Tag: cocaine

  • ಗುಜರಾತ್‌ನಲ್ಲಿ 5,000 ಕೋಟಿ ಮೌಲ್ಯದ ಕೊಕೇನ್ ಸೀಜ್

    ಗುಜರಾತ್‌ನಲ್ಲಿ 5,000 ಕೋಟಿ ಮೌಲ್ಯದ ಕೊಕೇನ್ ಸೀಜ್

    – 2 ವಾರದಲ್ಲಿ ಒಟ್ಟು 13,000 ಕೋಟಿ ಮೌಲ್ಯದ ಕೊಕೇನ್ ಜಪ್ತಿ

    ಗುಜರಾತ್: 5,000 ಕೋಟಿ ರೂ. ಮೌಲ್ಯದ 514 ಕೆ.ಜಿ ಕೊಕೇನ್ (Cocaine) ವಶಕ್ಕೆ ಪಡೆಯಲಾಗಿದ್ದು, ದೆಹಲಿ ಹಾಗೂ ಗುಜರಾತ್ ಪೊಲೀಸರ ವಿಶೇಷ ತಂಡವು ಭರ್ಜರಿ ಬೇಟೆಯಾಡಿ, ಐವರನ್ನು ಬಂಧಿಸಿದ್ದಾರೆ.

    ಇತ್ತೀಚಿಗೆ ದೆಹಲಿ ಪೊಲೀಸರು 5,000 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಭಾನುವಾರ ಗುಜರಾತ್‌ನಲ್ಲಿ 5,000 ಕೋಟಿ ರೂ. ಮೂಲ್ಯದ 518 ಕೆ.ಜಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದೆ. ಗುಜರಾತ್ ಹಾಗೂ ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಂಕಲೇಶ್ವರ ಔಷಧ ಕೇಂದ್ರದಲ್ಲಿ ಮಾದಕ ವಸ್ತು ಪತ್ತೆಯಾಗಿದೆ.ಇದನ್ನೂ ಓದಿ:ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ಈ ಮೂಲಕ ಒಟ್ಟು 2 ವಾರದಲ್ಲಿ ಗುಜರಾತ್ ಹಾಗೂ ದೆಹಲಿಯಲ್ಲಿ ಜಾರಿ ನಿದೇಶನಾಯಲಯ (ED-Enforcement Directorate) ಒಟ್ಟು 13,000 ಕೋಟಿ ರೂ.ಮೌಲ್ಯದ 1289 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿಯಷ್ಟು ಥಾಯ್ಲೆಂಡ್‌ನ ಹೈಡ್ರೋಪೋನಿಕ್ ಎಂಬ ಮಾದಕ ವಸುವನ್ನು ವಶಕ್ಕೆ ಪಡೆದುಕೊಂಡಿವೆ.

    ಇದಕ್ಕೂ ಮುನ್ನವೇ ಅ.1 ರಂದು ದೆಹಲಿ ಪೊಲೀಸರ ವಿಶೇಷ ತಂಡವು ಮಹಿಪಾಲ್‌ಪುರದಲ್ಲಿರುವ ತುಷಾರ್ ಗೋಯಲ್ ಅವರ ಗೋದಾಮಿನ ಮೇಲೆ ದಾಳಿ ನಡೆಸಿತ್ತು. ಆ ವೇಳೆ 562 ಕೆ.ಜಿ. ಕೊಕೇನ್ ಮತ್ತು 40 ಕೆ.ಜಿ. ಹೈಡ್ರೋಪೋನಿಕ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ಹಿಚ್ಚಿನ ತನಿಖೆಗಾಗಿ ಅ.11ರಂದು ದೆಹಲಿಯ ರಮೇಶ್ ನಗರದಲ್ಲಿ 208 ಕೆ.ಜಿ. ಕೊಕೇನ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ನಮಕೀನ್ ಪ್ಯಾಕೆಟ್‌ನಲ್ಲಿ ಮಾದಕವಸ್ತು ಲಭ್ಯವಾಗಿತ್ತು.

    ಈ ಪ್ರಕರಣಗಳ ಬೆನ್ನಲ್ಲೇ ದೆಹಲಿ ಹಾಗೂ ಗುಜರಾತ್ ಪೊಲೀಸರ ವಿಶೇಷ ತಂಡವು ಭರ್ಜರಿ ದಾಳಿ ನಡೆಸಿದ್ದು, 5000 ಕೋಟಿ ರೂ. ಮೌಲ್ಯದ 514 ಕೆ.ಜಿ ಕೊಕೇನ್ ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು

  • ದೆಹಲಿಯಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

    ದೆಹಲಿಯಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

    ನವದೆಹಲಿ: ದೆಹಲಿಯಲ್ಲಿ (Delhi) 2 ಸಾವಿರ ಕೋಟಿ ರೂ. ಮೌಲ್ಯದ ಕೊಕೇನ್ (Cocaine)ವಶಕ್ಕೆ ಪಡೆಯಲಾಗಿದ್ದು, ಒಂದೇ ವಾರದಲ್ಲಿ ಎರಡನೇ ಭರ್ಜರಿ ಬೇಟೆ ಇದಾಗಿದೆ.

    ಗುರುವಾರ ದೆಹಲಿ ಪೊಲೀಸರು 2 ಸಾವಿರ ಕೋಟಿ ರೂ. ಮೌಲ್ಯದ 200 ಕೆ.ಜಿ ಕೊಕೇನ್‌ನ್ನು ವಶಕ್ಕೆ ಪಡೆಯುವ ಮೂಲಕ ಬೃಹತ್ ಜಾಲವನ್ನು ಭೇದಿಸಿದ್ದಾರೆ.

    ದೆಹಲಿ ಪೊಲೀಸರ (Delhi Police) ವಿಶೇಷ ತಂಡವು ಡ್ರಗ್ಸ್ ಪೂರೈಕೆದಾರನನ್ನು ಜಿಪಿಎಸ್ ಮೂಲಕ ರಮೇಶ ನಗರದಲ್ಲಿ ಪತ್ತೆ ಹಚ್ಚಿದ್ದಾರೆ. ಆದರೆ ಆರೋಪಿಗಳು ಲಂಡನ್‌ಗೆ ಪರಾರಿಯಾಗಿದ್ದು, ಇದು ಅದೇ ಸಿಂಡಿಕೇಟ್‌ನ ಭಾಗವಾಗಿದೆ. ಪೊಲೀಸರು ಪೂರೈಕೆದಾರನನ್ನು ಪತ್ತೆಹಚ್ಚುವಲ್ಲಿ ಯಶ್ವಸಿಯಾಗಿದ್ದು, 5,600 ಕೋಟಿ ರೂ. ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಒಂದು ವಾರದಲ್ಲೇ 7,500 ಕೋಟಿ ರೂ. ಮೌಲ್ಯದ 762 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದು ದೇಶದಲ್ಲಿಯೇ ಸಾಗಾಟವಾದ ಅತಿ ಹೆಚ್ಚು ಡ್ರಗ್ಸ್ ಆಗಿದೆ.ಇದನ್ನೂ ಓದಿ: ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಹೆಚ್‌ಡಿಕೆ

    ದೆಹಲಿ ಪೊಲೀಸರ ಮಾಹಿತಿಯ ಪ್ರಕಾರ, ಜಸ್ಸಿ ಎಂದು ಕರೆಯಲ್ಪಡುವ ಜಿತೇಂದ್ರ ಪಾಲ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪಂಜಾಬ್ ಅಮೃತಸರದ ವಿಮಾನ ನಿಲ್ದಾಣದ ಬಳಿ ಯುಕೆಗೆ ಪ್ರಯಾಣಿಸಲು ಮುಂದಾಗಿದ್ದಾಗ ಆತನನ್ನು ಬಂಧಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ನೆಟ್‌ವರ್ಕ್ನ್ನು ಹೊಂದಿದ್ದು, ದೇಶದಲ್ಲಿ ಸಂಘಟಿತ ಅಪರಾಧವಾಗಿದೆ.

    ಕಳೆದ 17 ವರ್ಷಗಳಿಂದ ಯುಕೆಯಲ್ಲಿ ವಾಸಿಸುತ್ತಿದ್ದು, ಜಸ್ಸಿ ಪರಾರಿಯಾಗುವ ಪ್ರಯತ್ನದ ಕುರಿತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ಸಿಂಡಿಕೇಟ್ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.

    ಈ ಜಾಲವು ದೆಹಲಿ, ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದುಬೈಗೆ ಸಂಪರ್ಕವನ್ನು ಹೊಂದಿದೆ. ಸದ್ಯ ದೆಹಲಿ ಪೊಲೀಸರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದಾಗ ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆ ವೀರೇಂದ್ರ ಬಸೋಯಾ ಎಂಬಾತನ ಹೆಸರು ಹೊರಬಿದ್ದಿದೆ.

    ಕಳೆದ ವಾರ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ ಮಾದಕ ದ್ರವ್ಯ ದಂಧೆಯಲ್ಲಿ 500 ಕೆ.ಜಿ.ಗೂ ಹೆಚ್ಚು ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ದಕ್ಷಿಣ ದೆಹಲಿಯಲ್ಲಿ ದಾಳಿ ನಡೆಸಿದ ನಂತರ ಮಾದಕ ದ್ರವ್ಯ ದಂಧೆಗೆ ಸಂಬAಧಿಸಿದAತೆ ನಾಲ್ವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ದೆಹಲಿಯ ತಿಲಕ್ ನಗರದಲ್ಲಿ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡ ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿತ್ತು.ಇದನ್ನೂ ಓದಿ: ಶಿವಮೊಗ್ಗ–ಚೆನ್ನೈ ನಡುವೆ ವಿಮಾನಯಾನ ಶುರು

  • ದೆಹಲಿಗೆ ಡ್ರಗ್ ರಾಕೆಟ್‌ ಹಿಂದೆ ದುಬೈ, ಲಂಡನ್ ನಂಟು – ದುಬೈನಲ್ಲಿರುವ ಭಾರತೀಯನಿಂದಲೇ ಡ್ರಗ್ ಮಾಫಿಯಾ

    ದೆಹಲಿಗೆ ಡ್ರಗ್ ರಾಕೆಟ್‌ ಹಿಂದೆ ದುಬೈ, ಲಂಡನ್ ನಂಟು – ದುಬೈನಲ್ಲಿರುವ ಭಾರತೀಯನಿಂದಲೇ ಡ್ರಗ್ ಮಾಫಿಯಾ

    ನವದೆಹಲಿ: 5,000 ಕೋಟಿ ರೂ.ಗಳ ಡ್ರಗ್ಸ್ (Drugs) ದಂಧೆಯ ಬೆನ್ನು ಬಿದ್ದು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ (Delhi Police) ತಂಡಕ್ಕೆ ಲಂಡನ್ ಮತ್ತು ದುಬೈ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಜಾಲದ ಮಾಹಿತಿ ಲಭ್ಯವಾಗಿದೆ. ದಂಧೆಯ ಹಿಂದಿರುವ ಆರೋಪಿ ತುಷಾರ್ ಗೋಯಲ್ ಸೇರಿದಂತೆ ಇತರೆ ಆರೋಪಿಗಳ ಪ್ರಾಥಮಿಕ ವಿಚಾರಣೆಯ ಬಳಿಕ ಈ ಮಾಹಿತಿ ಸ್ಪಷ್ಟವಾಗಿದೆ.

