Tag: collapse

  • ವಸತಿ ಕಟ್ಟಡಗಳು ಕುಸಿದು 3 ಮಂದಿ ಸಾವು, 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ!

    ವಸತಿ ಕಟ್ಟಡಗಳು ಕುಸಿದು 3 ಮಂದಿ ಸಾವು, 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ!

    ನವದೆಹಲಿ: ಎರಡು ವಸತಿ ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ 50 ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೊಯ್ಡಾದ ಶಾಹಬೆರಿ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ ಗ್ರೇಟರ್ ನೊಯ್ಡಾದ ಶಾಹಬೆರಿ ಗ್ರಾಮದಲ್ಲಿರುವ ಎರಡು ಕಟ್ಟಡಗಳು ಉರುಳಿಬಿದ್ದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

    ಕಟ್ಟಡ ಕುಸಿದು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಕಾರ್ಯಾಚರಣೆ ವೇಳೆ ಈವರೆಗೂ ಮೂರು ಮೃತದೇಹಗಳನ್ನು ಹೊರೆ ತೆಗೆದಿದ್ದು, ಕಟ್ಟಡ ಅವಶೇಷಗಳಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

    ಕಟ್ಟಡ ನಿರ್ಮಾಣದ ವೇಳೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರ ಪರಿಣಾಮ ದುರಂತ ಸಂಭವಿಸಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಕಟ್ಟಡ ಮಾಲೀಕನಾದ ಗಂಗಾ ಶರಣ್ ದ್ವೀವೇದಿ, ಬ್ರೋಕರ್ ಕಾಸೀಮ್ ಹಾಗೂ ಮತ್ತೊರ್ವನನ್ನು ಬಂಧಿಸಿದ್ದಾರೆ. ಅಲ್ಲದೇ ಮಾಲೀಕರ ವಿರುದ್ಧ ಕಳಪೆ ಕಾಮಗಾರಿ ನಡೆಸಿ ಕಟ್ಟಡ ನಿರ್ಮಾಣ ಮಾಡಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದು, ಜಿಲ್ಲಾ ಪೊಲೀಸರು ರಕ್ಷಣಾ ಕಾರ್ಯದಲ್ಲಿ ನೆರವಾಗುವಂತೆ ಆದೇಶಿಸಿದ್ದಾರೆ. ಘಟನಾ ಸ್ಥಳದಲ್ಲಿ ಜಿಲ್ಲಾ ಅಧಿಕಾರಿಗಳ ತಂಡಗಳನ್ನು ನಿಯೋಜಿಸುವಂತೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ರಕ್ಷಣಾ ಪಡೆಯ ಅಧಿಕಾರಿಯಾದ ಪಿ.ಕೆ.ಶ್ರೀವತ್ಸವ್ ಮಾತನಾಡಿ, ಘಟನಾ ಸ್ಥಳದಲ್ಲಿ ಒಟ್ಟು 4 ಎನ್‍ಡಿಆರ್‍ಎಫ್ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಶ್ವಾನ ದಳವು ಸಹ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ 50 ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ತಿಳಸಿದ್ದಾರೆ.

  • ಪ್ರಧಾನಿ ರ‍್ಯಾಲಿ ವೇಳೆ, ಮೇಲ್ಛಾವಣೆ ಕುಸಿದು 20 ಮಂದಿ ಗಾಯ!

    ಪ್ರಧಾನಿ ರ‍್ಯಾಲಿ ವೇಳೆ, ಮೇಲ್ಛಾವಣೆ ಕುಸಿದು 20 ಮಂದಿ ಗಾಯ!

    ಕೋಲ್ಕತ್ತಾ: ಪ್ರಧಾನಿ ಮೋದಿಯವರ ರ‍್ಯಾಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮೇಲ್ಛಾವಣೆ ಏಕಾಏಕಿ ಕುಸಿದು 20 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ದಲ್ಲಿ ನಡೆದಿದೆ.

    ಇಂದು ಮಿಡ್ನಾಪುರದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ತಾತ್ಕಾಲಿಕ ನಿರ್ಮಿಸಿದ್ದ ಮೇಲ್ಛಾವಣೆ ಕುಸಿದು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗೆ ಬೈಕ್ ಹಾಗೂ ಅಂಬುಲೆನ್ಸ್ ಗಳಲ್ಲಿ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.

    ಮೇಲ್ಛಾವಣೆ ಕುಸಿದ ಗಾಯಗೊಂಡ ವಿಷಯ ತಿಳಿದ ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮದ ನಂತರ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗ-ಕ್ಷೇಮ ವಿಚಾರಿಸಿದ್ದಾರೆ.

    ಇಂದು ಬೆಳಗ್ಗೆ ನರೇಂದ್ರ ಮೋದಿಯವರ ಬೃಹತ್ ರ‍್ಯಾಲಿಯನ್ನು ಜಿಲ್ಲೆಯ ಮಿಡ್ನಾಪುರದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಜನ ಮೋದಿಯವರನ್ನು ಕಣ್ತುಂಬಿಕೊಳ್ಳಬೇಕಂಬ ಬಯಕೆಯಿಂದ ಜನ ರಸ್ತೆ ಬದಿಯಿದ್ದ, ತಾತ್ಕಾಲಿಕ ಮೇಲ್ಚಾವಣಿಯ ಕಂಬವನ್ನು ಏರಿದ್ದಾರೆ. ಏರಿದ್ದಾರೆ. ಅಲ್ಲದೇ ಬೆಳಿಗ್ಗೆಯಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಮೇಲ್ಛಾವಣೆ ಸಂಪೂರ್ಣ ನೆನೆದು ಹೋಗಿತ್ತು. ತಾತ್ಕಾಲಿಕ ಮೇಲ್ಛಾವಣೆಗೆ ಭಾರ ಹೆಚ್ಚಿದ್ದರಿಂದ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.

  • ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಮೈಸೂರು: ಭಾರೀ ಗಾಳಿಯಿಂದಾಗಿ ಶಾಲೆಯ ಹೊಸ ಕಟ್ಟಡದ ಮೇಲ್ಛಾವಣಿ ಹಾರಿ ಬಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಾಪುರಿ ಗ್ರಾಮದಲ್ಲಿ ಸಂಭವಿಸಿದೆ.

    ಗ್ರಾಮದ ವಿಶ್ವ ಶಾಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರು ಜನರು ಸೇರಿದ್ದರು. ಈ ವೇಳೆ ಗಾಳಿಯ ಬೀಸಿದ ಪರಿಣಾಮ, ಶಾಲೆಯ ಹೊಸ ಕಟ್ಟಡದ ಎಲ್ಲ ಕೊಠಡಿಗಳ ಶೀಟ್‍ಗಳು (ಮೇಲ್ಛಾವಣಿ) ಹಾರಿ ಬಿದ್ದಿದ್ದು, ಕೆಳಗೆ ಸಿಲುಕಿದ ಕೆಲವರಿಗೆ ಗಾಯವಾಗಿದೆ.

    ಕಾರ್ಯಕ್ರಮದಲ್ಲಿ ಬಿಐಓ ರೇವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳುಗಳನ್ನು ಹುಣಸೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕೊಡಗಿನಲ್ಲಿ ಮಳೆಯ ಆರ್ಭಟ – ಕಾಲೇಜು ಬಳಿ ಗುಡ್ಡ ಕುಸಿತ

    ಕೊಡಗಿನಲ್ಲಿ ಮಳೆಯ ಆರ್ಭಟ – ಕಾಲೇಜು ಬಳಿ ಗುಡ್ಡ ಕುಸಿತ

    ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಮರ ವಿದ್ಯುತ್ ಕಂಬಗಳು ನೆಲಕ್ಕೆ ಉರುಳುತ್ತಿದ್ದವು. ಆದರೆ ಈಗ ಕಾಲೇಜಿನ ಗುಡ್ಡವೇ ಕುಸಿದು ಬಿದ್ದಿದೆ.

    ಸೋಮವಾರಪೇಟೆ ತಾಲೂಕಿನ ಸುಂಟಿಕೋಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಿದ್ಯಾರ್ಥಿಗಳು ಅಂತಕದಲ್ಲಿ ತರಗತಿಯಲ್ಲಿ ಇದ್ದಾರೆ. ಗುಡ್ಡ ಕುಸಿತದಿಂದಾಗಿ ಕಾಲೇಜಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

    ಮೇಲ್ಭಾಗವಿರುವ ವಿದ್ಯುತ್ ಕಂಬ ಶಾಲೆಯ ಮೇಲೆ ಬೀಳುವ ಹಂತದಲ್ಲಿದ್ದು, ತಕ್ಷಣ ತಡೆಗೋಡೆ ನಿರ್ಮಿಸದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಿಸಿದವರು ತುರ್ತು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೇ ಕಾಲೇಜಿನ ಸಿಬ್ಬಂದಿ ವರ್ಗದವರು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.

  • ಉಡುಪಿಯಲ್ಲಿ ಭಾರೀ ಮಳೆ- ಉದ್ಯಾವರದಲ್ಲಿ ಮನೆ ಕುಸಿತ

    ಉಡುಪಿಯಲ್ಲಿ ಭಾರೀ ಮಳೆ- ಉದ್ಯಾವರದಲ್ಲಿ ಮನೆ ಕುಸಿತ

    ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ತಾಲೂಕಿನ ಉದ್ಯಾವರದ ಕಲ್ಸಂಕದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

    ಕಾಪು ತಾಲೂಕಿನ ಉದ್ಯಾನವರ ಶೇಖರ ಪೂಜಾರಿ ಎಂಬವರಿಗೆ ಸೇರಿದ್ದ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಕುಸಿತ ಸಂದರ್ಭದಲ್ಲಿ ಕುಟುಂಬಸ್ಥರು ಹೊರಗಡೆ ಹೋಗಿದ್ದರಿಂದ ಆಗಬಹುದಾದ ದುರಂತ ತಪ್ಪಿದೆ. ಸದ್ಯ ಮನೆ ತೆರವು ಕಾರ್ಯ ನಡೆಯುತ್ತಿದ್ದು, ಪೀಠೋಪಕರಣ, ಪಾತ್ರೆಗಳನ್ನು ಹೊರ ತೆಗೆಯಲು ಸ್ಥಳೀಯರು ಸಹಕರಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ತಗ್ಗು ಪ್ರದೇಶದಲ್ಲಿ ಮನೆ ಇರುವುದರಿಂದ ಮನೆಯ ಅಡಿಪಾಯ ತೋಯ್ದು ಹೋಗಿದೆ. ಹಿಂಬದಿ ಗೋಡೆ ಮತ್ತು ಮುಂಭಾಗದ ಗೋಡೆ ಸಂಪೂರ್ಣ ಕುಸಿದ ಪರಿಣಾಮ ಸಂಪೂರ್ಣ ಮನೆಯೇ ನೆಲಕ್ಕುರುಳಿ ಬಿದ್ದಿದೆ ಎಂದು ಸ್ಥಳೀಯ ನಿವಾಸಿ ಸುಂದರ್ ತಿಳಿಸಿದ್ದಾರೆ.

    ಇದಲ್ಲದೇ ಪಡುಬಿದ್ರೆ ಭಾಗದಲ್ಲಿ ಕೃಷಿಭೂಮಿಗೆ ಮಳೆ ನೀರು ನುಗ್ಗಿದ್ದು, ಭತ್ತದ ಪೈರುಗಳಿಗೆ ಹಾನಿಯಾಗಿದೆ. ಉಳುಮೆ ಮತ್ತು ನಾಟಿ ಕಾರ್ಯಕ್ಕೂ ಮುಂಗಾರು ಮಳೆ ಅಡ್ಡಿಯುಂಟು ಮಾಡಿದೆ. ಒಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಕೊಡಗಲ್ಲಿ ಮಳೆ, ಶಾಲೆ-ಕಾಲೇಜಿಗೆ ರಜೆ – ಉಡುಪಿಯಲ್ಲಿ ಭಾರೀ ಮಳೆ, ಆದ್ರೆ ರಜೆ ಕ್ಯಾನ್ಸಲ್

