾಜು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಇತ್ತೀಚೆಗೆ ಹಲವು ನಟರಿಗೆ ಹೃದಯಾಘಾತವಾಗಿದೆ. ಇದೇ ಸಂದರ್ಭದಲ್ಲಿ ರಾಜು ಅವರಿಗೂ ಹಾರ್ಟ್ ಅಟ್ಯಾಕ್ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಗದಗನಲ್ಲಿ ಹಿರಿಯ ಹಾಸ್ಯನಟ ದೊಡ್ಡಣ್ಣನ ಪುತ್ರನ ಮದುವೆ ಸಂಭ್ರಮ

    ಗದಗನಲ್ಲಿ ಹಿರಿಯ ಹಾಸ್ಯನಟ ದೊಡ್ಡಣ್ಣನ ಪುತ್ರನ ಮದುವೆ ಸಂಭ್ರಮ

    ಗದಗ: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಹಾಸ್ಯ ನಟ ದೊಡ್ಡಣ್ಣ ಅವರು ಗದಗ ನಗರದಲ್ಲಿ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.

    ಗದಗನಲ್ಲಿ ವ್ಯಾಪಾರಸ್ಥರಾಗಿರುವ ಅಂದಾನಪ್ಪ ಗುಗ್ಗರಿ ಅವರ ಪುತ್ರಿ ಜ್ಯೋತಿ ಅವರೊಂದಿಗೆ, ದೊಡ್ಡಣ್ಣ ಅವರ ಪುತ್ರ ಸೂಗುರೇಶ್ ಅವರ ವಿವಾಹವು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೆರವೇರಿತು. ಜ್ಯೋತಿ ಇಂದು ದೊಡ್ಡಣ್ಣ ಅವರ ಮನೆ ಬೆಳಗೋಕೆ ಅವರ ಕುಟುಂಬದೊಡನೆ ಒಂದಾದರು. ಬೆಳಗ್ಗೆಯಿಂದಲೇ ಕಲ್ಯಾಣ ಮಂಟಪದಲ್ಲಿ ಜನಜಾತ್ರೆ ನೆರೆದಿತ್ತು.

    ಚಿತ್ರರಂಗದವರ ಮದುವೆಯೆಂದರೆ ಸಾಕು ಅಲ್ಲಿ ಒಂದು ಆಡಂಬರ ಹೆಚ್ಚಾಗಿರುತ್ತದೆ. ಆದರೆ ದೊಡ್ಡಣ್ಣ ಅವರು ತಮ್ಮ ಮಗನ ಮದುವೆಯನ್ನು ಬಹಳ ಸಿಂಪಲ್ ಆಗಿ ಮಾಡಿದರು. ವಿಶೇಷವಾಗಿ ಉತ್ತರ ಕರ್ನಾಟಕದ ಜನರು ಹೃದಯವಂತರು, ಅವರ ಮಾತು ಸಿಹಿ. ಹೀಗಾಗಿ ಇಲ್ಲಿಯೇ ಮದುವೆ ಮಾಡಲಾಗಿದೆ. ಈ ಭಾಗದ ಹೆಣ್ಮಗಳು ನಮ್ಮ ಮನೆ ಬೆಳಗೋಕೆ ಬಂದಿರುವದು ನನಗೆ ಸಂತಸ ತಂದಿದೆ ಎಂದು ದೊಡ್ಡಣ್ಣ ಹೇಳಿದರು.

    ಕಲ್ಯಾಣ ಮಂಟಪಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ವಧುವರರನ್ನು ಆಶೀರ್ವಾದಿಸಿದರು. ಈ ಭಾಗದಿಂದ ಸಿನಿಮಾ ಕ್ಷೇತ್ರದ ಹಿರಿಯ ಕಲಾವಿದರೊಬ್ಬರ ಮನೆಗೆ ಹೆಣ್ಣು ಕೊಟ್ಟಿದ್ದು ನಮಗೂ ಸಂತಸ ತಂದೆ ಎಂದು ಅಂದಾನಪ್ಪ ಗುಗ್ಗರಿ ಕುಟುಂಬಸ್ಥರು ಹೇಳಿದ್ದಾರೆ.