Tag: colonel manpreet singh

  • ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ನವದಹೆಲಿ: ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ (Colonel Manpreet Singh) ಪಾರ್ಥಿವ ಶರೀರಕ್ಕೆ ಅವರ 6 ವರ್ಷದ ಪುತ್ರ ಸೆಲ್ಯೂಟ್‌ ಮಾಡಿದ ಮನಕಲಕುವ ದೃಶ್ಯ ವೈರಲ್‌ ಆಗಿದೆ.

    ಕಾಶ್ಮೀರದ (Jammu Kashmir) ಅನಂತ್‌ನಾಗ್‌ನಲ್ಲಿ (Anantnag Encounter) ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ಪೊಲೀಸ್‌ ಅಧಿಕಾರಿ ಹುತಾತ್ಮರಾದರು. ಅವರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದಲ್ಲಿ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಅವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಮನೆಗೆ ತರುವ ವೇಳೆ ಅವರ 6 ವರ್ಷದ ಪುತ್ರ ಮಿಲಿಟರಿ ಡ್ರೆಸ್‌ನಲ್ಲಿ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದ. ಪುಟ್ಟ ಬಾಲಕನ ಪಕ್ಕದಲ್ಲಿ ಆತನಿಗಿಂತ 2 ವರ್ಷ ಚಿಕ್ಕವಳಾದ ಸಹೋದರಿ ಕೂಡ ನಿಂತಿದ್ದಳು. ಆಕೆಯೂ ಅಣ್ಣನಂತೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದಳು.

    ಇಬ್ಬರಿಗೂ ಕುಟುಂಬಕ್ಕೆ ಸಂಭವಿಸಿದ ದುರಂತದ ಬಗ್ಗೆ ತಿಳಿದಿರಲಿಲ್ಲ. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಈ ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿ ತಂದೆಯ ಪಾರ್ಥಿವ ಶರೀರ ದರ್ಶನ ಮಾಡಿಸಿದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ತೀವ್ರ ದುಃಖದಿಂದಾಗಿ ಬಳಲಿದ್ದರು.

    19 ರಾಷ್ಟ್ರೀಯ ರೈಫಲ್ಸ್‌ನ (19 ಆರ್‌ಆರ್) ಕಮಾಂಡಿಂಗ್ ಆಫೀಸರ್ ಮತ್ತು ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತ ಕರ್ನಲ್ ಮನ್‌ಪ್ರೀತ್ ಸಿಂಗ್ (41) ಬುಧವಾರ ರಾತ್ರಿ ಗುಂಡಿನ ದಾಳಿಯಿಂದಾಗಿ ಹುತಾತ್ಮರಾಗಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಹಾಗೂ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. ಕರ್ನಲ್ ಮನ್‌ಪ್ರೀತ್‌ ಸಿಂಗ್‌, ಮೇಜರ್ ಆಶಿಶ್ ಧೋಂಚಕ್‌, ಡಿಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

    ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅನಂತನಾಗ್ (AnanthNag) ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ.

    ಭಯೋತ್ಪಾದಕರ ಗುಂಡೇಟಿಗೆ ಭಾರತೀಯ ಯೋಧ ಕರ್ನಲ್ ಮನ್‍ಪ್ರೀತ್ ಸಿಂಗ್ ಹಾಗೂ ಮೇಜರ್ ಆಶಿಶ್ ಧೋಂಚಕ್ ಹುತಾತ್ಮರಾಗಿದ್ದಾರೆ. ಈ ಕುರಿತು ಜನರಲ್ ವಿಕೆ ಸಿಂಗ್ ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಕರ್ನಲ್ ಮನ್‍ಪ್ರೀತ್ ಸಿಂಗ್ ಅವರು 19 ರಾಷ್ಟ್ರೀಯ ರೈಫಲ್ಸ್ (19 ಖಖ) ಘಟಕದ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಅನಂತನಾಗ್‍ನ ಕೋಕರ್‍ನಾಗ್ ಪ್ರದೇಶದ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರು ನಡೆಸಿದ ಭಾರೀ ಗುಂಡಿನ ದಾಳಿಯ ನಡುವೆಯೇ ಅಧಿಕಾರಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಸೇನೆಯ 15 ಕಾಪ್ರ್ಸ್ ಕಮಾಂಡರ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸೇರಿದಂತೆ ಉನ್ನತ ಅಧಿಕಾರಿಗಳು ಎನ್‍ಕೌಂಟರ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮತ್ತು ಮೃತದೇಹಗಳ ತೆರವು ಕಾರ್ಯದ ಮೇಲ್ವಿಚಾರಣೆ ಮಾಡಿದ್ದಾರೆ..

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]