  • ರಾತ್ರೋರಾತ್ರಿ ಎರಡು ಅಂತಸ್ತಿನ ಕಟ್ಟಡ ಕುಸಿತ – ತಪ್ಪಿದ ಭಾರೀ ದುರಂತ

    ರಾತ್ರೋರಾತ್ರಿ ಎರಡು ಅಂತಸ್ತಿನ ಕಟ್ಟಡ ಕುಸಿತ – ತಪ್ಪಿದ ಭಾರೀ ದುರಂತ

    ಬೆಂಗಳೂರು: ರಾತ್ರೋರಾತ್ರಿ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಆಸ್ಟಿನ್‍ಟೌನ್‍ನಲ್ಲಿ ರಾತ್ರಿ ಎರಡು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡ ಕುಸಿದು ಬಿದ್ದ ರಭಸಕ್ಕೆ ಬಿಲ್ಡಿಂಗ್ ಪಕ್ಕದ ಶೀಟ್ ಮನೆಯಲ್ಲಿ ಮಲಗಿದ್ದ ದಂಪತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದು ರಾಜು ಅನ್ನೋರಿಗೆ ಸೇರಿದ ಸುಮಾರು 40 ವರ್ಷದಷ್ಟು ಹಳೆಯದಾದ ಕಟ್ಟಡವಾಗಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಶಾಸಕ ಎನ್.ಎ ಹ್ಯಾರಿಸ್ ಮತ್ತು ಪುತ್ರ ನಲಪಾಡ್ ಭೇಟಿ ನೀಡಿದ್ದರು. ಕಟ್ಟಡ ಕುಸಿದು ಬಿದ್ದ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ಘಟನೆ ಕುರಿತು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕಟ್ಟಡದ ಮಾಲೀಕ ರಾಜುರನ್ನು ವಶಕ್ಕೆ ಪಡೆಯಲಾಗಿದೆ.

  • ಫಲ್ಗುಣಿ ಸೇತುವೆ ಕುಸಿತ-  ಮೂರು ತಿಂಗ್ಳ ಹಿಂದಿನ ವಿಡಿಯೋ ವೈರಲ್!

    ಫಲ್ಗುಣಿ ಸೇತುವೆ ಕುಸಿತ- ಮೂರು ತಿಂಗ್ಳ ಹಿಂದಿನ ವಿಡಿಯೋ ವೈರಲ್!

    ಮಂಗಳೂರು: ಮಂಗಳೂರು-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಫಲ್ಗುಣಿ ನದಿಯ ಸೇತುವೆ ಕುಸಿದು ಬಿದ್ದಿದ್ದು, ಇದೀಗ ಮೂರು ತಿಂಗಳ ಹಿಂದೆ ಸ್ಥಳೀಯರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

    ಫಲ್ಗುಣಿ ನದಿಗೆ ಕಟ್ಟಲಾಗಿದ್ದ ಸೇತುವೆ ಸೋಮವಾರ ಸಂಜೆ ಕುಸಿದು ಬಿದ್ದಿದೆ. ಈ ಸೇತುವೆಯು ಬಂಟ್ವಾಳ-ಕುಪ್ಪೆಪದವು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತಿತ್ತು. ನಿತ್ಯ ಅನೇಕ ವಾಹನಗಳು ಸಂಚರಿಸುತ್ತಿದ್ದವು. ಪವಾಡ ಸದೃಶ ಎಂಬಂತೆ ಸೇತುವೆ ಯಾರಿಗೂ ತೊಂದರೆ ಕೊಡದೆ ಕುಸಿದು ಬಿದ್ದಿದೆ. ನೀರು ಕಡಿಮೆಯಾದಾಗ ಅಕ್ರಮವಾಗಿ ಮರುಳುಗಾರಿಕೆ ಮಾಡಿದ್ದರ ಬಗ್ಗೆ ಸ್ಥಳೀಯರು ಮೂರು ತಿಂಗಳ ಹಿಂದೆ ಮಾತನಾಡಿಕೊಂಡಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ:
    ಸೇತುವೆಯ ಮಧ್ಯದಲ್ಲಿ ಬಿರುಕು ಬಿಟ್ಟಿದ್ದನ್ನು ತೋರಿಸಿ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಸಿ ಸ್ಥಳೀಯ ನಾಗರಿಕ ಹಮೀದ್ ಮಲ್ಲರಪಟ್ನ ಎಂಬವರು ತರಾಟೆಗೆ ತೆಗೆದುಕೊಂಡಿದ್ದರು.

