Tag: cocaine

  • ಹೊಟ್ಟೆಯಲ್ಲಿ 1 ಕೆ.ಜಿ ಕೊಕೇನ್ ಬಚ್ಚಿಟ್ಟು ಪ್ರಯಾಣ – ವಿದೇಶಿ ಮಹಿಳೆ ಅರೆಸ್ಟ್

    ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ದಲ್ಲಿ ಉಗಾಂಡಾ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆ ತನ್ನ ಹೊಟ್ಟೆಯಲ್ಲಿ 1ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟು, ಕಳ್ಳಸಾಗಣೆ ಮಾಡುತ್ತಿದ್ದಳು.

    ಉಗಾಂಡಾ ಮೂಲದ ಮಹಿಳೆ ಕೆಲವು ದಿನಗಳ ಹಿಂದೆ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆಕೆಯ ಚಲನವಲನಗಳು ಅಸಾಮಾನ್ಯವಾಗಿದ್ದವು. ಆಕೆಯನ್ನು ಗುರುತಿಸಿದ ಕಸ್ಟಮ್ಸ್ ಅಧಿಕಾರಿಗಳು ಮಾತಾಡಿಸಿದಾಗ ಆಕೆ ವಿಚಿತ್ರವಾಗಿ ನಡೆದುಕೊಂಡಿದ್ದಳು. ಆಕೆಯನ್ನು ಪ್ರಶ್ನಿಸಿದಾಗ ಕೊಕೇನ್ ಮಾತ್ರೆಗಳನ್ನು ನುಂಗಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಮಹಿಳೆ ಹೊಟ್ಟೆಯಲ್ಲಿ ಕೊಕೇನ್ ಬಚ್ಚಿಟ್ಟಿದ್ದ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದು, 91 ಕೊಕೇನ್ ತುಂಬಿದ ಮಾತ್ರೆಗಳನ್ನು ಆಕೆಯ ದೇಹದಿಂದ ತೆಗೆಯಲಾಯಿತು. ಒಟ್ಟು 996 ಗ್ರಾಂ ಕೊಕೇನ್ ಅನ್ನು ಆಕೆಯ ದೇಹದಿಂದ ತೆಗೆಯಲು 4 ದಿನಗಳು ಬೇಕಾಯಿತು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

    ಸಾಮಾನ್ಯವಾಗಿ ವ್ಯಕ್ತಿ ತನ್ನ ಹೊಟ್ಟೆಯಲ್ಲಿ 400 ರಿಂದ 500 ಗ್ರಾಂ ವರೆಗಿನ ಬಾಹ್ಯ ವಸ್ತುಗಳನ್ನು ಹೊಟ್ಟೆಯೊಳಗೆ ಬಚ್ಚಿಡಲು ಸಾಧ್ಯವಿರುತ್ತದೆ. ಆದರೆ ಈ ಮಹಿಳೆ 1 ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟಿರುವುದು ಅಪರೂಪ ಹಾಗೂ ಆಘಾತ ಮೂಡಿಸಿರುವ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಈ ಕೊಕೇನ್ ಗುಳಿಗೆಯನ್ನು ಹೊಟ್ಟೆಯಲ್ಲಿ ಬಚ್ಚಿಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಒಂದುವೇಳೆ ಗುಳಿಗೆಗಳು ಹೊಟ್ಟೆಯ ಒಳಗೆ ಸಿಡಿದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿತ್ತು ಎಂದು ತಿಳಿಸಿದರು.

  • ಮೂವರು ನೈಜೀರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ ವಶ

    ಮೂವರು ನೈಜೀರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ ವಶ

    ಮುಂಬೈ: ಮೂವರು ನೈಜಿರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ (ಡ್ರಗ್ಸ್)ನ್ನು ಪೊಲೀಸರು ವಶಪಡಿಸಿಕೊಂಡು ಅವರನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಕೊಕೇನ್ ಸಾಗಾಟ ಮಾಡುತ್ತಿದ್ದ ಮೂವರು ನೈಜೀರಿಯಾ ಮೂಲದ ವ್ಯಕ್ತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಬಂಗೂರ್ ಪೊಲೀಸ್ ವಲಯದ ವಿಶೇಷ ಆಯುಕ್ತರು ಈ ಮೂವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಇವರಿಂದ ಕಳೆದ 24 ಗಂಟೆಗಳಲ್ಲಿ 22 ಲಕ್ಷ ರೂ.ಗಳ ಮೌಲ್ಯದ ಸುಮಾರು 220 ಗ್ರಾಂ ಕೊಕೇನ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಉಚೆ ಜೇಮ್ಸ್ (38) ಮಲಾಡ್‍ದ ಲಿಂಕ್ ರಸ್ತೆಯಲ್ಲಿ ಮಾದಕವಸ್ತುಗಳನ್ನು ತಲುಪಿಸಲು ಬರುತ್ತಿದ್ದಾನೆ ಎಂದು ಮೊದಲೇ ನಮಗೆ ಮಾಹಿತಿ ಸಿಕ್ಕಿತ್ತು. ನಾವು ಸ್ಥಳಕ್ಕೆ ಹೋದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಜೇಮ್ಸ್ ನೀಡಿದ ಮಾಹಿತಿಯ ಆಧಾರದ ಮೇಲೆ ಇತರ ಇಬ್ಬರು ಆರೋಪಿಗಳಾದ ಎಮೆಕಾ ಸಿಪ್ರಿಯನ್ ಮತ್ತು ಚುಕ್ವು ಜೋಸೆಫ್‍ನನ್ನು ಗೋರೆಗಾಂವ್‍ನ ಕಾಲೋನಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಯ ಅಡಿಯಲ್ಲಿ ಈ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮೂವರಲ್ಲಿ 22 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ 200 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದೇವೆ. ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಿಳೆಯ ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್ ಪತ್ತೆ

    ಮಹಿಳೆಯ ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್ ಪತ್ತೆ

    – ದಂಗಾದ ಕಸ್ಟಮ್ಸ್ ಅಧಿಕಾರಿಗಳು

    ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಇತಿಹಾಸದಲ್ಲೇ ಇಂಥ ಪ್ರಕರಣವನ್ನ ನೋಡಿರಲಿಲ್ಲ. ಯಾಕೆಂದರೆ ಮಹಿಳೆಯೊಬ್ಬಳು ತನ್ನ ಗುಪ್ತಾಂಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8.31 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಮಹಿಳೆಯೊಬ್ಬಳ ಗುಪ್ತಾಂಗದಿಂದ ವಶಪಡಿಸಿಕೊಳ್ಳಲಾಗಿದೆ. ಗುಟೇಮಾಲಾ ದೇಶದ ಮಹಿಳೆಯ ಗುಪ್ತಾಂಗದಲ್ಲಿದ್ದ ಡ್ರಗ್ಸ್ ಕಂಡು ಕಸ್ಟಮ್ಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

    ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ವಿಯಾ ಗ್ವಾಡಾಲುಪೆ ಬಂಧಿತ ವಿದೇಶಿ ಮಹಿಳೆ. ಈಕೆ 150 ಕೊಕೇನ್ ಮಾತ್ರೆಗಳನ್ನು ಟ್ಯೂಬ್ ರೀತಿ ಮಾಡಿ ಗಪ್ತಾಂಗದಲ್ಲಿ ಇಟ್ಟುಕೊಂಡಿದ್ದಳು. ಇಥಿಯೋಪಿಯ ಏರ್ ಲೈನ್ಸ್ ET690 ಮೂಲಕ ಅಡಿಸ್ ಅಬಾಬದಿಂದ ಬೆಂಗಳೂರಿಗೆ ಬಂದಿದ್ದಳು. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಕೊಕೇನ್ ಪತ್ತೆಯಾಗಿದೆ.

    ಸಣ್ಣ ಸಣ್ಣ ಮಾತ್ರೆಗಳ ರೀತಿಯಲ್ಲಿ ಅದಕ್ಕೆ ಪ್ಲಾಸ್ಟಿಕ್ ರೀತಿಯ ವಸ್ತುವಿನಿಂದ ಕವರ್ ಮಾಡಿ, ಕೊಕೇನ್ ಶೇಖರಣೆ ಮಾಡಿಟ್ಟುಕೊಂಡಿದ್ದಳು. 1.385 ಗ್ರಾಂ ಕೊಕೇನ್ ಮಹಿಳೆಯ ಗುಪ್ತಾಂಗದಲ್ಲಿ ಪತ್ತೆಯಾಗಿದ್ದು, NDPS ACT ಅಡಿ ಈ ವಿದೇಶಿ ಮಹಿಳೆಯ ಬಂಧನವಾಗಿದೆ.

    ಅಂದಹಾಗೆ ಮಹಿಳೆಯೊಬ್ಬಳು ದೇಹದೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿರೋದು ಇದೇ ಮೊದಲು. ಈಕೆ ವಿಮಾನ ಏರುವ ಮುಂಚೆಯಿಂದ ಅಂದರೆ ಸುಮಾರು ಎರಡು ದಿನಗಳಿಂದ ತನ್ನ ಗುಪ್ತಾಂಗದಲ್ಲೇ ಕೊಕೇನ್ ಇಟ್ಟುಕೊಂಡಿದ್ದಳು. ಸದ್ಯ ಈಕೆಯನ್ನ ಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  • ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ಮೌಲ್ಯದ ಕೊಕೇನ್ ತಿಂದು ತೇಗಿದ ಹಂದಿಗಳು

    ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ಮೌಲ್ಯದ ಕೊಕೇನ್ ತಿಂದು ತೇಗಿದ ಹಂದಿಗಳು

    – ಕಳ್ಳಸಾಗಾಣಿಕೆಗೆ ಹೂತಿಟ್ಟಿದ್ದ ಡ್ರಗ್ಸ್
    – ಖದೀಮರ ಗುಂಪು ಅರೆಸ್ಟ್

    ರೋಮ್: ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ರೂ. ಮೌಲ್ಯದ ಕೊಕೇನ್ ಅನ್ನು ಕಾಡು ಹಂದಿಗಳು ತಿಂದು ತೇಗಿದ ಘಟನೆ ಇಟಲಿಯ ಟಸ್ಕನಿ ಅರಣ್ಯದಲ್ಲಿ ಬೆಳಕಿಗೆ ಬಂದಿದೆ.

    ಕಳ್ಳಸಾಗಾಣಿಕೆಗೆ ಅರಣ್ಯದಲ್ಲಿ ಖದೀಮರು ಪ್ಯಾಕೆಟ್‍ಗಳಲ್ಲಿ ಕೊಕೇನ್ ತುಂಬಿ ಪ್ಯಾಕ್ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದರೆ ಈ ಪ್ಯಾಕೆಟ್‍ಗಳನ್ನು ಹುಡುಕಿ ತೆಗೆದ ಕಾಡು ಹಂದಿಗಳು ಅದರೊಳಗೆ ಇದ್ದ ಕೊಕೇನ್ ಅನ್ನು ತಿಂದು ಪ್ಯಾಕೆಟ್‍ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಓಡಾಡುತ್ತಿದ್ದಾಗ ಕೊಕೇನ್ ಪ್ಯಾಕೆಟ್‍ಗಳು ಪತ್ತೆಯಾಗಿತ್ತು. ಇದನ್ನೂ ಓದಿ:ಡ್ರಗ್ಸ್ ನಶೆಯಲ್ಲಿ ಕುಟುಂಬದವರನ್ನೇ ಕೊಂದು ಫೇಸ್‍ಬುಕ್ ಲೈವ್ ಹೋದ

    ಅರಣ್ಯದಲ್ಲಿ ಕೊಕೇನ್ ಹೇಗೆ ಬಂತು ಎಂದು ಅರಣ್ಯ ಇಲಾಖೆ ಜಾಡುಹಿಡಿದು ಹೊರಟಾಗ ಸತ್ಯಾಂಶ ಹೊರಬಿದ್ದಿದೆ. ಕಳ್ಳಸಾಗಾಣಿಕೆ ನಡೆಸಲು ಖದೀಮರು ಕಾಡಿನಲ್ಲಿ ಕೊಕೇನ್ ಅಡಗಿಸಿಟ್ಟಿದ್ದರು. ಅಧಿಕಾರಿಗಳ ಕಣ್ಣು ತಪ್ಪಿಸಲು ಅದನ್ನು ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದರೆ ಕೊಕೇನ್ ವಾಸನೆಗೆ ಕಾಡು ಹಂದಿಗಳು ಹೂತಿಟ್ಟಿದ್ದ ಕೊಕೇನ್ ಅನ್ನು ಅಗೆದು, ಹೊರತೆಗೆದು ತಿಂದು ತೇಗಿವೆ. ಇದನ್ನೂ ಓದಿ:ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ಸದ್ಯ ಈ ಕೊಕೇನ್ ಹೂತಿಟ್ಟಿದ್ದ ಖದೀಮರ ಗುಂಪನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಕಾಡಿನಲ್ಲಿ ಖದೀಮರು 15.7 ಲಕ್ಷ ರೂ. ಮೌಲ್ಯದ ಕೊಕೇನ್ ಹೂತಿಟ್ಟಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ ಈ ಗುಂಪು ಟಸ್ಕನಿ ಅರಣ್ಯದ ಸುತ್ತಮುತ್ತಲ ಪ್ರದೇಶಗಳಿಗೆ ಪ್ರತಿ ತಿಂಗಳು 2 ಕೆ.ಜಿವರೆಗೂ ಡ್ರಗ್ಸ್ ಮಾರಾಟ ಮಾಡುವುದನ್ನು ಬಾಯಿಬಿಟ್ಟಿದೆ.

  • ನಾಯಿಯ ತಲೆಗೆ 47 ಲಕ್ಷ ರೂ. ಬಹುಮಾನ ಘೋಷಿಸಿದ ಸ್ಮಗ್ಲರ್!

    ನಾಯಿಯ ತಲೆಗೆ 47 ಲಕ್ಷ ರೂ. ಬಹುಮಾನ ಘೋಷಿಸಿದ ಸ್ಮಗ್ಲರ್!

    ಬೊಗೊಟಾ: 10 ಸಾವಿರ ಕೆಜಿ ಕೊಕೇನ್ ಪತ್ತೆ ಹಚ್ಚಿದ್ದ ಸೊಂಬ್ರಾ (ಜರ್ಮನ್ ಶೆಫರ್ಡ್) ನಾಯಿಯ ತಲೆಗೆ ಕೊಲಂಬಿಯಾದ ಸ್ಮಗ್ಲರ್ ಒಬ್ಬ 47 ಲಕ್ಷ ರೂ. ಬಹುಮಾನ ಘೋಷಿಸಿದ್ದಾನೆ.

    ಹೌದು, ಕೊಲಂಬಿಯಾದ ಒಟೋನಿಯಲ್ ಕುಖ್ಯಾತ ಸ್ಮಗಲರ್ ಆಗಿದ್ದು, ಆತನೇ 200 ದಶಲಕ್ಷ ಕೊಲಂಬಿಯನ್ ಪೆಸೊ (ಅಂದಾಜು 47 ಲಕ್ಷ ರೂ.) ಬಹುಮಾನದ ಮೊತ್ತವನ್ನು ಘೋಷಿಸಿದ್ದಾನೆ ಎಂದು ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಆರು ವರ್ಷದ ಸೊಂಬ್ರಾ, ಮಾದಕವಸ್ತುಗಳ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದೆ. ಅಕ್ರಮ ಮಾದಕ ವಸ್ತು ಸಾಗಾಣಿಕೆ ಮಾಡುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಸೊಂಬ್ರಾ ನಿಸ್ಸಿಮಳು. ಸದ್ಯ ಬೊಗೊಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ನಾಯಿಗೆ ಭಾರೀ ಭದ್ರತೆ ನೀಡುವಂತೆ ಕೊಲಂಬಿಯಾ ಸರ್ಕಾರ ಆದೇಶಿಸಿದೆ.

    ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ 245 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸುವಲ್ಲಿ ಸೊಂಬ್ರಾ ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಕೊಂದವರಿಗೆ 47 ಲಕ್ಷ ರೂ. ಬಹುಮಾನ ನೀಡುವುದಾಗಿ ಒಟೋನಿಯಲ್ ಪ್ರಕಟಿಸಿದ್ದಾನೆ.

    ಸೊಂಬ್ರಾಳಿಗೆ ರಕ್ಷಣೆಗೆ ಕೊಲಂಬಿಯಾ ರಾಷ್ಟ್ರೀಯ ಪೊಲೀಸ್ ದಳ ಮುಂದಾಗಿದೆ. ಬೊಗೊಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿರುವ ಸೊಂಬ್ರಾ ಈ ಹಿಂದೆ ಅಟ್ಲಾಂಟಿಕ್ ಕರಾವಳಿ ಪ್ರದೇಶ ಸೇರಿದಂತೆ ಅಮೆರಿಕಾದ ಕೆಲವು ಭಾಗದಲ್ಲಿಯೂ ಸೇವೆ ಸಲ್ಲಿಸಿದೆ.