Tag: Cold DrinkS

  • ಮನೆಯಲ್ಲೇ ಮಾಡಿ ನಿಂಬೆ ಹಣ್ಣಿನ ಮೊಜಿಟೋ!

    ಮನೆಯಲ್ಲೇ ಮಾಡಿ ನಿಂಬೆ ಹಣ್ಣಿನ ಮೊಜಿಟೋ!

    ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ತಂಪಾದ ನೀರು, ಪಾನೀಯ ಹಾಗೂ ಇನ್ನಿತರ ಕೋಲ್ಡ್ ಜ್ಯೂಸ್ ಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹೆಚ್ಚಿನ ಜನರು ಹೊರಗಿನ ಅಂಗಡಿಗಳಲ್ಲಿ ಮಾಡುವ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಕೆಲವು ಜ್ಯೂಸ್ ಹಾಗೂ ಪಾನೀಯಗಳನ್ನು ಬಣ್ಣದ ಮಿಶ್ರಣ ಹಾಗೂ ಇನ್ನಿತರ ಕೆಮಿಕಲ್ ಗಳನ್ನು ಬಳಸಿ ಮಾಡಿಕೊಡುತ್ತಾರೆ. ಹೀಗಿರುವಾಗ ಈ ಬೇಸಿಗೆಗೆ ತಂಪಾದ ನಿಂಬೆಹಣ್ಣಿನ ಮಜಿಟೋವನ್ನು (Lime Mojito) ಮನೆಯಲ್ಲಿ ಸುಲಭವಾಗಿ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು :
    ಮಂಜುಗಡ್ಡೆ (Ice Cube)
    ನಿಂಬೆಹಣ್ಣು
    ಮೆಣಸಿನಕಾಯಿ
    ಉಪ್ಪು
    ಕರಿಮೆಣಸಿನ ಪುಡಿ
    ಪುದಿನಾ

    ಮಾಡುವ ವಿಧಾನ :
    ಮೊದಲಿಗೆ ಒಂದು ಮಿಕ್ಸಿ ಜಾರ್ ಗೆ ಮಂಜುಗಡ್ಡೆಯನ್ನು ಹಾಕಿ ಒಂದು ಬಾರಿ ರುಬ್ಬಿಕೊಳ್ಳಿ. ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನಿಂಬೆರಸ, ಮೆಣಸಿನ ಕಾಯಿ ಹಾಗೂ ಪುದಿನಾ, ಉಪ್ಪು, ಕರಿಮೆಣಸಿನ ಪುಡಿ ಹಾಕಿ ರುಬ್ಬಿಕೊಳ್ಳಿ. ಕೊನೆಗೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿಕೊಂಡು ಸರಿಯಾಗಿ ರುಬಿಕೊಳ್ಳಿ.

    ಬಳಿಕ ಒಂದು ತಟ್ಟೆಗೆ ಉಪ್ಪು, ಕೆಂಪು ಮೆಣಸಿನ ಪುಡಿ ಕಲಸಿಟ್ಟು, ಒಂದು ಗಾಜಿನ ಲೋಟದ ಬಾಯಿಗೆ ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯ ಮಿಶ್ರಣ ಮೆತ್ತಿಕೊಳ್ಳುವ ಹಾಗೆ ಹೊರಳಾಡಿಸಿ. ಬಳಿಕ ನೀವು ತಯಾರಿಸಿದ್ದ ಪಾನೀಯವನ್ನು ಗಾಜಿನ ಲೋಟಕ್ಕೆ ಹಾಕಿ, ಕೊನೆಗೆ ತಂಪಾದ ನಿಂಬೆ ಹಣ್ಣಿನ ಚಿಲ್ಡ್ ಮಜಿಟೋ (Chilled Mojito) ಸವಿಯಲು ಸಿದ್ಧವಾಗಿರುತ್ತದೆ.

  • ಕೋಲ್ಡ್ ಡ್ರಿಂಕ್ಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅಪ್ರಾಪ್ತೆ ಮೇಲೆ ರೇಪ್

    ಕೋಲ್ಡ್ ಡ್ರಿಂಕ್ಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅಪ್ರಾಪ್ತೆ ಮೇಲೆ ರೇಪ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆಯ ಸ್ನೇಹ ಬೆಳೆಸಿದ್ದ. ಇದಾದ ಬಳಿಕ ಬಾಲಕಿಯನ್ನು ಭೇಟಿಯಾಗಿದ್ದನು. ಆ ವೇಳೆ ಆಕೆಯ ಮೇಲೆ ಆತ ಅತ್ಯಾಚಾರವೆಸಗಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆಸುವ ಮೊದಲು ಬಾಲಕಿಗೆ ಕೋಲ್ಡ್ ಡ್ರಿಂಕ್ಸ್ ನೀಡಿದ್ದನು. ಆ ಕೋಲ್ಡ್ ಡ್ರಿಂಕ್ಸ್‌ನಲ್ಲಿ ನಿದ್ದೆ ಮಾತ್ರೆಯನ್ನು ಯುವಕ ಬೆದರಿಸಿದ್ದ. ಇದನ್ನೂ ಓದಿ: ಶಾಸಕ ಬಸವರಾಜ್ ದಡೆಸಗೂರುರಿಂದ ಅನ್ಯಾಯ – ನೇಣು ಬಿಗಿದುಕೊಳ್ಳಲು ಮುಂದಾದ ಮಹಿಳಾಧಿಕಾರಿ

