Tag: co-star

  • ‘ಸಲಗ’ ಸಿನ್ಮಾದ ಸಹ ನಟ ಆತ್ಮಹತ್ಯೆಗೆ ಶರಣು

    ‘ಸಲಗ’ ಸಿನ್ಮಾದ ಸಹ ನಟ ಆತ್ಮಹತ್ಯೆಗೆ ಶರಣು

    – ದುನಿಯಾ ವಿಜಯ್ ಜೊತೆ ನಟನೆ

    ಮಂಡ್ಯ: ಜೀವನದಲ್ಲಿ ಜಿಗುಪ್ಸೆಗೊಂಡು ನಟ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ನಡೆದಿದೆ.

    ಸುಶೀಲ್ ಕುಮಾರ್ (30) ಆತ್ಮಹತ್ಯೆಗೆ ಶರಣಾದ ನಟ. ಸುಶೀಲ್ ಕುಮಾರ್ ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.

    ಕಳೆದ ಮೂರು ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳ ಹಿಂದೆ ಮಂಡ್ಯಗೆ ಬಂದು ನೆಲೆಸಿದ್ದರು. ವಿವಿ ನಗರದ ತಮ್ಮದೇ ಮನೆಯಲ್ಲಿ ಸುಶೀಲ್ ಕುಮಾರ್ ನೆಲೆಸಿದ್ದರು. ಇಂಡುವಾಳು ಗ್ರಾಮದಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದರು. ಅಲ್ಲಿಯೇ ನೇಣು ಬಿಗಿದುಕೊಂಡು ಸುಶೀಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ಸುಶೀಲ್ ಕುಮಾರ್ ‘ಸಲಗ’ ಮತ್ತು ‘ಕಮರೊಟ್ಟು ಚೆಕ್ ಪೋಸ್ಟ್’ ಸಿನಿಮಾಗಳಲ್ಲಿ ನಟಸಿದ್ದರು. ದುನಿಯಾ ವಿಜಯ್ ಅಭಿನಯದ ‘ಸಲಗ’ ಸಿನಿಮಾದಲ್ಲಿ ಸುಶೀಲ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಯೋಗ್ಯ ಸಿನಿಮಾ ಸಹ ನಟಿಯಿಂದ ಬ್ಲಾಕ್‍ಮೇಲ್, ಎಫ್‍ಐಆರ್ ದಾಖಲು

    ಅಯೋಗ್ಯ ಸಿನಿಮಾ ಸಹ ನಟಿಯಿಂದ ಬ್ಲಾಕ್‍ಮೇಲ್, ಎಫ್‍ಐಆರ್ ದಾಖಲು

    ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯ ಮೇಲೆ ಎಫ್‍ಐಆರ್ ದಾಖಲಾಗಿದೆ.

    ದೃಶ್ಯ `ಅಯೋಗ್ಯ’ ಸಿನಿಮಾದ ಸಹ ನಟಿಯಾಗಿದ್ದು, ಈಕೆ ಬ್ಲಾಕ್‍ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಸ್ನೇಹಿತ ಪ್ರಶಾಂತ್ ಎಂಬವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ದೃಶ್ಯ ಪ್ರಶಾಂತ್ ಜೊತೆ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದಳು. ಸಲುಗೆ ಬೆಳೆಸಿಕೊಂಡಿದ್ದ ಈಕೆ ಪ್ರಶಾಂತ್ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಚೆಕ್ ಮಾಡುತ್ತಿದ್ದಳು. ಬಳಿಕ ಇನ್ ಸ್ಟಾಗ್ರಾಂ ಬಳಸಿ ಅದರಲ್ಲಿ ಬೇರೆ ಹುಡುಗ-ಹುಡುಗಿಗೆ ದೃಶ್ಯ ಮೆಸೇಜ್ ಮಾಡುತ್ತಿದ್ದಳು. ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ತನ್ನ ಖಾಸಗಿ ಫೋಟೋಗಳನ್ನು ಸಂಗ್ರಹಿಸಿದ್ದ ದೃಶ್ಯ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ದೂರು ನೀಡಿದ್ದರು. ಇದಾದ ಬಳಿಕ ಮತ್ತೆ ನನ್ನ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಬಳಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಪ್ರಶಾಂತ್ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ.

