Tag: coconut dosa

  • ಹೀಗೆ ಮಾಡಿ ತೆಂಗಿನಕಾಯಿ ದೋಸೆ

    ಹೀಗೆ ಮಾಡಿ ತೆಂಗಿನಕಾಯಿ ದೋಸೆ

    ಪ್ರತಿ ದಿನ ಬೆಳಗ್ಗೆ ಉಪಹಾರಕ್ಕೆ ಹೊಸ ಹೊಸದೇನಾದರೂ ಮಾಡಬೇಕು ಎಂದರೆ ಒಮ್ಮೆ ತೆಂಗಿನಕಾಯಿ ದೋಸೆ (Coconut Dosa) ಮಾಡಿ ನೋಡಿ. ಅಕ್ಕಿ ಹಾಗೂ ತೆಂಗಿನಕಾಯಿ ಸಂಯೋಜನೆಯ ರುಚಿಕರವಾದ ದೋಸೆ ಪರ್ಫೆಕ್ಟ್ ಉಪಹಾರವಾಗಿದೆ. ಸೆಟ್ ದೋಸೆಯನ್ನು ಹೋಲುವ ತೆಂಗಿನಕಾಯಿ ದೋಸೆಯನ್ನು ತಯಾರಿಸಲು ಕೆಲವೇ ನಿಮಿಷಗಳು ಸಾಕು. ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 2 ಕಪ್
    ಮೆಂತ್ಯ – 1 ಟೀಸ್ಪೂನ್
    ತುರಿದ ತೆಂಗಿನಕಾಯಿ – 1 ಕಪ್
    ನೀರು – ರುಬ್ಬಲು
    ಉಪ್ಪು – 1 ಟೀಸ್ಪೂನ್ ಇದನ್ನೂ ಓದಿ:  ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಮತ್ತು ಮೆಂತ್ಯ ವನ್ನು ತೆಗೆದುಕೊಂಡು ಅದು ಮುಳುಗುವಷ್ಟು ನೀರು ಹಾಕಿ ಸುಮಾರು 4 ಗಂಟೆಗಳ ಕಾಲ ನೆನೆಸಿಡಿ.
    * ಈಗ ಅಕ್ಕಿಯನ್ನು ನೀರಿನಿಂದ ತೆಗೆದು ಮಿಕ್ಸರ್ ಗ್ರೈಂಡರ್‌ನಲ್ಲಿ ಹಾಕಿ, ರುಬ್ಬಿಕೊಳ್ಳಿ.
    * ಈಗ ಅಕ್ಕಿಯ ಹಿಟ್ಟನ್ನು ಒಂದು ಬಟ್ಟಲಿಗೆ ವರ್ಗಾಯಿಸಿ, ಪಕ್ಕಕ್ಕಿಡಿ.
    * ಈಗ ಮಿಕ್ಸರ್ ಗ್ರೈಂಡರ್‌ನಲ್ಲಿ ತೆಂಗಿನಕಾಯಿ ತುರಿ ಮತ್ತು 1 ಕಪ್ ನೀರು ಹಾಕಿ ಮೃದುವಾಗಿ ರುಬ್ಬಿ.
    * ತೆಂಗಿನಕಾಯಿ ಪೇಸ್ಟ್ ಅನ್ನು ಅಕ್ಕಿ ಹಿಟ್ಟಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ?

    * ಈಗ ಹಿಟ್ಟನ್ನು ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇಟ್ಟು, 8 ಗಂಟೆಗಳ ಕಾಲ ವಿಶ್ರಾಂತಿ ನೀಡಿ.
    * ಈಗ ದಪ್ಪ ದೋಸೆ ತಯಾರಿಸಲು ಬೇಕಾಗುವಷ್ಟು ಹೆಚ್ಚುವರಿ ನೀರನ್ನು ಬಳಸಬಹುದು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಶ್ರಣ ಮಾಡಿ.
    * ಈಗ ಬಿಸಿ ತವಾದ ಮೇಲೆ ಬ್ಯಾಟರ್ ಅನ್ನು ಸುರಿದು ಒಂದೊಂದೇ ದೋಸೆ ತಯಾರಿಸಿ.
    * ಮಧ್ಯಮ ಜ್ವಾಲೆಯಲ್ಲಿ ಬ್ಯಾಟರ್ ಸುರಿದು ಅದಕ್ಕೆ ಮುಚ್ಚಿ, ದೋಸೆ ಸಂಪೂರ್ಣ ಬೇಯುವವರೆಗೆ ಕಾಯಿಸಿ.
    * ಈಗ ತೆಂಗಿನಕಾಯಿ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ತೆಂಗಿನಕಾಯಿ ಬಳಸಿ ಮಾಡಿ ರುಚಿಯಾದ ದೋಸೆ

