Tag: Cold Wave

  • ರಾಜ್ಯದ ಹವಾಮಾನ ವರದಿ 16-01-2025

    ರಾಜ್ಯದ ಹವಾಮಾನ ವರದಿ 16-01-2025

    ಮುಂದಿನ 2 ದಿನಗಳ ಕಾಲ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದರೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.

    ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-17
    ಮಂಗಳೂರು: 32-23
    ಶಿವಮೊಗ್ಗ: 30-18
    ಬೆಳಗಾವಿ: 29-19
    ಮೈಸೂರು: 29-18

    ಮಂಡ್ಯ: 28-18
    ಮಡಿಕೇರಿ: 29-16
    ರಾಮನಗರ: 28-18
    ಹಾಸನ: 27-16
    ಚಾಮರಾಜನಗರ: 29-17
    ಚಿಕ್ಕಬಳ್ಳಾಪುರ: 25-16

    ಕೋಲಾರ: 24-17
    ತುಮಕೂರು: 27-17
    ಉಡುಪಿ: 29-22
    ಕಾರವಾರ: 34-24
    ಚಿಕ್ಕಮಗಳೂರು: 26-15
    ದಾವಣಗೆರೆ: 29-19

    ಹುಬ್ಬಳ್ಳಿ: 30-19
    ಚಿತ್ರದುರ್ಗ: 27-17
    ಹಾವೇರಿ: 30-19
    ಬಳ್ಳಾರಿ: 29-19
    ಗದಗ: 29-18
    ಕೊಪ್ಪಳ: 29-19

    ರಾಯಚೂರು: 30-20
    ಯಾದಗಿರಿ: 30-19
    ವಿಜಯಪುರ: 31-19
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 31-20

  • ರಾಜ್ಯದ ಹವಾಮಾನ ವರದಿ 14-01-2025

    ರಾಜ್ಯದ ಹವಾಮಾನ ವರದಿ 14-01-2025

    ಇಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದರೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.

    ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಜನವರಿ 15ರಿಂದ ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-23
    ಶಿವಮೊಗ್ಗ: 29-19
    ಬೆಳಗಾವಿ: 31-19
    ಮೈಸೂರು: 29-18

    ಮಂಡ್ಯ: 28-19
    ಮಡಿಕೇರಿ: 28-17
    ರಾಮನಗರ: 28-19
    ಹಾಸನ: 27-17
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 25-17

    ಕೋಲಾರ: 25-17
    ತುಮಕೂರು: 27-17
    ಉಡುಪಿ: 31-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 29-20

    ಹುಬ್ಬಳ್ಳಿ: 31-19
    ಚಿತ್ರದುರ್ಗ: 28-18
    ಹಾವೇರಿ: 31-20
    ಬಳ್ಳಾರಿ: 29-19
    ಗದಗ: 29-19
    ಕೊಪ್ಪಳ: 30-19

    ರಾಯಚೂರು: 31-20
    ಯಾದಗಿರಿ: 31-19
    ವಿಜಯಪುರ: 31-20
    ಬೀದರ್: 30-18
    ಕಲಬುರಗಿ: 31-19
    ಬಾಗಲಕೋಟೆ: 32-20

  • ರಾಜ್ಯದ ಹವಾಮಾನ ವರದಿ 12-01-2025

    ರಾಜ್ಯದ ಹವಾಮಾನ ವರದಿ 12-01-2025

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 3-4 ದಿನಗಳ ಶೀತಗಾಳಿ ಹಾಗೂ ಚಳಿಯ ವಾತಾವರಣ ಮುಂದಯವರಿಯಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹಾಗೂ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 31-23
    ಶಿವಮೊಗ್ಗ: 30-19
    ಬೆಳಗಾವಿ: 30-19
    ಮೈಸೂರು: 31-20

    ಮಂಡ್ಯ: 31-21
    ಮಡಿಕೇರಿ: 29-17
    ರಾಮನಗರ: 30-21
    ಹಾಸನ: 28-17
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 27-18

    ಕೋಲಾರ: 27-19
    ತುಮಕೂರು: 29-18
    ಉಡುಪಿ: 30-23
    ಕಾರವಾರ: 31-22
    ಚಿಕ್ಕಮಗಳೂರು: 27-16
    ದಾವಣಗೆರೆ: 30-19

    ಹುಬ್ಬಳ್ಳಿ: 30-19
    ಚಿತ್ರದುರ್ಗ: 28-19
    ಹಾವೇರಿ: 31-19
    ಬಳ್ಳಾರಿ: 29-19
    ಗದಗ: 28-18
    ಕೊಪ್ಪಳ: 29-19

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 31-19
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 31-19

  • ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ – ತಾಪಮಾನ ಇನ್ನಷ್ಟು ಕುಸಿತ

    ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ – ತಾಪಮಾನ ಇನ್ನಷ್ಟು ಕುಸಿತ

    ಬೆಂಗಳೂರು: ಮುಂದಿನ ಮೂರು ದಿನ ಕರ್ನಾಟಕದ (Karnataka) ಹಲವು ಜಿಲ್ಲೆಗಳಿಗೆ ಶೀತಗಾಳಿಯ (Cold Wave) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದೆ. ಇದನ್ನೂ ಓದಿ: ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    ಇನ್ನು ರಾಜ್ಯಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಕೆಲವೆಡೆ 15 ಡಿಗ್ರಿಗಿಂತ ಕೆಳಗೆ ತಾಪಮಾನ ಕುಸಿದಿದೆ. ಮುಂದಿನ 3 ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕನಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ ಮಂಜು ಮುಸುಕಿನ ವಾತಾವರಣ ಮುಂದುವರೆಯಲಿದೆ. ಇದನ್ನೂ ಓದಿ: ನಾಯಿ ಮೇಲೆ ಯುವಕನಿಂದ ಮನಸೋ ಇಚ್ಛೆ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಜಿಲ್ಲೆಗಳಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶ:
    ವಿಜಯಪುರ- 10.6 ಡಿ.ಸೆ
    ಚಿಕ್ಕಮಗಳೂರು- 10.2 ಡಿ.ಸೆ
    ಚಿಂತಾಮಣಿ- 10.8 ಡಿ.ಸೆ
    ಬೀದರ್ – 11 ಡಿ.ಸೆ
    ದಾವಣಗೆರೆ- 11 ಡಿ.ಸೆ
    ಬೆಳಗಾವಿ ಏರ್ಪೋರ್ಟ್- 11.4 ಡಿ.ಸೆ

  • ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ – ಬೀದರ್‌ನಲ್ಲಿ ರೆಡ್ ಅಲರ್ಟ್ ಘೋಷಣೆ

    ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ – ಬೀದರ್‌ನಲ್ಲಿ ರೆಡ್ ಅಲರ್ಟ್ ಘೋಷಣೆ

    ಬೀದರ್: ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ (Cold Wave) ಬೀಸುವ ಹಿನ್ನೆಲೆ ಹವಾಮಾನ ಇಲಾಖೆ (IMD) ಹಾಗೂ ಜಿಲ್ಲಾಡಳಿತ ಬೀದರ್ (Bidar) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಜನರಿಗೆ ಎಚ್ಚರಿಕೆ ನೀಡಿದೆ.

    10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7 ಡಿಗ್ರಿಗೆ ಇಳಿಕೆಯಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಕನಿಷ್ಟ 5 ರಿಂದ 6 ಡಿಗ್ರಿಗೆ ಇಳಿಕೆಯಾಗುವ ಎಚ್ಚರಿಕೆ ನೀಡಿದೆ. ಸೂರ್ಯೋದಯಕ್ಕಿಂತ ಮುಂಚೆ ಇಲ್ಲಾ ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ಬೀದರ್‌ನಲ್ಲಿ ಸಂಪೂರ್ಣವಾಗಿ ತಾಪಮಾನ ಕುಸಿತಗೊಂಡಿದೆ. ಭಾರೀ ಶೀತಗಾಳಿಯಿಂದ ರಣಚಂಡಿ ಚಳಿಗೆ ಗಡಿ ಜಿಲ್ಲೆ ಬೀದರ್ ಜನರು ಅಕ್ಷರಶಃ ತತ್ತರಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ದಾಖಲಾಗಿದ್ದು, ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ

    ಚಳಿಗೆ ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದು, ರಣಚಂಡಿ ಚಳಿಯಿಂದ ತಪ್ಪಿಸಿಕೊಳ್ಳಲು ಗುಂಪು ಗುಂಪಾಗಿ ಚಳಿಕಾಯಿಸುತ್ತಿದ್ದಾರೆ. ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿದೆ. ಈ ಹಿನ್ನೆಲೆ ಜನರು ಹಾಗೂ ರೈತರು ಅನಾವಶ್ಯಕವಾಗಿ ಹೊರ ಬಾರದಂತೆ ರೆಡ್ ಅಲರ್ಟ್ ಘೋಷಣೆ ಮಾಡಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

  • ರಾಜ್ಯದಲ್ಲಿ ಮುಂದಿನ 6 ದಿನ ಚಳಿ ಹೆಚ್ಚಳ ಸಾಧ್ಯತೆ

    ರಾಜ್ಯದಲ್ಲಿ ಮುಂದಿನ 6 ದಿನ ಚಳಿ ಹೆಚ್ಚಳ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಅಬ್ಬರ ಜೋರಾಗಿದೆ. ಪ್ರತಿವರ್ಷದ ವಾಡಿಕೆ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚು ಚಳಿ (Cold Wave) ಅಬ್ಬರಿಸುತ್ತಿದ್ದು ಮುಂದಿನ ಹಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ.

    ಇದರ ಮಧ್ಯ ಶೀತಗಾಳಿಯ ಎಚ್ಚರಿಕೆ ಸಹ ನೀಡಲಾಗಿದ್ದು ದಕ್ಷಿಣ ಒಳನಾಡು, ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಭಾನುವಾರದಿಂದ 6 ದಿನಗಳ ಕಾಲ ಕರ್ನಾಟಕದ (Karnataka) ಬಹುತೇಕ ಜಿಲ್ಲೆಗಳಲ್ಲಿ ಮಂಜು ಕವಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ (Bengaluru) ಜ.15 ರಿಂದ 19 ರವರೆಗೆ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದೆಡೆ ಶೀತ ಗಾಳಿ ಹೆಚ್ಚಾಗಲಿದೆ. ಹಾಗೇ, ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಹೆಚ್ಚಾಗುತ್ತಲೇ ಇದೆ. ಕರ್ನಾಟಕದ ಕೆಲವು ಭಾಗಗಳಲ್ಲಿ, ಶೀತ ಅಲೆಗಳ ಪರಿಸ್ಥಿತಿ ಇರುತ್ತದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಬಾಗಲಕೋಟೆ, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಲಿದೆ ಸಂಕ್ರಾಂತಿ ಸೂರ್ಯ ರಶ್ಮಿ..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದೆಲ್ಲೆಡೆ ಈಗ ಚಳಿಯೋ ಚಳಿ – ಎಲ್ಲಿ ಎಷ್ಟು ಉಷ್ಣಾಂಶ ದಾಖಲಾಗಿದೆ?

    ರಾಜ್ಯದೆಲ್ಲೆಡೆ ಈಗ ಚಳಿಯೋ ಚಳಿ – ಎಲ್ಲಿ ಎಷ್ಟು ಉಷ್ಣಾಂಶ ದಾಖಲಾಗಿದೆ?

    ಬೆಂಗಳೂರು: ರಾಜ್ಯದೆಲ್ಲೆಡೆ ಈಗ ಚಳಿಯೋ ಚಳಿ. ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲೂ ಈಗ ಭಯಂಕರ ಚಳಿ ಆರಂಭವಾಗಿದೆ.

    ಉತ್ತರ ಕರ್ನಾಟಕದಲ್ಲಿ ಭೀಕರ ಚಳಿಗೆ ಜನ ಹೈರಾಣಾಗಿದ್ದು, ಜನವರಿ 10ರವರೆಗೂ ಚಳಿ ಇದೇ ರೀತಿ ಮುಂದುವರಿಯಲಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 2012ರ ನಂತರ ಮೊದಲ ಬಾರಿಗೆ ಈ ರೀತಿಯ ತಾಪಮಾನ ದಾಖಲಾಗಿದೆ.

    ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ಯ ನಿರ್ದೇಶಕ ಡಾ ಜಿ ಎಸ್ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿ, ಬುಧವಾರ ಬೆಂಗಳೂರಿನ ಉತ್ತರ ಭಾಗದ ಹಲವು ಪ್ರದೇಶಗಳಲ್ಲಿ 9-11 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹೇಳಿದ್ದಾರೆ.

    ತಿಂಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪೆಥಾಯ್ ಚಂಡಮಾರುತ ಸೃಷ್ಟಿಯಾಗಿ ಜನ ಕೊರೆವ ಚಳಿಗೆ ನಡುಗುವಂತಾಗಿತ್ತು. ಈಗ ಶೀತಮಾರುತದ ಪ್ರಭಾವದಿಂದ ಮತ್ತೆ ಜನ ಚಳಿಗೆ ನಡಗುವ ಸ್ಥಿತಿ ನಿರ್ಮಾಣವಾಗಿದೆ.

    ಬೆಂಗಳೂರಿನಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಎಂಟು ಗಂಟೆವರೆಗಿನ ತಾಪಮಾನ ಕನಿಷ್ಠ ಕಳೆದ ಎರಡು ದಿನಗಳಿಂದ 11 ಡಿಗ್ರಿ ಸೆಲ್ಸಿಯಸ್‍ವರೆಗೆ ತಲುಪಿದೆ. ಚಳಿಯಿಂದ ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಹಗಲಿನಲ್ಲೂ ತಂಪಾದ ವಾತಾವರಣ ನಿರ್ಮಾಣವಾಗಿದ್ದು ಜನ ಜಾಕೆಟ್, ಸ್ವೆಟರ್ ಹಾಕಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

    ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಆದರೆ ಈ ವರ್ಷ ಇದು ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದೇ ಹೇಳಲಾಗುತ್ತಿದೆ. ನಾಲ್ಕೈದು ದಿನದ ಹಿಂದೆ ಬೆಂಗಳೂರಿನಲ್ಲಿ 15-16 ಡಿಗ್ರಿ ಸೆಲ್ಸಿಯಸ್‍ನಷ್ಟಿದ್ದ ತಾಪಮಾನ ಎರಡು ದಿನಗಳಿಂದ 10-11 ಡಿಗ್ರಿಗೆ ತಲುಪಿದೆ. ಉತ್ತರ ಕರ್ನಾಟಕದಲ್ಲೂ ಚಳಿ ಜೋರಿದ್ದು ಹಲವು ಪ್ರದೇಶಗಳಲ್ಲಿ 14, 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಮುಸುಕಿನಾಟದಿಂದ ರಸ್ತೆ ಸರಿಯಾಗಿ ಗೋಚರಿಸದ ಪರಿಣಾಮ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆ ವಾಕಿಂಗ್ ಹೋಗುವವರು ತಲೆಗೆ ಟೋಪಿ, ಸ್ವೆಟರ್ ಧರಿಸಿ ವಾಕ್ ಮಾಡುತ್ತಿದ್ದಾರೆ.

    ಎಲ್ಲಿ ಎಷ್ಟು ತಾಪಮಾನ?
    * ಆಗುಂಬೆ – 15 ಡಿಗ್ರಿ ಸೆಲ್ಸಿಯಸ್
    * ಬೀದರ್ – 13 ಡಿಗ್ರಿ ಸೆಲ್ಸಿಯಸ್
    * ಧಾರವಾಡ – 14 ಡಿಗ್ರಿ ಸೆಲ್ಸಿಯಸ್
    * ವಿಜಯಪುರ – 15 ಡಿಗ್ರಿ ಸೆಲ್ಸಿಯಸ್

    * ಹಾವೇರಿ – 14 ಡಿಗ್ರಿ ಸೆಲ್ಸಿಯಸ್
    * ಬೆಳಗಾವಿ – 14 ಡಿಗ್ರಿ ಸೆಲ್ಸಿಯಸ್
    * ಶಿವಮೊಗ್ಗ – 14 ಡಿಗ್ರಿ ಸೆಲ್ಸಿಯಸ್
    * ಹಾಸನ – 12 ಡಿಗ್ರಿ ಸೆಲ್ಸಿಯಸ್
    * ಮೈಸೂರು – 13 ಡಿಗ್ರಿ ಸೆಲ್ಸಿಯಸ್
    * ಬೆಂಗಳೂರು – 11 ಡಿಗ್ರಿ ಸೆಲ್ಸಿಯಸ್

    ಮಹಾನಗರಗಳಲ್ಲಿ ಎಷ್ಟು?
    ದೆಹಲಿ 8 ಡಿಗ್ರಿ ಸೆಲ್ಸಿಯಸ್
    ಕೋಲ್ಕತ್ತಾ 12 ಡಿಗ್ರಿ ಸೆಲ್ಸಿಯಸ್
    ಮುಂಬೈ 21 ಡಿಗ್ರಿ ಸೆಲ್ಸಿಯಸ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಥಾಯ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ!

