Tag: cockroach

  • ‘ಕಾಕ್ರೋಚ್’ ಸಿನಿಮಾಗೆ ನಾನೇ ಹೀರೋ, ನಾನೇ ಡೈರೆಕ್ಟರ್ : ರಾಕೇಶ್ ಅಡಿಗ

    ‘ಕಾಕ್ರೋಚ್’ ಸಿನಿಮಾಗೆ ನಾನೇ ಹೀರೋ, ನಾನೇ ಡೈರೆಕ್ಟರ್ : ರಾಕೇಶ್ ಅಡಿಗ

    ಮೂರು ವರ್ಷಗಳ ನಂತರ ನಟ ರಾಕೇಶ್ ಅಡಿಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನೈಟ್ ಔಟ್ ಸಿನಿಮಾದ ನಂತರ ಅವರು ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಮುಂದಿನ ಸಿನಿಮಾ ಯಾವುದು ಎಂದು ಕೇಳಿದಾಗೆಲ್ಲ, ಸ್ಕ್ರಿಪ್ಟ್ ಬರೆಯುತ್ತಿದ್ದೇನೆ ಎಂದು ಹೇಳುತ್ತಿದ್ದರು. ಹಾಗಾದರೆ, ಈ ಬಾರಿ ನಟನೆಯನ್ನು ಬಿಟ್ಟು ನಿರ್ದೇಶನಕ್ಕೆ ಇಳಿಯಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿತ್ತು. ಎಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ.

    ಮೂರ್ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ ರಾಕೇಶ್ ಅಡಿಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ಬರುತ್ತಿದ್ದು, ಕಾಕ್ರೋಚ್ ಹೆಸರಿನ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಾವೇ ಹೀರೋ ಆಗಿ ನಟಿಸಿ, ನಿರ್ದೇಶನವನ್ನೂ ಮಾಡಲಿದ್ದಾರೆ. ಈಗಾಗಲೇ ಸಿನಿಮಾ ಕ್ಯಾರೆಕ್ಟರ್ ರಿವೀಲ್ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಲುಕ್ ನಲ್ಲಿ ಅಡಿಗ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ಬಿಗ್ ಬಾಸ್ ನಂತರ ರಾಕೇಶ್ ಅಡಿಗರಿಗೆ ಡಿಮ್ಯಾಂಡ್ ಜಾಸ್ತಿ ಆಗಿತ್ತು. ಅನೇಕರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ನೀಡಿದರು. ಆದರೆ, ರಾಕೇಶ್ ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಹಾಗಾಗಿ ಅಂದುಕೊಂಡಂತೆ ತಮ್ಮ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಅವರು ಪ್ರೇಮಕಥೆಯೊಂದನ್ನು ಹೇಳಲು ಹೊರಟಿದ್ದಾರಂತೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದಾರಂತೆ.

    ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಕೊಡದೇ ಇದ್ದರೂ, ಈ ಸಿನಿಮಾದ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿ ಹೊತ್ತಿದ್ದಾರೆ. ಪೂಜಾಶ್ರೀ ಎನ್ನುವವರು ಚಿತ್ರದ ನಿರ್ಮಾಪಕರು. ಉಳಿದಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಅವರು ತಿಳಿಸಿದ್ದಾರೆ.

  • ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಚಂಡೀಗಢ: ಮಾಲ್‍ವೊಂದರ ಫುಡ್ ಕೋರ್ಟ್‍ನಲ್ಲಿ ಗ್ರಾಹಕರೊಬ್ಬರು ತೆಗೆದುಕೊಂಡಿದ್ದ ಊಟದಲ್ಲಿ ಜಿರಳೆ ಸಿಕ್ಕ ಘಟನೆ ಚಂಡೀಗಢದಲ್ಲಿ ನಡೆದಿದೆ.

    ಮೌಲಿ ಕಾಂಪ್ಲೆಕ್ಸ್‌ನ ನಿವಾಸಿ ಅನಿಲ್ ಕುಮಾರ್ ತಮ್ಮ ಪತ್ನಿ ಹಾಗೂ ಸಹೋದರಿಯೊಂದಿಗೆ ಊಟ ಮಾಡಲು ಬಂದಿದ್ದರು. ಅಲ್ಲಿಯ ಅಂಗಡಿಯೊಂದರಲ್ಲಿ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಫ್ರೈಡ್ ರೈಸ್ ತಿನ್ನುವಾಗ ಜಿರಳೆ ಇರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ರಚನೆ ಜಾರಿಗೆ ತರೋದು ಸರ್ಕಾರಕ್ಕೆ ಬಿಟ್ಟಿದ್ದು: ಟಿ.ಎಸ್. ನಾಗಾಭರಣ

