Tag: Coconut Laddu

  • ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?

    ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?

    ದೀಗ ನವರಾತ್ರಿ ಹಬ್ಬ ನಡೆಯುತ್ತಿದ್ದು, ಅದನ್ನು ಆಚರಿಸಲು ಪ್ರತಿ ದಿನ ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅಲ್ವಾ? ಇಂದು ನಾವು ತೆಂಗಿನಕಾಯಿಯ ಲಡ್ಡು ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಸಿಹಿ ಕಂಡೆನ್ಸ್ಡ್ ಮಿಲ್ಕ್ – 220 ಗ್ರಾಂ
    ತೆಂಗಿನ ತುರಿ – ಅರ್ಧ ಕಪ್
    ಒಣ ತೆಂಗಿನ ತುರಿ – ಕೋಟಿಂಗ್‌ಗೆ ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಮನೆಲಿ ಮಾಡಿ ಸೋರೆಕಾಯಿ ಹಲ್ವಾ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನ ತುರಿಯನ್ನು ಹಾಕಿ 3-4 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಅದಕ್ಕೆ ಸಿಹಿ ಕಂಡೆನ್ಸ್ಡ್ ಮಿಲ್ಕ್ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
    * ಮಿಶ್ರಣ ದಪ್ಪವಾಗುತ್ತಾ ಬರುತ್ತಿದ್ದಂತೆ ಕೈಯಾಡಿಸುವುದನ್ನು ಮುಂದುವರಿಸಿ.
    * ಈಗ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕಿಡಿ.
    * ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ಬಳಿಕ ಒಂದೊಂದು ಟೀಸ್ಪೂನ್‌ನಷ್ಟು ಮಿಶ್ರಣದ ಉಂಡೆಗಳನ್ನು ಕಟ್ಟಿ.
    * ಈಗ ಉಂಡೆಗಳನ್ನು ಒಣ ತೆಂಗಿನ ತುರಿಯಲ್ಲಿ ಉರುಳಿಸಿ ಕೋಟ್ ಮಾಡಿ.
    * ತೆಂಗಿನಕಾಯಿಯ ಲಡ್ಡು ಇದೀಗ ಸವಿಯಲು ಸಿದ್ದವಾಗಿದ್ದು, ಅದನ್ನು 2-3 ದಿನಗಳ ವರೆಗೆ ಫ್ರಿಜ್‌ನಲ್ಲಿ ಇಡಬಹುದು. ಇದನ್ನೂ ಓದಿ: ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    Live Tv
    [brid partner=56869869 player=32851 video=960834 autoplay=true]

  • ಸುಲಭವಾಗಿ ಟೇಸ್ಟಿ ಕೊಬ್ಬರಿ ಲಡ್ಡು ಮಾಡೋದು ಹೇಗೆ?

    ಸುಲಭವಾಗಿ ಟೇಸ್ಟಿ ಕೊಬ್ಬರಿ ಲಡ್ಡು ಮಾಡೋದು ಹೇಗೆ?

    ನೆಯಲ್ಲಿ ಕೊಬ್ಬರಿ ಉಳಿದಿದೆಯಾ? ಅಯ್ಯೊ ಸುಮ್ನೆ ಕೊಬ್ಬರಿ ವೇಸ್ಟ್ ಆಗತ್ತಲ್ಲಾ ಅಂತಾ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ಸಿಂಪಲ್ ಕೊಬ್ಬರಿ ಲಡ್ಡು ಮಾಡೊ ವಿಧಾನ.

    ಬೇಕಾಗುವ ಸಾಮಗ್ರಿಗಳು:
    ತುರಿದಿರುವ ಕೊಬ್ಬರಿ – 1 ಕಾಲು ಕಪ್
    ಹಾಲು – ಮುಕ್ಕಾಲು ಲೀಟರ್
    ಸಕ್ಕರೆ – 1/3 ಕಪ್
    ತುಪ್ಪ – 2 ಚಮಚ
    ಏಲಕ್ಕಿ ಪುಡಿ – ಎರಡು ಚಿಟಿಕೆ
    ಬಾದಾಮಿ- ಸ್ವಲ್ಪ

    ಮಾಡುವ ವಿಧಾನ:
    1. ಮೊದಲು ಒಂದು ಪ್ಯಾನ್‍ನನ್ನು ಸ್ಟೌವ್ ಮೇಲಿಟ್ಟು, ಬಿಸಿಯಾದ ಬಳಿಕ 1 ಕಾಲು ಕಪ್ ತುರಿದ ಕೊಬ್ಬರಿಯನ್ನು ಹಾಕಿ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.

    2. ಬಳಿಕ ಫ್ರೈ ಮಾಡಿರುವ ಕೊಬ್ಬರಿ ತುರಿಗೆ ಮುಕ್ಕಾಲು ಲೀಟರ್ ಕಪ್ ಹಾಲು ಹಾಗೂ 1/3 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಕಡಿಮೆ ಉರಿಯಲ್ಲಿ ಮಿಶ್ರಣವನ್ನು ಡ್ರೈ ಆಗಲು ಬಿಡಿ.

    3. ಕೊಬ್ಬರಿ ಮಿಶ್ರಣಕ್ಕೆ 2 ಚಮಚ ತುಪ್ಪ ಹಾಗೂ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವು ಗಟ್ಟಿಯಾಗುವ ತನಕ ಅದನ್ನು ಸೌಟಿನಿಂದ ತಿರುಗಿಸುತ್ತಾ ಇರಿ.

    4. ಮಿಶ್ರಣ ಗಟ್ಟಿಯಾದ ಮೇಲೆ ಸ್ಟೌವ್ ಆಫ್ ಮಾಡಿ, ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ನಿಧಾನವಾಗಿ ಮಿಶ್ರಣವನ್ನು ಒಂದೊಂದೆ ಉಂಡೆ ಆಕಾರದಲ್ಲಿ ಮಾಡಿ ಪ್ಲೇಟ್‍ನಲ್ಲಿ ಇಡಿ. ಕೊಬ್ಬರಿ ತುರಿಯಿಂದ ತಯಾರಿಸಿದ ಲಡ್ಡುಗಳನ್ನು ಒಂದೊಂದು ಬಾದಾಮಿ ಅಲಂಕರಿಸಿ ಸಿದ್ಧ ಪಡಿಸಿದರೆ ಕೊಬ್ಬರಿ ಲಡ್ಡು ಸವಿಯಲು ಸಿದ್ಧ.

    ಮಕ್ಕಳಿಂದ ದೊಡ್ಡವರವರೆಗೂ ಸ್ವೀಟ್ ಅಂದ್ರೆ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಸ್ವೀಟ್ ಪ್ರಿಯರಿಗೆಂದೇ ಈ ರೆಸಿಪಿ ತಯಾರಾಗಿದೆ. ಸಿಂಪಲ್ ಕೊಬ್ಬರಿ ಲಾಡು ಎಲ್ಲರಿಗೂ ಸಖತ್ ಇಷ್ಟ ಅಗೊದ್ರಲ್ಲಿ ಎರಡು ಮಾತೇ ಇಲ್ಲ.