Tag: colombia

  • ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

    ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

    ಬೊಗೋಟಾ: ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ (Colombian Senator Miguel Uribe) ಮೇಲೆ ಶನಿವಾರ ಗುಂಡಿನ (Shot) ದಾಳಿ ನಡೆದಿದೆ.

    ಬೊಗೋಟಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮಿಗುಯೆಲ್ ಉರಿಬೆ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಉರಿಬೆ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ದಕ್ಷಿಣ ಅಮೆರಿಕ ಖಂಡದಲ್ಲಿರುವ ಕೊಲಂಬಿಯಾದಲ್ಲಿ 2026ರಲ್ಲಿ ಚುನಾವಣೆ (Election) ನಡೆಯಲಿದೆ. ಮಿಗುಯೆಲ್ ಉರಿಬೆ ಸೆನೆಟರ್‌ ಆಗಿದ್ದು ಬಲಪಂಥೀಯ ರಾಜಕಾರಣಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

    ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಓರ್ವ ಶಂಕಿತನನ್ನು ಬಂಧಿಸಲಾಗಿದ್ದು, ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ.

    ಉರಿಬೆ ಕೊಲಂಬಿಯಾದ ಪ್ರಮುಖ ಕುಟುಂಬದಿಂದ ಬಂದವರಾಗಿದ್ದು, ದೇಶದ ಲಿಬರಲ್ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ತಂದೆ ಉದ್ಯಮಿ ಮತ್ತು ಯೂನಿಯನ್ ನಾಯಕಿಯಾಗಿದ್ದರು. ಅವರ ತಾಯಿ, ಪತ್ರಕರ್ತೆ ಡಯಾನಾ ಟರ್ಬೇ ಅವರನ್ನು 1990 ರಲ್ಲಿ ಸಶಸ್ತ್ರ ಗುಂಪು ಅಪಹರಣ ಮಾಡಿತ್ತು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: 5 ನಿಮಿಷ ತಬ್ಬಿಕೊಳ್ಳಲು 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!

    ಕೊಲಂಬಿಯಾ ದಶಕಗಳಿಂದ ಎಡಪಂಥೀಯ ಬಂಡುಕೋರರು ಮತ್ತು ಸರ್ಕಾರದ ನಡುವಿನ ಸಂಘರ್ಷದಲ್ಲಿ ಸಿಲುಕಿಕೊಂಡಿದೆ.

  • ಪಾಕ್ ಪರ ನೀಡಿದ್ದ ಹೇಳಿಕೆಗೆ ಶಶಿ ತರೂರ್ ಆಕ್ಷೇಪ ಬೆನ್ನಲ್ಲೇ ಕೊಲಂಬಿಯಾ ಯೂಟರ್ನ್ – ಭಾರತಕ್ಕೆ ರಾಜತಾಂತ್ರಿಕ ಯಶಸ್ಸು

    ಪಾಕ್ ಪರ ನೀಡಿದ್ದ ಹೇಳಿಕೆಗೆ ಶಶಿ ತರೂರ್ ಆಕ್ಷೇಪ ಬೆನ್ನಲ್ಲೇ ಕೊಲಂಬಿಯಾ ಯೂಟರ್ನ್ – ಭಾರತಕ್ಕೆ ರಾಜತಾಂತ್ರಿಕ ಯಶಸ್ಸು

    – ನಾವು ಶಾಂತಿಪ್ರಿಯರೇ… ಹಾಗಂತ ಕೆಣಕಿದ್ರೆ ಸುಮ್ಮನಿರಲ್ಲ – ಪಾಕ್‌ಗೆ ಪಂಚ್‌

    ನವದೆಹಲಿ: ಪಾಕಿಸ್ತಾನದ (Pakistan) ಮುಖವಾಡವನ್ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಳಚುತ್ತಿರುವ ಭಾರತದ ಸರ್ವಪಕ್ಷ ನಿಯೋಗಕ್ಕೆ ಕೊಲಂಬಿಯಾ (Colombia) ದೇಶದ ಬೆಂಬಲ ಸಿಕ್ಕಿದೆ.

    ʻಭಾರತದ ದಾಳಿಯಿಂದ ಜೀವಹಾನಿಯಾಗಿದೆʼ ಅಂತ ಪಾಕಿಸ್ತಾನಕ್ಕೆ ಸಹಾನುಭೂತಿ ವ್ಯಕ್ತಪಡಿಸಿದ್ದ ಕೊಲಂಬಿಯಾ ಈಗ ತನ್ನ ಹೇಳಿಕೆ ಹಿಂಪಡೆದಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್‌

    ಕೊಲಂಬಿಯಾ ವಿರುದ್ಧ ನಿನ್ನೆಯಷ್ಟೇ ಶಶಿ ತರೂರ್ (Shashi Tharoor) ಬೇಸರ ವ್ಯಕ್ತಪಡಿಸಿದ್ದರು. ಭಾರತದ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಕೊಲಂಬಿಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವೆ ರೋಸಾ ಯೋಲಾಂಡಾ ವಿಲ್ಲಾವಿಸೆನ್ಸಿಯೊ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

    ಈ ಬಗ್ಗೆ ಹೇಳಿಕೆ ನೀಡಿದ ಶಶಿ ತರೂರ್ ನಾವು ಕೊಲಾಂಬಿಯಾದ ವಿದೇಶಾಂಗ ಸಚಿವಾಲಯವನ್ನ ಭೇಟಿಯಾದೆವು. ಅಲ್ಲಿ ನಮಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದರ ಜೊತೆಗೆ ನಮಗೆ ಒಳ್ಳೆಯ ಸುದ್ದಿ ಕೂಡ ಕಾದಿತ್ತು. ಅದು ಪಾಕಿಸ್ತಾನದಲ್ಲಿ ಸತ್ತವರಿಗೆ ಸಂತಾಪ ಸೂಚಿಸಿ ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡದ್ದು, ಪಾಕ್​​​​ ಪರ ಈ ಹೇಳಿಕೆ ನೀಡಿದಕ್ಕೆ ನಿರಾಶೆಯನ್ನು ನಾವು ವ್ಯಕ್ತಪಡಿಸಿದ್ದೇವು. ಇದೀಗ ಕೊಲಾಂಬಿಯಾ ತನ್ನ ಈ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

    ಅಲ್ಲದೇ, ಮಹಾತ್ಮ ಗಾಂಧೀಜಿ ಅಹಿಂಸಾವಾದಿ, ಶಾಂತಿಪ್ರಿಯರು. ಹಾಗೆಂದು ಕೆಣಕಿದ್ರೆ ಭಾರತ ಸುಮ್ಮನಿರಲ್ಲ ಅಂತ ಪಾಕ್‌ಗೆ ಪಂಚ್ ಕೊಟ್ಟಿದ್ದಾರೆ. ಬಳಿಕ ಅಲ್ಲಿನ ತದೇಯೋ ವಿಶ್ವವಿದ್ಯಾಲಯದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ತಲೆಬಾಗಿ ನಮಸ್ಕರಿಸಿದ್ದಾರೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಎಂದಿಗೂ ಭಾರತಕ್ಕೆ ತಲೆಬಾಗಲ್ಲ – ಮತ್ತೆ ಬುಸುಗುಟ್ಟಿದ ಅಸಿಮ್ ಮುನೀರ್

  • ಅಮೆಜಾನ್ ಕಾಡಲ್ಲಿ 40 ದಿನಗಳ ಬಳಿಕ ಪತ್ತೆಯಾಗಿ ಆಸ್ಪತ್ರೆ ಸೇರಿದ್ದ ಮಕ್ಕಳು ಡಿಸ್ಚಾರ್ಜ್

    ಅಮೆಜಾನ್ ಕಾಡಲ್ಲಿ 40 ದಿನಗಳ ಬಳಿಕ ಪತ್ತೆಯಾಗಿ ಆಸ್ಪತ್ರೆ ಸೇರಿದ್ದ ಮಕ್ಕಳು ಡಿಸ್ಚಾರ್ಜ್

    ಬೊಗೋಟಾ: ದಕ್ಷಿಣ ಕೊಲಂಬಿಯಾದ (South Colombia) ಅಮೆಜಾನ್ ಕಾಡು (Amazon Forest) ಪ್ರದೇಶದಲ್ಲಿ ನಡೆದ ವಿಮಾನ ಅಪಘಾತದಲ್ಲಿ (Plane Crash) ಬದುಕುಳಿದ ನಾಲ್ವರು ಕೊಲಂಬಿಯಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಶುಕ್ರವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

    ಅಮೆಜಾನ್ ಕಾಡು ಪ್ರದೇಶದಲ್ಲಿ ನಡೆದ ವಿಮಾನ ದುರಂತದಲ್ಲಿ ಲೆಸ್ಲಿ (13), ಸೋಲಿನಿ (9), ಟಿಯೆನ್ ನೊರಿಯಲ್ (5) ಮತ್ತು ಬೇಬಿ ಕ್ರಿಸ್ಟಿನ್ (1) ಎಂಬ ಮಕ್ಕಳು ಬದುಕುಳಿದಿದ್ದು, ಅವರ ತಾಯಿ ಮತ್ತು ಇನ್ನಿಬ್ಬರು ಮೃತಪಟ್ಟಿದ್ದರು. ಕಾಡಿನಲ್ಲಿ ಸತತ 40 ದಿನಗಳು ಕಳೆದ ಈ ಮಕ್ಕಳನ್ನು ಪತ್ತೆಹಚ್ಚಿ ಬೊಗೊಟಾ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದೀಗ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶುಕ್ರವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Twitter Monetisation: ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಹಣ – ಹೇಗೆ ಅಂತೀರಾ..?

    ನೊರಿಯಲ್ ಮತ್ತು ಬೇಬಿ ಕ್ರಿಸ್ಟಿನ್ ತಂದೆಯಾದ ಮ್ಯಾನುಯೆಲ್ ರಾನೋಕ್ ಮಕ್ಕಳ ಚೇತರಿಕೆ ಕಂಡು ಸಂತಸ ವ್ಯಕ್ತಪಡಿಸಿದ್ದು, ಕೃತಜ್ಞತೆಯನ್ನು ಸಲ್ಲಿಸಿದರು. ನನ್ನ ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಅವರು ನನ್ನೊಂದಿಗೆ ಇರುವುದಿಲ್ಲ. ಬದಲಾಗಿ ಕುಟುಂಬ ಕಲ್ಯಾಣ ಸಂಸ್ಥೆಯು ಅವರನ್ನು ನೋಡಿಕೊಳ್ಳುತ್ತದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆರೋಗ್ಯವಾಗಿರುವುದು ನನಗೆ ತುಂಬಾ ಸಂತಸವನ್ನು ಉಂಟುಮಾಡಿದೆ ಎಂದು ಮ್ಯಾನುಯೆಲ್ ರಾನೋಕ್ ತಿಳಿಸಿದ್ದಾರೆ. ಇದನ್ನೂ ಓದಿ: Miracle: ಅಪಘಾತಕ್ಕೀಡಾಗಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು!