    ಇದರಿಂದ ಭಯಭೀತರಾದ ಅವರು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಆ ಸಿಬ್ಬಂದಿ ಅದು ಈರುಳ್ಳಿ ಎಂದು ಅವರ ಬಳಿಯೇ ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿಲ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

  • ಕೋರ್ಟ್ ವಿಚಾರಣೆ ವೇಳೆ ಬಿಟ್ರು ನೂರಾರು ಜಿರಳೆ

    ಕೋರ್ಟ್ ವಿಚಾರಣೆ ವೇಳೆ ಬಿಟ್ರು ನೂರಾರು ಜಿರಳೆ

    ಅಲ್ಬನಿ: ಇದುವರೆಗೂ ಕೇಳಿರದ ವಿಲಕ್ಷಣ ಘಟನೆಯೊಂದು ನ್ಯೂಯಾರ್ಕ್‍ನಲ್ಲಿ ನಡೆದಿದೆ. ಮಂಗಳವಾರ ವಿಚಾರಣೆ ನಡೆಯುತ್ತಿದ್ದ ವೇಳೆ ನೂರಾರು ಜಿರಳೆಗಳನ್ನು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಬಿಡುಗಡೆ ಮಾಡಲಾಗಿದೆ.

    ಅಲ್ಬನಿ ಸಿಟಿ ಕೋರ್ಟ್‍ನಲ್ಲಿ ನಾಲ್ಕು ಜನ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕೋರ್ಟ್‍ನಲ್ಲಿ ವಾದಗಳು ಪ್ರಾರಂಭವಾಗಿ ವಾಗ್ವಾದಕ್ಕೆ ತಿರುಗಿಕೊಂಡಿತ್ತು. ಈ ವೇಳೆ ಕೋರ್ಟ್ ಒಳಗಡೆ ತಂದಿದ್ದ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ನೂರಾರು ಜಿರಳೆಗಳನ್ನು ಬಿಡಲಾಗಿದೆ. ನಂತರ ಈ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದ್ದು, ನಂತರ ನ್ಯಾಯಾಲಯದ ಅಧಿಕಾರಿಗಳು ತಡೆದಿದ್ದಾರೆ.

    During the hearing, hundreds of cockroaches started crawling in the courtroom, the debate was stopped due to insects! – Pankri.World

    ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿದ್ದು, ಜಿರಳೆಗಳನ್ನು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಒಳಗೆ ಬಿಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಪ್ರಸ್ತುತ ನಾವು ಘಟನೆ ಬಗ್ಗೆ ಯಾವುದೇ ರೀತಿಯ ತೀರ್ಮಾನಕ್ಕೆ ಬರಲು ಅಥವಾ ಯಾವುದೇ ಆರೋಪಗಳನ್ನು ಮಾಡಲು ಬಯಸುವುದಿಲ್ಲ. ಆದರೆ ಜಿರಳೆಗಳನ್ನು ಪ್ರತಿಭಟನೆಯಾಗಿ ಬಳಸಲಾಗಿದೆ ಎಂದು ಕಾಣಿಸುತ್ತಿದೆ ಎಂದರು. ಇದನ್ನೂ ಓದಿ: ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ 

    Disorder in the court: Cockroaches released during hearing - WeirdNews - Dunya News

    ಸರ್ಕಾರಿ ಆಡಳಿತಕ್ಕೆ ಅಡ್ಡಿಪಡಿಸುವುದು ಮತ್ತು ಭೌತಿಕ ಸಾಕ್ಷ್ಯವನ್ನು ನಾಶ ಮಾಡಲು ಯತ್ನ ಮಾಡಿದಕ್ಕೆ ನ್ಯಾಯಾಲಯದ ಅಧಿಕಾರಿಗಳು 34 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.

