Tag: colleague

  • ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!

    ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!

    ಬೀಜಿಂಗ್: ಸಾಮಾನ್ಯವಾಗಿ ಅಪ್ಪಿಕೊಳ್ಳುವುದು ಅಥವಾ ಆಲಿಂಗನ ಮಾಡಿಕೊಳ್ಳುವುದು ಎಂದರೆ ಇಬ್ಬರ ಮಧ್ಯೆ ಇರುವ ಉತ್ತಮ ಬಾಂಧವ್ಯವನ್ನು ತೋರಿಸುತ್ತದೆ. ಆದರೆ ಚೀನಾದಲ್ಲೊಂದು ಅಚ್ಚರಿಯ ಘಟನೆ ನಡೆದಿರುವುದಾಗಿ ವರದಿಯಾಗಿದೆ.

    ಹೌದು. ಸಹೋದ್ಯೋಗಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ನನ್ನ ಪಕ್ಕೆಲುಬುಗಳು ಮುರಿದು ಹೋಗಿವೆ ಎಂದು ಮಹಿಳೆಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಘಟನೆಯು ಮೇ 2021ರಲ್ಲಿ ಯುಯಾಂಗ್ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಕಚೇರಿಯಲ್ಲಿ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ

    ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಹೋದ್ಯೋಗಿ ಮಹಿಳೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಈ ವೇಳೆ ಮಹಿಳೆ ನೋವಿನಿಂದ ಕಿರುಚಾಡಿದ್ದಾಳೆ. ಇದಾದ ಒಂದೆರಡು ದಿನಗಳ ಬಳಿಕ ಮಹಿಳೆಗೆ ಎದೆನೋವು ಕಾಣಿಸಿಕೊಂಡಿದೆ. ಆದರೆ ಮಹಿಳೆ ಈ ವಿಚಾರವನ್ನು ಯಾರ ಜೊತೆನೂ ಹೇಳಿಕೊಳ್ಳದೆ ಎದೆಗೆ ಸ್ವಲ್ಪ ಬಿಸಿ ಎಣ್ಣೆ ಹಚ್ಚಿ ಮಲಗುತ್ತಿದ್ದಳು. ಆದರೆ ದಿನಗಳೆದಂತೆ ಆಕೆಗೆ ಎದೆನೋವು ಹೆಚ್ಚಾಗುತ್ತಾ ಹೋಯಿತು. ತೀವ್ರವಾದ ನೋವಿನಿಂದ ಬಳಲುತ್ತಿದ್ದ ಮಹಿಳೆ ವಾರದ ಬಳಿಕ ಆಸ್ಪತ್ರೆಗೆ ತೆರಳಿದಳು. ಆಗ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿ ಎಕ್ಸ್ ರೇ ತೆಗೆಯುವಂತೆ ಹೇಳಿದ್ದಾರೆ. ಅಂತೆಯೇ ಎಕ್ಸ್ ರೇ ತೆಗೆದಾಗ ಮೂರು ಪಕ್ಕೆಲುಬುಗಳು ಮುರಿದಿರುವುದು ಬಯಲಾಯಿತು.

    ಬಲಭಾಗದಲ್ಲಿ ಎರಡು ಮತ್ತು ಎಡಭಾಗದಲ್ಲಿ ಒಂದು ಪಕ್ಕೆಲುಬಿಗೆ ಹಾನಿಗೊಳಗಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅವಳು ಕೆಲಸದಿಂದ ಬಿಡುವು ತೆಗೆದುಕೊಳ್ಳಬೇಕಾಯಿತು. ಅಲ್ಲದೆ ಈ ನೋವು ವಾಸಿಯಾಗಲು ಸಾಕಷ್ಟು ಖರ್ಚು ಕೂಡ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿ ಮಹಿಳೆ ತನ್ನ ಪತಿ ಜೊತೆ ಸಹೋದ್ಯೋಗಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಳೆ. ಆದರೆ ಸಹೋದ್ಯೋಗಿ ಯಾವುದೇ ಒಪ್ಪಂದಕ್ಕೆ ಹೂ ಅನ್ನಲಿಲ್ಲ. ಅಲ್ಲದೆ ತನ್ನ ಸ್ನೇಹಪೂರ್ವಕ ‘ಅಪ್ಪುಗೆಯಿಂದ ಪಕ್ಕೆಲುಬು ಮುರಿದಿದೆ’ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾನೆ.