    `ನೋಡಿ ಈ ಸೇತುವೆ ವಿಚಾರ ನಿಮಗೆ ಗೊತ್ತಾ, ನೀವು ದಿನನಿತ್ಯ ಓಡಾಡುತ್ತೀರಿ ಆದರೆ ಇದರಲ್ಲಿನ ಬಿರುಕುಗಳನ್ನು ಎಂದಾದರೂ ಗಮನಿಸಿದ್ದೀರಾ?. ಈ ಸೇತುವೆ ಬಿರುಕು ಬಿಟ್ಟಿದ ವಿಚಾರ ನನಗೆ ಯಾವಾಗಲೋ ಗೊತ್ತು, ನೀವು ವಿಡಿಯೋ ಮಾಡಿದರೆ, ಮಾಡಿ ನನಗೆನು ಭಯವಿಲ್ಲ ಇಲ್ಲಿರುವುದನ್ನೇ ನಾನು ತೋರಿಸುತ್ತಿರುವುದು, ನೋಡಿ ಈ ಭಾಗದಲ್ಲಿ ಗ್ಯಾಪ್ ಎಷ್ಟಿದೆ ಅಲ್ಲಿ ಮತ್ತೊಂದು ಭಾಗದಲ್ಲಿ ಹೇಗೆ ಒಂದಕ್ಕೊಂದು ಜೋಡಣೆಯಾಗಿದೆ. ಬಿರುಕು ಬಿಡುವುದಕ್ಕೆ ಕಾರಣ ಏನು? ನಿಮಗೇನಾದರೂ ಗೊತ್ತಾ? ಇಲ್ಲಿ ಅವ್ಯಾಹತವಾಗಿ ಮರಳು ತೆಗೆಯುತ್ತಿದ್ದರಿಂದ ಈ ಬಿರುಕು ಮೂಡಿದೆ ಮುಂದಿನ ದಿನಗಳಲ್ಲಿ ಸಂಪೂರ್ಣ ಕುಸಿದರೆ ಯಾರು ಹೊಣೆ ಎಂದು ಸ್ಥಳೀಯ ಭಾಷೆಯಲ್ಲಿಯೇ ಜನಪ್ರತಿನಿಧಿ ವಿರುದ್ಧ ಹಮೀದ್ ಕೆಂಡಾಮಂಡಲರಾಗಿದ್ದರು.

    ಇದಾಗಿ ಮೂರು ತಿಂಗಳಲ್ಲಿ ಅಂದ್ರೆ ಸೋಮವಾರವೇ ಸೇತುವೆ ಬಿದ್ದಿದೆ. ಹಮೀದ್ ಮೂರು ತಿಂಗಳ ಹಿಂದೆ ಜನಪ್ರತಿನಿಧಿಗಳನ್ನು ತರಾಟೆಗೆತ್ತಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಫಲ್ಗುಣಿ ನದಿ ಸೇತುವೆ ಕುಸಿತ – ತಪ್ಪಿತು ಭಾರೀ ಅನಾಹುತ

    https://www.youtube.com/watch?v=nQLKGQKij7k

  • ಫಲ್ಗುಣಿ ನದಿ ಸೇತುವೆ ಕುಸಿತ – ತಪ್ಪಿತು ಭಾರೀ ಅನಾಹುತ

    ಫಲ್ಗುಣಿ ನದಿ ಸೇತುವೆ ಕುಸಿತ – ತಪ್ಪಿತು ಭಾರೀ ಅನಾಹುತ

    ಮಂಗಳೂರು: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಿದ್ದರಿಂದ ಸೇತುವೆಯೊಂದು ಕುಸಿದು ಬಿದ್ದಿದ್ದು, ಭಾರೀ ಅನಾಹುತ ತಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಮೂಲರಪಟ್ನದಲ್ಲಿ ನಡೆದಿದೆ.

