Tag: code of conduct

  • ವಿಡಿಯೋ: ಚುನಾವಣಾ ನೀತಿ ಸಂಹಿತೆ ಎಚ್ಚರಿಸಿದ ಡಿಸಿಗೆ ತಲೆ ಮೊಟಕಿ ಹೆದರಬೇಡ ಅಂದ ಸಿಎಂ

    ವಿಡಿಯೋ: ಚುನಾವಣಾ ನೀತಿ ಸಂಹಿತೆ ಎಚ್ಚರಿಸಿದ ಡಿಸಿಗೆ ತಲೆ ಮೊಟಕಿ ಹೆದರಬೇಡ ಅಂದ ಸಿಎಂ

    ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ ಜಿಲ್ಲಾಧಿಕಾರಿ ಡಿಸಿ ದೀಪ್ತಿ ಅದಿತ್ಯಾ ಕಾನಡೆ ತಲೆಗೆ ಮೊಟಕಿ ಹೆದರಬೇಡ ಅಂತಾ ಸಿಎಂ ಹೇಳಿರುವ ಘಟನೆಯೊಂದು ಇಂದು ನಡೆದಿದೆ.

    ಇಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ನೂತ ಮೆಗಾಡೈರಿ ಉದ್ಘಾಟನೆಗಾಗಿ ಆಗಮಿಸಿದ್ರು. ಆದ್ರೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೇವಲ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಈ ವೇಳೆ ಜಿಲ್ಲಾಧಿಕಾರಿಗಳು ಸಿಎಂ ಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ್ರು. ಏನು ಆಗಲ್ಲ, ಊಟ ಮಾಡ್ಕೊಂಡು ಹೋಗ್ತೀನಿ ಅಂತಾ ಜಿಲ್ಲಾಧಿಕಾರಿ ತಲೆಗೆ ಮೊಟಕಿದ್ರು. ಇದನ್ನೂ ಓದಿ: ಹೆಂಗಸರು ಸೆಲ್ಫಿ ಸೆಲ್ಫಿ ಎಂದು ನನ್ನನ್ನು ಹಿಡಿದುಕೊಳ್ಳುತ್ತಾರೆ: ಸಿಎಂ

    ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಉದ್ಘಾಟನಾ ಕಾರ್ಯಕ್ರಮ ಹಾಗೂ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಉದ್ಘಾಟನೆ ಮಾಡದೇ ಮೆಗಾಡೈರಿ ವೀಕ್ಷಿಸಿ ನಂತರ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ವಿಡಿಯೋ: ಮಂಗ್ಳೂರು ಮೇಯರ್ ಗೆ ಪಂಚ್ ಕೊಟ್ರು ಸಿಎಂ!

  • ನಟಿ ಪೂಜಾ ಗಾಂಧಿಗೆ ಬಿಗ್ ರಿಲೀಫ್

    ನಟಿ ಪೂಜಾ ಗಾಂಧಿಗೆ ಬಿಗ್ ರಿಲೀಫ್

    ರಾಯಚೂರು: ಕಳೆದ ನಾಲ್ಕೂವರೆ ವರ್ಷಗಳಿಂದ ನಟಿ ಪೂಜಾಗಾಂಧಿ ರಾಯಚೂರಿನಲ್ಲಿ ಎದುರಿಸುತ್ತಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೊನೆಗೂ ಮುಕ್ತಿ ಪಡೆದಿದ್ದಾರೆ.

    ರಾಯಚೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಪೂರ್ಣಿಮಾ ಯಾದವ್ ಸಾಕ್ಷ್ಯಾಧಾರ ಕೊರತೆಯಿಂದ ಪೂಜಾಗಾಂಧಿ ಖುಲಾಸೆಯಾಗಿದ್ದಾರೆ ಎಂದು ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಪ್ರಕರಣ?
    2013 ರಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಅಂದಿನಿಂದಲೂ ಪೂಜಾಗಾಂಧಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದರು.

    ಈ ಪ್ರಕರಣದ ಆರೋಪದಿಂದ ಈಗ ಪೂಜಾಗಾಂದಿ ಮುಕ್ತಿಯಾಗಿದ್ದಾರೆ ಎಂದು ಪೂಜಾಗಾಂಧಿ ಪರ ವಕೀಲ ನಾಗರಾಜ್ ನಾಯಕ ಹೇಳಿದ್ದಾರೆ. ತೀರ್ಪಿನಿಂದ ತುಂಬಾ ಖುಷಿಯಾಗಿದೆ. ಪ್ರಕರಣ ಮುಗಿದರೂ ರಾಯಚೂರಿಗೆ ಮತ್ತೆ ಮತ್ತೆ ಬರ್ತಿನಿ ಎಂದು ಪೂಜಾಗಾಂಧಿ ಹೇಳಿದ್ದಾರೆ. ಹೊಸ ವರ್ಷವನ್ನ ಪ್ರತಿ ದಿನದಂತೆ ಖುಷಿಯಾಗಿ ಸ್ವಾಗತಿಸುತ್ತೇನೆ. ನಾನು ಯಾವಾಗ ಮದುವೆ ಆಗುತ್ತೇನೆ ಆಗ ಹೇಳುತ್ತೇನೆ ಎಂದು ಪೂಜಾಗಾಂಧಿ ಹೇಳಿದರು.

  • ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

    ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

    ರಾಯಚೂರು: 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಹಿನ್ನೆಲೆ ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ ಕಾಡುತ್ತಿದೆ.

    ರಾಯಚೂರಿನ ಜೆಎಂಎಫ್‍ಸಿ 2ನೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವ ಪೂಜಾಗಾಂಧಿಗೆ ಸಂಜೆ ಐದು ಗಂಟೆವರೆಗೆ ನ್ಯಾಯಾಲಯದಲ್ಲೇ ಕುಳಿತುಕೊಳ್ಳುವಂತೆ ನ್ಯಾಯಾಧೀಶರು ಶಿಕ್ಷೆ ನೀಡಿದ್ದಾರೆ. ಕುಳಿತುಕೊಳ್ಳದಿದ್ದರೆ ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಹೇಳಿದ್ದಾರೆ.

    ಸಂಜೆ ವೇಳೆಗೆ ಷರತ್ತುಬದ್ಧ ಜಾಮೀನು ಸಿಗಬಹುದು ಇಲ್ಲಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.

    ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು.

    ಈಗಾಗಲೇ ಒಂದು ಬಾರಿ ಜಾಮೀನನ್ನ ನ್ಯಾಯಾಲಯ ರದ್ದುಗೊಳಿಸಿದೆ. ಈ ಬಾರಿ 50 ಸಾವಿರ ರೂ. ದಂಡ, 2 ಲಕ್ಷ ಶ್ಯೂರಿಟಿಯೊಂದಿಗೆ ಜಾಮೀನು ನೀಡುವ ಸಾಧ್ಯತೆ ಇದೆ.

    ಕೋರ್ಟ್ ನಲ್ಲಿರುವ ಪೂಜಾ ಗಾಂಧಿಗೆ ಮಧ್ಯಾಹ್ನದ ಊಟ ಇಲ್ಲದ ಕಾರಣ ಚಾಕ್ಲೇಟ್ ತಿಂದಿದ್ದಾರೆ.