    court order law

    ಸಹೋದ್ಯೋಗಿಯ ಈ ಮಾತು ಕೇಳಿದ ಮಹಿಳೆ, ಕೊನೆಗೆ ಆತನ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಅಲ್ಲದೆ ತನ್ನ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾಳೆ. ಇತ್ತ ನ್ಯಾಯಾಲಯ ಕೂಡ ಸಾಕ್ಷಿ ಕೇಳಿದ್ದರಿಂದ ಮಹಿಳೆಗೆ ಹಿನ್ನಡೆಯಾಗಿದೆ. ಆದರೆ ಸಹೋದ್ಯೋಗಿ ಮಹಿಳೆಗೆ 10,000 ಯುವಾನ್ (1,17,164 ರೂ.) ಪರಿಹಾರವಾಗಿ ಪಾವತಿಸಲು ಆದೇಶ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್

    ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್

    ಭೋಪಾಲ್: ಇನ್ಸ್‌ಪೆಕ್ಟರ್ ತನ್ನ ಸಹೋದ್ಯೋಗಿಯಾಗಿದ್ದ ಮಹಿಳಾ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಇಂದೋರ್ ಪೊಲೀಸ್ ನಿಯಂತ್ರಣ ಕೊಠಡಿಯ ಆವರಣದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    crime

    ಮೃತ ಇನ್ಸ್‌ಪೆಕ್ಟರ್‌ನನ್ನು ಹಕಮ್ ಸಿಂಗ್ ಪವಾರ್ ಎಂದು ಗುರುತಿಸಲಾಗಿದೆ. ಗುಂಡು ತಗುಲಿದ ಶಬ್ಧ ಕೇಳಿ ಬಂದ ಇತರ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಹಕಮ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಲ್ಫ್ ರಾಷ್ಟ್ರಗಳು ಪ್ರವಾದಿ ವಿವಾದದಲ್ಲಿ ಭಾರತದ ನಿಲುವನ್ನು ಅರ್ಥಮಾಡಿಕೊಂಡಿವೆ: ವಿದೇಶಾಂಗ ಕಾರ್ಯದರ್ಶಿ 

    ನಡೆದಿದ್ದೇನು?
    ಹಕಮ್ ಸಿಂಗ್ ಪವಾರ್ ಮತ್ತು ಮಹಿಳಾ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಇಬ್ಬರು ಪ್ರೀತಿ ಮಾಡುತ್ತಿದ್ದರು. ಆದರೆ ಹಕಮ್ ಸಿಂಗ್ ಅವರನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಗೆ ಪೋಸ್ಟ್ ಮಾಡಲಾಗಿತ್ತು. ಮಹಿಳಾ ಸಹಾಯಕ ಸಬ್ ಇನ್ಸ್‍ಪೆಕ್ಟರ್‌ರನ್ನು ಇಂದೋರ್ ನಿಯಂತ್ರಣ ಕೊಠಡಿಗೆ ಪೋಸ್ಟ್ ಮಾಡಲಾಗಿತ್ತು.

    ಇದೇ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದು ಈ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತೋರುತ್ತಿದೆ. ಆದರೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ ಹೇಳಿದ್ದಾರೆ.

