Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸ್ಟಾರ್ ನಟರ ಜೊತೆ ಮಿಂಚಿದ್ದ ನಟಿ ಮಹಾಲಕ್ಷ್ಮಿ ಇದೀಗ ಮತ್ತೆ ಚಂದನವನಕ್ಕೆ ‘ರಾಮ’ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿ ಕನ್ನಡ ಸಿನಿಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ.

ಈ ಕುರಿತಂತೆ ನಮ್ಮ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲಿಗೆ ಬೆಂಗಳೂರು ಯಾವಾಗಲೂ ತಂಪಾದ ವಾತಾವರಣದಿಂದ ಕೂಡಿರುತ್ತದೆ. ನನಗೆ ಬೆಂಗಳೂರು ಎಂದರೆ ಬಹಳ ಇಷ್ಟ ಎಂದು ಹೇಳಿದರು. ರಾಮ ಸಿನಿಮಾದಲ್ಲಿ ನಾನು ತಾಯಿ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದು, ಇದೊಂದು ಭಾವಾನಾತ್ಮಕ ಕಥೆ ಒಳಗೊಂಡುವ ಸಿನಿಮಾವಾಗಿದೆ. ಚಿತ್ರದ ಕಥೆ ಚೆನ್ನಾಗಿರುವುದರಿಂದ ಅಭಿನಯಿಸಲು ಒಪ್ಪಿಕೊಂಡೆ. ಮತ್ತೆ ನಿಮ್ಮ ಮಹಾಲಕ್ಷ್ಮಿಯನ್ನು ಈ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ನೋಡಬಹುದು. ಹಿಂದೆ ನಿಮ್ಮೆಲ್ಲರ ಸಹಕಾರದಿಂದ ಕನ್ನಡ ಚಿತ್ರರಂಗದಲ್ಲಿ ನಾನು ಮಿಂಚಿದ್ದೆ. ಹಾಗೆಯೇ ರಾಮ ಸಿನಿಮಾಕ್ಕೂ ನಿಮ್ಮೆಲ್ಲರ ಸಹಕಾರ ನನಗೆ ಮತ್ತು ರಾಮ ಚಿತ್ರ ತಂಡಕ್ಕೆ ಬಹಳ ಮುಖ್ಯ. ಸಿನಿಮಾ ನೋಡಿ ನಮಗೆ ಬೆಂಬಲ ನೀಡಿ ಎಂದು ಹೇಳಿದರು.
ನಂತರ ಸ್ಯಾಂಡಲ್‍ವುಡ್‍ನಿಂದ 30 ವರ್ಷಗಳ ಅಂತರ ಕುರಿತಂತೆ ಕೇಳಿದ ಪ್ರಶ್ನೆಗೆ, ಇದು ನಮ್ಮ ಜೀವನದ ಒಂದು ಭಾಗ, ಕೆಲವು ವರ್ಷ ನಾನು ಕೆಲಸ ಮಾಡಿದೆ ಬಳಿಕ ಕೌಟುಂಬಿಕ ಜೀವನಕ್ಕೆ ಕಾಲಿಟ್ಟೆ, ಇದೀಗ ಕೆಲವು ವರ್ಷಗಳ ಬಳಿಕ ನನಗೆ ಕೊಂಚ ಬಿಡುವು ಸಿಕ್ಕಿದೆ ಹಾಗಾಗಿ ಮತ್ತೆ ನಾನು ಬಣ್ಣ ಹಚ್ಚಲು ತೀರ್ಮಾನಿಸಿದ್ದೇನೆ ಎಂದರು.

