ಬೆಂಗಳೂರು: ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ (Cricket Tournament) ಆಡುವ ಅವಕಾಶ ಕೊಡಿಸುವುದಾಗಿ ಕೋಚ್ ಒಬ್ಬ ವಂಚನೆ ಮಾಡಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಗೌರವ್ ದಿಮಾನ್, ವಂಚನೆ ಮಾಡಿರುವ ಬೆಂಗಳೂರಿನ ರೋರಾ ಕ್ರಿಕೆಟ್ ಅಕಾಡೆಮಿ (Roar Cricket Academy) ಕೋಚ್. ಈತ ಅದೇ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಯುವಕನಿಗೆ ಆಮಿಷ ಒಡ್ಡಿ 12 ಲಕ್ಷ ರೂ. ವಂಚಿಸಿದ್ದಾನೆ.
ನಡೆದಿದ್ದೇನು..?: ಕೋಚ್ ಗೌರವ್ ದಿಮಾನ್, ಯುವಕನ ಪೋಷಕರನ್ನ ಪರಿಚಯ ಮಾಡಿಕೊಂಡಿದ್ದ. ಬಳಿಕ ಕೆಲವು ಟೂರ್ನಮೆಂಟ್ ಗಳಲ್ಲಿ ಮಗನಿಗೆ ಆಡಲು ಅವಕಾಶ ಕೊಡಿಸುವುದಾಗಿ ಆಮೀಷ ಒಡ್ಡಿದ್ದಾನೆ. ಹಾಗೆ ಈ ಹಿಂದೆ ಆಡುತ್ತಿದ್ದ ಕ್ಲಬ್ ಗೆ ಆಡದಂತೆ ಷರತ್ತು ಹಾಕಿದ್ದ. ಬಳಿಕ ಟೂರ್ನಮೆಂಟ್ ಗಳಲ್ಲಿ ಆಡಲು ಒಳ್ಳೆ ಬ್ಯಾಟ್ ಗಳು, ತರಬೇತಿ ನೀಡುವುದಾಗಿ ಹೇಳಿದ್ದ. ಇದಕ್ಕಾಗಿ ಯುವಕನ ಪೋಷಕರ ಬಳಿ ಹಂತ ಹಂತವಾಗಿ 12.23 ಲಕ್ಷ ರೂ. ಪಡೆದಿದ್ದ. ಆದರೆ ಯುವಕನಿಗೆ ಯಾವುದೇ ಟೂರ್ನಮೆಂಟ್ ಗಳಲ್ಲಿ ಅವಕಾಶವಾಗಲಿ, ಕ್ರಿಕೆಟ್ ಐಟಂಗಳನ್ನ ಕೊಡಿಸದೇ ವಂಚನೆ ಮಾಡಿದ್ದಾನೆ.
ಈ ಬಗ್ಗೆ ಕೋಚ್ ಗೌರವ್ ದಿಮಾನ್ ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾನೆ. ಜೊತೆಗೆ ಮಗನ ಭವಿಷ್ಯ ಹಾಳು ಮಾಡುವುದಾಗಿ ಹಾಗೂ ಕೊಲೆ ಮಾಡಿಸುವುದಾಗಿ ಕೋಚ್ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು
ಸದ್ಯ ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಮುಂಬೈ: ವಿಶ್ವಕಪ್ ಬಳಿಕವೂ ರಾಹುಲ್ ದ್ರಾವಿಡ್ (Rahul Dravid) ಅವರು ಟೀಂ ಇಂಡಿಯಾದ (Team India) ಕೋಚ್ ಆಗಿ ಮುಂದುವರಿಯಲಿದ್ದಾರೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ (ICC World Cup Cricket) ಅಂತ್ಯಗೊಂಡ ದಿನವೇ ರಾಹುಲ್ ದ್ರಾವಿಡ್ ಅವರ ಕೋಚ್ (Coach) ಅವಧಿ ಕೊನೆಯಾಗಿತ್ತು. ಹೀಗಾಗಿ ದ್ರಾವಿಡ್ ಕೋಚ್ ಆಗಿ ಮುಂದುವರಿಯುತ್ತಾರಾ? ಇಲ್ಲವೋ ಎಂಬ ಪ್ರಶ್ನೆ ಎದ್ದಿತ್ತು.
