Tag: Coimbatore

  • ಹಿಂಸೆಗೆ ಪ್ರಚೋದನೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

    ಹಿಂಸೆಗೆ ಪ್ರಚೋದನೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

    ಚೆನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗೆ ಆಡಳಿತ ಪಕ್ಷ ಡಿಎಂಕೆ ಮತ್ತು ಸಿಎಂ ಸ್ಟಾಲಿನ್ (Stalin) ಕಾರಣ ಎಂದು ಆರೋಪಿಸಿದ್ದ ರಾಜ್ಯ ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ವಿರುದ್ಧ ಸೈಬರ್ ಪೊಲೀಸರು (Cyber Crime Division) ಪ್ರಕರಣ ದಾಖಲಿಸಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ಕೊಟ್ಟಿದ್ದಾರೆಂದು ಪೊಲೀಸರು ಕೇಸ್ ಹಾಕಿದ್ದಾರೆ.

    ಇತ್ತೀಚೆಗೆ ಟ್ವಿಟರ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದ ಅಣ್ಣಾಮಲೈ, ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಅವರ ಮೇಲೆ ದ್ವೇಷ ಹೆಚ್ಚಾಗಲು ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷದ ನಾಯಕರು ಕಾರಣ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ

    ತಮಿಳುನಾಡಿನಲ್ಲಿ (Tamilnadu) ಬಿಹಾರದಿಂದ ವಲಸೆ ಬಂದ ಜನರ ಮೇಲೆ ಹಲ್ಲೆ, ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಹರಿದಾಡುತ್ತಿದ್ದ ಸುದ್ದಿಯನ್ನು ಅಣ್ಣಾಮಲೈ ವಿರೋಧಿಸಿದ್ದರು. ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು. ಉತ್ತರ ಬಾರತೀಯರನ್ನು ಪ್ರತ್ಯೇಕಿಸುವುದು ಮತ್ತು ದ್ವೇಷಿಸುವ ಕೆಲಸವನ್ನು ತಮಿಳರು ಮಾಡುವುದಿಲ್ಲ. ಅಂತಹ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಅಣ್ಣಾಮಲೈ ಸಮರ್ಥಿಸಿಕೊಂಡಿದ್ದರು.

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದ ಅಣ್ಣಾಮಲೈ, ಡಿಎಂಕೆ (DMK) ಸಂಸದರು ಮತ್ತು ಸಚಿವರು “ಉತ್ತರ ಭಾರತೀಯರನ್ನು ಪಾನಿಪುರಿ ವಾಲಾ”ಗಳು ಎಂದು ಹೀಯಾಳಿಸಿದ್ದಾರೆ. ಅವರನ್ನು ಕೆಟ್ಟ ಪದಗಳಿಂದ ನಿಂದಿಸಿ, ತಮ್ಮ ನಾಡಿಗೆ ವಾಪಸ್ ಹೋಗುವಂತೆ ವಲಸಿಗರನ್ನು ಒತ್ತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

    ಬಿಹಾರದ (Bihar) ವಲಸೆ ಕಾರ್ಮಿಕರ ನಡುವೆ ತಿರುಪ್ಪೂರ್‍ನಲ್ಲಿ ನಡೆದ ಗಲಾಟೆ ಹಾಗೂ ಕೊಯಮತ್ತೂರಿನಲ್ಲಿ (Coimbatore) ಸ್ಥಳೀಯರ ನಡುವೆ ನಡೆದ ಘರ್ಷಣೆಯ ವೀಡಿಯೋ ತುಣುಕನ್ನು ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಡಿಜಿಪಿ ಶೈಲೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯೊಂದಿಗೆ 26 ವರ್ಷದ ಶಿಕ್ಷಕಿ ಪರಾರಿ

  • ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    ಚೆನ್ನೈ: ಕೊಯಮತ್ತೂರಿನಲ್ಲಿ (Coimbatore) ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ (Cylinder Car Blast) ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಚೆನ್ನೈನ 45ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.

