Tag: College students

  • ವಿದ್ಯಾರ್ಥಿಗಳ 13.4 ಲಕ್ಷ ಹೆಚ್ಚುವರಿ ಶುಲ್ಕ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ

    ವಿದ್ಯಾರ್ಥಿಗಳ 13.4 ಲಕ್ಷ ಹೆಚ್ಚುವರಿ ಶುಲ್ಕ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ

    ಬೆಂಗಳೂರು: ಬಿ.ಫಾರ್ಮಾ ಕೋರ್ಸ್ (B Pharma Course) ಪ್ರವೇಶ ಸಂದರ್ಭದಲ್ಲಿ 8 ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಾಗಿ 5.40 ಲಕ್ಷ ರೂ. ಶುಲ್ಕ ಕಟ್ಟಿಸಿಕೊಂಡಿದ್ದ ನಗರದ ಆಚಾರ್ಯ ಮತ್ತು ಬಿ.ಎಂ ರೆಡ್ಡಿ ಫಾರ್ಮಸಿ ಕಾಲೇಜಿನಿಂದ ಅಷ್ಟೂ ಹಣವನ್ನು ಶುಲ್ಕ ನಿಯಂತ್ರಣ ಸಮಿತಿ‌ (Fee Control Committee) ವಾಪಸ್ ಕೊಡಿಸಿದೆ.

    ಹೆಚ್ಚುವರಿ ಶುಲ್ಕ ಕಟ್ಟಿಸಿಕೊಂಡಿದ್ದ ಸಂಬಂಧ 8 ವಿದ್ಯಾರ್ಥಿಗಳು ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅವರ ನೇತೃತ್ವದ ಸಮಿತಿಗೆ ದೂರು ಕೊಟ್ಟಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಕರೆಸಿ, ವಿಚಾರಣೆ ನಡೆಸಿದ‌ ನಂತರ ಹೆಚ್ಚುವರಿ ಶುಲ್ಕ ವಾಪಸ್ ಮಾಡಲು ಆದೇಶಿಸಿದ್ದು, ಆ ಪ್ರಕಾರ ಡಿಡಿ ರೂಪದಲ್ಲಿ ಹಣ ಹಿಂದಿರುಗಿಸಲಾಗಿದೆ ಎಂದು ಶ್ರೀನಿವಾಸಗೌಡ ತಿಳಿಸಿದ್ದಾರೆ.

    8 ಲಕ್ಷ ವಾಪಸ್:
    ಮಂಗಳೂರಿನ ಜಿ.ಆರ್ ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳಾದ ಪೂಜಿತಾ ಜೆ.ಅಂಗಡಿ ಹಾಗೂ ತುಷಾರ್ ಬಿ.ಭಾಸ್ಮೆ ಅವರಿಗೆ ನೀಡಬೇಕಿದ್ದ ಕ್ರಮವಾಗಿ 7 ಲಕ್ಷ ರೂ. ಮತ್ತು 1 ಲಕ್ಷ ರೂಪಾಯಿ ಶುಲ್ಕ ವಾಪಸ್ ಕೊಡಿಸುವ ಕೆಲಸವನ್ನೂ ಸಮಿತಿ ಮಾಡಿದೆ. ಇದನ್ನೂ ಓದಿ: ಕೆಲಸ ಮಾಡದ ಮೋದಿಯನ್ನು ಕೆಳಗಿಳಿಸಿ, ಗಡ್ಕರಿಯನ್ನು ಪ್ರಧಾನಿ ಮಾಡಿ: ಸಂತೋಷ್‌ ಲಾಡ್‌

    ಕಾಲೇಜಿನ ಮಾನ್ಯತೆ ರದ್ದಾದ ಸಂದರ್ಭದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳನ್ನು ಅನ್ಯ ಕಾಲೇಜುಗಳಿಗೆ ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಶುಲ್ಕ‌ ವರ್ಗಾವಣೆ ಆಗಿರಲಿಲ್ಲ. ಈ ಸಂಬಂಧ ವಿದ್ಯಾರ್ಥಿಗಳು ಸಮಿತಿಗೆ ದೂರು‌ ನೀಡಿದ್ದರು. ಇದನ್ನೂ ಓದಿ: ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯ ರೇಪ್ & ಮರ್ಡರ್ ಕೇಸ್ – ಗೋವಾ ನಿವಾಸಿಗೆ ಜೀವಾವಧಿ ಶಿಕ್ಷೆ

