Tag: Cockpit

  • ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ನವದೆಹಲಿ: ವಿಮಾನದ ಕಾಕ್‍ಪಿಟ್ (Cockpit) ಪ್ರವೇಶಿಸಲು ಸ್ನೇಹಿತೆಗೆ ಅನುಮತಿ ನೀಡಿದ್ದ ಪೈಲೆಟ್ ಲೋಪಕ್ಕಾಗಿ ಏರ್ ಇಂಡಿಯಾ (Air India) ಸಿಇಒ ಕ್ಯಾಂಪ್‍ಬೆಲ್ ವಿಲ್ಸನ್ ಹಾಗೂ ಭದ್ರತಾ ಮುಖ್ಯಸ್ಥ ಹೆನ್ರಿ ಡೊನೊಹೋ ಅವರಿಗೆ ಡಿಜಿಸಿಎ (DGCA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಘಟನೆಯ ಕುರಿತು ಡಿಜಿಸಿಎಗೆ ಸಮಯೋಚಿತ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾ ಸಿಇಒ ಮತ್ತು ವಿಮಾನ ಸುರಕ್ಷತಾ ಮುಖ್ಯಸ್ಥರಿಗೆ ಏ.21 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೂ ಇಲ್ಲಿಯವರೆಗೂ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಇಂಡಿಯಾ ಸುರಕ್ಷತಾ ಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ದುಬೈ (Dubai), ದೆಹಲಿ (Delhi) ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಡಿ ರೋಸ್ಟರ್ ಮಾಡುವಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಫೆ.27 ರಂದು ದುಬೈ ಹಾಗೂ ದೆಹಲಿ ನಡವೆ ಸಂಚರಿಸುವ ವಿಮಾನದಲ್ಲಿ ಪೈಲಟ್ ಸ್ನೇಹಿತೆಗೆ ಕಾಕ್‍ಪಿಟ್ ಪ್ರವೇಶಕ್ಕೆ ಅನುಮತಿ ನೀಡಿ, ಒಳಗೆ ಬಿಟ್ಟಿದ್ದರು. ಈ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಬ್ಬರು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (Directorate General of Civil Aviation) ದೂರು ಸಲ್ಲಿಸಿದ್ದರು. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

  • 2 ವರ್ಷದ ಮಗುವಿನ ಮೊದಲ ವಿಮಾನ ಪ್ರಯಾಣ ಹೇಗಿತ್ತು ಗೊತ್ತಾ?

    2 ವರ್ಷದ ಮಗುವಿನ ಮೊದಲ ವಿಮಾನ ಪ್ರಯಾಣ ಹೇಗಿತ್ತು ಗೊತ್ತಾ?

    ವಾಷಿಂಗ್ಟನ್: ಮಕ್ಕಳಿಗೆ ಆಸೆ ಹೆಚ್ಚು, ಅವುಗಳನ್ನು ನೆರೆವೇರಿಸುವವರು ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖಷಿಯಾಗುತ್ತಾರೆ. ಇಲ್ಲೊಂದು 2 ವರ್ಷದ ಮಗು, ಮೊದಲ ವಿಮಾನ ಪ್ರಯಾಣ ಮಾಡುತ್ತಿದೆ. ಈ ವೇಳೆ   ಫ್ಲೈಟ್ ಚಾಲನೆ ಮಾಡುವ ಸ್ಥಳದಲ್ಲಿ ಕುಳಿತು ಖುಷಿಪಟ್ಟಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

    ಮೊದಲ ಬಾರಿಗೆ (cockpit) ಕಾಕ್‍ಪಿಟ್‍ಗೆ(ವಿಮಾನ ಚಾಲನೆ ಮಾಡುವ ಸ್ಥಳ) ಪ್ರವೇಶಿಸಿದ ಮಗು ಅಲ್ಲಿಯ ಉಪಕರಣಗಳನ್ನು ನೋಡಿ ವಾವ್ ಎಂದು ಹೇಳುತ್ತಾ ಖುಷಿ ಪಟ್ಟಿದೆ. ಭವಿಷ್ಯದ ಪೈಲಟ್ ಆಗುವಂತೆ ಕಾಣುತ್ತಿದ್ದಾನೆ ಎಂದು ಕ್ಯಾಪ್ಷನ್ ನೀಡುವ ಮೂಲಕ ಗುಡ್ ನ್ಯೂಸ್ ಮೂವ್‍ಮೆಂಟ್ ವೀಡಿಯೋ ಹಂಚಿಕೊಂಡಿದೆ. ಸದ್ಯ ನೆಟ್ಟಿಗರು ಮಗುವಿನ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ವೀಡಿಯೋದಲ್ಲಿ ಏನಿದೆ?: ಮೊದಲು ಮಗು ಕಾಕ್‍ಪಿಟ್‍ನೊಳಗೆ ಪ್ರವೇಶಿಸುತ್ತದೆ. ಅಲ್ಲಿದ್ದ ಪೈಲೆಟ್ ಮಗುವನ್ನು ಎತ್ತು ಸೀಟ್ ಮೇಲೆ ಕೂರಿಸುತ್ತಾರೆ. ಅಲ್ಲಿರುವ ಉಪಕರಣಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ವಿವರಿಸುತ್ತಾರೆ. ಅದನ್ನು ಕೇಳಿ ಮಗು ಅಚ್ಚರಿಯಿಂದ ಕಣ್ಣರಳಿಸಿದೆ. ಈ ವೀಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