    Live Tv

  • 100ರೂ. ಹಣ ವಾಪಸ್ ಕೊಡದಿದ್ದಕ್ಕೆ ಸಹೋದ್ಯೋಗಿಯನ್ನೇ ಹತ್ಯೆಗೈದ

    100ರೂ. ಹಣ ವಾಪಸ್ ಕೊಡದಿದ್ದಕ್ಕೆ ಸಹೋದ್ಯೋಗಿಯನ್ನೇ ಹತ್ಯೆಗೈದ

    ಮುಂಬೈ: ಸಾಲದ ಹಣ ಮರುಪಾವತಿಸದೇ ಇರುವುದಕ್ಕೆ 35 ವರ್ಷದ ವ್ಯಕ್ತಿಯೊಬ್ಬನನ್ನು ಸಿಮೆಂಟ್ ಬ್ಲಾಕ್‍ನಿಂದ ಹೊಡೆದು ಸಹೋದ್ಯೋಗಿಯೇ ಹತ್ಯೆಗೈದಿರುವ ಘಟನೆ ಮುಂಬೈನ ಗಿರ್ಗಾಂವ್‍ನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಎಂದು ಗುರುತಿಸಲಾಗಿದೆ. ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಮೂಲತಃ ರಾಜಸ್ತಾನದವರಾಗಿದ್ದು, ಮುಂಬೈನ ಗಿರ್ಗಾಂವ್‍ನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಆದರೆ 36 ವರ್ಷದ ತಮ್ಮ ಸಹೋದ್ಯೋಗಿ ಮನೋಜ್ ಮರಾಜಕೋಲೆ ಅವರಿಂದ ಯಶವಂತ್ ಸಿಂಗ್ ಸರ್ಹಾರ್ 100 ರೂ. ಸಾಲ ಪಡೆದಿದ್ದರು. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

    ಗುರುವಾರ ರಾತ್ರಿ ಮದ್ಯದ ಅಮಲಿನಲ್ಲಿ ಇಬ್ಬರೂ ಸಾಲದ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಶುಕ್ರವಾರ ಮುಂಜಾನೆ ಮಾರಾಜಕೋಲೆ ಮಾಧವ ಭವನದ ಕಾಂಪೌಂಡ್ ಬಳಿ ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಮಲಗಲು ಹೋದ ವೇಳೆ ಅವರ ತಲೆಗೆ ಸಿಮೆಂಟ್ ಬ್ಲಾಕ್‍ನಿಂದ ಮನೋಜ್ ಮರಾಜಕೋಲೆ ಹೊಡೆದು ಕೊಂದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದನು. ಆದರೆ ಒಂದೆರಡು ಗಂಟೆಗಳಲ್ಲಿ ಮನೋಜ್ ಮಾರಾಜಕೋಲೆಯನ್ನು ವಿ.ಪಿ.ರಸ್ತೆ ಪೊಲೀಸ್ ಠಾಣೆಯ ಅಧಿಕಾರಿಗಳಿ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

  • ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದನೆಂದು ಬಾವನನ್ನೇ ಕೊಂದಳು!

    ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದನೆಂದು ಬಾವನನ್ನೇ ಕೊಂದಳು!

    ನವದೆಹಲಿ: ಬಾವನ ಕೊಂದ ಆರೋಪದಡಿ 35 ವರ್ಷದ ಮಹಿಳೆ ಮತ್ತು ಆಕೆಯ ಸಹೋದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ದುರ್ದೈವಿಯನ್ನು ಇಕ್ರಾರ್ ಹುಸೇನ್(47) ಎಂದು ಗುರುತಿಸಲಾಗಿದ್ದು, ಈತ ದೆಹಲಿಯ ನಿವಾಸಿ ಸಿಕಂದರ್‍ಪುರದ ಸ್ಕ್ರ್ಯಾಪ್ ಯಾರ್ಡ್‍ನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ 1ರಂದು ಗುರ್ಗಾಂವ್-ಫರಿದಾಬಾದ್ ರಸ್ತೆಯ ಖುಷ್ಬೂ ಚೌಕ್ ಬಳಿಯ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆ ವೇಳೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

    ಇದೀಗ ಮೃತ ವ್ಯಕ್ತಿಯ ಸಹೋದರನ ದೂರಿನ ಮೇರೆಗೆ ಸುಶಾಂತ್ ಲೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಕ್ರಾನ್ ಅವರನ್ನು ಅವರ ಅತ್ತಿಗೆಯೇ ಸ್ಕ್ರ್ಯಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಹೀಮ್ ಅಲ್ವಿ ಅಕಾ ಮುಸ್ರಫ್ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    POLICE JEEP

