Tag: cockfighting

  • ಕೋಳಿ ಅಂಕದ ಕೋಳಿ ರುಚಿ ಬಹಳ ಚೆನ್ನಾಗಿ ಇರುತ್ತೆ, ಬನ್ನಿ ರುಚಿ ತೋರಿಸ್ತೀವಿ: ಡಿಕೆಶಿಗೆ ಸುನೀಲ್ ಕುಮಾರ್ ಆಹ್ವಾನ

    ಕೋಳಿ ಅಂಕದ ಕೋಳಿ ರುಚಿ ಬಹಳ ಚೆನ್ನಾಗಿ ಇರುತ್ತೆ, ಬನ್ನಿ ರುಚಿ ತೋರಿಸ್ತೀವಿ: ಡಿಕೆಶಿಗೆ ಸುನೀಲ್ ಕುಮಾರ್ ಆಹ್ವಾನ

    ಬೆಂಗಳೂರು: ಯಕ್ಷಗಾನ (Yakshagana) ಪ್ರದರ್ಶನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ನಿಯಮಗಳನ್ನು ಸರಳೀಕರಣಗೊಳಿಸುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪವಾಯ್ತು.

    ಗಮನಸೆಳೆಯುವ ಸೂಚನೆ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ (Sunil Kumar) ಪ್ರಸ್ತಾಪಿಸಿ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಎಫ್‌ಐಆರ್ ದಾಖಲು‌ ಮಾಡುತ್ತಿದ್ದಾರೆ. ಧ್ವನಿವರ್ಧಕ ಬಳಕೆ ಸೇರಿದಂತೆ ಹಲವು ಅಡೆತಡೆಗಳು ಇವೆ. ಹೀಗಾಗಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಸರಳೀಕರಣಗೊಳಿಸಿ ಅಂತಾ ಮನವಿ ಮಾಡಿದರು.

    ಈ ವೇಳೆ ಸ್ಪೀಕರ್ ಖಾದರ್ ಸಹ ಮಾತನಾಡಿ, ಮೊದಲು ಈ ರೀತಿ ಇರಲಿಲ್ಲ. ರಾತ್ರಿ 10 ಗಂಟೆ ಮೇಲೆ ಧ್ವನಿವರ್ಧಕ ಬಳಸಬಾರದು ಎಂದು ನಿಯಮ ತಂದರು. ಆದಾದ ಮೇಲೆ ಒಂದೊಂದು ಕಡೆ ಒಬ್ಬಬ್ಬ ಅಧಿಕಾರಿಗಳು ನಿಯಮ ಮಾಡುತ್ತಿದ್ದಾರೆ. ಸರ್ಕಾರ ಸರಿಪಡಿಸಿ ಎಂದು ಸೂಚಿಸಿದರು.

     

    ಗೃಹ ಸಚಿವರ ಪರವಾಗಿ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಉತ್ತರ ನೀಡಿ, ನಮ್ಮ ಸಂಸ್ಕೃತಿಗೆ ತೊಂದರೆ ಆಗಬಾರದು. ಯಕ್ಷಗಾನ, ಬಯಲಾಟ ನಮ್ಮ ದೇಶದ ಆಸ್ತಿ, ಇದನ್ನ ನಿಲ್ಲಿಸಲು ಆಗುವುದಿಲ್ಲ. ಯಾವುದೇ ಸಮಸ್ಯೆ ಇಲ್ಲದೇ ಸರಳೀಕರಣ ಮಾಡುತ್ತೇವೆ. ಮಧ್ಯರಾತ್ರಿ ನಿಲ್ಲಿಸುವಂತೆ ಯಾರೂ ಹೇಳಲ್ಲ. ಗೃಹ ಸಚಿವರು ಬರಲಿ ಅದನ್ನ ಸರಿ ಮಾಡೋಣ ಎಂದು ಭರವಸೆ ನೀಡಿದ್ರು.

    ಈ ವೇಳೆ ಊರುಗಳಲ್ಲಿ ನಾಟಕ ಪ್ರದರ್ಶನಕ್ಕೂ ಅಡೆತಡೆ ಉಂಟಾಗುತ್ತಿದೆ ಎಂದು ಶಾಸಕ‌ ನೇಮಿರಾಜ್ ನಾಯ್ಕ್ ಪ್ರಸ್ತಾಪಿಸಿದರೆ ಕೋಳಿಅಂಕ, ನಾಗಮಂಡಲಕ್ಕೂ ಅಡೆತಡೆ ಉಂಟುಮಾಡುತ್ತಿದ್ದಾರೆ. ಅದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಪ್ರಸ್ತಾಪಿಸಿದರು.

    ಆಗ ಮಧ್ಯಪ್ರವೇಶ ಮಾಡಿದ ಸುನೀಲ್ ಕುಮಾರ್, ಕೋಳಿ ಅಂಕ ಮೊದಲಿನಿಂದಲೂ ಇದೆ. ಕೋಳಿ ಅಂಕದ (Cockfighting) ಕೋಳಿ ರುಚಿ ಬಹಳ ಚೆನ್ನಾಗಿದೆ. ನೀವು ಬಂದರೆ ಆ ರುಚಿ ತೋರಿಸುತ್ತೇವೆ ಎಂದು ಡಿಕೆಶಿಗೆ ಸುನೀಲ್ ಹೇಳಿದರು.

     

  • ನಿಷೇಧಿತ ಕೋಳಿ ಜೂಜಾಟ – ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌

    ನಿಷೇಧಿತ ಕೋಳಿ ಜೂಜಾಟ – ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌

    ಕೊಪ್ಪಳ: ನಿಷೇಧಿತ ಕೋಳಿ ಅಂಕ(Cockfighting) ಜೂಜಾಟ ಅಡಿಸಿದ್ದಕ್ಕಾಗಿ ಬಿಜೆಪಿ(BJP) ಮುಖಂಡನ ವಿರುದ್ಧ ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ನಾಗರಾಜ ಇದ್ಲಾಪುರ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೈಂಗಿಕತೆಯ ಒಪ್ಪಿಗೆ ವಯಸ್ಸನ್ನು ಕಡಿಮೆ ಮಾಡಲ್ಲ: ಕೇಂದ್ರ ಸರ್ಕಾರ

     

    ಕನಕಗಿರಿ ತಾಲೂಕಿನ ಇದ್ಲಾಪುರ ಗ್ರಾಮದಲ್ಲಿ ಕೋಳಿ ಪಂದ್ಯ ನಡೆದಿತ್ತು. ನೂರಾರು ಜನರನ್ನು ಸೇರಿಸಿ ಲಕ್ಷಾಂತರ ರೂಪಾಯಿ ಜೂಜಾಟ ಆಡಿಸಿದ್ದ ಆರೋಪ ನಾಗರಾಜ ಮೇಲಿದೆ.

    ನೆರೆಯ ಆಂಧ್ರ, ತೆಲಂಗಾಣದಿಂದ ಬಹಳಷ್ಟು ಜನರು ಆಗಮಿಸಿ ಜೂಜಾಟ ಆಡಿದ್ದರು. ಜೂಜಾಟ ಸುದ್ದಿಯಾಗುತ್ತಿದ್ದಂತೆ ನಾಗರಾಜ ವಿರುದ್ಧ ಜಗದೀಶ್‌ ದೂರು ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೋಳಿ ಕಾಳಗ ಸ್ಪರ್ಧೆ ನೋಡಲು ಹೋದವನಿಗೆ 3 ಇಂಚಿನ ಚೂರಿ ತಗುಲಿ ಸಾವು

    ಕೋಳಿ ಕಾಳಗ ಸ್ಪರ್ಧೆ ನೋಡಲು ಹೋದವನಿಗೆ 3 ಇಂಚಿನ ಚೂರಿ ತಗುಲಿ ಸಾವು

    – ಕಾಳಗದ ವೇಳೆ ಹಾರಿ ಬಂದ ಕೋಳಿ

    ಹೈದರಾಬಾದ್: ಕೋಳಿ ಕಾಳಗ ಸ್ಪರ್ಧೆ ವೇಳೆ ಕೋಳಿಕಾಲಿಗೆ ಕಟ್ಟಿದ್ದ 3 ಇಂಚಿನ ಚೂರಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ತನುಗುಲ್ಲಾ ಸತೀಶ್ ಎಂದು ಗುರುತಿಸಲಾಗಿದೆ. ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಕೋಳಿ ಕಾಳಗವನ್ನು ನೋಡಲು ಹೋದ ಯುವಕ ಕೋಳಿ ಕಾಲಿಗೆ ಕಟ್ಟಿದ್ದ ಚಾಕು ತಗುಲಿ ಸಾವನ್ನಪ್ಪಿದ್ದಾನೆ.

    ಕಾನೂನುಬಾಹಿರವಾದ ಕೋಳಿ ಕಾಳಗ ಸ್ಪರ್ಧೆಯನ್ನು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಕೋಳಿಕಾಳಗ ನಡೆಸಬಾರದೆಂದು ಹೈಕೋರ್ಟ್ ಆದೇಶವಿದೆಯಾದರೂ, ಸ್ಥಳೀಯರು ಮುಕ್ತವಾಗಿಯೇ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ.

    ಸತೀಶ್ ಕೋಳಿಕಾಳಗವನ್ನು ನೋಡಲು ಹೋಗಿದ್ದಾನೆ. ಕೋಳಿಯ ಕಾಲಿಗೆ ಜೋಡಿಸಲಾಗಿದ್ದ ಮೂರು ಇಂಚಿನ ಚೂರಿ ಆಕಸ್ಮಿಕವಾಗಿ ಸತೀಶ್ ಬಳಿ ಕೋಳಿ ಹಾರಿ ಬಂದಿದೆ. ಈ ವೇಳೆ ಕೋಳಿ ಕಾಲಿಗೆ ಕಟ್ಟಿರುವ ಚೂರಿ ತೊಡೆಸಂದಿಗೆ ತಗುಲಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸತೀಶ್‍ನನ್ನು ಆಸ್ಪತ್ರೆಗೆ ಕರೆದುಕೊಂದು ಹೋಗಲಾಯಿತ್ತು. ಆದರೆ ಸತೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

    ಕಾನೂನು ಬಾಹೀರವಾಗಿ ಕೋಳಿಕಾಳಗವನ್ನು ಎರ್ಪಡಿಸಿದ್ದ ಜನರು ಸತೀಶ್ ಸಾವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಕೋಳಿ ಕಾಳಗದ ವೇಳೆ ಕೋಳಿ ಮಾತ್ರವಲ್ಲದೇ ವ್ಯಕ್ತಿಯೊಬ್ಬನ ಪ್ರಾಣಪಕ್ಷಿಯೇ ಹಾರಿಹೋಗಿದೆ ಎಂದು ಗೊಲ್ಲಪಲ್ಲಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.