    ಅಲ್ಲದೇ ಎಂಬಿಎ ಕೋರ್ಸ್ ಪ್ರವೇಶ ಸಂಬಂಧ ಮೂವರು‌ ವಿದ್ಯಾರ್ಥಿಗಳಿಂದ ಆಚಾರ್ಯ ಬೆಂಗಳೂರು ಬಿ-ಸ್ಕೂಲ್ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕವನ್ನೂ ಸಮಿತಿ ವಾಪಸ್ ಕೊಡಿಸಿದೆ. ಕೆಇಎ ನಿಗದಿಪಡಿಸಿದ ಶುಲ್ಕದ ಜೊತೆಗೆ 31 ಸಾವಿರ ರೂ. ಮಾತ್ರ ಕಟ್ಟಿಸಿಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ದೂರುದಾರ ವಿದ್ಯಾರ್ಥಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫರ್ನಿಚರ್ ಅಂಗಡಿ, ಗೋಡೌನ್‌ಗೆ ಬೆಂಕಿ – 1.50 ಕೋಟಿ ರೂ. ಮೌಲ್ಯದ ವಸ್ತುಗಳು ಭಸ್ಮ

  • ಹುಡ್ಗಿ ವಿಚಾರಕ್ಕೆ ಕಿರಿಕ್‌ – ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಾರಾಮಾರಿ

    ಹುಡ್ಗಿ ವಿಚಾರಕ್ಕೆ ಕಿರಿಕ್‌ – ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಾರಾಮಾರಿ

    ಹಾಸನ: ಕಾಲೇಜು ವಿದ್ಯಾರ್ಥಿಗಳ (Hassan College Students) ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ‌ ಮಿಲಾಯಿಸಿರುವ ಘಟನೆ ಹಾಸನ ಸಿಟಿ ಬಸ್ ನಿಲ್ದಾಣದಲ್ಲಿ (Hassan City Police) ನಡೆದಿದೆ.

    ಸುಮಾರು 20ಕ್ಕೂ ಹೆಚ್ಚು ಯುವಕರಿದ್ದ ಎರಡು‌ ಗುಂಪುಗಳ ನಡುವೆ ಯುವತಿ ವಿಚಾರಕ್ಕೆ ಜಗಳ ಶುರುವಾಗಿದ್ದು, ವಿಕೋಪಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

    ಯುವಕರ ನಡುವೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಆತಂಕದಿಂದ ಓಡಿ ಹೋಗಿದ್ದಾರೆ. ಗಲಾಟೆ ನಡೆಯುತ್ತಿದ್ದರೂ ಸಾರಿಗೆ ಬಸ್ ಚಾಲಕರು ಹಾಗೂ ಸಿಬ್ಬಂದಿ ಮೂಕಪ್ರೇಕ್ಷರಾಗಿ‌ ನಿಂತಿದ್ದರು. ಗಲಾಟೆಯಲ್ಲಿ ಕೆಲ ವಿದ್ಯಾರ್ಥಿಗಳ ಬಟ್ಟೆ ಹರಿದು ಹೋಗಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

    ಇದರಿಂದ ಹಾಸನ ನಗರದ ಹಳೇ ಬಸ್ ನಿಲ್ದಾಣ ಪುಂಡರ ತಾಣವಾಗುತ್ತಿದೆಯೇ ಎಂದು ಸಾರ್ವಜನಿಕರು ನಿಲ್ದಾಣದ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದಾರೆ. ಕಾಲೇಜು ಬಿಡುತ್ತಿದ್ದಂತೆ ಮಾದಕ ವಸ್ತುಗಳನ್ನು ಸೇವಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸುವ ಕಾಲೇಜು ಯುವಕರ ಗುಂಪು ಯುವತಿಯರನ್ನ ಚುಡಾಯಿಸಿ ಕಿರುಕುಳ ನೀಡುವ ಆರೋಪವೂ ಕೇಳಿಬಂದಿದೆ‌. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣ; ಎಸ್‌ಐಟಿಯಿಂದ 3,072 ಪುಟಗಳ ಚಾರ್ಜ್‌ಶೀಟ್‌

    ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ

    The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ

    – ಮೇ 26ರಂದೂ ಎರಡು ಶೋ ಪ್ರದರ್ಶನ ಉಚಿತ

    ದಾವಣಗೆರೆ: ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿರುವ `ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ನೀಡದಂತೆ ಬ್ಯಾನ್ ಮಾಡಿದ್ದು, ಕೆಲವೆಡೆ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ನಡುವೆ ದಾವಣಗೆರೆಯಲ್ಲಿ (Davanagere) ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ (College Students) ಉಚಿತವಾಗಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು. ಪ್ರೇರಣಾ ಯುವ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಗರದ ತ್ರಿಶೋಲ್ ಚಿತ್ರಮಂದಿರಗಳಲ್ಲಿ ಗುರುವಾರ ಹಾಗೂ ಶುಕ್ರವಾರ (ಮೇ 26) ಎರಡು ಪ್ರದರ್ಶನಗಳನ್ನ ಕೇವಲ ವಿದ್ಯಾರ್ಥಿನಿಯರು ಮಾತ್ರ ವೀಕ್ಷಿಸಿಲು ಅವಕಾಶ ಮಾಡಿಕೊಡಲಾಗಿದೆ.

    ಮೊದಲ ದಿನವೇ ದಾವಣಗೆರೆಯ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿನಿಯರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್.ಟಿ ವೀರೇಶ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಯ ಮುಖಂಡರು (Hindu Organisations) ವಿದ್ಯಾರ್ಥಿನಿಯರಿಗೆ ಸಾಥ್ ನೀಡಿದ್ದಾರೆ.

    ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಜಾಗೃತವಾಗಲು ಈ ಸಿನಿಮಾ ಸಹಕಾರಿಯಾಗಿದೆ. ಅಲ್ಲದೆ ನೈಜ್ಯ ಘಟನೆಗಳನ್ನು ಒಳಗೊಂಡ ಸಿನಿಮಾವಾಗಿದೆ. ಇದನ್ನು ಪ್ರತಿಯೊಬ್ಬರು ನೋಡಬೇಕು ಎಂದು ವಿದ್ಯಾರ್ಥಿನಿಯರು ಹಾಗೂ ಹಿಂದೂಪರ ಸಂಘಟನೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

  • ಕಾಲೇಜಿನಲ್ಲಿ ಸೊಂಟ ಬಳುಕಿಸುತ್ತಾ ಹಾಟ್ ಡ್ಯಾನ್ಸ್ ಮಾಡಿದ ಪಾಕ್ ವಿದ್ಯಾರ್ಥಿನಿಗೆ ಶಾಕ್

    ಕಾಲೇಜಿನಲ್ಲಿ ಸೊಂಟ ಬಳುಕಿಸುತ್ತಾ ಹಾಟ್ ಡ್ಯಾನ್ಸ್ ಮಾಡಿದ ಪಾಕ್ ವಿದ್ಯಾರ್ಥಿನಿಗೆ ಶಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು (College Student) ವೇದಿಕೆ ಮೇಲೆ ಪಾಶ್ಚಿಮಾತ್ಯ ಹಾಡು ಹೇಳಿಕೊಂಡು ಮಾದಕ ನೃತ್ಯ (Hot Dance) ಮಾಡಿದ್ದಕ್ಕೆ ಕಾಲೇಜಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಇದೇ ಅಕ್ಟೋಬರ್ 20ರಂದು ಎನ್‌ಸಿಎಸ್ ವಿಶ್ವವಿದ್ಯಾನಿಲಯದ (NCS University) ಅಂಗ ಸಂಸ್ಥೆಯಾಗಿರುವ ಕೆಎಂಯು ಕಾಲೇಜು ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಒಟ್ಟು 13 ಕಾರ್ಯಕ್ರಮಗಳ ಪೈಕಿ, ಕೊನೆಯ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಮಾದಕ ಉಡುಗೆಯಲ್ಲಿ ಪಾಶ್ಚಿಮಾತ್ಯ ಹಾಡು ಹೇಳುತ್ತಾ ಸೊಂಟ ಬಳುಕಿಸಿದ್ದಾರೆ. ವೇದಿಕೆ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳೂ ಈಕೆಗೆ ಬೆಂಬಲ ನೀಡಿದ್ದಾರೆ. ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದಕ್ಕೆ ವಿವಿ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಸುದ್ದಿ ತಿಳಿದ ಖೈಬರ್ ಪ್ರಾಂತ್ಯದ ವೈದ್ಯಕೀಯ ವಿಶ್ವವಿದ್ಯಾಲಯ (Khyber Medical University) ಎನ್‌ಸಿಎಸ್‌ನ ಕೆಎಂಯು ಕಾಲೇಜಿಗೆ ನೋಟಿಸ್ ನೀಡಿದ್ದು, ಈ ರೀತಿಯ ಘಟನೆ ಆಕ್ಷೇಪಾರ್ಹವಾಗಿದ್ದು, ಈ ಬಗ್ಗೆ ಕಾಲೇಜಿನ ನಿರ್ದೇಶಕರು ಉತ್ತರ ಕೊಡಬೇಕು ಎಂದು ತಾಕೀತು ಮಾಡಿದೆ. ಅಲ್ಲದೇ ಎಲ್ಲ ಶಿಕ್ಷಣ ಸಂಸ್ಥೆಗಳು ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳ ಸಮಯದಲ್ಲಿಯೂ ನೈತಿಕ ಮಾನದಂಡಗಳು ಹಾಗೂ ಸಂಸ್ಥೆಯ ಪಾವಿತ್ರ‍್ಯತೆಯನ್ನು ಕಾಯ್ದುಕೊಳ್ಳುವಂತೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌

    ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರ ಹೊಸ ತಳಿ ಓಮಿಕ್ರಾನ್‌ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ 6 ಓಮಿಕ್ರಾನ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ.

    ದಕ್ಷಿಣ ಕನ್ನಡ ಜಿಲ್ಲೆಯ 2 ಕಾಲೇಜುಗಳಲ್ಲಿ ಇಂದು ಐವರು ವಿದ್ಯಾರ್ಥಿಗಳು ಹಾಗೂ ಬೆಂಗಳೂರಿಗೆ ಬಂದಿದ್ದ ಒಬ್ಬರಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಒಂದು ಕಾಲೇಜಿನ 4 ವಿದ್ಯಾರ್ಥಿಗಳು ಹಾಗೂ ಮತ್ತೊಂದು ಕಾಲೇಜಿನ ಒಬ್ಬ ವಿದ್ಯಾರ್ಥಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಆ ಮೂಲಕ ಶಿಕ್ಷಣ ಸಂಸ್ಥೆಗಳಿಗೂ ಸೋಂಕಿನ ಭೀತಿ ಆವರಿಸಿದೆ. ಈ ಕುರಿತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಹೆಸರಿನಲ್ಲಿ ನಕಲಿ ಲಸಿಕಾ ಪ್ರಮಾಣಪತ್ರ

    ಈವರೆಗೆ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ 14ಕ್ಕೆ ಏರಿದೆ. ದೇಶದಲ್ಲಿ ಈ ಸಂಖ್ಯೆ 100ರ ಗಡಿ ದಾಟಿದೆ. ದೇಶದಲ್ಲೇ ಅತಿ ಹೆಚ್ಚು ಓಮಿಕ್ರಾನ್‌ ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ದೃಢಪಟ್ಟಿವೆ. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್

    ರಾಜ್ಯದಲ್ಲಿ ಇಂದು ಆರು ಮಂದಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡರೆ, ದಕ್ಷಿಣ ಕನ್ನಡ ಜಿಲ್ಲೆಯ ಐವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಯು‌ಕೆಯಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಐದು ಸೋಂಕಿತರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ ಒಮಿಕ್ರಾನ್ ಬಂದಿದೆ. ಹೀಗಾಗಿ ಸಮುದಾಯದಲ್ಲಿ ಈ ರೂಪಾಂತರಿ ವೈರಸ್ ಹರಡಿದೆಯೇ ಎಂಬ ಪ್ರಶ್ನೆ ಮೂಡಿದ್ದು, ಆತಂಕಕ್ಕೀಡು ಮಾಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ‌ ವಸತಿ ಶಾಲೆಯೊಂದರ 14 ವರ್ಷದ 3 ವಿದ್ಯಾರ್ಥಿನಿಯರು, 13 ವರ್ಷದ ಒಬ್ಬ ವಿದ್ಯಾರ್ಥಿನಿ ಹಾಗೂ ಮಂಗಳೂರಿನ ನರ್ಸಿಂಗ್ ಕಾಲೇಜಿನ 19 ವರ್ಷದ ಒಬ್ಬ ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ನವೆಂಬರ್ ತಿಂಗಳಿನಲ್ಲಿ ಈ ಒಂದೇ ವಿದ್ಯಾಸಂಸ್ಥೆಯ 16 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಸರ್ಕಾರದ ಸೂಚನೆಯಂತೆ ಡಿ.10 ರಂದು ಜಿಲ್ಲಾಡಳಿತ ಇವರೆಲ್ಲರ ಸ್ವ್ಯಾಬ್ ಅನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಿತ್ತು. ಈ ಪರೀಕ್ಷೆಯ ವರದಿ ಇಂದು ಬಂದಿದ್ದು, ಒಟ್ಟು 16 ಮಂದಿಯ ಪೈಕಿ ನಾಲ್ವರಲ್ಲಿ ಒಮಿಕ್ರಾನ್ ಇರುವುದು ಕಂಡು ಬಂದಿದೆ. ಇನ್ನೊಬ್ಬಾಕೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಡಿ.9ರಂದು ಆ ಕಾಲೇಜಿನಲ್ಲಿ 19 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿತ್ತು. ಈ 19 ಮಂದಿಯಲ್ಲಿ ಒಬ್ಬಾಕೆಯಲ್ಲಿ ಮಾತ್ರ ಒಮಿಕ್ರಾನ್ ಪತ್ತೆಯಾಗಿದೆ.

    ಸದ್ಯ ಇವರಿಂದ ಪ್ರಾಥಮಿಕ ಸಂಪರ್ಕಿತರಾದ 79 ಮಂದಿ, ದ್ವಿತೀಯ ಸಂಪರ್ಕಿತರಾದ 203 ಮಂದಿಗೆ ಟೆಸ್ಟ್ ಮಾಡಲಾಗಿದೆ‌. ಇದರಲ್ಲಿ 67 ಸ್ಯಾಂಪಲ್‌ಗಳನ್ನು ಜಿನೋಮಿಕ್ ಸೀಕ್ವೆನ್ಸ್‌ಗೆ ರವಾನೆ ಮಾಡಲಾಗಿದೆ. ಸೋಂಕಿತರಾಗಿರುವ ಐದು ಮಂದಿಯೂ ಆರೋಗ್ಯವಾಗಿದ್ದು, ನಾಲ್ವರಿಗೆ ಈಗಾಗಲೇ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಒಟ್ಟಿನಲ್ಲಿ ಒಮಿಕ್ರಾನ್ ಆತಂಕ ಕಡಲನಗರಿ ಮಂಗಳೂರಿನಲ್ಲಿಯೂ ಕಂಡು ಬಂದಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.

  • ಉಡುಪಿಯಲ್ಲಿ 19,500 ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್

    ಉಡುಪಿಯಲ್ಲಿ 19,500 ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್

    ಉಡುಪಿ: ಜಿಲ್ಲೆಯಾದ್ಯಂತ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ. ಉಡುಪಿ ಜಿಲ್ಲೆಗೆ 16,500 ಡೋಸೇಜ್ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಆಗಮಿಸಿದೆ. ಜಿಲ್ಲೆ ಉಡುಪಿ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಕಾಲೇಜುಗಳಲ್ಲಿ ವ್ಯಾಕ್ಸಿನೇಷನ್ ನಡೆಯುತ್ತಿದೆ.

    ಮೊದಲ ದಿನ ಜಿಲ್ಲೆಯಲ್ಲಿ 6,000 ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಹಾಕಿಸಲಾಗಿತ್ತು. ನಗರದ ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಳಗ್ಗೆಯಿಂದಲೇ ವ್ಯಾಕ್ಸಿನೇಶನ್ ಪ್ರಕ್ರಿಯೆ ಆರಂಭಗೊಂಡಿದೆ. ಮೊದಲ ದಿನ 700 ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವ್ಯಾಕ್ಸಿನೇಷನ್ ನೀಡಲಾಗಿತ್ತು. ಇಂದು ಸುಮಾರು 750 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ.

    ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ರಿಜಿಸ್ಟ್ರೇಷನ್ ಕೌಂಟರ್, ವೈಟಿಂಗ್ ರೂಮ್, ವ್ಯಾಕ್ಸಿನೇಷನ್ ಕೊಠಡಿ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಸರ್ಕಾರದ ಈ ಕೆಲಸ ಬಹ ಬಹಳ ಉತ್ತಮವಾಗಿದೆ. ಉಚಿತವಾಗಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್ ಮಾಡುತ್ತಿರುವುದು ನಮಗೆ ಬಹಳ ಖುಷಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕಾದರೆ ಹಣ ಕೊಡಬೇಕಾಗಿತ್ತು. ಮೂರನೇ ಅಲೆಯ ಆತಂಕ, ಡೆಲ್ಟಾ ಪ್ಲಸ್ ಆತಂಕದ ವಾತಾವರಣ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳು ಸಾರ್ವಜನಿಕರು ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿ ಸಿಂಚನ ಅಭಿಪ್ರಾಯ ವ್ಯಕ್ತಪಡಿಸಿದರು.

    ಕಳೆದ ಎರಡು ತಿಂಗಳು ಮನೆಯಲ್ಲೇ ಇದ್ದೆವು. ವ್ಯಾಕ್ಸಿನೇಷನ್ ಮಾಡಿಸುತ್ತಿದ್ದಾರೆ. ಕಾಲೇಜು ಆರಂಭವಾದರೆ ಧೈರ್ಯದಿಂದ ಕಾಲೇಜಿಗೆ ಬರಬಹುದು. ಸರ್ಕಾರ ಕಾಲೇಜಿನಲ್ಲಿ ಉಚಿತವಾಗಿ ವ್ಯಾಕ್ಸಿನ್ ಕೊಡುತ್ತಿರೋದು ಬಡವರಿಗೆ ಬಹಳ ಉಪಕಾರಿಯಾಗಿದೆ ಎಂದು ವಿದ್ಯಾರ್ಥಿನಿ ಆಯಿಷಾ ಹೇಳಿದರು. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ ರಕ್ಷಿಸಿದ ಪಬ್ಲಿಕ್ ಹೀರೋ ವಿಶು ಶೆಟ್ಟಿ

    ಕಾಲೇಜಿನಲ್ಲಿ ಉಪನ್ಯಾಸಕರಿಗೆ ಕೂಡಾ ಲಸಿಕೆ ನೀಡಲಾಗಿದೆ. ಉಡುಪಿ ನಗರದ ಆಸುಪಾಸಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಹೇಳಿದರು. ಇದನ್ನು ಓದಿ: ರಾಜ್ಯದಲ್ಲಿಯ ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಸುಧಾಕರ್

  • ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪಿ ಅಂದರ್

    ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪಿ ಅಂದರ್

    ಹಾಸನ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಹಾಸನ ನಗರದ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಸುತೀಶ್ (24) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 180 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ 150 ರೂ.ಗೆ ಒಂದು ಪಾಕೆಟ್‍ನಂತೆ ಗಾಂಜಾ ತರಿಸಿಕೊಳ್ಳುತ್ತಿದ್ದ ಈತ 200 ರೂ.ಗೆ ಹಾಸನದಲ್ಲಿ ಮಾರುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಹಾಸನ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದೆ ಎಂದು ಆರೋಪಿ ಸತೀಶ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೊರೊನಾ ರಜೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪುಂಡಾಟ

    ಕೊರೊನಾ ರಜೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪುಂಡಾಟ

    ಹಾಸನ: ಮಹಾಮಾರಿ ಕೊರೊನಾ ವೈರಸ್ ಇಡೀ ದೇಶವನ್ನೇ ಬೆಚ್ಚಿಳಿಸಿದೆ. ಆದರೆ ಕಾಲೇಜು ವಿದ್ಯಾರ್ಥಿಗಳು ಮಾತ್ರ ಕೊರೊನಾ ಹಿನ್ನೆಲೆಯಲ್ಲಿ ಸಿಕ್ಕಿರುವ ರಜೆಯಲ್ಲಿ ಮತ್ತೊಬ್ಬರ ಪ್ರಾಣದ ಜೊತೆ ಚೆಲ್ಲಾಟವಾಡಲು ಮುಂದಾಗಿರುವ ಘಟನೆ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

    ರಾಮನಾಥಪುರದ ಸುಬ್ರಹ್ಮಣ್ಯ ದೇವಸ್ಥಾನದ ದರ್ಶನಕ್ಕೆಂದು ರಾಮನಾಥಪುರ ತಾಲೂಕಿನ ಮೂರು ಕುಟುಂಬಗಳು ಮಂಗಳವಾರ ಸಂಜೆ ಬಂದಿದ್ದವು. ಸಮೀಪದಲ್ಲಿರುವ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ಮುಂದಾದಾಗ ಅಲ್ಲಿಗೆ ಅದೇ ಸಮಯಕ್ಕೆ ಬಂದ ಕುಶಾಲನಗರ ಮೂಲದ ಸುಮಾರು ಇಪ್ಪತ್ತು ಮಂದಿ ಕಾಲೇಜು ವಿದ್ಯಾರ್ಥಿಗಳು ಕೂಡ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಈ ವೇಳೆ ಪ್ರವಾಸಕ್ಕೆ ಬಂದಿದ್ದ ಯುವಕರು ಮತ್ತು ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದವರ ನಡುವೆ ಗಲಾಟೆಯಾಗಿದೆ.

    ಯುವಕರ ತಂಡವು ರವಿ, ಪ್ರದೀಪ್, ಬಸವರಾಜ್ ಹಾಗೂ ಕಿರಣ್ ಎಂಬವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಎಲ್ಲರನ್ನೂ ಅರಕಲಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಠಕ್ಕೂ ಸೈ, ಕೆಲಸಕ್ಕೂ ಸೈ ಎಂದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು

    ಪಾಠಕ್ಕೂ ಸೈ, ಕೆಲಸಕ್ಕೂ ಸೈ ಎಂದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು

    ಮಡಿಕೇರಿ: ಪ್ರತಿದಿನ ಪಠ್ಯಪುಸ್ತಕ, ಕ್ರೀಡಾ ಚಟುವಟಿಕೆಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳು ಶುಕ್ರವಾರ ಕೃಷಿ ಭೂಮಿಗೆ ತೆರಳಿ ಭತ್ತ ಕಟಾವು ಮಾಡಿ ಗದ್ದೆಯಿಂದ ಭತ್ತದ ತೇನೆಹೋತ್ತು ಭತ್ತವನ್ನು ಬಡಿದರು. ಮುಂದೊಂದು ದಿನ ನಾವು ಕಷ್ಟ ಪಟ್ಟು ಭೂಮಿತಾಯಿ ಸೇವೆ ಮಾಡುವುದಾಗಿ ವಿದ್ಯಾರ್ಥಿಗಳು ಆಶಾಭವನೆ ವ್ಯಕ್ತಪಡಿಸಿದರು.

    ಹೌದು. ನಿತ್ಯವೂ ಆಟ-ಪಾಠದಲ್ಲೇ ನಿರತರಾಗಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಭತ್ತದ ಗದ್ದೆಯಲ್ಲಿ ದುಡಿದು ಬೆವರಿಳಿಸಿದರು. ಕಿರುಗೂರು ಗ್ರಾಮದ ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳೆಲ್ಲಾರು ಸೇರಿ ಮೊದಲು ಭತ್ತದ ಬೆಳೆಯನ್ನು ಕಟಾವು ಮಾಡಿದರು. ನಂತರ ಅದನ್ನು ಹೊತ್ತು ಒಂದು ಕಡೆಗೆ ಹಾಕಿ ಬಡಿದು ಭತ್ತವನ್ನು ಬೇರ್ಪಡಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ಕಾವೇರಿ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು, ಇಂದಿನ ಆಧುನಿಕ ಯುಗದಲ್ಲಿ ಕೃಷಿ ಚಟುವಟಿಕೆ ಮರೆಯಾಗುತ್ತಿದೆ. ಇರುವ ಅಲ್ಪಸ್ವಲ್ಪ ಕೃಷಿಯನ್ನು ಮಾಡಲು ಯಂತ್ರೋಪಕರಣಗಳು ಬಂದಿವೆ. ಆದ್ದರಿಂದ ಮುಂದಿನ ಪೀಳಿಗೆಗೆ ಕೃಷಿ ಚಟುವಟಿಕೆಯ ಬಗ್ಗೆ ಅರಿವು ಇರಬೇಕು ಎಂಬ ಉದ್ದೇಶದಿಂದ ಹಾಗೂ ರೈತರ ಕಷ್ಟಗಳು ಅರ್ಥವಾಗಬೇಕು ಎಂಬ ಕಾರಣಕ್ಕಾಗಿ ಕೃಷಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಕಿರುಗೂರು ಗ್ರಾಮದಲ್ಲಿ ನಡೆಯುತ್ತಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಕೃಷಿ ಚಟುವಟಿಕೆಯೊಂದಿಗೆ ಗ್ರಾಮೀಣ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ಪಾಲ್ಗೊಂಡು ಸಖತ್ ಮಜಾ ಮಾಡಿದರು. ಅಳವಿನ ಅಂಚಿನಲ್ಲಿರುವ ಕುಂಟೆಬಿಲ್ಲೆ ಆಟ, ಕಣ್ಣು ಕಟ್ಟಿ ಓಡುವುದು, ಗೋಣಿಚೀಲ ಓಟದಂತಹ ಹತ್ತು ಹಲವು ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಭವಿಷ್ಯದ ಪೀಳಿಗೆಗೆ ಗ್ರಾಮೀಣ ಕ್ರೀಡೆಗಳನ್ನು ರವಾನಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿ ಸಖತ್ ಎಂಜಾಯ್ ಮಾಡಿದರು.

  • ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ – ಓರ್ವ ಮಹಿಳೆ ಸೇರಿ ನಾಲ್ವರ ಬಂಧನ

    ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ – ಓರ್ವ ಮಹಿಳೆ ಸೇರಿ ನಾಲ್ವರ ಬಂಧನ

    ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ

    ಹಳೇ ಹುಬ್ಬಳ್ಳಿ ನಿವಾಸಿಗಳಾದ ಮಹಮ್ಮದ್ ರಫೀಕ್, ಗುಲ್ಜಾರ್ ಬೇಗಂ, ಕಮರಿಪೇಟೆಯ ರಾಜು ಹರಿಣಶಿಖಾರಿ ಹಾಗೂ ಲಕ್ಷ್ಮಣ ಹನುಮಸಾಗರ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಸುಮಾರು ಒಂದು ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿಸಿದ್ದು ಹೇಗೆ?
    ಹುಬ್ಬಳ್ಳಿ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಡಿಸಿಪಿ ಬಿ.ಎಸ್.ನೇಮಗೌಡ ಅವರ ನೇತೃತ್ವದಲ್ಲಿ ಪ್ರತಿ ತಿಂಗಳು ಒಂದು ವಾರ ‘ಗಾಂಜಾ ರೌಂಡ್ಸ್’ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಈ ವಾರ ಗಾಂಜಾ ಪೂರೈಕೆ ಮಾಡುವವರಿಗೆ ಪೊಲೀಸರು ಬಲೆ ಬೀಸಿದ್ದರು. ವಿವಿಧ ಮೂಲಗಳಿಂದ ಮಾಹಿತಿ ಪಡೆದಿದ್ದ ಪೊಲೀಸರು, ನಾಲ್ವರ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹಳೇ ಹುಬ್ಬಳ್ಳಿ ಹಾಗೂ ಕಮರಿಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv