Tag: collapsed

  • ರಾತ್ರಿ ಸುರಿದ ಮಳೆಗೆ ಕುಸಿದ ಮನೆ

    ರಾತ್ರಿ ಸುರಿದ ಮಳೆಗೆ ಕುಸಿದ ಮನೆ

    ನೆಲಮಂಗಲ: ತಾಲೂಕಿನಾದ್ಯಂತ ಕಳೆದ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಸಿಡಿಲು ಸಹಿತ ಸುರಿದ ಮಳೆಗೆ ತಾಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ 15ಕ್ಕೂ ಹೆಚ್ಚಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಗ್ರಾಮದ ಜನರ ನಿದ್ದಗೆಡಿಸಿದೆ.

    ಮನೆಗೆ ನೀರು ನುಗ್ಗಿದ್ದರಿಂದ ದಿನಸಿ ಪದಾರ್ಥಗಳು ಸೇರಿದಂತೆ ಅನೇಕ ವಸ್ತುಗಳು ನೀರಿನಿಂದ ಹಾನಿಯಾಗಿದ್ದು, ಜನರು ಕಂಗಾಲಾಗಿದ್ದಾರೆ. ಜಕ್ಕನಹಳ್ಳಿ ಗ್ರಾಮದಲ್ಲಿ ಬೈಲಮ್ಮ ಅವರ ಮನೆಯ ಗೋಡೆ ಕುಸಿದಿದ್ದು, ಮಳೆಯ ಆರಂಭದಲ್ಲೆ ಮನೆಯಿಂದ ಎಲ್ಲರೂ ಹೊರಗೆ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೇ ಗ್ರಾಮದ ಮಧು ಅವರ ಕುರಿ ಶೆಡ್‍ಗೂ ಕೂಡ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    ನೆಲಮಂಗಲ ಸಮೀಪದ ಕುಪ್ಪೆಮಳ ಕೆರೆ ಕೋಡಿ ಬಿದ್ದಿದ್ದು, ರೈತರಲ್ಲಿ ಹರ್ಷ ಮನೆ ಮಾಡಿದೆ. ಸುಮಾರು 30 ಎಕರೆ ವಿಸ್ತಾರವುಳ್ಳ ಕೆರೆ 12 ವರ್ಷದ ಬಳಿಕ ಕೋಡಿ ಬಿದ್ದಿದ್ದು ಕಳೆದ ರಾತ್ರಿಯ ಮಹಾಮಳಗೆ ಕುಪ್ಪೆ ಮಳ ಕೆರೆ ತುಂಬಿರುವಿದೆ ಸಾಕ್ಷಿ, ಕೆರೆ ಕೋಡಿ ಬಿದ್ದಿರುವುದರಿಂದ ಕೆರೆಯಿಂದ ನೀರು ಜಲಪಾತದಂತೆ ಹರಿಯುತ್ತಿದು, ನೋಡಲು ಮನೋಹರವಾಗಿ ಕಾಣುತ್ತಿದೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

  • ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿತ- ತಪ್ಪಿತು ಭಾರೀ ಅನಾಹುತ

    ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿತ- ತಪ್ಪಿತು ಭಾರೀ ಅನಾಹುತ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾದಲ್ಲಿ ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲೆ ಭಾರೀ ಅನಾಹುತವೊಂದು ತಪ್ಪಿದೆ.

    ಗ್ರಾಮದ ಟ್ಯಾಗೋರ್ ಸ್ಮಾರಕ ಪ್ರೌಢ ಶಾಲೆಯಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಮಕ್ಕಳು ಶಾಲೆಯಿಂದ ಮನೆಗೆ ತೆರಳಿದ ಬಳಿಕ ಮೆಲ್ಛಾವಣಿ ಹೆಂಚುಗಳು ಕುಸಿದು ಬಿದ್ದಿವೆ. ಹೀಗಾಗಿ ಘಟನೆಯ ವೇಳೆ ಮಕ್ಕಳು ಶಾಲೆಯಲ್ಲಿ ಇಲ್ಲದಿದ್ದುದರಿಂದ ಅನಾಹುತ ತಪ್ಪಿದೆ.

    60 ವರ್ಷದಷ್ಟು ಹಳೆಯದಾದ ಕಟ್ಟಡವನ್ನ ದುರಸ್ತಿ ಮಾಡದ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನ ಗ್ರಾಮಸ್ಥರು ಖಂಡಿಸಿದ್ದಾರೆ. ಶನಿವಾರ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಹೊರಗೆ ಕೂರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆಯ ಸಂದರ್ಭದಲ್ಲಿ ಟ್ಯಾಗೋರ್ ಶಿಕ್ಷಣ ಸಂಸ್ಥೆಯವರು ಸ್ಥಳಕ್ಕೆ ಬರುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.