Tag: Colin Ingram

  • ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    – ನಿಯಮ ಬದಲಿಸಿ ಎಂದ ನೆಟ್ಟಿಗರು

    ನವದೆಹಲಿ: ಕಿಂಗ್ಸ್ ಇಲೆವನ್ ವಿರುದ್ಧದ ಪಂದ್ಯವನ್ನು ದೆಹಲಿ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗ ಗೆದ್ದುಕೊಂಡರೂ ಈ ಪಂದ್ಯದಲ್ಲಿ ಕಾಲಿನ್ ಇನ್‍ಗ್ರಾಮ್ ಕ್ಯಾಚ್ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಸದ್ಯ ಸೂಪರ್ ಫಿಟ್ ಫೀಲ್ಡರ್ ಗಳ ಸಂಖ್ಯೆ ಸದ್ಯ ಹೆಚ್ಚಾಗುತ್ತಲೇ ಇದ್ದು, ಪಂಜಾಬ್ ವಿರುದ್ಧ ಪಂದ್ಯದಲ್ಲೂ ಕಾಲಿನ್ ಇನ್‍ಗ್ರಾಮ್ ಸೂಪರ್ ಕ್ಯಾಚ್ ಪಡೆದಿದ್ದಾರೆ. ಕಾಲಿನ್, ಅಕ್ಷರ್ ಇಬ್ಬರ ಜೋಡಿ ಕ್ಯಾಚ್ ಪಡೆಯುವಲ್ಲಿ ಮೋಡಿ ಮಾಡಿದ್ದು, ಪಂದ್ಯದ 12ನೇ ಓವರಿನ 2ನೇ ಎಸೆತದಲ್ಲಿ ಗೇಲ್ ಬೀಸಿದ ಸಿಕ್ಸರ್ ರನ್ನು ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದ ಇನ್‍ಗ್ರಾಮ್ ನಾನು ಬೌಂಡರಿ ಗೆರೆ ದಾಟುತ್ತಿದ್ದೇನೆ ಎಂದು ಅರಿವಾಗುತ್ತಿದಂತೆ ಅಲ್ಪ ದೂರದಲ್ಲಿದ್ದ ಅಕ್ಷರ್ ಗೆ ಬಾಲ್ ಪಾಸ್ ಮಾಡಿ ಕ್ಯಾಚ್ ಪೂರ್ಣಗೊಳಿಸುವಂತೆ ಮಾಡಿದ್ರು.

    ಅಕ್ಷರ್ ಕ್ಯಾಚ್ ಪೂರ್ಣಗೊಳಿಸಿದ ಪರಿಣಾಮ 37 ಎಸೆತಗಳಲ್ಲಿ 69 ರನ್ ಗಳಿಸಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಗೇಲ್ ಪೆವಿಲಿಯನ್ ಸೇರಿದರು. ಅಲ್ಲದೇ ಕ್ಯಾಚ್ ಪಡೆಯುವ ವೇಳೆ ಇನ್‍ಗ್ರಾಮ್ ತೋರಿದ ಸಮಯ ಪ್ರಜ್ಞೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕ್ಯಾಚ್ ಪಡೆಯಲು ಇನ್‍ಗ್ರಾಮ್ ಶ್ರಮವಹಿಸಿದ್ದರೂ ಕೂಡ ನಿಯಮಗಳಂತೆ ಈ ಕ್ಯಾಚ್ ಅಕ್ಷರ್ ಪಟೇಲ್ ಖಾತೆಗೆ ಸೇರಿತ್ತು. ಈ ನಿಯಮಗಳ ಬಗ್ಗೆಯೂ ಹಲವರು ಪ್ರಶ್ನೆ ಮಾಡಿದ್ದು, ನಿಯಮಗಳ ಬದಲಾವಣೆ ಅಗತ್ಯ ಇದೆ ಎಂದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 163 ರನ್ ಸಿಡಿಸಿದ ಪಂಜಾಬ್ ಡೆಲ್ಲಿಗೆ 164 ರನ್ ಗಳ ಗುರಿ ನೀಡಿತು. ಸವಾಲಿನ ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ 19.4 ಓವರಿನಲ್ಲೇ ಗೆಲುವಿನ ರನ್ ಗಳಿಸಿ 5 ವಿಕೆಟ್ ಜಯ ಪಡೆಯಿತು. ಪಂದ್ಯಲ್ಲಿ ಧವನ್ 56 ರನ್ (41 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ 58 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದ್ದರೆ, ಅಷ್ಟೇ ಅಂಕ ಪಡೆದಿರುವ ಡೆಲ್ಲಿ ಕಡಿಮೆ ರನ್ ರೇಟ್ ಕಾರಣದಿಂದ 3ನೇ ಸ್ಥಾನ ಪಡೆದುಕೊಂಡಿದೆ.