Tag: Cold weather

  • ಚಳಿ ತಡೆಯದೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವು

    ಚಳಿ ತಡೆಯದೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವು

    ಶ್ರೀನಗರ: ಚಳಿ ತಡೆಯದೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಶ್ರೀನಗರ (Srinagar) ಜಿಲ್ಲೆಯ ಪಂದ್ರಾಥಾನ್ ಪ್ರದೇಶದಲ್ಲಿ (Pandrathan Area) ನಡೆದಿದೆ.

    ಮೃತರನ್ನು ಮೂಲತಃ ಬಾರಾಮುಲ್ಲಾ ಜಿಲ್ಲೆಯವರು ಎನ್ನಲಾಗಿದ್ದು, ದಂಪತಿ ಸೇರಿದಂತೆ 3 ಮಕ್ಕಳು ಒಟ್ಟು ಐವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಇಬ್ಬರ ದುರ್ಮರಣ

    ಬಾರಮುಲ್ಲಾ ಜಿಲ್ಲೆಯಿಂದ ಬಂದಿದ್ದ ಕುಟುಂಬ ಪಂದ್ರಾಥಾನ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜಿಲ್ಲೆಯಲ್ಲಿರುವ ಚಳಿಯ ಪರಿಣಾಮದಿಂದ ಉಸಿರುಗಟ್ಟಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ರವಾನಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದುಃಖ ವ್ಯಕ್ತಪಡಿಸಿದ್ದು, ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಚಳಿಗಾಲದ ತಿಂಗಳುಗಳಲ್ಲಿ ಬಿಸಿಮಾಡುವ ಸಾಧನಗಳನ್ನು ಬಳಸುವಾಗ ಅತ್ಯಂತ ಜಾಗರೂಕರಾಗಿರಿ. ಇಂತಹ ದುರಂತ ಘಟನೆಗಳನ್ನು ತಡೆಗಟ್ಟಲು ಬಿಸಿ ಉಪಕರಣಗಳ ಸುರಕ್ಷಿತ ಬಳಕೆಯ ಸಲಹೆಗಳನ್ನು ಪಾಲಿಸಿ. ವಿವೇಚನೆಯಿಲ್ಲದೇ ಯಾವುದನ್ನು ಕೂಡ ಬಳಸಬೇಡಿ. ಈ ಗ್ಯಾಜೆಟ್‌ಗಳು ಕಾರ್ಬನ್ ಮಾನಾಕ್ಸೈಡ್ ಅನ್ನು ಉತ್ಪಾದಿಸುತ್ತವೆ ಮತ್ತು ಸಂಪೂರ್ಣವಾಗಿ ಮುಚ್ಚಿದ ಕೋಣೆಯಲ್ಲಿ ಈ ಉಪಕರಣಗಳನ್ನು ಬಳಸುವುದು ಮಾರಕ ಎಂದು ತಿಳಿಸಿದರು.ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು – ಸಾವಿನ ಸಂಖ್ಯೆ 12ಕ್ಕೆ ಏರಿಕೆ

  • ಶುಭ್ರವಾದ ನೀಲಿ ಆಕಾಶದಿಂದ ರಾಜ್ಯದಲ್ಲಿ ಹೆಚ್ಚಾಗಿದೆ ಚಳಿ

    ಶುಭ್ರವಾದ ನೀಲಿ ಆಕಾಶದಿಂದ ರಾಜ್ಯದಲ್ಲಿ ಹೆಚ್ಚಾಗಿದೆ ಚಳಿ

    ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸಿಕ್ಕಪಟ್ಟೆ ಚಳಿ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಸೋಮವಾರ ಬೀದರ್ ನಲ್ಲಿ ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್ ಕಡಮೆ ತಾಪಮಾನ ದಾಖಲಾಗಿದೆ. ಬರೀ ಬೀದರ್ ಮಾತ್ರವಲ್ಲ ಶಿವಮೊಗ್ಗ, ಚಿತ್ರದುರ್ಗ, ಹಾಸನ, ವಿಜಯಪುರ, ರಾಯಚೂರು ಸೇರಿದಂತೆ ಹಲವೆಡೆ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಈ ರೀತಿಯ ವಾತಾವರಣವಿಲ್ಲ. ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿಲ್ಲ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗಿದೆ.

    ಈ ರೀತಿ ಕನಿಷ್ಠ ತಾಪಮಾನ ದಾಖಲಾಗಲು ಪ್ರಮುಖ ಕಾರಣ ಶುಭ್ರವಾದ ನೀಲಿ ಆಕಾಶ. ಕಳೆದ ವಾರ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಆದರೆ ಈ ವಾರ ಮೋಡವೇ ಇಲ್ಲ. ಹೀಗಾಗಿ ಬೆಳಗ್ಗಿನ ಸಮಯದಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದೆ.

    ಉತ್ತರ ಭಾರತದಲ್ಲಿ ಮಳೆಯಾಗ್ತಿದ್ದು, ಅಲ್ಲಿನ ಶೀತ ಗಾಳಿಯ ಪ್ರಭಾವವೂ ಕೂಡ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಕಾರಣವಾಗಿದೆ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಯ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ವಿಶೇಷವೆಂದರೆ ದೇಶದಲ್ಲೇ ಸೋಮವಾರ ಗರಿಷ್ಠ ತಾಪಮಾನ ನಮ್ಮ ರಾಜ್ಯದಲ್ಲಿ ದಾಖಲಾಗಿದೆ. ಕಾರವಾರದಲ್ಲಿ ಸೋಮವಾರ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.