Tag: cockroach

  • ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಳೆ ಹಾಕಿದ್ದ ಇಬ್ಬರು ಅರೆಸ್ಟ್

    ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಳೆ ಹಾಕಿದ್ದ ಇಬ್ಬರು ಅರೆಸ್ಟ್

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ನ ಉಪಹಾರದಲ್ಲಿ ಜಿರಳೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಆಟೋ ಡ್ರೈವರ್ ಆಗಿರುವ ಹೇಮಂತ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯ ದ ನಿವಾಸಿಗಳಾದ ಈ ಇಬ್ಬರೂ ಪ್ರಚಾರಕ್ಕಾಗಿ ಉಪಹಾರದಲ್ಲಿ ಜಿರಳೆ ಹಾಕಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

    ಅಕ್ಟೋಬರ್ 20ರಂದು ರಾಜರಾಜೇಶ್ವರಿನಗರದ ಕೊಟ್ಟಿಗೆಪಾಳ್ಯದ ಇಂದಿರಾ ಕ್ಯಾಂಟೀನ್‍ನಲ್ಲಿ ಒಂದೇ ದಿನದಲ್ಲಿ ರೈಸ್‍ಬಾತ್‍ನಲ್ಲಿ ಎರಡೆರೆಡು ಜಿರಳೆ ಸಿಕ್ಕಿತ್ತು. ಜಿರಲೆ ಸಿಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ಸಂಬಂಧ ಬಿಬಿಎಂಪಿ ಮೇಯರ್ ಸಂಪತ್ ಕುಮಾರ್ ಪ್ರತಿಕ್ರಿಯಿಸಿ, ಇಂದಿರಾ ಕ್ಯಾಂಟೀನ್ ಹೆಸರು ಹಾಳು ಮಾಡುವ ಉದ್ದೇಶದಿಂದಲೇ ಜಿರಳೆ ರಾಮಾಯಣ ಸೃಷ್ಟಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಹೊರತರುತ್ತೇವೆ ಎಂದು ತಿಳಿಸಿದ್ದರು.

  • ಇಂದಿರಾ ಕ್ಯಾಂಟೀನ್‍ನಲ್ಲಿ ಜಿರಲೆ ಪತ್ತೆ-ಪೊಲೀಸ್ ತನಿಖೆಗೆ ಆದೇಶ

    ಇಂದಿರಾ ಕ್ಯಾಂಟೀನ್‍ನಲ್ಲಿ ಜಿರಲೆ ಪತ್ತೆ-ಪೊಲೀಸ್ ತನಿಖೆಗೆ ಆದೇಶ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಲೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ.

    ಎರಡು ದಿನಗಳ ಹಿಂದೇ ರಾಜರಾಜೇಶ್ವರಿನಗರದ ಕೊಟ್ಟಿಗೆಪಾಳ್ಯ ಇಂದಿರಾ ಕ್ಯಾಂಟೀನ್‍ನಲ್ಲಿ ಒಂದೇ ದಿನದಲ್ಲಿ ರೈಸ್‍ಬಾತ್‍ನಲ್ಲಿ ಎರಡೆರೆಡು ಜಿರಲೆ ಸಿಕ್ಕಿತ್ತು. ಇದೇ ಕಾರಣಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಈ ಬಗೆಗಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್‍ನಲ್ಲಿ ಸಿಕ್ಕ ಜಿರಲೆ ಯಾರೋ ತಂದು ಹಾಕಿರುವುದು ಎಂದು ಮೇಯರ್ ಸಂಪತ್ ರಾಜ್ ಹೇಳಿಕೆ ನೀಡಿದ್ದಾರೆ.

    ಇಂದಿರಾ ಕ್ಯಾಂಟೀನ್ ಹೆಸರು ಹಾಳು ಮಾಡುವ ಉದ್ದೇಶದಿಂದಲೇ ಜಿರಲೆ ರಾಮಾಯಣ ಸೃಷ್ಟಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಹೊರತರುತ್ತೇವೆ ಎಂದು ತಿಳಿಸಿದ್ದಾರೆ.

    ಈ ನಡುವೆ ಜಿರಲೆ ಸಿಕ್ಕಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಾಲ್ವರು ವಿರುದ್ಧ ದೂರು ದಾಖಲು ಮಾಡಲಾಗಿದೆ.

  • ಬೆಳಗಾವಿ: ಲಕ್ಷ್ಮಣ ರೇಖೆ ತಿಂದು 3 ವರ್ಷದ ಕಂದಮ್ಮ ತೀವ್ರ ಅಸ್ವಸ್ಥ!

