ಬಿಗ್ ಬಾಸ್ ಕನ್ನಡ ಸೀಸನ್ 12, Expect The Unexpected ಎಂಬ ಥೀಮ್ ನಲ್ಲಿ ಅತ್ಯಂತ ರೋಚಕವಾಗಿ ಸಾಗುತ್ತಾ ಬಂದಿದೆ. ಈಗ ಇನ್ನೊಂದು ಅನಿರೀಕ್ಷಿತವನ್ನು ಕೊಡಲಿದೆ ಬಿಗ್ ಬಾಸ್! ಅದುವೇ ಮಿಡ್ ಸೀಸನ್ ಫಿನಾಲೆ.
ಹೌದು. ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.
ಈ ಫಿನಾಲೆಯಲ್ಲಿ ಭಾರೀ `ಎಲಿಮಿನೇಷನ್’ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ. ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ.
ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೇ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆ ನೀಡಲಿದ್ದಾರಂತೆ. ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿದೆ. ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಈಗಿನಿಂದಲೇ ಕುತೂಹಲ ಮೂಡಿಸಿದೆ.
ಅದರಲ್ಲೂ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲೇ ಈ ಬಾರಿಯೂ ಬಿಬಿಕೆ ಮೂಡಿಬರ್ತಿರೋದು ವಿಶೇಷ. ವಿದಾಯ ಹೇಳಿದ್ದ ಕಿಚ್ಚ ಸುದೀಪ್ ತಾವೇ ಒಪ್ಪಿ ಮತ್ತೆ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸ್ಕೊಳ್ಳಲು ತಯಾರಿ ಮಾಡ್ಕೊಂಡಿದ್ದಾರೆ. ಯಾವಾಗ ಶುರುವಾಗುತ್ತೆ? ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ
ಈ ಬಾರಿ ಯಾವ ಬದಲಾವಣೆಯೊಂದಿಗೆ ಬರುತ್ತಿದೆ? ಎಲ್ಲಾ ಪ್ರಶ್ನೆಗಳಿಗೂ ಕೆಲವೇ ದಿನಗಳಲ್ಲಿ ಉತ್ತರ ಸಿಗೋದಂತೂ ಗ್ಯಾರಂಟಿ. ಏಕೆಂದರೆ ಇದೀಗ ಅಧಿಕೃತ ಫಸ್ಟ್ ಲುಕ್ ಪ್ರೋಮೋ (Bigg Boss Promo) ರಿಲೀಸ್ ಆಗಿದೆ. ಈ ಬಾರಿಯ ಲೋಗೋ ಕೂಡ ತುಂಬಾ ಸ್ಪೆಷಲ್ ಆಗಿದೆ. ಇದನ್ನೂ ಓದಿ: ದುನಿಯಾ ವಿಜಯ್ ಜೊತೆಯಾದ ಡೇರ್ ಡೆವಿಲ್ ಹೀರೋ
ರಿಯಾಲಿಟಿ ಶೋಗಳ ರಾಜಾ ಎಂದು ಕರೆಸಿಕೊಳ್ಳುವ ಬಿಗ್‌ಬಾಸ್ ಶೋ ಈ ಸಪ್ಟೆಂಬರ್ ಕೊನೆಯ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಸೀಸನ್ 12ರ ಫಸ್ಟ್ ಲುಕ್ ಪ್ರೋಮೋ ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಆದರೆ ಗಮನ ಸೆಳೆದಿದ್ದು ಅಡಿಬರಹ, ಈ ಸಲ ಕಿಚ್ಚು ಹೆಚ್ಚು ಎಂದು ಹೇಳುವ ಮೂಲಕ ಜಬರ್ದಸ್ತ್ ಕಂಟೆಸ್ಟಂಟ್‌ಗಳನ್ನ ಮನೆಯೊಳಗೆ ಕಳಿಸುವ ಸುಳಿವು ನೀಡಿದೆ ಬಿಗ್‌ಬಾಸ್ ಟೀಮ್. ಇದೇ ಕಿಚ್ಚು ಹೆಚ್ಚು ಅನ್ನೋದ್ರ ಸೂಚನೆ ಆಗಿರಬಹುದು.