    ಪೆಥಾಯ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ!

    ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಪೆಥಾಯ್ ಚಂಡಮಾರುತದ ಅಬ್ಬರದಿಂದ ರಾಜ್ಯದಲ್ಲಿ ಮೋಡದ ಜೊತೆಗೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ.

    ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ ಸುಮಾರು 7 ಗಂಟೆಯವರೆಗೂ ಕೊರೆಯುವ ಚಳಿಯಿದೆ. ಸೋಮವಾರ ಬೆಂಗಳೂರು ಗ್ರಾಮಾಂತರದಲ್ಲಿ 11.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಅತಿಕಡಿಮೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹಿಮದಿಂದ ಕೂಡಿದ ಚಳಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಎಲ್ಲೆಲ್ಲಿ ಎಷ್ಟು?
    ಸೋಮವಾರ ಬೆಂಗಳೂರು ಗ್ರಾಮಾಂತರ 11.8 ಡಿಗ್ರಿ, ಹಾಸನ 11.9 ಡಿಗ್ರಿ, ಕೊಡಗು 12.4 ಡಿಗ್ರಿ, ಬೆಂಗಳೂರು ನಗರದಲ್ಲಿ 12.8 ಡಿಗ್ರಿ ತಾಪಮಾನ ದಾಖಲಾಗಿದೆ.

    ಉಡುಪಿಯಲ್ಲಿ ಅತಿ ಹೆಚ್ಚು 20.1 ಡಿಗ್ರಿ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ 19 ಡಿಗ್ರಿ, ಉತ್ತರ ಕನ್ನಡ 17.7 ಡಿಗ್ರಿ, ಬಳ್ಳಾರಿ 15.9 ಡಿಗ್ರಿ, ಬಾಗಲಕೋಟ 14.6 ಡಿಗ್ರಿ, ಬೀದರ್ 14.5 ಡಿಗ್ರಿ, ಚಿಕ್ಕಬಳ್ಳಾಪುರ 13.2 ಡಿಗ್ರಿ, ಚಿಕ್ಕಮಗಳೂರು 13.3 ಡಿಗ್ರಿ, ಹಾವೇರಿ 14.6 ಡಿಗ್ರಿ, ಕಲಬುರಗಿ 14.7 ಡಿಗ್ರಿ, ಧಾರವಾಡ 13.5 ಡಿಗ್ರಿ ತಾಪಮಾನ ದಾಖಲಾಗಿದೆ.

    ಆಂಧ್ರ, ತಮಿಳುನಾಡಲ್ಲಿ ಭಾರೀ ಮಳೆ:
    ಪೆಥಾಯಿ ಚಂಡಮಾರುತ ಸೋಮವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಅಪ್ಪಳಿಸಿದೆ. ಈಗ ಆಂಧ್ರ, ತಮಿಳುನಾಡು ಕರಾವಳಿ ಭಾಗದಲ್ಲಿ ಮಳೆಯಬ್ಬರ ಜೋರಾಗಿದ್ದು, ಸಾವಿರಾರು ಜನ ಅತಂತ್ರರಾಗಿದ್ದಾರೆ. ಅಲ್ಲದೆ ಆಂಧ್ರದಲ್ಲಿ ಈಗಾಗಲೇ ನಾಲ್ವರು ಬಲಿಯಾಗಿದ್ದಾರೆ. ಅಮಲಾಪುರದಲ್ಲಿ ಚಂಡಮಾರುತದ ಮಳೆಯ ನೀರಿನ ಜೊತೆಗೆ ಗ್ರಾಮದೊಳಗೆ ಮೀನುಗಳು ಬರುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv