Tag: Coconut Chutney

  • ಘಮ ಘಮಿಸುವ ತೆಂಗಿನ ಕಾಯಿ ಚಟ್ನಿ ಮಾಡುವುದು ಹೇಗೆ ಗೊತ್ತಾ?

    ಘಮ ಘಮಿಸುವ ತೆಂಗಿನ ಕಾಯಿ ಚಟ್ನಿ ಮಾಡುವುದು ಹೇಗೆ ಗೊತ್ತಾ?

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ತೆಂಗಿನ ಕಾಯಿ ಚಟ್ನಿ ಮಾಡಿ.  ಚಟ್ನಿ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳು:
    * ತೆಂಗಿನ  ಕಾಯಿ- 1 ಕಪ್
    * ಬೆಳ್ಳುಳ್ಳಿ- 1
    * ಈರುಳ್ಳಿ- 1
    * ಜೀರಿಗೆ- ಸ್ವಲ್ಪ
    * ಕಾಳು ಮೆಣಸು- ಸ್ವಲ್ಪ
    * ಹಸಿಮೆಣಸಿನ ಕಾಯಿ- 4-5
    * ಕರಿಬೇವು-ಸ್ವಲ್ಪ
    * ಕೊತ್ತಂಬರಿ ಸೊಪ್ಪು-ಸ್ವಲ್ಪ
    * ಟೊಮೆಟೋ- 1
    * ರುಚಿಗೆ ತಕ್ಕಷ್ಟು ಉಪ್ಪು
    * ಹುಣಸೆ ಹಣ್ಣು- ಸ್ವಲ್ಪ
    *  ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಲೆಯ ಮೇಲೆ ಬಾಣಲೆಯಿಟ್ಟು 2-3 ಚಮಚ ಎಣ್ಣೆ ಹಾಕಿ ಉಪ್ಪು, ಹುಣಸೆ ಹಣ್ಣನ್ನು ಹೊರತುಪಡಿಸಿ ಮೇಲಿನ ಎಲ್ಲಾ ಪದಾರ್ಥಗಳನ್ನು ಕೆಂಪಗೆ ಹುರಿದುಕೊಳ್ಳಬೇಕು.

    * ನಂತರ ಎಲ್ಲವನ್ನೂ ಮಿಕ್ಸಿ ಜಾರ್’ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
    * ಬಳಿಕ ಈರುಳ್ಳಿಯನ್ನು ಸಣ್ಣಗೆ ಉದ್ದಕ್ಕೆ ಕತ್ತರಿಸಿಕೊಂಡು ರುಬ್ಬಿದ ಚಟ್ನಿಯೊಂದಿಗೆ ಮಿಶ್ರಣ ಮಾಡಿದರೆ ರುಚಿಕರವಾದ ಮಸಾಲೆ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

  • ದೋಸೆ ಚಟ್ನಿ ಮಾಡುವ ವಿಧಾನ

    ದೋಸೆ ಚಟ್ನಿ ಮಾಡುವ ವಿಧಾನ

    ಸಾಮಾನ್ಯವಾಗಿ ಭಾನುವಾರ ಬಂದ್ರೆ ಮಕ್ಕಳೆಲ್ಲಾ ಮನೆಯಲ್ಲಿರುತ್ತಾರೆ. ಗೃಹಿಣಿಯರು ಮಕ್ಕಳಿಗೆ ಸ್ಪೆಷಲ್ ತಿಂಡಿ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿರುತ್ತಾರೆ. ಪ್ರತಿದಿನ ಉಪ್ಪಿಟ್ಟು, ಅವಲಕ್ಕಿ, ರೈಸ್‍ಬಾತ್ ಅಂತ ತಿಂದು ಬೇಜಾರು ಆಗಿರುತ್ತಾರೆ. ಸಂಡೇಗಾಗಿ ಬಹುತೇಕರ ಮನೆಯಲ್ಲಿ ದೋಸೆ ಪರಿಮಳ ಹರಿದಾಡುತ್ತಿರುತ್ತದೆ. ದೋಸೆ ಮಾಡಿದ್ರೆ ಜೊತೆಗೆ ಯಾವ ಚಟ್ನಿ ಮಾಡೋದು ಅನ್ನೋದು ದೊಡ್ಡ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಫಟಾಫಟ್ ಚಟ್ನಿ ಮಾಡುವ ಸುಲಭ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಕಾಯಿ ತುರಿ- ಅಗತ್ಯಕ್ಕನುಸಾರ (ಚಟ್ನಿಗೆ ಇದೇ ಮುಖ್ಯ ಪದಾರ್ಥ)
    * ಶುಂಠಿ- ಸ್ವಲ್ಪ
    * ಹಸಿ ಮೆಣಸಿನಕಾಯಿ- ಖಾರಕ್ಕೆ ಬೇಕಾದಷ್ಟು
    * ಹುಣಸೆಹಣ್ಣು- ಸ್ವಲ್ಪ
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ- ಒಗ್ಗರಣೆಗೆ

    ಮಾಡುವ ವಿಧಾನ
    * ಜಾರ್ ಗೆ ಕಾಯಿ ತುರಿ, ಶುಂಠಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
    * ತೀರ ಗಟ್ಟಿ ಅನ್ನಿಸಿದರೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ.
    * ಈಗ ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ
    * ಚಟ್ನಿಗೆ ಒಗ್ಗರಣೆ ಮಿಶ್ರಣ ಮಾಡಿ. ಈಗ ರುಚಿ ರುಚಿಯಾದ ಚಟ್ನಿ ರೆಡಿ.

    ಹೀಗೆ ರೆಡಿಯಾದ ಚಟ್ನಿಯನ್ನು ಕೇವಲ ದೋಸೆಗೆ ಮಾತ್ರವಲ್ಲದೇ ಇಡ್ಲಿ, ಚಪಾತಿ, ಪೂರಿ, ರೊಟ್ಟಿ ಮತ್ತು ಬಿಸಿ ಬಿಸಿಯಾದ ಅನ್ನದ ಜೊತೆಗೆ ತಿನ್ನಬಹುದು.