Tag: coins

  • ದೇಹ ಗಟ್ಟಿಯಾಗಿರಲೆಂದು 39 ನಾಣ್ಯ, 37 ಅಯಸ್ಕಾಂತಗಳನ್ನು ನುಂಗಿದ ವ್ಯಕ್ತಿ!

    ದೇಹ ಗಟ್ಟಿಯಾಗಿರಲೆಂದು 39 ನಾಣ್ಯ, 37 ಅಯಸ್ಕಾಂತಗಳನ್ನು ನುಂಗಿದ ವ್ಯಕ್ತಿ!

    ನವದೆಹಲಿ: ಸತು ದೇಹವನ್ನು ಸದೃಢವಾಗಿಸುತ್ತದೆ ಎಂದು ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು (Coins) ಮತ್ತು 37 ಅಯಸ್ಕಾಂತಗಳನ್ನು (Magnets) ವೈದ್ಯರು ಹೊರತೆಗೆದಿದ್ದಾರೆ.

    ದೆಹಲಿಯ (Delhi) 26 ವರ್ಷದ ರೋಗಿಯೊಬ್ಬರು 20 ದಿನಗಳಿಗೂ ಹೆಚ್ಚು ಕಾಲ ಪದೇ ಪದೇ ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿ ಏನನ್ನು ತಿನ್ನದೇ ಇದ್ದಾಗ ಅನುಮಾನಗೊಂಡು ವೈದ್ಯರು, ಎಕ್ಸ್ ರೇ ಮಾಡಿ ನೋಡಿದಾಗ ನಾಣ್ಯಗಳು ಹಾಗೂ ಅಯಸ್ಕಾಂತಗಳು ಕರುಳಿನಲ್ಲಿ ಇರುವುದು ಬೆಳಕಿಗೆ ಬಂದಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರಗೆ ತೆಗೆದಿದ್ದಾರೆ. ಇದನ್ನೂ ಓದಿ: ಪಕ್ಷಾಂತರ; 8 ಶಾಸಕರ ಅನರ್ಹಗೊಳಿಸಿದ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್‌

    ವ್ಯಕ್ತಿಯ ಹೊಟ್ಟೆಯಿಂದ 1, 2, 5 ರೂ.ಗಳ ನಾಣ್ಯಗಳು ಮತ್ತು ಹೃದಯ, ಗೋಳ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರದ ಅಯಸ್ಕಾಂತಗಳನ್ನು ಹೊರತೆಗೆಯಲಾಗಿದೆ. ಈ ಹಿಂದೆಯೂ ರೋಗಿಗಳು ಅಯಸ್ಕಾಂತ ಹಾಗೂ ನಾಣ್ಯಗಳನ್ನು ಸೇವಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ.ತರುಣ್ ಮಿತ್ತಲ್ ಹೇಳಿದ್ದಾರೆ.

    ನಾಣ್ಯವನ್ನು ನುಂಗಿದ ವ್ಯಕ್ತಿಯು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ದೇಹ ಗಟ್ಟಿಯಾಗುತ್ತದೆ ಎಂದು ನಾಣ್ಯಗಳು ಮತ್ತು ಅಯಸ್ಕಾಂತಗಳನ್ನು ನುಂಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‍ನಲ್ಲಿ ಕುಡುಕರ ಗಲಾಟೆ- ಓರ್ವನನ್ನು ತಳ್ಳಿ ಹತ್ಯೆಗೈದ

  • 3 ವರ್ಷಗಳಿಂದ 1 ರೂ. ನಾಣ್ಯ ಸಂಗ್ರಹಿಸಿ ಕನಸಿನ ಬೈಕ್ ಖರೀದಿಸಿದ ಯುವಕ!

    3 ವರ್ಷಗಳಿಂದ 1 ರೂ. ನಾಣ್ಯ ಸಂಗ್ರಹಿಸಿ ಕನಸಿನ ಬೈಕ್ ಖರೀದಿಸಿದ ಯುವಕ!

    ಚೆನ್ನೈ: ಇಲ್ಲೊಬ್ಬ ಯುವಕ 1 ರೂ. ನಾಣ್ಯಗಳನ್ನು ಕಳೆದ 3 ವರ್ಷಗಳಿಂದ ಸಂಗ್ರಹಿಸಿ ಇದೀಗ 2.6 ಲಕ್ಷ ರೂ. ನೀಡಿ ತನ್ನ ಕನಸಿನ ಬೈಕ್ ಖರಿದಿಸುವ ಮೂಲಕ ಸುದ್ದಿಯಾಗಿದ್ದಾನೆ.

