Tag: coastal

  • ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    – ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ

    ಬೆಂಗಳೂರು: ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ನಿಮ್ಮ ಬೇಡಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಭರವಸೆ ನೀಡಿದರು.

    ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ʻಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿʼ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

    ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ ಎಂದು ಚಟಾಕಿ ಹಾರಿಸಿದರು.

    ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ ಕೊಟ್ಟವರು, ಧಾರ್ಮಿಕ ಶಕ್ತಿ ಕೊಟ್ಟವರು, ಬ್ಯಾಂಕ್ ವ್ಯವಸ್ಥೆ ಕೊಟ್ಟವರು ಈ ಕರಾವಳಿ ಜನ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಈ ಡಿಕೆ ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ. ನಿಮ್ಮ ಸಂಸ್ಕೃತಿ, ಇತಿಹಾಸ ದೇಶದ ಯಾವುದೇ ಭಾಗದಲ್ಲೂ ಇಲ್ಲ. ನೀವೆಲ್ಲರೂ ಕರ್ನಾಟಕ ರಾಜ್ಯದ ಆಸ್ತಿ ಎಂದು ಗುಣಗಾನ ಮಾಡಿದರು.

    ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ನಾನು ನಿಮ್ಮ ಭಾಗದ ಶಾಸಕರು, ಸ್ಪೀಕರ್ ಖಾದರ್ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

  • Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?

    Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?

    ಬೆಂಗಳೂರು: ಜುಲೈ ಮೊದಲ ವಾರದಲ್ಲೇ ರಾಜ್ಯದಲ್ಲಿ ಭರ್ಜರಿ ಮುಂಗಾರು ಮಳೆಯ (Mansoon) ಆರ್ಭಟ ಜೋರಾಗಿದೆ. ಸಾಮಾನ್ಯವಾಗಿ 58 ಮಿಲಿಮೀಟರ್‌ ಮಲೆಯಾಗುತ್ತಿದ್ದ ಜುಲೈ ಮೊದಲವಾರದಲ್ಲಿ ಈ ಬಾರಿ 78 ಮಿಲಿಮೀಟರ್‌ ಮಳೆಯಾಗಿದೆ (Karnaraka Rains). ಇದು ಹಿಂದಿನ ಪ್ರಮಾಣಕ್ಕಿಂತ ಶೇ.25ಕ್ಕೂ ಹೆಚ್ಚಾಗಿದೆ.

    ಅದರಲ್ಲೂ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದಿದೆ. ಕಳೆದ ಭಾನುವಾರ ಅಂತೂ, ರಾಜ್ಯದ ಕರಾವಳಿಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡದಲ್ಲಿ 264 ಮಿಲಿಮೀಟರ್, ಉಡುಪಿಯಲ್ಲಿ 210 ಮಿಲಿಮೀಟರ್, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ 168 ಮಿಲಿಮೀಟರ್ ಮಳೆಯಾಗಿದೆ. ಪರಿಣಾಮ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ನದಿ ತೊರೆಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಸಾಕಷ್ಟು ಅವಾಂತರಗಳು ಉಂಟಾಗಿವೆ. ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಪ್ರಕಟಿಸಲಾಗಿದ್ದು, ಹಲವು ತಾಲೂಕುಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