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇದೀಗ ಕಂಟೆಸ್ಟಂಟ್‌ಗಳ ಆಯ್ಕೆಯ ಫಸ್ಟ್ ಲಿಸ್ಟ್ ಸಿದ್ಧವಾಗಿದ್ದು, ಕಿಚ್ಚ ಸುದೀಪ್ ಪ್ರೋಮೋ ಶೂಟ್‌ನಲ್ಲಿ ಶೀಘ್ರದಲ್ಲೇ ಭಾಗಿಯಾಗ್ತಾರೆ. ಬಿಗ್ ಹೌಸ್ ಕೂಡ ವಿನೂತನವಾಗಿ ಆಲ್ಟ್ರೇಷನ್ ಆಗ್ತಿದೆ. ಬಿಗ್ ಮನೆಯಲ್ಲಿ ಕಿಚ್ಚು ಹಚ್ಚಲು ಯಾರೆಲ್ಲಾ ಬರ್ತಾರೆ ಅನ್ನೋದ್ರ ಸುಳಿವು ಹಂತ ಹಂತವಾಗಿ ಸಿಗಲಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್
ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ ರಾಮಾಚಾರಿ (Ramachaari) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯು ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇದೇ ಗುರುವಾರ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ‘ರಾಮಾಚಾರಿ’ಯನ್ನು ಚೂರಿ ಚುಚ್ಚಿ ಕೊಲ್ಲುವ ಮತ್ತು ಆ ನಂತರದ ದಿನಗಳಲ್ಲಿ ರಾಮಾಚಾರಿಯ ಸಾವಿನ ಪರಿಣಾಮದಿಂದ ಆಗುವ ಎಪಿಸೋಡ್ ಗಳು ಪ್ರಸಾರವಾಗಲಿವೆ.
‘ರಾಮಾಚಾರಿ’ ಧಾರಾವಾಹಿಯ ವಿಲನ್ ಗಳ ಗ್ಯಾಂಗ್ – ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ. ಇವರೆಲ್ಲ ಸೇರಿ ರಾಮಾಚಾರಿಯನ್ನು ಕೊಲ್ಲುವ ಯೋಜನೆಯನ್ನು ರೂಪಿಸುತ್ತಾರೆ. ಅವನನ್ನು ಕಟ್ಟಡವೊಂದಕ್ಕೆ ಮೋಸದಿಂದ ಕರೆದೊಯ್ಯುತ್ತಾರೆ. ಅಲ್ಲಿ ಒಂದು ನಾಟಕೀಯ ಮತ್ತು ತೀವ್ರ ಹೋರಾಟದ ದೃಶ್ಯ ಬಿಚ್ಚಿಕೊಳ್ಳುತ್ತದೆ. ಇದನ್ನೂಓದಿ: ಇಂದು ಜಾಮೀನು ಭವಿಷ್ಯ; ಕೋರ್ಟ್ ತೀರ್ಪಿಗೂ ಮುನ್ನವೇ ರಾಯರ ಮೊರೆ ಹೋದ ಪವಿತ್ರಾಗೌಡ
ರಾಮಾಚಾರಿ ಎಷ್ಟೇ ಪ್ರತಿರೋಧ ತೋರಿಸಿದರೂ ಗ್ಯಾಂಗ್ ಅವನನ್ನು ಚೂರಿ ಚುಚ್ಚಿ ಕೊಲ್ಲಲು ಯಶಸ್ವಿಯಾಗುತ್ತದೆ. ತಮ್ಮ ಶತ್ರುವನ್ನು ನಾಶಪಡಿಸಿದ ಖುಷಿಯಲ್ಲಿ ಅವರು ಸಂಭ್ರಮಿಸುತ್ತಾರೆ. ಈ ನಡುವೆ ಚಾರು, ಉಳಿದ ಕುಟುಂಬ ಮತ್ತು ಅಗ್ರಹಾರದ ಜನರು ತಮ್ಮ ಪ್ರೀತಿಯ ರಾಮಾಚಾರಿಯ ಸಾವಿನ ಶೋಕಾಚರಣೆಯಲ್ಲಿರುತ್ತಾರೆ.
ಕಲರ್ಸ್ ಕನ್ನಡ(Colors kannada), ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ‘ನಂದ ಗೋಕುಲ’ ಮತ್ತು ‘ಭಾರ್ಗವಿ LL.B’ ಜನರ ಮನಸನ್ನು ಗೆದ್ದಿರುವ ಇತ್ತೀಚಿನ ಧಾರಾವಾಹಿಗಳು. ‘ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ’ಯನ್ನು ಹೇಳುವ ನಂದ ಗೋಕುಲ (Nandagokula) ಈಗಾಗಲೇ ಹಲವಾರು ಸಂಚಿಕೆಗಳಿಂದ ತನ್ನ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಹಾಗೆಯೇ ‘ಸ್ವಾಭಿಮಾನದ ಮಹಾ ಸಂಘರ್ಷ’ದ ಕತೆ ಹೇಳುವ ಭಾರ್ಗವಿ ಎಲ್ ಎಲ್ ಬಿ (Bhargavi LLB) ಜನಮನ ಗೆಲ್ಲುತ್ತ ಟಿ ಆರ್‌ಪಿ ಹೆಚ್ಚಿಸಿಕೊಂಡಿದೆ. ರಾತ್ರಿ 8:30 ಕ್ಕೆ ಪ್ರಸಾರವಾಗುವ ‘ಭಾರ್ಗವಿ LL.B’’ ರಾತ್ರಿ 9ಕ್ಕೆ ಪ್ರಸಾರವಾಗುವ ‘ನಂದ ಗೋಕುಲ’ ಇವೆರಡೂ ಧಾರಾವಾಹಿಗಳ ‘ಮಹಾ ಸಂಗಮ’ದ ಪ್ರೋಮೋ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ.
ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷ ದಿನದಿಂದ ದಿನಕ್ಕೆ ಏರುವೇಗದಲ್ಲಿ ಸಾಗುತ್ತಿದೆ. ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟಿನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆಪಿ ಪಾಟೀಲ್. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಪ್ರಭಾವ ಮತ್ತು ನಿಯಂತ್ರಕ ಶಕ್ತಿ. ಇದರ ತದ್ವಿರುದ್ಧ ಭಾರ್ಗವಿ. ನ್ಯಾಯ ದೊರಕಿಸಿ ಕೊಡಬೇಕಾದ ಸಂಧರ್ಭ ಬಂದಾಗ ಅವಳು ಯಾರನ್ನಾದರೂ ಎದುರಿಸಬಲ್ಲವಳು. ಅಧಿಕಾರ, ಹಣ, ಪ್ರಭಾವ ಇದ್ಯಾವುದಕ್ಕೂ ಕಿಂಚಿತ್ತೂ ಬೆಲೆ ಕೊಡದ ಅವಳು ನ್ಯಾಯಪರ, ಯಾರಿಗೂ ಹೆದರದ ದಿಟ್ಟ ಯುವತಿ. ತನ್ನ ಪ್ರೀತಿಯ ಅಪ್ಪ ಅಮ್ಮ ಮತ್ತು ತನ್ನ ಪುಟ್ಟ ಕುಟುಂಬವೇ ಅವಳ ಜೀವನ. ಭಾರ್ಗವಿಯ ಅಪ್ಪ ರವೀಂದ್ರ ಭಟ್ಕಳ್ ಕೂಡಾ ವಕೀಲನಾಗಿದ್ದು ವೃತ್ತಿಯಲ್ಲಿ ಯಶಸ್ಸು ಕಂಡಿರುವುದಿಲ್ಲ. ಮಗಳ ಕನಸಿಗೆ ತಂದೆ ಪೂರ್ತಿಯಾಗಿ ಬೆಂಬಲ ನೀಡಿದರೂ ಅಮ್ಮನಿಗೆ ಮಾತ್ರ ಲಾಯರ್ ವೃತ್ತಿ ಅನಗತ್ಯ ತೊಂದರೆಗಳನ್ನು ತರಬಹುದು ಎಂಬ ಆತಂಕ. ಮದುವೆಯಾಗಿ ಅವಳು ಸುಖವಾಗಿದ್ದರೆ ಸಾಕು ಅನ್ನುವುದು ಅಮ್ಮನ ಬಯಕೆ. ಇದನ್ನೂಓದಿ: ದರ್ಶನ್ ಕೇಸ್ –ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಗೈರು
ಭಾರ್ಗವಿಯ ಜೀವನ ಅನಿರೀಕ್ಷಿತ ತಿರುವು ಪಡೆಯುವುದು ಅವಳು, ಜೆಪಿ ಪಾಟೀಲ್ ನ ಮಗ ಅರ್ಜುನ್ ಪಾಟೀಲ್ ನನ್ನು ಭೇಟಿ ಮಾಡಿದಾಗ. ಶ್ರೀಮಂತ ಕುಟುಂಬದಲ್ಲಿ ಬೆಳೆದರೂ ಸಹೃದಯಿಯಾಗಿರುವ ಅರ್ಜುನ್ ಭಾರ್ಗವಿಯನ್ನು ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ತನ್ನ ತಂದೆ ವಿರುದ್ಧ ಹೋರಾಟ ಮಾಡುತ್ತಿರುವ ವಕೀಲೆ ಎಂಬ ಅರಿವಿರದ ಅರ್ಜುನ್ ಭಾರ್ಗವಿಗೆ ಹತ್ತಿರವಾಗುತ್ತಾನೆ. ಮಹಾ ಸಂಗಮದಲ್ಲಿ ಹೊಸ ದಿಕ್ಕು ‘ನಂದ ಗೋಕುಲ’ದ ನಾಯಕ ‘ವಲ್ಲಭ’ ಭಾರ್ಗವಿಗೆ ಅರ್ಜುನ್ ಮೇಲೆ ಇರುವ ಪ್ರೀತಿಯನ್ನು ಅವಳಿಗೆ ತಿಳಿಸಿಕೊಡುತ್ತಾನೆ – ಮಹಾ ಸಂಗಮದಲ್ಲಿ.