    ಸದ್ಯಕ್ಕೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದು, ಈಕೆ ಹಿಂದೆ ಇರುವ ಕೆಲ ಮಂದಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸೈಬರ್ ಕ್ರೈಂ ಪೊಲೀಸರು ದೃಶ್ಯ ಮೊಬೈಲ್ ನ ಸೀಜ್ ಮಾಡಿದ್ದು, ಮೊಬೈಲ್‍ನನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    ಹೈದರಾಬಾದ್: ಕಾರ್ಯಕ್ರಮವೊಂದರಲ್ಲಿ ನಟಿ ಕಾಜಲ್ ಅಗರ್ವಾಲ್ ಅವರನ್ನು ಸಹನಟ ಕಿಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಂಗಳವಾರ ಹೈದರಾಬಾದ್‍ನಲ್ಲಿ ‘ಕವಚಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಚಿತ್ರವನ್ನು ಶ್ರೀನಿವಾಸ್ ಮಾಮಿಲ ನಿರ್ದೇಶನವಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಚಿತ್ರದಲ್ಲಿ ನಟಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಎಲ್ಲರೂ ಸೇರಿದ್ದಾಗ ಕಾಜಲ್ ನಿರ್ದೇಶಕ ಶ್ರೀನಿವಾಸ್ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಅವರಿಗೆ ಉದ್ದೇಶಿಸಿ ಧನ್ಯವಾದ ತಿಳಿಸಿದರು. ಇದೇ ವೇಳೆ ಕಾಜಲ್ ತಮ್ಮ ಸಹನಟ ಚೋಟಾ ಕೆ. ನಾಯ್ಡು ಬಗ್ಗೆ ಕೂಡ ಮಾತನಾಡಿದರು.

    ಕಾಜಲ್ ಚೋಟಾ ನಾಯ್ಡು ಬಗ್ಗೆ ಮಾತನಾಡಿದಾಗ ಅವರು ಬಂದು ಕಾಜಲ್‍ಗೆ ಬಲವಂತವಾಗಿ ಕಿಸ್ ನೀಡಿದರು. ಚೋಟಾ ನಾಯ್ಡು ಕಿಸ್ ಮಾಡಿದಾಗ ಕಾಜಲ್ ಒಂದು ಕ್ಷಣ ಬೆಚ್ಚಿಬಿದ್ದು ಏನೂ ಮಾತನಾಡಬೇಕು ಎಂದು ಮರೆತು ಹೋದರು.

    ಕಾಜಲ್‍ಗೆ ಕಿಸ್ ಕೊಟ್ಟ ನಂತರ ಮಾತನಾಡಿದ ಚೋಟಾ ನಾಯ್ಡು, “ನೀವು ಮೀಹಿರಿನ್‍ಗೆ ಕಿಸ್ ಕೊಟ್ಟೆ. ನೀವು ಇದನ್ನು ಮಾಡಲು ಆಗುವುದಿಲ್ಲ ಎಂದು ತಮನ್ ಹೇಳಿದರು. ನಾನು ಯಾಕೆ ಇದು ಮಾಡಬಾರದು ಎಂದು ನಿಮಗೆ ಕಿಸ್ ಮಾಡಿದೆ” ಎಂದು ಹೇಳಿದರು.