    ಈ ಪ್ರಕರಣ ಕುರಿತಂತೆ ತನಿಖೆ ವೇಳೆ ಮಹಿಳೆ ಇಕ್ರಾರ್ ತಮ್ಮ ವ್ಯವಹಾರಗಳ ಮಧ್ಯೆ ಪ್ರವೇಶಿಸಿದ್ದರಿಂದ ತಾನು ಮತ್ತು ತನ್ನ ಪತಿ ಬೇರೆಯಾಗಿದ್ದೆವು. ತಮ್ಮ ಪತಿ ಕೆಲಸದ ನಿಮಿತ್ತ ಎರಡು ವರ್ಷಗಳ ಕಾಲ ಮನೇಸರ್‌ಗೆ ತೆರಳಿದ್ದರು ಮತ್ತು ಅಪರೂಪಕ್ಕೆ ತನ್ನನ್ನು ಭೇಟಿ ಮಾಡಲು ಬರುತ್ತಿದ್ದರು. ಅಲ್ಲದೇ ತಮ್ಮ ಪತಿಯನ್ನು ಇಕ್ರಾನ್ ಪದೇ, ಪದೇ ಡ್ರಿಂಕ್ಸ್ ಮಾಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ತಮ್ಮ ಪತಿ ತನ್ನಿಂದ ಮತ್ತಷ್ಟು ದೂರ ಆದರು ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಹಿಜಬ್‍ ಹೆಸರಿನಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ: ರಾಗಾ

    ಮಹಿಳೆ ಹಾಗೂ ಆಕೆಯ ಪತಿ ಜಗಳವಾಡಿದ್ದರು. ಇದಕ್ಕೆ ಕಾರಣ ತನ್ನ ಬಾವ ಎಂದು ದೂಷಿಸಿ, ಆತನನ್ನು ಕೊಂದರೆ ಪತಿಯ ಜೊತೆಗೆ ಇರಬಹುದು ಎಂದು ಭಾವಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ತನ್ನ ಸಹೋದ್ಯೋಗಿ ನಹೀಮ್ ಅವರ ಬಳಿ ಸಹಾಯ ಕೇಳಿದ್ದಾಳೆ. ನಂತರ ನಹೀಮ್ ಮೋಟರ್ ಬೈಕ್‍ನಲ್ಲಿ ಗುರ್ಗಾಂವ್ ಫರೀದಾಬಾದ್ ರಸ್ತೆಗೆ ಇಕ್ರಾನ್‍ರನ್ನು ಕರೆದುಕೊಂಡು ಹೋಗಿ ಮಫ್ಲರ್‌ನಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಗಾಂಧಿನಗರ: ಮಾತನಾಡಲು ನಿರಾಕರಿಸಿದ 25 ವರ್ಷದ ಯುವತಿಗೆ ಆ್ಯಸಿಡ್ ದಾಳಿ ನಡೆಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಇದೀಗ ಯುವತಿ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಹಮದಾಬಾದ್‍ನ ಜುಹಾಪುರದ ನಿವಾಸಿಯಾಗಿರುವ ಸಂತ್ರಸ್ತೆ, ವೆಜಲ್‍ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಮನ್ಸೂರಿ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾನೆ. ಆಗ ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಈ ಘಟನೆ ಕುರಿತಂತೆ ಯುವತಿ ತನ್ನ ತಂದೆಗೆ ವಿವರಿಸಿದಾಗ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

  • ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

    ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

    ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಮೇಲೆ ಬರ್ತ್‍ಡೇ ಪಾರ್ಟಿಯಲ್ಲಿ ತನ್ನ ಹಿರಿಯ ಸಹೋದ್ಯೋಗಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ.

    ಸೆಪ್ಟೆಂಬರ್ 26ರಂದು ಈ ಘಟನೆ ನಡೆದಿದ್ದು, ಅಕ್ಟೋಬರ್ 11 ರಂದು ಈ ಬಗ್ಗೆ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯನ್ನು ವಿಚಾರಿಸಿದಾಗ, ಬರ್ತ್‍ಡೇ ಸೆಲೆಬ್ರೆಟ್ ಮಾಡಲು ತನ್ನ ಹಿರಿಯ ಸಹೋದ್ಯೋಗಿ ರೂಮಿಗೆ ಹೋದಾಗ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ. ಆರೋಪಿಗೆ ಮದುವೆಯಾಗಿದ್ದು, ಆತ ಕುಟುಂಬದೊಂದಿಗೆ ಏಮ್ಸ್ ವಸತಿ ಸಮುಚ್ಚದಲ್ಲಿ ವಾಸಿಸುತ್ತಿದ್ದನು. ಆದರೆ ಆರೋಪಿಯ ಕುಟುಂಬದವರು ಊರಿಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಇದೀಗ ಪಾರ್ಟಿಯಲ್ಲಿ ಭಾಗಿಯಾಗಿದ್ದ ಇತರ ವೈದ್ಯರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬರ್ತ್‍ಡೇ ಪಾರ್ಟಿಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ಸಹೋದ್ಯೋಗಿ ಇಬ್ಬರು ಮದ್ಯ ಸೇವಿಸಿದ್ದರು ಮತ್ತು ರಾತ್ರಿ ತಡವಾಗಿದ್ದರಿಂದ ಸಂತ್ರಸ್ತೆ ಅಲ್ಲಿಯೇ ತಂಗಿದ್ದರು. ಆದರೆ ನಂತರ ಆರೋಪಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?