    ಎಲ್ಲೆಲ್ಲಿ ಏನಾಯ್ತು?
    * ಉಡುಪಿ ನಗರ ಜಲಾವೃತ: ಉಡುಪಿ ನಗರ ಜಲಾವೃತವಾಗಿದೆ. ಇಂದ್ರಾಣಿ ತೀರ್ಥ ನದಿ ಹರಿಯುವಲ್ಲೆಲ್ಲಾ ಜನಜೀವನ ಅಸ್ತವ್ಯಸ್ತವಾಗಿದೆ. ಮಗು, ವೃದ್ಧೆ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣ ಮಠ ಪಾರ್ಕಿಂಗ್ ಏರಿಯಾ ಜಲಾವೃತವಾಗಿದೆ.
    * ರಸ್ತೆಗೆ ನುಗ್ಗಿದ ಮಳೆ ನೀರು: ಉಡುಪಿಯ ಮೂಡುಬೆಟ್ಟು-ಕೊಡವೂರು ರಸ್ತೆ ಜಲಾವೃತವಾಗಿದೆ. ಭಾರೀ ಮಳೆ ನೀರಿನ ನಡುವೆ ಖಾಸಗಿ ಬಸ್ಸು ಓಡಾಟ ನಡೆಸಿದೆ.
    * ಹೊಟೆಲ್, ದೇಗುಲ ಜಲಾವೃತ: ಉಡುಪಿಯ ಕಡಿಯಾಳಿಯಲ್ಲಿರುವ ಹೋಟೆಲ್ ಒಳಗೆಲ್ಲಾ ನೀರು ನುಗ್ಗಿದೆ, ಮಠದ ಬೆಟ್ಟು ವ್ಯಾಪ್ತಿಯ ಬನ್ನಂಜೆ ಶನೇಶ್ವರ ಮಂದಿರ ಜಲಾವೃತವಾಗಿದೆ.
    * ಬೋಟ್‌ಗಳಲ್ಲಿ ರಕ್ಷಣೆ: ಉಡುಪಿಯ ಚಕ್ರತೀರ್ಥ-ಸಗ್ರಿ-ಗುಂಡಿಬೈಲು-ಕಲ್ಸಂಕ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿಯಿದೆ. ಬೋಟ್‌ಗಳ ಮೂಲಕ ಜನರ ರಕ್ಷಣೆ ಮಾಡಲಾಗ್ತಿದೆ. ಜನರ ಜೊತೆ ನಾಯಿ ಬೆಕ್ಕುಗಳನ್ನು ಕಾಪಾಡಲಾಗ್ತಿದೆ.
    * ಮಣಿಪಾಲ ಜಲಾವೃತ: ಉಡುಪಿಯ ಮಣಿಪಾಲದ ರಸ್ತೆಗಳಲ್ಲಿ ನದಿಯಂತೆ ನೀರು ಹರಿದಿದೆ. ಹಲವು ಲೇಔಟ್‌ಗಳು ಜಲಾವೃತವಾಗಿವೆ.
    * ಗುಂಡಬಾಳ ಪ್ರವಾಹ: ಹೊನ್ನಾವರದ ಗುಂಡಬಾಳ ನದಿ ಉಕ್ಕೇರಿದ್ದು, ನದಿಪಾತ್ರದ ತೋಟ-ಮನೆಗಳಿಗೆ ನೀರು ನುಗ್ಗಿದೆ.. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗ್ತಿದ್ದು, ಗುಡ್ಡೆಬಾಳೆ ಗ್ರಾಮದ ಜನ ಆತಂಕದಲ್ಲಿದ್ದಾರೆ.
    * ರಕ್ಕಸ ಅಲೆಗಳಿಗೆ ಆಹುತಿ: ಅರಬ್ಬಿ ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಹೆಚ್ಚಿದ್ದು, ಅಂಕೋಲದ ತರಂಗಮೇಟ್ ಭಾಗದಲ್ಲಿ ಕಡಲ ಕೊರೆತದಿಂದ ತೆಂಗಿನ ಮರಗಳು ಉರುಳಿವೆ. ತಡೆಗೋಡೆ ಕೊಚ್ಚಿಹೋಗಿದೆ.
    * ಕದ್ರಾ ಡ್ಯಾಂನಿಂದ ನೀರು ರಿಲೀಸ್: ಉತ್ತರ ಕನ್ನಡದ ಕದ್ರಾ ಡ್ಯಾಂ ಬಹುತೇಕ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್‌ಗಳ ಮೂಲಕ 10,600 ಕ್ಯೂಸೆಕ್ ನೀರನ್ನು ರಿಲೀಸ್ ಮಾಡಲಾಗ್ತಿದೆ.

    ಮಲೆನಾಡಿನಲ್ಲೂ ನಿಲ್ಲದ ಮಳೆ:
    ಬರೀ ಕರಾವಳಿ ಮಾತ್ರವಲ್ಲ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಹಲವೆಡೆ ಉತ್ತಮ ಮಳೆ ಬೀಳ್ತಿದೆ. ಶಿವಮೊಗ್ಗದಲ್ಲಿ 118 ಮಿಲಿಮೀಟರ್, ವಿಜಯಪುರದಲ್ಲಿ 89 ಮಿಲಿಮೀಟರ್, ಬೆಳಗಾವಿಯಲ್ಲಿ 87.5 ಮಿಲಿಮೀಟರ್, ಚಿಕ್ಕಮಗಳೂರಿನಲ್ಲಿ 67.5 ಮಿಲಿಮೀಟರ್, ಕೊಡಗಿನಲ್ಲಿ 58.5 ಮಿಲಿಮೀಟರ್ ಮಳೆಯಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಹಾರಂಗಿ ಜಲಾಶಯದ 4 ಕ್ರಸ್ಟ್ ಗೇಟ್ ಓಪನ್ ಮಾಡಿ, 1 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.