    ಸ್ಫೋಟಕ್ಕೆ ಸಂಬಂಧಿಸಿದ ಶಂಕಿತರು ಮತ್ತು ಬೆಂಬಲಿಗರ ಆಸ್ತಿಗಳನ್ನು ಎನ್‍ಐಎ (National Investigation Agency) ಪರಿಶೀಲನೆ ನಡೆಸುತ್ತಿದ್ದು, ಚೆನ್ನೈನ ಪುದುಪೇಟ್, ಮನ್ನಾಡಿ, ಜಮಾಲಿಯಾ ಮತ್ತು ಪೆರಂಬೂರ್‌ನಲ್ಲಿ ದಾಳಿ ನಡೆಸಿದೆ. ಇಷ್ಟೇ ಅಲ್ಲದೇ, ಕೊಯಮತ್ತೂರಿನ ಕೊಟ್ಟೈಮೇಡು, ಉಕ್ಕಡಂ, ಪೊನ್ವಿಜ ನಗರ ಮತ್ತು ರಥಿನಪುರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದನ್ನೂ ಓದಿ: ಬಸ್‍ಗಳ ನಡುವೆ ಡಿಕ್ಕಿ – ಭೀಕರ ಅಪಘಾತದಲ್ಲಿ ಮೂವರು ಸಾವು, 12 ಮಂದಿಗೆ ಗಾಯ

    ಅಕ್ಬೋಬರ್ 23ರ ಭಾನುವಾರ ದೀಪಾವಳಿ ಸಮಯದಲ್ಲಿ ಮುಂಜಾನೆ 4.20ರ ಸುಮಾರಿಗೆ ತಮಿಳುನಾಡಿನ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಅಳವಡಿಸಿದ್ದ ಮಾರುತಿ 800 ಕಾರೊಂದು ಸ್ಫೋಟಗೊಂಡಿತ್ತು. ಈ ವೇಳೆ 25 ವರ್ಷದ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದನು. ಈ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಜಮೀಶಾ ಮುಬಿನ್ ಮನೆಯಲ್ಲಿ ದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ಕೆಲವು ಐಸಿಸ್ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.

    ಅಕ್ಟೋಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯು ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವ ಜವಾಬ್ದಾರಿ ಹೊತ್ತುಕೊಂಡಿದೆ. ಎನ್‍ಐಎ ಭಾರತದ ಪ್ರಾಥಮಿಕ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋಗೆ ಹೈಟೆಕ್ ಟಚ್ – ನಿಲ್ದಾಣದ ಒಳಗೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ಲ್ಯಾನ್

    Live Tv
    [brid partner=56869869 player=32851 video=960834 autoplay=true]

  • ಕೊಯಮತ್ತೂರು ಸಿಲಿಂಡರ್ ಸ್ಫೋಟ ಕೇಸ್ – ತನಿಖೆ ವಹಿಸಿಕೊಂಡ NIA

    ಕೊಯಮತ್ತೂರು ಸಿಲಿಂಡರ್ ಸ್ಫೋಟ ಕೇಸ್ – ತನಿಖೆ ವಹಿಸಿಕೊಂಡ NIA

    ಚೆನ್ನೈ: ಅಕ್ಟೋಬರ್ 23 ರಂದು ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ (Coimbatore) ನಡೆದ ಕಾರಿನ ಸಿಲಿಂಡರ್ ಸ್ಫೋಟ ಪ್ರಕರಣ (Cylinder Blast Case) ಬಳಿಕ ಭಯೋತ್ಪಾದನಾ (Terrorism) ತಿರುವು ಪಡೆದುಕೊಂಡಿತ್ತು. ಘಟನೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿ ಜಮೇಜಾ ಮುಬಿನ್ ಮನೆಯಲ್ಲಿಯೂ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೈಗೆತ್ತಿಕೊಂಡಿದೆ.

    ಭಾನುವಾರ ಮುಂಜಾನೆ ಸುಮಾರು 4:30ರ ವೇಳೆಗೆ ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಮಾರುತಿ 800 ಕಾರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಜಮೇಜಾ ಮುಬಿನ್ (27) ಸಾವನ್ನಪ್ಪಿದ್ದ.

