Tag: Cock Fight

  • ಸಂಕ್ರಾಂತಿ ವೇಳೆ ಕೋಳಿ ಅಂಕಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜು

    ಸಂಕ್ರಾಂತಿ ವೇಳೆ ಕೋಳಿ ಅಂಕಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜು

    ಅಮರಾವತಿ: ದಕ್ಷಿಣ ಭಾರತದ ಹೆಚ್ಚಿನ ಕಡೆಗಳಲ್ಲಿ ನಡೆಸಲಾಗುವ ಜೂಜಿನ ಆಟ ಕೋಳಿ ಅಂಕಕ್ಕೆ ಆಂಧ್ರಪ್ರದೇಶದಲ್ಲಿ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸಂಕ್ರಾಂತಿಗೆ ಕೆಲವೇ ದಿನಗಳು ಬಾಕಿ ಇರುವಾಗ ಕೋಳಿ ಅಂಕ ಜನರು ಸಜ್ಜಾಗುತ್ತಿದ್ದಂತೆ ಪೊಲೀಸರು ಅದರ ನಿರ್ಬಂಧದ ಕಟ್ಟೆಚ್ಚರಿಕೆ ನೀಡಿದ್ದಾರೆ.

    ಕೋಳಿ ಅಂಕ ನಿಷೇಧ ಕೆಲವು ವರ್ಷಗಳ ಹಿಂದೆಯಷ್ಟೇ ಜಾರಿಯಾಗಿತ್ತು. ಹೀಗಿದ್ದರೂ ಜನರು ಅದನ್ನು ಮರೆತು ಮತ್ತೆ ಕೋಳಿ ಅಂಕಕ್ಕೆ ಸಜ್ಜಾಗುತ್ತಿದ್ದಾರೆ. ಮುಖ್ಯವಾಗಿ ಆಂಧ್ರಪ್ರದೇಶದ ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಅಂಕ ಹಾಗೂ ಬೆಟ್ಟಿಂಗ್ ನಡೆಯುವ ಪ್ರಮುಖ ಕೇಂದ್ರಗಳೆಂದು ವರದಿಯಾಗಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಮಂಗಳವಾರ ಪೊಲೀಸರು ಸಂಕ್ರಾಂತಿಗೆಂದು ಸಿದ್ಧಪಡಿಸಿದ್ದ 4 ಕೋಳಿಗಳನ್ನು ಸೆರಹಿಡಿದು, ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪಶ್ಚಿಮ ಗೋದಾವರಿಯ ಎಲೂರಿನಲ್ಲಿ ಬೆಟ್ಟಿಂಗ್ ದಂಧೆಯೊಂದನ್ನು ಬೇಧಿಸಿ 1.20 ಲಕ್ಷ ರೂ.ಯನ್ನು ವಶಪಡಿಸಿಕೊಂಡಿದ್ದಾರೆ.

    ಕೋಳಿ ಅಂಕದಲ್ಲಿ ಪಂಟರ್ ಕೋಳಿಗಳ ಕಾಲಿಗೆ ಚಿಕ್ಕ ಕತ್ತಿಯನ್ನು ಕಟ್ಟಿ ಕಾಳಗಕ್ಕೆ ಬಿಡಲಾಗುತ್ತದೆ. ಎರಡು ಕೋಳಿಗಳಲ್ಲಿ ಯಾವುದಾದರೂ ಒಂದು ಸಾಯುವ ವರೆಗೂ ಕಾಳಗ ಮುಂದುವರಿಯುತ್ತದೆ. ಇದರಲ್ಲಿ ಪ್ರಾಣಿ ಹಿಂಸೆಯೊಂದಿಗೆ ಬೆಟ್ಟಿಂಗ್ ಕೂಡಾ ನಡೆಯುವ ಕಾರಣ ಈ ಆಟವನ್ನು ದಕ್ಷಿಣ ಭಾರತ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್

    ಇಂತಹ ಕಾನೂನು ಬಾಹಿರ ಆಟಗಳಲ್ಲಿ ತೊಡಗಿಗೊಳ್ಳುವುದು ಅಥವಾ ಪ್ರೋತ್ಸಾಹಿಸುವುದು ತಿಳಿದು ಬಂದಲ್ಲಿ ಕಾನೂನು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ.

  • ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ – 22 ಕೋಳಿ, 30 ಜನ ಅಂದರ್

    ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ – 22 ಕೋಳಿ, 30 ಜನ ಅಂದರ್

    ಯಾದಗಿರಿ: ಕೋಳಿ ಅಂಕದ ಮೂಲಕ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು, 22 ಹುಂಜಗಳೊಂದಿಗೆ 30 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲೆಯ ಸುರಪುರ ಉಪವಿಭಾಗದ ಹಲವು ಕಡೆ ಮತ್ತು ಹುಣಸಗಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಕೋಳಿ ಅಂಕದಲ್ಲಿ ಜೂಜು ನಡೆಯುತ್ತಿರುವ ಬಗ್ಗೆ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಕಚೇರಿಗೆ ಸಾಕಷ್ಟು ದೂರುಗಳು ಕೇಳಿ ಬಂದಿತ್ತು.

    ಇಂದು ಹುಣಸಗಿ ತಾಲೂಕಿನ ರಾಯಗೇರಾ ಗ್ರಾಮದ ಹೊರ ವಲಯದಲ್ಲಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು, ಅಡ್ಡೆ ಮೇಲೆ ದಾಳಿ ಮಾಡಿ 22 ಹುಂಜಗಳು 32 ಸಾವಿರ ನಗದು, 30 ಬೈಕ್ ಮತ್ತು 30 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಸುರಪುರ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಮತ್ತು ಪಿಎಸ್‍ಐ ಬಾಷುಮಿಯಾ ಜಂಟಿಯಾಗಿ ಏಕಕಾಲದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಳಿ ಅಂಕ ಅಡ್ಡೆ ಮೇಲೆ ದಾಳಿ- 1.13 ಲಕ್ಷ ಮೌಲ್ಯದ ವಸ್ತುಗಳು ಪೊಲೀಸ್ರ ವಶಕ್ಕೆ

    ಕೋಳಿ ಅಂಕ ಅಡ್ಡೆ ಮೇಲೆ ದಾಳಿ- 1.13 ಲಕ್ಷ ಮೌಲ್ಯದ ವಸ್ತುಗಳು ಪೊಲೀಸ್ರ ವಶಕ್ಕೆ

    – 13 ಮಂದಿ ಪೊಲೀಸರ ವಶಕ್ಕೆ

    ಯಾದಗಿರಿ: ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಫೈಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಮನೂರಿನಲ್ಲಿ ನಡೆದಿದೆ.

    ಪೊಲೀಸರ ದಾಳಿ ವೇಳೆ 13 ಮಂದಿ ಜೂಜುಕೋರರು ಮತ್ತು ಪಂದ್ಯಕ್ಕಿಟ್ಟಿದ್ದ 4 ಹುಂಜ, 4 ಕತ್ತಿ, 12 ಬೈಕ್ ಸೇರಿದಂತೆ 1.13ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಯಂಕೂಬ್ ಬಿರಾದಾರ್ ಎಂಬಾತ ಈ ಜೂಜಾಟವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜೂಜು ನೋಡಲು ಮತ್ತು ಆಡಲು ಬರುವವರಿಂದ ಸುಮಾರು 500 ಯಿಂದ 1000ರವರೆಗೆ ಬೆಟ್ಟಿಂಗ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

    ಹುಂಜಗಳನ್ನು ಸಾಕಿ ಅವುಗಳಿಗೆ ಕುಸ್ತಿಯ ತರಬೇತಿಯನ್ನು ನೀಡಲಾಗಿರುತ್ತದೆ. ಕೋಳಿ ಪಂದ್ಯಾಟದ ವೇಳೆ ಕಾಲಿಗೆ ಚಾಕುವನ್ನು ಕಟ್ಟಿ ಎರಡು ಕೋಳಿಗಳನ್ನು ಪರಸ್ಪರ ಹೊಡೆದಾಡಲು ಪ್ರೇರೇಪಿಸಲಾಗುತ್ತದೆ. ಹೀಗೆ ಕೋಳಿಗಳ ನಡುವೆ ಒಮ್ಮೆ ಫೈಟ್ ಶುರುವಾಯಿತೆಂದರೆ ಒಂದು ಕೋಳಿ ಸಾಯುವವರೆಗೆ ಮತ್ತೊಂದು ವಿರಮಿಸುವುದಿಲ್ಲ. ಯಾವ ಕೋಳಿ ಗೆಲ್ಲುತ್ತದೆ ಎಂದು ಜೂಜುಕೋರರು ಬೆಟ್ ಕಟ್ಟುತ್ತಾರೆ.

  • ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಚೆನ್ನೈ: ನಾಯಿಗಳೆಂದರೆ ಹೆಚ್ಚಿನವರಿಗೆ ಬಲುಪ್ರೀತಿ. ಆದ್ರೆ ಕೆಲವರು ಇವುಗಳನ್ನು ದ್ವೇಷಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಆದ್ರೆ ನಾಯಿಗಳ ಆ ಮುಗ್ಧ ಮುಖವನ್ನು ಕಂಡಾಗ ಎಲ್ಲರ ಮುಖದಲ್ಲೂ ಒಂದು ಬಾರಿ ನಗು ಮೂಡುತ್ತೆ. ಕೆಲವೊಮ್ಮೆ ನಾಯಿಗಳು ಜನರಿಗೆ ಹಾನಿಯುಂಟು ಮಾಡುತ್ತವೆ. ಆದ್ರೆ ನಾಯಿಮರಿಗಳು ಏನೇ ಮಾಡಿದ್ರೂ ಚಂದವೇ. ನಾಯಿ ಮರಿಗಳ ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಹಾಗೆಯೇ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಕೋಳಿಗಳ ಜಗಳಕ್ಕೆ ನಾಯಿಮರಿಯೊಂದು ಎಂಟ್ರಿ ಕೊಟ್ಟಿದೆ.

    ಹೌದು. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರ ಎರಡು ಹುಂಜಗಳು ಸಖತ್ ಫೈಟ್ ಮಾಡಿವೆ. ಈ ವೇಳೆ ಕಪ್ಪು ಬಣ್ಣದ ನಾಯಿ ಮರಿಯೊಂದು ಜಗಳ ಬಿಡಿಸಲು ಹರಸಾಹಸ ಪಟ್ಟಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

    ವಿಡಿಯೋದಲ್ಲೇನಿದೆ?
    2 ಹುಂಜಗಳ ಪರಸ್ಪರ ಸಖತ್ ಫೈಟ್ ಮಾಡುತ್ತಿರುತ್ತವೆ. ನಾಯಿಮರಿ ಇವುಗಳ ಜಗಳದ ಮಧ್ಯಸ್ಥಿಕೆ ವಹಿಸಲು ಬಂದಿದ್ದು, ಗಲಾಟೆ ಬಿಡಿಸಲು ಹರಸಾಹಸ ಪಡುತ್ತದೆ. ಕೋಳಿಗಳ ಕಾಲು ಹಾಗೂ ರೆಕ್ಕೆಯನ್ನು ಕಚ್ಚಿ ಎಳೆಯುತ್ತದೆ. ಆದ್ರೂ ಅವುಗಳ ಜಗಳ ನಿಲ್ಲಿಸಿಲ್ಲ.

    ಇದರಿಂದ ಕಂಗಾಲಾದ ನಾಯಿ ಮರಿ ಒಂದು ಹುಂಜದ ಪುಕ್ಕವನ್ನು ಮೆಲ್ಲಗೆ ಕಚ್ಚಿ ಅಷ್ಟು ದೂರ ಎಳೆದುಕೊಂಡು ಹೋಗುತ್ತದೆ. ಇದರಿಂದ ಕೋಪಗೊಂಡ ಇನ್ನೊಂದು ಹುಂಜ ಮತ್ತೆ ಜಗಳವಾಡಲು ಮುಂದಾಗುತ್ತಿದೆ. ವಿಶೇಷವೆಂದರೆ ಜಗಳ ಬಿಡಿಸಲು ಮಧ್ಯೆ ಬರುತ್ತಿರುವ ನಾಯಿ ಮರಿಗೆ ಹುಂಜಗಳು ಏನೂ ಮಾಡದೇ ತಮ್ಮ ಜಗಳ ಮುಂದುವರಿಸುತ್ತಿವೆ. ಆದ್ರೂ ಬಿಡದೇ ನಾಯಿ ಮರಿ ಹುಂಜಗಳನ್ನು ಬೇರೆ ಬೇರೆ ಮಾಡಲು ಯತ್ನಿಸಿದೆ. ಆದ್ರೆ ನಾಯಿಮರಿಯ ಪ್ರಯತ್ನ ಮಾತ್ರ ವಿಫಲವಾಗಿದೆ.

    ಒಟ್ಟಿನಲ್ಲಿ ಹುಂಜಗಳ ಜಗಳ ಬಿಡಿಸಲು ಹರಸಾಹಸ ಪಡುತ್ತಿರುವ ಮುದ್ದಾದ ನಾಯಿ ಮರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರು ಜಗಳವಾಡುತ್ತಿರೋ ಕೊಳಿಗಳ ಮಾಲಕರಾಗಿದ್ದಾರೆ. ಪ್ರಾಣಿಪ್ರಿಯರಾಗಿರೋ ಇವರು, ಮೊಲ, ಬೆಕ್ಕು, ನಾಯಿ ಮೊದಲಾದವುಗಳನ್ನು ಸಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MHHnNu40ml8