    ತಮಿಳುನಾಡಿನ ಸೇಲಂ ಮೂಲದ ವಿ.ಬೂಬತಿ ಬೈಕ್ ಖರೀದಿಸಿದ ಯುವಕ. ಬೂಬತಿ ಬಿಸಿಎ ಪದವೀಧರರಾಗಿದ್ದು, 4 ವರ್ಷಗಳ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಯೂಟ್ಯೂಬ್ ಚಾನೆಲ್ ಆರಂಭಿಸಿದ.

    ಬೂಬತಿ ಮೂರು ವರ್ಷಗಳ ಹಿಂದೆ ಬೈಕ್ ಖರೀದಿಸುವ ಕನಸನ್ನು ಕಂಡಿದ್ದ. ಆದರೆ ಈತನ ಬಳಿ ಹಣವಿರಲಿಲ್ಲ. ಆದರೂ ಧೃತಿಗೆಡದ ಆತ, ಮೂರು ವರ್ಷದಿಂದ ಅದಕ್ಕಾಗಿ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸಿದ. ತನ್ನ ಪಿಗ್ಗಿ ಬ್ಯಾಂಕ್‍ನಲ್ಲಿ ಪ್ರತಿದಿನ 1 ರೂ. ನಾಣ್ಯಗಳನ್ನು ಹಾಕುತ್ತಿದ್ದ. ಹೀಗೆ 1 ರೂ. ನಾಣ್ಯವನ್ನು ಸಂಗ್ರಹಿಸಿ ಒಟ್ಟು 2.6ಲಕ್ಷ ರೂ. ಹಣವನ್ನು ಉಳಿತಾಯ ಮಾಡಿದ್ದಾನೆ.

    ನಂತರ ಬೂಬತಿ ಈ ನಾಣ್ಯವನ್ನೆಲ್ಲ ಬೈಕ್ ಶೋರೂಂಗೆ ತೆಗೆದುಕೊಂಡು ಹೋಗಿದ್ದಾನೆ. ತಾನು ಖರೀದಿಸುವ ಹೊಸ ಬಜಾಜ್ ಡೊಮಿನಾರ್ ಬೈಕ್‍ಗೆ ಈ ನಾಣ್ಯಗಳನ್ನೆಲ್ಲ ನೀಡಿದ್ದಾನೆಲ್ಲಿದನ್ನು ಕಂಡು ಶೋ ರೂಂ ಸಿಬ್ಬಂದಿ ದಂಗಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ

    ನಂತರ ಬೈಕ್ ಶೋರೂಂನ ಸಿಬ್ಬಂದಿ ಆ ನಾಣ್ಯಗಳನ್ನು ಏಣಿಸಲು ಪ್ರಾರಂಭಿಸಿದ್ದಾರೆ. ಸತತ 10 ಗಂಟೆಗಳ ಕಾಲ 1ರೂ. ನಾಣ್ಯದ 2.6ಲಕ್ಷ ರೂ.ಗಳನ್ನು ಎಣಿಕೆ ಮಾಡಿ ಬೂಬತಿಗೆ ಬೈಕ್‍ನ್ನು ನೀಡಿದ್ದೇವೆ ಎಂದು ಭಾರತ್ ಏಜೆನ್ಸಿಯ ವ್ಯವಸ್ಥಾಪಕ ಮಹಾವಿಕ್ರಾಂತ್ ಹೇಳಿದರು. ಇದನ್ನೂ ಓದಿ: ಹಾವೇರಿಯಲ್ಲಿ ಹಿಜಬ್ ತೆಗೆದು SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು

  • ಬುಟ್ಟಿ ತುಂಬಾ ಕೂಡಿಟ್ಟ ಚಿಲ್ಲರೆ ಹಣ ನೀಡಿ ವಾಹನ ಖರೀದಿಸಿದ

    ಬುಟ್ಟಿ ತುಂಬಾ ಕೂಡಿಟ್ಟ ಚಿಲ್ಲರೆ ಹಣ ನೀಡಿ ವಾಹನ ಖರೀದಿಸಿದ

    ಡಿಸ್ಪುರ್: ಸ್ವಲ್ಪ, ಸ್ವಲ್ಪ ಹಣವನ್ನು ಜೋಡಿಸಿ ತಮ್ಮ ಆಸೆಯನ್ನು ನೆರೆವೇರಿಸಿಕೊಳ್ಳಬೇಕು ಎನ್ನುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ವಾಹನ ಖರೀದಿ ಮಾಡುವಾಗ ಬುಟ್ಟಿಯಲ್ಲಿ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಿರುವುದು ಎಲ್ಲೆಡೆ ಸುದ್ದಿಯಾಗಿದೆ.

    ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಸಣ್ಣ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದರು. ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ ಖರೀದಿಸಿದ್ದಾರೆ. ಬ್ರಾಂಡ್ ಮೊಬಿಲಿಟಿ ಸ್ಕೂಟರ್‌ನ್ನು ಖರೀದಿಸಿದ್ದಾರೆ. ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್‍ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಇದನ್ನೂ ಓದಿ:ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

    ಸ್ವಂತ ಹಣದಲ್ಲಿ ವಾಹನವನ್ನು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಇಲ್ಲಿ ಅಸ್ಸಾಂನ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಸಂಪಾದನೆಯನ್ನು ಉಳಿಸಿ ಸ್ವಂತ ಸ್ಕೂಟಿಯನ್ನು ಖರೀದಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ

  • ಕಳ್ಕೊಂಡಿದ್ದ ಚಿನ್ನವನ್ನ 20 ವರ್ಷಗಳ ನಂತ್ರ ಮರಳಿ ಪಡೆದ ಮಹಿಳೆ

    ಕಳ್ಕೊಂಡಿದ್ದ ಚಿನ್ನವನ್ನ 20 ವರ್ಷಗಳ ನಂತ್ರ ಮರಳಿ ಪಡೆದ ಮಹಿಳೆ

    ತಿರುವನಂತಪುರಂ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನವನ್ನು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಮರಳಿ ಪಡೆದುಕೊಂಡಿರುವ ಅಚ್ಚರಿ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

    ಕಾಸರಗೋಡಿನ ನೆಲ್ಲಿಕುನ್ನು ನಿವಾಸಿ ಬಸಾರಿಯಾ 20 ವರ್ಷಗಳ ಹಿಂದೆ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದರು. 20 ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ವಿವಾಹ ಕಾರ್ಯಕ್ರಮದ ವೇಳೆ ಬಸಾರಿಯಾ ತಮ್ಮ ಚಿನ್ನದ ಸೊಂಟದ ಪಟ್ಟಿಯ ಒಂದು ಭಾಗವನ್ನು ಕಳೆದುಕೊಂಡಿದ್ದರು. ಸೊಂಟದ ಪಟ್ಟಿ ಸುಮಾರು 28 ಗ್ರಾಂ ನಷ್ಟು ತೂಕವಿತ್ತು. ಅದರಲ್ಲಿ ಸುಮಾರು 12 ಗ್ರಾಂ ನಷ್ಟು ತೂಕವಿದ್ದ ಒಂದು ಭಾಗವನ್ನು ಕಳೆದುಕೊಂಡಿದ್ದರು. ಚಿನ್ನ ಸಿಕ್ಕಿದ್ದ ವ್ಯಕ್ತಿ 20 ವರ್ಷಗಳ ನಂತರ ಅದರ ಬದಲಿಗೆ ಎರಡು ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಿ, ಕ್ಷಮೆ ಕೇಳಿದ್ದಾರೆ.

    ಮಂಗಳವಾರ ಬಸಾರಿಯಾ ಇಫ್ತಾರ್‌ಗೆ ತಯಾರಿ ನಡೆಸುತ್ತಿದ್ದಾಗ, ಹೆಲ್ಮೆಟ್ ಧರಿಸಿದ್ದ ಯುವಕನೊಬ್ಬ ಆಹಾರ ಪದಾರ್ಥಗಳಿದ್ದ ದೊಡ್ಡದಾದ ಪ್ಕಾಕ್ ತೆಗೆದುಕೊಂಡು ಬಂದು ನೀಡಿದ್ದನು. ಕಾಸರಗೋಡಿನಲ್ಲಿ ಇಫ್ತಾರ್ ಆಹಾರವನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಮಹಿಳೆ ಹೆಲ್ಮೆಟ್ ಧರಿಸಿದ್ದ ಯುವಕನನ್ನು ಯಾರು ನೀನು ಎಂದು ಕೇಳಿದ್ದರು. ಆಗ ಯುವಕ, ನಾನು ಕೇವಲ ಡೆಲಿವರಿ ಹುಡುಗ ಅಷ್ಟೆ. ಬೇರೆ ವ್ಯಕ್ತಿ ಇದನ್ನು ಕಳುಹಿಸಿದ್ದಾರೆ ಎಂದು ಉತ್ತರಿಸಿದ. ಅಷ್ಟರಲ್ಲಿ ಮಹಿಳೆ ಪ್ರಾರ್ಥನೆ ಮಾಡಲು ಹೋಗದರು. ಇತ್ತ ಯುವಕ ಕೂಡ ಹೊರಟುಹೋದ.