    ಮಕ್ಕಳನ್ನು 6 ತಿಂಗಳ ಕಾಲ ತಾತ್ಕಾಲಿಕವಾಗಿ ನೋಡಿಕೊಳ್ಳುವ ಕೊಲಂಬಿಯಾದ ಕುಟುಂಬ ಕಲ್ಯಾಣ ಸಂಸ್ಥೆಯು ನಾಲ್ವರು ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿದೆ. ಇನ್ಸ್ಟಿಟ್ಯೂಟ್‌ ನಿರ್ದೇಶಕರಾಗಿರುವ ಆಸ್ಟ್ರಿಡ್‌ ಈ ಕುರಿತು ಮಾಹಿತಿ ನೀಡಿದ್ದು, ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅಲ್ಲದೇ ಅಮೆಜಾನ್‌ನಲ್ಲಿ 40 ದಿನ ಅಲೆದಾಡಿದ್ದ ಇವರಲ್ಲಿ ತೀವ್ರತರ ದೈಹಿಕ ಸಮಸ್ಯೆ ಈಗ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೆಸ್ಟಿಂಗ್‌ ವೇಳೆ ರಾಕೆಟ್‌ ಎಂಜಿನ್‌ ಸ್ಫೋಟ – ಜಪಾನ್‌ ಬಾಹ್ಯಾಕಾಶ ಸಂಸ್ಥೆಗೆ ಮತ್ತೆ ನಿರಾಸೆ

    ವಿಮಾನ ಪತನದ ಬಳಿಕ ಈ ಮಕ್ಕಳು ಅಮೆಜಾನ್ ಕಾಡಿನಲ್ಲಿ ನಾಪತ್ತೆಯಾಗಿದ್ದರು. ಇವರನ್ನು ಹುಡುಕುವ ಸಲುವಾಗಿ ಸುಮಾರು 200 ಮಿಲಿಟರಿ ಮತ್ತು ಸ್ಥಳೀಯ ರಕ್ಷಕರನ್ನು ಒಳಗೊಂಡಿದ್ದ ರಕ್ಷಣಾ ಕಾರ್ಯಾಚರಣಾ ತಂಡವು ಅಮೆಜಾನ್ ಕಾಡಿನಲ್ಲಿ ಶೋಧಕಾರ್ಯವನ್ನು ನಡೆಸಿತ್ತು. ಇದನ್ನೂ ಓದಿ: ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮ ಸಾಯುವ ಮುನ್ನ ನಮಗೆ ಈ ಮಾತು ಹೇಳಿದ್ದಳು..; ಅಮೆಜಾನ್‌ ಕಾಡಲ್ಲಿ ಸಿಲುಕಿದ್ದ ಮಕ್ಕಳ ಕರುಣಾಜನಕ ಕಥೆ ತೆರೆದಿಟ್ಟ ರಕ್ಷಣಾ ತಂಡ

    ಅಮ್ಮ ಸಾಯುವ ಮುನ್ನ ನಮಗೆ ಈ ಮಾತು ಹೇಳಿದ್ದಳು..; ಅಮೆಜಾನ್‌ ಕಾಡಲ್ಲಿ ಸಿಲುಕಿದ್ದ ಮಕ್ಕಳ ಕರುಣಾಜನಕ ಕಥೆ ತೆರೆದಿಟ್ಟ ರಕ್ಷಣಾ ತಂಡ

    – ರಕ್ಷಣಾ ತಂಡದವರನ್ನ ಕಂಡೊಡನೆ ಓಡಿ ಬಂದು “ಹಸಿವಾಗ್ತಿದೆ” ಎಂದಿದ್ದ ಮಕ್ಕಳು

    ಬೊಗೋಟಾ: ಅಮೆಜಾನ್‌ ದಟ್ಟ (Amazon Jungle) ಅರಣ್ಯದಲ್ಲಿ ವಿಮಾನ ಪತನವಾಗಿ 40 ದಿನಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ವರು ಮಕ್ಕಳನ್ನು ರಕ್ಷಿಸಿದ ರಕ್ಷಣಾ ತಂಡದ ಸದಸ್ಯರು ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ವಿಮಾನ ಅಪಘಾತದಿಂದಾಗಿ 13, 9, 5 ಮತ್ತು 1 ವರ್ಷದ ನಾಲ್ವರು ಮಕ್ಕಳು ಅಮೆಜಾನ್‌ ಕಾಡಿನಲ್ಲಿ ಸಿಲುಕಿಕೊಂಡಿದ್ದರು. ಒಂದು ತಿಂಗಳಿಗೂ ಹೆಚ್ಚ ದಿನಗಳ ಕಾಲ ಕಾಡಿನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲಾಯಿತು. ಆಗ ಮಕ್ಕಳ ಆರೋಗ್ಯ ಸ್ಥಿತಿಗತಿ ಹೇಗಿತ್ತು? ಅವರು ಏನು ಹೇಳಿದರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮಾತುಗಳು ನಿಜಕ್ಕೂ ಮನಕಲಕುವಂತಿದೆ. ಇದನ್ನೂ ಓದಿ: ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

    ಮಕ್ಕಳ ಕರುಣಾಜನಕ ಸ್ಥಿತಿ ತೆರೆದಿಟ್ಟ ರಕ್ಷಣಾ ತಂಡ
    ಪುಟ್ಟ ಮಗುವನ್ನು ಎತ್ತಿಕೊಂಡಿದ್ದ ಲೆಸ್ಲಿ ನನ್ನನ್ನು ಕಂಡಾಕ್ಷಣ ಓಡಿ ಬಂದಳು. ಬಂದವಳೇ, “ನನಗೆ ಹಸಿವಾಗಿದೆ” ಎಂದಳು. ಇಬ್ಬರು ಹುಡುಗರಲ್ಲಿ ಒಬ್ಬ ಮಲಗಿದ್ದ. ಅವರು ಕೂಡ ಎದ್ದು ಬಂದು “ನಮ್ಮ ತಾಯಿ ಸತ್ತಿದ್ದಾರೆ” ಎಂದರು ಅಂತ ರಕ್ಷಣಾ ತಂಡದ ಸದಸ್ಯರಲ್ಲೊಬ್ಬರಾದ ನಿಕೋಲಸ್ ಒರ್ಡೊನೆಜ್ ಗೋಮ್ಸ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡರು.

    ಲೆಸ್ಲಿ ತಾಯಿ 4 ದಿನಗಳ ವರೆಗೆ ಜೀವಂತವಾಗಿದ್ದರು ಎನಿಸುತ್ತದೆ. ಆಕೆ ಸಾಯುವ ಮುನ್ನ, “ಮಕ್ಕಳೇ ನೀವು ಇಲ್ಲಿಂದ ಹೊರಡಿ. ನಿಮ್ಮ ತಂದೆ ಬಳಿಗೆ ಹೋಗಿ. ನಾನು ತೋರಿದ ಪ್ರೀತಿಯನ್ನೇ ಅವರೂ ನಿಮಗೆ ತೋರಿಸುತ್ತಾರೆ” ಎಂದು ಹೇಳಿದ್ದರಂತೆ ಅಂತ ಮತ್ತೊಬ್ಬ ಸದಸ್ಯ ಮ್ಯಾನುಯೆಲ್ ಮಿಲ್ಲರ್ ರಾನೋಕ್ ತಿಳಿಸಿದರು. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ಮಕ್ಕಳು ತುಂಬಾ ನಿಶ್ಯಕ್ತರಾಗಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಟ್ಟಿ ಪದಾರ್ಥ ಸೇವಿಸಲು ಇನ್ನೂ ಅವರಿಂದ ಸಾಧ್ಯವಾಗುತ್ತಿಲ್ಲ. ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ ಎಂದು ಸದಸ್ಯರು ಮಾಹಿತಿ ನೀಡಿದ್ದಾರೆ.

    ಮಕ್ಕಳು ಪತ್ತೆಯಾಗಿದ್ದು ಹೇಗೆ?
    ಮೇ 1 ರಂದು ವಿಮಾನ ಅಪಘಾತ ಸಂಭವಿಸಿತ್ತು. ಅದಾದ ಎರಡು ವಾರಗಳ ನಂತರ ಶೋಧ ತಂಡವು ಅಮೆಜಾನ್‌ ದಟ್ಟ ಕಾಡಿನಲ್ಲಿ ವಿಮಾನ ಪತ್ತೆ ಹಚ್ಚಿ ಪೈಲಟ್‌ ಸೇರಿದಂತೆ ಮೂವರ ಮೃತದೇಹಗಳನ್ನು ವಶಪಡಿಸಿಕೊಂಡಿತ್ತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

    ಮಕ್ಕಳ ಹುಡುಕಾಟದ ವೇಳೆ, ಅವರ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿ ಹಲವು ಕುರುಹುಗಳು ಪತ್ತೆಯಾಗಿತ್ತು. ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿಯೇ ಹುಟುಕಾಟ ತೀವ್ರಗೊಳಿಸಲಾಗಿತ್ತು. ಮಕ್ಕಳು ಹಸಿವಿನಿಂದ ಸಾಯಬಾರದು ಎಂಬ ಕಾರಣಕ್ಕೆ ಆಹಾರ ಪದಾರ್ಥಗಳು ಮತ್ತು ನೀರಿನ ಬಾಟಲಿಗಳನ್ನು ಕೂಡ ಹೆಲಿಕಾಪ್ಟರ್‌ ಮೂಲಕ ಅನೇಕ ಕಡೆ ಹಾಕಲಾಗಿತ್ತು.

    ಕೊನೆಗೆ ಅಪಘಾತ ನಡೆದ ಸ್ಥಳದ ಪಶ್ಚಿಮ ದಿಕ್ಕಿನಿಂದ ಸುಮಾರು 5 ಕಿಮೀ ದೂರದಲ್ಲಿ ಮಕ್ಕಳು ಸಿಕ್ಕರು.

  • ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

    ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

    ಬೊಗೋಟಾ: ವಿಮಾನ ಪತನವಾಗಿ (Plane Crash) 40 ದಿನಗಳ ಬಳಿಕ ಅಮೆಜಾನ್ ದಟ್ಟ ಅರಣ್ಯದಿಂದ (Amazon Jungle) ಮಗು ಸೇರಿದಂತೆ 4 ಮಕ್ಕಳನ್ನು (Children) ಜೀವಂತವಾಗಿ ರಕ್ಷಿಸಲಾಗಿದೆ ಎಂದು ಕೊಲಂಬಿಯಾದ (Colombia) ಸೇನಾಪಡೆ ತಿಳಿಸಿದೆ.

    ಏನಿದು ಘಟನೆ?: ಮೇ 1 ರಂದು 7 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದ ಸೆಸ್ನಾ ಸಿಂಗಲ್ ಎಂಜಿನ್‌ನ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಪತನವಾಗಿತ್ತು. ಘಟನೆಯ ಬಳಿಕ ಬದುಕುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಅಪಘಾತವಾಗಿ 2 ವಾರಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನವನ್ನು ಕಂಡುಹಿಡಿಯಲಾಗಿದ್ದು, ಮೂವರು ವಯಸ್ಕರ ಮೃತದೇಹಗಳನ್ನೂ ವಶಪಡಿಸಿಕೊಳ್ಳಲಾಯಿತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳ ಪತ್ತೆ ಮಾತ್ರ ಎಲ್ಲಿಯೂ ಸಿಕ್ಕಿರಲಿಲ್ಲ.

    ನಾಪತ್ತೆಯಾಗಿದ್ದವರಲ್ಲಿ 13, 9, 4 ವರ್ಷ ಹಾಗೂ 11 ತಿಂಗಳ ಮಕ್ಕಳು ಸೇರಿದ್ದರು. ಎಲ್ಲ ಮಕ್ಕಳೂ ಒಡಹುಟ್ಟಿದವರಾಗಿದ್ದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಚ್ಚೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿ ಹುಡುಕಾಟವನ್ನು ತೀವ್ರಗೊಳಿಸಲಾಯಿತು.

    ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ ನಾಯಿಗಳು, 150 ಸೈನಿಕರು ಹುಡುಕಾಟ ನಡೆಸಿದರು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂಸೇವಕರೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು. ಬದುಕುಳಿದಿರೋ ಮಕ್ಕಳು ಮುಂದೆ ಸಾಗದಂತೆ ತಡೆಯಲು ಕಾಡಿನಾದ್ಯಂತ ಧ್ವನಿ ಸುರುಳಿಗಳನ್ನು ಪ್ರಸಾರ ಮಾಡಲಾಗಿತ್ತು. ಹಸಿವಿನಿಂದ ಅವರು ಸಾಯಬಾರದು ಎಂಬ ಕಾರಣಕ್ಕೆ ಆಹಾರ, ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗಡೆ ಎಸೆಯಲಾಗಿತ್ತು. ಇದನ್ನೂ ಓದಿ: ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

    40 ದಿನಗಳ ಬಳಿಕ ಕೊನೆಗೂ ನಾಪತ್ತೆಯಾಗಿದ್ದ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ, ಇದೊಂದು ವಿಸ್ಮಯಕಾರಿ ಘಟನೆಯಾಗಿದೆ. ಹುಡುಕಾಟದ 40 ದಿನಗಳ ಬಳಿಕ ಸೇನಾಪಡೆ ಹಾಗೂ ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ಮಕ್ಕಳು ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಕಂಡುಹಿಡಿದಿರುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದಿದ್ದಾರೆ.

    ಕೆಲ ದಿನಗಳ ಹಿಂದೆ ಪೆಟ್ರೋ ಟ್ವೀಟ್ ಮಾಡಿ ಮಕ್ಕಳು ಪತ್ತೆಯಾಗಿರುವುದಾಗಿ ಹೇಳಿದ್ದರು. ಮರುದಿನ ತಾವು ತಪ್ಪು ಮಾಹಿತಿ ನೀಡಿರುವುದಾಗಿ ತಿಳಿಸಿ, ಮಕ್ಕಳ ಕುರುಹುಗಳು ಕಾಡಿನಲ್ಲಿ ಪತ್ತೆಯಾಗಿರುವುದಾಗಿ ಸರಿಪಡಿಸಿಕೊಂಡಿದ್ದರು. ಇದನ್ನೂ ಓದಿ: ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

  • ರಸ್ತೆ ಮಧ್ಯೆ ಭೂಕುಸಿತ – ಬಸ್, ಕಾರಿನಲ್ಲಿದ್ದ 8 ಮಕ್ಕಳು ಸೇರಿ 34 ಜನ ಸಾವು

    ರಸ್ತೆ ಮಧ್ಯೆ ಭೂಕುಸಿತ – ಬಸ್, ಕಾರಿನಲ್ಲಿದ್ದ 8 ಮಕ್ಕಳು ಸೇರಿ 34 ಜನ ಸಾವು

    ಬೊಗೋಟಾ: ರಸ್ತೆ (Road) ಮಧ್ಯೆ ವಾಹನ ಚಲಿಸುತ್ತಿದ್ದಂತೆ ಏಕಾಏಕಿ ಭೂಕುಸಿತಗೊಂಡು (Landslide) 8 ಮಕ್ಕಳು ಸೇರಿ 34ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ (Colombia) ನಡೆದಿದೆ.

    ಕೊಲಂಬಿಯಾದ ಪ್ಯೂಬ್ಲೋ ಜಿಲ್ಲೆಯ ರಿಕೊ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ಸಂಭವಿಸಿದ ಭೂಕುಸಿತಕ್ಕೆ ಒಂದು ಬಸ್ (Bus), 2 ಕಾರ್ (Car) ಮತ್ತು 2 ಬೈಕ್‍ನಲ್ಲಿದ್ದ (Bike) ಪ್ರಯಾಣಿಕರು ಬಲಿಯಾಗಿದ್ದಾರೆ. ಇದನ್ನೂ ಓದಿ: ನಾಯಿ ಕಳ್ಳರಿದ್ದಾರೆ ಹುಷಾರ್! – ಬಿಸ್ಕತ್ ಹಾಕಿ ಸಾಕು ನಾಯಿ ಕದ್ದ ಚಾಲಾಕಿ ಕಳ್ಳ

    ರಸ್ತೆ ಮಧ್ಯೆ ಏಕಾಏಕಿ ಜಾರಿ ಬಂದ ಬೆಟ್ಟದ ಮಣ್ಣಿನಡಿ ಸಿಲುಕಿದ ಬಸ್ ಸುಮಾರು 3 ಅಡಿ ಆಳಕ್ಕೆ ಹೂತು ಹೋಗಿದೆ. ಬಸ್‍ನಲ್ಲಿದ್ದ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಒಟ್ಟು 8 ಮಕ್ಕಳು ಸೇರಿ 34ಕ್ಕೂ ಹೆಚ್ಚು ಜನ ಮೃತಪಟ್ಟಿರುವುದಾಗಿ ರಕ್ಷಣಾ ಪಡೆ ಮಾಹಿತಿ ನೀಡಿದೆ. 70ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಕೊಲಂಬಿಯಾದಲ್ಲಿ ಮಳೆ ಜೋರಾಗಿದ್ದು, ಪರಿಣಾಮ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಇದನ್ನೂ ಓದಿ: ಪಿಂಕಿ-ರಿಂಕಿ ಅವಳಿ ಟೆಕ್ಕಿಗಳನ್ನು ವರಿಸಿದ ಮನ್ಮಥನಿಗೆ ಈಗ ಜೈಲಿನ ಭೀತಿ

    Live Tv
    [brid partner=56869869 player=32851 video=960834 autoplay=true]

  • ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಬೊಗೋಟಾ: ಕೊಲಂಬಿಯಾದ (Colombia) ಮಹಿಳಾ ಪೊಲೀಸ್ (Women Police) ಅಧಿಕಾರಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಸದ್ದು ಮಾಡ್ತಿದ್ದಾರೆ. ಈಕೆಯ ಮಾಡೆಲಿಂಗ್ (Model) ಫೋಟೋಗಳು ಹಾಗೂ ಚಟುವಟಿಕೆಗಳನ್ನು ನೋಡಿ, ಅಭಿಮಾನಿಗಳು ಈಕೆಯನ್ನ ವಿಶ್ವದ ಅತ್ಯಂತ ಸುಂದರ ಮಹಿಳಾ ಪೊಲೀಸ್ (World Beautiful Cop) ಎಂದು ಕರೆದಿದ್ದಾರೆ.

    ಆದ್ರೆ ಇಂದಿಗೂ ರಾಷ್ಟ್ರೀಯ ಪೊಲೀಸ್ ಪಡೆಗೆ ಸೇವೆ ಸಲ್ಲಿಸುವುದ್ನು ಗೌರವವೆಂದೇ ಪರಿಗಣಿಸುವ ಮಹಿಳಾ ಪೊಲೀಸ್ ಡಯಾನಾ ರಾಮಿರೆಜ್ (Diana Ramirez) ತನ್ನ ಇನ್ಸ್ಟಾಗ್ರಾಮ್‌ನಲ್ಲಿ 4 ಲಕ್ಷ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಇದನ್ನೂ ಓದಿ: ಯಾರಿಗೂ ಭಯಪಡಬೇಡಿ, ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ – ಯುವ ಜನತೆಗೆ ರಾಹುಲ್ ಸಂದೇಶ

    ಮಾಹಿತಿಗಳ ಪ್ರಕಾರ, ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ನಗರವೆಂದು ಪರಿಗಣಿಸುವ ಕೊಲಂಬಿಯಾದ (Colombia) ಮೆಡಿಲಿನ್‌ನಲ್ಲಿ ಗಸ್ತು ತಿರುಗುವ ರಾಮಿರೇಜ್ ಆಗಾಗ್ಗೆ ಕೆಲವು ಮಾಡೆಲಿಂಗ್ ಚಟುವಟಿಗಳನ್ನೂ ಮಾಡುತ್ತಾ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಈಕೆಯನ್ನು ಸಂಪೂರ್ಣ ಮಾಡೆಲಿಂಗ್ ಆಗಿ ಬದಲಾಗುವಂತೆ ಸಲಹೆಗಳು ಕೇಳಿ ಬರುತ್ತಿದ್ದಂತೆ ನಾನು ಮಾಡೆಲ್ ಆಗಲು ಅಥವಾ ಆನ್‌ಲೈನ್‌ನಲ್ಲಿ ಫೇಮಸ್ ಆಗಲು ನನ್ನ ಪೊಲೀಸ್ ಉದ್ಯೋಗ(Police Job) ಬಿಟ್ಟುಕೊಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಉದ್ಘಾಟನೆ – ವಿಶೇಷತೆ ಏನು?

    ನಾನು ಯಾವುದಕ್ಕೂ ಹಿಂಜರಿಯುವುದಿಲ್ಲ, ಏಕೆಂದರೆ ನನಗೆ ಮತ್ತೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೂ ನಾನು ಪೊಲೀಸ್ ಅಧಿಕಾರಿಯಾಗಿ ಇರುತ್ತೇನೆ. ಏಕೆಂದರೆ ನಾನು ನಾನಾಗಿ ಇದ್ದೇನೆ, ಅದಕ್ಕಾಗಿ ನನ್ನ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

    ಹೆಚ್ಚಿನ ಡಿಜಿಟಲ್ ಫಾಲೋವರ್ಸ್ಗಳನ್ನು ಹೊಂದಿರುವ ಡಯಾನಾ ವರ್ಷದ ಅತ್ಯುತ್ತಮ ಪೊಲೀಸ್ ಅಥವಾ ಮಿಲಿಟರಿ ಪ್ರಭಾವಿ ಎಂದು ನಾಮನಿರ್ದೇಶನಗೊಂಡಿದ್ದಾರೆ. ಇದರೊಂದಿಗೆ ಪೊಲೀಸ್ ಪಡೆ ಪ್ರತಿನಿಧಿಸುವುದು ನನ್ನ ಗೌರವ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಇದಕ್ಕೆ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಡಯಾನಾ ರಾಮಿರೆಜ್ ಅತ್ಯಂತ ಸುಂದರ ಪೊಲೀಸ್ ಅಧಿಕಾರಿ, ಅಸಾಧಾರಣ ಸುಂದರಿ, ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಡಯಾನಾ ಅವರ ಅಭಿಪ್ರಾಯಗಳನ್ನು ಸಂತೋಷದಿಂದಲೇ ಸ್ವೀಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಸ್ ಪಲ್ಟಿ – ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವು

    ಬಸ್ ಪಲ್ಟಿ – ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವು

    ಬೊಗೋಟಾ: ನೈರುತ್ಯ ಕೊಲಂಬಿಯಾದ (Colambia) ಪ್ಯಾನ್-ಅಮೆರಿಕ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ (Bus Accident) 20 ಮಂದಿ ದಾರುಣ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ.

    ಕನಿಷ್ಠ 20 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 3 ವರ್ಷದ ಬಾಲಕಿ ಮತ್ತು 8 ವರ್ಷದ ಬಾಲಕ ಸೇರಿದ್ದಾರೆ. ಈ ಬಸ್ಸು ಕೊಲಂಬಿಯಾದ ಟೊಮಾಕೊ ಬಂದರು ನಗರ ಹಾಗೂ ಈಶಾನ್ಯ ನಡುವೆ ಪ್ರಯಾಣಿಸುತ್ತಿತ್ತು ಎಂಬುದಾಗಿ ನರಿನೋ ವಿಭಾಗದ ಟ್ರಾಫಿಕ್ ಪೊಲೀಸ್ (Traffic Police) ಕ್ಯಾಪ್ಟನ್ ಆಲ್ಬರ್ಟ್ಲ್ಯಾಂಡ್ ಅಗುಡೆಲೊ ತಿಳಿಸಿದ್ದಾರೆ.

    ಮಂಜು ಕವಿದ ವಾತಾವರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದೆ ಎಂಬುದಾಗಿ ಪ್ರಾಥಮಿಕ ವರದಿ ಹೇಳಿದೆ. ಇನ್ನೇನಾದರೂ ತಾಂತ್ರಿಕ ವ್ಯವಸ್ಥೆಗಳಲ್ಲಿ ವ್ಯತ್ಯಾಸವಾಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್, ಅಗ್ನಿಶಾಮಕ ದಳದ (Fire Departments) ಸಿಬ್ಬಂದಿ ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ – 8 ಪೊಲೀಸರ ಸಾವು

    ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ – 8 ಪೊಲೀಸರ ಸಾವು

    ಬೊಗೊಟಾ: ನೈಋತ್ಯ ಕೊಲಂಬಿಯಾದಲ್ಲಿ ಶುಕ್ರವಾರ ಸ್ಫೋಟಕಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ತಿಳಿಸಿದ್ದಾರೆ.

    ಅಧ್ಯಕ್ಷ ಗುಸ್ಟಾವೋ ಪೆಟ್ರೋ ಅಧಿಕಾರ ವಹಿಸಿಕೊಂಡ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಪೆಟ್ರೋ, 8 ಪೊಲೀಸರ ಸಾವಿಗೆ ಕಾರಣವಾದ ಸ್ಫೋಟಕ ದಾಳಿಯನ್ನು ನಾನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ

    ಇದು ಪೊಲೀಸ್ ಭದ್ರತೆಯ ವಿರುದ್ಧದ ದಾಳಿಯಾಗಿದೆ. ಪೊಲೀಸರನ್ನು ಸ್ಫೋಟಕಗಳಿಂದ ಹಾಗೂ ಬಂದೂಕುಗಳಿಂದ ಕೊಲ್ಲಲಾಗಿದೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಯಾರ ಮೇಲೂ ಆರೋಪ ಹೊರಿಸಲಾಗಿಲ್ಲ. ಇದನ್ನೂ ಓದಿ: ಕೋಮು ಸಂಘರ್ಷದ ಮಧ್ಯೆ ಸಾಮರಸ್ಯ ಮೆರೆದ ಮುಸ್ಲಿಂ ಕುಟುಂಬ – ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ

    ಪೆಟ್ರೋ ಅವರು ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ಭಿನ್ನಮತೀಯರೊಂದಿಗೆ ಕದನ ವಿರಾಮವನ್ನು ಪ್ರಸ್ತಾಪಿಸಿದ್ದರು. ಬಳಿಕ ಅವರು ಶಸ್ತ್ರಾಸ್ತ್ಗಳನ್ನು ತ್ಯಜಿಸಿ 2016ರಲ್ಲಿ ಶಾಂತಿಯ ಮಾತುಕತೆಯನ್ನು ಮುಂದುವರಿಸಿದರು. ಆದರೆ ಬಳಿಕ 2019ರಲ್ಲಿ ಬೊಗೋಟಾದಲ್ಲಿನ ಪೊಲೀಸ್ ಅಕಾಡೆಮಿಯ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಅದರಲ್ಲಿ 22 ಜನರು ಸಾವನ್ನಪ್ಪಿದ್ದರು. ಇದರಿಂದ ಶಾಂತಿಯ ಮಾತುಕತೆ ಮುರಿದು ಬಿದ್ದಿತ್ತು.

    Live Tv
    [brid partner=56869869 player=32851 video=960834 autoplay=true]

  • ಜೈಲಿನಲ್ಲಿ ಹಾಸಿಗೆಗೆ ಬೆಂಕಿ ಹಚ್ಚಿ ಗಲಭೆ – 51 ಕೈದಿಗಳು ಸಾವು

    ಜೈಲಿನಲ್ಲಿ ಹಾಸಿಗೆಗೆ ಬೆಂಕಿ ಹಚ್ಚಿ ಗಲಭೆ – 51 ಕೈದಿಗಳು ಸಾವು

    ಬೊಗೊಟಾ: ಕೈದಿಗಳು ಗಲಭೆ ನಡೆಸಿ ಹಾಸಿಗೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ 51 ಮಂದಿ ಕೈದಿಗಳು ಮೃತಪಟ್ಟಿದ್ದು, ಗಾರ್ಡ್‌ಗಳು ಸೇರಿದಂತೆ 24 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಕೊಲಂಬಿಯಾದ ಟೊಲುವಾದಲ್ಲಿನ ಜೈಲಿನಲ್ಲಿ ನಡೆದಿದೆ.

    ಜೈಲಿನ ಕೈದಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಒಬ್ಬ ಕೈದಿಯು ಜಗಳದ ಸಮಯದಲ್ಲಿ ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಜ್ವಾಲೆಯು ಜೈಲಿನ ವಿಭಾಗದಲ್ಲಿ ಹರಡಿತು ಎಂದು ಕೊಲಂಬಿಯಾದ ಕಾನೂನು ಮಂತ್ರಿ ವಿಲ್ಸನ್‌ ರುಯಿಸ್‌ ತಿಳಿಸಿದ್ದಾರೆ. ಇದನ್ನೂ ಓದಿ: ತಂದೆಯ ಗನ್‍ನೊಂದಿಗೆ ಆಟವಾಡುತ್ತಿದ್ದ 8ರ ಬಾಲಕ- ತಂಗಿಗೆ ಗುಂಡಿಕ್ಕಿ ಹತ್ಯೆ

    ದೇಶದ ಜೈಲಿನಲ್ಲಿ ನಡೆದ ಅತಿ ದೊಡ್ಡ ಗಲಭೆ ಹಾಗೂ ಸಾವು-ನೋವಿನ ಪ್ರಕರಣ ಇದಾಗಿದೆ. ಜೈಲಿನಲ್ಲಿ ಗಲಭೆಗಳಾಗಿರುವುದು ಇದೇ ಮೊದಲೇನಲ್ಲ. 2020ರ ಮಾರ್ಚ್‌ನಲ್ಲಿ ಬೊಗೋಟಾದ ಪಿಕೋಟಾ ಸೆರೆಮನೆಯಲ್ಲಿ ನಡೆದ ಗಲಭೆಯಲ್ಲಿ 24 ಕೈದಿಗಳು ಮೃತಪಟ್ಟಿದ್ದರು.

    ಹಿಂದಿನ ವರ್ಷ ಬ್ರೆಜಿಲಿಯನ್ ಜೈಲಿನಲ್ಲಿ ಶಿರಚ್ಛೇದ ಮಾಡಲ್ಪಟ್ಟ 16 ಮಂದಿ ಸೇರಿದಂತೆ 50 ಕ್ಕೂ ಹೆಚ್ಚು ಕೈದಿಗಳು ಕೊಲ್ಲಲ್ಪಟ್ಟಿದ್ದರು. 2018ರಲ್ಲಿ ವೆನೆಜುವೆಲಾದ ಜೈಲಿನಲ್ಲಿ ಸಂಭವಿಸಿದ ಅವಘಡದಲ್ಲಿ ಅನೇಕರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಬೈಡನ್ ಪತ್ನಿ, ಮಗಳು ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಿದ ರಷ್ಯಾ

    Live Tv