    ಬಳಿಕ ತನಿಖೆಯನ್ನು ಆರಂಭಿಸಿದ ಪೊಲೀಸರು ಸುಟ್ಟು ಹೋದ ಕಾರಿನಲ್ಲಿ ಹಾಗೂ ಜಮೇಜಾ ಮುಬಿನ್‌ನ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿದ್ದರು. ಇದಕ್ಕೂ ಮುನ್ನ ಆತ 1019ರಲ್ಲಿ ಶ್ರೀಲಂಕಾದ ಈಸ್ಟರ್ ಸಂಡೇ ಸ್ಫೋಟದ ಮಾಸ್ಟರ್ ಮೈಂಡ್ ಜಹ್ರಾನ್ ಹಾಶಿಮ್‌ಗೆ ಸಂಬಂಧಿಸಿದ ಜಾಲದೊಂದಿಗೆ ಸಂಬಂಧ ಹೊಂದಿದ್ದ ಆರೋಪದಡಿ ಆತನನ್ನು ಅಧಿಕಾರಿಗಳು ವಿಚಾರಣೆಯನ್ನೂ ಮಾಡಿದ್ದರು. ಆದರೆ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಯೋಗಿ, ಮೋದಿ ವಿರುದ್ಧ ದ್ವೇಷದ ಭಾಷಣ – ಅಜಂ ಖಾನ್‍ಗೆ 3 ವರ್ಷ ಜೈಲು

    ಇದಾದ ಬಳಿಕ ಜಮೇಜಾ ಮುಬಿನ್‌ನ ಮನೆಯಿಂದ ಕೆಲವರು ಭಾರವಾದ ವಸ್ತುಗಳನ್ನು ಹೊರಗಡೆ ತೆಗೆದುಕೊಂಡು ಹೋಗಿದ್ದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದರು. ಈ ಎಲ್ಲಾ ಭಯೋತ್ಪಾದನಾ ಸುಳಿವುಗಳ ಬೆನ್ನಲ್ಲೇ ಇದು ಆತ್ಮಹತ್ಯಾ ದಾಳಿ ಎಂದು ಕೇಳಿ ಬಂದಿದ್ದು, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂಬ ಒತ್ತಡ ಕೇಳಿಬಂದಿತ್ತು. ತಮಿಳುನಾಡು ಸರ್ಕಾರ ಈ ಪ್ರಕರಣವನ್ನು ಬುಧವಾರ ಎನ್‌ಐಎಗೆ ವಹಿಸಿತ್ತು.

    ಇದೀಗ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದ್ದು, ಭಯೋತ್ಪಾದನಾ ಸಂಚಿನ ಕೋನದಲ್ಲಿ ತನಿಖೆ ನಡೆಸಲಿದೆ. ಇದನ್ನೂ ಓದಿ: ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ

    ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ

    ಚೆನ್ನೈ: ಕೊಯಮತ್ತೂರಿನಲ್ಲಿ (Coimbatore) ಕಾರಿನಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಈ ಪ್ರಕರಣವನ್ನು ಪೊಲೀಸರು ಆತ್ಮಹತ್ಯಾ ದಾಳಿ (Suicide Attack) ಎಂದು ಒಪ್ಪಿಕೊಳ್ಳಬೇಕು. ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ವಹಿಸಬೇಕು ಎಂದು ತಮಿಳುನಾಡು ಭಾರತೀಯ ಜನತಾ ಪಾರ್ಟಿ (BJP) ಮುಖ್ಯಸ್ಥ ಅಣ್ಣಾಮಲೈ (Annamalai) ಒತ್ತಾಯಿಸಿದ್ದಾರೆ.

    ಸಿಲಿಂಡರ್ ಸ್ಫೋಟದಲ್ಲಿ (Cylinder Blast) ಸಾವನ್ನಪ್ಪಿದ ಜಮೇಶಾ ಮುಬಿನ್ ಅಕ್ಟೋಬರ್ 21 ರಂದು ಐಸಿಸ್‌ನಂತೆಯೇ ವಾಟ್ಸಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದ. ಘಟನೆಯ ಬಳಿಕ ಆತನ ಮನೆಯಲ್ಲಿ ಸ್ಫೋಟಕ ವಸ್ತುಗಳೂ ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ಏಕೆ ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿಲ್ಲ. ಈ ಸ್ಫೋಟದ ಬಗ್ಗೆ ತಮಿಳುನಾಡು ಬಿಜೆಪಿ ಪರವಾಗಿ ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇವೆ. ಈ ಘಟನೆಯನ್ನು ಪೊಲೀಸರು ಆತ್ಮಹತ್ಯಾ ದಾಳಿ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ

    ವರದಿಗಳ ಪ್ರಕಾರ ಜಮೇಶಾ ಮುಬಿನ್‌ನ ಮನೆಯಿಂದ ಕೆಲವರು ಭಾರವಾದ ಚೀಲವನ್ನು ಹೊತ್ತುಕೊಂಡು ಹೊರಗಡೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಐವರನ್ನು ಬಂಧಿಸಿದ್ದಾರೆ.