    ಸದ್ಯ ಚೋಟಾ ನಾಯ್ಡು ಕಿಸ್ ಮಾಡಿದ್ದನ್ನು ಕಾಜಲ್ ನಿರ್ಲಕ್ಷಿಸಿ, “ಪರವಾಗಿಲ್ಲ ಚೋಟು. ನೀವು ನನ್ನ ಕುಟುಂಬದ ಸದಸ್ಯರಿದ್ದಂತೆ” ಎಂದು ಹೇಳಿ ಸುಮ್ಮನೆ ನಕ್ಕು ಬಿಟ್ಟರು. ಸದ್ಯ ಚೋಟಾ ನಾಯ್ಡು ನಟಿ ಕಾಜಲ್ ಅವರನ್ನು ಕಿಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    @kajalaggarwal.offl ♥️

    A post shared by KAJAL AGGARWAL ♥️ (@kajalaggarwal.offl) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಖೋಟಾ ನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಅರೆಸ್ಟ್

    ಖೋಟಾ ನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಅರೆಸ್ಟ್

    ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳ ಖೋಟಾನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಹಾಗು ಆಕೆಯ ಸಹಾಯಕ ಎನ್ನಲಾದ ಆಟೋ ಡ್ರೈವರ್ ಗೋವಿಂದರಾಜುನನ್ನು ಪೊಲೀಸರು ಬಂಧಿಸಿದ್ದಾರೆ.

    ನಿರ್ಮಾಪಕರು, ಕೆಲವು ನಟ- ನಟಿಯರೇ ಖೋಟಾನೋಟು ಕೊಟ್ಟು ಚಲಾವಣೆ ಮಾಡ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜಯಮ್ಮಳ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಯಮ್ಮ ಫೋನ್‍ನಲ್ಲಿದ್ದ ನಂಬರ್‍ಗಳನ್ನ ಹಿಡಿದು ಜಾಲಾಡುತ್ತಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?: ನೆಲಮಂಗಲದ ದಾಬಸ್‍ಪೇಟೆ ಬಳಿ ಖೋಟಾನೋಟು ಚಲಾಯಿಸುತ್ತಿದ್ದಾಗ ಅನುಮಾನ ಬಂದ ಅಂಗಡಿಯವರು ಈಕೆಯನ್ನ ಪ್ರಶ್ನೆ ಮಾಡಿದ್ರು. ಆದ್ರೆ ಈ ಜಯಮ್ಮ ಅಲ್ಲಿಂದ ಕಾಲ್ಕಿತ್ತಳು. ಕೊನೆಗೆ ಜನ ಈಕೆಯ ಬೆನ್ನತ್ತಿ ಹಿಡಿದಾಗ 2 ಸಾವಿರ ರೂ. ಮುಖಬೆಲೆಯ 24 ಖೋಟಾನೋಟುಗಳು ಸಿಕ್ಕಿದೆ. ತಕ್ಷಣ ಸರ್ವಜನಿಕರು ದಾಬಸ್‍ಪೇಟೆ ಪೊಲೀಸರನ್ನ ಕರೆಸಿ ಈಕೆಯನ್ನ ಅವರ ವಶಕ್ಕೆ ನೀಡಿದ್ದಾರೆ. ಈ ಕೃತ್ಯದ ವಿಡಿಯೋವನ್ನ ಅಲ್ಲಿನ ಸಾರ್ವಜನಿಕರು ಪಬ್ಲಿಕ್ ಟಿವಿಗೆ ವಾಟ್ಸಪ್ ಮೂಲಕ ರವಾನಿಸಿದ್ದರು.

    ಈಕೆ ಖೋಟಾನೋಟು ಚಲಾವಣೆಯಲ್ಲಿದ್ದಾಗಲೇ ರೆಡ್‍ಹ್ಯಾಂಡಾಗಿ ಬುಧವಾರದಂದು ಸಿಕ್ಕಿಬಿದ್ದಿದ್ದಾಳೆ. ಕೊನೆಗೆ ತಪ್ಪಾಯ್ತು, ಕಾಲಿಡ್ಕೋತೀನಿ, ನಿಮ್ಮಕ್ಕ ಅಂತಾ ತಿಳ್ಕೊಳಿ ಅಂತ ಗೋಗರೆದಿದ್ದಾಳೆ. ಪೊಲೀಸರಿಗೆ ಹೇಳ್ಬೇಡಿ ಅಂತ ಜನರನ್ನ ಯಾಮಾರಿಸೋ ಯತ್ನ ಮಾಡಿದ್ದಾಳೆ.

    https://www.youtube.com/watch?v=uscmCy4cZN0