ನಾನು ಅಭಿನಯಿಸಿದ ಹಳೆಯ ಸಿನಿಮಾಗಳ ನೆನಪುಗಳು ನನಗೆ ಹಚ್ಚ ಹಸಿರಾಗಿಯೇ ಉಳಿದಿದೆ. ಕನ್ನಡ ಸಿನಿಮಾರಂಗದಲ್ಲಿ ನಟಿಯಾಗಿ ಅಭಿನಯಿಸಿದ್ದು ನನಗೆ ಬಹಳ ಖುಷಿ ತಂದಿದೆ. ನಾನು ನಟಿಸಿದ್ದ ಹಲವು ಸಿನಿಮಾಗಳು ಯಶಸ್ವಿಯಾಗಿದೆ. ಅದೇ ರೀತಿಯ ಹೆಸರು ಮತ್ತು ಖ್ಯಾತಿ ಗಳಿಸುವ ಇಚ್ಛೆಯಿಂದ 30 ವರ್ಷಗಳ ನಂತರ ಮತ್ತೆ ಕಮ್‍ಬ್ಯಾಕ್ ಮಾಡುತ್ತಿದ್ದೇನೆ. 30 ವರ್ಷಗಳ ನಂತರವೂ ಈ ಮಹಾಲಕ್ಷ್ಮಿಯನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ ಎಂಬುವುದು ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಸ್ಯಾಂಡಲ್‍ವುಡ್‍ನಲ್ಲಿ ಆದ ಕೆಲವು ಬದಲಾವಣೆ ಕುರಿತಂತೆ ಮಾತನಾಡಿದ ಅವರು, ಕನ್ನಡದ ಹಿರಿಯ ನಟರೊಂದಿಗೆ ನಾನು ಅಭಿನಯಿಸಿದ್ದೇನೆ. ಅವರಲ್ಲಿ ಕೆಲವರು ಪ್ರಸ್ತುತ ನಮ್ಮೊಟ್ಟಿಗೆ ಇಲ್ಲ. ನಾನು ಅವರನೆಲ್ಲಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅವರೆಲ್ಲರ ನೆನಪುಗಳ ಸದಾ ನನ್ನ ಹೃದಯದಲ್ಲಿ ಹಚ್ಚಹಸಿರಾಗಿದೆ. ಅವರೆಲ್ಲಾ ಕ್ಯಾಮೆರಾ ಮುಂದೆ ಮಾತ್ರವಲ್ಲಾ, ಕ್ಯಾಮೆರಾ ಹಿಂದೆ ಕೂಡ ಉತ್ತಮ ಸಹದ್ಯೋಗಿಗಳಾಗಿದ್ದರು. ನನ್ನ ವೃತ್ತಿ ಜೀವದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ನನಗೆ ಎಲ್ಲರೂ ಸಹಕಾರ ನೀಡಿದ್ದರು. ಅವರೆಲ್ಲರೊಂದಿಗೆ ಒಟ್ಟಾಗಿ ಕೆಲಸ ಕ್ಷಣಗಳು ನನಗೆ ಅದ್ಭುತ ಅನುಭವ ತಂದಿದೆ ಎಂದು ತಿಳಿಸಿದರು.

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಬಟರ್ ಚಿಕನ್ ಮತ್ತು ಬಿರಿಯಾನಿ ಪ್ರಿಯರು ಎನ್ನುವುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವಾಗದ ವಿಚಾರವಾಗಿ ಮಾತನಾಡಿ ಧೋನಿ-ಬಿರಿಯಾನಿ ಕಥೆ ಹೇಳಿದ್ದಾರೆ.
2004ರಲ್ಲಿ ಧೋನಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಕೈಫ್ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದಾಗ್ಯೂ ಕೈಫ್ ಅವರು ನಿಧಾನವಾಗಿ ಟೀಂ ಇಂಡಿಯಾದಿಂದ ಹೊರಗುಳಿದರು. ಇತ್ತ ಧೋನಿ 2007ರಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡರು, ಬಳಿಕ 2008ರಲ್ಲಿ ಎಲ್ಲಾ ಮೂರು ಮಾದರಿ ಟೆಸ್ಟ್, ಏಕದಿನ, ಟಿ20 ನಾಯಕನಾಗಿ ಅನೇಕ ಸಾಧನೆಗೆ ಸಾಕ್ಷಿಯಾದರು.

2006ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೈಫ್ ಉತ್ತರ ಪ್ರದೇಶ ತಂಡ ಗೆಲುವಿಗೆ ಕಾರಣರಾಗಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ತಮಾಷೆಯಾಗಿ ಹೇಳಿದ ಕೈಫ್, ನಮ್ಮ ಮನೆಯಲ್ಲಿ ಧೋನಿಗೆ ಸರಿಯಾಗಿ ಬಿರಿಯಾನಿ ಬಡಿಸದೇ ಇರುವುದು ಟೀಂ ಇಂಡಿಯಾ ಕಮ್‍ಬ್ಯಾಕ್‍ಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ.
ಕೈಫ್ 2006ರಲ್ಲಿ ಇಡೀ ಭಾರತದ ಕ್ರಿಕೆಟ್ ತಂಡವನ್ನು ತಮ್ಮ ನೋಯ್ಡಾ ಮನೆಗೆ ರಂಜಾನ್ ಹಬ್ಬಕ್ಕಾಗಿ ಆಹ್ವಾನಿಸಿದ್ದರು. ಈ ವೇಳೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಅವರಂತಹ ಹಿರಿಯ ಆಟಗಾರರು ಕೂಡ ಹಾಜರಾಗಿದ್ದರು. ಅವರಲ್ಲೆ ಒಂದು ಕೋಣೆಯಲ್ಲಿ ಕುಳಿತಿದ್ದರೆ ಎಂ.ಎಸ್.ಧೋನಿ, ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಆಗ ಕೈಫ್ ಹಿರಿಯ ಆಟಗಾರರ ಬಗ್ಗೆ ಹೆಚ್ಚು ಕಾಳಜಿ ತೋರಿದ್ದರು.

ಈ ವಿಚಾರವಾಗಿ ಮಾತನಾಡಿರುವ ಕೈಫ್, “2006ರಲ್ಲಿ ನಾನು ರಣಜಿ ಟ್ರೋಫಿ ಟೂರ್ನಿಯ ಫೈನಲ್‍ನಲ್ಲಿ ಶತಕ ಬಾರಿಸಿ ಉತ್ತರ ಪ್ರದೇಶದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದೆ. ಇದರಿಂದಾಗಿ ಎಂಎಸ್ ಧೋನಿ ಬಯಸಿದರೆ ನಾನು ಟೀಂ ಇಂಡಿಯಾಗೆ ಪುನರಾಗಮನ ಮಾಡಬಹುದೆಂದು ಭಾವಿಸಿದ್ದೆ” ಎಂದು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
“ಎಂ.ಎಸ್.ಧೋನಿ, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಒಂದು ಕೋಣೆಯಲ್ಲಿ ಕುಳಿತಿದ್ದರು. ಹಿರಿಯರಾದ ಸಚಿನ್, ಗಂಗೂಲಿ ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರ ಜೊತೆಗೆ ಕುಳಿತು ಉಪಚರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಹೆಚ್ಚಿನ ಸಮಯವನ್ನು ಹಿರಿಯರೊಂದಿಗೆ ಕಳೆದುಬಿಟ್ಟೆ. ಆ ಸಮಯದಲ್ಲಿ ಬಹುಶಃ ಧೋನಿ ಮತ್ತು ಇತರ ಕಿರಿಯ ಕ್ರಿಕೆಟಿಗರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಕೈಫ್ ಕೇಳಿಕೊಂಡಿದ್ದಾರೆ.

ಕೈಫ್ 2006ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಅವರು ಭಾರತ ಪರ 13 ಟೆಸ್ಟ್ ಮತ್ತು 125 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಎರಡು ಮಾದರಿಯಲ್ಲಿ ಕ್ರಮವಾಗಿ 624 ರನ್ ಮತ್ತು 2,753 ರನ್ ಗಳಿಸಿದ್ದಾರೆ. ಕೈಫ್ ತಮ್ಮ ಅದ್ಬುತ ಫೀಲ್ಡಿಂಗ್‍ಗೆ ಹೆಸರಾಗಿದ್ದರು. ಅವರು ಸಾರ್ವಕಾಲಿಕ ಅತ್ಯುತ್ತಮ ಭಾರತೀಯ ಫೀಲ್ಡರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಬೆಂಗಳೂರು: ಗೋಲ್ಡನ್ ಗರ್ಲ್ ಅಮೂಲ್ಯ ಮದುವೆ ನಂತ್ರ ಕಮ್‍ಬ್ಯಾಕ್ ಆಗೋಕೆ ಸಿದ್ಧತೆ ನಡೆಸುತ್ತಿದ್ದಾರೆ. ಒಂದು ವರ್ಷ ಕಾಲ ಬಣ್ಣದ ಲೋಕದಿಂದ ದೂರವೇ ಉಳಿದಿದ್ದ ಅಮೂಲ್ಯ ಆಶ್ಚರ್ಯಕರ ರೀತಿಯಲ್ಲಿ ಇದೀಗ ರೀ ಎಂಟ್ರಿ ಕೊಡೋಕೆ ಸಜ್ಜಾಗುತ್ತಿದ್ದಾರೆ.
ಅನುಷ್ಕಾ ಶರ್ಮಾ, ಸಮಂತಾ, ರಾಧಿಕಾ ಪಂಡಿತ್ ಹೀಗೆ ಸಾಲು ಸಾಲು ನಟಿಯರು ಮದುವೆ ಆದ ಮೇಲೂ ಬೇಡಿಕೆಯಲ್ಲಿದ್ದಾರೆ. ಅದೇ ರೀತಿ ಗಂಡನ ಮನೆ ಸೇರಿ, ಚಿತ್ರರಂಗಕ್ಕೆ ಮತ್ತೆ ವಾಪಸ್ ಬರಲ್ಲ ಅಂದುಕೊಂಡವರಿಗೆ ಅಮೂಲ್ಯ ಶಾಕ್ ಕೊಡೋಕೆ ಹೊರಟಿದ್ದಾರೆ.
ಮದುವೆ ಆಗಿದೆ ಎಂದು ಯಾವ್ ಯಾವುದೋ ಸಿನಿಮಾದಲ್ಲಿ ಕಮ್‍ಬ್ಯಾಕ್ ಆದರೆ ಜನ ಹೇಗೆ ಸ್ವೀಕರಿಸ್ತಾರೋ ಎನ್ನುವ ಡೌಟ್ ಇರುತ್ತೆ. ಹಲವಾರು ವರ್ಷಗಳ ಕಾಲ ನಟಿ ಅಮೂಲ್ಯ ಚಿತ್ರರಂಗದ ಎಲ್ಲಾ ಮಜಲುಗಳನ್ನೂ ಅರಿತವರು. ಹೀಗಾಗಿ ಒಳ್ಳೆಯ ರೀತಿಯಲ್ಲೇ ವಾಪಸ್ ಬರೋಕೆ ನಿರ್ಧರಿಸಿದ್ದು, ದರ್ಶನ್ ಚಿತ್ರದಲ್ಲಿ ನಟಿಸೋಕೆ ಮನಸ್ಸು ಮಾಡಿದ್ದಾರಂತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ವೇದಾಲಂ’ ತಮಿಳು ರಿಮೇಕ್ ಸಿನಿಮಾ ಮಾಡಲಿದ್ದಾರೆ. ಇದೇ ಚಿತ್ರದಲ್ಲಿ ದರ್ಶನ್ ತಂಗಿಯ ಪಾತ್ರಕ್ಕಾಗಿ ಅಮೂಲ್ಯಾಗೆ ಬುಲಾವ್ ಬಂದಿದೆ. ಅಣ್ಣ ತಂಗಿಯ ಬಾಂಧವ್ಯದ ಕಥೆಯೇ ಹೈಲೈಟ್ ಆಗಿರುವ ವೇದಾಲಂ ಚಿತ್ರದಿಂದ ಅಮೂಲ್ಯ ಕಮ್‍ಬ್ಯಾಕ್ ಆಗೋಕೆ ಉತ್ತಮ ಸಿನಿಮಾ. ಹೀಗಾಗಿ ಪಾತ್ರವೇನೋ ಗೋಲ್ಡನ್ ಗರ್ಲ್‍ಗೆ ಓಕೆಯಾಗಿದೆ.

