Tag: Coaching Class

  • ಪಿಕ್ನಿಕ್ ಮುಗಿಸಿ ಬರ್ತಿದ್ದ ಬಸ್ ಪಲ್ಟಿ – ಇಬ್ಬರು ಶಾಲಾ ವಿದ್ಯಾರ್ಥಿಗಳ ದುರ್ಮರಣ

    ಪಿಕ್ನಿಕ್ ಮುಗಿಸಿ ಬರ್ತಿದ್ದ ಬಸ್ ಪಲ್ಟಿ – ಇಬ್ಬರು ಶಾಲಾ ವಿದ್ಯಾರ್ಥಿಗಳ ದುರ್ಮರಣ

    ಮುಂಬೈ: ಪಿಕ್ನಿಕ್ (Picnic) ಮುಗಿಸಿ ಹಿಂದಿರುಗುತ್ತಿದ್ದ ಶಾಲಾ ಬಸ್ ಪಲ್ಟಿಯಾಗಿ (School Bus Accident) ಇಬ್ಬರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಮುಂಬೈ (Mumbai) ಬಳಿ ಇಂದು ಬೆಳಗ್ಗಿನ ಜಾವ ನಡೆದಿದೆ.

    ಕೋಚಿಂಗ್ ತರಗತಿ ವಿದ್ಯಾರ್ಥಿಗಳು (Coaching Class) ಪಿಕ್ನಿಕ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ರಾಯಗಢ ಜಿಲ್ಲೆಯ ಖೋಪೋಲಿ ಎಂಬಲ್ಲಿ ದುರಂತ ಸಂಭವಿಸಿದೆ. ಇದನ್ನೂ ಓದಿ: ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಮುಂಬೈನ ಚೆಂಬೂರ್‌ನಲ್ಲಿರುವ ಕೋಚಿಂಗ್ ಕೇಂದ್ರದ 10ನೇ ತರಗತಿಯ 48 ವಿದ್ಯಾರ್ಥಿಗಳು (Students) ಮತ್ತು ಇಬ್ಬರು ಶಿಕ್ಷಕರು ಪ್ರಯಾಣಿಸುತ್ತಿದ್ದ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿತ್ತು. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ (Mumbai Pune ExpressWay) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ. ಇದನ್ನೂ ಓದಿ: ಗೋಕಾಕ್ ತಹಶೀಲ್ದಾರ್ ಮನೆಯಲ್ಲಿ ಕಳ್ಳತನ – ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಎಗರಿಸಿ ಪರಾರಿ

    ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಲೋನಾವಾಲಾ, ಖೋಪೋಲಿ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳಿಗೆ ಉಚಿತ ಟ್ಯೂಷನ್, ಯುವಕರಿಗೆ ಕೋಚಿಂಗ್ ಕ್ಲಾಸ್ – ಗ್ರಾಮೋದ್ಧಾರಕ್ಕೆ ಪಣ ತೊಟ್ಟ ಪೊಲೀಸ್ ಪೇದೆ

    ಮಕ್ಕಳಿಗೆ ಉಚಿತ ಟ್ಯೂಷನ್, ಯುವಕರಿಗೆ ಕೋಚಿಂಗ್ ಕ್ಲಾಸ್ – ಗ್ರಾಮೋದ್ಧಾರಕ್ಕೆ ಪಣ ತೊಟ್ಟ ಪೊಲೀಸ್ ಪೇದೆ

    ಚಾಮರಾಜನಗರ: ಪೋಲಿಸರು ಒಂದು ದಿನ ರಜೆ ಸಿಕ್ಕಿದರೆ ಸಾಕು ಫ್ಯಾಮಿಲಿ ಜೊತೆ ಕಾಲ ಕಳೆಯೋಣ, ರಿಲ್ಯಾಕ್ಸ್ ಆಗೋಣ ಎಂದು ಕಾದು ಕುಳಿತಿರುತ್ತಾರೆ. ಆದರೆ ಚಾಮರಾಜನಗರದ ಪೊಲೀಸ್ ಪೇದೆಯೊಬ್ಬರು ತಮಗೆ ಸಿಗುವ ರಜೆ ಸಮಯದಲ್ಲೂ ಕೂಡ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಉಚಿತ ಟ್ಯೂಷನ್, ನಿರುದ್ಯೋಗಿ ಯುವಕರಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

    ಚಾಮರಾಜನಗರ ಎಸ್‍ಪಿ ಕಚೇರಿಯಲ್ಲಿ ಮೀಸಲು ಪೋಲಿಸ್ ಪಡೆಯ ಪೇದೆ ಆಗಿರೋ ಮಧುಸೂದನ್ ತಮ್ಮ ನಿಸ್ವಾರ್ಥ ಕೆಲಸದ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ. ಇವರು ಹರದನಹಳ್ಳಿಯವರಾಗಿದ್ದು, ತಮ್ಮ ಗ್ರಾಮದ ಮಕ್ಕಳಿಗೆ ನಿತ್ಯ ಬೆಳಗ್ಗೆ ಉಚಿತ ಟ್ಯೂಷನ್ ನೀಡುತ್ತಾರೆ.

    ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ವಿವೇಕಾನಂದ ಪಾಠ ಶಾಲೆ ಹೆಸರಿನಲ್ಲಿ ಮಕ್ಕಳಿಗೆ ಉಚಿತ ಟ್ಯೂಷನ್ ತೆಗೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಊರಿನ ಯುವಕರು ಓದಲಿ, ಒಳ್ಳೆ ಕೆಲಸಕ್ಕೆ ಸೇರಲಿ ಎಂದು ಚಿಕ್ಕ ಗ್ರಂಥಾಲಯ ಕೂಡ ತೆರೆದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಕೋಚಿಂಗ್ ನೀಡುತ್ತಿದ್ದಾರೆ.

    ಅಷ್ಟೇ ಅಲ್ಲದೆ ಸ್ವಚ್ಛ ಭಾರತ್ ಅಭಿಯಾನವನ್ನು ತಮ್ಮೂರಲ್ಲಿ ಮಧುಸೂಧನ್ ನಡೆಸಿದ್ದಾರೆ. ಯುವಕರನ್ನು ಒಗ್ಗೂಡಿಸಿ ತಮ್ಮ ರಜೆ ಸಮಯವನ್ನು ಊರ ಸ್ವಚ್ಛತೆಗಾಗಿ ಮೀಸಲಿಟ್ಟಿದ್ದಾರೆ. ಕಲ್ಯಾಣಿ, ದೇಗುಲ, ಒಳಚರಂಡಿಯ ಸ್ವಚ್ಛ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಈ ಮೂಲಕ ಮೀಸಲು ಪೊಲೀಸ್ ಪಡೆಯ ಪೇದೆ ಮಧುಸೂಧನ್ ಗ್ರಾಮೋದ್ಧಾರಕ್ಕೆ ಪಣ ತೊಟ್ಟಿದ್ದಾರೆ. ಮಧುಸೂದನ್ ಅವರ ಈ ಸಾಮಜ ಸೇವೆ, ತಮ್ಮ ಊರಿನ ಮೇಲೆ ಅವರಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದ್ದು, ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.