    ಭಾನುವಾರ ಕೊಯಮತ್ತೂರಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸುವುದಕ್ಕೂ ಮೊದಲು ಜಮೇಶಾ ಮುಬಿನ್ ಕಾರನ್ನು ಚಲಾಯಿಸುತ್ತಿದ್ದ. ಆತ ಚೆಕ್ ಪಾಯಿಂಟ್ ಅನ್ನು ಕೂಡಾ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂಬುದು ತಿಳಿದುಬಂದಿದೆ. ಆತನ ಗುರಿ ಏನಾಗಿತ್ತು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

    Live Tv
    [brid partner=56869869 player=32851 video=960834 autoplay=true]

  • ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    ಗಾಗಲೇ ಕಾಂತಾರ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಅನೇಕ ಕಡೆಗಳಲ್ಲಿ ನಡೆದಿವೆ. ಆದರೆ, ಈವರೆಗೂ ಕನ್ನಡದ ಯಾವುದೇ ಸಿನಿಮಾ ಕೊಯಂಬತ್ತೂರಿನ (Coimbatore) ಇಶಾ ಫೌಂಡೇಶನ್ (Isha Foundation) ನಲ್ಲಿ ಪ್ರದರ್ಶನ ಕಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಕಾಂತಾರ (Kantara) ಅಲ್ಲಿ ವಿಶೇಷ ಪ್ರದರ್ಶನ ಕಂಡಿದ್ದು, ಈ ಕುರಿತು ಇಶಾ ಫೌಂಡೇಶನ್ ತನ್ನ ಅಧಿಕೃತ ಪೇಜಿನಲ್ಲಿ ಬರೆದುಕೊಂಡಿದೆ. ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನೂ ಆಡಿದೆ.

    ಇಶಾ ಫೌಂಡೇಶನ್ ಯೋಗ ಕೇಂದ್ರದಲ್ಲಿ ಸಾಮಾನ್ಯವಾಗಿ ಸಿನಿಮಾಗಳನ್ನು ತೋರಿಸುವುದಿಲ್ಲವಂತೆ. ಈ ಹಿಂದೆ ಕಂಗನಾ ರಣಾವತ್ ನಟನೆಯ ಮಣಿಕರ್ಣಿಕ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಅದರ ನಂತರ ಕಾಂತಾರಕ್ಕೆ ಈ ಯೋಗ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನವಾದ ಮೊದಲ ಸಿನಿಮಾ ಕಾಂತಾರ ಆಗಿದೆ. ಈ ಕುರಿತು ಹೆಮ್ಮೆಯಿಂದಲೇ ಫೌಂಡೇಶನ್ ಬರೆದುಕೊಂಡಿದೆ.

    ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ (Rishabh Shetty) ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.

    ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ‘ಕಾಂತಾರ’  ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.

    ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾರಿನ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಭಯೋತ್ಪಾದನೆ ಲಿಂಕ್

    ಕಾರಿನ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಭಯೋತ್ಪಾದನೆ ಲಿಂಕ್

    ಚೆನ್ನೈ: ಭಾನುವಾರ ತಮಿಳುನಾಡಿನ (Tamilnadu) ಕೊಯಮತ್ತೂರಿನಲ್ಲಿ (Coimbatore) ಕಾರಿನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Cylinder Blast) 25 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿತ್ತು. ಆದರೆ ಈ ಘಟನೆ ಇದೀಗ ಭಯೋತ್ಪಾದನೆಯ (Terrorism) ತಿರುವು ಪಡೆದುಕೊಂಡಿದೆ.

    ನಿನ್ನೆ ಕೊಯಮತ್ತೂರಿನ ದೇವಾಲಯವೊಂದರ ಬಳಿ ಕಾರಿನ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಜೆಮಿಶಾ ಮುಬೀನ್ ಅವರ ಮನೆಯಲ್ಲಿ ಇದೀಗ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದಾರೆ.