ಹಾಗೆಯೇ ಅಪ್ಪನ ಮಾತಿನಿಂದ ಬೇಸರಗೊಂಡು ‘ನಂದ ಗೋಕುಲ’ವನ್ನು ಬಿಟ್ಟಿರುವ ವಲ್ಲಭನಿಗೆ ತಂದೆ ತಾಯಿಯ ಮಹತ್ವವನ್ನು ತಿಳಿಸಿ ಅವನು ಮನೆಗೆ ಮರಳುವಂತೆ ಭಾರ್ಗವಿ ಪ್ರೇರೇಪಣೆ ನೀಡುತ್ತಾಳೆ – ಮಹಾ ಸಂಗಮದಲ್ಲಿ. ಹೀಗೆ ಒಬ್ಬರಿಗೊಬ್ಬರು ದಿಕ್ಕು ತೋರಿಸುವ ಈ ‘‘ಭಾರ್ಗವಿ LL. B.’ ನಂದ ಗೋಕುಲ’ ಮಹಾ ಸಂಗಮವು ಕಲರ್ಸ್ ಕನ್ನಡದಲ್ಲಿ ಜುಲೈ 21ರಿಂದ ಜುಲೈ 25 ರ ವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಒಂದು ಗಂಟೆಯ ಈ ಸಂಚಿಕೆಗಳು ಪ್ರೇಕ್ಷಕರಿಗೆ ಇನ್ನಷ್ಟು ಪ್ರಿಯವಾಗುವುದರಲ್ಲಿ ಅನುಮಾನವಿಲ್ಲ.
ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿದೆ. ಅಂತಹ ಜನ ಮೆಚ್ಚಿದ ಧಾರಾವಾಹಿಯಲ್ಲಿ `ನಂದಗೋಕುಲ’ ಸೀರಿಯಲ್ ಕೂಡಾ ಒಂದು. `ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕಥೆ’ಯನ್ನು ಹೇಳುವ `ನಂದಗೋಕುಲ’ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಹೊಸ ತಿರುವುಗಳೊಂದಿಗೆ ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದೆ.
ನಂದಕುಮಾರ್ ಒಬ್ಬ ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸದಿಂದ ಕೂಡಿದ ವ್ಯಕ್ತಿ, `ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿ ನಡೆಸುವ ನಂದನಿಗೆ ತನ್ನ ಕುಟುಂಬವೆಂದರೆ ಪ್ರಾಣ. ಆದರೆ ಎದುರು ಮನೆಯಲ್ಲೇ ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಕುಟುಂಬವೆಂದರೆ ನಂದಕುಮಾರ್‌ಗೆ ಕೆಂಡದಂಥ ಕೋಪ, ವೈಷಮ್ಯ. ತನ್ನ ಹೆಂಡತಿ ಗಿರಿಜಾಳ ಸಹೋದರರೇ ಇವರಿಬ್ಬರೂ! ಈ ದ್ವೇಷಕ್ಕೆ ಕಾರಣ ನಂದಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ನಡುವೆ ಅಂದಿನಿಂದಲೂ ಆಕ್ರೋಶ. ಇದನ್ನೂ ಓದಿ: 77 ಲಕ್ಷ ವಂಚನೆ – ಆಲಿಯಾ ಭಟ್ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಅರೆಸ್ಟ್
ನಂದಕುಮಾರ್ ಮತ್ತು ಗಿರಿಜಾರ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ಅನನ್ಯಾ ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಬೆಳೆದವರು. ತನ್ನ ಮಕ್ಕಳು ತನ್ನಂತೆ ಪ್ರೀತಿಸಿ ಮದುವೆಯಾದರೆ ನೋವನುಭವಿಸಬೇಕಾಗುತ್ತದೆ. ನೆಮ್ಮದಿಯೂ ಇರುವುದಿಲ್ಲ ಎಂದು ನಿರ್ಧರಿಸಿ ಮಕ್ಕಳಿಂದ `ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ!’ ಎಂದು ನಂದಕುಮಾರ್ ಭಾಷೆ ತೆಗೆದುಕೊಂಡಿರುತ್ತಾನೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಯಾ ಲುಕ್.. ಬ್ಯೂಟಿಫುಲ್..!
ಆದರೆ ಎರಡನೇ ಮಗ ಕೇಶವ, ಮೀನಾಳನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಮೀನಾಳ ತಂದೆ ಬೇರೊಬ್ಬ ಹುಡುಗನ ಜೊತೆ ಮದುವೆ ಫಿಕ್ಸ್ ಮಾಡುತ್ತಾನೆ. ಇತ್ತ ನಂದಕುಮಾರ್‌ಗೂ ಮಗ ಕೇಶವನ ಪ್ರೀತಿಯ ವಿಷಯ ಗೊತ್ತಾಗುತ್ತದೆ. ದೊಡ್ಡ ಮಗ ಮಾಧವನಿಗೆ ಹೆಣ್ಣು ನೋಡುತ್ತಿದ್ದಾಗ ಕೇಶವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿ ಒಂದೇ ಮನೆಯ ಅಕ್ಕ ತಂಗಿಯರನ್ನು ನೋಡಿ ಮದುವೆ ಕೂಡಾ ಫಿಕ್ಸ್ ಆಗುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನಾಳ ಮದುವೆ ಇನ್ನೊಬ್ಬ ಹುಡುಗನ ಜೊತೆ ನೆರವೇರುತ್ತಿರುತ್ತದೆ. ಆಗ ನಂದಕುಮಾರ್‌ನ ಮೂರನೇ ಮಗ ವಲ್ಲಭ ತನ್ನ ಅಣ್ಣನ ಪ್ರೀತಿಯನ್ನು ಒಂದು ಮಾಡಲು ನಿರ್ಧರಿಸುತ್ತಾನೆ. ಬೇಸರದಲ್ಲಿಯೇ ಮದುವೆ ಮಂಟಪಕ್ಕೆ ಹೋಗಲು ಸಜ್ಜಾಗಿರೋ ಮೀನಾಳನ್ನು ಯಾರ ಕಣ್ಣಿಗೂ ಬೀಳದಂತೆ ಅಲ್ಲಿಂದ ಕರೆದೊಯ್ಯುತ್ತಾನೆ. ಇದನ್ನೂ ಓದಿ: `ನಾನು ಪಾರ್ಟ್ ಟೈಂ ನಟಿ’ ಎಂದ ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ..? ಫುಲ್‌ಟೈಂ ಏನ್ ಗೊತ್ತಾ?
ವಲ್ಲಭನಿಗೆ ಕೇಶವನ ಮದುವೆ ಮೀನಾಳ ಜೊತೆ ಮಾಡಿಸಬೇಕಿದೆ. ವಲ್ಲಭ ಅಣ್ಣನ ಮದುವೆಯನ್ನು ಮಾಡಿಸಲು ಯಶಸ್ವಿಯಾಗುತ್ತಾನಾ? ತನ್ನ ಮಕ್ಕಳು ತಾನು ಹಾಕಿದ ಗೆರೆ ದಾಟಲ್ಲ ಎಂದು ಭಾವಿಸಿರುವ ನಂದಕುಮಾರ್‌ಗೆ ತನ್ನ ಮಗ ಕೇಶವ ಪ್ರೀತಿಸಿ ಮದುವೆಯಾದರೆ ಆಗುವ ಆಘಾತವೇನು? ಅಪ್ಪಿತಪ್ಪಿ ಮದುವೆಯಾದಲ್ಲಿ ಆ ಮದುವೆಯನ್ನು ಒಪ್ಪಲು ಸಾಧ್ಯವೇ? ವರ್ಷಾನುಗಟ್ಟಲೆಯಿಂದ ಬೆಳೆಸಿಕೊಂಡು ಬಂದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲನ್ನು ನಂದಕುಮಾರ್ ಹೇಗೆ ಎದುರಿಸುತ್ತಾನೆ?
`ನಂದ ಗೋಕುಲ’ದಂಥ ಕುಟುಂಬ ತಮ್ಮದಿರಬೇಕು. ಎಲ್ಲರೂ ಜೊತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದಕುಮಾರ್ ಕನಸು ತನ್ನ ಮಕ್ಕಳ ಆಯ್ಕೆಯಿಂದ ಏರುಪೇರಾಗುತ್ತದೆಯೇ? ಚೆಂದದ ಮನಸ್ಸುಗಳು ಸೇರಿದ ತುಂಬಿದ ಮನೆ ಜೇನಿನ ಗೂಡಾಗಿ ಇರುತ್ತದೆಯೇ? ಭೂಮಿಗೆ ಒಟ್ಟಿಗೆ ಬಂದವರು ಒಗ್ಗಟ್ಟಾಗಿರುವರೇ? ಭಿನ್ನ ಅಭಿರುಚಿ ಇದ್ದವರು ಒಂದೇ ಸೂರಿನಡಿ ಇರಬಲ್ಲರೇ? ಒಂದೇ ಮನಸ್ಸಿನ ಮಂದಿ ಮನಸ್ಸು ಮುರಿದು ಹೋಗುವಂತ ಸ್ಥಿತಿಗೆ ಬಂದರೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇದೇ ವಾರ `ನಂದಗೋಕುಲ’ ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ನಯನತಾರಾಗೆ ನೋಟಿಸ್ : 5 ಕೋಟಿ ರೂಪಾಯಿಗೆ ಡಿಮಾಂಡ್