    ಬೆಳಗಾವಿ: ಲಕ್ಷ್ಮಣ ರೇಖೆ ತಿಂದು 3 ವರ್ಷದ ಕಂದಮ್ಮ ತೀವ್ರ ಅಸ್ವಸ್ಥ!

    ಬೆಳಗಾವಿ: ಮನೆಯಲ್ಲಿ ಮಕ್ಕಳಿದ್ರೆ ತುಂಬಾ ಹುಷಾರಾಗಿರ್ಬೇಕು. ತಂದೆ ತಾಯಂದಿರು ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು ಬರುತ್ತೆ ಅನ್ನೋದಕ್ಕೆ ಬೆಳಗಾವಿಯಿಂದ ಬಂದಿರೋ ಈ ಸ್ಟೋರಿನೇ ಸಾಕ್ಷಿ.

    ಲಕ್ಷ್ಮಣ ರೇಖೆ ತಿಂದು 3 ವರ್ಷದ ಮಗುವೊಂದು ಅಸ್ವಸ್ಥಗೊಂಡ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಢ ಗ್ರಾಮದಲ್ಲಿ ನಡೆದಿದೆ. ಹರೀಶ್ ತಳವಾರ ಅಸ್ವಸ್ಥಗೊಂಡ ಮಗು.

    ನಡೆದಿದ್ದೇನು?: ಮೂರು ವರ್ಷದ ಹರೀಶ್ ಆಟವಾಡುತ್ತಾ ಪಕ್ಕದಲ್ಲಿದ್ದ ಜಿರಲೆ ಸಾಯಲು ಬಳಸುವ ಲಕ್ಷ್ಮಣ ರೇಖೆಯನ್ನು ತಿಂದಿದ್ದಾನೆ. ಪರಿಣಾಮ ಆತನಿಗೆ ವಾಂತಿಭೇದಿ ಆರಂಭವಾಗಿ ತೀವ್ರ ಅಸ್ವಸ್ಥಗೊಂಡಿದ್ದನು. ಮಗ ಅಸ್ವಸ್ಥಗೊಂಡ ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹರೀಶ್ ಪಿಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ವೀಡಿಯೋ: ಮೂಗಿನಿಂದ ಮಹಿಳೆಯ ತಲೆ ಹೊಕ್ಕಿದ್ದ ಜಿರಲೆ ಹೊರತೆಗೆದ್ರು

    ಚೆನ್ನೈ: ಮಹಿಳೆಯೊಬ್ಬರ ಕಿವಿಯೊಳಗೆ ಸೇರಿಕೊಂಡಿದ್ದ ಜಿರಲೆಯನ್ನು ಹೊರತೆಗೆದ ಘಟನೆ ಇತ್ತೀಚೆಗೆ ಚೀನಾದಲ್ಲಿ ನಡೆದಿತ್ತು. ಆದ್ರೆ ಮಹಿಳೆಯ ಮೂಗಿನ ಮೂಲಕ ಜಿರಲೆ ಒಳಹೋಗಿ ತಲೆಯಲ್ಲಿ ಸೇರಿಕೊಂಡಿತ್ತು ಎಂದರೆ ನೀವು ನಂಬಲೇ ಬೇಕು.

    ಇಂತಹದ್ದೊಂದು ಘಟನೆ ನಡೆದಿದ್ದು ಬೇರೆಲ್ಲೂ ಅಲ್ಲ, ತಮಿಳುನಾಡಿನಲ್ಲಿ. ಇಲ್ಲಿನ ನಿವಾಸಿ 42 ವರ್ಷದ ಸೆಲ್ವಿ ಅಂದು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದು ಮಲಗಿದ್ರು. ಮಧ್ಯರಾತ್ರಿ ವೇಳೆಗೆ ಸೆಲ್ವಿ ಅವರ ಮೂಗಿನಿಂದ ಯಾವುದೋ ಕೀಟ ಒಳಹೋದಂತೆ ಅನುಭವವಾಗಿದ್ದು, ಕೂಡಲೇ ಆಕೆಯ ಅಳಿಯನೊಂದಿಗೆ ಹತ್ತಿರದ ಆಸ್ಪತ್ರೆಗೆ ಓಡಿದ್ರು.