    ಪ್ರಕರಣದಲ್ಲಿ ದಕ್ಷಿಣ ದೆಹಲಿಯ ಸರೋಜಿನಿ ನಗರದ ನಿವಾಸಿ ವೀರೇಂದ್ರ ಬಸೋಯಾ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಬಸೋಯಾ ದುಬೈನಿಂದ ಬೃಹತ್ ಡ್ರಗ್ ಸಿಂಡಿಕೇಟ್ ನಡೆಸುತ್ತಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ಪುಣೆ ಪೊಲೀಸರು 3,000 ಕೋಟಿ ರೂಪಾಯಿ ಮೌಲ್ಯದ ‘ಮಿಯಾಂವ್ ಮಿಯಾಂವ್’ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲೂ ಬಸೋಯಾ ಹೆಸರು ಕೇಳಿಬಂದಿತ್ತು. ಇದನ್ನೂ ಓದಿ: ದಲಿತ ಶಿಕ್ಷಕ ಸೇರಿ ನಾಲ್ವರ ಭೀಕರ ಹತ್ಯೆ ಕೇಸ್; ಆರೋಪಿಗೆ ಗುಂಡೇಟು‌

    ಪುಣೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂಧನದಿಂದ ಪಾರಾಗಲು ಬಸೋಯಾ ದೆಹಲಿಯಿಂದ ದುಬೈಗೆ ಪರಾರಿಯಾಗಿದ್ದ. ದೆಹಲಿ ಪ್ರಕರಣದ ಆರೋಪಿ ತುಷಾರ್ ಗೋಯಲ್ ಜೊತೆ ಬಸೋಯಾ ಅವರ ನಿಕಟ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಬಸೋಯಾ ಅವರು ತಮ್ಮ ಡೀಲ್‌ಗಳಲ್ಲಿ ಪ್ರತಿ ವಿತರಣೆಗೆ 4 ಕೋಟಿ ರೂ.ಗಳನ್ನು ಗೋಯಲ್‌ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ದೆಹಲಿ ಪೊಲೀಸ್ ವಿಶೇಷ ಕೋಶವು ಮುಂಬೈ, ಪುಣೆ ಮತ್ತು ಇತರ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಮಾಫಿಯಾಗಳನ್ನು ಈ ಪ್ರಕಣದ ವ್ಯಾಪ್ತಿಗೆ ಸೇರಿಸಲು ತನ್ನ ತನಿಖೆಯನ್ನು ವಿಸ್ತರಿಸಿದೆ. ಎಲ್ಲರೂ ಸಾಮಾನ್ಯವಾಗಿ ಒಂದೇ ಸಿಂಡಿಕೇಟ್‌ಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ. ದಕ್ಷಿಣ ದೆಹಲಿಯಲ್ಲಿ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 500 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ನಂತರ ತುಷಾರ್ ಗೋಯಲ್ ಅವರನ್ನು ಅ.2 ರಂದು ಬಂಧಿಸಲಾಯಿತು. ಇದನ್ನೂ ಓದಿ: ಈರುಳ್ಳಿ, ಬೆಳ್ಳುಳ್ಳಿ ಆಯ್ತು – ಈಗ ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ

    ಗೋಯಲ್ ಅವರನ್ನು ಇತರ ಮೂವರೊಂದಿಗೆ ಬಂಧಿಸಲಾಯಿತು. ಹಿಮಾಂಶು ಕುಮಾರ್ ಮತ್ತು ದೆಹಲಿಯ ಔರಂಗಜೇಬ್ ಸಿದ್ದಿಕಿ ಮತ್ತು ಭರತ್ ಕುಮಾರ್ ಜೈನ್ ಅವರನ್ನು ಬೃಹತ್ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಪೊಲೀಸರ ಪ್ರಕಾರ, ಕೊಕೇನ್ ಅನ್ನು ವಿವಿಧ ರಾಜ್ಯಗಳಿಂದ ರಸ್ತೆ ಮೂಲಕ ದೆಹಲಿಗೆ ಕಳ್ಳಸಾಗಣೆ ಮಾಡಲಾಗಿದ್ದು, ಗಾಂಜಾ ಥಾಯ್ಲೆಂಡ್‌ನ ಫುಕೆಟ್‌ನಿಂದ ಹುಟ್ಟಿಕೊಂಡಿದೆ. ಆರೋಪಿಗಳು ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಕ್ರಿಪ್ಟೋಕರೆನ್ಸಿಯನ್ನು ಬಳಸಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

  • 5,600 ಕೋಟಿ ಮೌಲ್ಯದ ಕೊಕೇನ್ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡ – ನಾಚಿಕೆಗೇಡು ಎಂದ ಅಮಿತ್ ಶಾ

    5,600 ಕೋಟಿ ಮೌಲ್ಯದ ಕೊಕೇನ್ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡ – ನಾಚಿಕೆಗೇಡು ಎಂದ ಅಮಿತ್ ಶಾ

    ನವದೆಹಲಿ: ಮಾದಕ ವಸ್ತುಗಳ ಪ್ರಕರಣದಲ್ಲಿ ಕಾಂಗ್ರೆಸ್ (Congress) ನಾಯಕರು ಭಾಗಿಯಾಗುತ್ತಿರುವುದು ಅಪಾಯಕಾರಿ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ 5,600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ಪತ್ತೆಯಾದ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡದ ಆರೋಪದ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾದಕ ವಸ್ತುಗಳ ವಿಷಯದಲ್ಲಿ ಮೋದಿ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಇಂತಹ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾವು ದಾಳಿ ಮಾಡುವ ಮೊದಲೇ ಅಪರಾಧ ಕೃತ್ಯಗಳನ್ನ ಬಿಟ್ಟುಬಿಡಿ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್

    ಪಂಜಾಬ್, ಹರ್ಯಾಣ ಮತ್ತು ಇಡೀ ಉತ್ತರ ಭಾರತದಲ್ಲಿ ಮಾದಕ ವಸ್ತುಗಳಿಂದ ಯುವಕರು ಅನುಭವಿಸುತ್ತಿರುವ ದುಸ್ಥಿತಿಯನ್ನು ಎಲ್ಲರೂ ನೋಡುತ್ತಿದ್ದಾರೆ. ನಮ್ಮ ಸರ್ಕಾರವು ಮಾದಕ ವಸ್ತುಗಳ ಡೀಲರ್‌ಗಳ ರಾಜಕೀಯ ಸ್ಥಾನ ಅಥವಾ ಸ್ಥಾನಮಾನವನ್ನು ನೋಡದೆ ಇಡೀ ಮಾದಕ ದ್ರವ್ಯ ಜಾಲವನ್ನು ನಾಶಪಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಭಾರತವನ್ನು `ಮಾದಕವಸ್ತು ಮುಕ್ತ ದೇಶ’ ಮಾಡಲು ನಿರ್ಧರಿಸಿದೆ ಎಂದು ಅವರು ಎಚ್ಚರಿಸಿದ್ದಾರೆ.

    ಇತ್ತೀಚೆಗೆ ದಕ್ಷಿಣ ದೆಹಲಿಯಲ್ಲಿ ಬುಧವಾರ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂ. ಮೌಲ್ಯದ 562 ಕೆಜಿ ಕೊಕೇನ್ (Cocaine) ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾದ ಪ್ರಕರಣದ ಹಿಂದೆ ಕಾಂಗ್ರೆಸ್‌ನ (Congress) ಮಾಜಿ ಕಾರ್ಯಕರ್ತ ಇದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

    ಈ ಸಂಬಂಧ ಆರೋಪಿ ತುಷಾರ್ ಗೋಯಲ್ (40) ಎಂಬಾತನನ್ನು ಬಂಧಿಸಲಾಗಿದ್ದು, ಈ ಹಿಂದೆ 2022 ರವರೆಗೆ ದೆಹಲಿ ಪ್ರದೇಶ ಕಾಂಗ್ರೆಸ್‌ನ ಆರ್‌ಟಿಐ ಸೆಲ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಗಿ ಆತ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದ. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ

  • Delhi| ಕೋಟ್ಯಂತರ ಮೌಲ್ಯದ ಕೊಕೇನ್‌ ಪ್ರಕರಣದ ಹಿಂದೆ ಮಾಜಿ ಕಾಂಗ್ರೆಸ್‌ ನಾಯಕ

    Delhi| ಕೋಟ್ಯಂತರ ಮೌಲ್ಯದ ಕೊಕೇನ್‌ ಪ್ರಕರಣದ ಹಿಂದೆ ಮಾಜಿ ಕಾಂಗ್ರೆಸ್‌ ನಾಯಕ

    ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬುಧವಾರ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂ. ಮೌಲ್ಯದ 562 ಕೆಜಿ ಕೊಕೇನ್ (Cocaine) ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾದ ಪ್ರಕರಣದ ಹಿಂದೆ ಕಾಂಗ್ರೆಸ್‌ನ (Congress) ಮಾಜಿ ಕಾರ್ಯಕರ್ತ ಇದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿ ತುಷಾರ್ ಗೋಯಲ್ (40) ಎಂಬಾತನನ್ನು ಬಂಧಿಸಲಾಗಿದ್ದು, ಈ ಹಿಂದೆ 2022 ರವರೆಗೆ ದೆಹಲಿ ಪ್ರದೇಶ ಕಾಂಗ್ರೆಸ್‌ನ ಆರ್‌ಟಿಐ ಸೆಲ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಗಿ ಆತ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಿಳಾ ಅರ್ಚಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಸೋಷಿಯಲ್ ಮೀಡಿಯಾದಲ್ಲಿ ಡಿಕ್ಕಿ ಗೋಯಲ್ ಎಂಬ ಹೆಸರನ್ನು ಬಳಸಿ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಹರಿಯಾಣ ಘಟಕದ ಮುಖ್ಯಸ್ಥ ಉದಯ್ ಭಾನ್ ಸೇರಿದಂತೆ ಹಲವಾರು ಪ್ರಮುಖ ಕಾಂಗ್ರೆಸ್ ನಾಯಕರೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಪಕ್ಷಕ್ಕೆ ರಾಜೀನಾಮೆ ನೀಡುವ ಮೊದಲು ಹರಿಯಾಣ ಬಿಜೆಪಿ ನಾಯಕ ಅನಿಲ್ ಜೈನ್ ಮತ್ತು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದ ಎಂದು ತಿಳಿದು ಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಯಲ್ ಸೇರಿದಂತೆ ಹಿಮಾನ್ಶು ಕುಮಾರ್, ಔರಂಗಜೇಬ್ ಸಿದ್ದಿಕಿ, ಭರತ್ ಕುಮಾರ್ ಜೈನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

    ಕೊಕೇನ್ ಅನ್ನು ವಿವಿಧ ರಾಜ್ಯಗಳಿಂದ ರಸ್ತೆ ಮೂಲಕ ದೆಹಲಿಗೆ ಕಳ್ಳಸಾಗಣೆ ಮಾಡಲಾಗಿದ್ದು, ಗಾಂಜಾ ಥಾಯ್ಲೆಂಡ್‌ನ ಫುಕೆಟ್‌ನಿಂದ ತರಲಾಗಿದೆ. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಕ್ರಿಪ್ಟೋಕರೆನ್ಸಿಯನ್ನು ಬಳಸಿದ್ದಾರೆ.

    ಕೊಕೇನ್ ಸಾಗಣೆಯ ಹಿಂದೆ ದುಬೈ ಮೂಲದ ಪ್ರಮುಖ ಉದ್ಯಮಿ ಭಾಗಿಯಾಗಿರುವ ಬಗ್ಗೆ ಮೂಲಗಳು ಸುಳಿವು ನೀಡಿವೆ. ರಾಜಧಾನಿಯ ಉನ್ನತ ಮಟ್ಟದ ಪಕ್ಷಗಳಿಗೆ ಇದನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

  • ದೆಹಲಿ ಪೊಲೀಸರ ಭರ್ಜರಿ ಬೇಟೆ – 2,000 ಕೋಟಿ ಮೌಲ್ಯದ ಕೊಕೇನ್ ವಶ

    ದೆಹಲಿ ಪೊಲೀಸರ ಭರ್ಜರಿ ಬೇಟೆ – 2,000 ಕೋಟಿ ಮೌಲ್ಯದ ಕೊಕೇನ್ ವಶ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) 2,000 ಕೋಟಿ ರೂ. ಮೌಲ್ಯದ 500 ಕೆಜಿ ಕೊಕೇನ್‍ನ್ನು (Cocaine) ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ತಂಡ ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಭಾನುವಾರ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡು ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿತ್ತು. ಇದಾದ ನಂತರ ಮಾದಕ ವಸ್ತುಗಳ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು. ಇದೀಗ ಬೃಹತ್ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ.

    ಭಾನುವಾರ ಬಂಧಿಸಲಾಗಿದ್ದ ಆರೋಪಿಗಳನ್ನು ಹಾಶಿಮಿ ಮೊಹಮ್ಮದ್ ವಾರಿಸ್ ಮತ್ತು ಅಬ್ದುಲ್ ನಯೀಬ್ ಎಂದು ಗುರುತಿಸಲಾಗಿದೆ.

    ವಾರಿಸ್ ಜನವರಿ 2020 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾನೆ. ಆತನ ಕುಟುಂಬ ಅಫ್ಘಾನಿಸ್ತಾನದಲ್ಲಿದೆ. ಭಾರತಕ್ಕೆ ಬಂದ ನಂತರ ವಿಕಾಸಪುರಿಯಲ್ಲಿ ಮೆಡಿಕಲ್ ಸ್ಟೋರ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ನಯೀಬ್ ಕೂಡ ಆಫ್ಘಾನ್ ಪ್ರಜೆಯಾಗಿದ್ದು, ಅವನು ತನ್ನ ತಂದೆಯೊಂದಿಗೆ ಜನವರಿ 2020 ರಿಂದ ಭಾರತದಲ್ಲಿ ವಾಸವಾಗಿದ್ದಾನೆ. ಆತನ ಇಡೀ ಕುಟುಂಬವು ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದೆ.

    ನಯೀಬ್ ಮತ್ತು ವಾರಿಸ್ ವಿಕಾಸಪುರಿಯ ಮೆಡಿಕಲ್ ಸ್ಟೋರ್‌ನಲ್ಲಿ ಭೇಟಿಯಾಗಿದ್ದರು. ಬಳಿಕ ಐಷರಾಮಿ ಜೀವನಶೈಲಿಗಾಗಿ ವಾರಿಸ್ ನಯೀಬ್ ನನ್ನು ಡ್ರಗ್ ವ್ಯವಹಾರಕ್ಕೆ ಆಮಿಷವೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನೂ ಅದೇ ದಿನ ಕಸ್ಟಮ್ಸ್ ಅಧಿಕಾರಿಗಳು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ 24 ಕೋಟಿ ರೂ. ಮೌಲ್ಯದ 1,660 ಗ್ರಾಂ ಕೊಕೇನ್‍ನ್ನು ವಶಪಡಿಸಿಕೊಂಡಿದ್ದರು.

    ದುಬೈನಿಂದ ದೆಹಲಿಗೆ ಆಗಮಿಸಿದ್ದ ಫೆಡರಲ್ ರಿಪಬ್ಲಿಕ್ ಆಫ್ ಲೈಬೀರಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

  • ‘ಕೊಕೇನ್’ಗೆ ಪ್ರಥಮ್ ಹೀರೋ : ಕೌರವ ವೆಂಕಟೇಶ್ ನಿರ್ದೇಶನ

    ‘ಕೊಕೇನ್’ಗೆ ಪ್ರಥಮ್ ಹೀರೋ : ಕೌರವ ವೆಂಕಟೇಶ್ ನಿರ್ದೇಶನ

    ಬಿ.ಸಿ.ಪಾಟೀಲ್ ನಿರ್ಮಾಣ, ಅಭಿನಯದ ’ಕೌರವ’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ, ಬೆಂಗಳೂರಿನ ಕೌರವ ವೆಂಕಟೇಶ್  ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ,  ಇಂದು  ದಕ್ಷಿಣ ಭಾರತದ ಹೆಸರಾಂತ ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೆಲ್ಲಾ ಅನುಭವದಿಂದ ಈಗ ಹೊಸ ಪ್ರಯತ್ನ ಎನ್ನುವಂತೆ ’ಕೊಕೇನ್’ ಸಿನಿಮಾಕ್ಕೆ ಸಾಹಸ ಮತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ. ದ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಅಡಿಬರಹವಿದೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ.

    ನಿರ್ದೇಶಕರ ಹುಟ್ಟುಹಬ್ಬದಂದು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಮೊದಲ ದೃಶ್ಯಕ್ಕೆ ಬಿ.ಸಿ.ಪಾಟೀಲ್ ಕ್ಲಾಪ್ ಮಾಡಿದರೆ, ಹಿರಿಯ ನಿರ್ದೇಶಕ ಓಂ ಪ್ರಕಾಶ್‌ರಾವ್ ಕ್ಯಾಮಾರ ಆನ್ ಮಾಡಿದರು. ಚಿತ್ರದಲ್ಲಿ ಬಿ.ಸಿ.ಪಾಟೀಲ್ ಕೇಂದ್ರ ಸಚಿವ ಹಾಗೂ ಓಂ ಪ್ರಕಾಶ್‌ರಾವ್ ಇನ್ಸ್‌ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಪ್ರಥಮ್ ಅವರು ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಾಲ್ಕು ಹಾಡುಗಳು, ಐದು ಫೈಟ್ ಇರುತ್ತದೆ. ಪ್ರತಿಯೊಂದು ಸನ್ನಿವೇಶಗಳು ಊಹಿಸಲಾಗದಂತೆ ಬರುತ್ತದೆ. ಬೆಂಗಳೂರು, ಮಂಗಳೂರು, ಹಾಡುಗಳಿಗೆ ರಷ್ಯಾಗೆ ಹೋಗುವ ಇರಾದೆ ಇದೆ. ಕಾಮಿಡಿ, ಮಾಸ್, ರೋಮಾನ್ಸ್ ಇರುವುದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ ತೂಕದ ಸಂದೇಶ ಇರುತ್ತದೆ ಎಂದರು.

    ಇದೊಂದು ಪ್ಯಾನ್ ದಿಕ್ಕಿನಕಡೆಯ ಕನ್ನಡ ಸಿನಿಮಾ ಎನ್ನಬಹುದು. ಎಲ್ಲರೂ ನಮ್ಮ ಕಡೆ ತಿರುಗಲಿ ಎಂಬ ಅಭಿಲಾಷೆ. ದೇಶಪ್ರೇಮ ಸಾರುವ ಮಹಿಳಾ ಪ್ರಧಾನ ಚಿತ್ರವಾಗಿರುತ್ತದೆ. ಟ್ರಾವೆಲ್ಸ್ ನಡೆಸುತ್ತಿದ್ದು, ನೈಜಿರಿಯಾದಿಂದ 1000 ಕೋಟಿ ಮೌಲ್ಯದ ಕಂಟೈನರ್ ಬರುತ್ತದೆ. ಅದನ್ನು ಬೆಂಗಳೂರಿನಿಂದ ಗೋವಾಗೆ ಸಾಗಿಸಲು ದುರುಳರು ಯೋಜನೆ ಹಾಕಿಕೊಂಡಿರುತ್ತಾರೆ. ಯಾವುದೇ ಕಾರಣಕ್ಕೂ ಅದು ತಲುಪಬಾರದು ಎನ್ನುವ ಧೋರಣೆ ನನ್ನದಾಗಿರುತ್ತದೆ.  ಇದರ ಮಧ್ಯೆ ಇಂಟರ್‌ಪೂಲ್‌ನವರಿಂದಲೂ ಟಾಸ್ಕ್ ಆಗದೆ ಇದ್ದಾಗ, ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ತೆಗೆದುಕೊಳ್ಳುತ್ತದೆ. ಕೊನೆಗೆ ನಾಯಕ ಮತ್ತು ನಾಯಕಿ ಇಬ್ಬರು ಚಾಣಾಕ್ಷತನದಿಂದ ಅದನ್ನು ಯಾವ ರೀತಿ ನಾಶ ಮಾಡುತ್ತಾರೆ ಎಂಬುದನ್ನು ಹಾಸ್ಯ, ಆಕ್ಷನ್‌ನಿಂದ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಯುಕ್ತರುಗಳಾಗಿ ಶಶಿಕುಮಾರ್, ರವಿಕಾಳೆ ಇರುತ್ತಾರೆ. ನಿಮ್ಮಗಳ ಬೆಂಬಲ ಸದಾ ಇರಲಿ ಎಂದು  ಪ್ರಥಮ್ ಕೋರಿದರು.

    ಬಳ್ಳಾರಿ ಮೂಲದ ಆರನ, ಪತ್ರಕರ್ತೆಯಾಗಿ ಅನ್ವಿತಿಶೆಟ್ಟಿ ನಾಯಕಿಯರು. ಉಳಿದಂತೆ ಗೋಕುಲ್, ಮುನಿ, ಕಾಮಿಡಿಕಿಲಾಡಿಗಳು ಖ್ಯಾತಿಯ ಸಂತು, ರವೀಂದ್ರನಾಥ್ ಮುಂತಾದವರು ನಟಿಸುತ್ತಿದ್ದಾರೆ. ಯೋಗರಾಜಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸಾಮ್ರಾಟ್, ಸಂಕಲನ ರಘು ಅವರದಾಗಿದೆ.

  • ಆಸ್ಟ್ರೇಲಿಯಾಕ್ಕೆ 600 ಕೋಟಿ ಮೌಲ್ಯದ ಕೊಕೇನ್ ಅಕ್ರಮ ರಫ್ತು – ಭಾರತೀಯ ಮೂಲದ ದಂಪತಿಗೆ ಶಿಕ್ಷೆ

    ಆಸ್ಟ್ರೇಲಿಯಾಕ್ಕೆ 600 ಕೋಟಿ ಮೌಲ್ಯದ ಕೊಕೇನ್ ಅಕ್ರಮ ರಫ್ತು – ಭಾರತೀಯ ಮೂಲದ ದಂಪತಿಗೆ ಶಿಕ್ಷೆ

    ಲಂಡನ್: ಆಸ್ಟ್ರೇಲಿಯಾಕ್ಕೆ (Australia) 600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ರಫ್ತು ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ದಂಪತಿಗೆ ಯುಕೆನಲ್ಲಿ (U.K) ಶಿಕ್ಷೆ ವಿಧಿಸಲಾಗಿದೆ.

    ಅರ್ತಿ ಧೀರ್ (59) ಮತ್ತು ಕವಲ್ಜಿತ್ಸಿನ್ಹ್ ರೈಜಾಡಾ (35) ಶಿಕ್ಷೆಗೆ ಒಳಗಾದ ದಂಪತಿ. ಭಾರತ ಮೂಲದ (Indian Origin Couple)  ಈ ದಂಪತಿ 512 ಕಿಲೋ ಕೊಕೇನ್ ಅನ್ನು ಮೇ 2021 ರಲ್ಲಿ ಯುಕೆಯಿಂದ ಆಸ್ಟ್ರೇಲಿಯಾಕ್ಕೆ ವಾಣಿಜ್ಯ ವಿಮಾನದ ಮೂಲಕ ಕಳ್ಳಸಾಗಣಿಕೆ ಮಾಡಿದ ಪ್ರಕರಣದಲ್ಲಿ ಈಗ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ಬಾಂಬ್‌ ಬೆದರಿಕೆ – ಆಸಾಮಿ ಅಂದರ್‌!

    ಸೌತ್‌ವಾಕ್ ಕ್ರೌನ್ ಕೋರ್ಟ್‌ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ಈಲಿಂಗ್‌ನಲ್ಲಿನ ಹ್ಯಾನ್‌ವೆಲ್‌ನಿಂದ ಬಂದ ದಂಪತಿಯ 12 ರಫ್ತು ಮತ್ತು ಅಕ್ರಮ ಹಣ ವರ್ಗಾವಣೆಯ 18 ಪ್ರಕರಣದ ಕೇಸ್ ಅದೇ ನ್ಯಾಯಾಲಯದಲ್ಲಿ ಮಂಗಳವಾರ (ಫೆ.6) ರಂದು ನಡೆಯಲಿದೆ. ಇದನ್ನೂ ಓದಿ: ಆಶ್ರಯ ಕೊಟ್ಟ ಭಾರತೀಯ ವಿದ್ಯಾರ್ಥಿಯನ್ನೇ ಹೊಡೆದು ಕೊಂದ ಯುಎಸ್ ನಿರಾಶ್ರಿತ ವ್ಯಕ್ತಿ!

    ಆಸ್ಟ್ರೇಲಿಯಾನ್ ಬಾರ್ಡರ್ ಫೋರ್ಸ್ ಮಾಹಿತಿಯ ಪ್ರಕಾರ, ಯುಕೆ ಅಧಿಕಾರಿಗಳು ಧೀರ್ ಮತ್ತು ರೈಜಾದಾ, ಕೊಕೇನ್ ರವಾನೆಯನ್ನು ಪತ್ತೆಹಚ್ಚಿದ್ದಾರೆ. ಮಾದಕ ವಸ್ತುಗಳ ಕಳ್ಳಸಾಗಣೆಕೆ ಮಾಡುವ ಉದ್ದೇಶದಿಂದ ವಿಫ್ಲೈ ಸರಕು ಸೇವೆಗಳು ಎಂಬ ಕಂಪನಿಯನ್ನು ದಂಪತಿ ಸ್ಥಾಪಿಸಿದ್ದಾರೆ. ಈ ಹಿಂದೆ ಅವರು ಕೆಲಸ ಮಾಡಿದ ವಿಮಾನ ಸೇವೆ ಕಂಪನಿಯಲ್ಲಿ ಸರಕು ಸಾಗಣಿಯ ಬಗ್ಗೆ ಅವರು ತಿಳಿದುಕೊಂಡಿದ್ದರು. ಇದನ್ನೂ ಓದಿ: ಜೈಲು ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಬಾಂಬ್‌ ಬ್ಲಾಸ್ಟ್‌ – ಇಮ್ರಾನ್‌ ಖಾನ್‌ ಪಕ್ಷದ ಮೂವರ ದುರ್ಮರಣ

    ಧೀರ್ ಮಾರ್ಚ್ 2003 ರಿಂದ ಅಕ್ಟೋಬರ್ 2016 ರವರೆಗೆ ಅಲ್ಲಿ ಕೆಲಸ ಮಾಡಿದ್ದು, ರೈಜಾಡಾ ಮಾರ್ಚ್ 2014 ರಿಂದ ಡಿಸೆಂಬರ್ 2016 ರವರೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡಿದ್ದನು. ಈ ಜೋಡಿಯನ್ನು ಜೂನ್ 2021 ರಲ್ಲಿ ಮೊದಲು ಬಂಧಿಸಲಾಯಿತು. ಮನೆಯಿಂದ 52,68,180 ರೂ ಮೌಲ್ಯದ ಚಿನ್ನ ಲೇಪಿತ ಬೆಳ್ಳಿಯ ಬಾರ್‌ಗಳು, 13,69,475  ರೂ. ವಶಪಡಿಸಿಕೊಂಡಿದ್ದಾರೆ. ಸುರಕ್ಷತಾ ಠೇವಣಿ ಪೆಟ್ಟಿಗೆಯಲ್ಲಿ 63 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಖುರೇಷಿಗೆ 10 ವರ್ಷ ಜೈಲು

    ಫೆಬ್ರವರಿ 2023 ರಲ್ಲಿ ದಂಪತಿಯನ್ನು ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ. ನಂತರ ರೈಜಾಡಾ ತನ್ನ ತಾಯಿಯ ಹೆಸರಿನಲ್ಲಿ ಬಾಡಿಗೆಗೆ ಪಡೆದಿದ್ದ ಹ್ಯಾನ್‌ವೆಲ್‌ನಲ್ಲಿರುವ ಶೇಖರಣಾ ಘಟಕದಲ್ಲಿದ್ದ ಪೆಟ್ಟಿಗೆ ಮತ್ತು ಸೂಟ್‌ಕೇಸ್‌ಗಳಲ್ಲಿ ಅಡಗಿಸಿಟ್ಟ ಸುಮಾರು 31.57 ಕೋಟಿ ರೂ.ಗಳ ಹಣವನ್ನು ಎನ್‌ಸಿಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಂಪತಿ 2019 ರಿಂದ ಸುಮಾರು 22 ವಿವಿಧ ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ

    2017 ರಲ್ಲಿ ವಿಮಾ ಪಾವತಿಗಾಗಿ ತಮ್ಮ 11 ವರ್ಷದ ದತ್ತು ಪುತ್ರ ಗೋಪಾಲ್ ಸೆಜಾನಿಯನ್ನು ಕೊಲೆ ಮಾಡಿರುವುದಾಗಿ ದಂಪತಿ ಮೇಲೆ ಭಾರತದಲ್ಲಿ ಆರೋಪವಿತ್ತು. ಈ ಜೋಡಿ 2015 ರಲ್ಲಿ ಗೋಪಾಲ್‌ನನ್ನು ದತ್ತು ತೆಗೆದುಕೊಳ್ಳಲು ಗುಜರಾತ್‌ಗೆ ಪ್ರಯಾಣ ಬೆಳೆಸಿದ್ದರು. ಜೊತೆಗೆ ಗೋಪಾಲ್‌ಗೆ ಲಂಡನ್‌ನಲ್ಲಿ ಉತ್ತಮ ಜೀವನ ನೀಡುವುದಾಗಿ ಭರವಸೆ ಸಹ ನೀಡಿದ್ದರು. ಇದನ್ನೂ ಓದಿ: ಡ್ರೋನ್‌ ದಾಳಿಗೆ ಅಮೆರಿಕದ ಮೂವರು ಸೈನಿಕರು ಬಲಿ – ತಕ್ಕ ಉತ್ತರ ಕೊಡುತ್ತೇವೆ: ಬೈಡನ್‌ ಎಚ್ಚರಿಕೆ

  • ದೆಹಲಿ ವಿಮಾನ ನಿಲ್ದಾಣದಲ್ಲಿ 17 ಕೋಟಿ ರೂ. ಮೌಲ್ಯದ ಕೊಕೇನ್ ವಶ – ಇಬ್ಬರು ಕೀನ್ಯಾ ಪ್ರಜೆಗಳ ಬಂಧನ

    ದೆಹಲಿ ವಿಮಾನ ನಿಲ್ದಾಣದಲ್ಲಿ 17 ಕೋಟಿ ರೂ. ಮೌಲ್ಯದ ಕೊಕೇನ್ ವಶ – ಇಬ್ಬರು ಕೀನ್ಯಾ ಪ್ರಜೆಗಳ ಬಂಧನ

    ನವದೆಹಲಿ: ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಕಾರ್ಯಾಚರಣೆ ಮುಂದುವರೆಸಿದ್ದು, ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ (Airport) ಕೊಕೇನ್ (Cocaine) ಹೊಂದಿದ್ದ ಕೀನ್ಯಾ (Kenya) ಪ್ರಜೆಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಂಧಿತ ಕೀನ್ಯಾ ಪ್ರಜೆ ನೈರೋಬಿಯಾದಿಂದ ಆಗಮಿಸಿದ್ದು, ಡಿಆರ್‌ಐ ಅಧಿಕಾರಿಗಳು ಅನುಮಾನಗೊಂಡು ಆತನ ಲಗೇಜ್ ಅನ್ನು ಪರಿಶೀಲಿಸಿದಾಗ ಸುಮಾರು 1,698 ಗ್ರಾಂ ಕೊಕೇನ್ ಪತ್ತೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಅಂದಾಜು ಮೌಲ್ಯ ಸುಮಾರು 17 ಕೋಟಿ ರೂ.ಗಳಾಗಿದ್ದು, ಅಧಿಕಾರಿಗಳು ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋದಲ್ಲಿರುವುದು ಪತ್ನಿ ಎಂದು ಶಂಕಿಸಿ ಕೊಲೆಗೆ ಯತ್ನಿಸಿದ ಪತಿ

    ಅಧಿಕಾರಿಗಳ ಪ್ರಕಾರ, ಆರೋಪಿಯು ಮುಂಬೈಗೆ (Mumbai) ಪ್ರಯಾಣಿಸಲು ಟಿಕೆಟ್ ಹೊಂದಿದ್ದು, ಮುಂಬೈನಲ್ಲಿ ಈ ಕೊಕೇನ್ ಅನ್ನು ವಿತರಣೆ ಮಾಡಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಡಿಆರ್‌ಐ ಅಧಿಕಾರಿಗಳ ಕಾರ್ಯಾಚರಣೆಯಿಂದ ಕೊಕೇನ್ ವಿತರಕ ಹಾಗೂ ಸ್ವೀಕರಿಸಬೇಕಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಕೊಕೇನ್ ಅನ್ನು ಸ್ವೀಕರಿಸಬೇಕಿದ್ದ ಮಹಿಳೆ ಕೂಡಾ ಕೀನ್ಯಾ ದೇಶದ ಪ್ರಜೆಯಾಗಿದ್ದು, ಆಕೆಯನ್ನು ಮುಂಬೈನ ವಸಾಯಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ

    1985ರ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯ ನಿಬಂಧನೆಗಳ ಪ್ರಕಾರ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 7 ಮಂದಿ ಅರೆಸ್ಟ್

    2023ರ ಜನವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಡಿಆರ್‌ಐ ದೇಶಾದ್ಯಂತ 42 ಕೊಕೇನ್ ಮತ್ತು ಹೆರಾಯಿನ್ ಪ್ರಕರಣವನ್ನು ಪತ್ತೆಹಚ್ಚಿದೆ. ಒಟ್ಟು 31 ಕೆಜಿಗೂ ಅಧಿಕ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದು, 96 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    ನವದೆಹಲಿ: ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಅಯನ್ ಸಿನಿಮಾದಲ್ಲಿರುವ ದೃಶ್ಯದಂತೆ ತಮ್ಮ ಹೊಟ್ಟೆಯೊಳಗೆ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಸಾಗಿಸುತ್ತಿದ್ದ ಇಬ್ಬರು ಚಾಲಾಕಿ ಮಹಿಳೆಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉಗಾಂಡಾದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿ 181 ಕ್ಯಾಪ್ಸುಲ್‌ಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 28 ಕೋಟಿ ಮೌಲ್ಯದ ಕೊಕೇನ್ ಪತ್ತೆಯಾಗಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಡ್ರೋನ್ ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

    ಇಬ್ಬರು ಮಹಿಳೆಯರು ಸುಮಾರು 2 ಕೆಜಿ ಕೊಕೇನ್ ಅನ್ನು ಮಾತ್ರೆಗಳಲ್ಲಿ ಅಡಗಿಸಿಟ್ಟು ನುಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಒಬ್ಬ ಮಹಿಳೆ ನಿನ್ನೆ ಸಿಕ್ಕಿಬಿದ್ದಿದ್ದರು. ಈಕೆ ತನ್ನ ಹೊಟ್ಟೆಯೊಳಗೆ 81 ಮಾತ್ರೆಗಳನ್ನು ತುಂಬಿಕೊಂಡಿದ್ದರು. ಆಕೆಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸುಮಾರು 891 ಗ್ರಾಂ ತೂಕದ ತೂಕದ ಕೊಕೇನ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 13.6 ಕೋಟಿಗಳಷ್ಟಿದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಮೇ 22 ರಂದು ಬಂಧಿತ ಮಹಿಳೆಯ ಹೊಟ್ಟೆಯಲ್ಲಿ ಸುಮಾರು 80 ಕ್ಯಾಪ್ಸುಲ್‌ಗಳು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಆಕೆಯನ್ನು ಇದೇ ಆಸ್ಪತ್ರೆಗೆ ದಾಖಲಿಸಿ 0.957 ಕೆಜಿ ತೂಕದ ಕೊಕೇನ್ ಇರುವುದನ್ನು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 14 ಕೋಟಿಗಳಷ್ಟಿತ್ತು ಎಂದು ಅಂದಾಜಿಸಿದ್ದರು.