Tag: collaps

  • ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 5 ಸಾವು, 8 ಮಂದಿಗೆ ಗಾಯ

    ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 5 ಸಾವು, 8 ಮಂದಿಗೆ ಗಾಯ

    ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು 5 ಮಂದಿ ಸಾವನಪ್ಪಿ, 8 ಮಂದಿಗೆ ಗಾಯಗಳಾದ ಘಟನೆ ಇಲ್ಲಿನ ಘೊಟಕ್ ಪುರದಲ್ಲಿ ನಡೆದಿದೆ.

    ಈ ಘಟನೆ ಘೊಟಕ್ ಪುರದ ದಾಮೋದರ್ ಪಾರ್ಕ್ ಪ್ರದೇಶಲ್ಲಿ ಇಂದು ಬೆಳಗ್ಗೆ 10:43ರ ಸುಮಾರಿಗೆ ನಡೆದಿದ್ದು, ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಅಪಾಯದಿಂದ ಪಾರು ಮಾಡಲಾಗಿದೆ. ಬಿಎಂಸಿ ಮೇಯರ್, 8 ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ 108 ಆಂಬುಲೆನ್ಸ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

    ಕಟ್ಟಡ ಸಂಪೂರ್ಣ ನೆಲಸಮವಾಗಿದೆ. ಸುಮಾರು 30 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಪಾಯದಿಂದ ಪಾರಾದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಅಗ್ನಿಶಾಮಕ ದಳದ ಅಧಿಕಾರಿ ಪ್ರಭಾತ್ ರಹಾಂಗ್ಡೇಲ್ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನಿಡಿದ್ದಾರೆ.

    ಈ ಕಟ್ಟಡದಲ್ಲಿ ನರ್ಸಿಂಗ್ ಹೋಮ್ ಕೂಡ ಇದ್ದು, ಸದ್ಯ ಅದನ್ನು ರಿಪೇರಿ ಮಾಡಲಾಗುತ್ತಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆ ರೋಗಿಗಳು ಅದರಲ್ಲಿ ಇರಲಿಲ್ಲ. ಇಸರಿಂದ ದೊಡ್ಡ ಮಟ್ಟದ ದುರಂತವೊಂದು ತಪ್ಪಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬುವುದಾಗಿ ವರದಿಯಾಗಿದೆ.