ಬಿಗ್‌ಬಾಸ್ ಸೀಸನ್ 12ಕ್ಕೆ (Bigg Boss Kannada 12) ಕೌಂಟ್‌ಡೌನ್ ಶುರುವಾಗ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕನ್ನಡ ಬಿಗ್‌ಬಾಸ್ ಶುರುವಾಗಲಿದೆ. ಈ ಬಾರಿಯ ಬಿಗ್‌ಬಾಸ್‌ನ್ನು ಹೋಸ್ಟ್ ಮಾಡಲು ಕಿಚ್ಚ ಒಪ್ಪಿಕೊಂಡಿದ್ದಾರೆ. ಈ ಗುಡ್‌ನ್ಯೂಸ್ ಕೇಳಿ ಸುದೀಪ್ (Kichcha Sudeep ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಮತ್ತೊಂದು ಕಡೆ ಕಾಂಟ್ರವರ್ಸಿ ಕಿಂಗ್/ಕ್ವೀನ್‌ಗಳನ್ನ ಬಿಗ್‌ಬಾಸ್‌ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ. ಇನ್ನು ಕಂಟೆಸ್ಟೆಂಟ್ ಆಯ್ಕೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ತಿಳಿಸಲಾಗುತ್ತೆ ಎಂದಿದೆ ಕಲರ್ಸ್ ತಂಡ. ಇದನ್ನೂ ಓದಿ: BBK 12 | ʻಬಿಗ್ ಬಾಸ್ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್
ಈ ಬಾರಿ ಎರಡು ರೀತಿಯ ಕಂಟೆಸ್ಟೆಂಟ್‌ಗಳು ಇದ್ದಾರೆ. ಒಬ್ಬರು ಬುದ್ದಿವಂತರು, ಮತ್ತೊಬ್ಬರು ಅತೀ ಬುದ್ಧಿವಂತರು. ಬಿಗ್‌ಬಾಸ್ ಶೋ ಜೊತೆಗೆ ವರ್ಷಕ್ಕೆರಡು ಸಿನಿಮಾ ಮಾಡುವ ಡೆಡಿಕೇಶನ್ ಬಗ್ಗೆ ಅಭಿಪ್ರಾಯವನ್ನ ರಿಯಾಲಿಟಿ ಶೋ ಆಯೋಜಕರು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 12ರ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿರುವುದು, ಸುದೀಪ್ ಅಭಿಮಾನಿಗಳಿಗೆ ಡಬಲ್ ಹ್ಯಾಪಿ ನೀಡಿದೆ. ಇದನ್ನೂ ಓದಿ: ದಿ ರೈಸ್ ಆಫ್ ಅಶೋಕ: ಡಬ್ಬಿಂಗ್ ಮುಗಿಸಿದ ನೀನಾಸಂ ಸತೀಶ್, ಸಪ್ತಮಿ
ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ (Bigg Boss Kannada) 11 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿದೆ. ಇದೀಗ ಸೀಸನ್ 12ಕ್ಕೆ ಕೆಲವೇ ತಿಂಗಳು ಬಾಕಿ ಇರೋವಾಗಲೇ ಬಿಗ್‌ಬಾಸ್ ತಂಡದ ಕಡೆಯಿಂದ ಹಾಗೂ ಕಿಚ್ಚ ಸುದೀಪ್ ಅವರಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಹೌದು, ಕಿಚ್ಚ ಸುದೀಪ್ (Kichcha Sudeep) ಅವರೇ 12ನೇ ಸೀಸನ್‌ಗೂ ನಿರೂಪಣೆ ಮಾಡುವುದಾಗಿ ಸ್ಪಷ್ಟನೆ ಸಿಕ್ಕಿದೆ. ಬಿಗ್‌ಬಾಸ್ ಸಂಯೋಜಕರು ಹಾಗೂ ಕಲರ್ಸ್ ತಂಡ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.
11ನೇ ಸೀಸನ್ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್ ವಿದಾಯ ಹೇಳಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚೆಗಳು ಶುರುವಾಗಿದ್ವು, ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಕಾದು ನೋಡಿ ಅನ್ನೋ ಅಭಿಪ್ರಾಯ ಹಂಚಿಕೊಂಡಿದ್ರು. ಇದೀಗ ಮತ್ತೆ 12ನೇ ಸೀಸನ್ ನಡೆಸಿಕೊಡುವ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಕಿಚ್ಚ.
ಕಿಚ್ಚ ಸುದೀಪ್ ಇಲ್ಲದೇ ಬಿಗ್‌ಬಾಸ್ ನಿರೂಪಣೆಯನ್ನ ಊಹೆ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ಕಿಚ್ಚ ಸುದೀಪ್ ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮವನ್ನ ಮುಂದುವರಿಸಿದ್ದಾರೆ.
ಕನ್ನಡದ ಬಿಗ್ ಬಾಸ್ 11ರ ಜೊತೆ ಹಲವು ಸೀರಿಯಲ್‌ಗಳ ಮೂಲಕ ವಾಹಿನಿ ಮನರಂಜನೆ ನೀಡುತ್ತಿದೆ. ಹೊಸ ಕಥೆಗಳನ್ನು ಕೊಡುವ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದೆ. ಹೀಗಿರುವಾಗ ಪ್ರೇಕ್ಷಕರಿಗಾಗಿ ವಾಹಿನಿ ಸಿಹಿಸುದ್ದಿ ನೀಡಿದೆ.
