Tag: cobra film

  • ಪ್ಯಾನ್ ಇಂಡಿಯಾ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

    ಪ್ಯಾನ್ ಇಂಡಿಯಾ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

    `ಕೆಜಿಎಫ್’ (Kgf) ಮತ್ತು `ಕೆಜಿಎಫ್ 2′ ಸಕ್ಸಸ್ ನಂತರ ಶ್ರೀನಿಧಿ ಶೆಟ್ಟಿ (SrinidhI Shetty) ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚ್ತಿದ್ದಾರೆ. ಹೀಗಿರುವಾಗ ಮಂಗಳೂರು ಬ್ಯೂಟಿ ಶ್ರೀನಿಧಿ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ.

    ಮಾಡೆಲ್ ಆಗಿದ್ದವರು ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್’ ಮೂಲಕ ಯಶ್‌ಗೆ (Yash) ನಾಯಕಿಯಾಗಿ ಎಂಟ್ರಿ ಕೊಟ್ಟರು. ರೀನಾ ಆಗಿ ಸೈ ಎನಿಸಿಕೊಂಡರು. ಬಳಿಕ `ಕೆಜಿಎಫ್ ಪಾರ್ಟ್ 2’ನಲ್ಲೂ (Kgf 2) ಅಚ್ಚುಕಟ್ಟಾಗಿ ನಟಿಸಿದ್ದರು. ಈ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚಿದ್ದರು ಕೂಡ ಸಿನಿಮಾ ಸೆಲೆಕ್ಷನ್ ವಿಷ್ಯದಲ್ಲಿ ಸಖತ್ ಚ್ಯೂಸಿಯಾದರು.

    ಇತ್ತೀಚೆಗೆ ತಮಿಳು ನಟ ವಿಕ್ರಮ್ (Vikram) ನಟನೆಯ `ಕೋಬ್ರಾ’ದಲ್ಲಿ  (Cobra) ನಟಿಸಿದ್ದರು. ಈ ನಟಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಸಂಭಾವನೆಯನ್ನ ಕೂಡ ಹೆಚ್ಚಿಸಿಕೊಂಡಿದ್ದಾರೆ. ಶ್ರೀನಿಧಿ ಶೆಟ್ಟಿ ತಮ್ಮ ಮುಂಬರುವ ಚಿತ್ರಗಳಿಗೆ 5 ಕೋಟಿ ರೂ. ಡಿಮ್ಯಾಂಡ್ ಮಾಡ್ತಿದ್ದಾರಂತೆ. ಈ ಸುದ್ದಿ ಕೇಳಿ ನಿರ್ಮಾಪಕರು ದಂಗಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ಶ್ರೀನಿಧಿ ಇದೀಗ ಹೊಸ ಕಥೆಗಳನ್ನ ಕೇಳ್ತಿದ್ದಾರೆ. ಸೂಕ್ತ ಕಥೆಯ ಮೂಲಕ ನಟಿ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿಯಾನ್ ವಿಕ್ರಮ್ ಜೊತೆ ನಟಿಸಲು ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಚಿಯಾನ್ ವಿಕ್ರಮ್ ಜೊತೆ ನಟಿಸಲು ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ನ್ನಡತಿ ಶ್ರೀನಿಧಿ ಶೆಟ್ಟಿ `ಕೆಜಿಎಫ್ 2′ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಸದ್ಯ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ `ಕೋಬ್ರಾ’ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ, ತಮ್ಮ ಸಂಭಾವನೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ ಸಕ್ಸಸ್ ನಂತರ ʻಕೋಬ್ರಾʼ ಚಿತ್ರಕ್ಕೆ ಬರೋಬ್ಬರಿ ಎರಡು ಪಟ್ಟು ಜಾಸ್ತಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಯಶ್ ಜೊತೆ ಕೆಜಿಎಫ್‌ನಲ್ಲಿ ಮಿಂಚಿದ ನಂತರ ಈಗ ಚಿಯಾನ್ ವಿಕ್ರಮ್ ಜತೆ ಡ್ಯುಯೆಟ್ ಹಾಡಲು ಶ್ರೀನಿಧಿ ರೆಡಿಯಾಗಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಶ್ರೀನಿಧಿ ಶೆಟ್ಟಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿರುವ ಬಗ್ಗೆ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳಿನ ʻಕೋಬ್ರಾʼ ಚಿತ್ರಕ್ಕೆ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

