Tag: cochin

  • ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ- 5 ಸಾವು, 11 ಮಂದಿಗೆ ಗಂಭೀರ ಗಾಯ

    ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ- 5 ಸಾವು, 11 ಮಂದಿಗೆ ಗಂಭೀರ ಗಾಯ

    ಕೊಚ್ಚಿ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ(ಒಎನ್‍ಜಿಸಿ) ಸಾಗರ್ ಭೂಷಣ್ ನೌಕೆಯಲ್ಲಿ ಸ್ಫೋಟ ಸಂಭವಿಸಿ 5 ಮಂದಿ ಮೃತಪಟ್ಟು 11 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಕೊಚ್ಚಿನ್ ನಲ್ಲಿ ನಡೆದಿದೆ.

    ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಸ್ಫೋಟಗೊಂಡ ನೌಕೆಯಲ್ಲಿ ಇನ್ನಿಬ್ಬರು ಸಿಕ್ಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಪಡೆಗಳು ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ. ವೆಲ್ಡಿಂಗ್ ನಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.

    ಕೊಚ್ಚಿನ್ ಹಡಗು ನಿರ್ವಹಣಾ ಘಟಕವು ಭಾರತದ ಪ್ರಧಾನ ನಿರ್ಮಾಣ ಮತ್ತು ದುರಸ್ತಿ ಸೌಲಭ್ಯವನ್ನು ಒದಗಿಸುವ ತಾಣವಾಗಿದೆ. ಭಾರತದ ಮೊಟ್ಟಮೊದಲ ದೇಶೀಯವಾಗಿ ನಿರ್ಮಿಸಲಾದ ವಿಮಾನ ವಾಹಕ ನೌಕೆ ಐಎನ್‍ಎಸ್ ವಿಕ್ರಾಂತ್ ಅನ್ನು ಇಲ್ಲಿ ನಿರ್ಮಿಸಲಾಗಿತ್ತು.

    ಈ ಶಿಪ್‍ಯಾರ್ಡ್ 2006ರಲ್ಲಿ ಒಎನ್‍ಜಿಸಿಯ ಮೂರು ತೈಲ ಹಡಗು ರಿಪೇರಿಗೆ ಸಂಬಂಧಿಸಿದಂತೆ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಇ ಸಾಗರ್ ಭೂಷಣ್, ಸಾಗರ್ ವಿಜಯ್ ಮತ್ತೊಂದು ಸಾಗರ್ ಕಿರಣ್ ನೌಕೆಯ ದುರಸ್ತಿಯನ್ನು ಈ ಘಟಕದಲ್ಲಿ ಮಾಡಲಾಗುತ್ತಿದೆ.