    ಇದಾದ ನಂತರ ಪೋಷಕರಿಗೆ ತಿಳಿಸಿದರೆ ವೀಡಿಯೋವನ್ನು ಇಂಟರ್‌ನೆಟ್‍ನಲ್ಲಿ ಅಪ್‍ಲೋಡ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಈ ರೀತಿ ಬೆದರಿಕೆ ಹಾಕುತ್ತಾ ಕಳೆದ 4 ವರ್ಷದಿಂದ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಅಪ್ರಾಪ್ತೆಯು ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತೆಯ ಹೇಳಿಕೆ ಆಧಾರದ ಮೇಲೆ ಪುಣೆ ಭಾರತಿ ವಿದ್ಯಾಪೀಠ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದೊಂದಿಗೆ ಮುನ್ನಡೆಯುತ್ತಿದೆ: ಮೋದಿ

  • ಪೊಲೀಸ್ ಸಿಬ್ಬಂದಿಗೆ ಹಣ್ಣು, ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

    ಪೊಲೀಸ್ ಸಿಬ್ಬಂದಿಗೆ ಹಣ್ಣು, ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

    ಮಡಿಕೇರಿ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಕಫ್ರ್ಯೂ ಜಾರಿಗೊಳಿಸಿ ನಾಲ್ಕು ದಿನ ಕಳೆಯುತ್ತಿದೆ. ಈ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ಮಾಡುತ್ತಿರುವ ಪೊಲೀಸರು. ಸುಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಹೀಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಗೆ ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ಇಂದು ಪೊಲೀಸರಿಗೆ ಹಣ್ಣು ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು. ಕೊರೊನಾ ಮಹಾಮಾರಿ ತಡೆಗಟ್ಟಲು ಹಗಲು ರಾತ್ರಿ ಸಾರ್ವಜನಿಕರಿಗಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆಯ ಕಾರ್ಯವನ್ನು ಮನಗಂಡು ತಿತಿಮತಿ ಗಡಿಬಾಗದಿಂದ ಗೋಣಿಕೊಪ್ಪಲು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಹಣ್ಣು ಹಾಗೂ ತಂಪು ಪಾನೀಯಗಳ ಕಿಟ್ ವಿತರಿಸಿದರು.

    ಕಫ್ರ್ಯೂ ಹಿನ್ನೆಲೆಯಲ್ಲಿ ಪೊಲೀಸರಿಗೆ ಸರಿಯಾದ ಸಮಯಕ್ಕೆ ಊಟ, ಕಾಫಿ, ತಂಪು ಪಾನಿಯಗಳು ಸಿಗುತ್ತಿಲ್ಲ. ಸದಾ ಸಾರ್ವಜನಿಕರಿಗಾಗಿ ದುಡಿಯುವ ಪೊಲೀಸರ ಕಷ್ಟವನ್ನರಿತ ಯುವ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.

  • ತಂಪು ಪಾನೀಯ ಗೋದಾಮಿಗೆ ಬೆಂಕಿ- ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ತಂಪು ಪಾನೀಯ ಗೋದಾಮಿಗೆ ಬೆಂಕಿ- ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಶಿವಮೊಗ್ಗ: ತಂಪು ಪಾನೀಯ ಹಾಗೂ ಕುರ್ ಕುರೆ ಸೇರಿದಂತೆ ಇತರೆ ರೆಡಿಪುಡ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

    ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಿಂಭಾಗದ ಗೋದಾಮಿನಲ್ಲಿ ಬೆಳಗಿನಜಾವ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ದುರ್ವೇಶ್ ಅಸೋಸಿಯೇಷನ್ ರಫೀಕ್ ಮಾಲೀಕತ್ವದ ಸಗಟು ವ್ಯಾಪಾರ ಮಳಿಗೆಯಾಗಿದ್ದು, ದುರ್ವೇಶ್ ಅಸೋಸಿಯೇಷನ್ ಮೂಲಕ ಇಡೀ ಜಿಲ್ಲೆಗೆ ತಂಪು ಪಾನೀಯ ಹಾಗೂ ಕುರುಕಲು ತಿಂಡಿಯನ್ನು ವಿವಿಧ ಅಂಗಡಿಗಳಿಗೆ ವಿತರಣೆ ಮಾಡಲಾಗುತ್ತದೆ.

    ಬೆಳಗಿನ ಜಾವ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಕ್ಕದ ಮನೆಯವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೋದಾಮಿನಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿ ಆಗಿರುವುದರಿಂದ ಸಂಪೂರ್ಣ ಹಾನಿಯಾಗಿದೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.