    ಇದೀಗ ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ, ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ.

  • ಕದ್ದು ಒಳ ಉಡುಪು ಧರಿಸಿದ್ದಕ್ಕೆ ರೊಚ್ಚಿಗೆದ್ದು ರೂಂಮೇಟ್ ಗೆಳೆಯನನ್ನೇ ಹತ್ಯೆಗೈದ ಸಹೋದ್ಯೋಗಿ

    ಕದ್ದು ಒಳ ಉಡುಪು ಧರಿಸಿದ್ದಕ್ಕೆ ರೊಚ್ಚಿಗೆದ್ದು ರೂಂಮೇಟ್ ಗೆಳೆಯನನ್ನೇ ಹತ್ಯೆಗೈದ ಸಹೋದ್ಯೋಗಿ

    ಲಕ್ನೋ: ಒಳ ಉಡುಪನ್ನು ಕದ್ದು ಧರಿಸಿದಕ್ಕೆ ವ್ಯಕ್ತಿಯನ್ನು ಆತನ ಸಹೋದ್ಯೋಗಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ತನಿಖೆ ವೇಳೆ ಆರೋಪಿ ಬಾಂಡಾ ಜಿಲ್ಲೆಯ ಅಜಯ್ ಕುಮಾರ್ ಹಾಗೂ ಮೃತಪಟ್ಟ ವ್ಯಕ್ತಿಯನ್ನು ಬ್ರಹೇಚ್‍ನ ವಿವೇಕ್ ಶುಕ್ಲಾ ಎಂದು ಗುರುತಿಸಲಾಗಿದೆ. ಇಬ್ಬರು ಕಾನ್ಪುರ ದೇಹತ್ ಜಿಲ್ಲೆ ಫ್ಯಾಕ್ಟರಿವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಫ್ಯಾಕ್ಟರಿ ನೀಡಿದ್ದ ಒಂದೇ ಕೊಠಡಿಯಲ್ಲಿ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು.

    ಒಮ್ಮೆ ಕುಚೇಷ್ಟೆ ಮಾಡಲೆಂದು ಅಜಯ್ ಕುಮಾರ್, ವಿವೇಕ್ ಶುಕ್ಲಾ ಒಳ ಉಡುಪನ್ನು ಕದ್ದು ಧರಿಸಿದ್ದಾನೆ. ವಿಷಯ ತಿಳಿದು ಕೋಪಗೊಂಡ ಆರೋಪಿ ವಿವೇಕ್ ಶುಕ್ಲಾ, ಅಜಯ್ ಕುಮಾರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೋಪ ವಿಕೋಪಕ್ಕೆ ತಿರುಗಿ ಆರೋಪಿ ಶುಕ್ಲಾ ತರಕಾರಿ ಕತ್ತರಿಸು ಚಾಕುವಿನಿಂದ ಅಜಯ್ ಕುಮಾರ್‍ಗೆ ಸತತವಾಗಿ ಇರಿದಿದ್ದಾನೆ.

    ಗಂಭೀರವಾಗಿ ಗಾಯಗೊಂಡ ಅಜಯ್ ಕುಮಾರ್ ಸ್ಥಳದಿಂದ ಓಡಲು ಆರಂಭಿಸಿದ್ದಾನೆ. ಬಳಿಕ ಮತ್ತೊಬ್ಬ ಸಹೋದ್ಯೋಗಿ ಅಸ್ವಸ್ಥಗೊಂಡ ಅಜಯ್ ಕುಮಾರ್‍ರನ್ನು ಕೂಡಲೇ ಕಾನ್ಪುರದ ಲಾಲ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೋತ್ತಿಗಾಗಲೇ ಅಜಯ್ ಕುಮಾರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಪೊಲೀಸರು ಐಪಿಸಿ ಸೆಕ್ಷನ್‍ಗಳ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಕುರಿತಂತೆ ಕಾರ್ಖಾನೆಯ ಮಾಲೀಕರು, ಸಹೋದ್ಯೋಗಿಗಳ ವಿಚಾರಣೆ ನಡೆಸುತ್ತಿದ್ದಾರೆ.