    ಆಹಾರ ಪ್ಯಾಕ್ ಓಪನ್ ಮಾಡಿದಾಗ ಅದರಲ್ಲಿ ಸಣ್ಣ ಬಾಕ್ಸ್ ನಲ್ಲಿ ಎರಡು ಚಿನ್ನದ ನಾಣ್ಯಗಳಿತ್ತು. ಜೊತೆಗೆ ಒಂದು ಪತ್ರ ಕೂಡ ಇತ್ತು. ಅದರಲ್ಲಿ, “ನೀವು 20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನ ನನಗೆ ಸಿಕ್ಕಿತ್ತು. ಅದನ್ನು ನಿಮಗೆ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಈಗ ಅದರ ಬದಲಿಗೆ ನಾಣ್ಯಗಳನ್ನು ನೀಡುತ್ತಿದ್ದೇನೆ. ದಯವಿಟ್ಟು ಈ ನಾಣ್ಯಗಳನ್ನು ಸ್ವೀಕರಿಸಿ ನನ್ನನ್ನು ಕ್ಷಮಿಸಿ” ಎಂದು ಬರೆದಿತ್ತು.

    ಅಚ್ಚರಿಯಾದ ಬಸಾರಿಯಾ ಪತ್ರ ಮತ್ತು ಚಿನ್ನದ ನಾಣ್ಯವನ್ನು ಶಾರ್ಜಾದಲ್ಲಿ ಪಾದರಕ್ಷೆಗಳ ಅಂಗಡಿ ನಡೆಸುತ್ತಿದ್ದ ತನ್ನ ಪತಿ ಇಬ್ರಾಹಿಂ ತೈವಾಲಪ್ಪಿಲ್‍ಗೆ ವಾಟ್ಸಪ್ ಮೂಲಕ ತಿಳಿಸಿದ್ದಾರೆ. ಇದನ್ನು ನೋಡಿದ ಪತಿ 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಚಿನ್ನದ ನಾಣ್ಯಗಳ ಕಳುಹಿಸಿದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.

  • 67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    ಭೋಪಾಲ್: ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು 67,490 ನಾಣ್ಯಗಳನ್ನು ನೀಡಿ ಹೊಂಡಾ ಆಕ್ಟೀವಾ ಖರೀದಿಸಿದ್ದಾರೆ.

    ಸತ್ನಾ ನಿವಾಸಿಯಾಗಿರುವ ರಾಕೇಶ್‍ರಿಗೆ ದ್ವಿಚಕ್ರ ವಾಹನ ಬೇಕಾಗಿತ್ತು. ಈ ವೇಳೆ ಅವರು ಹೊಂಡಾ ಆಕ್ಟೀವಾ ಖರೀದಿಸಲು ನಿರ್ಧರಿಸುತ್ತಾರೆ. ಬಳಿಕ  ನಾಣ್ಯಗಳು ತುಂಬಿರುವ ಬ್ಯಾಗ್ ತೆಗೆದುಕೊಂಡು ‘ಕೃಷ್ಣ ಹೊಂಡಾ ಡೀಲರ್ ಶಿಪ್’ಗೆ ಹೋಗುತ್ತಾರೆ.

    ರಾಕೇಶ್ ಆಕ್ಟೀವಾ 125BSVI ಖರೀದಿಸಲು ನಿರ್ಧರಿಸಿದ್ದರು. ಆಕ್ಟೀವಾ ಖರೀದಿಸಿ 67,490 ರೂ. ಅನ್ನು ನಾಣ್ಯದ ರೂಪದಲ್ಲಿ ಪೇಮೆಂಟ್ ಮಾಡಿದ್ದಾರೆ. ರಾಕೇಶ್ ನೀಡಿದ ನಾಣ್ಯದ ಹಣವನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ಮೂರು ಗಂಟೆ ಬೇಕಾಯಿತು. ಇದನ್ನೂ ಓದಿ: ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ಈ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್, ಬೇರೆ ಕುಟುಂಬಗಳಂತೆ ನನಗೂ ಹಾಗೂ ನನ್ನ ಕುಟುಂಬದವರಿಗೂ ದೀಪಾವಳಿ ಹಬ್ಬ ತುಂಬಾನೇ ಮುಖ್ಯ. ದನ್ತೇರಸ್(ಚಿನ್ನ ಅಥವಾ ಹೊಸ ವಸ್ತು ಖರೀದಿಸುವ ದಿನ) ದಿನದಂದು ನನಗೆ ನಾನೇ ನೀಡಿದ ಉಡುಗೊರೆ ಇದು ಎಂದು ಹೇಳಿದ್ದಾರೆ.