ಈಗ ಬಿಸಿಸಿಐ ದ್ರಾವಿಡ್ ಅವರ ಕೋಚ್ ಅವಧಿಯನ್ನು ವಿಸ್ತರಿಸುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿದ ಬಿಸಿಸಿಐ, ಭಾರತೀಯ ತಂಡವನ್ನು ರೂಪಿಸುವಲ್ಲಿ ದ್ರಾವಿಡ್ ಅವರ ಪ್ರಮುಖ ಪಾತ್ರವನ್ನು ಮಂಡಳಿಯು ಅಂಗೀಕರಿಸುತ್ತದೆ ಮತ್ತು ಅವರ ಅಸಾಧಾರಣ ವೃತ್ತಿಪರತೆಯನ್ನು ಶ್ಲಾಘಿಸುತ್ತದೆ. ಇದರ ಜೊತೆ ಎನ್‌ಸಿಎ ಮುಖ್ಯಸ್ಥ ಮತ್ತು ಸ್ಟ್ಯಾಂಡ್-ಇನ್ ಮುಖ್ಯ ತರಬೇತುದಾರರಾಗಿ ವಿವಿಎಸ್ ಲಕ್ಷ್ಮಣ್ ಅವರ ಪಾತ್ರಗಳಿಗಾಗಿ ಮಂಡಳಿಯು ಪ್ರಶಂಸಿಸುತ್ತದೆ ಎಂದು ತಿಳಿಸಿದೆ.
ವಿಶ್ವಕಪ್ ಕ್ರಿಕೆಟ್ ಮುಕ್ತಾಯವಾದ ಬಳಿಕ ಬಿಸಿಸಿಐ (BCCI) ರಾಹುಲ್ ದ್ರಾವಿಡ್ ಅವರ ಜೊತೆ ಕೋಚ್ ಆಗಿ ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಿತ್ತು. ಈ ಮಾತುಕತೆ ಫಲಪ್ರದವಾಗಿದ್ದು ರಾಹುಲ್ ಕೋಚ್ ಆಗಿ ಮುಂದುವರಿಯ ಬಗ್ಗೆ ಒಪ್ಪಿಗೆ ನೀಡಿದ್ದಾರೆ. ರಾಹುಲ್ ದ್ರಾವಿಡ್ ಎಷ್ಟು ಅವಧಿಯವರೆಗೆ ಕೋಚ್ ಆಗಿ ಮುಂದುವರಿಯುತ್ತಾರೆ ಎಂಬುದರ ಬಗ್ಗೆ ಬಿಸಿಸಿಐ ತಿಳಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದೊಂದಿಗಿನ ಕಳೆದ ಎರಡು ವರ್ಷಗಳು ಸಂಪೂರ್ಣವಾಗಿ ಸ್ಮರಣೀಯವಾಗಿವೆ. ನಾವು ಏರಿಳಿತಗಳನ್ನು ಕಂಡಿದ್ದೇವೆ. ನಮ್ಮ ತಂಡದ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಕೌಶಲ್ಯ ಮತ್ತು ಮತ್ತು ಪ್ರತಿಭೆಯನ್ನು ಹೊಂದಿರುವ ಅಸಧಾರಣ ತಂಡ ನಮ್ಮದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ 21 ರನ್ ಚೇಸ್; ದಾಖಲೆ ಬರೆದ ಆಸೀಸ್
ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ ಪ್ರತಿಕ್ರಿಯಿಸಿ, ಕೋಚ್ ನೇಮಕದ ಸಮಯದಲ್ಲಿ ರಾಹುಲ್ ದ್ರಾವಿಡ್‌ಗಿಂತ ಉತ್ತಮ ವ್ಯಕ್ತಿ ಇಲ್ಲ ಎಂದು ನಾನು ಹೇಳಿದ್ದೆ. ಟೀಂ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ಉನ್ನತ ಶ್ರೇಯಾಂಕ ಪಡೆದಿದ್ದು ಇದು ದ್ರಾವಿಡ್ ಅವರು ತಂಡಕ್ಕಾಗಿ ಮಾಡಿದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಫೈನಲ್‌ಗೆ ಮುನ್ನ ಸತತ 10 ಪಂದ್ಯಗಳನ್ನು ಗೆದ್ದಿರುವ ನಮ್ಮ ವಿಶ್ವಕಪ್ ಅಭಿಯಾನವು ಅಸಾಮಾನ್ಯವಾಗಿದೆ. ಉತ್ತಮ ಪ್ರದರ್ಶನ ನೀಡುವ ತಂಡವನ್ನಾಗಿ ರೂಪಿಸಿದ್ದಕ್ಕೆ ಮುಖ್ಯ ಕೋಚ್ ಮೆಚ್ಚುಗೆಗೆ ಅರ್ಹರು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಯಶಸ್ಸಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನಾವು ಅವರಿಗೆ ಒದಗಿಸುತ್ತೇವೆ ಎಂದಿದ್ದಾರೆ.
ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಬಳಿಕ ಸುದ್ದಿಗೋಷ್ಠಿಗೆ ರಾಹುಲ್ ದ್ರಾವಿಡ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನಿನ್ನೂ ಯಾವುದೇ ರೀತಿಯ ಯೋಚನೆಗಳನ್ನು ಮಾಡಿಲ್ಲ. ಯಾಕಂದರೆ ನನ್ನ ಸಂಪೂರ್ಣ ಗಮನ ಈ ಬಾರಿಯ ಸರಣಿ ಮತ್ತು ಪಂದ್ಯದ ಮೇಲಿತ್ತು. ಭವಿಷ್ಯದ ಬಗ್ಗೆ ಯೋಚನೆ ಮಾಡಲು ಕೂಡ ಸಮಯವಿರಲಿಲ್ಲ. ಹೀಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಒಂದಿಷ್ಟು ಸಮಯ ಬೇಕಾಗಿದೆ ಎಂದು ತಿಳಿಸಿದ್ದರು.
ಮುಂಬೈ: ನ್ಯೂ ಅಷ್ಟಿಯಿಂದ (New Ashti) ಅಹಮದ್‌ನಗರಕ್ಕೆ (Ahmednagar) ತೆರಳುತ್ತಿದ್ದ ರೈಲಿನ (Train) 5 ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು (Railway Officials) ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿ ಹರಡುವ ಮೊದಲು ಎಲ್ಲಾ ರೈಲು ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದರು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಡಾ. ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ. ಇದನ್ನೂ ಓದಿ: ಮಿಷನ್ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ
ಬೆಂಗಳೂರು: ಸಣ್ಣ ವಿಚಾರಕ್ಕೆ ಕೋಚ್ (Coach) ಪತ್ನಿ ಹಾಗೂ ಅಥ್ಲಿಟ್ (Athlete) ನಡುವೆ ಕಂಠೀರವ ಕ್ರೀಡಾಂಗಣದಲ್ಲಿ ಗಲಾಟೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚ್ ಯತೀಶ್ ಹಾಗೂ ಪತ್ನಿ ಶ್ವೇತಾ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಸಂಪಂಗಿ ರಾಮನಗರ (Sampangi Ramanagara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಬೆಂಗಳೂರಿನ (Bengaluru) ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ಬಿಂದುರಾಣಿ ಹಾಗೂ ಶ್ವೇತಾ ಮಧ್ಯೆ ಖೇಲ್‌ರತ್ನ ಪ್ರಶಸ್ತಿ ಕುರಿತ ವಿಡಿಯೋವೊಂದರ ಕುರಿತು ಜಗಳ ನಡೆದಿತ್ತು. ಕಳೆದ ಶುಕ್ರವಾರ ಅಥ್ಲಿಟ್ ಬಿಂದುರಾಣಿ ಟೆಡೆಕ್ಸ್ ಕಾರ್ಯಕ್ರಮದಲ್ಲಿ ತನ್ನ ಸಾಧನೆ ಬಗ್ಗೆ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಬಿಂದು ಸೋಶಿಯಲ್ ಮೀಡಿಯಾ ಮಾಹಿತಿಯಲ್ಲಿ ಖೇಲ್‌ರತ್ನ ಪ್ರಶಸ್ತಿ ಬಗ್ಗೆ ಪ್ರಸ್ತಾಪ ಮಾಡಿಕೊಂಡಿದ್ದರ ಕುರಿತು ಕೋಚ್ ಯತೀಶ್ ವಾಟ್ಸಪ್‌ನ ಕೋಚ್ ಗ್ರೂಪ್‌ನಲ್ಲಿ ನಿಮಗೆ ಯಾವಾಗ ಖೇಲ್‌ರತ್ನ ಪ್ರಶಸ್ತಿ ಬಂದಿದೆ ಎನ್ನುವ ರೀತಿಯಲ್ಲಿ ಬಿಂದುರಾಣಿಗೆ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ರಸ್ತೆ ಬದಿ ಸೊಪ್ಪು ಮಾರೋ ವೃದ್ಧೆ ತಲೆಗೆ ಮಚ್ಚಿನಿಂದ ಹಲ್ಲೆ
