Tag: coin

  • RSS ಶತಮಾನೋತ್ಸವ – ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ

    RSS ಶತಮಾನೋತ್ಸವ – ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ

    ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ದೆಹಲಿಯ ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಶತಮಾನೋತ್ಸವ (Centenary Ceremony) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.

    ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ನರೇಂದ್ರ ಮೋದಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ನಾಣ್ಯ (Coin) ಮತ್ತು ಅಂಚೆ ಚೀಟಿಯನ್ನು (Post Stamp) ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಮೋದಿ, ಈ 100 ರೂ. ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದೆ ಮತ್ತು ಇನ್ನೊಂದು ಬದಿಯಲ್ಲಿ, ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ. ಸ್ವಯಂಸೇವಕರು ಅವಳ ಮುಂದೆ ಸಮರ್ಪಣೆಯಿಂದ ನಮಸ್ಕರಿಸುತ್ತಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಮ್ಮ ಕರೆನ್ಸಿಯಲ್ಲಿ ತೋರಿಸಲಾಗಿದೆ. ಇಂದು ಬಿಡುಗಡೆಯಾದ ವಿಶೇಷ ಅಂಚೆ ಚೀಟಿಯೂ ಸಹ ಅದರ ಪ್ರಾಮುಖ್ಯತೆಯನ್ನು ಹೊಂದಿದೆ. 1963ರಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಹೆಮ್ಮೆಯಿಂದ ಭಾಗವಹಿಸಿದ್ದರು. ಈ ಅಂಚೆ ಚೀಟಿಯು ಆ ಐತಿಹಾಸಿಕ ಕ್ಷಣದ ಚಿತ್ರವನ್ನು ಹೊಂದಿದೆ ಎಂದರು. ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್

    ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಅದ್ಭುತ ಪಯಣವು ತ್ಯಾಗ, ನಿಸ್ವಾರ್ಥ ಸೇವೆ, ರಾಷ್ಟ್ರ ನಿರ್ಮಾಣ ಮತ್ತು ಶಿಸ್ತಿನ ಅಸಾಧಾರಣ ಉದಾಹರಣೆಯಾಗಿದೆ. ಆರ್‌ಎಸ್‌ಎಸ್ ಶತಮಾನೋತ್ಸವದ ಭಾಗವಾಗಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ. ನಾಳೆ ವಿಜಯದಶಮಿ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ, ಅನ್ಯಾಯದ ಮೇಲೆ ನ್ಯಾಯದ ವಿಜಯ, ಸುಳ್ಳಿನ ಮೇಲೆ ಸತ್ಯದ ವಿಜಯ ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. 100 ವರ್ಷಗಳ ಹಿಂದೆ ಈ ಮಹಾನ್ ದಿನದಂದು ಆರ್‌ಎಸ್‌ಎಸ್ ಅನ್ನು ಒಂದು ಸಂಘಟನೆಯಾಗಿ ಸ್ಥಾಪಿಸುವುದು ಕಾಕತಾಳೀಯವಲ್ಲ ಎಂದು ಬಣ್ಣಿಸಿದರು. ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಅಸಲಿಯತ್ತು ಬಯಲು – ಚಿನ್ನಯ್ಯ ಕೋರ್ಟ್‌ಗೆ ತಂದಿದ್ದ ಬುರುಡೆ ಪುರುಷನದ್ದು!

    ಸ್ವಾತಂತ್ರ‍್ಯದ ನಂತರವೂ ಆರ್‌ಎಸ್‌ಎಸ್ ಅನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದವು. ಆರ್‌ಎಸ್‌ಎಸ್ ಮುಖ್ಯವಾಹಿನಿಗೆ ಬರದಂತೆ ತಡೆಯಲು ಅನಂತ ಪಿತೂರಿಗಳು ನಡೆದವು. ನಾವು ಆಕಸ್ಮಿಕವಾಗಿ ನಮ್ಮ ನಾಲಿಗೆಯನ್ನು ಹಲ್ಲುಗಳಿಂದ ಕಚ್ಚುತ್ತೇವೆ. ಆದರೆ, ಅದರರ್ಥ ನಾವು ನಮ್ಮ ಹಲ್ಲುಗಳನ್ನು ಮುರಿಯುತ್ತೇವೆ ಎಂದಲ್ಲ. ಸಂಘಟನೆಯ ವಿರುದ್ಧ ಎಲ್ಲಾ ನಿಷೇಧಗಳು ಮತ್ತು ಪಿತೂರಿಗಳ ಹೊರತಾಗಿಯೂ, ಆರ್‌ಎಸ್‌ಎಸ್ ಯಾರ ವಿರುದ್ಧವೂ ಕಹಿ ಭಾವನೆ ಹೊಂದಲಿಲ್ಲ. ಏಕೆಂದರೆ ನಾವು ಸಮಾಜದಿಂದ ಭಿನ್ನವಾಗಿಲ್ಲ, ಅದರ ಭಾಗವಾಗಿದ್ದೇವೆ ಎಂದು ನಮಗೆ ತಿಳಿದಿದೆ. ಆರ್‌ಎಸ್‌ಎಸ್ ಸ್ವಯಂಸೇವಕರು ದೇಶದ ಸಾಂವಿಧಾನಿಕ ಸಂಸ್ಥೆಗಳಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ಹತ್ತಿಕ್ಕಲು ನಾನಾ ಪ್ರಯತ್ನಗಳು ನಡೆದವು: ಪ್ರಧಾನಿ ಮೋದಿ

    ಇದಕ್ಕೂ ಮೊದಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಮೋದಿ ಬಿಡುಗಡೆ ಮಾಡಿದರು. ಆರ್‌ಎಸ್‌ಎಸ್‌ನ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ ಬಿಡುಗಡೆ ಮಾಡಿದರು. ಆರ್‌ಎಸ್‌ಎಸ್ ಅನ್ನು 1925 ರಲ್ಲಿ ನಾಗ್ಪುರದಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ್ದರು. ಇದನ್ನೂ ಓದಿ: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 16 ರೂ. ಏರಿಕೆ

  • RSSಗೆ 100 ವರ್ಷ – ನಾಳೆ ಪೋಸ್ಟ್ ಸ್ಟ್ಯಾಂಪ್, ನಾಣ್ಯ ಬಿಡುಗಡೆ ಮಾಡಲಿದ್ದಾರೆ ಪ್ರಧಾನಿ ಮೋದಿ

    RSSಗೆ 100 ವರ್ಷ – ನಾಳೆ ಪೋಸ್ಟ್ ಸ್ಟ್ಯಾಂಪ್, ನಾಣ್ಯ ಬಿಡುಗಡೆ ಮಾಡಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) 100 ವರ್ಷ ತುಂಬಿದ ಹಿನ್ನೆಲೆ ಅ.1ರಂದು ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಮೋದಿ ಆರ್‌ಎಸ್‌ಎಸ್ ಕೊಡುಗೆಗಳನ್ನು ಎತ್ತಿ ತೋರಿಸುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    1925ರ ವಿಜಯದಶಮಿಯಂದು ಆರ್‌ಎಸ್‌ಎಸ್ ಸ್ಥಾಪನೆಗೊಂಡಿದ್ದು, 2025ರ ವಿಜಯದಶಮಿಗೆ 100 ವರ್ಷಗಳನ್ನು ಪೂರೈಸಲಿದೆ. ಇತ್ತೀಚಿಗೆ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಸಾಧನೆಯನ್ನು ಹಾಡಿಹೊಗಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಕಮಿಷನ್ ದಂಧೆಯಲ್ಲಿ ತೊಡಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ: ಪ್ರಹ್ಲಾದ್ ಜೋಶಿ ಕಿಡಿ

    ತಮ್ಮ 126ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಆರ್‌ಎಸ್‌ಎಸ್ ಸ್ವಯಂಸೇವಕರ ಪ್ರತಿಯೊಂದು ಕೆಲಸ, ಪ್ರತಿಯೊಂದು ಪ್ರಯತ್ನವೂ ದೇಶ ಮೊದಲು ಎಂಬ ಭಾವನೆಯನ್ನು ಸದಾಕಾಲ ಅತ್ಯುತ್ತಮವಾಗಿರಿಸುತ್ತದೆ. ಈ ಬಾರಿಯ ವಿಜಯದಶಮಿ ಮತ್ತೊಂದು ಕಾರಣದಿಂದ ಬಹಳ ವಿಶೇಷವೆನಿಸುತ್ತದೆ. ಇದೇ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನೆಯ 100ನೇ ವರ್ಷವೂ ಆಗಿದೆ. ಒಂದು ಶತಮಾನದ ಈ ಪ್ರಯಾಣವು ಎಷ್ಟು ಅದ್ಭುತ, ಅಭೂತಪೂರ್ವವಾಗಿದೆ ಮತ್ತು ಅಷ್ಟೇ ಸ್ಫೂರ್ತಿದಾಯಕವಾಗಿದೆ ಎಂದಿದ್ದರು. ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವಿನ ತನಿಖೆಗೆ ಸಿಂಗಾಪುರ ಸರ್ಕಾರದ ಸಹಕಾರ: ಅಸ್ಸಾಂ ಸಿಎಂ

    100 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾದಾಗ, ದೇಶವು ಶತಮಾನಗಳ ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಸಲ್ಪಟ್ಟಿತ್ತು. ಶತಮಾನಗಳ ಈ ಗುಲಾಮಗಿರಿಯು ನಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಕ್ಕೆ ಆಳವಾದ ಗಾಯವುಂಟು ಮಾಡಿತ್ತು. ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಯ ಮುಂದೆ ಸ್ವಯಂ ಗುರುತು ಇಲ್ಲದಂತಹ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು. ದೇಶವಾಸಿಗಳು ಕೀಳರಿಮೆಯ ಬಲಿಪಶುಗಳಾಗುತ್ತಿದ್ದರು. ಆದ್ದರಿಂದಲೇ ದೇಶದ ಸ್ವಾತಂತ್ರ‍್ಯದೊಂದಿಗೆ ಸೈದ್ಧಾಂತಿಕ ಗುಲಾಮಗಿರಿಯಿಂದಲೂ ಮುಕ್ತವಾಗುವುದು ಅಗತ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪರಮಪೂಜ್ಯ ಡಾ. ಹೆಡ್ಗೆವಾರ್ ಅವರು ಈ ವಿಷಯ ಕುರಿತು ಚಿಂತಿಸಲಾರಂಭಿಸಿದರು ಮತ್ತು ಈ ಭಗೀರಥ ಕಾರ್ಯಕ್ಕಾಗಿ ಅವರು 1925ರಲ್ಲಿ ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಸ್ಥಾಪಿಸಿದರು ಎಂದು ಹೇಳಿದ್ದರು. ಇದನ್ನೂ ಓದಿ: ವಿಶ್ವಕರ್ಮ ಮಂಡಳಿ ಮಾಡಿ ಸರ್ಕಾರ ಮರೆತಂತಿದೆ: ಶಂಕರಾತ್ಮಾನಂದ ಸರಸ್ವತಿ ಶ್ರೀ ಕಿಡಿ

    ಡಾಕ್ಟರ್ ಹೆಡ್ಗೆವಾರ್ ಅವರ ನಿಧನಾನಂತರ, ಪರಮಪೂಜ್ಯ ಗುರೂಜಿ ಅವರು ರಾಷ್ಟ್ರ ಸೇವೆಯ ಈ ಮಹಾಯಜ್ಞವನ್ನು ಮುನ್ನಡೆಸಿದರು. ಪರಮ ಪೂಜ್ಯ ಗುರೂಜಿಯವರು ‘ರಾಷ್ಟ್ರಾಯ ಸ್ವಾಹಾ, ರಾಷ್ಟ್ರಾಯ ಇದಂ ನ ಮಮ’ ಎನ್ನುತ್ತಿದ್ದರು. ಅಂದ್ರೆ, ಇದು ನನ್ನದಲ್ಲ, ಇದು ರಾಷ್ಟ್ರದ್ದು ಎಂದರ್ಥ. ಇದರಲ್ಲಿ ಸ್ವಾರ್ಥವನ್ನು ತೊರೆದು ರಾಷ್ಟ್ರಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುವಂತಹ ಪ್ರೇರಣೆ ಅಡಗಿದೆ. ಗುರೂಜಿ ಗೋಲ್ವಾಲ್ಕರ್ ಅವರ ಈ ವಾಕ್ಯವು ಲಕ್ಷಾಂತರ ಸ್ವಯಂ ಸೇವಕರಿಗೆ ತ್ಯಾಗ ಮತ್ತು ಸೇವೆಯ ಹಾದಿ ತೋರಿಸಿತು. ಏಕೆಂದ್ರೆ ತ್ಯಾಗ ಮತ್ತು ಸೇವಾ ಭಾವನೆ ಹಾಗೂ ಶಿಸ್ತಿನ ಬೋಧನೆಯ ಸಂಘದ ನಿಜವಾದ ಶಕ್ತಿಯಾಗಿದೆ. ಇಂದು ಆರ್‌ಎಸ್‌ಎಸ್ ನೂರು ವರ್ಷಗಳಿಂದ ಅವಿಶ್ರಾಂತವಾಗಿ, ಅವಿರತವಾಗಿ ರಾಷ್ಟ್ರದ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದ್ದರಿಂದಲೇ ದೇಶದಲ್ಲಿ ಯಾವುದೇ ನೈಸರ್ಗಿಕ ವಿಕೋಪ ಎಲ್ಲಿಯೇ ಎದುರಾಗಲಿ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಎಲ್ಲರಿಗಿಂತ ಮೊದಲು ಅಲ್ಲಿಗೆ ತಲುಪುತ್ತಾರೆ ಎಂದು ಶ್ಲಾಘಿಸಿದ್ದರು. ಇದನ್ನೂ ಓದಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

  • ಕಾಸು ಕಂಡು ಕವಿಯಾದ ನಟ ಜಗ್ಗೇಶ್

    ಕಾಸು ಕಂಡು ಕವಿಯಾದ ನಟ ಜಗ್ಗೇಶ್

    ತಿಸಿದ ಹಳೆ ಕಾಲದ ಕಾಸು ನೋಡಿ ಜಗ್ಗೇಶ್ ಕವಿಯಾಗಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿದ್ದ, ತಮ್ಮ  ತಂದೆ ಹಾಗೂ ತಾತನ ಕಾಲದ ನಾಣ್ಯಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕವಿತೆಯನ್ನೇ ಬರೆದಿದ್ದಾರೆ. ಜೊತೆಗೆ ಅದರ ಹಿಂದಿನ ಕಥನವನ್ನೂ ಅವರು ಬರೆದುಕೊಂಡಿದ್ದಾರೆ.

    JAGGESH

    ಓ ಕಾಸುಗಳೆ ನಿಮ್ಮ ನೋಡಿದಾಗ

    ಅಮ್ಮನ ದೇವರ ಹುಂಡಿ ನೆನಪಾಯಿತು

    ಓ ಕಾಸುಗಳೆ ನಿಮ್ಮ ನೋಡಿದಾಗ

    ಅಪ್ಪನ ಬೆವರಿನ ಶ್ರಮ ನೆನಪಾಯಿತು

    ಓ ಕಾಸುಗಳೆ ನಿಮ್ಮ ನೋಡಿದಾಗ

    ನನ್ನ ತಾತ ಕೊಟ್ಟ ಪ್ರೀತಿ ಕಾಣಿಕೆ ನೆನಪಾಯಿತು

    ಓ ಕಾಸುಗಳೆ ನಿನ್ನ ನಾನು ಕೂಡಿಟ್ಟು

    ಒಂದು ದಿನ ಶ್ರೀಮಂತ ಆಗುವೆ ಎಂದ ಶಪಥ ನೆನಪಾಯಿತು

    ಓ ಕಾಸುಗಳೆ ನೀವೇ ನನ್ನ ಬಾಲ್ಯದ ಗೆಳೆಯರಾಗಿದ್ದು ನೆನಪಾಯಿತು

    ಓ ಕಾಸುಗಳೆ ನಿಮ್ಮ ಬಳಸಿ ರಾಜಣ್ಣನ ಸಿನಿಮಾ ನೋಡಿದ ನೆನಪಾಯಿತು

    ಹೀಗೆ ಕಾವ್ಯದ ಮೂಲಕ ತಮ್ಮ ಜೀವನವನ್ನು ಮೆಲುಕು ಹಾಕಿದ್ದಾರೆ ಜಗ್ಗೇಶ್. ಇವರ ಕವಿತ್ವಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತಮ್ಮ ನೆನಪುಗಳನ್ನೂ ಜಗ್ಗೇಶ್ ಜೊತೆ ಹಲವಾರು ಜನರು ಹಂಚಿಕೊಂಡಿದ್ದಾರೆ.

  • ನೋಟು, ನಾಣ್ಯ ಮಧ್ಯೆ ಗಣಪನ ಪ್ರತಿಷ್ಠಾಪನೆ- ಕೋಟಿ ಕೋಟಿ ರೂಪಾಯಿಗಳಲ್ಲಿ ದೇಗುಲ ಸಿಂಗಾರ

    ನೋಟು, ನಾಣ್ಯ ಮಧ್ಯೆ ಗಣಪನ ಪ್ರತಿಷ್ಠಾಪನೆ- ಕೋಟಿ ಕೋಟಿ ರೂಪಾಯಿಗಳಲ್ಲಿ ದೇಗುಲ ಸಿಂಗಾರ

    ಬೆಂಗಳೂರು: ಗಣೇಶ ಚತುರ್ಥಿಗೆ (Ganesh Chaturthi) ಎಲ್ಲ ಕಡೆ ವಿಭಿನ್ನವಾಗಿ ವಿಶೇಷವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾರೆ. ಅನೇಕ ವರ್ಷಗಳಿಂದ ಗಣೇಶನನ್ನ ಹೀಗೂ ಕೂರಿಸಬಹುದಾ ಅಂತಾ ಅಚ್ಚರಿ ಪಡುವಂತೆ ವಿನಾಯಕನನ್ನ ಕೂರಿಸಿ ಹಬ್ಬ ಮಾಡುತ್ತಾ ಬಂದಿರೋ ಜೆಪಿ ನಗರದ ಬಳಿ ಇರೋ ಪುಟ್ಟೇನಹಳ್ಳಿಯ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು ಈ ಬಾರಿ ಅತ್ಯಂತ ವಿಭಿನ್ನವಾದ ಅಲಂಕಾರವನ್ನ ಮಾಡಿದ್ದಾರೆ.

    ಹೌದು, ಗಣೇಶ ಹಬ್ಬದ ಪ್ರಯುಕ್ತ 52.5 ಲಕ್ಷ ರೂ. ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದೆ. ಇಡೀ ದೇವಾಲಯದ ಆವರಣವನ್ನ 5,10,20 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು 10, 20, 50, 100, 200, 500 ರೂಪಾಯಿ ನೋಟ್‍ಗಳನ್ನ ಬಳಸಿಕೊಂಡು ಹೂವಿನಂತೆ ಮಾಲೆಗಳನ್ನ ಮಾಡಿ ಅಲಂಕಾರ ಮಾಡಿದ್ದಾರೆ. ಇದನ್ನೂ ಓದಿ: ವಿಘ್ನ ನಿವಾರಕ ಗಣೇಶ ಹಬ್ಬದ ಮಹತ್ವವೇನು?

    ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳ ಮೂಲಕ ಅಲಂಕಾರ ಮಾಡಿದ್ದು, ಇದಕ್ಕಾಗಿ 150 ಜನ ಒಂದು ತಿಂಗಳಿಂದ ಶ್ರಮಿಸಿದೆ. ಯಾವುದೇ ಸಮಸ್ಯೆಗಳು ಆಗದಂತೆ 25 ಜನ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಆಳವಡಿಸಿದ್ದಾರೆ. ಭಕ್ತಿರಿಗೆ ದೇವರ ದರ್ಶನಕ್ಕೆ ಬ್ಯಾರಿಕೇಟ್ ಹಾಕಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಾಣ್ಯಗಳಿಂದಲೇ ಗಣೇಶನ ಫೋಟೋಗಳು, ಭಾರತದ ನಕ್ಷೆ, ಕರ್ನಾಟಕದ ನಕ್ಷೆ, ಚಂದ್ರಯಾನದ ಚಿತ್ರ ಸೇರಿದಂತೆ ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನ ಮಾಡಿದ್ದಾರೆ. ಈ ಅಲಂಕಾರ ನೋಡಿದ ಭಕ್ತರು ಸಹ ತುಂಬಾ ಸಂತೋಷಗೊಂಡಿದ್ದಾರೆ.

    ಒಟ್ಟಿನಲ್ಲಿ ನೋಟು ಹಾಗೂ ಕಾಯಿನ್ಸ್‍ಗಳಿಂದ ಅಲಂಕಾರವಾಗಿರೋ ದೇವಾಲದಲ್ಲಿ ಗಣೇಶನ ದರ್ಶನ ಪಡೆಯೋ ಫೀಲೇ ಬೇರೆ. ಇನ್ನೂ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಭಕ್ತರು, ದೇವಾಲಯದ ಟ್ರೆಸ್ಟಿಗಳು, ಮತ್ತು ಸಿನಿ ನಾಯಕರು ದಾನವಾಗಿ ನೀಡಿದ್ದಾರೆ. ಭಕ್ತರ ಡಿಮ್ಯಾಂಡ್ ಇರೋವರೆಗೆ ಈ ಅಲಂಕಾರವನ್ನ ಉಳಿಸಿಕೊಳ್ಳೋ ಯೋಜನೆಯನ್ನ ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಟ ದಿ.ಎನ್.ಟಿ.ರಾಮರಾವ್ ಸ್ಮರಣಾರ್ಥ 100 ರೂಪಾಯಿ ನಾಣ್ಯ ರಿಲೀಸ್

    ಹಿರಿಯ ನಟ ದಿ.ಎನ್.ಟಿ.ರಾಮರಾವ್ ಸ್ಮರಣಾರ್ಥ 100 ರೂಪಾಯಿ ನಾಣ್ಯ ರಿಲೀಸ್

    ತೆಲುಗು ಚಿತ್ರರಂಗದ ದಂತಕಥೆ, ಮಾಜಿ ಸಿಎಂ ದಿವಗಂತ ಎನ್.ಟಿ.ರಾಮರಾವ್  (NT Rama Rao)ಅವರ ಜನ್ಮ ಶತಮಾನೋತ್ಸವ ನೆನಪಿಗಾಗಿ 100 ರೂಪಾಯಿ ಮುಖಬೆಲೆಯ ನಾಣ್ಯವನ್ನು (Coin) ಬಿಡುಗಡೆ ಮಾಡಲಾಗಿದೆ. ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ನಾಣ್ಯವನ್ನು ರಿಲೀಸ್ ಮಾಡಿದ್ದಾರೆ.

    ಆಂಧ್ರ ಪ್ರದೇಶದಲ್ಲಿ ಎನ್.ಟಿ.ಆರ್ ಅವರ ಜನ್ಮ ಶತಮಾನೋತ್ಸವದನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳ ಜೊತೆಗೆ ನೂರು ರೂಪಾಯಿ ನಾಣ್ಯ ಕೂಡ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಎನ್.ಟಿ.ಆರ್ ಪುತ್ರರು ಹಾಗೂ ಪುತ್ರಿಯರು ಹಾಜರಿದ್ದರು.

     

    ಕೇಂದ್ರ ಸರಕಾರ ರಿಲೀಸ್ ಮಾಡಿರುವ ನೂರು ರೂಪಾಯಿ ಮುಖಬೆಲೆಯ ನಾಣ್ಯವು, ಶೇಕಡಾ 50ರಷ್ಟು ಬೆಳ್ಳಿ, ಶೇಕಡಾ 40ರಷ್ಟು ತಾಮ್ರ ಮತ್ತು ಶೇಕಡಾ 5ರಷ್ಟು ಸತು ಇದೆ. ಒಂದು ಬದಿಯಲ್ಲಿ ‘ನಂದಮೂರಿ ತಾರಕ ರಾಮರಾವ್ ಶತಜಯಂತಿ’ ಎಂದು ಬರೆದಿದ್ದರೆ ಮತ್ತೊಂದು ಬದಿಯಲ್ಲಿ ಮೂರು ಸಿಂಹ ಹಾಗೂ ಅಶೋಕ ಚಕ್ರವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

    ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

    ನವದೆಹಲಿ: ನೂತನ ಸಂಸತ್ ಭವನ (New Parliament Building) ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು (Rs.75 Coin) ಬಿಡುಗಡೆ ಮಾಡಲಾಗುವುದಾಗಿ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

    75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿಸಿದೆ.

    ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ತಿನ ಸಂಕೀರ್ಣದ ಚಿತ್ರವನ್ನು ಹೊಂದಿರಲಿದೆ. ‘ಸಂಸದ್ ಸಂಕುಲ್’ ಎಂದು ಅದರ ಮೇಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಹಾಗೂ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ ಎಂದು ಇಂಗ್ಲಿಷ್‌ನಲ್ಲಿ ಅದರ ಕೆಳ ಭಾಗದಲ್ಲಿ ಬರೆಯಲಾಗುತ್ತದೆ.

    ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿರಲಿದೆ. ಅದರ ಅಂಚುಗಳ ಉದ್ದಕ್ಕೂ 200 ಸರಣಿಗಳನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗುತ್ತಿದ್ದು, ಇದು 35 ಗ್ರಾಂ ತೂಗಲಿದೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

    ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ ಇದು 75 ವರ್ಷಗಳ ಸ್ವತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

    ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 25 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ 20ಕ್ಕೂ ಅಧಿಕ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ತೃಣಮೂಲ, ಸಮಾಜವಾದಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಇದನ್ನೂ ಓದಿ: New Parliament Building ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಜೋರು – ವಿಪಕ್ಷಗಳ ಬಹಿಷ್ಕಾರ ಅಸ್ತ್ರಕ್ಕೆ ಪ್ರಧಾನಿ ಮೋದಿ ಕೌಂಟರ್

  • ವ್ಯಕ್ತಿ ಹೊಟ್ಟೆಯಲ್ಲಿ 187 ಕಾಯಿನ್ ಪತ್ತೆ

    ವ್ಯಕ್ತಿ ಹೊಟ್ಟೆಯಲ್ಲಿ 187 ಕಾಯಿನ್ ಪತ್ತೆ

    ಬಾಗಲಕೋಟೆ: ವ್ಯಕ್ತಿ ಹೊಟ್ಟೆಯಲ್ಲಿ 187 ಕಾಯಿನ್‍ಗಳು (Coin) ಪತ್ತೆಯಾಗಿದ್ದು, ಬಾಗಲಕೋಟೆಯ (Bagalkote) ಕುಮಾರೇಶ್ವರ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

    ದ್ಯಾಮಪ್ಪ ಹರಿಜನ (58) ಎಂಬವನೇ ಕಾಯಿನ್ ನುಂಗಿದ್ದ ವ್ಯಕ್ತಿ. ದ್ಯಾಮಪ್ಪ ರಾಯಚೂರು (Raichur) ಜಿಲ್ಲೆಯ ಲಿಂಗಸೂರು ಮೂಲದವರಾಗಿದ್ದು, ಸದ್ಯ ಬಾಗಲಕೋಟೆಯ ಶ್ರೀಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು.

    ಆದರೆ ದ್ಯಾಮಪ್ಪ ಯಾವ ಕಾರಣಕ್ಕಾಗಿ ಇಷ್ಟೊಂದು ಕಾಯಿನ್‍ಗಳನ್ನು ನುಂಗಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕುಟುಂಬಸ್ಥರು ಮಾತನಾಡಿ, ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ

    ಒಟ್ಟಾರೆಯಾಗಿ ವೈದ್ಯರಾದ ಡಾ. ಈಶ್ವರ ಕಲಬುರಗಿ, ಡಾ. ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ. ಅರ್ಚನಾ, ಡಾ. ರೂಪಾ ಹುಲಕುಂದೆ ಅವರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಎಂಡೋಸ್ಕೋಪಿ ಮೂಲಕ ವೈದ್ಯರು ಕಾಯಿನ್ ಹೊರತೆಗೆದಿದ್ದಾರೆ. ಇದನ್ನೂ ಓದಿ: ಆನೆ ಹಾವಳಿ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆ – ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆಯನ್ನೇ ಕೈಬಿಟ್ಟ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • 1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಒಂದು ರೂಪಾಯಿ ಹಳೆಯ ಕಾಯಿನ್ ಮಾರಲು ಹೋದ ವ್ಯಾಪಾರಿಯೋರ್ವ ಆನ್‍ಲೈನ್ ವಂಚಕನಿಂದ ಮೋಸ ಹೋಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ನಗರದ ಶಂಕರಮಠ ಏರಿಯಾದ ನಿವಾಸಿ ಅರವಿಂದ್ ಎಂದು ಗುರುತಿಸಲಾಗಿದ್ದು, ನಗರದ ಬಜಾರ್ ರಸ್ತೆಯಲ್ಲಿ ಗಿಫ್ಟ್ ಸೆಂಟರ್ ಅಂಗಡಿ ಇಟ್ಟುಕೊಂಡಿದ್ದರು. ಹಳೆಯ 1 ರೂಪಾಯಿ ಕಾಯಿನ್ ಕೊಟ್ಟರೆ, 58 ಲಕ್ಷ ರೂಪಾಯಿ ಕೊಡುತ್ತೇವೆ ಎಂಬ ಆನ್‍ಲೈನ್ ವಂಚಕನ ಮಾತು ನಂಬಿದ ಅರವಿಂದ್ ತಮ್ಮ ಬಳಿ ಇದ್ದ ಹಳೆ ಕಾಲದ 1 ರೂಪಾಯಿಯ ಕಾಯಿನ್ ಮಾರಾಟ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:  ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

    ಸ್ವತಃ ಅರವಿಂದ್ ಅವರೇ ತಮ್ಮ ಬಳಿ ಇದ್ದ ಒಂದು ರೂಪಾಯಿಯ ಹಳೆಯ ಕಾಯಿನ್‍ಗಳ ಮಾರಾಟ ಮಾಡುವ ಐಡಿಯಾ ಮಾಡಿ, ಆನ್‍ಲೈನ್‍ನಲ್ಲಿ ಹಳೆಯ ಕಾಯಿನ್‍ಗಳನ್ನು ಖರೀದಿ ಮಾಡುವವರ ಮೊಬೈಲ್ ನಂಬರ್‍ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಮೂರ್ನಾಲ್ಕು ನಂಬರ್‍ಗಳಿಗೆ ಕರೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಹಳೆಯ ಕಾಯಿನ್ ಖರೀದಿ ಮಾಡುತ್ತೇನೆ ಎಂದು ವಾಟ್ಸಾಪ್ ಮುಖಾಂತರ ಕಾಯಿನ್ ಫೋಟೋ ಕಳುಹಿಸಿಕೊಂಡು, ಈ ಕಾಯಿನ್‍ಗೆ 58 ಲಕ್ಷದ 38 ಸಾವಿರದ 808 ರೂಪಾಯಿ ಕೊಡುವುದಾಗಿ ಹೇಳಿದ್ದಾನೆ.

    ಇದನ್ನು ನಂಬಿದ ಅರವಿಂದ್ ಕಾಯಿನ್ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಪ್ರೊಸೆಸಿಂಗ್ ಫೀಸ್, ಆ ಫೀಸ್, ಈ ಫೀಸ್ ಕೊಡಬೇಕು ಅಂತ ಅರವಿಂದ್ ಬಳಿಯೇ ಆನ್‍ಲೈನ್ ವಂಚಕ ಸರಿಸುಮಾರು ಆಗಷ್ಟು, ಈಗಷ್ಟು ಅಂತ 26 ಲಕ್ಷ ವಸೂಲಿ ಮಾಡಿದ್ದಾರೆ. ಅಲ್ಲದೇ ಆನ್‍ಲೈನ್ ವಂಚಕನಿಗೆ ಹಣ ನೀಡುವುದಕ್ಕೆ ಅರವಿಂದ್ ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟಿದ್ದಾರೆ. ಸಾಲದು ಅಂತ ಹಲವರ ಬಳಿ ಕೈ ಸಾಲ ಸಹ ಮಾಡಿದ್ದಾರೆ. ಆದರೆ ಇತ್ತ ಹಣ ಪಡೆದ ಆನ್‍ಲೈನ್ ವಂಚಕ ಮಾತ್ರ ಪಡೆದ ಹಣ ವಾಪಾಸ್ ಮಾಡಿಲ್ಲ. ಬದಲಾಗಿ ಮತ್ತಷ್ಟು ಹಣ ಕೊಡುವಂತೆ ಅರವಿಂದ್‍ಗೆ ಒತ್ತಡ ಹಾಕಿದ್ದಾನೆ. ಇದನ್ನೂ ಓದಿ: ಇಲಿ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಯುಪಿ ಸಚಿವ – ಚಿಕಿತ್ಸೆ ಬಳಿಕ ಡಿಸ್ಚಾರ್ಜ್

    ಇದರಿಂದ ಏನು ಮಾಡಬೇಕೆಂದು ದಿಕ್ಕು ತೋಚದೇ ಅರವಿಂದ್ ಚಿಕ್ಕಬಳ್ಳಾಪುರ ನಗರದಿಂದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಳಿ ನಿರ್ಜನ ಜಾಗಕ್ಕೆ ತೆರಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿನ ಕಾರಣ ಎಲ್ಲವನ್ನೂ ಸಹ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟ್‍ನಿಂದ ಅರವಿಂದ್ ಸಾವಿನ ಸತ್ಯ ಬಯಲಾಗಿದೆ. ಸದ್ಯ ಈ ಸಂಬಂಧ ಇದೀಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • 10 ಪೈಸೆ ನಾಣ್ಯಕ್ಕೆ ಈಗ 1000 ರೂ. ಮೌಲ್ಯ – ಹೇಗೆ ಮಾರಾಟ ಮಾಡಬಹುದು?

    10 ಪೈಸೆ ನಾಣ್ಯಕ್ಕೆ ಈಗ 1000 ರೂ. ಮೌಲ್ಯ – ಹೇಗೆ ಮಾರಾಟ ಮಾಡಬಹುದು?

    ತಾಮ್ರ-ನಿಕ್ಕಲ್ ಲೋಹದಿಂದ ತಯಾರಿಸಿದ 1957 ರಿಂದ 1963 ಸಮಯದಲ್ಲಿ ಮುದ್ರಿಸಲಾದ 10 ಪೈಸೆ ನಾಣ್ಯ ನಿಮ್ಮಲ್ಲಿದೆಯೆ? ಹಾಗಿದ್ದಲ್ಲಿ ನಿಮ್ಮ ಜೇಬಿನಲ್ಲಿ 1000 ರೂ. ಇದ್ದ ಹಾಗೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.

    1957 ರಿಂದ 1963ರ ನಡುವೆ ಬಿಡುಗಡೆಯಾದ ಯಾವುದೇ 10 ಪೈಸೆಯ ನಾಣ್ಯವನ್ನು ನೀವು ಹೊಂದಿದ್ದರೆ ಅವುಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು. ಭಾರತದ ಅಧಿಕೃತವಾಗಿ ದೇಶವಾಗಿ ಘೋಷಣೆಯಾದ ಬಳಿಕ ಬಿಡುಗಡೆಯಾದ ಮೊದಲ ನಾಣ್ಯಗಳೆಂದರೆ ಅದು ಈ 10 ಪೈಸೆಯ ನಾಣ್ಯಗಳು. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    1 ರೂ.ಯನ್ನು 10 ಭಾಗವಾಗಿ ಮಾಡಿದಾಗ ಸಿಗುವ 1 ಭಾಗದ ಮೊತ್ತ 10 ಪೈಸೆ. ಈ ದಶಮಾಂಶ ಪದ್ಧತಿಯನ್ನು 1957ರಲ್ಲಿ ಪರಿಚಯಿಸಲಾಗಿತ್ತು. 10 ಪೈಸೆಯ ನಾಣ್ಯಗಳ ಮೇಲೆ ನಯೆ ಪೈಸೆ ಎಂಬುದಾಗಿ ಬರೆದಿರುವುದನ್ನು ನಾವು ಕಾಣಬಹುದು. 1963 ಇಸವಿಯ ನಂತರ ಈ ಪದವನ್ನು ಬಳಸದಿರುವಂತೆ ನಿರ್ಧರಿಸಲಾಗಿದ್ದು, ನಂತರದಲ್ಲಿ ನಾಣ್ಯಗಳ ಮೇಲೆ ಪೈಸೆ ಎಂಬ ಪದವನ್ನು ಮಾತ್ರವೇ ಬಳಸಲಾಯಿತು. ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

    10 ಪೈಸೆ ನಾಣ್ಯವನ್ನು 1957 ರಿಂದ 1963 ರ ನಡುವೆ ಬಿಡುಗಡೆ ಮಾಡಲಾಗಿತ್ತು. ಈ ನಾಣ್ಯಗಳ ತೂಕ 5 ಗ್ರಾಂ. ಹಾಗೂ ವ್ಯಾಸ 23 ಮಿ.ಮೀ. ಈ ನಾಣ್ಯಗಳನ್ನು ಬಾಂಬೆ, ಕಲ್ಕತ್ತಾ ಹಾಗೂ ಹೈದರಾಬಾದ್‍ನಲ್ಲಿ ಟಂಕಿಸಲಾಗಿತ್ತು. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭ, ಇಂಗ್ಲಿಷ್ ಹಾಗೂ ದೇವನಾಗರಿ ಭಾಷೆಯಲ್ಲಿ ಭಾರತ ಎಂದು ಬರೆದಿರುವುದನ್ನು ನೋಡಬಹುದು. ಇನ್ನೊಂದು ಬದಿಯಲ್ಲಿ 10 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆದಿದ್ದು, ದೇವನಾಗರಿ ಲಿಪಿಯಲ್ಲಿ ನಯೇ ಪೈಸೆ ಹಾಗೂ ರೂಪಯೆ ಕಾ ದಸ್‍ವಾ ಭಾಗ್ ಎಂದು ಬರೆಯಲಾಗಿದೆ. ನಾಣ್ಯದ ಕೆಳ ಭಾಗದಲ್ಲಿ ಟಂಕಿಸಿದ ವರ್ಷವನ್ನೂ ಉಲ್ಲೇಖಿಸಿದೆ. ಇದನ್ನೂ ಓದಿ: ಜಿಯೋ ಮಾರ್ಟ್ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್ಸ್

    ವರದಿಗಳ ಪ್ರಕಾರ ಈ ನಾಣ್ಯಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿ ಉತ್ತಮ ಗಳಿಕೆಯನ್ನೂ ಮಾಡಬಹುದು. ಹಳೆಯ ಹಾಗೂ ಅಪರೂಪದ ನಾಣ್ಯಗಳನ್ನು 1000 ರೂ.ಗಳಿಗೆ ಮಾರಾಟ ಮಾಡಬಹುದು ಎಂದು ತಿಳಿದು ಬಂದಿದೆ. ಹಳೆಯ ಹಾಗೂ ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿ ಅಥವಾ ಮಾರಾಟ ಮಾಡಲು ಹಲವಾರು ವೆಬ್‍ಸೈಟ್‍ಗಳು ಇವೆ. ಇದನ್ನೂ ಓದಿ: ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು

    ಹಳೆಯ ನಾಣ್ಯಗಳನ್ನು ಮಾರಾಟ ಮಾಡಲು ವೆಬ್‍ಸೈಟ್‍ಗಳಿಗೆ ಲಾಗ್ ಇನ್ ಆಗಿ, ಮಾರಾಟಗಾರರಾಗಿ ನೊಂದಾಯಿಸಿಕೊಳ್ಳಿ. ನಂತರ ನಿಮ್ಮ ಬಳಿ ಇರುವ ಅಪರೂಪದ ನಾಣ್ಯಗಳ ಫೋಟೋಗಳನ್ನು ಅಪ್‍ಲೋಡ್ ಮಾಡಬೇಕಾಗುತ್ತದೆ. ಆಸಕ್ತ ವ್ಯಕ್ತಿಗಳು ಖರೀದಿಗಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಮಾತುಕತೆ ನಡೆಸಿ ನಂತರ ನಿಮ್ಮ ನಾಣ್ಯಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.

  • ಐಫೋನ್ ಬದಲು ಸೋಪ್ ಸಿಕ್ಕಿದ್ದ ಗ್ರಾಹಕನಿಗೆ 70,900 ರೂ. ವಾಪಸ್

    ಐಫೋನ್ ಬದಲು ಸೋಪ್ ಸಿಕ್ಕಿದ್ದ ಗ್ರಾಹಕನಿಗೆ 70,900 ರೂ. ವಾಪಸ್

    ಆಲುವಾ (ಕೇರಳ): ಐಫೋನ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿದ ಗ್ರಾಹಕನಿಗೆ ಅಮೆಜಾನ್ 70,900 ರೂ. ವಾಪಸ್ ಕೊಟ್ಟಿದೆ. ಆಲುವಾ ನಿವಾಸಿ ನೂರುಲ್ ಅಮೀನ್ ಎಂಬವರು ಐಫೋನ್ 12 ಖರೀದಿಸಲೆಂದು 70,900 ರೂಪಾಯಿಯನ್ನು ಅಮೆಜಾನ್ ಮೂಲಕ ಪಾವತಿಸಿದ್ದರು. ಆದರೆ ಪೊಲೀಸ್ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪಾವತಿಸಿದ ಸಂಪೂರ್ಣ ಹಣ ಮೋಸ ಹೋದ ಗ್ರಾಹಕನ ಖಾತೆಗೆ ವಾಪಾಸಾಗಿದೆ.

    ಏನಾಗಿತ್ತು?: ಕೇರಳದ ನೂರುಲ್ ಅಮೀನ್ ಅಕ್ಟೋಬರ್ 12 ರಂದು ಅಮೆಜಾನ್ ಮೂಲಕ ಐಫೋನ್ 12 ಆರ್ಡರ್ ಮಾಡಿದ್ದರು. ಇದಕ್ಕೆ ಅವರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿದ್ದರು. ಆದರೆ ಮನೆಗೆ ಬಂದ ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಮೊಬೈಲ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿತ್ತು. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

    ಪ್ರಮುಖ ಆನ್‍ಲೈನ್ ಸ್ಟೋರ್‌ನ ಹೈದರಾಬಾದ್‍ನಲ್ಲಿರುವ ಮಾರಾಟಗಾರರು ಈ ಫೋನನ್ನು ಕಳಿಸಿದ್ದರು. ಆಲುವಾ ತಲುಪುವ ಮುನ್ನ ಸೇಲಂನಲ್ಲಿ ಈ ಫೋನ್ ಇತ್ತು ಎಂಬ ವಿಚಾರ ಆನ್‍ಲೈನ್ ಟ್ರ್ಯಾಕಿಂಗ್ ಮೂಲಕ ಗೊತ್ತಾಗಿದೆ. ಹೀಗಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಮುಂದೆಯೇ ಈ ಬಾಕ್ಸ್ ಓಪನ್ ಮಾಡಿದ್ದರು. ಜೊತೆಗೆ ಇದರ ವೀಡಿಯೋ ಕೂಡಾ ಶೂಟ್ ಮಾಡಿದ್ದರು. ಇದನ್ನೂ ಓದಿ: ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

    ಬಾಕ್ಸ್ ಓಪನ್ ಮಾಡಿದಾಗ ಫೋನ್‍ನಷ್ಟೇ ತೂಕ ಬರುವ ವಸ್ತುಗಳನ್ನು ಬಾಕ್ಸ್‌ನಲ್ಲಿ ಜೋಡಿಸಲಾಗಿತ್ತು. ನೂರುಲ್ ಅಮೀನ್ ಆಗಾಗ ಆನ್‍ಲೈನ್ ಮೂಲಕ ವಸ್ತುಗಳ ಖರೀದಿ ಮಾಡುತ್ತಿದ್ದರು. ತೆಲಂಗಾಣದಿಂದ ಕೇರಳಕ್ಕೆ ಕಳಿಸುವ ವಸ್ತುಗಳು 2 ದಿವಸದೊಳಗೆ ಕೇರಳಕ್ಕೆ ಬಂದು ತಲುಪುತ್ತಿತ್ತು. ಆದರೆ ಈ ಬಾರಿ ಮೂರು ದಿನ ಕಳೆದ ನಂತರ ಬಾಕ್ಸ್ ತಲುಪಿದೆ. ಈ ಬಗ್ಗೆ ಆನ್‍ಲೈನ್ ಕಂಪೆನಿಯ ಕಸ್ಟಮರ್ ಕೇರ್ ಹಾಗೂ ಕೇರಳ ಪೊಲೀಸ್ ಸೈಬರ್ ಸೆಲ್‍ಗೆ ದೂರು ಸಲ್ಲಿಸಿದ್ದರು.

    ಬಳಿಕ ಜಿಲ್ಲಾ ಎಸ್‍ಪಿ ಕಾರ್ತಿಕ್‍ಗೆ ದೂರು ನೀಡಿದ್ದರು. ಎಸ್‍ಪಿ ನೇತೃತ್ವದಲ್ಲಿ ಸೈಬರ್ ಠಾಣೆಯ ವಿಶೇಷ ತಂಡ ತನಿಖೆ ಶುರು ಮಾಡಿತು. ಪೊಲೀಸರು ಅಮೆಜಾನ್ ಸಂಪರ್ಕಿಸಿದರು. ನೂರುಲ್‌ ಅಮೀನ್‌ಗೆ ಬಂದ ಮೊಬೈಲ್ ಬಾಕ್ಸ್‌ನಲ್ಲಿ ಐಎಂಇಐ ನಂಬರ್ ಇತ್ತು. ಇದನ್ನು ಪರಿಶೀಲನೆ ನಡೆಸಿದಾಗ ಮೊಬೈಲ್ ಜಾಖರ್ಂಡ್‍ನಲ್ಲಿ ಬಳಕೆಯಾಗುತ್ತಿರುವ ಮಾಹಿತಿ ಸಿಕ್ಕಿದೆ. ಅದೇ ಐಫೋನ್‍ಗೆ ಆಪಲ್ ಸ್ಟೋರ್ ಖಾತೆಯೂ ಇತ್ತು. ಹಣ ವಾಪಸ್ ಸಿಕ್ಕಿದರೂ ಪ್ರಕರಣ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?

    ಕಳೆದ ತಿಂಗಳು ಕೇರಳದ ಪರವೂರ್ ಎಂಬಲ್ಲಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಒಂದೂ ಕಾಲು ಲಕ್ಷದ ಲ್ಯಾಪ್‍ಟಾಪ್ ಬುಕ್ ಮಾಡಿದ್ದರು. ಅದರೆ ಅವರಿಗೆ ಬಂದ ಬಾಕ್ಸ್‌ನಲ್ಲಿ ನ್ಯೂಸ್ ಪೇಪರ್‌ಗಳು ಮಾತ್ರ ಇದ್ದವು. ಬಳಿಕ ಜಿಲ್ಲಾ ಪೊಲೀಸರು ಮಧ್ಯ ಪ್ರವೇಶಿಸಿ ಹಣ ವಾಪಸ್ ಕೊಡಿಸಿದ್ದರು. ಈ ಪ್ರಕರಣದ ತನಿಖೆಯೂ ಮುಂದುವರಿದಿದೆ.