    ಮನೆಗೆಲಸ ಮಾಡೋ ಸೆಲ್ವಿ ಇಂಜಂಬಕ್ಕಂ ನಿವಾಸಿಯಾಗಿದ್ದು, ಘಟನೆಯ ಬಗ್ಗೆ ನೆನೆಸಿಕೊಳ್ಳುತ್ತಾ, ಮೂಗಿನಲ್ಲಿ ಏನೋ ಓಡಾಡ್ತಿದೆ ಅಂತ ಗೊತ್ತಾದಾಗ ನಿದ್ದೆಗಣ್ಣಿನಲ್ಲೇ ಮೂಗನ್ನು ಒರೆಸಿಕೊಳ್ಳುತ್ತಿದೆ. ಆದ್ರೆ ಅಷ್ಟರಲ್ಲಾಗಲೇ ಅದು ಒಳಹೋಗಿತ್ತು ಎಂದಿದ್ದಾರೆ. ಸೆಲ್ವಿ ಕ್ಲೀನಿಕ್‍ಗೆ ಹೋದಾಗ ವೈದ್ಯರು ಟಾರ್ಚ್ ಹಾಕಿ ನೋಡಿದ್ರು, ಇತರೆ ಕೆಲ ವೈದ್ಯರಿಗೆ ಕರೆ ಮಾಡಿ ವಿಚಾರಿಸಿದ್ರು. ಅದ್ರೆ ನಾನು ಏನೂ ಮಾಡಲಾರೆ ಎಂದು ಬೇರೊಂದು ಆಸ್ಪತ್ರೆಗೆ ಕಳಿಸಿದ್ರು. ಅಲ್ಲಿನ ವೈದ್ಯರು ಮೂಗಿನಲ್ಲಿ ಚರ್ಮ ಬೆಳೆಯುತ್ತಿದೆ ಎಂದು ಹೇಳಿದ್ದರು. ಆದರೆ ಸೆಲ್ವಿಗೆ ಮೂಗಿನಲ್ಲಿ ಕೀಟ ಹರಿದಾಡಿದಾಗಲೆಲ್ಲಾ ಉರಿಯಾಗಿ ಇಡೀ ರಾತ್ರಿ ನೋವು ಅನುಭವಿಸಿದ್ರು.

    ಮರುದಿನ ಬೆಳಿಗ್ಗೆ ಸರ್ಕಾರಿ ಸ್ಟ್ಯಾನ್ಲೀ ಮಡಿಕಲ್ ಕಾಲೇಜು ಆಸ್ಪತ್ರೆ ತಲುಪಿದ ಸೆಲ್ವಿಗೆ ವೈದ್ಯರು ನೇಝಲ್(ಮೂಗಿನ)ಎಂಡೋಸ್ಕೋಪಿ ಮಾಡಿದ್ರು. ಆಗ ಮಹಿಳೆ ಅಂದುಕೊಂಡಂತೆ ಜಿರಲೆ ಒಳಹೋಗಿರುವುದು ದೃಢವಾಯ್ತು.

    ಬುರುಡೆಯ ತಳದಲ್ಲಿ, ಸೆಲ್ವಿ ಅವರ ಎರಡು ಕಣ್ಣುಗಳ ಮಧ್ಯಭಾಗದಲ್ಲಿ ಜಿರಲೆ ಸೇರಿಕೊಂಡಿತ್ತು. ಅಲ್ಲದೆ ಅದು ಇನ್ನೂ ಜೀವಂತವಾಗಿತ್ತು. ಕೂಡಲೇ ಏನಾದ್ರೂ ಮಾಡದಿದ್ರೆ ಜಿರಲೆ ಒಳಗಡೆಯೇ ಸತ್ತುಹೋಗಿ ಇನ್ಫೆಕ್ಷನ್ ಆಗಿ ಮೆದುಳಿಗೂ ಹರಡುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾರೆ.

    ಸದ್ಯ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ ಮಾಡದೆ ಸೆಲ್ವಿ ಅವರ ತಲೆ ಹೊಕ್ಕಿದ್ದ ಜಿರಲೆಯನ್ನ ಹೊರತೆಗೆದಿದ್ದಾರೆ.

    ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಇಂತಹ ಪ್ರಕರಣ ನೋಡಿದ್ದು ಇದೇ ಮೊದಲು ಅಂತ ಆಸ್ಪತ್ರೆಯ ಕಿವಿ ಮೂಗು ಗಂಟಲು(ಇಎನ್‍ಟಿ) ವಿಭಾಗದ ಮುಖ್ಯಸ್ಥರಾದ ಡಾ. ಎಮ್‍ಎನ್ ಶಂಕರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=Rr8VUWqmlFI