ಈ ಕುರಿತು ಬಿಂದುರಾಣಿ ಗ್ರೂಪ್‌ನಲ್ಲಿ ಉತ್ತರಿಸದೇ ಗಂಡನ ಕಡೆಯಿಂದ ಕಾಲ್ ಮಾಡಿಸಿದ್ದಾರೆ. ಯತೀಶ್ ಸರಿಯಾಗಿ ರೆಸ್ಪಾನ್ಸ್ ಮಾಡದೇ ಹೋಗಿದ್ದಕ್ಕೆ ಬಿಂದು ಯತೀಶ್ ಅವರಿಗೆ ಮತ್ತೆ ಕಾಲ್ ಮಾಡಿದಾಗ ಕೋಚ್ ಪತ್ನಿ ಶ್ವೇತಾ ಜಿ.ಕೆ ಉತ್ತರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಒಂದಷ್ಟು ವಾಗ್ವಾದ ನಡೆದಿದೆ. ಆ ವಿಚಾರವಾಗಿ ಶ್ವೇತಾ ಸ್ಟೇಡಿಯಂಗೆ ಬಂದು ಬಿಂದುರಾಣಿ ಜೊತೆ ಗಲಾಟೆ ಮಾಡಿಕೊಂಡಿದ್ದಲ್ಲದೆ ಬಿಂದು ಅವರನ್ನು ನಿಂದಿಸಿ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದರು. ಇದನ್ನೂ ಓದಿ: ಕೋಚ್ ಪತ್ನಿಯಿಂದ ಅಥ್ಲಿಟ್ ಮೇಲೆ ಹಲ್ಲೆ- ವೀಡಿಯೋ ವೈರಲ್
ಘಟನೆ ಸಂಬಂಧ ಬಿಂದುರಾಣಿ ಸಂಪಂಗಿ ರಾಮ ನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾ.ಜಿ.ಕೆ ಹಾಗೂ ಅವರ ಪತಿ ಯತೀಶ್ ವಿರುದ್ಧ ಮಾನಹಾನಿ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಬಿಂದುರಾಣಿ ಕೊಟ್ಟ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲು ಮಾಡಿಕೊಂಡಿರುವ ಸಂಪಂಗಿ ರಾಮನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು – ಪತ್ನಿ ಸೇರಿ ಐವರು ಅರೆಸ್ಟ್
ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರ ವೀಡಿಯೋ ವಾಟ್ಸಪ್‌ನಲ್ಲಿ ಹಂಚಿಕೊಂಡ ಕುರಿತಾಗಿ ಕೋಚ್ ಪತ್ನಿ ಮತ್ತು ಅಥ್ಲಿಟ್ (Athlete) ಮಧ್ಯೆ ವಾಗ್ವಾದ ಶುರುವಾಗಿದ್ದು, ಕೋಚ್ (Coach) ಪತ್ನಿ ಅಥ್ಲಿಟ್ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರಿನ (Bengaluru) ಕಂಠೀರವ ಮೈದಾನದಲ್ಲಿ (Kanteerava Stadium) ಘಟನೆ ನಡೆದಿದ್ದು, ಬಿಂದುರಾಣಿ ಎಂಬ ಅಥ್ಲಿಟ್ ಬೆಳಗ್ಗೆ ಪ್ರಾಕ್ಟಿಸ್‌ಗೆಂದು ಹೋದ ವೇಳೆ ಶ್ವೇತಾ ಎಂಬ ಮಹಿಳೆ ಆಕೆಯನ್ನು ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಥ್ಲಿಟ್ ಬಿಂದುರಾಣಿ, ಖಾಸಗಿ ಕಾರ್ಯಕ್ರಮವೊಂದರ ವೀಡಿಯೋವೊಂದನ್ನು ಕೋಚ್‌ಗಳ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆ. ಆ ವಿಡಿಯೋದಲ್ಲಿ ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಯತೀಶ್ ಎಂಬವರ ಪತ್ನಿ ಹಲ್ಲೆಗೆ ಯತ್ನಿಸಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಗೆ ಮಾತೃವಿಯೋಗ
ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಗ್ರೂಪ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕುರಿತು ಗ್ರೂಪ್‌ನಲ್ಲಿ ಸ್ಪಷ್ಟನೆ ಕೊಡದೆ ನೇರವಾಗಿ ಕಾಲ್ ಮಾಡಿದೆ. ಕೆಲವೇ ನಿಮಿಷದಲ್ಲಿ ಕಾಲ್ ಕಟ್ ಆಯಿತು. ನಾನು ಅಲ್ಲಿಗೆ ಸುಮ್ಮನಾದೆ. ಆ ಘಟನೆ ಆದ ಬಳಿಕ ಇಂದು ಬೆಳಗ್ಗೆ ಕೋಚ್ ಯತೀಶ್ ಅವರ ಪತ್ನಿ ಬಂದು ಗಲಾಟೆ ಮಾಡಿದ್ದಾರೆ. ನಾನು ವಿಷಯ ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಾದೆ. ಘಟನೆಯ ಸಂಬಂಧ ಅಥ್ಲೆಟಿಕ್ ಅಸೋಸಿಯೇಷನ್‌ಗೆ ದೂರು ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 20 ಬಾಕ್ಸ್ ಟೊಮೆಟೋ 58 ಸಾವಿರಕ್ಕೆ ಮಾರಾಟ- ರೈತ ಫುಲ್ ಖುಷ್
ಬಿಂದುರಾಣಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಶ್ವೇತಾ ಜಿ.ಕೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಖೇಲ್‌ರತ್ನ ಪ್ರಶಸ್ತಿ ಸಂಬಂಧ ಪೋಸ್ಟ್ ಮಾಡಿಕೊಂಡಿದ್ದಕ್ಕೆ ನನ್ನ ಗಂಡ ಯತೀಶ್ ಬಿಂದುಗೆ ಗ್ರೂಪ್‌ನಲ್ಲಿಯೇ ಪ್ರಶ್ನೆ ಮಾಡಿದ್ದರು. ಕೋಚ್‌ಗ್ರೂಪ್‌ನಲ್ಲಿ ಉತ್ತರ ಕೊಡಬೇಕಿದ್ದ ಬಿಂದುರಾಣಿ, ರಾತ್ರಿ 10 ಗಂಟೆಗೆ ಆಕೆಯ ಗಂಡನ ಕಡೆಯಿಂದ ನನ್ನ ಪತಿ ಯತೀಶ್‌ಗೆ ಕಾಲ್ ಮಾಡಿಸಿ ಬೆದರಿಕೆ ಹಾಕಿಸಿದ್ದಾಳೆ. ನನ್ನ ಪತಿ ಕಾಲ್ ಕಟ್ ಮಾಡಿದ ನಂತರ ಕಾಲು ಗಂಟೆಯಲ್ಲಿ ಮತ್ತೊಮ್ಮೆ ಕರೆ ಮಾಡಿದ್ದಾರೆ. ಈ ವೇಳೆ ನಾನು ಕಾಲ್ ರಿಸೀವ್ ಮಾಡಿ ಮಾತನಾಡುವಾಗ, ನನಗೆ ದೊಡ್ಡವರು ಗೊತ್ತು. ನಿಮ್ಮನ್ನು ಸ್ಟೇಡಿಯಂನಿಂದಲೇ ಹೊರಹಾಕಿಸುತ್ತೇನೆ ಎಂದು ಹೇಳಿದ್ದಾಳೆ. ಆ ಕಾರಣಕ್ಕಾಗಿ ಶನಿವಾರವೇ ಹೋಗಿದ್ದೆ. ಆದರೆ ಸಿಗಲಿಲ್ಲ. ಹಾಗಾಗಿ ಇವತ್ತು ಹೋಗಿ ಮಾತನಾಡಿದೆ ಎಂದರು. ಇದನ್ನೂ ಓದಿ: ಡಿಪೋ ಆವರಣದಲ್ಲಿ ನೇಣಿಗೆ ಶರಣಾದ ಸಾರಿಗೆ ನೌಕರ
ಬಿಂದು ನಾನು ಮೊದಲಿನಿಂದಲೇ ಒಟ್ಟಿಗೆ ಅಭ್ಯಾಸ ಮಾಡಿದ ಪರಿಚಯ ಇದ್ದ ಕಾರಣ ಏರುಧ್ವನಿಯಲ್ಲಿ ಮಾತನಾಡಿದ್ದು ನಿಜ. ಬಿಂದುರಾಣಿ ಗಂಡನ ಕಡೆಯಿಂದ ಕಾಲ್ ಮಾಡಿಸಿದ್ದಕ್ಕೆ ನಾನು ನನ್ನ ಗಂಡನ ಪರವಾಗಿ ಹೋಗಿ ಮಾತನಾಡಿದ್ದೇನೆ. ಬಿಂದುರಾಣಿ ಈ ಹಿಂದೆ ನಮ್ಮ ಬಾಕ್ಸ್‌ನಿಂದ ಒಂದು ಲಕ್ಷ ಕಳ್ಳತನ ಮಾಡಿದ್ದಳು. ಹಿರಿಯರು ಮಧ್ಯಪ್ರವೇಶ ಮಾಡಿದ್ದರಿಂದ ದೂರು ಕೊಟ್ಟಿರಲಿಲ್ಲ. ಅವಳು ಕಾನೂನಾತ್ಮಕವಾಗಿ ಹೋದರೆ ನಾನೂ ಕಾನೂನಾತ್ಮಕವಾಗಿ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಮದುವೆ ನಿರಾಕರಣೆ- ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ದುರ್ಮರಣ
ಭುವನೇಶ್ವರ: ಒಡಿಶಾದ (Odisha) ನುವಾಪಾದ (Nuvapada) ಜಿಲ್ಲೆಯಲ್ಲಿ ಗುರುವಾರ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ (Coach) ಆಕಸ್ಮಿಕವಾಗಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಒಂದು ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರೈಲಿನ ಬ್ರೇಕ್ ಸ್ಟಕ್ ಆಗಿದ್ದ ಕಾರಣ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ರೈಲಿನ ಬ್ರೇಕ್‌ಪಾಡ್‌ಗಳ (Brake Pad) ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದಾಗಿ ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್
ಗುರುವಾರ ಸಂಜೆ ದುರ್ಗ್- ಪುರಿ ಎಕ್ಸ್‌ಪ್ರೆಸ್ (Durg-Puri Express) ರೈಲು ಖರಿಯಾರ್ ರೋಡ್ ನಿಲ್ದಾಣವನ್ನು ತಲಪುತ್ತಿದ್ದಂತೆ ರೈಲಿನ ಬಿ3 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜನರಲ್ಲಿ ಭಯವುಂಟಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ಒಂದು ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ರಾತ್ರಿ 11 ಗಂಟೆಯ ವೇಳೆಗೆ ಮತ್ತೆ ರೈಲು ಸಂಚಾರ ಪ್ರಾರಂಭವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ
ಚಿಕ್ಕಬಳ್ಳಾಪುರ: ದೇವರ ದಯೆಯಿಂದ ನಾವು ಅಪಘಾತಗೊಂಡ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಲಿಲ್ಲ ಎಂದು ವಾಲಿಬಾಲ್ ಕೋಚ್ (Coach) ಮಮತಾ ಶೆಟ್ಟಿ ಹೇಳಿದ್ದಾರೆ.
ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ನಡೆದ ಚಾಂಪಿಯನ್‍ಶಿಪ್ ಮುಗಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದೆವು. ಆದರೆ ಬಾಲಕಿಯರ ತಂಡಕ್ಕೆ ರಿಸರ್ವೇಷನ್ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೆವು. ಆದರೆ ಕೊನೆ ಕ್ಷಣದಲ್ಲಿ ಎರಡು ತಂಡ ಒಂದೇ ರೈಲಿನಲ್ಲಿ ಹೋಗೋಣ, ಬೇರೆ ಬೇರೆ ರೈಲು ಬೇಡ ಎಂದು ನಿರ್ಧಾರ ಮಾಡಲಾಯಿತು. ಇದರಿಂದಾಗಿ ಕೋರಮಂಡಲ್ ಟ್ರೈನ್‍ನಲ್ಲಿ ನಾವು ಪ್ರಯಾಣ ಮಾಡಲಿಲ್ಲ. ಅದೃಷ್ಟವಶಾತ್ ನಾವೆಲ್ಲ ಬದುಕಿ ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರೈಲು ಸಿಗದೆ ಪರದಾಡಿದ್ದ ವಾಲಿಬಾಲ್ ಕ್ರೀಡಾಪಟುಗಳು ವಿಮಾನದ ಮೂಲಕ ರಾಜ್ಯಕ್ಕೆ ಆಗಮನ
ಒಡಿಶಾದಲ್ಲಿ ರೈಲುಗಳ ನಡುವಿನ ಅಪಘಾತದ (Odisha Train Tragedy) ಬಳಿಕ ಆ ಮಾರ್ಗದ 58 ಕ್ಕೂ ಹೆಚ್ಚು ರೈಲನ್ನು ರದ್ದು ಮಾಡಲಾಗಿತ್ತು. ಅಲ್ಲದೆ 81 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ಪಶ್ಚಿಮ ಬಂಗಾಳಕ್ಕೆ (West Bengal) ತೆರಳಿದ್ದ ವಾಲಿಬಾಲ್ ಆಟಗಾರರ (Volleyball Players) ತಂಡ ವಾಪಾಸ್ ಆಗಲು ಪರದಾಡಿತ್ತು. ಬಳಿಕ ರಾಜ್ಯ ಸರ್ಕಾರ ಕ್ರೀಡಾಪಟುಗಳನ್ನು ಕರೆತರಲು ವಿಮಾನದ ವ್ಯವಸ್ಥೆ ಮಾಡಿತ್ತು. ಭಾನುವಾರ ಮುಂಜಾನೆ ಕ್ರೀಡಾಪಟುಗಳು ಬೆಂಗಳೂರಿಗೆ ತಲುಪಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು
ನವದೆಹಲಿ: ಕೋಚ್ (Coach) ಆಗಿ ಆಯ್ದುಕೊಳ್ಳುವುದಾದರೆ ಮುಂಬೈ ಇಂಡಿಯಾ (MI) ಅಥವಾ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ (CSK) ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿಯವರು (Ravi Shastri) ಜಾಣ್ಮೆಯ ಉತ್ತರ ನೀಡಿದ್ದಾರೆ.
ಕೇಳಿದ ಪ್ರಶ್ನೆಗೆ ಉತ್ತರ ಬಹಳ ಸರಳವಾಗಿದೆ. ಎರಡೂ ತಂಡಗಳೂ ನೀಡುವ ಹಣದಲ್ಲಿ ಒಂದು ಕಡೆಯ ಹಣದ ತೂಕ ಹೆಚ್ಚಾಗಿರಬೇಕು ಎಂದು ಶಾಸ್ತ್ರಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಅಭಿಮಾನಿಯೊಬ್ಬರು ಇತ್ತೀಚೆಗೆ ಚಾಟ್ ಸೆಷನ್‍ನಲ್ಲಿ ಈ ಪ್ರಶ್ನೆ ಕೇಳಿದ್ದರು. ಇದನ್ನೂ ಓದಿ: ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್
ಟೀಂ ಇಂಡಿಯಾ (Team India) ಕೋಚ್ ಆಗಿ ರವಿ ಶಾಸ್ತ್ರಿ ಅವರ ಅಧಿಕಾರಾವಧಿಯಲ್ಲಿ ತಂಡವು ಟೆಸ್ಟ್, ಏಕದಿನ, ಟಿ20ಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಆಟಗಾರರ ಫಿಟ್‍ನೆಸ್‍ಗೆ ಹೆಚ್ಚಿನ ಗಮನವನ್ನು ಶಾಸ್ತ್ರಿ ನೀಡುತ್ತಿದ್ದರು.
ಶಾಸ್ತ್ರಿ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹಳ ಪ್ರಬುದ್ಧ ಆಟಗಾರ ಎಂದು ಹೊಗಳಿದ್ದಾರೆ. ಮಂಗಳವಾರ ತಿಲಕ್ 29 ಎಸೆತಗಳಲ್ಲಿ 41 ರನ್ ಹೊಡೆದಿದ್ದರು. ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್‍ನ್ನು ಸೋಲಿಸಿದ ನಂತರ ಈ ಆವೃತ್ತಿಯಲ್ಲಿ ಮೊದಲ ಜಯವನ್ನು ದಾಖಲಿಸಿತ್ತು.
ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಇದೀಗ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಸದ್ಯ ತಮಿಳು ನಾಡು ರಾಜ್ಯದ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸದ್ದಿಲ್ಲದೇ ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ತಗೆದುಕೊಂಡ ಸಂಭಾವನೆ ಕೇವಲ ಒಂದೇ ಒಂದು ರೂಪಾಯಿ ಎನ್ನುವುದು ಅಚ್ಚರಿ. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್
ಕೆ.ಅಣ್ಣಾಮಲೈ ಬಣ್ಣ ಹಚ್ಚಿದ್ದು ‘ಅರಬ್ಬಿ’ ಎನ್ನುವ ಚಿತ್ರಕ್ಕಾಗಿ. ಈ ಸಿನಿಮಾದಲ್ಲಿ ಅವರು ಸ್ವಿಮ್ಮಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಇವರ ಭಾಗದ ಶೂಟಿಂಗ್ ಕೂಡ ಮುಗಿದಿದೆ. ಇದೊಂದು ಹೊಸ ಬಗೆಯ ಸಿನಿಮಾವಾಗಿದ್ದು, ಎರಡು ಕೈಗಳಿಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಜು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕೆ.ಎಸ್. ವಿಶ್ವಾಸ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ
ಈ ಸಿನಿಮಾದ ವಿಶೇಷ ಅಂದರೆ, ಕಥಾ ನಾಯಕನ ಪಾತ್ರದಲ್ಲಿ ಸ್ವತಃ ವಿಶ್ವಾಸ್ ಅವರೇ ಬಣ್ಣ ಹಚ್ಚಿದ್ದಾರೆ. ಇವರಿಗೆ ಕೋಚ್ ಆಗಿ ಅಣ್ಣಾಮಲೈ ನಟಿಸಿದ್ದಾರೆ. ಇಂಥದ್ದೊಂದು ಸಿನಿಮಾದಲ್ಲಿ ನೀವು ನಟಿಸಬೇಕು ಎಂದು ಕೇಳಿದಾಗ ಕಥೆ ಕೇಳಿ ಅಣ್ಣಾಮಲೈ ಒಪ್ಪಿಗೆ ಸೂಚಿಸಿದರಂತೆ. ನಂತರ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದಾರೆ.
ಮುಂಬೈ: ಜೂನ್ ಅಂತ್ಯದಲ್ಲಿ ಐರ್ಲೆಂಡ್ ಪ್ರವಾಸಕ್ಕಾಗಿ ಭಾರತದ ಮುಖ್ಯ ಕೋಚ್ ಆಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‍ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.
ಭಾರತವು ಐರ್ಲೆಂಡ್‍ನಲ್ಲಿ ಎರಡು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದೇ ವೇಳೆ ಭಾರತವು ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆ ಭಾರತದ ಪ್ರಸ್ತುತ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಟೆಸ್ಟ್ ತಂಡದ ಜೊತೆಗೆ ಇರುವುದರಿಂದ ಐರ್ಲೆಂಡ್‍ಗೆ ತೆರಳಲಿರುವ ತಂಡಕ್ಕೆ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ಕಳುಹಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಇದನ್ನೂ ಓದಿ: ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ
ಇಂಗ್ಲೆಂಡ್ ಮತ್ತು ಭಾರತ ನಡುವಿನ ಏಕೈಕ ಟೆಸ್ಟ್ ಪಂದ್ಯ ಜುಲೈ 1 ರಂದು ಆರಂಭವಾಗಲಿದೆ. ಇದಕ್ಕೂ ಮೊದಲು ಕೌಂಟಿ ತಂಡದ ಎದುರು ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಈ ಪಂದ್ಯ ಜೂನ್ 24ರಂದು ಆರಂಭವಾಗಲಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ 973 ರನ್ ದಾಖಲೆ ಮುರಿಯುತ್ತೇನೆ: ಯಜುವೇಂದ್ರ ಚಹಲ್
ರಾಹುಲ್ ದ್ರಾವಿಡ್ ಟೆಸ್ಟ್ ತಂಡದ ಜೊತೆ ಇಂಗ್ಲೆಂಡ್‍ನಲ್ಲಿರುವುದರಿಂದ ಐರ್ಲೆಂಡ್ ಪ್ರವಾಸಕ್ಕೆ ತೆರಳುವ ತಂಡಕ್ಕೆ ಲಕ್ಷ್ಮಣ್ ಅವರು ಕೋಚಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ರವಿಶಾಸ್ತ್ರಿ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾಗ ಎನ್‍ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್‍ರನ್ನು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ ತಂಡದೊಂದಿಗೆ ಕಳುಹಿಸಲಾಗಿತ್ತು. ರವಿಶಾಸ್ತ್ರಿ ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್‍ನಲ್ಲಿದ್ದರು.
ಐಪಿಎಲ್ ಫೈನಲ್ ಪಂದ್ಯ ಮುಗಿದು ಒಂದು ವಾರದ ನಂತರ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಜೂನ್ 9ರಿಂದ ಐದು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ ತಂಡವನ್ನು ಇದೇ 22ರಂದು ಆಯ್ಕೆ ಮಾಡಲಾಗುವುದು. ಸರಣಿಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್‍ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.