    2019ರಲ್ಲಿ ಶ್ರೀಲಂಕಾದ ಈಸ್ಟರ್ ಸಂಡೇ ಸ್ಫೋಟದ ಮಾಸ್ಟರ್ ಮೈಂಡ್ ಜಹ್ರಾನ್ ಹಾಶಿಮ್‌ಗೆ ಸಂಬಂಧಿಸಿದ ಜಾಲದೊಂದಿಗೆ ಜೆಮಿಶಾ ಮುಬೀನ್ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಆತನನ್ನು ಅಧಿಕಾರಿಗಳು ಈ ಹಿಂದೆ ವಿಚಾರಿಸಿದ್ದರು. ಇದೀಗ ಅದೇ ವ್ಯಕ್ತಿ ಸಿಲಿಂಡರ್ ಸ್ಫೋಟದಿಂದ ಸಾವನ್ನಪ್ಪಿದ್ದು, ಈ ಬಗ್ಗೆ ಭಯೋತ್ಪಾದನಾ ಸಂಚಿನ ಕೋನದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಸವಲಿಂಗ ಶ್ರೀಗಳ ಸಾವಿನ ಸುತ್ತ ಅನುಮಾನಗಳ ಹುತ್ತ – 3 ಪುಟಗಳ ಡೆತ್‍ನೋಟ್ ರಹಸ್ಯ ಬಯಲು!

    ಘಟನೆಯ ಬಗ್ಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಸಿ ಶೈಲೇಂದ್ರ ಬಾಬು ಅವರು ಮಾತನಾಡಿ, ತನಿಖೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಈ ಘಟನೆಯ ಬಗ್ಗೆ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ತನಿಖೆ ಪೂರ್ಣವಾದ ಬಳಿಕ ನಿಜಾಂಶ ಏನೆಂಬುದು ತಿಳಿದುಬರಲಿದೆ ಎಂದಿದ್ದಾರೆ.

    ಮುಬೀನ್ ಅವರನ್ನು ಈ ಹಿಂದೆ ಎನ್‌ಐಎ ವಿಚಾರಣೆ ನಡೆಸಿತ್ತು. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

    Live Tv
    [brid partner=56869869 player=32851 video=960834 autoplay=true]

  • ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಚೆನ್ನೈ: ಎಲೆಕ್ಟ್ರಿಷಿಯನ್ (Electrician) ಕೆಲಸ ಮಾಡುತ್ತಿದ್ದ ವೇಳೆ ನಟ್ ನುಂಗಿದ್ದ 55 ವರ್ಷದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನೆಟ್ ಅನ್ನು ಆತನ ದೇಹದಿಂದ ವೈದ್ಯರು ಹೊರ ತೆಗೆದಿದ್ದಾರೆ.

    ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿಯನ್ನು ಕೊಯಮತ್ತೂರಿನ (Coimbatore) ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅಕ್ಟೋಬರ್ 18ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಟ್ ಅನ್ನು ನುಂಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಈ ವೇಳೆ ತಕ್ಷಣ ಕೆಮ್ಮಲು ಪ್ರಯತ್ನಿಸಿದ್ದಾರೆ. ಆದರೆ ನಟ್‍ನಿಂದ ಅವರಿಗೆ ಉಸಿರುಗಟ್ಟಲು ಪ್ರಾರಂಭಿಸಿತು. ಹೀಗಾಗಿ ಅವರನ್ನು ಕೂಡಲೇ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ವ್ಯಕ್ತಿಯನ್ನು ಕರೆದೊಯ್ದು ಎಕ್ಸ್-ರೇ ನಡೆಸಲಾಯಿತು. ಈ ವೇಳೆ ನಟ್ ಶ್ವಾಸನಾಳದಲ್ಲಿ ಸೇರಿಕೊಂಡು ಎಡ ಶ್ವಾಸಕೋಶದ ಕಡೆಗೆ ಹೋಗುತ್ತಿರುವುದು ವೈದ್ಯರಿಗೆ ತಿಳಿದುಬಂದಿದೆ.