    ಇನ್ನೂ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಕಾರಣ ನದಿಗಳ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆ ಯಕ್ಸಾಂಬಾ ಬಳಿಯ ಮುಲ್ಲಾಣಕಿ ದರ್ಗಾಗೆ ದೂದ್‌ಗಂಗಾ ನೀರು ನುಗ್ಗಿದೆ. ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ ಸೇರಿ 5 ಸೇತುವೆಗಳು ಮುಳುಗಡೆಯಾಗಿದೆ. ಹಾಸನ, ಚಿಕ್ಕಮಗಳೂರಲ್ಲಿ ಧಾರಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿವೆ. ದಾವಣಗೆರೆಯಲ್ಲೂ ಮಳೆಯಾಗಿದೆ. ಇತ್ತ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಆಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

  • ರಾಜ್ಯದೆಲ್ಲೆಡೆ 1 ವಾರ ಮಳೆಯ ಮುನ್ಸೂಚನೆ – ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ರಾಜ್ಯದೆಲ್ಲೆಡೆ 1 ವಾರ ಮಳೆಯ ಮುನ್ಸೂಚನೆ – ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯದ (Karnataka) ಹಲವೆಡೆ 1 ವಾರದ ವರೆಗೆ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.

    ಕರಾವಳಿ (Coastal) ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಲ್ಲಿ ಮಳೆಯ ಸೂಚನೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ 3ನೇ ವಂದೇ ಭಾರತ್ ರೈಲು – ಇಂದು ಪ್ರಾಯೋಗಿಕ ಸಂಚಾರ

    ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ನೈರುತ್ಯ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ- ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಾವಳಿ ಭಾಗದಲ್ಲಿಂದು ರೆಡ್ ಅಲರ್ಟ್ – ಬೆಂಗ್ಳೂರಲ್ಲಿ ದಿನವಿಡೀ ತುಂತುರು ಮಳೆ

    ಕರಾವಳಿ ಭಾಗದಲ್ಲಿಂದು ರೆಡ್ ಅಲರ್ಟ್ – ಬೆಂಗ್ಳೂರಲ್ಲಿ ದಿನವಿಡೀ ತುಂತುರು ಮಳೆ

    -ರಾಜ್ಯಾದ್ಯಂತ ಮುಂದಿನ 3 ದಿನ ಭಾರೀ ಮಳೆಯ ಸೂಚನೆ

    ಬೆಂಗಳೂರು: ನೈರುತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆ ರಾಜ್ಯಾದ್ಯಂತ (Karnataka) ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ (Coastal) ಭಾಗಕ್ಕೆ ಇಂದು (ಮಂಗಳವಾರ) ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ.

    ಉತ್ತರ ಒಳನಾಡಿನ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೋರಾದ ಮಳೆ ಸಾಧ್ಯತೆಯಿದ್ದು, ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಹಾಗೂ ಗುರುವಾರಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.

    ಮಾತ್ರವಲ್ಲದೇ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬುಧವಾರದಿಂದ 4 ದಿನಗಳ ಕಾಲ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ 5 ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ 5 ದಿನಗಳ ಕಾಲ ಬಿರುಗಾಳಿಯ ವೇಗ ಗಂಟೆಗೆ 55 ಕಿ.ಮೀ ಇರಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ – ಉಕ್ಕಿ ಹರಿದ ಕಾವೇರಿ ನದಿ; ಬಡಾವಣೆ ಜಲಾವೃತ

    ಊಟಿಯಂತಾದ ಬೆಂಗಳೂರು:
    ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ತುಂತುರು ಮಳೆ ಪ್ರಾರಂಭವಾಗಿದೆ. ದಿನವಿಡೀ ನಗರದಲ್ಲಿ ತುಂತುರು ಮಳೆಯ ಸಿಂಚನವಿರಲಿದೆ. ನಗರದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಸೋಮವಾರ ಇಡೀ ದಿನ ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿದಿತ್ತು. ಇದನ್ನೂ ಓದಿ: ಕಣ್ಣು ಕೆಂಪಾಗಿಸುತ್ತಿದೆ `ಮದ್ರಾಸ್ ಐ’ – ಮಕ್ಕಳೇ ಇದರ ಟಾರ್ಗೆಟ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

    ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

    ನವದೆಹಲಿ: ಅರಬ್ಬೀ ಸಮುದ್ರದ (Arabian Sea) ಕರಾವಳಿ (Coastal) ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ (Cyclone Biparjoy) ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.