ಇಷ್ಟು ದಿನ ವಾಹಿನಿಯ ಸೀರಿಯಲ್‌ಗಳು 7 ದಿನಗಳು ಪ್ರಸಾರ ಕಾಣುತ್ತಿರಲಿಲ್ಲ. ಆದರೆ ಇನ್ಮೇಲೆ ವೀಕ್ಷಕರ ನೆಚ್ಚಿನ ಶೋಗಳು ವಾರದ ಏಳು ದಿನಗಳು ಪ್ರಸಾರವಾಗಲಿದೆ. ಈ ಗುಡ್ ನ್ಯೂಸ್ ಅನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ.
ಕಾರ್ತಿಕ್ ಅತ್ತಾವರ್, ಅಮೂಲ್ಯ ಗೌಡ ನಟನೆಯ ‘ಶ್ರೀಗೌರಿ’ (Shree Gowri), ಶಮಂತ್ ಮತ್ತು ಭೂಮಿಕಾ ನಟನೆಯ ‘ಲಕ್ಷ್ಮಿ ಬಾರಮ್ಮ’, ದಿವ್ಯಾ ಉರುಡುಗ ನಟನೆಯ ‘ನಿನಗಾಗಿ’, ‘ಕರಿಮಣಿ’, ‘ದೃಷ್ಟಿ ಬೊಟ್ಟು’ ಹೀಗೆ ಪ್ರೇಕ್ಷಕರ ಇಷ್ಟದ ಸೀರಿಯಲ್‌ಗಳನ್ನು ವಾರ ಪೂರ್ತಿ ನೋಡುವ ಅವಕಾಶ ಸಿಗುತ್ತಿದೆ. ಈ ಮೂಲಕ ವಾಹಿನಿ ಗುಡ್ ನ್ಯೂಸ್ ಕೊಟ್ಟಿದೆ.
ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮೊನ್ನೆಯಷ್ಟೇ ಬಿಗ್ ಬಾಸ್ ತಯಾರಿ ಕುರಿತು ಸಣ್ಣದೊಂದು ಅಪ್ ಡೇಟ್ ಕೊಟ್ಟಿದ್ದರು. ಹೊಸ ಮನೆ ನಿರ್ಮಾಣ ಆಗುತ್ತಿರುವ ಮಸುಕಾದ ಫೋಟೋವೊಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲಕ್ಕೆ ಕಾರಣವಾಗಿದ್ದರು. ಇದೀಗ ಸದ್ದಿಲ್ಲದೇ ಪ್ರೊಮೋ ಶೂಟ್ ಕೂಡ ಮುಗಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಪ್ರೊಮೋ ಶೂಟ್ ಮುಗಿದಿದ್ದು, ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಸುದೀಪ್ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಬಿಗ್ ಬಾಸ್ 9ರ ಪ್ರೋಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಸ್ವತಃ ಪರಮೇಶ್ವರ ಗುಂಡ್ಕಲ್ ಅವರೇ ಈ ಪ್ರೊಮೋವನ್ನು ಚಿತ್ರೀಕರಿಸಿದ್ದು ವಿಶೇಷ. ಈ ಬಾರಿಯ ಬಿಗ್ ಬಾಸ್ ವಿಶೇಷ ಏನು? ಯಾವ ಯಾವ ಕ್ಷೇತ್ರದ ಜನರು ಭಾಗಿಯಾಗಲಿದ್ದಾರೆ? ಸೀಸನ್ 8ರಲ್ಲಿ ಏನೆಲ್ಲ ನೋಡಬಹುದು ಎನ್ನುವ ಕುರಿತಾದ ಸ್ಕ್ರಿಪ್ಟ್ ಗೆ ಕಿಚ್ಚ ಆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ
ಬಿಗ್ ಬಾಸ್ ಸೀಸನ್ 9ರ ಪ್ರೊಮೋಗಾಗಿ ಕಿಚ್ಚ ಸುದೀಪ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಳಿ ಅಂಗಿ, ಕರಿಪ್ಯಾಂಟು, ಮೇಲೊಂದು ಕೋಟು ಹಾಗೂ ವಿಶೇಷ ಹೇರ್ ಸ್ಟೈಲ್ ನಲ್ಲಿ ಈ ಬಾರಿ ಪ್ರೊಮೋ ಶೂಟ್ ಮಾಡಲಾಗಿದೆ. ಮೊದಲು ಓಟಿಟಿಯಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಬಾರಿಯ ಬಿಗ್ ಬಾಸ್ ಪ್ರಸಾರವಾಗಲಿದ್ದು, ಅದಕ್ಕೆ ತಕ್ಕಂತೆ ಪ್ರೊಮೋಗಳನ್ನು ಶೂಟ್ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು. ಈ ಎರಡಲ್ಲೂ ಕಿಚ್ಚನ ನಿರೂಪಣೆಯೇ ಇರಲಿದೆಯಂತೆ.