ಈ ಹಿಂದೆ ಅಮೂಲ್ಯ, ದರ್ಶನ್ ಬ್ಯಾನರ್ ಚಿತ್ರದಲ್ಲೂ ನಟಿಸಿದ್ದಾರೆ. ದರ್ಶನ್ ಅಮೂಲ್ಯರನ್ನ ತಂಗಿಯ ರೀತಿಯಲ್ಲೇ ಆತ್ಮೀಯವಾಗಿದ್ದಾರೆ. ಹೀಗಾಗಿ ತೆರೆಯ ಮೇಲೆ ಸ್ಯಾಂಡಲ್‍ವುಡ್‍ನಲ್ಲಿ ದರ್ಶನ್ ಮತ್ತು ಅಮೂಲ್ಯ ಅಣ್ಣ-ತಂಗಿಯಾಗಿ ನಟಿಸಿದರೆ ಅದೊಂದು ಅದ್ಭುತವಾಗೋದರಲ್ಲಿ ಸಂದೇಹವಿಲ್ಲ.
ವೇದಾಲಂ ಚಿತ್ರದಲ್ಲಿ ಲಕ್ಷ್ಮಿ ಮೆನನ್ ನಿರ್ವಹಿಸಿದ್ದ ಪಾತ್ರವನ್ನು ಅಮೂಲ್ಯ ಇಲ್ಲಿ ನಿರ್ವಹಿಸಲಿದ್ದಾರೆ. ತಂಗಿಯ ಪಾತ್ರವಾದರೂ ಹೈಲೈಟ್ ಆಗಿರೋ ಪಾತ್ರ. ಹೀಗಾಗಿ ಅಮೂಲ್ಯ ಕಮ್‍ಬ್ಯಾಕ್ ಆಗೋಕೆ ಇದು ಒಳ್ಳೆ ಅವಕಾಶ. ಅಮೂಲ್ಯ ಕುಟುಂಬದಿಂದಲೂ ಮತ್ತೆ ಬಣ್ಣ ಹಚ್ಚೋಕೆ ಯಾವುದೇ ಅಭ್ಯಂತರವಿಲ್ಲ. ಹೀಗಾಗಿ ಅಮೂಲ್ಯ ಕೂಡ ಈಗಿನಿಂದಲೇ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.