    ತೆಂಗಿನಕಾಯಿ ಬಳಸಿ ಮಾಡಿ ರುಚಿಯಾದ ದೋಸೆ

    ರುಚಿಯಾದ ಆಹಾರ ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಅಡುಗೆ ಮಾಡಲು ಸುಲಭವಾಗಿರುವ ರೆಸಿಪಿಗಳನ್ನು ನಾವು ಹುಡುಕುತ್ತಿರುತ್ತೇವೆ. ನಿಮ್ಮ ರುಚಿಗೆಟ್ಟ ನಾಲಿಗೆಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ಸರಳ ವಿಧಾನದಲ್ಲಿರುವ ತೊಗರಿ ಬೇಳೆ ದೋಸೆಯನ್ನು ತಯಾರಿಸುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 2 ಕಪ್‌
    * ಮೆಂತ್ಯೆ- 1 ಚಮಚ
    * ತೆಂಗಿನ ಕಾಯಿ ತುರಿ- 1 ಕಪ್‌
    * ಅವಲಕ್ಕಿ- 1  ಕಪ್‌
    * ರುಚಿಗೆ ತಕ್ಕಷ್ಟು ಉಪ್ಪು
    * ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ: 

    * ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಾಗೂ ಮೆಂತ್ಯೆ, ಅವಲಕ್ಕಿಯನ್ನು ಹಾಕಿ 4 ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಟ್ಟಿರಬೇಕು.

    * ಮಿಕ್ಸಿ ಜಾರ್’ಗೆ ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅವಲಕ್ಕಿ ಹಾಗೂ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಈ ಮಿಶ್ರಣವನ್ನು 8 ಗಂಟೆಗಳ ಕಾಲ ಮುಚ್ಚಿ ಇಟ್ಟಿರಬೇಕು. ನಂತರ, ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    *  ಬಿಸಿ ತವಾ ಮೇಲೆ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಬೀಯಿಸಿದರೆ ರುಚಿಕರವಾದ  ತೆಂಗಿನಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

  • ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    ಬಿಟ್ರೋಟ್ ದೋಸೆ, ರಾಗಿ ದೋಸೆ, ಗೋಧಿ ದೋಸೆ ಎಂದು ನೀವು ತಿಂದಿರುತ್ತೀರ ಆದರೆ ಪ್ರತಿಸಲ, ಅದೇ ಉದ್ದಿನ ದೋಸೆ ತಿಂದು ಬೋರಾಗಿದ್ರೆ ಈ ತೆಂಗಿನ ಕಾಯಿ ದೋಸೆ ಟ್ರೈ ಮಾಡಿ. ಮಕ್ಕಳಿಂದ ಹಿಡಿದು, ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ಹಿಟ್ಟು ಹದ ಬರಬೇಕಾಗಿರೋದ್ರಿಂದ ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 1ಕಪ್
    * ಮೆಂತ್ಯೆ- 2 ಚಮಚ
    * ತೆಂಗಿನಕಾಯಿ – 1 ಕಪ್
    * ಅವಲಕ್ಕಿ – ಸ್ವಲ್ಪ

    ಮಾಡುವ ವಿಧಾನ:
    * ಮೊದಲನೆಯದಾಗಿ, ಒಂದು ಬೌಲ್‍ಗೆ ಅಕ್ಕಿ ಮತ್ತು ಮೆಂತ್ಯೆ ಹಾಕಿ 4 ಗಂಟೆಗಳ ಕಾಲ ನೆನೆಸಿಟ್ಟಿರಬೇಕು.
    * ನಂತರ, ನೆನಸಿಟ್ಟ ಅಕ್ಕಿ, ಮೆಂತೆ, ತೆಂಗಿನಕಾಯಿ ಮಿಕ್ಸಿ ಜಾರ್‍ಗೆ ಹಾಕಿ ಸ್ವಲ್ಪ ನೀರು  ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.

    * ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 8 ಗಂಟೆಗಳ ಕಾಲ ಮುಚ್ಚಿಡಿ. ( ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡುವುದು ಉತ್ತಮ)
    * ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

    * ತವಾ ಬಿಸಿಗಿಟ್ಟು, ಅದು ಬಿಸಿಯಾದ ನಂತರ, ದೋಸೆ ಹಾಕಿ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ ಅವಿಯಲು ಸಿದ್ಧವಾಗುತ್ತದೆ.