ಎರಡು ವೇದಿಕೆಯಲ್ಲಿ ಈ ಬಾರಿ ಬಿಗ್ ಬಾಸ್ ಮೂಡಿ ಬರಲಿದ್ದು, ಮೊದಲು ವೂಟ್ಸ್ ನಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೂಟ್ಸ್ ನಲ್ಲಿ ಗೆದ್ದವರಿಗೆ ಕಲರ್ಸ್ ವಾಹಿನಿಯಲ್ಲಿ ನಡೆಯುವ ಬಿಗ್ ಬಾಸ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದ್ದು, ವಾಹಿನಿಯು ಅದನ್ನು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಹೇಳಲಿದೆಯಂತೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮತ್ತೆ ಆರಂಭವಾಗುತ್ತಿದೆ. ಸೀಸನ್ 9ಕ್ಕಾಗಿ ತೆರೆ ಮರೆಯಲ್ಲಿ ಕೆಲಸಗಳು ಆರಂಭವಾಗಿದ್ದು, ಈ ಬಾರಿಯೂ ಹತ್ತು ಹಲವು ವಿಶೇಷಗಳಿಂದ ಕೂಡಿರಲಿದೆ. ಪ್ರತಿ ಸಲವೂ ಒಂದೇ ಒಂದು ಬಿಗ್ ಬಾಸ್ ಕನ್ನಡದಲ್ಲಿ ನಡೆಯುತ್ತಿತ್ತು. ಈ ಬಾರಿ ರೆಗ್ಯುಲರ್ ಬಿಗ್ ಬಾಸ್ ಜೊತೆ ಮಿನಿ ಬಿಗ್ ಬಾಸ್ ಕೂಡ ಪ್ರಸಾರವಾಗಲಿದೆಯಂತೆ. ಹಾಗಾಗಿ ಎರಡೆರಡು ಬಿಗ್ ಬಾಸ್ ಗಳನ್ನು ಈ ಬಾರಿ ವೀಕ್ಷಿಸಬಹುದು.
ಓಟಿಟಿಗಾಗಿ ಒಂದು ಬಿಗ್ ಬಾಸ್ ನಡೆದರೆ ಮತ್ತೊಂದು ರೆಗ್ಯುಲರ್ ಕಾರ್ಯಕ್ರಮ ಇದ್ದೇ ಇರುತ್ತದೆಯಂತೆ. ಮಿನಿ ಬಿಗ್ ಬಾಸ್ ಓಟಿಟಿಗಾಗಿ ಆದರೆ, ಮತ್ತೊಂದು ಟಿವಿಯಲ್ಲಿ ಪ್ರಸಾರವಾಗಲಿದೆಯಂತೆ. ಮಿನಿ ಬಿಗ್ ಬಾಸ್ ನಲ್ಲಿ ಪಾಲ್ಗೊಂಡು ಇಬ್ಬರಿಗೆ ರೆಗ್ಯುಲರ್ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಎರಡೂ ಶೋಗಳಿಗೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಮುಗ್ದ ಗಂಡದಿಂದರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?
ಈಗಾಗಲೇ ಬಿಗ್ ಬಾಸ್ ಮನೆ ಒಳಗೆ ಕಳುಹಿಸಲು ಸ್ಪರ್ಧಿಗಳ ಹುಡುಕಾಟ ಆರಂಭವಾಗಿದ್ದು, ರೆಗ್ಯುಲರ್ ಬಿಗ್ ಬಾಸ್ ಗಿಂತ ಮಿನಿಗೆ ಸ್ಪೆಷಲ್ ಸ್ಪರ್ಧಿಗಳು ಇರಲಿದ್ದಾರಂತೆ. ವಿವಿಧ ಕ್ಷೇತ್ರಗಳಲ್ಲಿ ಫೇಮಸ್ ಆಗಿರುವವರನ್ನು ಹುಡುಕಲಾಗುತ್ತಿದ್ದು, ಈಗಾಗಲೇ ಕೆಲವರು ಹೆಸರು ಕೂಡ ಕೇಳಿ ಬರುತ್ತಿವೆ. ಎರಡೆರಡು ಬಿಗ್ ಬಾಸ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಅವಕಾಶ ಸಿಗಲಿದೆ ಎನ್ನುವುದಂತೂ ಪಕ್ಕಾ ಆಗಿದೆ.
Live Tv
[brid partner=56869869 player=32851 video=960834 autoplay=true]