    ಈ ಹಿಂದೆ ರಾಜಸ್ಥಾನದ ಜೋಧ್‍ಪುರ್ ನಲ್ಲಿ 17 ವರ್ಷದ ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500ರೂ ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದನು. 13,500 ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ನಾಲ್ಕು ಗಂಟೆ ಬೇಕಾಯಿತು.

  • ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    -12 ಮೂಟೆ, 860 ಕೆ.ಜಿ. ತೂಕ

    ಜಕಾರ್ತ: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾನೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಿದ್ದಾನೆ.

    ಗುರುವಾರ ಸ್ಥಳೀಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ಎಂಬವರು 12 ಮೂಟೆಗಳಲ್ಲಿ ಒಟ್ಟು 10,000 ಡಾಲರ್ (6.97 ಲಕ್ಷ ರೂ.) ತಂದು ವಿಚ್ಛೇದಿತ ಪತ್ನಿಗೆ ಪರಿಹಾರವಾಗಿ ನೀಡಿದ್ದಾರೆ. ಆ ಮೂಟೆಗಳ ತೂಕ ಬರೋಬ್ಬರಿ 890 ಕಿಲೋ ಗ್ರಾಂ ಇತ್ತು ಎಂದು ವರದಿಯಾಗಿದೆ.

    ಒಂಬತ್ತು ವರ್ಷಗಳಿಂದ ಡ್ವಿ ಸ್ಸುಲಾರ್ಟೊ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಿರಲಿಲ್ಲ. ಹೀಗಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ವಿಚ್ಛೇದಿತ ಪತ್ನಿಗೆ ನಾಣ್ಯರೂಪದಲ್ಲಿ ಜೀವನಾಂಶ ನೀಡಿದ್ದಾನೆ. ಇದನ್ನು ಓದಿ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ‘ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದರು.

    ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ಚಂಡೀಗಢ್: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ಚಿಲ್ಲರೆ ರೂಪದಲ್ಲಿ ನೀಡಿದ್ದು, ಅವುಗಳನ್ನು ಏಣಿಕೆ ಮಾಡಲಾಗದೆ ಕೋರ್ಟ್ ಪ್ರಕರಣವನ್ನು ಮುಂದೂಡಿದೆ.

    2015 ರಲ್ಲಿ ವಿಚ್ಛೇದನ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪತ್ನಿಗೆ ಪ್ರತಿ ತಿಂಗಳು 25 ಸಾವಿರ ರೂ. ನೀಡುವಂತೆ ಪತಿಗೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಪತಿ ಪ್ರತಿ ತಿಂಗಳು ಜೀವನಾಂಶ ನೀಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ 50 ಸಾವಿರ ರೂ. ನೀಡಿರಲಿಲ್ಲ. ಇದರಿಂದಾಗಿ ಪತ್ನಿಯು ಹೈಕೋರ್ಟ್ ಮೆಟ್ಟಿಲೇರಿದ್ದಳು.

    ಹೈಕೋರ್ಟ್ ವಿಚಾರಣೆ ವೇಳೆ ಪತಿಯು ತಾನು ನೀಡಬೇಕಾಗಿದ್ದ ಹಣದಲ್ಲಿ 26,600 ರೂಪಾಯಿಯನ್ನು 1 ರೂ., 2 ರೂ. ನಾಣ್ಯ ಹಾಗೂ 100 ರೂ. ಮುಖಬೆಲೆಯ 4 ನೋಟುಗಳನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕೊಟ್ಟಿದ್ದಾನೆ.

    ಪತಿಯ ನಡೆಯಿಂದ ರೋಸಿ ಹೋದ ಪತ್ನಿ, ‘ನನಗೆ ಮತ್ತೊಂದು ರೀತಿ ಚಿತ್ರಹಿಂಸೆ ನೀಡಲು ಪತಿ ಹೀಗೆ ಮಾಡಿದ್ದಾನೆ. ನಾನು ಈ ಚಿಲ್ಲರೆ ಹಣವನ್ನು ಹೇಗೆ ಏಣಿಕೆ ಮಾಡಬೇಕು. ಯಾರು ಇಷ್ಟು ಚಿಲ್ಲರೆ ಹಣವನ್ನು ಪಡೆಯುತ್ತಾರೆ’ ಎಂದು ಆರೋಪಿಸಿದಳು.

    ತನ್ನ ನಡೆಯನ್ನು ಸಮರ್ಥಿಸಿಕೊಂಡ ಪತಿ, ‘ನಾನು 100 ರೂ., 500 ರೂ. ಅಥವಾ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನೀಡಬೇಕು ಎಂದುಕೊಂಡಿದ್ದೆ. ಆದರೆ ಈ ಹಣವನ್ನು ಏಣಿಕೆ ಮಾಡಲು ಮೂರು ಜೂನಿಯರ್ ಗಳನ್ನು (ಮಕ್ಕಳನ್ನು) ಆಕೆಗೆ ನೀಡಿದ್ದೇನೆ. ಹೀಗಾಗಿ ಚಿಲ್ಲರೆ ಹಣವನ್ನೇ ನೀಡಿರುವೆ’ ಎಂದು ಹೇಳಿದ್ದಾರೆ.

    ಹಣವನ್ನು ಏಣಿಕೆ ಮಾಡಲಾಗದೇ ಇರುವುದಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಜನೀಶ್ ಕೆ ಶರ್ಮಾ ಅವರು ವಿಚಾರಣೆಯನ್ನು ಎರಡು ದಿನಗಳ ಕಾಲ ಮುಂದೂಡಿದ್ದಾರೆ.

  • ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ಭೋಪಾಲ್: ಮಧ್ಯಪ್ರದೇಶ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆವೊಂದನ್ನ ಮಾಡಿದ್ದು, ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಒಂದು ಚೈನ್, 263 ನಾಣ್ಯಗಳು ಹಾಗೂ ಶೇವಿಂಗ್ ಬ್ಲೇಡ್‍ಗಳು ಸೇರಿ ಒಟ್ಟು 5 ಕೆಜಿಯಷ್ಟು ಕಬ್ಬಿಣವನ್ನ ಹೊರತೆಗೆದಿದ್ದಾರೆ.

    ಇಲ್ಲಿನ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿನ ಸಾತ್ನಾ ಜಿಲ್ಲೆಯ ಸೋಹಾವಲ್ ನಿವಾಸಿಯಾದ 32 ವರ್ಷದ ಮೊಹಮ್ಮದ್ ಮಕ್ಸೂದ್‍ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ನವೆಂಬರ್ 18ರಂದು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಎಕ್ಸ್-ರೇ ಹಾಗೂ ಇನ್ನಿತರೆ ಪರೀಕ್ಷೆಗಳನ್ನ ಮಾಡಿದ ನಂತರ ಮಕ್ಸೂದ್ ಅವರ ಹೊಟ್ಟೆನೋವಿಗೆ ಕಾರಣ ಪತ್ತೆ ಮಾಡಿದೆವು. 6 ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ 10-12 ಶೇವಿಂಗ್ ಬ್ಲೇಡ್‍ಗಳು, 4 ದೊಡ್ಡ ಸೂಜಿಗಳು, ಒಂದು ಚೈನ್ ಹಾಗೂ 263 ನಾಣ್ಯಗಳನ್ನ ಹೊರತೆಗೆದರು. ಜೊತೆಗೆ ಗ್ಲಾಸ್ ಪೀಸ್‍ಗಳು ಇದ್ದವು. ಒಟ್ಟು 5 ಕೆಜಿ ತೂಕದ ವಸ್ತುಗಳನ್ನ ಮಕ್ಸೂದ್ ಅವರ ಹೊಟ್ಟೆಯಿಂದ ಶುಕ್ರವಾರದಂದು ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ ಪ್ರಿಯಾಂಕ್ ಶರ್ಮಾ ಹೇಳಿದ್ದಾರೆ.

    ರೇವಾ ಗೆ ಕರೆತರುವ ಮುನ್ನ ಮಕ್ಸೂದ್ ಅವರು ಸಾತ್ನಾದಲ್ಲಿ 6 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅವರ ಮನಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತಿಲ್ಲದಂತೆ ಈ ವಸ್ತುಗಳನ್ನ ನುಂಗಿರಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.

    ಸದ್ಯ ಮಕ್ಸೂದ್ ಚೇತರಿಸಿಕೊಳ್ಳುತ್ತಿದ್ದು, ತಜ್ಞ ವೈದ್ಯರ ತಂಡ ಅವರನ್ನ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

  • ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

    ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

    ಬೀಜಿಂಗ್: 80 ವರ್ಷದ ವೃದ್ಧೆಯೊಬ್ಬರು ಅದೃಷ್ಟ ಬರಲಿ, ಒಳ್ಳೆದಾಗಲಿ ಅಂತ ಮಾಡಿದ ಒಂದು ಚಿಕ್ಕ ಕೆಲಸ ವಿಮಾನದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಶಾಂಘೈ ಪುಡೊಂಗ್ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವೃದ್ಧೆ ಎಂಜಿನ್‍ನೊಳಗೆ ನಾಣ್ಯಗಳನ್ನ ಹಾಕಿದ್ರಿಂದ ಚೀನಾ ಸದರ್ನ್ ಏರ್‍ಲೈನ್ಸ್ ಫ್ಲೈಟ್ ತಡವಾಗಿ ಹೊರಡಬೇಕಾಯ್ತು. ಅಷ್ಟೇ ಅಲ್ಲ ವಿಮಾನದ ಎಂಜಿನ್‍ನಿಂದ ನಾಣ್ಯಗಳನ್ನು ಹೊರತೆಗೆಯೋಕೆ ಹರಸಾಹಸಪಡಬೇಕಾಯ್ತು.

    ಪ್ರಯಾಣಿಕರು ವಿಮಾನವೇರುವಾಗ ವೃದ್ಧೆಯೊಬ್ಬರು ಮೆಟ್ಟಿಲುಗಳ ಮೇಲೆ ನಿಂತು ಎಂಜಿನ್‍ನೊಳಗೆ ನಾಣ್ಯ ಎಸೆಯೋದನ್ನ ನೋಡಿ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ರು. ವೃದ್ಧೆ ತನ್ನ ಗಂಡ, ಮಗಳು ಹಾಗೂ ಅಳಿಯನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ವೃದ್ಧೆ ಎಸೆದ ನಾಣ್ಯಗಳಲ್ಲಿ 8 ನಾಣ್ಯ ಬೇರೆ ಕಡೆ ಬಿದ್ದಿದ್ದು ಒಂದು ಮಾತ್ರ ಎಂಜಿನ್‍ನೊಳಗೆ ಹೋಗಿತ್ತು.

    ವಿಷಯ ತಿಳಿದ ನಂತರ ವಿಮಾನದಲ್ಲಿದ್ದ ಸುಮಾರು 150 ಪ್ರಯಾಣಿಕರನ್ನ ಕೆಳಗಿಳಿಸಲಾಯ್ತು. ವಿಮಾನದ ಮೆಕ್ಯಾನಿಕ್‍ಗಳು ಎಂಜಿನ್‍ನಲ್ಲಿನ ಒಂದು ನಾಣ್ಯ ಸೇರಿದಂತೆ ಒಟ್ಟು 9 ನಾಣ್ಯಗಳನ್ನ ಹೊರತೆಗೆದಿದ್ದಾರೆ. ಒಂದು ವೇಳೆ ಲೋಹದ ನಾಣ್ಯವನ್ನ ಎಂಜಿನ್ ಒಳಗೆಳೆದುಕೊಂಡಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.

    ಘಟನೆ ಹಿನ್ನೆಲೆಯಲ್ಲಿ ವೃದ್ಧೆಯನ್ನ ವಿಮಾನ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಯಾಣ ಸುರಕ್ಷಿತವಾಗಿರಲಿ ಎಂದು ನಾಣ್ಯ ಎಸೆದಿದ್ದಾಗಿ ವೃದ್ಧೆ ಹೇಳಿದ್ದಾರೆ. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ 5 ಗಂಟೆ ತಡವಾಗಿ ಟೇಕ್‍ಆಫ್ ಆಗಿದೆ.

    ಈ ಸುದ್ದಿ ಚೀನಾದ ಸಾಮಾಜಿಕ ಜಾಲತಾಣವಾದ ವೀಬೋದಲ್ಲಿ ಟ್ರೆಂಡಿಂಗ್ ಆಗಿದ್ದು, ಅಜ್ಜಿ.. ನಾಣ್ಯ ಎಸೆಯೋಕೆ ಇದೇನು ಆಸೆ ಈಡೇರಿಸೋ ಆಮೆಯ ಕೊಳ ಎಂದುಕೊಂಡ್ರಾ ಎಂದು ಕಮೆಂಟ್ ಮಾಡಿದ್ದಾರೆ.

  • ಆಮೆಯ ಹೊಟ್ಟೆಯಿಂದ 915 ನಾಣ್ಯಗಳನ್ನ ಹೊರತೆಗೆದ ವೈದ್ಯರು

    ಆಮೆಯ ಹೊಟ್ಟೆಯಿಂದ 915 ನಾಣ್ಯಗಳನ್ನ ಹೊರತೆಗೆದ ವೈದ್ಯರು

    ಬ್ಯಾಂಕಾಕ್: ಆಮೆಯೊಂದರ ಹೊಟ್ಟೆಯಿಂದ 915 ನಾಣ್ಯಗಳನ್ನು ಹೊರತೆಗೆಯುವಲ್ಲಿ ಥೈಲ್ಯಾಂಡ್‍ನ ಪಶುವೈದ್ಯರು ಯಶಸ್ವಿಯಾಗಿದ್ದಾರೆ.

    25 ವರ್ಷದ ಓಮ್ಸಿನ್ ಹೆಸರಿನ ಆಮೆಗೆ ಸೋಮವಾರದಂದು 7 ಗಂಟೆಗಳ ಕಾಲ ಸರ್ಜರಿ ಮಾಡಿ 5 ಕೆಜಿ ತೂಕದ ನಾಣ್ಯಗಳನ್ನ ಹೊರತೆಗೆದಿದ್ದಾರೆ.

    ಆಮೆಯ ಮೇಲ್ಮೈನ ಚಿಪ್ಪಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅದನ್ನು ಪಶುವೈದ್ಯರ ಬಳಿ ತೆಗೆದುಕೊಂಡು ಹೋಗಲಾಗಿತ್ತು, ವೈದ್ಯರು ಆಮೆಯ ಎಕ್ಸ್‍ರೇ ತೆಗೆದು ನೋಡಿದಾಗ ಅದರ ಹೊಟ್ಟೆಯಲ್ಲಿ ನಾಣ್ಯಗಳಿದ್ದಿದ್ದು ಗೊತ್ತಾಯ್ತು.

    ಆಮೆಯ ಹೊಟ್ಟೆಯಲ್ಲಿ 915 ನಾಣ್ಯಗಳಿದ್ದವು. ಅವನ್ನು ಒಂದೊಂದಾಗಿ ಹೊರತೆಗೆದಿದ್ದೇವೆ ಎಂದು ತಿಳಿಸಿರೋ ವೈದ್ಯರು ಈ ರೀತಿಯ ಸರ್ಜರಿ ಮಾಡಿದ್ದು ಇದೇ ಮೊದಲು ಎಂದಿದ್ದಾರೆ.

    ಆಮೆಯ ಹೊಟ್ಟೆಗೆ ನಾಣ್ಯ ಹೋಗಿದ್ದು ಹೇಗೆ?: ಈ ಆಮೆ ಇಲ್ಲಿನ ಚೋನ್ಬುರಿ ಪ್ರಾಂತ್ಯದಲ್ಲಿರುವ ಚಿಕ್ಕ ಪಾರ್ಕ್‍ವೊಂದರ ಕೊಳದಲ್ಲಿ ಎರಡು ದಶಕಗಳಿಂದ ಜೀವಿಸುತ್ತಿದೆ. ಇಲ್ಲಿಗೆ ಬರುವ ಜನ ಕೊಳಕ್ಕೆ ನಾಣ್ಯಗಳನ್ನ ಎಸೆದು ಅದೃಷ್ಟ ಬರಲಿ/ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವ ರೂಢಿಯಿದೆ. ಹೀಗೆ ಕೊಳಕ್ಕೆ ಬಿದ್ದ ನಾಣ್ಯಗಳನ್ನ ಆಮೆ ನುಂಗಿದ್ದು ಅದರ ಹೊಟ್ಟೆಯಲ್ಲಿದ್ದ ಒಟ್ಟು 915 ನಾಣ್ಯಗಳನ್ನು ಈಗ ಹೊರತೆಗೆಯಲಾಗಿದೆ.

    ಆಮೆಗಳು ಕನಿಷ್ಠ ಎಂದರೂ 80 ವರ್ಷಗಳ ಕಾಲ ಬದುಕುತ್ತವೆ. ಹೀಗಾಗಿ ಆಮೆಗಳಿರುವ ಕೊಳಕ್ಕೆ ನಾಣ್ಯ ಎಸೆಯುವವರು ದೀರ್ಘ ಕಾಲ ಬದುಕುತ್ತಾರೆ ಎಂಬ ನಂಬಿಕೆಯಿದೆ. ಆದ್ರೆ ನಾಣ್ಯ ಎಸೆಯುವುದು ಪ್ರಾಣಿ ಹಿಂಸೆ ಎಂದು ಚೌಲಾಲೊಂಗ್‍ಕೊರ್ನ್‍ನ ಪಶು ವಿಜ್ಞಾನ ವಿಭಾಗದ ಡೀನ್ ರುಂಗ್ರೊಜ್ ಹೇಳಿದ್ದಾರೆ.