    ಬಳಿಕ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರವಣನ್, ಅಲಿಸುಲ್ತಾನ್, ಮಣಿಮೋಳಿ, ಸೆಲ್ವನ್ ಮತ್ತು ಮದನಗೋಪಾಲನ್ ಅವರನ್ನೊಳಗೊಂಡ ವೈದ್ಯರ ತಂಡ ಎಂಡೋಟ್ರಾಶಿಯಲ್ ಉಪಕರಣವನ್ನು ಬಳಸಿ ಸಂಸುದ್ದೀನ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ನಟ್ ಅನ್ನು ಹೊರತೆಗೆದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ: ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

    ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

    ಚೆನ್ನೈ: ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ (Coimbatore) ನಡೆದಿದೆ.

    ತಮಿಳುನಾಡಿನ (Tamil Nadu) ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಾಂಬ್ ಎಸೆಯುವ ಮೊದಲು ಬಿಜೆಪಿ ಕಚೇರಿ ಬಳಿ ಕೆಲವರು ಅನುಮಾನಸ್ಪದವಾಗಿ ಚಲಿಸಿರುವುದು ಕಂಡುಬಂದಿದೆ. ಘಟನೆಯಲ್ಲಿ ಯಾವುದೇ ಹಾನಿ ಅಥವಾ ಯಾರಿಗೂ ತೊಂದರೆಯೂ ಆಗಲಿಲ್ಲ. ಈ ರೀತಿ ಘಟನೆಯು ಬಿಜೆಪಿ ಕಾರ್ಯಕರ್ತರನ್ನು ತಡೆಯುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (Annamalai) ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಕೊಯಮತ್ತೂರು ಪಕ್ಷದ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ್ದಾರೆ. ಆದರೆ ಈ ಘಟನೆಯಿಂದ ನಮ್ಮ ಸಹೋದರ ಸಹೋದರಿಯರನ್ನು ತಡೆಯಲು ಸಾಧ್ಯವಿಲ್ಲ. ಇದು ನಮ್ಮ ಸಮಾಜ ಮತ್ತು ದೇಶಕ್ಕೆ ದ್ರೋಹ ಬಗೆಯುವ ಶಕ್ತಿಗಳ ವಿರುದ್ಧ ಕಠಿಣವಾಗಿ ಹೋರಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.

    ಗುರುವಾರ ದೇಶಾದ್ಯಂತ ಹಲವು ಭಾಗಗಳಲ್ಲಿ ಪಿಎಫ್‍ಐ ಕಚೇರಿಗಳು ಹಾಗೂ ಅದರ ಪದಾಧಿಕಾರಿಗಳ ನಿವಾಸಗಳ ಮೇಲೆ ಎನ್‍ಐಎ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಶುಲ್ಕದ ಬರೆ – ಅಕ್ಟೋಬರ್‌ನಿಂದ ವಿದ್ಯುತ್ ದರ ಏರಿಕೆ

    ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೆಟ್ರೋಲ್ ತುಂಬಿದ ಬಾಟಲಿಯು ಪಕ್ಷದ ಕಚೇರಿಯ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಚಾಕೊಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ – ವ್ಯಕ್ತಿ ಅರೆಸ್ಟ್

    ಚಾಕೊಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ – ವ್ಯಕ್ತಿ ಅರೆಸ್ಟ್

    ಚೆನ್ನೈ: ಚಾಕೊಲೇಟ್‍ಗಳ ಜೊತೆಗೆ 20.5 ಕೆಜಿ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ 58 ವರ್ಷದ ವ್ಯಕ್ತಿಯನ್ನು ಕೊಯಮತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಅರಿವೋಲಿ ನಗರದ ಕೆ.ಬಾಲಾಜಿ ಎಂದು ಗುರುತಿಸಲಾಗಿದ್ದು, ಈತನೊಂದಿಗೆ ಇನ್ನೂ 15 ಮಂದಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸಲ್ಲಿ ಇನ್ನಿಬ್ಬರ ಬಂಧನ- ಪ್ರಕರಣದ ಮಾಸ್ಟರ್ ಮೈಂಡ್ ಬಗ್ಗೆಯೂ ಸುಳಿವು

    ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 272, 273, 328 ಮತ್ತು (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಸೇರಿದಂತೆ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿಷೇಧಿತ ಪದಾರ್ಥಗಳ ಪರೀಕ್ಷೆಗಾಗಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ ಶೋರೂಮ್‍ಗೆ ನುಗ್ಗಿ ಯುವತಿಗೆ ಚಾಕು ಇರಿದ

    ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ ಶೋರೂಮ್‍ಗೆ ನುಗ್ಗಿ ಯುವತಿಗೆ ಚಾಕು ಇರಿದ

    ಚೆನ್ನೈ: ಪ್ರೀತಿ ನಿರಾಕರಿಸಿದಕ್ಕೆ 21 ವರ್ಷದ ಯುವತಿಗೆ ಆಕೆಯ ಪ್ರಿಯಕರನೇ ಚಾಕು ಇರಿದಿರುವ ಘಟನೆ ಕೊಯಮತ್ತೂರಿನ ಕಾರು ಶೋರೂವೊಂದರಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ದಕ್ಷಿಣ ಕೊಯಮತ್ತೂರಿನ ಕುನಿಯಮುತ್ತೂರಿನ ನಿವಾಸಿ 21 ವರ್ಷದ ಶುಭಶ್ರೀ ಎಂದು ಗುರುತಿಸಲಾಗಿದೆ. ಸೇಲಂನಲ್ಲಿದ್ದ ಆರೋಪಿ ದಿನೇಶ್ ಇನ್‍ಸ್ಟಾಗ್ರಾಮ್ ಮೂಲಕ ಯುವತಿಗೆ ಪರಿಚಯವಾಗಿದ್ದಾನೆ. ಈತ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಯುವತಿ ಹಾಗೂ ಆರೋಪಿ ಎರಡು ವರ್ಷಗಳ ಹಿಂದೆ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಯುರೋಪಿನ ಅತಿ ದೊಡ್ಡ ಗ್ಯಾಸ್ ಪೈಪ್‍ಲೈನ್ ಸ್ಥಗಿತ – ಕೆನಡಾದ ಮೊರೆ ಹೋದ ಜರ್ಮನಿ

    CRIME 2

    ಯುವತಿಯನ್ನು ಭೇಟಿಯಾಗಲು ದಿನೇಶ್ ಆಗಾಗ ಕೊಯಮತ್ತೂರ್‍ಗೆ ಹೋಗುತ್ತಿದ್ದನು. ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದು, ತನ್ನ ಪ್ರೀತಿಯನ್ನು ಒಪಪಿಕೊಳ್ಳುವಂತೆ ಯುವತಿಗೆ ಒತ್ತಾಯಿಸಿದ್ದಾನೆ. ಆದರೆ ಪ್ರೀತಿಯನ್ನು ನಿರಾಕರಿಸಿ ಯುವತಿ ಆರೋಪಿಯ ಮೊಬೈಲ್ ನಂಬರ್ ಅನ್ನು ಎರಡು ತಿಂಗಳ ಹಿಂದೆ ಬ್ಲಾಕ್ ಮಾಡಿದ್ದಳು. ಇದನ್ನೂ ಓದಿ: ಹೀರೋಗಳು ಶರ್ಟ್ ತೆಗೆದು ‘ಆಬ್ಸ್’ ತೋರಿಸ್ತಾರೆ, ನಮಗೂ ಫ್ರೀಡಂ ಬೇಕು ಎಂದ ನಟಿ ಪೂಜಾ ಭಾಲೇಕರ್

    ಆದರೆ ಸೋಮವಾರ ಬೆಳಗ್ಗೆ ಸುಬಶ್ರೀ ಕೆಲಸ ಮಾಡುತ್ತಿದ್ದ ಕಾರ್ ಶೋರೂಮ್‍ಗೆ ನುಗ್ಗಿದ ದಿನೇಶ್ ಆಕೆಯೊಂದಿಗೆ ಜಗಳವಾಡಿದ್ದಾನೆ. ನಂತರ ಏಕಾಏಕಿ ಜೇಬಿನಿಂದ ಚಾಕುವನ್ನು ತೆಗೆದು ಯುವತಿಯ ಕುತ್ತಿಗೆ, ಭುಜ ಮತ್ತು ಮುಖಕ್ಕೆ ಇರಿದಿದ್ದಾನೆ. ನಂತರ ಅಲ್ಲಿಂದ ಪರಾರಿಯಗಲು ಯತ್ನಿಸಿದಾಗ ಶೋರೂಂನಲ್ಲಿದ್ದ ಇತರ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಇದೀಗ ಆರೋಪಿ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಶೋರೂಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]