  • ಸನ್ನಿಲಿಯೋನ್ ಮನೆಯಲ್ಲಿ ಜಿರಳೆ ಕಾಟ- ದಂಪತಿಯನ್ನು ಕಂಡು ನಕ್ಕ ನೆಟ್ಟಿಗರು

    ಸನ್ನಿಲಿಯೋನ್ ಮನೆಯಲ್ಲಿ ಜಿರಳೆ ಕಾಟ- ದಂಪತಿಯನ್ನು ಕಂಡು ನಕ್ಕ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ಮನೆಯಲ್ಲಿ ಜಿರಳೆ ಕಾಟವಂತೆ. ಈ ವಿಚಾರವಾನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಮನೆಯಲ್ಲಿ ಸೇರಿಕೊಂಡಿದ್ದ ಜಿರಳೆಯನ್ನು ಹೊರಗೆ ಹಾಕಲು ದಂಪತಿಗಳಿಬ್ಬರು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡು ವುಮೆನ್ vs ವೈಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ. ವೀಡಿಯೊ ಕೊನೆಯಲ್ಲಿ ವೆಬರ್ ಅವಾಂತರವನ್ನು ನೋಡಿ ಎಂದು ಸನ್ನಿಲಿಯೋನ್ ತಮ್ಮ ಪತಿ ಡೇನಿಯಲ್ ಅವರ ಕಾಲೆಳೆದಿದ್ದಾರೆ. ಈ ವಿಡಿಯೊ ಚಿತ್ರೀಕರಣದಲ್ಲಿ ಯಾವ ಕೀಟಕ್ಕೂ (ಜಿರಳೆಗೂ) ಹಾನಿಯನ್ನುಂಟು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜಿರಳೆಯ ಚುರುಕುತನವನ್ನೂ ಕೊಂಡಾಡಿರುವ ಸನ್ನಿ, ಅದು ನಮಗಿಂತ ಬಹಳ ಚುರುಕಾಗಿತ್ತು. ಬಹುಶಃ ಅದಕ್ಕೇ ಜಿರಳೆ ನಮಗೆ ಸಿಗಲಿಲ್ಲ ಎಂದಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದ್ದು, ಸನ್ನಿ ಲಿಯೋನ್ ಅವರ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ಸನ್ನಿ ಲಿಯೋನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹಾರುವ ಜಿರಳೆಯೊಂದನ್ನು ಅಟ್ಟಿಸಿಕೊಂಡು ಹೋಗಿದ್ದು, ಅದನ್ನು ಮನೆಯಿಂದ ಹೊರಹಾಕಲು ಬಹಳ ಪ್ರಯತ್ನಪಟ್ಟಿದ್ದಾರೆ. ಸನ್ನಿಯವರಿಂದ ಸಾಧ್ಯವಾಗದ ಈ ಕೆಲಸಕ್ಕೆ ಅವರ ಪತಿ ಡೇನಿಯಲ್ ವೆಬರ್ ಕೂಡಾ ಸಹಾಯಕ್ಕೆ ಬಂದಿದ್ದಾರೆ. ಇನ್ನೇನು ಸಿಕ್ಕಿತು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಆ ಕೀಟವನ್ನು ಬಡಿಯಲು ತಮ್ಮ ಅಂಗಿಯನ್ನೂ ತೆಗೆದು ಅದರ ಮೂಲಕ ಹಿಡಿಯಲು ವೆಬರ್ ಪ್ರಯತ್ನಿಸುತ್ತಾರೆ. ಆದರೆ ಜಿರಳೆ ತಪ್ಪಸಿಕೊಂಡು ಹೋಗಿದೆ.

     

    View this post on Instagram

     

    A post shared by Sunny Leone (@sunnyleone)

    ಇತ್ತೀಚೆಗಷ್ಟೇ ಹೊಸ ಮನೆಗೆ ಪ್ರವೇಶ ಮಾಡಿದ ಸುದ್ದಿಯನ್ನು ಸನ್ನಿ ಹಂಚಿಕೊಂಡಿದ್ದರು. ಛೇ, ಸನ್ನಿಯವರ ಹೊಸ ಮನೆಯಲ್ಲೂ ಜಿರಳೆ ಕಾಟವೇ! ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ಜಿರಳೆ ಕಾಟದಿಂದ ವಿಚ್ಚೇದನಕ್ಕೆ ಮುಂದಾದ ದಂಪತಿ

    ಜಿರಳೆ ಕಾಟದಿಂದ ವಿಚ್ಚೇದನಕ್ಕೆ ಮುಂದಾದ ದಂಪತಿ

    ಭೋಪಾಲ್: ತಮ್ಮ ನಡುವೆ ಸಾಮರಸ್ಯ ಇಲ್ಲದೆ, ತುಂಬಾ ಜಗಳಗಳು ಆದಾಗ ದಂಪತಿ ವಿಚ್ಛೇದನಕ್ಕೆ ಮುಂದಾಗುವುದನ್ನು ನೋಡಿದ್ದೇವೆ. ಆದರೆ ಮನೆಯಲ್ಲಿ ಜಿರಳೆ ಕಾಟ ಎಂಬ ಕಾರಣಕ್ಕೆ ಡಿವೋರ್ಸ್ ಕೇಳಿರುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಈ ದಂಪತಿ ಮದುವೆಯಾಗಿ ಮೂರು ವರ್ಷ ಕಳೆದಿತ್ತು. ಅಷ್ಟರಲ್ಲಾಗಲೇ 18 ಬಾರಿ ಮನೆಯನ್ನು ಬದಲಾಯಿಸಿದ್ದರು. ಯಾಕೆಂದ್ರೆ ಪತ್ನಿಗೆ ಜಿರಳೆ ಅಂದರೆ ಭಯ ಹೀಗಾಗಿ ದಂಪತಿ ಮನೆಯನ್ನು ಬದಲಾಯಿಸುತ್ತಲೇ ಇದ್ದರು.

    ಮದುವೆ ನಂತರ ಅಡುಗೆ ಮಾಡಲು ಕಿಚನ್‍ಗೆ ಹೋದಾಗ ಅಲ್ಲಿ ಇರುವ ಜಿರಳೆಗಳನ್ನು ಕಂಡು ಮಹಿಳೆ ಜೋರಾಗಿ ಕಿರುಚಿತ್ತಾ ಓಡಿ ಬಂದಿದ್ದಳು. ನಾನು ಜಿರಳೆ ಇದ್ದರೆ ಅಡುಗೆ ಮನೆಗೆ ಹೋಗುವುದಿಲ್ಲ ಎಂದು ಪತಿಯ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ದಂಪತಿ ಒಂದಾದರ ಮೇಲೋಂದು ಮನೆಯನ್ನು ಬದಲಾಯಿಸುತ್ತಲೇ ಇದ್ದರು.

     

    ಈ ವಿಚಾರವಾಗಿ ಬೇಸರಗೊಂಡ ಪತಿ ತನ್ನ ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾನೆ. ವೈದ್ಯರ ಬಳಿ ಹೋಗಿ ಪತ್ನಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾನೆ. ಆದರೆ ಏನು ಪ್ರಯೋಜನವಾಗದೇ ಇದ್ದಾಗ ವಿಚ್ಛೇದನ ಕೊಡಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

  • ವಾಕಿಂಗ್ ಹೋಗೋದಾಗಿ ಹೇಳಿ ಮಗನನ್ನು ಜಿರಳೆ ತುಂಬಿದ ಕೋಣೆಯಲ್ಲಿ ಬಿಟ್ಟು ಹೋದ್ಳು!

    ವಾಕಿಂಗ್ ಹೋಗೋದಾಗಿ ಹೇಳಿ ಮಗನನ್ನು ಜಿರಳೆ ತುಂಬಿದ ಕೋಣೆಯಲ್ಲಿ ಬಿಟ್ಟು ಹೋದ್ಳು!

    – ಹೀಂದಿರುಗಿ ಬಂದಾಗ ತಾಯಿಗೆ ಕಾದಿತ್ತು ಶಾಕ್

    ಮಾಸ್ಕೋ: ತಾಯಿಯೊಬ್ಬಳು ತನ್ನ 10 ವರ್ಷದ ಮಗನನ್ನು 8 ದಿನಗಳ ಕಾಲ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ ಘಟನೆ ಮಾಸ್ಕೋದಲ್ಲಿ ನಡೆದಿದೆ.

    ಬಾಲಕನನ್ನು ಮಿಖೈಲ್ (10) ಎಂದು ಗುರುತಿಸಲಾಗಿದೆ. ಈತನನ್ನು ತಾಯಿ ನಟಲ್ಯಾ ಅಜರೆನ್ಕೋವಾ(31) ಮಾಸ್ಕೋದ ಪೆರೆಡೆಲ್ಕಿನೋ ಏರಿಯಾದಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ್ದಾಳೆ. ನಂತರ ವಾಕಿಂಗ್ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹಾಕಿದ್ದಾಳೆ. ಹೀಗೆ ಹೋದವಳು 8 ದಿನಗಳ ಬಳಿಕ ಮನೆಗೆ ಬಂದಾಗ ಆಕೆಗೆ ಅಚ್ಚರಿ ಕಾದಿತ್ತು.

    ಇತ್ತ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿದ್ದ ಮಿಖೈಲ್ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಬಳಲಿದ್ದನು. ಅಲ್ಲದೆ ಜಿರಳೇಗಳು ಮುತ್ತಿಕೊಂಡಿದ್ದ ಮನೆಯಲ್ಲಿ ಬಾಲಕನಿಗೆ ನರಕ ದರ್ಶನವಾಗಿದೆ. 4 ದಿನಗಳ ಕಾಲ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಕೂಗಾಡ ತೊಡಗಿದನು. ಬಾಲಕನ ಅಲಳು ಕೇಳಿಸಿಕೊಂಡ ನೆರಮನೆಯವರು ಬಂದು ಆತನನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ನೆರೆ ಮನೆಯವರು ಬಾಲಕನಿಗೆ ತಿನ್ನಲು ಆಹಾರ ಮತ್ತು ಜ್ಯೂಸ್ ನೀಡಿದ್ದಾರೆ.

    ಬಾಲಕನನ್ನು ರಕ್ಷಣೆ ಮಾಡಿದ ನಂತರ ಮಗುವಿನ ತಾಯಿಗಾಗಿ ನೆರೆಹೊರೆಯವರು ಕಾದಿದ್ದಾರೆ. ಆದರೆ ಮಹಿಳೆ ಬರದೇ ಇರುವುದನ್ನು ಗಮನಿಸಿ ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಾಲಕನ ತಾಯಿ 2 ದಿನಕ್ಕಾಗಿ ಗೆಳೆಯರ ಮನೆಗೆ ಹೋದವಳು 8 ದಿನಗಳ ನಂತರ ಮರಳಿ ಮನೆಗೆ ಬಂದಿದ್ದಾಳೆ. ತಾಯಿ ಮಗನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಎಲ್ಲಿ ಹೋಗಿದ್ದಳು ಎಂಬುದು ಮಾತ್ರ ನಿಗೂಢವಾಗಿದೆ.

    ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನನ್ನ ಮಗು ನನಗೆ ಬೇಕು. ನನ್ನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಆರೋಪಿ ತಾಯಿ ಪೊಲೀಸರಿಗೆ ಹೇಳಿದ್ದಾಳೆ. ಆದರೆ ಮಹಿಳೆಗೆ ಜೈಲು ಶಿಕ್ಷೆಯಾಗಿದೆ.

    ಕೇವಲ ಅಕ್ಕಿ ಮಾತ್ರ ನನಗೆ ತಿನ್ನಲು ಇಟ್ಟು ನನ್ನೊಬ್ಬನನ್ನೇ ಬಿಟ್ಟು ತಾಯಿ ನಾಯಿಯನ್ನು ವಾಕಿಂಗ್‍ಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಅಡುಗೆ ಮಾಡಿಕೊಳ್ಳಲು ನೀರು ಇರಲಿಲ್ಲ ಎಂದು ಮಿಖೈಲ್ ತನ್ನ ಅಳಲು ತೋಡಿಕೊಂಡಿದ್ದಾನೆ.

  • ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    – ಮಹಿಳೆಯರಿಗೆ ಸಲಹೆಯೊಂದನ್ನು ನೀಡಿದ ನಟಿ

    ಬೆಂಗಳೂರು: ಸಿನಿಮಾದಲ್ಲಿ ಬರುವ ಭಯಾನಕ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ ಎಂದು ಚಂದನವದ ನಟಿ ಹರಿಪ್ರಿಯಾ ಹೇಳಿದ್ದಾರೆ.

    ಲಾಕ್‍ಡೌನ್‍ನಿಂದ ಮನೆಯಲ್ಲೇ ಕುಳಿತಿರುವ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಂತೆಯೇ ನಟಿ ಹರಿಪ್ರಿಯಾ ಕೂಡ ತಮ್ಮ ಬ್ಲಾಗ್‍ನಲ್ಲಿ ಆಗಾಗ ತಮ್ಮ ಅನುಭವದ ಕಥೆಯನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಜಿರಳೆ ಕಥೆಯೊಂದು ಬರೆದು ತಮ್ಮ ಲೇಡಿ ಫ್ಯಾನ್ಸ್ ಗೆ ಸಲಹೆಯೊಂದನ್ನು ಹೇಳಿದ್ದಾರೆ.

    ಈ ವಿಚಾರವಾಗಿ ತಮ್ಮ ಬ್ಲಾಗ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಹರಿಪ್ರಿಯಾ ಜಿರಳೆಗಳನ್ನು ಕಂಡರೆ ನನಗೇಕೆ ಅಷ್ಟು ಭಯ ಎಂದು ತಿಳಿಯುತ್ತಿಲ್ಲ. ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಜಿರಳೆಯನ್ನು ಕಂಡರೆ ಹೆದರಿ ಓಡುತ್ತಾರೆ. ಅದರಲ್ಲಿ ನಮ್ಮ ಅಮ್ಮ, ಚಿಕ್ಕಮ್ಮ ಕೂಡ ಜಿರಳೆಯನ್ನು ಕಂಡಾಗ ಭಯಪಡುತ್ತಿದ್ದರು. ಅವರಿಂದಾಗಿ ನನಗೂ ಜಿರಳೆಯನ್ನು ಕಂಡಾಗ ಭಯ ಹುಟ್ಟಿಕೊಂಡಿದೆ. ಇದಕ್ಕೆ ಅವರೇ ಹೊಣೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.

    ಮಹಿಳೆಯರಿಗೆ ಎಲ್ಲವನ್ನು ಎದುರಿಸಬಲ್ಲ ಶಕ್ತಿ ಇರುತ್ತದೆ. ಆದರೆ ಕೆಲವರಿಗೆ ಜಿರಳೆಯನ್ನು ಕಂಡರೆ ಭಯವಾಗುತ್ತದೆ. ಇನ್ನು ಕೆಲವರು ಜಿರಳೆ ಹತ್ತಿರ ಬಂದರೆ ಸಾಕು ಓಡಿ ಹೋಗುತ್ತಾರೆ. ನಾನು ಕೂಡ ಅಷ್ಟೇ ಜಿರಳೆಯನ್ನು ಕಂಡರೆ ಭಯಪಡುತ್ತೇನೆ. ಜಿರಳೆಗಳು ನೋಡಲು ಚಿಕ್ಕದಾಗಿದ್ದರೂ ದೊಡ್ಡ ಮಹಿಳೆಯನ್ನು ಹೆದರಿಸಿಬಿಡುತ್ತವೆ. ಮಹಿಳೆಯರೂ ಕೂಡ ದೊಡ್ಡ ಗಾತ್ರದ ಡೈನೋಸರ್ಸ್ ಅನ್ನು ಬೇಕಾದರೂ ಪಳಗಿಸುತ್ತಾರೆ. ಆದರೆ ಜಿರಳೆಯನ್ನು ಕಂಡರೆ ಭಯಪಡುತ್ತಾರೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಹಿಳೆಯರಿಗೊಂದು ಸಣ್ಣ ಸಲಹೆ, ನೀವು ಜಿರಳೆಯನ್ನು ಕಂಡು ಭಯಪಡುತ್ತೀರಾ ಎಂಬ ವಿಚಾರವನ್ನು ಪುರುಷರೊಂದಿಗೆ ಹೇಳಿಕೊಳ್ಳಬೇಡಿ. ಅವರು ನಿಮ್ಮನ್ನು ಹೆದರಿಸಲು ಈ ತಂತ್ರವನ್ನು ಮುಂದೆ ಬಳಸಬಹುದು. ಈ ಹಿಂದೆ ಕೂಡ ನನ್ನ ಸ್ನೇಹಿತರು ಜಿರಳೆಯನ್ನು ಹಿಡಿದುಕೊಂಡು ನನಗೆ ಭಯಪಡಿಸಿದ್ದರು. ಅದರ ಕಾಲುಗಳನ್ನು ಹಿಡಿದುಕೊಂಡು ನನ್ನ ಕಣ್ಣುಗಳ ಮುಂದೆ ತಂದಿದ್ದರು. ನಾನು ಜಿರಳೆ ಕಂಡು ಜೋರಾಗಿ ಕಿರುಚಿದೆ ಎಂದು ಹರಿಪ್ರಿಯಾ ಅನುಭವವನ್ನು ಬರೆದಿದ್ದಾರೆ.

    ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ, ನಾನು ಸಾವಿರ ಹೆಜ್ಜೆ ಹಿಂದಕ್ಕೆ ಓಡುತ್ತೇನೆ. ನನ್ನ ಕೋಣೆಯಲ್ಲಿ ಜಿರಳೆ ಕಂಡರೆ ಒಂದೋ ಅದು ಸಾಯಬೇಕು. ಇಲ್ಲವೇ ಅದು ಬೇರೆ ಕಡೆ ಹೋಗಬೇಕು. ಸಿನಿಮಾದಲ್ಲಿನ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ. ಆದರೆ ಈಗ ಜಿರಳೆಯ ಭಯವನ್ನು ನಾನು ನಿವಾರಿಸಿಕೊಂಡಿದ್ದೇನೆ. ಇನ್ನು ನಿಮ್ಮ ಸರದಿ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

  • ಬಿಜೆಪಿಯನ್ನು ಜಿರಳೆಗೆ ಹೋಲಿಸಿ ಟಾಂಗ್ ಕೊಟ್ಟ ಮಮತಾ ಬ್ಯಾನರ್ಜಿ

    ಬಿಜೆಪಿಯನ್ನು ಜಿರಳೆಗೆ ಹೋಲಿಸಿ ಟಾಂಗ್ ಕೊಟ್ಟ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಜಯಗಳಿಸಲು ಸಾಧ್ಯವೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ. ಮತ್ತೆ ಅಧಿಕಾರಕ್ಕೆ ಬಿಜೆಪಿ ಏರಲ್ಲ. ಬಿಜೆಪಿಯ ಹೇಳಿಕೆ ಹೇಗಿದೆ ಎಂದರೆ, ನವಿಲಿನ ಗರಿಗಳನ್ನು ಧರಿಸಿದ ಜಿರಳೆಯೊಂದು ನಾನು ನವಿಲು ಆಗಲಿದ್ದೇನೆ ಎನ್ನುವ ಕನಸನ್ನು ಕಂಡಂತೆ ಇದೆ ಎಂದು ವ್ಯಂಗ್ಯವಾಗಿ ಹೋಲಿಸಿ ಟಾಂಗ್ ಕೊಟ್ಟಿದ್ದಾರೆ.

    26 ಲಕ್ಷ ಮತದಾರರು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತ್ರಿಪುರಾದದಲ್ಲಿ ಬಿಜೆಪಿ ಜಯಗಳಿಸಿದ್ದರಿಂದ ಹಿನ್ನಡೆ ಆಗಿಲ್ಲ. ಸಿಪಿಎಂ ಪರವಾಗಿ ಮತದಾನವಾಗಿದ್ದರೂ 5% ಮತಗಳ ವ್ಯತ್ಯಾಸದಿಂದಾಗಿ ಬಿಜೆಪಿ ಗೆದ್ದಿದೆ ಎಂದರು.

    ತ್ರಿಪುರಾದಲ್ಲಿ ಗೆದ್ದಂತೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಮುಂದಿನ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಗುಜರಾತ್ ನಲ್ಲಿ ಈಗಾಗಲೇ ನೈತಿಕವಾಗಿ ಸೋತಿದೆ ಎಂದು ಹೇಳಿದರು.

    ಒಂದು ವೇಳೆ ರಾಹುಲ್ ಗಾಂಧಿ ನನ್ನ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತಿತ್ತು. ಕಾಂಗ್ರೆಸ್ 30, ಟಿಎಂಸಿ 14, ಇತರೆ ಪಕ್ಷಗಳ 16 ಮಂದಿಗೆ ಟಿಕೆಟ್ ನೀಡಬೇಕು ಎಂದು ನಾನು ಹೇಳಿದ್ದೆ. ನನ್ನ ಈ ಪ್ರಸ್ತಾಪನ್ನು ಕೈ ನಾಯಕರು ಒಪ್ಪಿಕೊಳ್ಳದ ಕಾರಣ ಈ ಫಲಿತಾಂಶ ಬಂದಿದೆ ಎಂದರು.

    ಕಾಂಗ್ರೆಸ್ ಕೇವಲ 1.5% ಮತಗಳನ್ನು ಪಡೆದಿದ್ದು `ಶೇಮ್’ ಎಂದರು. ಕೇಂದ್ರಿಯ ಪಡೆ ಮತ್ತು ಹಣ ಬಲವನ್ನು ಉಪಯೋಗಿಸಿ ಬಿಜೆಪಿ ಈ ಚುನಾವಣೆಯನ್ನು ಗೆದ್ದಿದೆ ಎಂದು ಮಮತಾ ದೂಷಿಸಿದರು.

    ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಬಳಿಕ ದೆಹಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿಯ ಸುವರ್ಣ ಯುಗ ಆರಂಭವಾಗಿದ್ಯಾ ಎಂದು ಪ್ರಶ್ನೆ ಕೇಳಿದ್ದಕ್ಕೆ, ಪಶ್ಚಿಮ ಬಂಗಾಳ, ಕೇರಳ ಒಡಿಶಾದಲ್ಲಿ ಯಾವಾಗ ಕಮಲ ಅರಳುತ್ತದೋ ಆಗ ನಾನು ನಮ್ಮ ಪಕ್ಷದ ಸುವರ್ಣ ಯುಗವೆಂದು ಭಾವಿಸುತ್ತೇನೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: 2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

  • ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿಯಿಂದ ಗ್ರಾಹಕನಿಗೆ ಧಮ್ಕಿ

    ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿಯಿಂದ ಗ್ರಾಹಕನಿಗೆ ಧಮ್ಕಿ

    ತುಮಕೂರು: ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರೊಬ್ಬರಿಗೆ ಧಮ್ಕಿ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಮಲ್ಲಸಂದ್ರದ ಬಳಿ ಇರುವ ಹಕ್ಕಿಗೂಡು ಅನ್ನೋ ಹೋಟೆಲ್ ನಲ್ಲಿ ಈ ಅವಾಂತರ ನಡೆದಿದೆ. ಕೊರಟಗೆರೆಯ ನಿವಾಸಿ ನಾಗರಾಜ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಕ್ಕಿಗೂಡು ಹೋಟೆಲ್ ಗೆ ತಿಂಡಿ ತಿನ್ನಲು ಹೋಗಿದ್ದಾರೆ. ಅಲ್ಲಿ ದೋಸೆ ಆರ್ಡರ್ ಮಾಡಿದ್ದಾರೆ. ದೋಸೆ ಜೊತೆ ಕೊಟ್ಟ ಸಾಗುವಿನಲ್ಲಿ ಜಿರಳೆ ಬಿದ್ದಿರೋದು ಪತ್ತೆಯಾಗಿದೆ.

    ಇದನ್ನ ಹೋಟೆಲ್ ಸಪ್ಲೈಯರ್ ಹಾಗೂ ಸಿಬ್ಬಂದಿಗಳಿಗೆ ಕರೆದು ತೋರಿಸಿದ್ದಾರೆ. ಅಲ್ಲದೆ ನಾಗರಾಜ್ ಇದನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಬ್ಬಂದಿ ನಾಗರಾಜ್ ಅವರ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

    ಹಕ್ಕಿಗೂಡು ಹೋಟೆಲ್ ಹೆದ್ದಾರಿ ಪಕ್ಕದಲ್ಲಿ ಇರೋದ್ರಿಂದ ಪ್ರತಿನಿತ್ಯ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣಿಕರಿಗೆ ಇಲ್ಲೇ ತಿಂಡಿ, ಊಟಕ್ಕೆ ನಿಲ್ಲಿಸ್ತಾರೆ.

    https://www.youtube.com/watch?v=OAfcHUORoqk

  • ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್ ನಿಂದ ನೀರು ಕುಡಿಯೋ ಮುನ್ನ ಈ ಸ್ಟೋರಿ ಓದಿ

    ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್ ನಿಂದ ನೀರು ಕುಡಿಯೋ ಮುನ್ನ ಈ ಸ್ಟೋರಿ ಓದಿ

    ಗದಗ: ಹಣ ಕೊಟ್ಟು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲಿ ಖರೀದಿ ಮಾಡಿ ನೀರು ಕುಡಿಯುವ ಮುನ್ನ ಗ್ರಾಹಕರು ಎಚ್ಚರ ವಹಿಸಬೇಕು. ಇಲ್ಲವಾದ್ರೆ ನೀರಿನಿಂದ ನಿಮ್ಮ ಜೀವಕ್ಕೆ ಆಪತ್ತು ಬರಬಹುದು.

    ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಹೋಟೆಲ್‍ವೊಂದರಲ್ಲಿ “ಅಕ್ವಾ ಕಿಂಗ್” ಎಂಬ ಹೆಸರಿನ ನೀರಿನ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿದೆ. ಇದು 2 ಲೀಟರ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್ ಆಗಿದ್ದು, ದೊಡ್ಡದಾದ ಜಿರಳೆ ಬಾಟಲಿನ ಓಳಗೆ ಕಂಡು ಬಂದಿದೆ. ಇದರಿಂದ ಜಿಲ್ಲೆಯ ಜನರು ಭಯಗೊಂಡಿದ್ದಾರೆ.

    ಗ್ರಾಹಕರು ನೋಡದೇ ಅಪ್ಪಿ-ತಪ್ಪಿ ನೀರು ಕುಡಿದಿದ್ದರೆ ಆಸ್ಪತ್ರೆ ಸೇರಬೇಕಿತ್ತು. ಆದ್ದರಿಂದ ನೀರಿನ ಬಾಟಲ್ ಖರೀದಿಸಿ ನೀರು ಕುಡಿಯುವ ಮೊದಲು ಒಮ್ಮೆ ನೋಡಿ ಕುಡಿಯೋದು ಒಳಿತು.

    ಈ ಅಕ್ವಾ ಕಿಂಗ್ ಬಾಟಲ್ ಗಳು ಕೊಪ್ಪಳ ನಗರದ ತಾವರಗೇರಿ ರಸ್ತೆಯಲ್ಲಿನ ಶುದ್ಧ ನೀರಿನ ಘಟಕದಲ್ಲಿ ತಯಾರಾಗುತ್ತವೆ. ಅಲ್ಲಿಂದ ವಿವಿಧ ಜಿಲ್ಲೆಗಳಿಗೂ ಪೂರೈಕೆ ಆಗುತ್ತವೆ.