  • 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

    76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

    ಅಮ್ಮಾನ್: ಛಲ ಇದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ 76 ವರ್ಷದ ವೃದ್ಧ ತನ್ನ ಪೈಲಟ್ ಆಗುವ ಕನಸನ್ನು ನೆರವೇರಿಸಿಕೊಂಡಿರುವುದೇ ಉದಾಹರಣೆಯಾಗಿದೆ. ಈ ಘಟನೆ ಜೋರ್ಡಾನ್ ನಲ್ಲಿ ನಡೆದಿದೆ.

    ಜೋರ್ಡಾನ್ ನಿವಾಸಿ ಮುಹಮ್ಮದ್ ಮಲ್ಹಾಸ್ ಪೈಲಟ್ ಆಗುವ ಕನಸು ಕಂಡಿದ್ದರು. ಏನೇ ಬಂದರೂ ಛಲ ಬಿಡದ ಅವರು ತಮ್ಮ 76 ವರ್ಷ ವಯಸ್ಸಿನಲ್ಲಿ ನೆರವೇರಿಸಿಕೊಂಡಿದ್ದಾರೆ. ಆದರೆ ಈ ವಿಮಾನ ಆಕಾಶದ ಮೇಲೆ ಹಾರಾಡುವುದಿಲ್ಲ ಬದಲಿಗೆ ಕುಳಿತುಕೊಂಡು ವಿಮಾನದಲ್ಲಿ ಇರುವಂತೆ ಫೀಲ್ ಮಾಡಬಹುದು. ವಿಮಾನದ ರೀತಿಯಲ್ಲಿಯೇ ಕಾಕ್‍ಪಿಟ್ ಅನ್ನು ಮಲ್ಹಾಸ್ ತಮ್ಮ ನೆಲಮಾಳಿಗೆಯಲ್ಲಿ ನಿರ್ಮಿಸಿ ಆ ಮೂಲಕ ಮೋಡಗಳ ಮೇಲೆ ಮೇಲೇರುವ ಕನಸ್ಸನ್ನು ನೆರವೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಹಾಸ್, ಪ್ರಾಚೀನ ಕಾಲದಿಂದಲೂ, ಮನುಷ್ಯ ಆಕಾಶದಲ್ಲಿ ಪಕ್ಷಿಗಳನ್ನು ನೋಡುತ್ತಿದ್ದಾನೆ. ಅವನು ಸಹ ಮುಕ್ತವಾಗಿ ಹಾರುವ ಕನಸು ಕಾಣುತ್ತಿದ್ದಾನೆ. ಹುಡುಗನಾಗಿದ್ದಾಗ, ಮನುಷ್ಯ ಗಾಳಿಪಟವನ್ನು ಹಾರಿಸಿ ಆನಂದಿಸುತ್ತಿದ್ದನು. ಕಾಗದದಿಂದ ಮಾಡಿದ ಎಷ್ಟೋ ವಸ್ತುಗಳು ಹೇಗೆ ಎತ್ತರಕ್ಕೆ ಏರುತ್ತದೆ ಎಂದು ಆಶ್ಚರ್ಯ ಪಡುತ್ತಾನೆ ಎಂದು ಬಾಲ್ಯದಲ್ಲಿ ಮನುಷ್ಯನಿಗೆ ಕಾಡುವ ಸಂಗತಿಗಳನ್ನು ಹೇಳಿದರು.

    ಆಗಿನಿಂದಲೂ ನನ್ನಲ್ಲಿ ಹಾರಾಟದ ಬಯಕೆ ಮತ್ತು ಪ್ರೀತಿ ಗೀಳಾಗಿಸಲು ಪ್ರಾರಂಭಿಸಿತು. ನನ್ನ ಮನಸ್ಸು ಯಾವಾಗಲೂ ಆಕಾಶದ ಮೇಲೆ ಹಾರಾಡಬೇಕು ಎಂದು ಹೇಳುತ್ತಿತ್ತು. ಬಾಲ್ಯದಿಂದಲೂ ನನಗೆ ಪೈಲಟ್ ಆಗ ಬೇಕು ಎಂದು ಕನಸು ಕಡೆ ಆದರೆ ಅದು ನೆರವೇರಲಿಲ್ಲ. ಆದರೆ ಈ ಮೂಲಕ ನೆರವೇರಿಸಿಕೊಂಡಿದ್ದೇನೆ ಎಂದು ತಿಳಿಸಿದರು. 

    ವೃತ್ತಿಜೀವದಲ್ಲಿ ವೈದ್ಯರಾಗದ್ದ ಮಲ್ಹಾಸ್ ಅವರು ನಿವೃತ್ತಿ ಹೊಂದಿದ ನಂತರ ತಮ್ಮ ಜೀವಿತಾವಧಿಯಲ್ಲಿ ಹೊಸ ಉತ್ಸಾಹವನ್ನು ತೆಗೆದುಕೊಂಡಿದ್ದಾರೆ. ಮಲ್ಹಾಸ್ ಅವರು ಪೈಲಟ್ ಆಗುವ ಕನಸನ್ನು ಕೈಬಿಡದೇ ಬೋಯಿಂಗ್ 737-800 ನ ಕಾಕ್‍ಪಿಟ್‍ನ ಪ್ರತಿರೂಪವಾದ ಫ್ಲೈಟ್ ಸಿಮ್ಯುಲೇಟರ್‍ನಲ್ಲಿ ಕುಳಿತು ಮೂರು ವರ್ಷಗಳ ಕಾಲ ಸ್ಕ್ಯ್ರಾಪ್ ಮತ್ತು ಸೆಕೆಂಡ್‍ಹ್ಯಾಂಡ್ ವಸ್ತುಗಳಿಂದ ಕಾಕ್‍ಪಿಟ್ ಅನ್ನು ನಿರ್ಮಿಸಿದ್ದಾರೆ.

    ಮಲ್ಹಾಸ್ ಅವರು ಈ ಎಲ್ಲ ಭಾಗಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಸಲಾಗಿದೆ. ಕಾಕ್‍ಪಿಟ್ ನಲ್ಲಿ ಅಳವಡಿಸಲಾದ ಕುರ್ಚಿಗಳು ಮೂಲತಃ ಬಸ್ಸಿನ ಭಾಗವಾಗಿದೆ. ಈ ಕಾಕ್‍ಪಿಟ್ ನಲ್ಲಿ ಪರದೆ ಮೇಲೆ ಮೋಡಗಳು ಮತ್ತು ಆಕಾಶ, ನದಿಗಳು, ಕಾಡುಗಳು ಮತ್ತು ಮರುಭೂಮಿಗಳ ಚಿತ್ರಗಳನ್ನು ತೋರಿಸುತ್ತವೆ. ಅದು ಅಲ್ಲದೇ ಹೊರಗಿನ ಹವಾಮಾನ ಹೇಗಿದೆ ಎಂಬುದನ್ನು ಕುಳಿತುಕೊಂಡೆ ಅವರು ಫೀಲ್ ಸಹ ಮಾಡಬಹುದು.

    ಎಲೆಕ್ಟ್ರಾನಿಕ್ ಎಂಜಿನಿಯರ್ ಸ್ನೇಹಿತರ ಸಹಾಯದಿಂದ ಈ ವಿಮಾನವನ್ನು ನಿರ್ಮಿಸಿದ್ದು, ಸುಮಾರು ಆರು ಸಾವಿರ ದಿನಾರ್‌ಗಳು(1,63,00,000 ರೂ.) ಗಳಲ್ಲಿ ನಿರ್ಮಿಸಲಾಗಿದೆ. ಈ ವಿಮಾನವನ್ನು ನಿರ್ಮಿಸಲು ಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ:   ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಮಲ್ಹಾಸ್ ಅವರ ಸ್ನೇಹಿತ ಅಹ್ಮದ್ ಫೇರ್ಸ್, 25 ಸ್ವಿಚ್‍ಗಳು ಮತ್ತು ಸೂಚಕಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಈ ಮೂಲಕ ಅವರು ನಿಜವಾದ ವಿಮಾನದಲ್ಲಿ ಕುಳಿತುಕೊಂಡು ಹಾರುತ್ತಿರುವಂತೆ ಕಾಣುತ್ತದೆ. ಈ ಪ್ರಯತ್ನಕ್ಕೆ ಮಲ್ಹಾಸ್ ಅವರ ಹೆಂಡತಿ ಸಹ ಸಹಕರಿಸುತ್ತಿದ್ದರು.

    ಮಲ್ಹಾಸ್ ಅವರು 1969 ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಆಸ್ಪತ್ರೆ ನಿರ್ವಹಣೆಯಲ್ಲಿ ಪದವಿ ಪಡೆದರು. ಅವರ ಕುಟುಂಬವು ಸ್ಥಾಪಿಸಿದ ಅಮ್ಮಾನ್ ಆಸ್ಪತ್ರೆಯಲ್ಲಿ ಅವರ ತಂದೆಯೊಂದಿಗೆ ಕೆಲಸ ಮಾಡಲು ಹೋದರು. ಆದರೆ ಮಲ್ಹಾಸ್ ಅವರು ಮಾತ್ರ ತಮ್ಮ ಕನಸುಗಳನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆ ಅವರು ವಿಮಾನಯಾನ, ಏರ್‍ಕ್ರಾಫ್ಟ್ ಎಂಜಿನಿಯರಿಂಗ್ ಮತ್ತು ಹಾರಾಟವನ್ನು ಕಲಿಯಲು ಮಾರ್ಗದರ್ಶಿಗಳನ್ನು ಸಂಪರ್ಕಿಸಿ ತಮ್ಮ ಕನಸನ್ನು ನೆರವೇರಿಸಿಕೊಂಡಿದ್ದಾರೆ.