    ಮೂಲರಪಟ್ನ ಸಮೀಪದ ಫಲ್ಗುಣಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಬಂಟ್ವಾಳ-ಕುಪ್ಪೆಪದವು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತಿತ್ತು. ಈ ಸೇತುವೆ ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ನೀರು ಇಲ್ಲದಿದ್ದಾಗ ಸೇತುವೆ ಕೆಳಗೆ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿತ್ತು. ಅದೃಷ್ಟವಶಾತ್ ಸೇತುವೆ ಕುಸಿತದ ವೇಳೆ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಹೀಗಾಗಿ ಭಾರೀ ಪ್ರಮಾಣದ ಅನಾಹುತ ತಪ್ಪಿದೆ.

    ಸ್ಥಳೀಯರು ಸೇತುವೆ ದುರಸ್ತಿ ಮಾಡಿಸುವಂತೆ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು. ಹಲವು ಬಾರಿ ಅಕ್ರಮ ಮರಳು ಸಾಗಣಿಕೆಗೆ ಕಡಿವಾಣ ಹಾಕಿದ್ದರೂ ರಾಜಕೀಯ ಪ್ರಭಾವ ಬಳಸಿ ಮತ್ತೇ ಪ್ರಾರಂಭಿಸಲಾಗುತ್ತಿತ್ತು. ಸೇತುವೆ ಕುಸಿದು ಬೀಳಲು ಅಕ್ರಮ ಮರಳುಗಾರಿಕೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಸೇರಿದಂತೆ ಮಾಜಿ ಸಚಿವ ರಮಾನಾಥ್ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

    ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಯು.ಬಿ ಸಿಟಿಯಲ್ಲಿ ಬೃಹದಾಕಾರದ ಬೋರ್ಡ್ ಕುಸಿತವಾದ ಪ್ರಕರಣ ತಡರಾತ್ರಿ ನಡೆದಿದೆ.

    ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಯು.ಬಿ. ಸಿಟಿ ಮೊದಲ ಮಹಡಿಯಲ್ಲಿರುವ ಅಂಗಡಿ ಮೇಲಿನ ಬೋರ್ಡ್ ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಅಂತ ತಿಳಿದುಬಂದಿದೆ.

    ಬೋರ್ಡ್ ಕೆಳಗೆ ಬಿದ್ದಿರೋದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

  • ಭಾರೀ ಮಳೆಗೆ ಮಂಗ್ಳೂರು ವಿಮಾನ ನಿಲ್ದಾಣದ ರನ್‍ವೇ ತಡೆಗೋಡೆ ಕುಸಿತ!

    ಭಾರೀ ಮಳೆಗೆ ಮಂಗ್ಳೂರು ವಿಮಾನ ನಿಲ್ದಾಣದ ರನ್‍ವೇ ತಡೆಗೋಡೆ ಕುಸಿತ!

    ಮಂಗಳೂರು: ಇಂದು ಬೆಳಿಗ್ಗೆ ಸುರಿದ ಭಾರೀ ಮಳೆಗೆ ಮಂಗಳೂರಿನ ಟೇಬಲ್ ಟಾಪ್ ವಿಮಾನ ನಿಲ್ದಾಣದ ರನ್ ವೇ ತಡೆಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ರನ್ ವೇ ಸುರಕ್ಷತೆಯ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ರೀತಿಯ ಕ್ರಮ ಕೈಗೊಂಡು ಉತ್ತಮ ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದ್ದು, ಲ್ಯಾಂಡಿಂಗ್ ಮತ್ತು ಟೇಕಾಫ್ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. 2010 ರಲ್ಲಿ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಮುಂದೆ ಲ್ಯಾಂಡ್ ಆದ ಪರಿಣಾಮ ಪ್ರಪಾತಕ್ಕೆ ಬಿದ್ದು 158 ಪ್ರಯಾಣಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಭದ್ರವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಿತ್ತು. ಇಂದು ಸುರಿದ ಭಾರೀ ಮಳೆಗೆ ಭೂ ಕುಸಿತದಿಂದ ರನ್ ವೇ ಸಮೀಪದ ತಡೆಗೋಡೆ ಕುಸಿದು ಬಿದ್ದಿದೆ.

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಝಿಕ್ಕೋಡು ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.