  • ಕಚೇರಿಯಲ್ಲೇ ತಹಶೀಲ್ದಾರ್ ಕಿಸ್ಸಿಂಗ್ – ವಿಡಿಯೋ ವೈರಲ್

    ಕಚೇರಿಯಲ್ಲೇ ತಹಶೀಲ್ದಾರ್ ಕಿಸ್ಸಿಂಗ್ – ವಿಡಿಯೋ ವೈರಲ್

    ಕೊಪ್ಪಳ: ಸರ್ಕಾರಿ ಕಚೇರಿಯಲ್ಲೇ ಉನ್ನತ ಸ್ಥಾನದ ಅಧಿಕಾರಿಯೊಬ್ಬ ಲವ್ವಿಡವ್ವಿ ನಡೆಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಎರಡು ತಿಂಗಳು ಹಿಂದೆ ಈ ಘಟನೆ ನಡೆದಿದೆ. ಈ ಹಿಂದೆ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಗುರುಬಸವರಾಜ್ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿದೆ. ಗುರುಬಸವರಾಜ್ ತಹಶೀಲ್ದಾರ್ ಆಗಿದ್ದಾಗ ತಮ್ಮ ಸಹೋದ್ಯೋಗಿಗೆ ಕಚೇರಿಯಲ್ಲಿ ಕಿಸ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ತಮ್ಮ ಕಚೇರಿಯಲ್ಲಿ ಬಂದು ನಿಂತಿದ್ದ ಮಹಿಳಾ ಸಿಬ್ಬಂದಿಯನ್ನ ಕಿಸ್ ಮಾಡಿ ಕಚೇರಿಯ ಘನತೆಯನ್ನ ಮಣ್ಣು ಪಾಲು ಮಾಡಿದ್ದಾರೆ ಎಂದು ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಲ್ಲಿಂದ ವರ್ಗಾವಣೆಯಾಗಿ ಈಗ ಗುರುಬಸವರಾಜ್ ಸದ್ಯ ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿದ್ದಾರೆ.

    ಅಲ್ಲಿಂದ ವರ್ಗಾವಣೆಗೊಂಡ ಬಳಿಕ ಅವರ ಕಿಸ್ಸಿಂಗ್ ಸೀನ್ ಈಗ ವೈರಲ್ ಆಗಿದೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ರಾಸಲೀಲೆ ಮಾಡಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ ಅಂತ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ರಾಡ್‍ನಿಂದ ಹೊಡೆದು ಸಹೋದ್ಯೋಗಿಯ ಬರ್ಬರ ಹತ್ಯೆ – ನದಿಯ ಬಳಿ ಸಮಾಧಿ

    ರಾಡ್‍ನಿಂದ ಹೊಡೆದು ಸಹೋದ್ಯೋಗಿಯ ಬರ್ಬರ ಹತ್ಯೆ – ನದಿಯ ಬಳಿ ಸಮಾಧಿ

    – ಶವವನ್ನ ಪ್ಯಾಕ್ ಮಾಡಿ, ಬೈಕಿನಲ್ಲಿ ಹೊತ್ತೊಯ್ದ

    ಭುವನೇಶ್ವರ: ವ್ಯಕ್ತಿಯನ್ನು ಸಹೋದ್ಯೋಗಿಯೇ ಕೊಲೆ ಮಾಡಿ, ನದಿಯ ಬಳಿ ಮೃತದೇಹವನ್ನು ಸಮಾಧಿ ಮಾಡಿರುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ.

    ಸೌಮೇಂದ್ರ ಕುಮಾರ್ ಮೃತ ವ್ಯಕ್ತಿ. ಈತ ರೆಂಗಾಲಿಯ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದನು. ಮೃತ ಕುಟುಂಬದವರು ಫೆ.3 ರಂದು ಕುಮಾರ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಸಿಮೆಂಟ್ ಕಳ್ಳತನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮೃತ ಕುಮಾರ್ ಮತ್ತು ಸಹೋದ್ಯೋಗಿ ಬಿಸ್ವಾಜಿತ್ ಸಾಹು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಕೋಪಗೊಂಡ ಆರೋಪಿ, ಕುಮಾರ್ ಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

    ಆರೋಪಿ ಸಾಕ್ಷಿಗಳನ್ನು ನಾಶ ಮಾಡಲು ಕುಮಾರನ ಮೃತದೇಹವನ್ನು ಪ್ಯಾಕ್ ಮಾಡಿ ನದಿಯ ಬಳಿ ಸಮಾಧಿ ಮಾಡಿದ್ದಾನೆ. ತನಿಖೆ ವೇಳೆ ಮೃತದೇಹವನ್ನು ಬೈಕಿನಲ್ಲಿ ಆರೋಪಿ ಸಾಹು ತೆಗೆದುಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾ ಸೆರೆಯಾಗಿದೆ. ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ.

    ಆರೋಪಿ ಸಾಹು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಕುಮಾರ್ ಮೃತದೇಹವನ್ನು ಸಮಾಧಿ ಮಾಡಿರುವ ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿ ಶವವನ್ನು ಹೊರತೆಗೆಯಲಾಗಿದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ನಂಬಿ ಮನೆಯೊಳಗೆ ಸೇರಿಸಿಕೊಂಡ್ಳು- ಬೆತ್ತಲೆ ಫೋಟೋ ತೆಗ್ದು ಬ್ಲಾಕ್‍ಮೇಲ್ ಮಾಡ್ದ

    ನಂಬಿ ಮನೆಯೊಳಗೆ ಸೇರಿಸಿಕೊಂಡ್ಳು- ಬೆತ್ತಲೆ ಫೋಟೋ ತೆಗ್ದು ಬ್ಲಾಕ್‍ಮೇಲ್ ಮಾಡ್ದ

    ಬೆಂಗಳೂರು: ಯುವತಿಯೊಬ್ಬಳು ತನ್ನ ಸಹೋದ್ಯೋಗಿಯನ್ನು ನಂಬಿ ಮನೆಗೆ ಕರೆದಿದ್ದು, ಇದೀಗ ಆತ ಆಕೆಯ ಬೆತ್ತಲೆ ಫೋಟೋ ತೆಗೆದು ಬ್ಲಾಕ್‍ಮೇಲ್ ಮಾಡುತ್ತಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ಬೆಳಕಿಗೆ ಬಂದಿದೆ.

    ಆನಂದ್ ಇಮ್ಯಾನುಯೆಲ್ ಬ್ಲಾಕ್‍ಮೇಲ್ ಮಾಡುತ್ತಿರುವ ವ್ಯಕ್ತಿ. ಆನಂದ್ ಹಾಗೂ ಯುವತಿ ಆಕ್ಸೆಂಚರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ತನ್ನ ಸಹೋದ್ಯೋಗಿ ಆನಂದ್ ಮನೆಗೆ ಬಂದಿದ್ದಾಗ ಆತನನ್ನು ನಂಬಿ ತನ್ನ ಮನೆಯೊಳಗೆ ಸೇರಿಸಿಕೊಂಡಿದ್ದಾಳೆ.

    ಆನಂದ್ ಮನೆಗೆ ಬಂದಾಗ ಆತನನ್ನು ಕೂರಿಸಿ ಯುವತಿ ಸ್ನಾನಕ್ಕೆ ಹೋಗಿದ್ದಳು. ಈ ವೇಳೆ ಆನಂದ್ ಯುವತಿ ಸ್ನಾನ ಮಾಡುವ ವಿಡಿಯೋವನ್ನು ತನ್ನ ಫೋನಿನಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲದೆ ಯುವತಿಯ ಅರೆ ಬೆತ್ತಲೆ ವಿಡಿಯೋ ತೆಗೆದು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ವಿಡಿಯೋ ಮಾಡಿದ ಬಳಿಕ ಆತ ಯುವತಿಗೆ ನಾನು ಎಲ್ಲಿ ಕರೆಯುತ್ತೇನೋ ಅಲ್ಲಿಗೆ ನೀನು ಬರಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ನೀನು ಬರದಿದ್ದರೆ ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv