Tag: Cobra Force

  • ಭದ್ರತಾ ಪಡೆಯನ್ನು ಗುರಿಯಾಗಿಸಿ ಸುಧಾರಿತ ಐಇಡಿ ಸ್ಫೋಟ

    ಭದ್ರತಾ ಪಡೆಯನ್ನು ಗುರಿಯಾಗಿಸಿ ಸುಧಾರಿತ ಐಇಡಿ ಸ್ಫೋಟ

    ರಾಂಚಿ: ಇಂದು ಬೆಳಗ್ಗಿನ ಜಾವ ಸುಮಾರು 5 ಗಂಟೆಗೆ ಜಾರ್ಖಂಡ್ ರಾಜ್ಯದ ಸರೈಕೆಲ್ಲಾ ಪ್ರದೇಶದಲ್ಲಿ ಸುಧಾರಿತ ಐಇಡಿ ಸ್ಫೋಟಗೊಂಡಿದೆ. ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಲಾಗಿದೆ.

    ಸರೈಕೆಲ್ಲಾ ಪ್ರದೇಶದ ಕುಚೈ ಪ್ರದೇಶದದಲ್ಲಿ ಭದ್ರತಾ ಪಡೆಯ ನೆಲೆಯ ಮೇಲೆ ಕುಚೈ ಎಂಬಲ್ಲಿ ಐಇಡಿ ಸ್ಫೋಟಗೊಂಡಿದೆ. ಸ್ಥಳದಲ್ಲಿದ್ದ 209 ಕೋಬ್ರಾ ಪಡೆ (Commando Battalion for Resolute Action) ಮತ್ತು ಪೊಲೀಸರನ್ನೇ ಗುರಿಯಾಗಿಸಲಾಗಿತ್ತು.

    ಘಟನೆಯಲ್ಲಿ 8 ಜನ ಕೋಬ್ರಾ ಪಡೆಯ ಸಿಬ್ಬಂದಿ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ರಾಂಚಿಯ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ ಎಂಬ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.