    ಪ್ರಸ್ತುತ ಚಂಡಮಾರುತ ಗೋವಾದಿಂದ (Goa) ಪಶ್ಚಿಮಕ್ಕೆ 690 ಕಿ.ಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಹಾಗೂ ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿ.ಮೀ ದೂರದಲ್ಲಿ ಇದ್ದು, ಗಂಟೆಗೆ 145 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

    ಶನಿವಾರ ಹಾಗೂ ಭಾನುವಾರ ಬಿಪರ್ಜೋಯ್ ಚಂಡಮಾರುತದ ಅಬ್ಬರ ಜೋರಾಗಲಿದೆ. ಗುಜರಾತ್, ಮಹಾರಾಷ್ಟ್ರದ ಕರಾವಳಿಯಲ್ಲಿ ಉಬ್ಬರದ ಭೀತಿಯಿದೆ. ರಾಜ್ಯ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಭಾವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

    ಚಂಡಮಾರುತದಿಂದಾಗಿ ಜೂನ್ 10, 11 ಹಾಗೂ 12ರಂದು ಗಾಳಿಯ ವೇಗ ಗಂಟೆಗೆ 45-55 ಕಿ.ಮೀಗೆ ಏರುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಹಾಗೂ ಗುಡುಗು ಸಹಿತ ಮಳೆ ಸುರಿಯಬಹುದು. ಇದನ್ನೂ ಓದಿ:  ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

  • ಆಪರೇಷನ್ ನ್ಯೂ ಫೇಸ್, ಕರಾವಳಿ ಫೋಕಸ್ – ಏನಿದು ಶಾ ತಂತ್ರ?

    ಆಪರೇಷನ್ ನ್ಯೂ ಫೇಸ್, ಕರಾವಳಿ ಫೋಕಸ್ – ಏನಿದು ಶಾ ತಂತ್ರ?

    ಬೆಂಗಳೂರು: ಅಮಿತ್ ಶಾ (Amit Shah) ಆಗಮನಕ್ಕೂ ಮುನ್ನವೇ ಕರಾವಳಿ ಪಿಚ್ ರಿಪೋರ್ಟ್ ಹೈಕಮಾಂಡ್‌ಗೆ ತಲುಪಿದೆ. ಕಳೆದ ಸಲ 19 ಸೀಟ್‌ಗಳಲ್ಲಿ 3 ಸೀಟ್ ಮಾತ್ರ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದ ಬಿಜೆಪಿ ಈಗಲೂ ಅದೇ ಮುನ್ನಡೆಗೆ ಕಸರತ್ತು ನಡೆಸಿದೆ. ಆದರೆ ಈ ಸಲ ಕೆಲ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದರೆ ಹೊಸ ಮುಖಗಳಿಗೆ ಆದ್ಯತೆ ಕೊಡಿ ಎಂಬ ವರದಿ ಕೂಡಾ ಹೈಕಮಾಂಡ್‌ಗೆ ರವಾನೆ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಕಳೆದ ಸಲ ಹೊಸ ಮುಖಗಳಲ್ಲಿ ಕಮಲ ಅರಳಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಹಿಂದೂಗಳ ಹೆಚ್ಚು ಹತ್ಯೆ ಎಂಬ ಬಿಜೆಪಿ (BJP) ಅಸ್ತ್ರ ಸಕ್ಸಸ್ ಆಗಿತ್ತು. 2018ರ ಚುನಾವಣೆ ಉದ್ದಕ್ಕೂ ಪರೇಶ್ ಮೇಸ್ತಾ ಸೇರಿದಂತೆ ಹಲವು ಪ್ರಕರಣಗಳನ್ನು ಬಿಜೆಪಿ ಪ್ರಸ್ತಾಪಿಸಿತ್ತು. ಆದರೆ ಈಗ ಬಿಜೆಪಿ ಸರ್ಕಾರವೇ ಇರುವುದರಿಂದ ಹಿಂದುತ್ವ ಅಸ್ತ್ರ ಪ್ರಯೋಗ ಎಷ್ಟರಮಟ್ಟಿಗೆ ಗೆಲುವು ತಂದುಕೊಡುತ್ತದೆ ಎಂಬ ಚರ್ಚೆಗಳು ಶುರುವಾಗಿದೆ.

    ಫೆಬ್ರವರಿ 11ರಂದು ಅಮಿತ್ ಶಾ ಅವರ ಕರಾವಳಿ ಭಾಗದಲ್ಲಿ (Coastal Area) ಸಂಚಾರ, ಸಂಘಟನಾ ಸಭೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಕರಾವಳಿ ಜಿಲ್ಲೆಗಳ ಬಗ್ಗೆ ಬಿಜೆಪಿ ಹೆಚ್ಚು ಗಮನ ಕೊಡುತ್ತಿದೆ ಎನ್ನಲಾಗಿದೆ. ಈಗಾಗಲೇ 3 ಜಿಲ್ಲೆಗಳ 19 ಕ್ಷೇತ್ರಗಳ ಬಗ್ಗೆ ಅಮಿತ್ ಶಾಗೆ ಪಿಚ್ ರಿಪೋರ್ಟ್ ತಲುಪಿದೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಇದನ್ನೂ ಓದಿ: ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಉದಾಹರಿಸಿ ಖರ್ಗೆಗೆ ಮೋದಿ ತಿರುಗೇಟು

    ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಸ್ಥಾನಗಳಲ್ಲಿ 7 ಸ್ಥಾನವನ್ನು ಬಿಜೆಪಿ ಹಾಗೂ 1 ಸ್ಥಾನವನ್ನು ಕಾಂಗ್ರೆಸ್ ಗೆದ್ದಿತ್ತು. ಉಡುಪಿ ಜಿಲ್ಲೆಯಲ್ಲಿ 5ಕ್ಕೆ 5 ಸ್ಥಾನಗಳನ್ನೂ ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಉತ್ತರಕನ್ನಡ ಜಿಲ್ಲೆಯಲ್ಲಿ 6 ಸ್ಥಾನಗಳಲ್ಲಿ 4 ಬಿಜೆಪಿ, 2 ಕಾಂಗ್ರೆಸ್ ಗೆದ್ದುಕೊಂಡಿತ್ತು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದಿದ್ದ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಹೊಸ ಮುಖಗಳೇ ಇದ್ದವು. ಈಗಲೂ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್‌ನಿಂದ ನಾನಾ ತಂತ್ರಗಳು ನಡೆಯುತ್ತಿವೆ.

    ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದರೆ ಹೊಸ ಮುಖ ಹುಡುಕಾಟಕ್ಕೂ ಹೈಕಮಾಂಡ್ ಸಂದೇಶ ರವಾನಿಸಿರುವ ಬಗ್ಗೆ ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದೆ. ಹಾಗಾದರೆ ಕರಾವಳಿಯಲ್ಲಿ ಬಿಜೆಪಿ 2018ರ ಹವಾ ಉಳಿಸಿಕೊಳ್ಳುತ್ತಾ? ಈ ಸಲ ಚಾಣಕ್ಯರ ಪ್ರಯೋಗ ಕುತೂಹಲ ಏನು ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಬಿಎಸ್‌ವೈಗೆ ಬಹುಪರಾಕ್, ವಿಜಯೇಂದ್ರಗೆ ಸಮಾವೇಶಗಳ ಹೊಣೆ – ಬಿಜೆಪಿ ಎಚ್ಚರಿಕೆ ನಡೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 3 ದಿನ ಮಳೆ

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 3 ದಿನ ಮಳೆ

    ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇಲ್ಮೈ ಸುಳಿಗಾಳಿ ಹಿನ್ನೆಲೆ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು

    RAIN IN BENGALURU

    ಬೆಂಗಳೂರಿನಲ್ಲಿ ಶನಿವಾರವೇ ಮಳೆ ಪ್ರಾರಂಭವಾಗಿದ್ದು, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಹಾಗೂ ಗೊರಗುಂಟೆ ಪಾಳ್ಯದ ಸುತ್ತಮುತ್ತ ಮಳೆಯಾಗಿದೆ. ವಾತಾವರಣ ಇದೇ ರೀತಿ 3 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ

    Live Tv

  • ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಡುಪಿ ಮತ್ತು ಮಂಗಳೂರಿನ ಕರಾವಳಿ ಸ್ಥಳವು ಸಾತ್ವಿಕ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇದು ಉಪಾಹಾರ, ಬಾಳೆ ಎಲೆ ಊಟಕ್ಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಆದರೆ ಪತ್ರೋಡೆ ರೆಸಿಪಿ ಸಾಂಪ್ರದಾಯಿಕ ಸ್ನ್ಯಾಕ್ಸ್‌ ಪಾಕವಿಧಾನವಾಗಿದ್ದು, ಕೊಲೊಕೇಶಿಯಾ/ಕೆಸು ಎಲೆಯಲ್ಲಿ ಮಾಡಲಾಗುತ್ತದೆ. ಈ ವಿಧಾನ ಸುಲಭವಾಗಿದ್ದು, ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಉದ್ದಿನ ಬೇಳೆ – 2 ಟೇಬಲ್ಸ್ಪೂನ್
    * ತುರಿದ ತೆಂಗಿನಕಾಯಿ – 1 ಕಪ್
    * ಕೊತ್ತಂಬರಿ ಬೀಜ – 2 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಮೆಂತ್ಯೆ ಬೀಜ – ಅರ್ಧ ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಕಪ್
    * ಹುಣಿಸೇಹಣ್ಣು – 30 ಗ್ರಾಂ
    * ಉಪ್ಪು – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 7
    * ಕೊಲೊಕೇಶಿಯಾ ಎಲೆಗಳು/ ಕೆಸುವಿನ ಎಲೆ – 20

    ಒಗ್ಗರಣೆಗೆ ಬೇಕಾದ ಪದಾರ್ಥ:
    * ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೀಜ – 2 ಟೇಬಲ್ಸ್ಪೂನ್
    * ಕರಿ ಬೇವಿನ ಎಲೆ – ಅರ್ಧ ಕಪ್
    * ತುರಿದ ತೆಂಗಿನಕಾಯಿ – ಅರ್ಧ ಕಪ್
    * ಬೆಲ್ಲ – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ ಮತ್ತು 2 ಟೇಬಲ್ಸ್ಪೂನ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
    * ಈ ಮಿಶ್ರಣಕ್ಕೆ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಾ, ಮೆಂತ್ಯೆ ಮತ್ತು ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ.
    * ಬೆಲ್ಲ, ಹುಣಿಸೇಹಣ್ಣು, ಉಪ್ಪು ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲಾ ಪೇಸ್ಟ್ ಸಿದ್ಧವಾಗಿದೆ.
    * ಕೆಸುವಿನ ಎಲೆಗಳನ್ನು ತೆಗೆದುಕೊಂಡು ಗೆರೆಗಳನ್ನು ಟ್ರಿಮ್ ಮಾಡಿ. ಮಸಾಲಾ ಪೇಸ್ಟ್ ಎಲೆಗೆ ಸಮವಾಗಿ ಹರಡಿ.
    * ಕೆಸುವಿನ ಎಲೆಗಳಿಗೆ 4 ಬಾರಿ ಮಸಾಲಾ ಪೇಸ್ಟ್ ಹರಡಿ. ಈಗ ಎಲೆಯ ಒಂದು ಬದಿಗಳನ್ನು ಮಡಚಿ ರೋಲ್ ಮಾಡಿ. 30 ನಿಮಿಷಗಳ ಕಾಲ ಸ್ಟೀಮ್ ಮಾಡಿ. ತಣ್ಣಗಾದ ಮೇಲೆ ಅದನ್ನು ಕಟ್ ಮಾಡಿ.
    * ತೆಂಗಿನ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಪೀನಟ್ಸ್ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
    * ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ. ಒಂದು ನಿಮಿಷ ಅಥವಾ ತೆಂಗಿನಕಾಯಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
    * ಅಲ್ಲದೇ ತುಂಡರಿಸಿದ ಪತ್ರೋಡೆ ತುಣುಕುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

    – ಪತ್ರೋಡೆಯನ್ನು ಬೆಳಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್‌ ಗೆ ಮಾಡಿ ಆನಂದಿಸಿ.

  • ಮೇ 18ಕ್ಕೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ

    ಮೇ 18ಕ್ಕೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ

    ಬೆಂಗಳೂರು: ಮೇ 18ರಂದು ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

    ಮೇ 17ಕ್ಕೆ ಆರೆಂಜ್ ಅಲರ್ಟ್ ನೀಡಿದ್ದು, ಮೇ 19 ರಿಂದ 21ರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ದಕ್ಷಿಣ ಒಳನಾಡು ಭಾಗದಲ್ಲೂ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಎರಡಂಕಿಗೆ ಇಳಿಕೆ ಕಂಡ ಕೊರೊನಾ – ನಿನ್ನೆಗಿಂತ ಇಂದು 28 ಕೇಸ್ ಇಳಿಮುಖ

    ಅಲರ್ಟ್ ಘೋಷಣೆಯ ದಿನಗಳಲ್ಲಿ 100 ಮಿ.ಮೀ ಇಂದ 150 ಮಿ.ಮೀ ಮೇಲ್ಪಟ್ಟು ಮಳೆಯಾಗುವ ಸಾಧ್ಯತೆ ಇದೆ. 3 ದಿನಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ತುರ್ತು ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲಾಗಿದೆ.

    ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರ ವಹಿಸಬೇಕು. ಅಲರ್ಟ್ ಘೋಷಿಸಿದ ದಿನಗಳಲ್ಲಿ ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯಬಾರದು. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ತೀರಕ್ಕೆ ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಕಾರ್ಬೆವಾಕ್ಸ್ ಬೆಲೆ 250 ರೂ.ಗೆ ಇಳಿಕೆ

    6 ದಿನಕ್ಕೂ ಮೊದಲು ನೈರುತ್ಯ ಮುಂಗಾರು:
    ಸೋಮವಾರ ನೈರುತ್ಯ ಮುಂಗಾರು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಿಗೆ ಆಗಮಿಸಿದ್ದು, ನಿಗದಿತ ಸಮಯಕ್ಕಿಂತಲೂ 6 ದಿನ ಮುಂಚಿತವಾಗಿ ಪ್ರಾರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

    ಸೋಮವಾರದಿಂದ ಬುಧವಾರದವರೆಗೆ ತಮಿಳುನಾಡಿನಲ್ಲಿ ಹಾಗೂ ಮುಂದಿನ 2 ದಿನಗಳಲ್ಲಿ ಲಕ್ಷದ್ವೀಪ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಬುಧವಾರ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

  • ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ..?: ಪ್ರೊ.ಟಿ ಮುರುಗೇಶಿ

    ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ..?: ಪ್ರೊ.ಟಿ ಮುರುಗೇಶಿ

    ಉಡುಪಿ: ಟಿಪ್ಪು ಸುಲ್ತಾನ್ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಮರ ವಿರೋಧಿ ಎಂದು ವ್ಯಾಪಕ ಚರ್ಚೆಗಳಾಗುತ್ತಿವೆ. ಆದರೆ ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ? ಎಂದು ಇತಿಹಾಸ ತಜ್ಞ ಪ್ರೊ.ಟಿ.ಮುರುಗೇಶಿ ಪ್ರಶ್ನಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಯಾವುದೇ ಬಲವಾದ ಆಧಾರಗಳು ಇಲ್ಲ. ಟಿಪ್ಪು ಒಬ್ಬ ರಾಜನಾಗಿ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮದವರನ್ನು ನಡೆಸಿಕೊಂಡಿದ್ದಾನೆ. ಅಧಿಕಾರದಲ್ಲಿದ್ದಾಗ ಬ್ರಿಟಿಷರು ಟಿಪ್ಪುವನ್ನು ಮುಗಿಸಲು ಎಲ್ಲ ಕಾರ್ಯತಂತ್ರಗಳನ್ನು ಮಾಡಿದ್ದರು. ಆಗ ಮಂಗಳೂರು, ಮಲೆನಾಡು ಹಾಗೂ ಕೊಡಗು ಪ್ರದೇಶಗಳಲ್ಲಿನ ಜನರೂ ಬ್ರಿಟೀಷರಿಗೆ ಸಹಾಯ ಮಾಡಿದ್ದರು. ಆದರೂ ಟಿಪ್ಪು ಅದನ್ನು ಹೇಗೆ ನಿಭಾಯಿಸಬೇಕೋ ಹಾಗೆ ನಿಭಾಯಿಸಿದ್ದಾನೆ. ಈ ಸಂದರ್ಭದಲ್ಲಿ ಮಂಗಳೂರು, ಕೊಡಗಿನ ಅನೇಕ ಜನರನ್ನು ಟಿಪ್ಪು ಜೈಲಿಗೆ ಹಾಕಿದ್ದಾನೆ – ಕೊಂದಿದ್ದಾನೆ. ಆದರೆ ಟಿಪ್ಪು ಹಿಂದೂ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್‍ಗೆ ಭಾರತರತ್ನ ಕೊಡಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ: ಶೆಟ್ಟರ್

    tippu

    ಮರಾಠರು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿದಾಗ ಕರಾವಳಿಯ ಧಾರ್ಮಿಕ ಕೇಂದ್ರಗಳ ಪುನಶ್ಚೇತನಕ್ಕೆ ಟಿಪ್ಪು ಕಾರಣರಾಗಿದ್ದಾನೆ. ಧಾರ್ಮಿಕ ಚಟುವಟಿಕೆಗಳು ಯಥಾಪ್ರಕಾರ ಆರಂಭವಾಗಲು ಸಹಾಯ ಮಾಡಿದ್ದಾನೆ. ಇದೇ ಕಾರಣಕ್ಕಾಗಿ ಇಂದಿಗೂ ಕೊಲ್ಲೂರು ಮತ್ತು ಶೃಂಗೇರಿಯಲ್ಲಿ ಸಲಾಂ ಪೂಜೆಯ ನಡೆದುಕೊಂಡು ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್‍ರಿಂದ ಮೈಸೂರಿನ ಮಹಾರಾಜರಿಗೆ ಭಾರೀ ಕೆಡುಕಾಗಿದೆ: ಮೈಸೂರು ರಾಜಮಾತೆ

    ಕರ್ನಾಟಕದ ಮೇಲೆ ಚೋಳರು ದಾಳಿ ಮಾಡಿ ಹಳ್ಳಿ – ಹಳ್ಳಿಗೆ ಬೆಂಕಿಯಿಟ್ಟರು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು. ಆದರೆ, ಟಿಪ್ಪು ಬ್ರಿಟಿಷರಿಗೆ ಸಹಾಯ ಮಾಡಿದವರನ್ನು ಮಾತ್ರ ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಇಂದಿಗೂ ಟಿಪ್ಪು ಸುಲ್ತಾನ್‌ನನ್ನು ವಿರೋಧಿಸುವುದು ರಾಜಕೀಯ ಕಾರಣಕ್ಕಾಗಿಯೇ ಹೊರತು ಧಾರ್ಮಿಕ ಕಾರಣಕ್ಕಲ್ಲ. ಅವನನ್ನು ಹಿಂದೂ ವಿರೋಧಿಯೆಂದು ಚಾರಿತ್ರಿಕವಾಗಿ ನಿರ್ಧಾರ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Temple

    ಟಿಪ್ಪು ಸುಲ್ತಾನ್ ಶೃಂಗೇರಿ, ಕೊಲ್ಲೂರಿಗೆ ಭೇಟಿ ಕೊಟ್ಟ ಬಗ್ಗೆ ದಾಖಲೆಯಿಲ್ಲ. ಆದರೆ ಶೃಂಗೇರಿಗೆ ಮಾಡಿದಂತಹ ದಾನ ಧರ್ಮ ಮತ್ತು ಸಹಾಯಕ್ಕೆ ಅಲ್ಲಿನ ಮಠದಲ್ಲಿ ದಾಖಲೆಗಳಿವೆ. ಶಂಕರನಾರಾಯಣದ ದೇವಸ್ಥಾನಕ್ಕೆ ಗಂಟೆ ಕೊಟ್ಟಿದ್ದು ಈಗಲೂ ನೆನಪಿದೆ. ಸುಖಾ ಸುಮ್ಮನೆ ಯಾವುದೇ ಪರಂಪರೆ ಸೃಷ್ಟಿಯಾಗುವುದಿಲ್ಲ. ಕರಾವಳಿಯ ಧಾರ್ಮಿಕ ಕೇಂದ್ರಗಳಿಗೆ ನೀಡಿದ ಸಹಾಯದಿಂದ ಇಂದಿಗೂ ಸಲಾಂ ಆರತಿ ಪರಂಪರೆಯಾಗಿ ಉಳಿದುಕೊಂಡಿದೆ ಎಂದು ಅವರು ವಿವರಿಸಿದ್ದಾರೆ.