    `ಕೆಜಿಎಫ್ 2′ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದಿದ್ದ ಶ್ರೀನಿಧಿ ಶೆಟ್ಟಿ, ಈಗ ತಮಿಳಿನ ಚೊಚ್ಚಲ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಟಿಸಿರುವ ಎರಡು ಚಿತ್ರದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ನಾಯಕಿ, ಈಗ ತಮ್ಮ ಸಂಭಾವನೆ ವಿಚಾರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಮೊದಲ ಬಾರಿಗೆ ಚಿಯಾನ್‌ ವಿಕ್ರಮ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕೆಜಿಎಫ್‌ ನಟಿ ಶ್ರೀನಿಧಿ ನಟನೆಯ ಚಿತ್ರ ʻಕೋಬ್ರಾʼ ಆಗಸ್ಟ್ 11ರಂದು ತೆರೆಗೆ ಅಬ್ಬರಿಸುತ್ತಿದೆ.  ಇನ್ನು ಕಾಲಿವುಡ್‌ನಲ್ಲಿ ಶ್ರೀನಿಧಿ ಶೆಟ್ಟಿ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡುತ್ತಾರೆ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಈವೆಂಟ್‌ಗೆ ಚಿಯಾನ್ ವಿಕ್ರಮ್ ಎಂಟ್ರಿ: ಆರೋಗ್ಯದ ಕುರಿತು ನಟ ಸ್ಪಷ್ಟನೆ

    ಈವೆಂಟ್‌ಗೆ ಚಿಯಾನ್ ವಿಕ್ರಮ್ ಎಂಟ್ರಿ: ಆರೋಗ್ಯದ ಕುರಿತು ನಟ ಸ್ಪಷ್ಟನೆ

    ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಈಗ ಆರೋಗ್ಯವಾಗಿದ್ದಾರೆ. ನಿನ್ನೆಯಷ್ಟೇ ನಡೆದ `ಕೋಬ್ರಾ’ ಚಿತ್ರದ ಕಾರ್ಯಕ್ರಮದಲ್ಲಿ ವಿಕ್ರಮ್‌ ಭಾಗಿಯಾಗಿ ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ತಮಗೆ ಹಾರ್ಟ್ ಅಟ್ಯಾಕ್ ಆಗಿದೆ ಅನ್ನೋ ಸುಳ್ಳು ವದಂತಿಗೆ ತಮಾಷೆ ಮಾಡಿ, ಮಾತನಾಡಿದ್ದಾರೆ.

    ಕಳೆದ ಸೋಮವಾರ ನಟ ವಿಕ್ರಮ್‌ಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ನಟನಿಗೆ ಹೃದಯಾಘಾತವಾಗಿದೆ ಎಂದು ಸುದ್ದಿ ಹಬ್ಬಿತ್ತು. ನಂತರ ವಿಕ್ರಮ್ ಪುತ್ರ ದ್ರುವಾ ತಂದೆಯ ಆರೋಗ್ಯದ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ಅವರಿಗೆ ಹಾರ್ಟ್ ಅಟ್ಯಾಕ್ ಆಗಿಲ್ಲ, ಇದು ವದಂತಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದ ಕಾರಣ ವೈದ್ಯರನ್ನ ಭೇಟಿ ಆಗಿದ್ದೇವು ಎಂದು ವಿವರಿಸಿದ್ದರು. ಇದನ್ನೂ ಓದಿ:ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕೀಯ ಗಣ್ಯರು

    ಇದೀಗ ʻವಿಕ್ರಮ್ʼ ನಟನೆಯ ಕೋಬ್ರಾ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಎದೆಯ ಮೇಲೆ ಕೈಯಿಟ್ಟು ಅಣಿಕಿಸುತ್ತಾ, ನನಗೆ ಅರಿವಿಲ್ಲದೇ ಎದೆಯ ಮೇಲೆ ಕೈ ಹಾಕಿದೆ. ಅದನ್ನು ಹೃದಯಾಘಾತ ಎಂದು ಕರೆದರು. ನನ್ನ ಆರೋಗ್ಯದಲ್ಲಿ ಯಾವ ತೊಂದರೆಯೂ ಇಲ್ಲ. ಇದನ್ನು ಖುದ್ದಾಗಿ ಹೇಳಲು ಬಂದಿದ್ದೇನೆ ಎಂದು ತಮ್ಮ ಆರೋಗ್ಯದ ಕುರಿತು ವಿಕ್ರಮ್ ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]