Tag: Co-WIN/MoHFW

  • ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ  CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

    ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

    ನವದೆಹಲಿ: ಈಗ ನಿಮ್ಮ ಲಸಿಕೆ ಮಾಹಿತಿಯ ಜೊತೆಗೆ ಬೇರೆಯವರು ಲಸಿಕೆ ಪಡೆದಿದ್ದಾರಾ ಇಲ್ಲವೋ ಎಂಬ ವಿವರವನ್ನು ನೀವು ಕೋವಿನ್ ವೆಬ್‍ಸೈಟ್‍ನಲ್ಲಿ ಪರಿಶೀಲಿಸಬಹುದು.

    ವ್ಯಾಕ್ಸಿನೇಷನ್ ಮಾಹಿತಿಯನ್ನು ತಿಳಿದುಕೊಳ್ಳಲು CoWIN ಪೋರ್ಟಲ್ ಅನ್ನು ಮತ್ತಷ್ಟು ಅಪ್ಡೇಟ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

    ಕೋವಿನ್ ಪೋರ್ಟಲ್ ನಲ್ಲಿ ವ್ಯಕ್ತಿಯ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಹೆಸರಿನೊಂದಿಗೆ ವ್ಯಕ್ತಿಯ ವ್ಯಾಕ್ಸಿನೇಷನ್ ಸ್ಥಿತಿಯನ್ನು ಪರಿಶೀಲಿಸಲು ಒಟಿಪಿ ಬರುತ್ತದೆ. ಆ ಮೂಲಕ ನೀವು ನಿಮ್ಮ ವ್ಯಾಕ್ಸಿನೇಷನ್ ಬಗ್ಗೆ ತಿಳಿದುಕೊಳ್ಳಬಹುದು. ಇದನ್ನೂ ಓದಿ:  1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    CoWIN ಡಿಜಿಟಲ್ ಪ್ಲಾಟ್‍ಫಾರ್ಮ್‍ನಲ್ಲಿ ‘ನಿಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ತಿಳಿಯಿರಿ’ ಎಂಬ ಹೊಸ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗಿದೆ. Co-WIN/MoHFW ಮೂಲಕ ನಿಮ್ಮ ವ್ಯಾಕ್ಸಿನೇಷನ್ ಬಗ್ಗೆ ಮಾತ್ರವಲ್ಲ ನಿಮ್ಮ ನೆರೆಯವರ ವ್ಯಾಕ್ಸಿನೇಷನ್ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳಬೇಕು. ಅದು ಅವರು ಓಟಿಪಿಯನ್ನು ಶೇರ್ ಮಾಡಿದರೆ ಮಾತ್ರ ಸಾಧ್ಯವಾಗುತ್ತೆ. ಈ ಪರಿಶೀಲಿಸುವ ಘಟಕದ ಅಧಿಕೃತ ಹಕ್ಕುಗಳ ಪ್ರಕಾರ ನಾಗರಿಕರ ವ್ಯಾಕ್ಸಿನೇಷನ್ ಸ್ಥಿತಿ ಮತ್ತು ವಿವರಗಳನ್ನು ಪರಿಶೀಲಿಸಲು ಅಥವಾ ಹಿಂಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.

    ಟ್ರಾವೆಲಿಂಗ್ ಏಜೆನ್ಸಿಗಳು, ಕಚೇರಿಗಳು, ಉದ್ಯೋಗದಾತರು, ಮನರಂಜನಾ ಏಜೆನ್ಸಿಗಳು ಅಥವಾ IRCTC  ಎಂತಹ ಸರ್ಕಾರಿ ಏಜೆನ್ಸಿಗಳಂತಹ ಖಾಸಗಿ ಸಂಸ್ಥೆಗಳಿಗೆ ವ್ಯಕ್ತಿಯ ವ್ಯಾಕ್ಸಿನೇಷನ್ ಸ್ಥಿತಿಯನ್ನು ಪರಿಶೀಲಿಸಲು ಈ ಸೇವೆ ಸುಲಭವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ. ಇದನ್ನೂ ಓದಿ: ಸ್ವಚ್ಛ ಸರ್ವೇಕ್ಷಣೆ 2021- ಸತತ 5ನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದ ಇಂದೋರ್

    ಡಿಜಿಟಲ್ ಅಥವಾ ಕಾಗದದ ರೂಪದಲ್ಲಿ ಲಸಿಕೆ ಪ್ರಮಾಣಪತ್ರವನ್ನು ಹೊಂದಿರದ ನಾಗರಿಕರಿಗೆ ಸಹಾಯ ಮಾಡಲು ಹೊಸ ವಿಶೇಷತೆಯನ್ನು ಸೇರಿಸಲಾಗಿದೆ.